ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಮಹಿಳೆಯರ ಉಚಿತ ಬಸ್ ಪ್ರಯಾಣ ಕ್ಕೆ ಮತ್ತೊಂದು ಹೊಸ ರೂಲ್ಸ್

Posted by Vidyamaana on 2023-06-10 11:06:52 |

Share: | | | | |


ಮಹಿಳೆಯರ ಉಚಿತ ಬಸ್ ಪ್ರಯಾಣ ಕ್ಕೆ ಮತ್ತೊಂದು ಹೊಸ ರೂಲ್ಸ್

ಬೆಂಗಳೂರು : ನಾಳೆ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಸಾರಿಗೆ ಬಸ್ ಉಚಿತ ಪ್ರಯಾಣ ಸೌಲಭ್ಯ ಆರಂಭಗೊಳ್ಳಲಿದೆ. ಈಗಾಗಲೇ ಹಲವು ಷರತ್ತು ವಿಧಿಸಿರುವಂತ ರಾಜ್ಯ ಸರ್ಕಾರ, ಈಗ ಮತ್ತೊಂದು ಹೊಸ ರೂಲ್ಸ್ ಜಾರಿಗೊಳಿಸಿದೆ. ಅದೇ ಸ್ಟಿಕ್ಕರ್ ಇದ್ದಂತ ಬಸ್ ಗಳಲ್ಲಿ ಮಾತ್ರವೇ ಸಂಚರಿಸೋದಕ್ಕೆ ಮಹಿಳೆಯರಿಗೆ ಅವಕಾಶ ನೀಡಿದೆ.ಈ ಕುರಿತಂತೆ ಇಂದು ನಾಳೆ ವಿಧಾನಸೌಧದ ಮುಂಭಾಗದಲ್ಲಿ ಶಕ್ತಿ ಯೋಜನೆ ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾಳೆ ಶಕ್ತಿ ಯೋಜನೆಗೆ ಸಿಎಂ ಸಿದ್ಧರಾಮಯ್ಯ ಚಾಲನೆಗೊಳಿಸಲಿದ್ದಾರೆ ಎಂಬುದಾಗಿ ತಿಳಿಸಿದರು.ನಾಳೆ ಮಧ್ಯಾಹ್ನ 1ರ ನಂತ್ರ ರಾಜ್ಯಾಧ್ಯಂತ ಸಾರಿಗೆ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಆರಂಭದಲ್ಲಿ ಐಡಿ ಕಡ್ಡಾಯಗೊಳಿಸಲಾಗಿದೆ. ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ಪಡೆದು ಓಡಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.ಇನ್ನೂ ಈವರೆಗೆ ರಾಜಹಂಸ, ಎಸಿ, ನಾನ್ ಎಸಿ ಸ್ಲೀಪರ್ ಸೇರಿದಂತೆ ಐಷಾರಾಮಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿರಲಿಲ್ಲ ಎಂಬುದಾಗಿ ಷರತ್ತು ವಿಧಿಸಲಾಗಿತ್ತು. ಈಗ ಮತ್ತೊಂದು ಹೊಸ ರೂಲ್ಸ್ ಬಗ್ಗೆಯೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ. ಅದೇ ಸ್ಟಿಕ್ಕರ್ ಇರುವಂತ ಸಾರಿಗೆ ಬಸ್ ಗಳಲ್ಲಿ ಮಾತ್ರವೇ ಮಹಿಳೆಯರು ಪ್ರಯಾಣಿಸಲು ಅವಕಾಶ ಎಂಬುದಾಗಿದೆ

ಮಂಗಳೂರು : ಖಾಸಗಿ ಬಸ್ಸಿನ ಧಾವಂತಕ್ಕೆ ಪಾದಚಾರಿ ವ್ಯಕ್ತಿ ಬಲಿ ; ಅಪರಿಚಿತನ ಪತ್ತೆಗೆ ಪೊಲೀಸರ ಮನವಿ

Posted by Vidyamaana on 2023-10-24 06:43:19 |

Share: | | | | |


ಮಂಗಳೂರು : ಖಾಸಗಿ ಬಸ್ಸಿನ ಧಾವಂತಕ್ಕೆ ಪಾದಚಾರಿ ವ್ಯಕ್ತಿ ಬಲಿ ; ಅಪರಿಚಿತನ ಪತ್ತೆಗೆ ಪೊಲೀಸರ ಮನವಿ

ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್ ಬಳಿಯ ರಾವ್ ಅಂಡ್ ರಾವ್ ಸರ್ಕಲ್ ನಲ್ಲಿ ಖಾಸಗಿ ಬಸ್ಸಿನ ಧಾವಂತಕ್ಕೆ ಪಾದಚಾರಿ ಒಬ್ಬರು ಬಸ್ಸಿನಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಸಂಜೆ ಸಂಭವಿಸಿದೆ.


ಮಂಗಳೂರಿನ ಸ್ಟೇಟ್ ಬ್ಯಾಂಕ್ ವೃತ್ತದಿಂದ ಕೊಣಾಜೆ ಬಳಿಯ ಹೂಹಾಕುವ ಕಲ್ಲು ಎಂಬಲ್ಲಿಗೆ ತೆರಳುತ್ತಿದ್ದ ಖಾಸಗಿ ಬಸ್ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ತಿರುವು ಪಡೆಯುತ್ತಿದ್ದಂತೆ ವ್ಯಕ್ತಿಯೊಬ್ಬರು ಅಡ್ಡ ಬಂದಿದ್ದು ನೇರವಾಗಿ ಬಸ್ಸಿನ ಮುಂದಿನ ಚಕ್ರದಡಿಗೆ ಬಿದ್ದು ಸಾವು ಕಂಡಿದ್ದಾರೆ. 


ವ್ಯಕ್ತಿಯ ತಲೆ ಪೂರ್ತಿ ಛಿದ್ರಗೊಂಡಿದ್ದು ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಖ ಛಿದ್ರಗೊಂಡಿದ್ದರಿಂದ ವ್ಯಕ್ತಿಯ ಮುಖ ಪರಿಚಯವೂ ಇಲ್ಲದೆ ಮೃತರ ಪತ್ತೆ ಸಾಧ್ಯವಾಗಿಲ್ಲ. ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದು ಪಾಂಡೇಶ್ವರ ಪೊಲೀಸರು ಸೆಕ್ಷನ್ 304 ಅಡಿ ಕೊಲೆಗೆ ಸಮಾನ ಆಗಬಲ್ಲ ಅಪರಾಧ ಎಸಗಿದ್ದಾಗಿ ಪ್ರಕರಣ ದಾಖಲಿಸಿದ್ದಾರೆ. ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.‌


ವ್ಯಕ್ತಿ 40-42 ವಯಸ್ಸಿನವರು ಎನ್ನಲಾಗುತ್ತಿದ್ದು ಅಪರಿಚಿತನ ಪತ್ತೆಗಾಗಿ ಸಂಶಯ ಇದ್ದವರು ಪಾಂಡೇಶ್ವರ ಠಾಣೆಗೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ. ಶವವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇಡಲಾಗಿದೆ.

ಹಕ್ಕುಪತ್ರವಿದೆ..RTCಯೂ ಇದೆ.. ಜಾಗ ಮಾತ್ರ ಇಲ್ಲ..

Posted by Vidyamaana on 2023-09-09 20:20:54 |

Share: | | | | |


ಹಕ್ಕುಪತ್ರವಿದೆ..RTCಯೂ ಇದೆ.. ಜಾಗ ಮಾತ್ರ ಇಲ್ಲ..

ಪುತ್ತೂರು; `` ನಮಗೆ ಹಕ್ಕು ಪತ್ರ ಕೊಟ್ಟಿದ್ದಾರೆ, ನಮಗೆ ಕೊಟ್ಟ ಹಕ್ಕು ಪತ್ರದ ಆಧಾರದಲ್ಲಿ ಆರ್ ಟಿಸಿಯೂ ಕೊಟ್ಟಿದ್ದಾರೆ ಆದರೆ ಜಾಗ ಮಾತ್ರ ಕೊಟ್ಟಿಲ್ಲ, ಕಳೆದ ೯ ವರ್ಷಗಳಿಂದ ನಾವು ಜಾಗ ಕೊಡಿ ಎಂದು ಕಚೇರಿಗಳಿಗೆ ಅಲೆದಾಟ ಮಾಡುತ್ತಿದ್ದೇವೆ ನಮ್ಮ ನೋವನ್ನೂ ಯಾರೂ ಕೇಳಿಲ್ಲ, ನಮಗೆ ನ್ಯಾಯ ಕೊಡಿ ಎಂದು ಕೊಳ್ತಿಗೆ ಗ್ರಾಮದ ಮೇರುಸಿದ್ದಮೂಲೆಯ ಸುಮಾರು ದಲಿತ ಕುಟುಂಬಗಳು ಶಾಸಕರಾದ ಅಶೋಕ್ ರೈ ಯವರ ಬಳಿ ಬಂದು ದೂರು ನೀಡಿದ್ದು ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

೨೦೧೪ ರಲ್ಲಿ ಕೊಳ್ತಿಗೆ ಗ್ರಾಮದ ಮೇರು ಸಿದ್ದಮೂಲೆಯ ೧೮ ದಲಿತ ಕುಟುಂಬಗಳು ಮತ್ತು ೮ ಹಿಂದುಳಿದ ವರ್ಗಗಳ ಕುಟುಂಬಘಳಿಗೆ ಆಶ್ರಯ ಗ್ರಾಮೀಣ ನಿವೇಶನ ಯೋಜನೆಯಡಿ ನಿವೇಶನ ಹಕ್ಕು ಪತ್ರವನ್ನು ನೀಡಲಾಗಿದೆ. ಹಕ್ಕು ಪತ್ರ ನೀಡಿದ ಬಳಿಕ ಅದೇ ಸರ್ವೆ ನಂಬರ್‌ನಲ್ಲಿ ಆರ್ ಟಿಸಿಯನ್ನು ನೀಡಲಾಗಿದೆ. ಆದರೆ ಅದೇ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಮುಂದಾದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು ಅದು ಮೀಸಲು ಅರಣ್ಯ ಜಾಗಕ್ಕೆ ಸೇರಿದೆ ಎಂದು ಅಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ಆ ಬಳಿಕ ೨೬ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಜಾಗವನ್ನೇ ಗೊತ್ತು ಮಾಡಿರಲಿಲ್ಲ. ಕಳೆದ ೯ ವರ್ಷಗಳಿಂದ ಇವರು ಕಚೇರಿಗೆ ಅಲೆದಾಟ ಮಾಡುತ್ತಿದ್ದರೂ ಇವರಿಗೆ ನ್ಯಾಯ ಸಿಕ್ಕಿರಲಿಲ್ಲ.


ಶಾಸಕರ ಭೇಟಿ ತುರ್ತು ಪರಿಹಾರ

ಹಕ್ಕು ಪತ್ರವನ್ನು ಪಡೆದುಕೊಂಡಿದ್ದ ಕೆಲವು ಕುಟುಂಬಗಳು ಶಾಸಕರಾದ ಅಶೋಕ್ ರೈಯವರನ್ನು ಭೇಟಿಯಾಗಿ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ಇಲಾಖಾ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಅಲ್ಲಿನ ಜಾಗದ ಸಮಸ್ಯೆಗಳನ್ನು ಅರಿತುಕೊಂಡರು. ಕಂದಾಯ ಇಲಾಖೆಯವರು ಹಕ್ಕು ಪತ್ರ ನೀಡಿದ ಜಾಗ ಮೀಸಲು ಅರಣ್ಯಕ್ಕೆ ಸೇರಿದ ಕಾರಣ ಅಲ್ಲಿ ಮನೆ ಕಟ್ಟಲು ಅರಣ್ಯ ಇಲಾಖೆಯಿಂದ ಆಕ್ಷೇಪ ಸಲ್ಲಿಸಿದ ಬಗ್ಗೆ ಶಾಸಕರ ಗಮನಕ್ಕೆ ತಂದರು. ಇದೇ ಸರ್ವೆ ನಂಬರ್‌ನಲ್ಲಿ ಸರಕಾರಿ ಜಾಗವನ್ನು ಗುರುತಿಸಿ ಹಕ್ಕು ಪತ್ರವನ್ನು ಪಡೆದುಕೊಂಡಿರುವ ಎಲ್ಲಾ ಕುಟುಂಬಗಳಿಗೂ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ತಾತ್ಕಾಲಿಕವಾಗಿ ಕೊಳ್ತಿಗೆಯಲ್ಲಿನ ಸರಕಾರಿ ಜಾಗದಲ್ಲಿ ಶೀಟ್ ಹಾಕಿ ಕೆಲವು ಕುಟುಂಬಗಳು ಮನೆ ನಿರ್ಮಾನ ಮಾಡಿಕೊಂಡಿದ್ದು ಅಲ್ಲಿಂದ ಬಡ ಕುಟುಂಬವನ್ನು ತೆರವು ಮಾಡದಂತೆ ಶಾಸಕರು ಸೂಚನೆ ನೀಡಿದ್ದಾರೆ.


ಶಾಸಕರು ನೋವಿಗೆ ಸ್ಪಂದಿಸಿದ್ದಾರೆ

ನಮ್ಮ ನೋವನ್ನು ಶಾಸಕರಾದ ಅಶೋಕ್ ರೈಯವರ ಬಳಿ ಹೇಳಿಕೊಂಡಾಗ ಅವರ ತಕ್ಷಣ ಸ್ಪಂದನೆ ನೀಡಿದ್ದಾರೆ. ಈಗ ನಾವು ತಾತ್ಕಾಲಿಕವಾಗಿ ಶೀಟ್ ಹಾಕಿ ಮನೆ ನಿರ್ಮಾಣ ಮಾಡಿಕೊಂಡಿದ್ದು ಅಲ್ಲೇ ವಾಸ್ತವ್ಯ ಇರುವಂತೆ ತಿಳಿಸಿದ್ದಾರೆ. ಮುಂದೆ ಇದೇ ಹಕ್ಕು ಪತ್ರವನ್ನು ಇಟ್ಟು ನ್ಯಾಯಾಲಯದ ಮೊರೆ ಹೋಗೋಣ ಎಂದು ಭರವಸೆಯನ್ನು ನೀಡಿದ್ದಾರೆ. ಇದುವರೆಗೆ ನಮ್ಮ ನೋವಿಗೆ ಯಾರೂ ಸ್ಪಂದನೆ ಮಾಡಿರಲಿಲ್ಲ. ಶಾಸಕರ ಬಳಿ ಬಂದು ನಮಗೆ ನ್ಯಾಯ ಸಿಕ್ಕಿದೆ


ಲವಕುಮಾರ್, ಫಲಾನುಭವಿ


ಹಕ್ಕುಪತ್ರ ಕೊಟ್ಟಿದ್ದಾರೆ ನಿವೇಶನ ಇಲ್ಲ

೨೬ ಬಡ ಕುಟುಂಬಗಳಿಗೆ ಹಕ್ಕು ಪತ್ರವನ್ನು ಕಂದಾಯ ಇಲಾಖೆ ನೀಡಿದೆ ಜಾಗ ಎಲ್ಲಿ ಎಂದು ತೋರಿಸಲಿಲ್ಲ, ಕಂದಾಯ ಇಲಾಖೆ ಗುರುತಿಸಿದ ಜಾಗ ಅರಣ್ಯಕ್ಕೆ ಸೇರಿದ್ದು ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಹಕ್ಕು ಪತ್ರ ಕೊಡುವಾಗ ಸರಿಯಾಗಿ ನೋಡಿಕೊಡದೇ ಇರುವುದು ತಪ್ಪು. ನ್ಯಾಯ ಕೊಡಿ ಎಂದು ನನ್ನಲ್ಲಿ ಬಂದಿದ್ದಾರೆ. ಅಧಿಕಾರಿಗಳ ಜೊತೆ ಮಾತನಾಡಿ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದ್ದೇನೆ, ತಾತ್ಕಾಲಿಕವಾಗಿ ಈಗ ಶೀಟ್ ಹಾಕಿರುವ ಮನೆಯಲ್ಲೇ ವಾಸ್ತವ್ಯ ಮಾಡುವಂತೆ ತಿಳಿಸಿದ್ದೇನೆ.

ಅಶೋಕ್ ರೈ ಶಾಸಕರು ಪುತ್ತೂರು

ಪುತ್ತೂರು : ಸುಲ್ತಾನ್ ಡೈಮಂಡ್ಸ್ - ಗೋಲ್ಡ್’ಗೆ ಉತ್ಸಾಹಿ ಅಭ್ಯರ್ಥಿಗಳು ಬೇಕಾಗಿದ್ದಾರೆ

Posted by Vidyamaana on 2024-02-09 11:54:53 |

Share: | | | | |


ಪುತ್ತೂರು : ಸುಲ್ತಾನ್ ಡೈಮಂಡ್ಸ್ - ಗೋಲ್ಡ್’ಗೆ ಉತ್ಸಾಹಿ ಅಭ್ಯರ್ಥಿಗಳು ಬೇಕಾಗಿದ್ದಾರೆ

ಪುತ್ತೂರು: ಶೀಘ್ರದಲ್ಲಿ ಶುಭಾರಂಭಗೊಳ್ಳಲಿರುವ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಚಿನ್ನಾಭರಣ ಸಂಸ್ಥೆಯ ಪುತ್ತೂರು ಮಳಿಗೆಗೆ ಉತ್ಸಾಹಿ ಅಭ್ಯರ್ಥಿಗಳ ಆಯ್ಕೆಗೆ ವಾಕ್-ಇನ್-ಇಂಟರ್ ವ್ಯೂ ಕರೆಯಲಾಗಿದೆ.

ಕಾಸರಗೋಡು ಮೂಲದ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಂಗಳೂರು, ಬೆಂಗಳೂರು, ಕಾಞಂಗಾಡ್, ಕಾಸರಗೋಡು, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಶಾಖೆಗಳನ್ನು ಹೊಂದಿದೆ. ಸೊಗಸಾದ ವಿನ್ಯಾಸ, ಸಾಟಿಯಿಲ್ಲದ ಶುದ್ಧತೆಯ ಮೂಲಕ ಚಿನ್ನದ ವೈವಿಧ್ಯತೆಯನ್ನು ಗ್ರಾಹಕರ ಮುಂದಿಡುವಲ್ಲಿ ಸಂಸ್ಥೆ ಈಗಾಗಲೇ ಯಶಸ್ವಿಯಾಗಿದೆ.

ಫೆ. 11ರ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ದರ್ಬೆ ಸಂತ ಫಿಲೋಮಿನಾ ಕ್ಯಾಂಪಸಿನ ಫಿಲೋಮಿನಾ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಹಾಲಿನಲ್ಲಿ ನೇರ ಸಂದರ್ಶನ ನಡೆಯಲಿದೆ.

ಹುದ್ದೆಗಳ ವಿವರ ಹೀಗಿದೆ:

ಸೇಲ್ಸ್ ಎಕ್ಸಿಕ್ಯೂಟಿವ್ – ಜ್ಯುವೆಲ್ಲರಿ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷ ಅನುಭವ ಹೊಂದಿರಬೇಕು. 

ಸೇಲ್ಸ್ ಟ್ರೈನಿ – 25 ವರ್ಷದೊಳಗಿನವರಿಗೆ ಆದ್ಯತೆ.

ಕಸ್ಟಮರ್ ರಿಲೇಷನ್ಸ್ ಎಕ್ಸಿಕ್ಯೂಟಿವ್ – ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ

ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ – ದ್ವಿಚಕ್ರ ವಾಹನ  ಹೊಂದಿರಲೇಬೇಕು.

ಪ್ಯಾಕಿಂಗ್ ಬಾಯ್

ಎಲೆಕ್ಟ್ರಿಷಿಯನ್

ಪ್ಯಾಂಟ್ರಿ ಬಾಯ್ಸ್

ಹೌಸ್ ಕೀಪರ್ಸ್

ಚಾಲಕರು

ಸೆಕ್ಯೂರಿಟಿ

ಅಡುಗೆಯವರು

ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ: 9945474916, 9663748916

ಪುತ್ತೂರು : ಎ.16 ರಂದು ನಡೆಯಬೇಕಿದ್ದ ಸಿಎಂ,ಡಿಸಿಎಂ ಕಾರ್ಯಕ್ರಮ ಮುಂದೂಡಿಕೆ

Posted by Vidyamaana on 2024-04-13 16:21:25 |

Share: | | | | |


ಪುತ್ತೂರು : ಎ.16 ರಂದು ನಡೆಯಬೇಕಿದ್ದ ಸಿಎಂ,ಡಿಸಿಎಂ ಕಾರ್ಯಕ್ರಮ ಮುಂದೂಡಿಕೆ

ಪುತ್ತೂರಿನಲ್ಲಿ ಎ.16 ರಂದು ನಡೆಯಬೇಕಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾ‌ರ್ ಅವರ ಚುನಾವಣಾ ಪ್ರಚಾರ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಪಿಕಪ್ ಚಾಲಕ ಸತೀಶ್ ಕೊಪ್ಪ ನೇಣು ಬಿಗಿದು ಆತ್ಮಹತ್ಯೆ-ಡೆತ್ ನೋಟ್ ಪತ್ತೆ

Posted by Vidyamaana on 2024-07-02 21:29:21 |

Share: | | | | |


ಪಿಕಪ್ ಚಾಲಕ ಸತೀಶ್ ಕೊಪ್ಪ ನೇಣು ಬಿಗಿದು ಆತ್ಮಹತ್ಯೆ-ಡೆತ್ ನೋಟ್ ಪತ್ತೆ

ಬೆಳ್ತಂಗಡಿ: ಓಡಿಲ್ನಾಳ ಗ್ರಾಮದ ಗುಂಪಲಾಜೆ ನಿವಾಸಿ ಸತೀಶ್ ಕುಲಾಲ್ (32ವ) ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.೨ರಂದು ನಡೆದಿದೆ.



Leave a Comment: