ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಸುದ್ದಿಗಳು News

Posted by vidyamaana on 2024-07-03 08:00:29 |

Share: | | | | |


ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಬೆಳ್ಳಾರೆ : ಎರಡು ವರ್ಷಗಳ ಹಿಂದೆ ನಡೆದ ಮನೆ ಕಳ್ಳತನ ಪ್ರಕರಣವನ್ನು ಬೆಳ್ಳಾರೆ ಪೊಲೀಸರು ಭೇದಿಸಿದ್ದಾರೆ.


ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ ನಡೆದ ಸುಮಾರು 1,48,000 ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ನಗದು ಹಣ 30,000 ರೂ. ಸೇರಿ ಒಟ್ಟು 1,78,000 ರೂ. ಮೌಲ್ಯದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ. 22/2022 ಕಲಂ 457,380 ಭಾ. ದಂ. ಸಂ ರಂತೆ ಪ್ರಕರಣ ದಾಖಲಿಸಿಕೊಂಡು, ಕಳೆದ ಎರಡು ವರ್ಷಗಳಿಂದ ತನಿಖೆ ನಡೆಸಿದ್ದು, ಪ್ರಸ್ತುತ ಪ್ರಕರಣದ ಆರೋಪಿ ಬೆಳ್ತಂಗಡಿ ನೆರಿಯಾ ನಿವಾಸಿ ಶರತ್ (24) ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಕಳವು ಮಾಡಿದ ಸೊತ್ತುಗಳನ್ನು ಪತ್ತೆ ಮಾಡಿ ಸ್ವಾದೀನಪಡಿಸಿಕೊಳ್ಳಲಾಗಿದೆ.

ಸದ್ರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಸಿ ಬಿ ರಿಷ್ಯಂತ್ ಐಪಿಎಸ್ ರವರು, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್ ಎಂ ಕೆ.ಎಸ್.ಪಿ.ಎಸ್ ಮತ್ತು ರಾಜೇಂದ್ರ ಕೆ.ಎಸ್.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ವಿಜಯ ಪ್ರಸಾದ್, ಪ್ರಭಾರ ಪೊಲೀಸ್ ಉಪಾಧೀಕ್ಷಕರು, ಪುತ್ತೂರು ಉಪವಿಭಾಗ ಮತ್ತು ಸುಳ್ಯ ವೃತ್ತ ನಿರೀಕ್ಷಕರಾದ ಸತ್ಯನಾರಾಯಣ ಕೆ ರವರ ನೇತೃತ್ವದಲ್ಲಿ, ಸಂತೋಷ್ ಬಿ ಪಿ ಪೊಲೀಸ್ ಉಪನಿರೀಕ್ಷಕರು, ಬೆಳ್ಳಾರೆ ಪೊಲೀಸ್ ಠಾಣೆ ಹಾಗೂ ಬೆಳ್ಳಾರೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ನವೀನ ಕೆ. ಚಂದ್ರಶೇಖರ್ ಗೌಡ, ಸಂತೋಷ್ ಜಿ. ಜೀಪು ಚಾಲಕ ಪುರಂದರ ಹಾಗೂ ಬೆರಳುಮುದ್ರೆ ಘಟಕದ ಪ್ರಶಾಂತ್ ಹೊಸಮನಿ ಮತ್ತು ಸಚಿನ್ ಬಿ. ಬಿ ರವರನ್ನೊಳಗೊಂಡು ವಿಶೇಷ ತನಿಖಾ ತಂಡವು ಕರ್ತವ್ಯ ನಿರ್ವಹಿಸಿರುತ್ತದೆ.

ಸದ್ರಿ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯನ್ನು ವ್ಯಕ್ತವಾಗಿದೆ.

 Share: | | | | |


ವಿವಾದಾತ್ಮಕ ಹೇಳಿಕೆ ವಿಚಾರ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬಿಜೆಪಿ ಅಧ್ಯಕ್ಷ ಜಯಂತ್ ಕೋಟ್ಯಾನ್ ವಿರುದ್ಧ ಪ್ರಕರಣ ದಾಖಲು

Posted by Vidyamaana on 2023-05-24 15:27:22 |

Share: | | | | |


ವಿವಾದಾತ್ಮಕ ಹೇಳಿಕೆ ವಿಚಾರ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬಿಜೆಪಿ ಅಧ್ಯಕ್ಷ ಜಯಂತ್ ಕೋಟ್ಯಾನ್ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇ.22 ರಂದು ಬೆಳ್ತಂಗಡಿಯ ಕಿನ್ಯಮ್ಮಯಾನೆ ಗುಣವತಿ ಅಮ್ಮ ಸಭಾಂಗಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ನಡೆದ ಅಭಿನಂದನ ಕಾರ್ಯಕ್ರಮದ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 24 ಹಿಂದುಗಳ ಕೊಲೆ ಮಾಡಿದವರೆಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರ ವಿರುದ್ಧ ಪ್ರಕರಣ ದಾಖಲಾಗಿದೆ.ಪೂಂಜಾ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ಗ್ರಾಮೀಣ ಘಟಕದ ವತಿಯಿಂದ ಇಂದು ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದರು.ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶ್ರೀಮತಿ ನಮಿತ ಕೆ ಪೂಜಾರಿ ನೀಡಿದ ದೂರಿನ ಮೇರೆಗೆ ಶಾಸಕ ಹರೀಶ್ ಪೂಂಜಾ ಹಾಗೂ ಬಿಜೆಪಿ ಅಧ್ಯಕ್ಷ ಜಯಂತ್ ಕೋಟ್ಯಾನ್ ವಿರುದ್ಧ ಐಪಿಸಿ ಸೆಕ್ಷನ್ 153, 153ಎ, 505 ರಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ: ಹಲ್ಲೆಗೊಳಗಾದ ಬಿಜೆಪಿ ಮುಖಂಡನ ಭೇಟಿ ಮಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ

Posted by Vidyamaana on 2024-06-05 15:08:02 |

Share: | | | | |


ಬೆಳ್ತಂಗಡಿ: ಹಲ್ಲೆಗೊಳಗಾದ ಬಿಜೆಪಿ ಮುಖಂಡನ ಭೇಟಿ ಮಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ

ಬೆಳ್ತಂಗಡಿ, ಜೂ.5: ಕಳೆಂಜದ ಗ್ರಾಮದ ಬಿಜೆಪಿ ಮುಖಂಡ ರಾಜೇಶ್ ಎಂ.ಕೆ. ಮೇಲೆ ಜೂ.4ರಂದು ರಾತ್ರಿ ಮಾರಾಕಾಸ್ತ್ರಗಳಿಂದ ದಾಳಿಯಿಂದ ಗಾಯಗೊಂಡು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಆಸ್ಪತ್ರೆಗೆ ದ.ಕ. ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

ನಕಲಿ ಪೇಪರ್ ಕಟ್ಟಿಂಗ್: ಸ್ಪೀಕರ್ ಖಾದರ್ ಸ್ಪಷ್ಟನೆ

Posted by Vidyamaana on 2023-06-13 03:37:13 |

Share: | | | | |


ನಕಲಿ ಪೇಪರ್ ಕಟ್ಟಿಂಗ್: ಸ್ಪೀಕರ್ ಖಾದರ್ ಸ್ಪಷ್ಟನೆ

ಮಂಗಳೂರು: ಸ್ಪೀಕರ್ ಯು.ಟಿ. ಖಾದರ್ ಅವರದ್ದು ಎನ್ನಲಾದ ಹೇಳಿಕೆಯ ಪೇಪರ್ ಕಟ್ಟಿಂಗ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.

. ನಕಲಿ ಸೃಷ್ಟಿಸಿ ಅಪಪ್ರಚಾರ ಮಾಡುವವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು‌ ರವಾನಿಸಿದ್ದಾರೆ‌

ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕೋಮು ಸಂಘರ್ಷಕ್ಕೆ ಪ್ರಚೋದನೆ ಎಂದು ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ.

ನೀವಿರುವ ವಾಟ್ಸಾಪ್ ನಲ್ಲಿ ಈ ಪೇಪರ್ ಕಟ್ಟಿಂಗ್ ಬಂದರೆ ಅವರ ಫೋನ್ ನಂಬರ್ ಕಾಣುವಂತೆ screen shot ತೆಗೆದು 9343346439 ನ ವಾಟ್ಸಾಪ್ ಗೆ ಕಳುಹಿಸುವಂತೆ ಕಾಂಗ್ರೇಸ್ ನ ಕಾನೂನು ಘಟಕ ಮನವಿ ಮಾಡಿದೆ. ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.

ಏನಿದೆ ಪೇಪರ್ ಕಟ್ಟಿಂಗ್ ನಲ್ಲಿ..?

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಅನುದಾನ ತಸ್ತೀಕ್ ರೂಪದಲ್ಲಿ ಮಸೀದಿಗಳಿಗೆ ಹೋಗುವುದನ್ನು ತಡೆದ ಬಿಜೆಪಿ ಸರ್ಕಾರದ ಕ್ರಮಕ್ಕೆ ಶಾಸಕ ಮತ್ತು ಮಾಜಿ ಮಂತ್ರಿ ಯು.ಟಿ.ಖಾದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಇಲ್ಲಿ ಶುಕ್ರ ವಾರ ಮಾತನಾಡಿದ ಅವರು, ಜನರನ್ನು ಧರ್ಮದ ಹೆಸರಿನ ಮೇಲೆ ವಿಭಜಿಸುವ ಸರ್ಕಾರದ ಹುನ್ನಾರ ಇದಾಗಿದೆ. ಮುಜರಾಯಿ ಇಲಾಖೆ ಅನುದಾನ ಮಸೀದಿಗಳಿಗೆ ಹೋಗುವುದನ್ನು ತಡೆದಿರುವ ಕುರಿತಾದ ಗೊಂದಲ ನಿವಾರಿಸುವಂತೆ ಒತ್ತಾಯಿಸಿದರು. ಮುಜರಾಯಿ ಇಲಾಖೆ ಸ್ವಾಮ್ಯಕ್ಕೆ ಒಳಪಟ್ಟ ಮಂದಿರದ ಹುಂಡಿಯಲ್ಲಿನ ಹಣವನ್ನು ಆಯಾ ಮಂದಿರಕ್ಕಾಗಿ ಬಳಸಿಕೊಳ್ಳತಕ್ಕದ್ದು ಎಂದು ನಿಯಮವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕ್ರಮ ಅಸಮಂಜಸದಿಂದ ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಶಾಸಕ ರಹೀಮ್ ಖಾನ್ ಮತ್ತು ಜಿಲ್ಲಾ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.


ಎಂಬ ಪೇಪರ್ ಕಟ್ಟಿಂಗ್ ಹರಿದಾಡುತ್ತಿದೆ. ಇಂತಹ ಹೇಳಿಕೆಯೂ ನೀಡಿಲ್ಲ ಎಂದು ಯುಟಿ ಖಾದರ್ ಸ್ಪಷ್ಟ ಪಡಿಸಿದ್ದಾರೆ.

ಮುಂಬೈ ಹೋರ್ಡಿಂಗ್‌ ದುರಂತ: ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಯ ಬಂಧಿಸಿದ ಪೊಲೀಸರು

Posted by Vidyamaana on 2024-05-17 22:41:35 |

Share: | | | | |


ಮುಂಬೈ ಹೋರ್ಡಿಂಗ್‌ ದುರಂತ: ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಯ ಬಂಧಿಸಿದ ಪೊಲೀಸರು

ಮುಂಬೈ ನಲ್ಲಿ ಜಾಹೀರಾತು ಫಲಕ ಬಿದ್ದು 16 ಜೀವಗಳನ್ನು ಬಲಿ ಪಡೆದಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮುಂಬೈನ ಘಾಟ್ಕೋಪರ್ ಹೋರ್ಡಿಂಗ್(Hoarding)​ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮುಂಬೈನಲ್ಲಿ ಸೋಮವಾರ ಬೀಸಿದ ಬಿರುಗಾಳಿಗೆ ಘಾಟ್ಕೋಪರ್​ನ ಪೆಟ್ರೋಲ್​ ಬಂಕ್ ಮೇಲೆ ಬೃಹತ್ ಗಾತ್ರದ ಹೋರ್ಡಿಂಗ್​ ಬಿದ್ದಿತ್ತು. ಇದರ ಕೆಳಗೆ ಸಾಕಷ್ಟು ಮಂದಿ ಸಿಲುಕಿಕೊಂಡಿದ್ದರು. ಇವರ ರಕ್ಷಣೆಗೆ ಕೇಂದ್ರ ವಿಪತ್ತು ನಿರ್ವಹಣಾ ತಂಡ ಧಾವಿಸಿತ್ತು. ಸುಮಾರು 66 ಗಂಟೆಗಳ ಕಾರ್ಯಾಚರಣೆ ಗುರುವಾರ ಅಂತ್ಯಗೊಂಡಿದ್ದು, 16 ಮಂದಿ ಶವಗಳು ಪತ್ತೆಯಾಗಿದೆ.

ಕಡಬ; ಡೆಂಟಲ್ ಕ್ಲಿನಿಕ್ ಗೆಂದು ಹೋದ ತೀರ್ಥಲತಾ ನಾಪತ್ತೆ

Posted by Vidyamaana on 2023-08-02 10:49:33 |

Share: | | | | |


ಕಡಬ; ಡೆಂಟಲ್ ಕ್ಲಿನಿಕ್ ಗೆಂದು ಹೋದ   ತೀರ್ಥಲತಾ ನಾಪತ್ತೆ

ಕಡಬ; ಡೆಂಟಲ್ ಕ್ಲಿನಿಕ್ ಗೆಂದು ಹೋದ ವಿವಾಹಿತೆ ನಾಪತ್ತೆಯಾಗಿರುವ ಘಟನೆ ಕಡಬದಲ್ಲಿ ನಡೆದಿದೆ.ಇಲ್ಲಿನ ಬಿಳಿನೆಲೆ ಗ್ರಾಮದ ದೇವಸ್ಯ ಮನೆ ಮಾಯಿಲಪ್ಪ ಗೌಡ ಅವರ ಪುತ್ರಿ ತೀರ್ಥಲತಾ ಕಾಣೆಯಾದ ವಿವಾಹಿತೆ.


ಈ ಬಗ್ಗೆ ಅವರ ತಂದೆ ದೂರು ನೀಡಿದ್ದು, ತನ್ನ ಮಗಳನ್ನು ಗದಗ ಮೂಲದ ಮುಂಡರಗಿಯ ಶಿವರಾಜ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ತಂದೆ ಮನೆಗೆ ಬಂದಿದ್ದ ಆಕೆ ಸುಬ್ರಹ್ಮಣ್ಯದಲ್ಲಿರುವ ಡೆಂಟಲ್ ಕ್ಲಿನಿಕ್ ಗೆ ಚಿಕಿತ್ಸೆಗಾಗಿ ತೆರಳಿ ಬಳಿಕ ಮನೆಗೆ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.


ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸರು ದೂರು ದಾಖಲಿಸಿಕೊಂಡು ಸಾರ್ವಜನಿಕ ಪ್ರಕಟನೆ ಹೊರಡಿಸಿ ಮಾಹಿತಿ ಸಿಕ್ಕಲ್ಲಿ ಠಾಣೆಗೆ ತಿಳಿಸುವಂತೆ ಕೋರಿದ್ದಾರೆ.

ಲೋಕಸಭೆಯಲ್ಲಿ ಬಿಜೆಪಿ ಹಿನ್ನಡೆಗೆ ಕಾರಣ ತಿಳಿಸಿದ ಡಿ.ವಿ ಸದಾನಂದಗೌಡ

Posted by Vidyamaana on 2024-07-01 22:01:49 |

Share: | | | | |


ಲೋಕಸಭೆಯಲ್ಲಿ ಬಿಜೆಪಿ ಹಿನ್ನಡೆಗೆ ಕಾರಣ ತಿಳಿಸಿದ ಡಿ.ವಿ ಸದಾನಂದಗೌಡ

ಬೆಂಗಳೂರು :- ಲೋಕಸಭೆಯಲ್ಲಿ ಬಿಜೆಪಿ ಹಿನ್ನಡೆಗೆ ಡಿವಿ ಸದಾನಂದಗೌಡ ಕಾರಣ ತಿಳಿಸಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ‌ 8 ಕಡೆ ಬಿಜೆಪಿ ಸೋಲಿಗೆ ಹಾಗೂ ಉಳಿದೆಡೆ ಕಡಿಮೆ ಮಾರ್ಜಿನ್ ಬರಲು ಪ್ರಧಾನಿ ಮೋದಿಯವರ ಮೇಲಿನ ನಮ್ಮ ಅತಿಯಾದ ಆತ್ಮ ವಿಶ್ವಾಸ ಹಾಗೂ ಕಾರ್ಯಕರ್ತರ ಕಡಗಣನೆಯೇ ಕಾರಣ ಎಂದರು.

ಈ ಲೋಕಸಭಾ ಚುನಾವಣೆಯಲ್ಲೂ ನಮಗೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ನಾವು ವಿಧಾನಸಭಾ ಫಲಿತಾಂಶದ ಹಿನ್ನೆಡೆಯನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಕಾರ್ಯಕರ್ತರನ್ನು ಉತ್ತೇಜಿಸಿ ಚುನಾವಣೆ ಮಾಡುವ ಕೆಲಸ ಆಗಲಿಲ್ಲ. ಮೋದಿ ಹೆಸರಿನಲ್ಲಿ ಅತಿಯಾದ ಆತ್ಮವಿಶ್ವಾಸ ಬಿಜೆಪಿ 8 ಸೀಟ್ ಕಳೆದುಕೊಳ್ಳಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.



Leave a Comment: