ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಸುದ್ದಿಗಳು News

Posted by vidyamaana on 2024-07-08 17:22:55 |

Share: | | | | |


ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನೆಲೆ ಜು.09 ರಂದು ರೆಡ್ ಅಲರ್ಟ್ ಘೋಷಿಸಿದ್ದು ಅದರಂತೆ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮಂಗಳವಾರ ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜು.9ರಂದು ರಜೆ ಘೋಷಿಸಿ ಉಡುಪಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ

 Share: | | | | |


ಲೋಕಸಭೆ ಚುನಾವಣೆ | ನಾನು ಈಗಲೂ ಟಿಕೆಟ್‌ ಆಕಾಂಕ್ಷಿ: ಸದಾನಂದ ಗೌಡ

Posted by Vidyamaana on 2024-03-10 07:29:27 |

Share: | | | | |


ಲೋಕಸಭೆ ಚುನಾವಣೆ | ನಾನು ಈಗಲೂ ಟಿಕೆಟ್‌ ಆಕಾಂಕ್ಷಿ: ಸದಾನಂದ ಗೌಡ

ಬೆಂಗಳೂರು: ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ನನಗೇ ಟಿಕೆಟ್‌ ಸಿಗುವ ವಿಶ್ವಾಸವಿದೆ ಎಂದು ಈ ಕ್ಷೇತ್ರದ ಹಾಲಿ ಸಂಸದ ಡಿ.ವಿ. ಸದಾನಂದ ಗೌಡ ಹೇಳಿದರು.


ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ಬೇರೆಯವರಿಗೆ ಟಿಕೆಟ್‌ ಕೊಡಿ ಎಂದು ಹಿಂದೆ ಹೇಳಿದ್ದೆ.ಕ್ಷೇತ್ರದ ಎಲ್ಲ ಶಾಸಕರು ಮತ್ತು ಮುಖಂಡರು ನೀವೇ ಅಭ್ಯರ್ಥಿಯಾಗಬೇಕು ಎಂದು ಒತ್ತಾಯ ಮಾಡಿದ್ದರು. ಆ ಕಾರಣದಿಂದ ಟಿಕೆಟ್‌ ಬಯಸಿದ್ದೇನೆ ಎಂದರು.


ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಬಿ.ಎಸ್‌. ಯಡಿಯೂರಪ್ಪ ಅವರ ನಂತರದಲ್ಲಿ ನನಗೆ ಹೆಚ್ಚು ಅವಕಾಶಗಳನ್ನು ನೀಡಿದೆ. ಆದರೆ, ಈಗ ಟಿಕೆಟ್‌ ಕೊಡದೇ ಇದ್ದರೆ ಸ್ವಲ್ಪ ನೋವಾಗುತ್ತದೆ ಎಂದು ಹೇಳಿದರು.

ಪುತ್ತೂರುದ ಪಿಲಿಗೊಬ್ಬು ದ ಇನ್ವಿಟೇಷನ್ ಬಿಡುಗಡೆ

Posted by Vidyamaana on 2023-09-30 07:47:25 |

Share: | | | | |


ಪುತ್ತೂರುದ ಪಿಲಿಗೊಬ್ಬು ದ ಇನ್ವಿಟೇಷನ್ ಬಿಡುಗಡೆ

ಪುತ್ತೂರು: ಅ.22 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಪುತ್ತೂರು ವಿಜಯ ಸಾಮ್ರಾಟ್ ವತಿಯಿಂದ ನಡೆಯಲಿರುವ ಪುತ್ತೂರುದ ಪಿಲಿಗೊಬ್ಬು-2023" ರ ಆಮಂತ್ರಣ ಪತ್ರಿಕೆ ಬಿಡುಗಡೆ ಗುರುವಾರ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಡಾ.ನರಸಿಂಹ ಕಾನಾವು ಜಂಟಿಯಾಗಿ ಆಮಂತ್ರಣ ಪತ್ರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಈ ಹುಲಿವೇಷ ಕುಣಿತ, ಹಾಗೆಯೇ ಫುಡ್ ಫೆಸ್ಟ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದರು.ಡಾ.ನರಸಿಂಹ ಕಾನಾವು ಮಾತನಾಡಿ, ನಮ್ಮ ಜಿಲ್ಲೆಯ ಹೆಮ್ಮೆಯ ಜಾನಪದ ಕಲೆ ಹುಲಿ ಕುಣಿತ ಕಾರ್ಯಕ್ರಮ ಎಲ್ಲರ ಮನ ಗೆಲ್ಲಲಿ ಎಂದರು.


ಚರ್ಮರೋಗ ತಜ್ಞರಾದ ಡಾ.ನರಸಿಂಹ ಶರ್ಮ ಕಾನಾವುರವರು ಮಾತನಾಡಿ, ಜಿಲ್ಲೆಯ ಜನಪದ ಕಾರ್ಯಕ್ರಮವೆನಿಸಿದ ಈ ಪಿಲಿಗೊಬ್ಬು ಸಂಭ್ರಮವನ್ನು ಎಲ್ಲರೂ ಆನಂದಿಸುವಂತಾಗಲಿ ಮಾತ್ರವಲ್ಲ ಈ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ಯಶಸ್ವಿಯಾಗಲಿ. ಪುತ್ತೂರಿನಲ್ಲಿ ವಿಜಯ ಸಾಮ್ರಾಟ್ ವತಿಯಿಂದ ಪ್ರಥಮ ಬಾರಿಗೆ ನಡೆಯುವ ಈ ಕಾರ್ಯಕ್ರಮವು ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ ಯಶಸ್ಸನ್ನು ಪಡೆಯಲಿ ಎಂಬುದೇ ಹಾರೈಕೆಯಾಗಿದೆ ಎಂದರು.

ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ:ಸಹಜ್ ರೈ ಬಳಜ್ಜ, ಗೌರವಾಧ್ಯಕ್ಷರು. ಪಿಲಿಗೊಬ್ಬು ಸಮಿತಿ

ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿರುವ ವಿಜಯ ಸಾಮ್ರಾಟ್ ತಂಡದಿಂದ ದಕ್ಷಿಣ ಕನ್ನಡ ಜಿಲ್ಲೆಯ ಆಹ್ವಾನಿತ ಬಲಿಷ್ಟ ತಂಡಗಳಿಂದ ಹುಲಿವೇಷ ಕುಣಿತ ಜರಗಲಿದೆ. ಹುಲಿವೇಷ ಕುಣಿತದ ಜೊತೆಗೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ವಿವಿಧ ಖಾದ್ಯಗಳ ಫುಡ್ ಫೆಸ್ಟ್ ಕೂಡ ನಡೆಯಲಿಕ್ಕಿದೆ. ವಿಸ್ತಾರವಾದ ಪೆಂಡಾಲ್ ನಿರ್ಮಿಸುವ ಮೂಲಕ ಪ್ರೇಕ್ಷಕರಿಗೆ ಕಾರ್ಯಕ್ರಮದ ರಸದೌತಣವನ್ನು ಉಣಬಡಿಸಲಿದ್ದು ಜೊತೆಗೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪಿಲಿಗೊಬ್ಬು ಜೊತೆಗೆ ಫುಡ್ ಫೆಸ್ಟಿವಲ್ ಕಾರ್ಯಕ್ರಮವು ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆಯಲಿದೆ.


-10 ತಂಡಗಳಿಗೆ ಮಾತ್ರ ಅವಕಾಶ -ಪ್ರತಿ ತಂಡಕ್ಕೆ 23 ನಿಮಿಷಗಳ ಅವಕಾಶ -ಗರಿಷ್ಟ 15 ಹುಲಿಗಳಿಗೆ ಮಾತ್ರ ಒಂದು ತಂಡದಲ್ಲಿ ಅವಕಾಶ -ಪರಿಣತಿ ಹೊಂದಿದ ತೀರ್ಪುಗಾರರು -ತಂಡಗಳ ನಿಯಮ ಮತ್ತು ನಿಬಂಧನೆಗಳನ್ನು ಆಯಾ ತಂಡಗಳಿಗೆ ಪ್ರತ್ಯೇಕವಾಗಿ ನೀಡಲ್ಪಡುತ್ತದೆ -ಸ್ಯಾಂಡಲ್‌ವುಡ್ ಮತ್ತು ಕೋಸ್ಟಲ್‌ವುಡ್ ಚಲನಚಿತ್ರ ನಟರ ವಿಶೇಷ ಮೆರುಗು


ಬಹುಮಾನಗಳು..

ಪ್ರಥಮ =3,00,000/-

ದ್ವಿತೀಯ =2,00,000/-

 ತೃತೀಯ -1,00,000/-

ರೂ =10,000 ಐದು ವೈಯಕ್ತಿಕ ಬಹುಮಾನಗಳು


ಪಿಲಿಗೊಬ್ಬು ಸಮಿತಿಯ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಹುಟ್ಟುಹಾಕಿದ ಸಂಸ್ಥೆ ವಿಜಯ ಸಾಮ್ರಾಟ್. ಈ ಸಂಸ್ಥೆಯಡಿಯಲ್ಲಿ ೧೫೦೦ಕ್ಕೂ ಮಿಕ್ಕಿ ಅಗತ್ಯವುಳ್ಳವರಿಗೆ, ಆಶಾ ಕಾರ್ಯಕರ್ತರಿಗೆ ಆಹಾರ ಸಾಮಾಗ್ರಿಗಳು, ಮನೆ ನಿರ್ಮಾಣ ಕಾರ್ಯವನ್ನು ಮಾಡಿರುತ್ತದೆ. ಸಹಜ್‌ರವರ ನೇತೃತ್ವದಲ್ಲಿ ಅಳಿವಿನಂಚಿನಲ್ಲಿರುವ ಹುಲಿವೇಷ ಎಂಬ ಜನಪದ, ದೈವಿಕ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಆರಂಭಿಸಲಾಗಿದೆ. ಜೊತೆಗೆ ತುಳುನಾಡಿನ ವಿವಿಧ ಆಹಾರ ಖಾದ್ಯಗಳ ಆಹಾರ ಮೇಳವನ್ನು ಏರ್ಪಡಿಸಿ ಜನತೆಗೆ ಉಣ ಬಡಿಸಲಿದ್ದೇವೆ. ಪುತ್ತೂರಿನಲ್ಲಿ ಜಾತ್ರೆ, ಕಂಬಳ ಬಳಿಕ ಈ ಪಿಲಿಗೊಬ್ಬು ಮೂರನೇ ಅತೀ ದೊಡ್ಡ ಜಾತ್ರೆಯಾಗಿ ಗುರುತಿಸಲ್ಪಡಲಿದೆ ಎಂದರು.


ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಪಿಲಿಗೊಬ್ಬು ಸಮಿತಿಯ ಸಂಚಾಲಕ ನಾಗಾರಾಜ್ ನಡುವಡ್ಕ, ಜೊತೆ ಕಾರ್ಯದರ್ಶಿ ಶಂಕರ್ ಭಟ್ ಈಶಾನ್ಯ, ಕೋಶಾಧಿಕಾರಿ ರಾಜೇಶ್ ಕೆ.ಗೌಡ, ಕಾರ್ಯದರ್ಶಿ ಶರತ್ ಕುಮಾರ್ ಮಾಡಾವು ಸಹಿತ ಹಲವರು ಉಪಸ್ಥಿತರಿದ್ದರು.

ಉದ್ಯೋಗದ ನೆಪದಲ್ಲಿ ಲಕ್ಷಾಂತರ ರೂ. ದೋಖಾ

Posted by Vidyamaana on 2024-02-09 10:54:33 |

Share: | | | | |


ಉದ್ಯೋಗದ ನೆಪದಲ್ಲಿ ಲಕ್ಷಾಂತರ ರೂ. ದೋಖಾ

ಪುತ್ತೂರು: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ವಂಚನೆ ಮಾಡಿದ‌ ಪ್ರಕರಣವನ್ನು ಭೇಧಿಸಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪಿ.ಎಸ್.ಐ. ಜಂಬುರಾಜ್ ಬಿ. ಮಹಾಜನ್ ಅವರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ತುಮಕೂರಿನ ಚಿಕ್ಕನಾಯಕನಹಳ್ಳಿಯ ಸುಮಿತ್ರ ಬಾಯಿ ಸಿ.ಆರ್.(23), ಹಾಸನದ ಹಳಸಿನಹಳ್ಳಿಯ ಸೌಂದರ್ಯ ಎಂ.ಎಸ್.(21), ತುಮಕೂರಿನ ಚಿಕ್ಕನಾಯಕನಹಳ್ಳಿಯ ರಾಹುಲ್ ಕುಮಾರ್ ನಾಯ್ಕ (19) ಎಂದು ಗುರುತಿಸಲಾಗಿದೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಘಟನೆ ವಿವರ:

ನ್ಯೂಸ್ ಪೇಪರ್ ನಲ್ಲಿ ಕರಾವಳಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅಫೀಸ್ ಕೆಲಸ ಖಾಲಿ ಇದೆ. ನಿರುದ್ಯೋಗಿಗಳಿಗೆ ಬಂದ ದಿನವೇ ಕೆಲಸ ಸಿಗುತ್ತದೆ ಎಂಬುದಾಗಿ ಬಂದ ಜಾಹಿರಾತು ನೋಡಿ ಜಾಹಿರಾತಿನಲ್ಲಿ ನಮೂದಿಸಿದ ಫೋನ್ ನಂಬರ್ ಗೆ ಕರೆ ಮಾಡಿ ವಿಚಾರಿಸಿದಾಗ ಕರೆಯನ್ನು ಸ್ವೀಕರಿಸಿ ನೀವು ಕೆಲಸಕ್ಕೆ ಸೇರ ಬಯಸಿದರೆ ಫೀಸ್ ಕೊಡಬೇಕು ಎಂಬುದಾಗಿ ತಿಳಿಸಿ ಕಳೆದ ಸುಮಾರು 7 ತಿಂಗಳಿನಿಂದ ಪದೇ ಪದೇ ಆನ್ ಲೈನ್ ಮುಂಖಾಂತರ ಹಣವನ್ನು ಪಾವತಿ ಮಾಡುವಂತೆ ತಿಳಿಸಿದ್ದರು. ಅದರಂತೆ ಗೂಗಲ್ ಪೇ ಮುಖಾಂತರ ಇದುವರೆಗೆ ಸುಮಾರು ಒಟ್ಟು 2,25,001 ರೂ.ವನ್ನು ಆರೋಪಿಗಳ ಖಾತೆಗೆ ಪಾವತಿ ಮಾಡಿದ್ದರು. ಅದರೂ ಸಹ ಪದೇ ಪದೇ ಕರೆ ಮಾಡಿ ಇನ್ನು ಹಣವನ್ನು ನೀಡಬೇಕು ಎಂದು ಹೇಳಿ ಕೆಲಸ ಕೊಡುವುದಾಗಿ ನಂಬಿಸಿ ಯಾವುದೇ ಉದ್ಯೋಗ ನೀಡದೇ ವಂಚಿಸಿದ್ದಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 


ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎಂ.ಎನ್ ಮತ್ತು ರಾಜೇಂದ್ರ ಡಿ.ಎನ್. ಅವರ ನಿರ್ದೇಶನದಲ್ಲಿ ಪುತ್ತೂರು ಪೊಲೀಸ್ ಉಪಾಧೀಕ್ಷಕ ಡಾ. ಅರುಣ್ ನಾಗೇಗೌಡ ಅವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ರವಿ ಬಿ.ಎಸ್ ಅವರ ಆದೇಶದಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕ ಜಂಬುರಾಜ್ ಬಿ ಮಹಾಜನ್ ನೇತೃತ್ವದಲ್ಲಿ ಎಎಸ್‌ಐ ಶ್ರೀದರ್ ರೈ, ಸಿಬ್ಬಂದಿಗಳಾದ ಮಧು ಕೆ.ಎನ್., ಸತೀಶ್ ಎನ್. ಗಿರೀಶ ಕೆ., ಶಿವಪುತ್ರಮ್ಮ, ಹೆಚ್.ಜಿ. ಹಕೀಂ ಮತ್ತು ಗಣಕ ಯಂತ್ರ ವಿಭಾಗದ ದಿವಾಕರ್, ಸಂಪತ್ ಕಾರ್ಯಾಚರಣೆ ನಡೆಸಿದ್ದಾರೆ.

ಬೆಡ್​​ರೂಮ್​ನಲ್ಲಿ ದುರಂತ ಸಾವಿಗೀಡಾದ ನವ ವಿವಾಹಿತ ದಂಪತಿ! ಅಂತ್ಯಕ್ರಿಯೆಯನ್ನು ತಡೆದ ಪೊಲೀಸರು

Posted by Vidyamaana on 2023-09-02 02:55:57 |

Share: | | | | |


ಬೆಡ್​​ರೂಮ್​ನಲ್ಲಿ ದುರಂತ ಸಾವಿಗೀಡಾದ ನವ ವಿವಾಹಿತ ದಂಪತಿ! ಅಂತ್ಯಕ್ರಿಯೆಯನ್ನು ತಡೆದ ಪೊಲೀಸರು

ಭುವನೇಶ್ವರ್​: ನವ ವಿವಾಹಿತ ದಂಪತಿ ಬೆಡ್​ರೂಮ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಒಡಿಶಾದ ಕಟಕ್​ ಜಿಲ್ಲೆಯ ಬಂಕಿ ಬ್ಲಾಕ್​ ವ್ಯಾಪ್ತಿಯಲ್ಲಿ ಬರುವ ಭೇದರಾಮಚಂದ್ರಾಪುರ ಗ್ರಾಮದಲ್ಲಿ ಗುರುವಾರ (ಆ.31) ನಡೆದಿದೆ.ಮೃತ ದಂಪತಿಯನ್ನು ಧರಣಿಧರ್​ ಸಾಹು ಮತ್ತು ನಿರುಪಮಾ ಸಾಹು ಎಂದು ಗುರುತಿಸಲಾಗಿದೆಇಬ್ಬರು 7 ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ಧರಣಿಧರ್​, ಜೀವನೋಪಾಯಕ್ಕಾಗಿ ಭುವನೇಶ್ವರದ ಸ್ವೀಟ್​ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದರು. ಅನೇಕ ಬಾರಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಅದರಂತೆಯೇ ಬುಧವಾರ ಊರಿಗೆ ಬಂದಿದ್ದ. ಆದರೆ, ಗುರುವಾರ ಬೆಳಗ್ಗೆ ಕುಟುಂಬಸ್ಥರು ಎದ್ದು ನೋಡಿದಾಗ ಬೆಡ್​ರೂಮ್​ನ ಸೀಲಿಂಗ್​ ಫ್ಯಾನ್​ಗೆ ಧರಣಿಧರ್​ ಮತ್ತು ನಿರುಪಮಾ ನೇಣು ಬಿಗಿದುಕೊಂಡಿದ್ದಾರೆಇದಾದ ಬಳಿಕ ಕುಟುಂಬಸ್ಥರು ಇಬ್ಬರ ಅಂತ್ಯಕ್ರಿಯೆಯನ್ನು ತರಾತುರಿಯಲ್ಲಿ ಮಾಡಿ ಮುಗಿಸಲು ಪ್ರಯತ್ನಿಸಿದರು. ಆದರೆ, ಈ ವಿಚಾರ ಸ್ಥಳೀಯ ಪೊಲೀಸರಿಗೆ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂತ್ಯಕ್ರಿಯೆಯನ್ನು ತಡೆದಿದ್ದಾರೆ ಮತ್ತು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಶಕ್ಕೆ ಪಡೆದುಕೊಂಡರು.


ಸಾವಿಗೆ ನಿಖರವಾದ ಕಾರಣ ಏನೆಂಬುದು ಇನ್ನು ತಿಳಿದಿಲ್ಲ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಕಾರಣ ತಿಳಿಯಬಹುದು. ಪ್ರಾಥಮಿಕ ತನಿಖೆಯ ಪ್ರಕಾರ ಕೌಟುಂಬಿಕ ಸಮಸ್ಯೆಗಳಿಂದಾಗಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ಆರಂಭಿಸಿದ್ದಾರೆ

ಮಂಗಳೂರು ಸಿಎಂ, ಡಿಸಿಎಂಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಬಿಜೆಪಿ ಕಾರ್ಯಕರ್ತ ಅರೆಸ್ಟ್

Posted by Vidyamaana on 2023-12-15 15:17:14 |

Share: | | | | |


ಮಂಗಳೂರು  ಸಿಎಂ, ಡಿಸಿಎಂಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಬಿಜೆಪಿ ಕಾರ್ಯಕರ್ತ ಅರೆಸ್ಟ್

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.ಮುತ್ತೂರು ಗ್ರಾಮದ ಬೊಳಿಯ ನಿವಾಸಿ ಸಂತೋಷ್ ಪೂಜಾರಿ ಬಂಧಿತ ಆರೋಪಿ.


ಡಿ. 11 ರಂದು ಬಿಜೆಪಿ ಕಾರ್ಯಕರ್ತ ಎನ್ನಲಾದ ಮುತ್ತೂರು ಗ್ರಾಮದ ಬೊಳಿಯ ನಿವಾಸಿ ಸಂತೋಷ್ ಪೂಜಾರಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಶ್ರೀ ನಾರಾಯಣ ಗುರು ಯುವ ವೇದಿಕೆ ಎಂಬ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವಾಯ್ಸ್ ಬಿಟ್ಟಿದ್ದು, ನಂತರ ಆ ವಾಯ್ಸ್ ಕ್ಲಿಪ್ ಗಳು ಇತರ ಗ್ರೂಪ್ ಗಳಲ್ಲೂ ವೈರಲ್ ಆಗಿತ್ತು ಎನ್ನಲಾಗಿದೆ. ಈ ಬಗ್ಗೆ ಮುತ್ತೂರು ವಲಯ ಕಾಂಗ್ರೆಸ್ ಅಧ್ಯಕ್ಷ ಹರಿಯಪ್ಪ ಎಂಬವರು ಬಜ್ಪೆ ಠಾಣೆಗೆ ದೂರು ನೀಡಿದ್ದರು. ದೂರಿನಂತೆ ದಿನಾಂಕ 14-12-2023 ರಂದು ಬಜ್ಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಸಂತೋಷ್ ಬೋಳಿಯ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಬಪ್ಪಳಿಗೆ: ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಯಿಂದ ಯೌವ್ವನ ಒಳಿತಿಗಾಗಿ ಸದಸ್ಯತ್ವ ಅಭಿಯಾನ ಸಮಾರೋಪ

Posted by Vidyamaana on 2023-09-09 15:18:18 |

Share: | | | | |


ಬಪ್ಪಳಿಗೆ: ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಯಿಂದ ಯೌವ್ವನ ಒಳಿತಿಗಾಗಿ ಸದಸ್ಯತ್ವ ಅಭಿಯಾನ ಸಮಾರೋಪ

ಪುತ್ತೂರು :ಮನುಷ್ಯ ಜೀವನದ ಪ್ರಧಾನ ಹಂತವಾದ ಯೌವನಕ್ಕೆ ಇಸ್ಲಾಂ ಹೆಚ್ಚಿನ ಆದ್ಯತೆ ಮತ್ತು ಪ್ರಾಮುಖ್ಯತೆಯನ್ನು ನೀಡಿದೆ.ಇತಿಹಾಸವನ್ನು ಅರಿತಾಗ ಒಂದು ಸಮುದಾಯದ ಅಭಿವೃದ್ಧಿ ಮತ್ತು ಅವನತಿ ಯುವಜನಾಂಗ ದಿಂದಲೇ ಎಂಬುವುದು ಮನವರಿಕೆಯಾಗುತ್ತದೆ,ಎಂದು ಬಪ್ಪಳಿಗೆ ಮಸೀದಿಯ ಖತೀಬ್  ಸಿರಾಜುದ್ದೀನ್ ಫೈಝಿ ನುಡಿದರು.ಅವರು ಬಪ್ಪಳಿಗೆ ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಯು "ಯೌವ್ವನ ಒಳಿತಿಗಾಗಿ"ಸದಸ್ಯತ್ವ ಅಭಿಯಾನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಪ್ಪಳಿಗೆ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್ ಲವ್ಲಿ ಯವರು ಯುವಕರು ಒಳಿತನ್ನು ಬಯಸಿಕೊಂಡು ಅಲ್ಲಾಹನ ಮಾರ್ಗದಲ್ಲೇ ಸಾಗಿ, ಸಾಮಾಜಿಕ ಸೇವೆಗಳಿಂದ ಮಾದರೀಯೋಗ್ಯರಾಗಬೇಕೆಂದರು.

   ನಲುವತ್ತೈದು ವರ್ಷಗಳ ಇತಿಹಾಸ ಹೊಂದಿರುವ ಈ ಯುವಕ ಸಮಿತಿಗೆ ಒಂದು ತಿಂಗಳ ಕಾಲ ಹಮ್ಮಿಕೊಂಡ ಸದಸ್ಯತ್ವ ನವೀಕರಣ ಹಾಗೂ ಹೊಸದಾಗಿ ಸದಸ್ಯರನ್ನು ಸೇರ್ಪಡೆಗೊಳಿಸುವ ಕಾರ್ಯ ಚಟುವಟಿಕೆಗಳ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಸಮಿತಿ ಅಧ್ಯಕ್ಷ ಮೋನು ಬಪ್ಪಳಿಗೆ ಕ್ರತಜ್ಞತೆ ಸಲ್ಲಿಸಿದರು.ಸಮಾರಂಭದಲ್ಲಿ ಜಮಾಅತ್ ಕಾರ್ಯದರ್ಶಿ ಇಕ್ಬಾಲ್ ಯು.ಕೆ.,ಇಸ್ಹಾಕ್, ಅಬ್ದುಲ್ ರಝಾಕ್ ಬಿ.ಹೆಚ್. ಹಾಗೂ ಇನ್ನಿತರ ಜಮಾಅತ್ ಸಮಿತಿ ಪದಾಧಿಕಾರಿಗಳು ಯುವಕ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.



Leave a Comment: