ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಸುದ್ದಿಗಳು News

Posted by vidyamaana on 2024-07-03 16:20:08 |

Share: | | | | |


ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಮಂಗಳೂರು : ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಣ್ಣು ಕುಸಿತದಿಂದ ಮಣ್ಣಿನ ಅಡಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಇದೀಗ ಮಣ್ಣಿನ ಅಡಿ ಸಿಲುಕಿದ್ದ ಕಾರ್ಮಿಕರ ಪೈಕಿ ಒಬ್ಬನನ್ನು ರಕ್ಷಣೆ ಮಾಡಲಾಗಿದೆ.ಹೌದು ಇಂದು ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು

ಈ ವೇಳೆ 20 ಅಡಿ ಅಡಿ ಆಳದಲ್ಲಿ ಇಬ್ಬರು ಕಾರ್ಮಿಕರು ಇದ್ದು ತಕ್ಷಣ ಮಣ್ಣು ಕುಸಿತವಾಗಿದೆ. ಇವಳೇ ಇಬ್ಬರು ಕಾರ್ಮಿಕರು ಮಣ್ಣಿನ ಆಡಿ ಸಿಕ್ಕಿದ್ದಾರೆ ತಕ್ಷಣ ಘಟನಾ ಸ್ಥಳಕ್ಕೆ ಎಸ್‌ಡಿಆರ್‌ಎಫ್ ತಂಡ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಒಬ್ಬನನ್ನು ರಕ್ಷಣೆ ಮಾಡಿದ್ದಾರೆ.

ಆದರೆ ಇನ್ನೊಬ್ಬ ಕಾರ್ಮಿಕನ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದ್ದು ಈ ವೇಳೆ ಮಳೆ ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಿದೆ. ಜೋರಾದ ಮಳೆಯಿಂದ ಇದೀಗ ಕಾರ್ಯಾಚರಣೆಗೆ ತೊಂದರೆ ಉಂಟಾಗುತ್ತಿದೆ. ರಕ್ಷಿತ ಕಾರ್ಮಿಕನನ್ನು ತಕ್ಷಣ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಡನಾಸ್ ತಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಮುಲ್ಲೈ ಮುಗಿಲನ್   ಹಾಗೂ ಇತರೆ ಅಧಿಕಾರಿಗಳು ಸ್ಥಳದಲ್ಲಿ ಇದ್ದಾರೆ.

 Share: | | | | |


ಮೇ 19 :ಬಪ್ಪಳಿಗೆ ಮಸ್ಜಿದುನ್ನೂರು ಜುಮಾ ಮಸೀದಿಯಲ್ಲಿ ಪಳ್ಳಿದರ್ಸ್ ಉದ್ಘಾಟನೆ

Posted by Vidyamaana on 2024-05-19 10:07:18 |

Share: | | | | |


ಮೇ 19 :ಬಪ್ಪಳಿಗೆ ಮಸ್ಜಿದುನ್ನೂರು ಜುಮಾ ಮಸೀದಿಯಲ್ಲಿ ಪಳ್ಳಿದರ್ಸ್ ಉದ್ಘಾಟನೆ

ಪುತ್ತೂರು : ಪವಿತ್ರ ಇಸ್ಲಾಮಿನ ಧಾರ್ಮಿಕ ಶಿಕ್ಷಣ ನೀಡುವ ಪರಂಪರಾಗತ ವಿದ್ಯಾಭ್ಯಾಸ ಪದ್ಧತಿಯಾದ ಪಳ್ಳಿ ದರ್ಸ್  ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಸಮಿತಿ ಅಧೀನದ ಬಪ್ಪಳಿಗೆ ಮಸ್ಜಿದುನ್ನೂರು ಮೊಹಲ್ಲಾ ಸಮಿತಿ ಆಶ್ರಯದಲ್ಲಿ ಮೇ 19 ಆದಿತ್ಯವಾರ ಮಗ್ರಿಬ್ ನಮಾಝಿನ ಬಳಿಕ ಉದ್ಘಾಟನೆಗೊಳ್ಳಲಿದೆ.ಬಹು| ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ರವರು ದರ್ಸ್ ಸಂಪ್ರದಾಯದ ಪಾರಂಪರ್ಯ ಗ್ರಂಥಗಳ ಕರ್ಮ ಶಾಸ್ತ್ರದ ಅಧ್ಯಾಯದ ಭಾಗಗಳನ್ನು ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಹೇಳಿ ಕೊಡುವ ಮೂಲಕ ದರ್ಸ್ ಗೆ ಚಾಲನೆ ನೀಡಲಿದ್ದಾರೆ. 

ದ.ಕ. ಜಿಲ್ಲೆಯ ಪ್ರಖಾಂಡ ವಿದ್ವಾಂಸರುಗಳಲ್ಲೋರ್ವರೂ ಹಿರಿಯ ಮುದರ್ರಿಸರೂ ಬಹು ಇಸ್ಮಾಯಿಲ್ ಫೈಝಿ ಮುದರ್ರಿಸ್ ಸೂರಿಂಜೆಯವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.ತೋಡಾರು ಶಂಸುಲ್ ಉಲಮಾ ಅರೇಬಿಕ್ ಕಾಲೇಜಿನ ಪ್ರಾಂಶುಪಾಲರಾದ ಬಹು ರಫೀಕ್ ಹುದವಿ ಕೋಲಾರ ಸೇರಿದಂತೆ ಹಲವು ಉಲಮಾ ಗಣ್ಯರು ಆಗಮಿಸಲಿದ್ದಾರೆ.

ಮಂಡ್ಯ ಪ್ರಚಾರ ಅಖಾಡಕ್ಕೆ ಸುಮಲತಾ ಎಂಟ್ರಿ ಕ್ಯಾನ್ಸಲ್

Posted by Vidyamaana on 2024-04-24 15:10:09 |

Share: | | | | |


ಮಂಡ್ಯ ಪ್ರಚಾರ ಅಖಾಡಕ್ಕೆ ಸುಮಲತಾ ಎಂಟ್ರಿ ಕ್ಯಾನ್ಸಲ್

ಬೆಂಗಳೂರು : ಸುಮಲತಾ ಅಂಬರೀಶ್‌ ಅವರ ಮಂಡ್ಯ ಪ್ರಚಾರ ರದ್ದಾಗಿದೆ. ಇಂದಿನ ಪ್ರಚಾರದ ಬಗ್ಗೆ ಪಕ್ಷದಿಂದ ಯಾವುದೇ ಸ್ಪಷ್ಟ ನಿರ್ಧಾರ ತಿಳಿಸದ ಕಾರಣ ರದ್ದಾಗಿದೆ. ಮಂಡ್ಯಕ್ಕೆ (Mandya) ತೆರಳದೇ ಬೆಂಗಳೂರಲ್ಲಿ ಸುಮಲತಾ ಅಂಬರೀಶ್ ಉಳಿದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಇಂದು ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಪರ ಸುಮಲತಾ ಮತಯಾಚನೆ ಮಾಡುವ ಕಾರ್ಯಕ್ರಮ ಮಂಗಳವಾರ ನಿಗದಿಯಾಗಿತ್ತು.

ಕೇರಳದಲ್ಲೂ ನಡೆಯಲಿದೆ ಏಕದಿನ ವಿಶ್ವಕಪ್ ಪಂದ್ಯಗಳು

Posted by Vidyamaana on 2023-06-14 06:52:14 |

Share: | | | | |


ಕೇರಳದಲ್ಲೂ ನಡೆಯಲಿದೆ ಏಕದಿನ ವಿಶ್ವಕಪ್ ಪಂದ್ಯಗಳು

ತಿರುವನಂತಪುರಂ: ಈ ಬಾರಿ ಅಕ್ಟೋಬರ್‌-ನವೆಂಬರ್‌ ನಲ್ಲಿ ಭಾರತ ಏಕದಿನ ವಿಶ್ವಕಪ್‌ನ ಆತಿಥ್ಯ ವಹಿಸಲಿದೆ. ಬಿಸಿಸಿಐ ಏಕಾಂಗಿಯಾಗಿ ಕೂಟವನ್ನು ಆಯೋಜಿಸುತ್ತಿರುವುದರಿಂದ ಕೂಟ ಅತ್ಯಂತ ಮಹತ್ವ ಪಡೆದು ಕೊಂಡಿದೆ. ಇಂತಹ ಹೊತ್ತಿನಲ್ಲಿ ಕೇರಳದ ಕ್ರಿಕೆಟ್‌ ಅಭಿಮಾನಿಗಳಿಗೆ ಅತ್ಯಂತ ಸಂತೋಷದ ಸುದ್ದಿ ಲಭಿಸಿದೆ ತಿರುವನಂತಪುರಂ ಗ್ರೀನ್‌ ಫೀಲ್ಡ್‌ ಮೈದಾನದಲ್ಲಿ ಮೂರು ಪಂದ್ಯಗಳು ನಡೆಯುವುದು ಬಹುತೇಕ ಖಾತ್ರಿಯಾಗಿದೆ. ಹಾಗಂತ ಅವರಿಗೆ ಪೂರ್ಣ ಸಂಭ್ರಮಪಡಲು ಅವಕಾಶವಿಲ್ಲ. ಭಾರತದ ಯಾವುದೇ ಪಂದ್ಯಗಳು ನಡೆಯುವ ಸಾಧ್ಯತೆ ಶೇ.99 ಇಲ್ಲ.

ತಿರುವನಂತಪುರಂ ಮೈದಾನದಲ್ಲಿ ಶ್ರೀಲಂಕಾದ ಒಂದು ಪಂದ್ಯ ನಡೆಯಬಹುದು. ಇನ್ನೆರಡು ಇತರೆ ದೇಶಗಳ ಪಂದ್ಯಗಳು ನಡೆಯಲಿವೆ. ಈ ಬಗ್ಗೆ ಎಲ್ಲವೂ ಅಧಿಕೃತವಾಗಿದ್ದರೂ ಐಸಿಸಿ ವಿಶ್ವಕಪ್‌ನ ವೇಳಾಪಟ್ಟಿಯನ್ನು ಅಧಿಕೃತಗೊಳಿಸಿದ ಮೇಲಷ್ಟೇ ಎಲ್ಲವೂ ಅಂತಿಮಗೊಳ್ಳಲಿದೆ. ಅಂದರೆ ಔಪಚಾರಿಕ ವಿಧಿವಿಧಾನಗಳಷ್ಟೇ ಬಾಕಿಯಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಜಯೇಶ್‌ ಜಾರ್ಜ್‌, ನಾವು ಬಿಸಿಸಿಐಗೆ ಮನವಿ ಮಾಡಿದ್ದೇವೆ. ಕೆಲವು ಪಂದ್ಯಗಳು ನಮಗೆ ಸಿಗುವ ನಂಬಿಕೆಯೂ ಇದೆ. ಆದರೆ ಬಿಸಿಸಿಐನಿಂದ ಇನ್ನೂ ನಮಗೆ ಅಧಿಕೃತವಾಗಿ ಖಾತ್ರಿ ಸಿಕ್ಕಿಲ್ಲ ಎಂದಿದ್ದಾರೆ.ಕೇರಳದಲ್ಲಿ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಗಳು ನಡೆಯುವುದು ಅಷ್ಟೇನು ಮಹತ್ವದ ಸಂಗತಿ ಎಂದು ನೀವು ಪ್ರಶ್ನಿಸುತ್ತೀರಾ? ಮಹತ್ವವಿದೆ. ಭಾರತ ಇದುವರೆಗೆ ಮೂರು ಬಾರಿ ವಿಶ್ವಕಪ್‌ ಆತಿಥ್ಯ ವಹಿಸಿದೆ. 1987, 1996 ಮತ್ತು 2011ರಂದು. ಅಷ್ಟೂ ಬಾರಿ ಜಂಟಿ ಆತಿಥ್ಯದಲ್ಲೇ ನಡೆದಿದ್ದು. ಈ ಕಾರಣಕ್ಕೆ ಕೇರಳ ಒಮ್ಮೆಯೂ ವಿಶ್ವಕಪ್‌ ಪಂದ್ಯವನ್ನಾಯೋಜಿಸುವ ಅವಕಾಶ ಸಿಕ್ಕಿಲ್ಲ

ಮೈಸೂರು: ಸ್ನಾನ ಮಾಡಲು ಕಪಿಲಾ ನದಿಗಿಳಿದ ಮೂವರು ಅಯ್ಯಪ್ಪ ಮಾಲಾಧಾರಿಗಳು ಸಾವು

Posted by Vidyamaana on 2024-01-20 09:37:11 |

Share: | | | | |


ಮೈಸೂರು: ಸ್ನಾನ ಮಾಡಲು ಕಪಿಲಾ ನದಿಗಿಳಿದ ಮೂವರು ಅಯ್ಯಪ್ಪ ಮಾಲಾಧಾರಿಗಳು ಸಾವು

ಮೈಸೂರು :ಸ್ನಾನ ಮಾಡಲು ಕಪಿಲಾ ನದಿಗಿಳಿದ ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಸಂಭವಿಸಿದೆ.ತುಮಕೂರು ಮೂಲದ ಗವಿ ರಂಗ(19), ರಾಕೇಶ್(19) ಹಾಗೂ ಅಪ್ಪು(16) ಮೃತಪಟ್ಟ ದುರ್ದೈವಿಗಳು. ನಂಜನಗೂಡು ತಾಲೂಕಿನ ಹೆಜ್ಜೆಗೆ ಸೇತುವೆ ಬಳಿ ಸ್ನಾನ ಮಾಡಲು ಇಳಿದು ಮೃತಪಟ್ಟಿದ್ದಾರೆ.ಕಪಿಲ ನದಿಯಲ್ಲಿ ಶುಕ್ರವಾರ ಬೆಳಿಗ್ಗೆ ಸ್ನಾನಕ್ಕೆಂದು ಇಳಿದಿದ್ದ ಅಯ್ಯಪ್ಪ ಮಾಲಾಧಾರಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಐವರು ಗುರುವಾರ ತಡರಾತ್ರಿ ಇಲ್ಲಿನ ನಂಜುಂಡೇಶ್ವರನ ದರ್ಶನಕ್ಕೆ ಬಂದಿದ್ದರು. ಶುಕ್ರವಾರ ಬೆಳಿಗ್ಗೆ ಸ್ನಾನಕ್ಕೆಂದು ನದಿಗೆ ಇಳಿದಿದ್ದಾರೆ. ಇಬ್ಬರು ಈಜಿ ಮೇಲೆ ಬಂದಿದ್ದಾರೆ ಎನ್ನಲಾಗಿದೆ.


ಪಟ್ಟಣದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಶಾಸಕ ದರ್ಶನ್‌ ಧ್ರುವನಾರಾಯಣ ಸ್ಥಳಕ್ಕೆ ಭೇಟಿ ನೀಡಿದ್ದರು. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 ಟಿವಿ ಆ್ಯಂಕರ್‌ಗಳನ್ನು ಬಹಿಷ್ಕರಿಸಿದ INDIA ಮೈತ್ರಿಕೂಟ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ?

Posted by Vidyamaana on 2023-09-15 09:06:27 |

Share: | | | | |


14 ಟಿವಿ ಆ್ಯಂಕರ್‌ಗಳನ್ನು ಬಹಿಷ್ಕರಿಸಿದ INDIA ಮೈತ್ರಿಕೂಟ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ?

ಮುಂಬೈ: ವಿರೋಧ ಪಕ್ಷದ ಮೈತ್ರಿಕೂಟ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್ (INDIA) ಈಗ ಕೆಲವು ಟಿವಿ ಆ್ಯಂಕರ್‌ಗಳನ್ನು ಬಹಿಷ್ಕರಿಸಿದೆ.  


ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದಲ್ಲಿ ಬುಧವಾರ ನಡೆದ ಸಮನ್ವಯ ಸಮಿತಿಯ ಮೊದಲ ಸಭೆಯಲ್ಲಿ INDIA ಮೈತ್ರಿಕೂಟ ಈ ನಿರ್ಧಾರವನ್ನು ತೆಗೆದುಕೊಂಡಿದೆ.


ವಾಸ್ತವವಾಗಿ, ಮಾಧ್ಯಮದ ಒಂದು ವಿಭಾಗವು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ವಿರೋಧ ಪಕ್ಷಗಳು ಹಲವು ಬಾರಿ ಆರೋಪಿಸಿವೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಭೇಟಿಗೆ ಮಾಧ್ಯಮಗಳು ಅಗತ್ಯ ಪ್ರಸಾರವನ್ನು ನೀಡಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.ಮೈತ್ರಿಕೂಟದ ಸಮನ್ವಯ ಸಮಿತಿಯ ಮೊದಲ ಸಭೆಯು ದೆಹಲಿಯ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದಲ್ಲಿ ನಡೆಯಿತು. ಶರದ್ ಪವಾರ್ ಹೊರತುಪಡಿಸಿ, ಕಾಂಗ್ರೆಸ್‌ನ ಕೆಸಿ ವೇಣುಗೋಪಾಲ್, ಡಿಎಂಕೆಯ ಟಿಆರ್ ಬಾಲು, ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್, ಜನತಾ ದಳದ (ಯುನೈಟೆಡ್) ಸಂಜಯ್ ಝಾ, ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ, ಶಿವಸೇನೆಯ (ಯುಬಿಟಿ) ಸಂಜಯ್ ರಾವತ್, ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ್ದರು.


ಭಾರತ ಮೈತ್ರಿಯಿಂದ ಬಹಿಷ್ಕರಿಸಿದ ಆಂಕರ್‌ಗಳು:

* ಅದಿತಿ ತ್ಯಾಗಿ

* ಅಮನ್ ಚೋಪ್ರಾ

* ಅಮಿಶ್ ದೇವಗನ್

* ಆನಂದ ನರಸಿಂಹನ್

* ಅರ್ನಾಬ್ ಗೋಸ್ವಾಮಿ

* ಅಶೋಕ್ ಶ್ರೀವಾಸ್ತವ

* ಚಿತ್ರಾ ತ್ರಿಪಾಠಿ

* ಗೌರವ್ ಸಾವಂತ್

* ನಾವಿಕ ಕುಮಾರ್

* ಪ್ರಾಚಿ ಪರಾಶರ

* ರೂಬಿಕಾ ಲಿಯಾಕತ್

* ಶಿವ ಆರೂರ್

* ಸುಧೀರ್ ಚೌಧರಿ

* ಸುಶಾಂತ್ ಸಿನ್ಹಾ

ಅಧಿಕಾರಿಗಳ ಕಿತ್ತಾಟ: ರೂಪಾ - ರೋಹಿಣಿ ಸೇರಿ ಮೂವರ ಎತ್ತಂಗಡಿ ಮಾಡಿದ ರಾಜ್ಯರಾಜ್ಯ ಸರ್ಕಾರ.

Posted by Vidyamaana on 2023-02-21 10:48:59 |

Share: | | | | |


ಅಧಿಕಾರಿಗಳ ಕಿತ್ತಾಟ: ರೂಪಾ - ರೋಹಿಣಿ ಸೇರಿ ಮೂವರ ಎತ್ತಂಗಡಿ ಮಾಡಿದ ರಾಜ್ಯರಾಜ್ಯ  ಸರ್ಕಾರ.

ಬೆಂಗಳೂರು: ಉನ್ನತ ಸ್ಥಾನದಲ್ಲಿದ್ದು ಪರಸ್ಪರ ಕಿತ್ತಾಟ ನಡೆಸಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರನ್ನು ಸರ್ಕಾರ ಇದೀಗ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.ಮುಜರಾಯಿ ಇಲಾಖೆ ಆಯುಕ್ತರಾಗಿದ್ದ ಸಿಂಧೂರಿ ಹಾಗೂ ಕರಕುಶಲ ನಿಗಮದ ಎಂಡಿ ರೂಪಾ ಹಾಗೂ ರೂಪ ಪತಿ ಐಎಎಸ್​ ಅಧಿಕಾರಿ ಮನೀಶ್‌ ಮುದ್ಗಲ್‌ ಅವರನ್ನು ಕೂಡ ವರ್ಗಾವಣೆ ಮಾಡಲಾಗಿದೆ.

ರೂಪ ಹಾಗೂ ಸಿಂಧೂರಿಗೆ ಸ್ಥಳವನ್ನು ತೋರಿಸದೆ ವರ್ಗಾಯಿಸಿರುವುದು ಅವರಿಬ್ಬರ ವಿರುದ್ಧ ಶಿಸ್ತುಕ್ರಮ ಜರುಗಿಸಿದೆ. ಮುದ್ಗಲ್‌ ಅವರನ್ನು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎತ್ತಂಗಡಿ ಮಾಡಲಾಗಿದೆ.



Leave a Comment: