ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ನಿಡ್ಪಳ್ಳಿ:ಬಿಜೆಪಿ-ಕಾಂಗ್ರೆಸ್-ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ

Posted by Vidyamaana on 2023-07-11 23:06:46 |

Share: | | | | |


ನಿಡ್ಪಳ್ಳಿ:ಬಿಜೆಪಿ-ಕಾಂಗ್ರೆಸ್-ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ

ಪುತ್ತೂರು: ನಿಡ್ಪಳ್ಳಿ ಗ್ರಾಮ ಪಂಚಾಯತ್ ಉಪಚುನಾವಣೆಗೆ ದಿನ ನಿಗದಿಯಾಗಿದ್ದು, ಕಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ನಿಡ್ಪಳ್ಳಿ ಗ್ರಾ.ಪಂ.ನ 1ನೇ ವಾರ್ಡ್ ಸದಸ್ಯರಾಗಿದ್ದ, ಬಿಜೆಪಿ ಬೆಂಬಲಿತ ಸದಸ್ಯ ಮುರಳೀಕೃಷ್ಣ ಭಟ್ ಅವರ ಮರಣದ ಬಳಿಕ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ.

ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚಂದ್ರಶೇಖರ್ ಪ್ರಭು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸತೀಶ್ ಶೆಟ್ಟಿ ಹಾಗೂ ಹರೀಶ್ ಕಣಕ್ಕೆ ಧುಮುಕ್ಕಿದ್ದಾರೆ. ಈ ಬಾರಿ ಪುತ್ತಿಲ ಪರಿವಾರವೂ ಸತ್ವ ಪರೀಕ್ಷೆಗೆ ಮುಂದಾಗಿದ್ದು, ಜಗನ್ನಾಥ ರೈ ಕೊಳೆಂಬೆತ್ತಿಮಾರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.


ಹೀಗಿದೆ ಲೆಕ್ಕಾಚಾರ:

ಹಿಂದಿನ ಬಾರಿಯ ಚುನಾವಣೆಯಲ್ಲಿ ಮುರಳೀಕೃಷ್ಣ ಭಟ್ ಅವರು 29 ಮತಗಳಿಂದ ಗೆಲುವು ಸಾಧಿಸಿದ್ದರು. ಆಗ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರಾ ನೇರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಪುತ್ತಿಲ ಪರಿವಾರವೂ ಕಣದಲ್ಲಿ ಇರುವುದರಿಂದ ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿಗೆ ಮತ್ತೊಮ್ಮೆ ಅಗ್ನಿ ಪರೀಕ್ಷೆಯಿದು. ಬಿಜೆಪಿ ಮತಗಳು ಹೋಳಾಗುವ ಕಾರಣದಿಂದ ಕಾಂಗ್ರೆಸ್ ಪರಿಸ್ಥಿತಿಯ ಪ್ರಯೋಜನ‌ ಪಡೆದುಕೊಳ್ಳುತ್ತದೆಯೇ? ಅಥವಾ ಮುರಳೀಕೃಷ್ಣ ಭಟ್ ಅವರ ಅನುಕಂಪದ ಮತಗಳು ಬಿಜೆಪಿ ಗೆಲುವಿಗೆ ಕಾರಣವಾಗಲಿದೆಯೇ? ಹೊಸ ಅಲೆ ಸೃಷ್ಟಿಸಿರುವ ಅರುಣ್ ಕುಮಾರ್ ಪುತ್ತಿಲ ಅವರು ಹೊಸದಾಗಿ ಇನ್ನಿಂಗ್ಸ್ ಶುಭಾರಂಭ ಮಾಡುವ ಸಾಧ್ಯತೆ ಇದೆಯೇ? ಹೀಗೆ ಅನೇಕ ಲೆಕ್ಕಾಚಾರಗಳು ಕಣದಲ್ಲಿ ಕೇಳಿಬರುತ್ತಿದೆ.


ಪಕ್ಷದ ಪರವಾಗಿ ನಿಂತ ಪ್ರಮುಖರು:

ಕಾಂಗ್ರೆಸ್, ಬಿಜೆಪಿ ಹಾಗೂ ಪುತ್ತಿಲ ಪರಿವಾರದ ಬೆಂಬಲಿತ ಸದಸ್ಯರು ನಾಮಪತ್ರ ಸಲ್ಲಿಸುವಾಗ ಪಕ್ಷದ ಪ್ರಮುಖರು ಜೊತೆಯಲ್ಲಿದ್ದದ್ದು ಕಣದ ಗಂಭೀರತೆಗೆ ಸಾಕ್ಷಿಯಾಗಿತ್ತು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರವಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಶಾಸಕ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಶಾ ತಿಮ್ಮಪ್ಪ ಹಾಗೂ ಕಾಂಗ್ರೆಸಿನಿಂದ ಜಿಲ್ಲಾ ಪ್ರಚಾರ ಸಮಿತಿಯ ಜಂಟಿ ಸಂಯೋಜಕ ಕೃಷ್ಣಪ್ರಸಾದ್ ಆಳ್ವ ಮತ್ತು ಪ್ರಮುಖರು, ಪುತ್ತಿಲ ಪರಿವಾರದಿಂದ ಅರುಣ್ ಕುಮಾರ್ ಪುತ್ತಿಲ, ಪ್ರಸನ್ನ ಕುಮಾರ್ ಮಾರ್ತಾ, ಉಮೇಶ್ ಗೌಡ ವೀರಮಂಗಲ ಮೊದಲಾದವರು ಉಪಸ್ಥಿತರಿದ್ದರು.

ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಹನಟಿ ವಿದ್ಯಾ ಬರ್ಬರ ಕೊಲೆ

Posted by Vidyamaana on 2024-05-21 14:28:01 |

Share: | | | | |


ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಹನಟಿ ವಿದ್ಯಾ ಬರ್ಬರ ಕೊಲೆ

ಮೈಸೂರು: ಪತಿಯೇ ಪತ್ನಿಯನ್ನು (Husband and Wife) ಬರ್ಬರವಾಗಿ ಕೊಲೆ (Murder Case) ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರದ ತುರಗನೂರು ಗ್ರಾಮದಲ್ಲಿ ನಡೆದಿದೆ. ಮೈಸೂರು (Mysuru) ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿದ್ಯಾ ಕೊಲೆಯಾದ ದುರ್ದೈವಿಯಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆ ಗಂಡನೇ ವಿದ್ಯಾಳ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಮೃತ ವಿದ್ಯಾ ಅವರು ಭಜರಂಗಿ, ವಜ್ರಕಾಯ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲೂ ಸಕ್ರೀಯವಾಗಿದ್ದರು. ಸೋಮವಾರ ರಾತ್ರಿ ಗಂಡ ಹಾಗೂ ಪತ್ನಿ ನಡುವೆ ಜಗಳ ನಡೆದಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಿ ಹತ್ಯೆ ಪತಿ ನಂದೀಶ್ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೆಳ್ತಂಗಡಿ: SDPI ಕಾರ್ಯಕರ್ತರಿಂದ ಅಕ್ಬರ್ ಬೆಳ್ತಂಗಡಿ ಪರ ಮತಯಾಚನೆ

Posted by Vidyamaana on 2023-05-01 11:09:01 |

Share: | | | | |


ಬೆಳ್ತಂಗಡಿ: SDPI ಕಾರ್ಯಕರ್ತರಿಂದ ಅಕ್ಬರ್ ಬೆಳ್ತಂಗಡಿ ಪರ ಮತಯಾಚನೆ

.

ಬೆಳ್ತಂಗಡಿ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಅವರ ಪರವಾಗಿ ಬೆಳ್ತಂಗಡಿ ತಾಲೂಕಿನ ಲಾಯಿಲ, ಗುರುವಾಯನಕೆರೆ, ಪಡಂಗಡಿ, ಕಲ್ಲೇರಿ, ಕುಪ್ಪೆಟ್ಟಿ, ಸುನ್ನತ್ ಕೆರೆ, ಚಾರ್ಮಾಡಿ, ಕಕ್ಕಿಂಜೆ, ಪುಂಜಾಲಕಟ್ಟೆ, ಕಟ್ಟೆ, ಕಾಜೂರು ಪ್ರದೇಶಗಳಲ್ಲಿ ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. 

ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ ಕರ್ನಾಟಕ ಮೂಲದ ಒಂದೇ ಕುಟುಂಬದ ಮೂವರು ಮೃತ್ಯು

Posted by Vidyamaana on 2024-04-07 17:37:39 |

Share: | | | | |


ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ  ಕರ್ನಾಟಕ ಮೂಲದ ಒಂದೇ ಕುಟುಂಬದ ಮೂವರು ಮೃತ್ಯು

ಸೌದಿ ಅರೇಬಿಯಾ: ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಘಟನೆ ಕಳೆದ ರಾತ್ರಿ ಮದೀನಾ ಸಮೀಪ ಸಂಭವಿಸಿದ ಅಪಘಾತದಲ್ಲಿ ಮೂವರು ಮರಣ ಹೊಂದಿದ್ದಾರೆ.

ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ

Posted by Vidyamaana on 2024-07-03 08:24:56 |

Share: | | | | |


ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ

ಬೆಂಗಳೂರು : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸ ಮಾಡಲಾಗಿದೆ. ನಾಲ್ವರು ಕೆಎಎಸ್ ಅಧಿಕಾರಿ ಹಾಗೂ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ / ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಡ್ರೈವಿಂಗ್‌ನಲ್ಲಿರುವಾಗಲೇ ಬಸ್ ಚಾಲಕನಿಗೆ ಹೃದಯಾಘಾತ: ಆಸ್ಪತ್ರೆಯಲ್ಲಿ ನಿಧನ

Posted by Vidyamaana on 2024-02-19 12:22:54 |

Share: | | | | |


ಡ್ರೈವಿಂಗ್‌ನಲ್ಲಿರುವಾಗಲೇ ಬಸ್ ಚಾಲಕನಿಗೆ ಹೃದಯಾಘಾತ: ಆಸ್ಪತ್ರೆಯಲ್ಲಿ ನಿಧನ

ಕುಂಬಳೆ: ಬಸ್‌ ಚಲಾಯಿಸುತ್ತಿದ್ದ ವೇಳೆಯಲ್ಲಿ ಚಾಲಕ ಹೃದಯಾಘಾತದಿಂದ ಸಾವೀಗೀಡಾದ ಘಟನೆ ಚೇವಾರು ಕುಂಟಂಗರಡ್ಕದಲ್ಲಿ ನಡೆದಿದೆ.


ಕಾಸರಗೋಡು-ಧರ್ಮತ್ತಡ್ಕ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್‌‌ನ ಚಾಲಕ ಕುಂಟಗರಡ್ಕದ ಅಬ್ದುಲ್‌ ರಹಿಮಾನ್‌ (42) ಮೃತ ವ್ಯಕ್ತಿ. ಧರ್ಮತ್ತಡ್ಕದಿಂದ ಬಸ್ ಕಾಸರಗೋಡಿಗೆ ತೆರಳುತ್ತಿದ್ದು, ಕುಂಟಗರಡ್ಕಕ್ಕೆ ತಲಪಿದಾಗ ಅಬ್ದುಲ್ ರಹಿಮಾನ್‌ಗೆ ಎದೆನೋವು ಕಾಣಿಸಿಕೊಂಡಿದೆ.


ಅಬ್ದುಲ್ ರಹಿಮಾನ್ ತಕ್ಷಣ ಬಸ್‌‌ಅನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಆ ಬಳಿಕ ಅವರು ಕುಸಿದು ಬಿದ್ದಿದ್ದಾರೆ.


ಅವರನ್ನು ಬಂದ್ಯೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ..ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.



Leave a Comment: