ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಸುದ್ದಿಗಳು News

Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

 Share: | | | | |


ನಾಪತ್ತೆಯಾಗಿರುವ ಹೋರಿಗಾಗಿ ದೈವದ ಮೊರೆ ಹೋದ ಬಜರಂಗದಳದ ಕಾರ್ಯಕರ್ತರು

Posted by Vidyamaana on 2024-05-18 04:56:01 |

Share: | | | | |


ನಾಪತ್ತೆಯಾಗಿರುವ ಹೋರಿಗಾಗಿ ದೈವದ ಮೊರೆ ಹೋದ ಬಜರಂಗದಳದ ಕಾರ್ಯಕರ್ತರು

ಪುತ್ತೂರು ಮೇ 17: ಪುತ್ತೂರು ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ತಿರುಗಾಡುತ್ತಿದ್ದ ಹೋರಿಯೊಂದು ನಾಪತ್ತೆಯಾಗಿದ್ದು, ನಾಪತ್ತೆಯಾಗಿರು ಹೋರಿಗಾಗಿ ಬಜರಂಗದಳದ ಕಾರ್ಯಕರ್ತರು ದೈವದ ಮೊರೆ ಹೋಗಿದ್ದಾರೆ.

ಪುತ್ತೂರು ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ತಿರುಗಾಡುತ್ತಿದ್ದ ಎರಡು ಹೋರಿಗಳು ಮೇ 1 ರಿಂದ ನಾಪತ್ತೆಯಾಗಿತ್ತು.

ಉತ್ತರ ಪ್ರದೇಶ: ಮತ್ತೊಂದು ಎನ್‌ಕೌಂಟರ್‌:62 ಪ್ರಕರಣಗಳ ಕುಖ್ಯಾತ ದರೋಡೆಕೋರ ಗುಂಡಿಗೆ ಬಲಿ

Posted by Vidyamaana on 2023-05-04 12:35:56 |

Share: | | | | |


ಉತ್ತರ ಪ್ರದೇಶ:  ಮತ್ತೊಂದು ಎನ್‌ಕೌಂಟರ್‌:62 ಪ್ರಕರಣಗಳ  ಕುಖ್ಯಾತ ದರೋಡೆಕೋರ ಗುಂಡಿಗೆ ಬಲಿ

ಮೀರತ್ : ಉತ್ತರಪ್ರದೇಶದಲ್ಲಿ ಗುರುವಾರ ಮತ್ತೊಂದು ಎನ್‌ಕೌಂಟರ್‌ ನಡೆಸಲಾಗಿದ್ದು, ಯುಪಿ ಎಸ್‌ಟಿಎಫ್‌ನೊಂದಿಗಿನ ಎನ್‌ಕೌಂಟರ್‌ನಲ್ಲಿ ಕುಖ್ಯಾತ ದರೋಡೆಕೋರ ಅನಿಲ್ ದುಜಾನಾನನ್ನ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.ಪ್ರಾಥಮಿಕ ಮಾಹಿತಿಯ ಪ್ರಕಾರ, ಮೀರತ್‌ನ ಭೋಲಾ ಝಲ್‌ನಲ್ಲಿ ಸಕ್ರಿಯವಾಗಿರುವ ಬಗ್ಗೆ ಖಚಿತವಾದ ಮಾಹಿತಿ ಪಡೆದ ನಂತರ ಎಸ್‌ಟಿಎಫ್ ಅನಿಲ್ ದುಜಾನಾನನ್ನು ಸುತ್ತುವರೆದಿದೆ. ಪೊಲೀಸರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಎನ್‌ಕೌಂಟರ್‌ ಮಾಡಲಾಗಿದೆ.ಪಶ್ಚಿಮ ಯುಪಿಯ ಕುಖ್ಯಾತ ಕ್ರಿಮಿನಲ್ ಅನಿಲ್ ದುಜಾನಾನನ್ನು 2021 ರಲ್ಲಿ ದೆಹಲಿ ಪೊಲೀಸರ ಕ್ರೈಂ ಬ್ರಾಂಚ್ ಬಂಧಿಸಿತ್ತು. ದುಜಾನಾ ವಿರುದ್ಧ 18 ಕೊಲೆಗಳು, ಸುಲಿಗೆ, ಲೂಟಿ, ಭೂಕಬಳಿಕೆ ಮತ್ತು ಇತರವು ಸೇರಿದಂತೆ 62 ಪ್ರಕರಣಗಳು ದಾಖಲಾಗಿವೆ. 2012 ರಿಂದ ಜೈಲಿನಲ್ಲಿದ್ದ, ಆದರೆ 2021 ರಲ್ಲಿ ಜಾಮೀನು ಪಡೆದಿದ್ದ. ನಂತರ, ಹಳೆಯ ಪ್ರಕರಣಗಳಲ್ಲಿ ಹಾಜರಾಗದ ಕಾರಣ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಅನ್ನು ಹೊರಡಿಸಿತ್ತು.

2012 ರಲ್ಲಿ ತ್ರಿವಳಿ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಂತರ, ಅನಿಲ್ ದುಜಾನಾ ಜೈಲಿನಿಂದ ಇತರ ಅಪರಾಧಿಗಳಾದ ರಣದೀಪ್ ಭಾಟಿ ಮತ್ತು ಅಮಿತ್ ಕಸಾನಾ ಅವರ ಸಹಾಯದಿಂದ ತನ್ನ ಅಪರಾಧ ಸಾಮ್ರಾಜ್ಯವನ್ನು ನಿರ್ವಹಿಸಲು ಪ್ರಾರಂಭಿಸಿದ್ದ. ದುಜಾನಾ ಜೈಲಿನಲ್ಲಿ ಕುಳಿತು ಕೊಲೆ, ಸುಲಿಗೆ ಮತ್ತು ಇತರ ಅಪರಾಧ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ತನ್ನ ಸಹಾಯಕರನ್ನು ಯೋಜಿಸಿ ನಿರ್ದೇಶಿಸುತ್ತಿದ್ದದುಜಾನಾ ಕುಟುಂಬ ಸುಂದರ್ ಭಾಟಿ ಗ್ಯಾಂಗ್‌ನೊಂದಿಗೆ ದೀರ್ಘಕಾಲದ ದ್ವೇಷವನ್ನು ಹೊಂದಿತ್ತು. 2012 ರಲ್ಲಿ, ದುಜಾನಾ ಮತ್ತು ಅವನ ಗ್ಯಾಂಗ್ ಸುಂದರ್ ಭಾಟಿ ಮತ್ತು ಅವನ ನಿಕಟ ಸಹಚರರ ಮೇಲೆ AK-47 ರೈಫಲ್‌ನಿಂದ ದಾಳಿ ಮಾಡಿತ್ತು. ಎರಡು ಪ್ರತಿಸ್ಪರ್ಧಿ ಗ್ಯಾಂಗ್‌ಗಳು ಸರ್ಕಾರಿ ಗುತ್ತಿಗೆಗಳು, ಸ್ಟೀಲ್ ಬಾರ್‌ಗಳ ಕಳ್ಳತನ ಮತ್ತು ಟೋಲ್ ಪ್ಲಾಜಾ ಒಪ್ಪಂದಗಳ ಮೇಲೆ ಆಗಾಗ್ಗೆ ಮುಖಾಮುಖಿಯಾಗುತ್ತಿದ್ದವು. ಭಾಟಿ ಗ್ಯಾಂಗ್‌ನಿಂದ ಬೆದರಿಕೆಯಿಂದಾಗಿ, ಪೊಲೀಸರು ಬುಲೆಟ್ ಪ್ರೂಫ್ ಜಾಕೆಟ್‌ನಲ್ಲಿ ದುನಾನಾನನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದರು.

ಬೆಳ್ತಂಗಡಿ: ಹಲ್ಲೆಗೊಳಗಾದ ಬಿಜೆಪಿ ಮುಖಂಡನ ಭೇಟಿ ಮಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ

Posted by Vidyamaana on 2024-06-05 15:08:02 |

Share: | | | | |


ಬೆಳ್ತಂಗಡಿ: ಹಲ್ಲೆಗೊಳಗಾದ ಬಿಜೆಪಿ ಮುಖಂಡನ ಭೇಟಿ ಮಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ

ಬೆಳ್ತಂಗಡಿ, ಜೂ.5: ಕಳೆಂಜದ ಗ್ರಾಮದ ಬಿಜೆಪಿ ಮುಖಂಡ ರಾಜೇಶ್ ಎಂ.ಕೆ. ಮೇಲೆ ಜೂ.4ರಂದು ರಾತ್ರಿ ಮಾರಾಕಾಸ್ತ್ರಗಳಿಂದ ದಾಳಿಯಿಂದ ಗಾಯಗೊಂಡು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಆಸ್ಪತ್ರೆಗೆ ದ.ಕ. ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ ಜು 22

Posted by Vidyamaana on 2023-07-22 00:53:05 |

Share: | | | | |


ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ ಜು 22

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಜುಲೈ 22 ರಂದು.


ಬೆಳಿಗ್ಗೆ 10 ಗಂಟೆಗೆ ಉಪ್ಪಿನಂಗಡಿ ಪ್ರಥಮ‌ದರ್ಜೆ ಕಾಲೇಜಿನಲ್ಲಿ ಪುತ್ತೂರು ತಾಲೂಕು ಕಾರ್ಯನಿರತ‌ಪತ್ರಕರ್ತರ ಸಂಘ ದ ವತಿಯಿಂದ ಪತ್ರಿಕಾ ದಿನಾಚರಣೆ

ಬೆಳಿಗ್ಗೆ 11 ಗಂಟೆಗೆ ಕೊಂಬೆಟ್ಟು ಶಾಲೆಯಲ್ಲಿ ಕಣ್ಣಿನ ಶಿಬಿರ

ನಂತರ ನಿಡ್ಪಳ್ಳಿ ಹಾಗೂ ಆರ್ಯಾಪು ಗ್ರಾಪಂ ಉಪ ಚುನಾವಣೆಗೆ ಸಂಬಂದಿಸಿದಂತೆ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸರಕಾರಿ ಹುದ್ದೆಗಳ ಪರೀಕ್ಷೆಗೆ ತರಬೇತಿ ಆರಂಭ

Posted by Vidyamaana on 2023-07-29 23:32:30 |

Share: | | | | |


ಸರಕಾರಿ ಹುದ್ದೆಗಳ ಪರೀಕ್ಷೆಗೆ ತರಬೇತಿ ಆರಂಭ

ಪುತ್ತೂರು: ಇಲ್ಲಿನ IRCMD ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯಿಂದ ಮುಂಬರುವ ಸರಕಾರಿ ಹುದ್ದೆಗಳಿಗೆ ತರಬೇತಿ ಆರಂಭಗೊಂಡಿದೆ.

ಕೆ.ಡಿ. ಸಿಂಧೆ ವಿಜಯಪುರ ಇವರ ಸಾರಥ್ಯದಲ್ಲಿ FDA, SDA, PSI, PC, PDO ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಯಲಿದೆ. 4 ತಿಂಗಳು ನಡೆಯುವ ಈ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಕೇವಲ 3500 ರೂ. ಶುಲ್ಕ ನಿಗದಿ ಪಡಿಸಲಾಗಿದೆ.

250ಕ್ಕೂ ಅಧಿಕ ಗಂಟೆಗಳ ಪೂರ್ವಭಾವಿ ಪರೀಕ್ಷೆಯ ತೀವ್ರ ಕಲಿಕಾ ತರಗತಿ, ವಾರದಲ್ಲಿ ಒಂದು ಬಾರಿ ಅಧಿಕಾರಿಗಳಿಂದ ಸ್ಪರ್ಧಾರ್ಥಿಗಳ ಜೊತೆ ಚರ್ಚೆ, ಅತೀ ಕಡಿಮೆ ಶುಲ್ಕದಲ್ಲಿ ಅತ್ಯುನ್ನತ ತರಬೇತಿ, 15 ದಿನಗಳಿಗೊಮ್ಮೆ ಮಾದರಿ ಪರೀಕ್ಷೆ, ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ / ಇಂಗ್ಲೀಷ್ ಅಣುಕು ಪರೀಕ್ಷೆಗಳು, ಸುಸಜ್ಜತವಾದ ತರಗತಿ ಕೋಣೆಗಳನ್ನು IRCMD ಸಂಸ್ಥೆ ಹೊಂದಿದೆ.

PGCET, AMCAT ಮತ್ತು ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಯಲ್ಲಿ ವರ್ಷದಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜೀವನ ರೂಪಿಸಿ ಕೊಡುವಲ್ಲಿ ಯಶಸ್ವಿಯಾಗಿರುವ ಹೆಸರಾಂತ ಸಂಸ್ಥೆಯಾಗಿರುವ IRCMD, ಅನುಭವಿ ಮತ್ತು ತಜ್ಞ ವ್ಯಕ್ತಿಗಳಿಂದ ಬೋಧನೆಯ ಕೆಲಸ ನಿರ್ವಹಿಸುತ್ತಿದೆ. ಇದೀಗ ಮುಂಬರುವ ಸರಕಾರಿ ಹುದ್ದೆಗಳಿಗೆ ತರಬೇತಿ ನೀಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ವಿವಿಧ ಹುದ್ದೆಗಳಿಗೆ ತಯಾರಿಗೊಳಿಸುವ ನಿಟ್ಟಿನಲ್ಲಿ IRCMD ಸಂಸ್ಥೆ ಯೋಜನೆ ರೂಪಿಸಿದೆ. ಈ ತರಬೇತಿಯ ಸದುಪಯೋಗ ಪಡೆಯಲಿಚ್ಚಿಸುವವರು 9632320477, 9945988118 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬಸ್ ಸ್ಟ್ಯಾಂಡಿನಲ್ಲಿದ್ದ ಚನ್ನರಾಯಪಟ್ಟಣದ ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಕಾಮುಕ ಅಂದರ್

Posted by Vidyamaana on 2023-11-29 20:27:55 |

Share: | | | | |


ಬಸ್ ಸ್ಟ್ಯಾಂಡಿನಲ್ಲಿದ್ದ ಚನ್ನರಾಯಪಟ್ಟಣದ ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಕಾಮುಕ ಅಂದರ್

ಪುತ್ತೂರು : ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಮಹಿಳೆಯೊಬ್ಬರಿಗೆ ಮದ್ಯ ಕುಡಿಸಿ ಅತ್ಯಾಚಾರ ಮಾಡಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.


ಮೂಲತಃ ಆರ್ಯಾಪು ನಿವಾಸಿ, ಪ್ರಸ್ತುತ ಬನ್ನೂರಿನಲ್ಲಿ ವಾಸವಿರುವ ಸಂಶುದ್ದೀನ್ ಆಸ್ಗರ್ ಆಲಿ (23) ಬಂಧಿತ ಆರೋಪಿ.


ಹಾಸನ ತಾಲೂಕು ಚೆನ್ನರಾಯಪಟ್ಟಣದ ನಿವಾಸಿಯಾಗಿರುವ ಮಹಿಳೆ ನ.24 ರಂದು ರಾತ್ರಿ ವೇಳೆ ಪುತ್ತೂರು ಬಸ್ ನಿಲ್ದಾಣದಲ್ಲಿ ಇದ್ದಾಗ, ಅಪರಿಚಿತ ವ್ಯಕ್ತಿಯೋರ್ವ ಸದರಿ ಮಹಿಳೆಗೆ ಮದ್ಯವನ್ನು ಸೇವಿಸಲು ನೀಡಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದು, ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ 114/2023 ಕಲಂ 376 ಐ.ಪಿ.ಸಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.


ನ.28 ರಂದು ಸಂಜೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ವರದಿಯಾಗಿದೆ.

Recent News


Leave a Comment: