KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಸುದ್ದಿಗಳು News

Posted by vidyamaana on 2024-07-24 17:11:55 |

Share: | | | | |


KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಕ್ರೈಸ್ತ ಧರ್ಮಗುರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಸಮೀಪ ಸವಳಂಗ ಚಿನ್ನಿಕಟ್ಟೆ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಕೆಎಸ್‌ಆರ್‌ಟಿಸಿ ಬಸ್ಸು ಹಾನಗಲ್‌ನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿತ್ತುಎನ್ನಲಾಗಿದೆ.

ಕ್ರೈಸ್ತ ಧರ್ಮಗುರು ಇದ್ದ ಕಾರು ಶಿವಮೊಗ್ಗ ಕಡೆಯಿಂದ ತೆರಳುತ್ತಿತ್ತು. ಚಿನ್ನಿಕಟ್ಟೆ ಬಳಿ ಕಾರು, ಬಸ್ಸು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶಿಕಾರಿಪುರ ಧರ್ಮಕೇಂದ್ರದ ಧರ್ಮಗುರು ಆಂಥೋಣಿ ಪೀಟರ್‌ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು ನ್ಯಾಮತಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

 Share: | | | | |


ಕಾಂಗ್ರೆಸ್ಸಿನ ಗ್ಯಾರಂಟಿ ಸ್ಕೀಂಗಳಿಂದ ಬಿಜೆಪಿ ಅಸ್ತಿತ್ವಕ್ಕೇ ಗ್ಯಾರಂಟಿ’ ಇಲ್ಲದಾಗಿದೆ

Posted by Vidyamaana on 2023-09-14 04:35:30 |

Share: | | | | |


ಕಾಂಗ್ರೆಸ್ಸಿನ ಗ್ಯಾರಂಟಿ ಸ್ಕೀಂಗಳಿಂದ ಬಿಜೆಪಿ ಅಸ್ತಿತ್ವಕ್ಕೇ ಗ್ಯಾರಂಟಿ’ ಇಲ್ಲದಾಗಿದೆ

ಪುತ್ತೂರು: ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯ ಕಾರಣಕ್ಕೆ ಬಿಜೆಪಿ ತತ್ತರಿಸಿಹೋಗಿದ್ದು ಅಸ್ತಿತ್ವ ಉಳಿಸುದಕ್ಕೋಸ್ಕರ ಪ್ರತಿಭಟನೆ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಹೇಳಿದ್ದಾರೆ.

ಸೆ. ೧೩ ರಂದು ಪುತ್ತೂರಿನಲ್ಲಿ ರಾಜ್ಯ ಸರಕಾರದ ವಿರುದ್ದ ಪುತ್ತೂರು ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯನ್ನು ವ್ಯಂಗ್ಯವಾಡಿದ ಬ್ಲಾಕ್ ಅಧ್ಯಕ್ಷರು ಇದು ಪ್ರತಿಭಟನೆಗೋಸ್ಕರ ನಡೆದ ಪ್ರತಿಭಟನೆಯಾಗಿದೆ, ಪುತ್ತೂರಿನಲ್ಲಿ ಬಿಜೆಪಿಗೆ ಉಳಿಗಾಲವಿಲ್ಲದಂತ ಪರಿಸ್ಥಿತಿ ಇದೆ, ಕಾರ್ಯಕರ್ತರಿಲ್ಲದೆ ಬಿಜೆಪಿ ಕಂಗಾಲಾಗಿದೆ, ರಾಜ್ಯದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನತೆ ನೆಮ್ಮದಿಯಿಂದ ಇದ್ದಾರೆ ಇದನ್ನು ಸಹಿಸಲು ಬಿಜೆಪಿಗೆ ಆಗುತ್ತಿಲ್ಲ ಈ ಕಾರಣಕ್ಕೆ ರೈತರ ಹೆಸರಿನಲ್ಲಿ ಪ್ರತಿಭಟನೆ ಮಾಡುವುದಕ್ಕೆ ಮುಂದಾಗಿದೆ. ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಈ ಪ್ರತಿಭಟನಾ ನಾಟಕ ಇಂದು ಪ್ರದರ್ಶನವಾಗಿದೆ ವಿನ ಅವರು ಮಡಿದ ಆರೋಪದಲ್ಲಿ ಎಳ್ಳಷ್ಟು ಸತ್ಯವಿಲ್ಲ ಎಂದು ಹೇಳಿದರು. ರಾಜ್ಯದ ಕಾಂಗ್ರೆಸ್ ಸರಕರದ ಗ್ಯಾರಂಟಿ ಯೋಜನೆಯ ಫಲವಾಗಿ ಇಂದು ರಾಜ್ಯಾದ್ಯಂತ ಬಿಜೆಪಿ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಕುಟುಂಬಕ್ಕೆ ಸೇರ್ಪಡೆಯಗುತ್ತಿದ್ದಾರೆ ಇದೆಲ್ಲವೂ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರ ಅಭಿವೃದ್ದಿ ಕೆಲಸವನ್ನು ಕಂಡು ಬಿಜೆಪಿಗರು ಬೆಚ್ಚಿ ಬಿದ್ದಿದ್ದಾರೆ ಅದರ ಪರಿಣಾಮವೇ ಇಂದು ನಡೆದ ಪ್ರತಿಭಟನೆಯಾಗಿದೆ ಎಂದು ಎಂ ಬಿ ವಿಶ್ವನಾಥ ರೈ ಹೇಳಿದ್ದಾರೆ.

ಭಾರೀ ಕುತೂಹಲಕ್ಕೆ ಕಾರಣವಾಗಿದೆ ಪುತ್ತಿಲ ಪರಿವಾರದ ಸಮಾಲೋಚನಾ ಸಭೆ

Posted by Vidyamaana on 2024-02-01 16:11:52 |

Share: | | | | |


ಭಾರೀ ಕುತೂಹಲಕ್ಕೆ ಕಾರಣವಾಗಿದೆ ಪುತ್ತಿಲ ಪರಿವಾರದ ಸಮಾಲೋಚನಾ ಸಭೆ

ಪುತ್ತೂರು : ಪುತ್ತಿಲ ಪರಿವಾರದ ಸಮಾಲೋಚನಾ ಸಮಾವೇಶ ಫೆ.5 ರಂದು ಕೋಟೇಚಾ ಹಾಲ್ ನಲ್ಲಿ ನಡೆಯಲಿದೆ.

ಪ್ರಸನ್ನ ಮಾರ್ತ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಕೃಷ್ಣ ಉಪಾಧ್ಯಾಯ ಅವರು ಸಂಘಟನಾ ಸಂದೇಶ ನೀಡಲಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಉಪಸ್ಥಿತಿ ವಹಿಸಲಿದ್ದಾರೆ.


ಲೋಕಸಭಾ ಚುನಾವಣೆ ಹಿನ್ನೆಲೆ ಪುತ್ತಿಲ ಪರಿವಾರದ ಈ ಸಮಾಲೋಚನಾ ಸಮಾವೇಶ ಭಾರೀ ಮಹತ್ವ ಪಡೆದಿದ್ದು, ಕಾರ್ಯಕರ್ತರ ಬಳಿ ಅವರ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.


ಬಿಜೆಪಿ ಸೇರ್ಪಡೆಯ ವಿಚಾರ ಬಹಳಷ್ಟು ಸದ್ದು ಮಾಡುತ್ತಿದ್ದು, ಈ ವಿಚಾರದಲ್ಲಿ ಅಭಿಪ್ರಾಯ ಸಂಗ್ರಹ ಸಮಾಲೋಚನೆ ನಡೆಯುವ ಸಾಧ್ಯತೆಯಿದೆ.

ಟೊಮೆಟೊ ಮಾರಾಟ ಮಾಡಿ 45 ದಿನಗಳಲ್ಲಿ 4 ಕೋಟಿ ರೂ.ಗಳಿಸಿದ ಆಂಧ್ರದ ರೈತ

Posted by Vidyamaana on 2023-07-30 11:38:24 |

Share: | | | | |


ಟೊಮೆಟೊ ಮಾರಾಟ ಮಾಡಿ 45 ದಿನಗಳಲ್ಲಿ 4 ಕೋಟಿ ರೂ.ಗಳಿಸಿದ ಆಂಧ್ರದ ರೈತ

ಅಮರಾವತಿ: ಟೊಮೆಟೊಗಳ ಬೆಲೆ ಗಗನಕ್ಕೇರುತ್ತಿರುವ ಮಧ್ಯೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತ ದಂಪತಿ 40,000 ಪೆಟ್ಟಿಗೆಗಳ ಟೊಮೆಟೊಗಳನ್ನು ಮಾರಾಟ ಮಾಡಿ 45 ದಿನಗಳ ಅವಧಿಯಲ್ಲಿ 4 ಕೋಟಿ ರೂ. ಗಳಿಸಿದ್ದಾರೆ.


ಟೊಮೆಟೊ ರೈತ ಚಂದ್ರಮೌಳಿ, 22 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು, ಎಪ್ರಿಲ್ ಮೊದಲ ವಾರದಲ್ಲಿ ಅಪರೂಪದ ವೈವಿಧ್ಯಮಯ ಟೊಮೆಟೊ ಬಿತ್ತನೆ ಮಾಡಿದರು. ಇಳುವರಿಯನ್ನು ವೇಗವಾಗಿ ಪಡೆಯಲು ಅವರು ಹಸಿಗೊಬ್ಬರ ಹಾಗೂ ಸೂಕ್ಷ್ಮ ನೀರಾವರಿಯಂತಹ ಸುಧಾರಿತ ತಂತ್ರಗಳನ್ನು ಜಾರಿಗೆ ತಂದರು. ಜೂನ್ ಅಂತ್ಯದ ವೇಳೆಗೆ ಟೊಮೆಟೊ ಇಳುವರಿಯನ್ನು ಪಡೆದಾಗ ಅವರು ತಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾದರು.ಅವರು ತಮ್ಮ ಉತ್ಪನ್ನಗಳನ್ನು ಕರ್ನಾಟಕದ ಕೋಲಾರ ಮಾರುಕಟ್ಟೆಯಲ್ಲಿ ಮಾರಿದ್ದರು, ಅದು ಅವರ ಊರಿಗೆ ಹತ್ತಿರದಲ್ಲಿದೆ. ಮಾರುಕಟ್ಟೆಯಲ್ಲಿ ಕಳೆದ 45 ದಿನಗಳಲ್ಲಿ 40,000 ಪೆಟ್ಟಿಗೆಗಳ ಟೊಮೆಟೊ ಮಾರಾಟ ಮಾಡಿದರು.


ಟೊಮೆಟೊ ಬೆಲೆ ಏರಿಕೆಯಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಚಂದ್ರಮೌಳಿ, ಟೊಮೆಟೊ ಮಾರಾಟದಿಂದ ನಾನು ಈ ತನಕ 4 ಕೋಟಿ ರೂ.ಗಳಿಸಿದ್ದೇನೆ. 22 ಎಕರೆ ಭೂಮಿಯಲ್ಲಿ ಬೆಳೆ ತೆಗೆಯಲು ಒಟ್ಟು 1 ಕೋ.ರೂ. ಖರ್ಚು ಮಾಡಿದ್ದೇನೆ. ಇದರಲ್ಲಿ ಕಮಿಶನ್ ಹಾಗೂ ಸಾರಿಗೆ ವೆಚ್ಚವೂ ಸೇರಿದೆ. ಹೀಗಾಗಿ ನನಗೆ 3 ಕೋ.ರೂ. ಲಾಭವಾಗಿದೆ"ಎಂದು ಹೇಳಿದ್ದಾರೆ.

ಪುತ್ತೂರು : ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜುಲೈ 04) ವಿದ್ಯುತ್ ನಿಲುಗಡೆ!!!

Posted by Vidyamaana on 2023-07-03 23:42:26 |

Share: | | | | |


ಪುತ್ತೂರು : ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜುಲೈ 04) ವಿದ್ಯುತ್ ನಿಲುಗಡೆ!!!

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 33/11 ಕೆವಿ ಕ್ಯಾಂಪ್ಟ್ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮುಕ್ರಂಪಾಡಿ, ಮುಕ್ವೆ ಮತ್ತು ಮುಂಡೂರು ಫೀಡರ್‌ನಲ್ಲಿ ಜು.4ರಂದು ಪೂರ್ವಾಹ್ನ ಗಂಟೆ 10ರಿಂದ ಅಪರಾಹ್ನ 4ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 33/11ಕೆವಿ ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಕೂರ್ನಡ್ಕ, ಕೆಮ್ಮಿಂಜೆ, ಮರೀಲ್, ಮುಕ್ರಂಪಾಡಿ, ಮೊಟ್ಟೆತ್ತಡ್ಕ, ಮುಂಡೂರು ಮತ್ತು ಸಂಪ್ಯ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಎಡಮಂಗಳ : ಸುಬ್ರಹ್ಮಣ್ಯ ಕಾಲೇಜು ವಿದ್ಯಾರ್ಥಿನಿ ತೃಪ್ತಿ ಅನಾರೋಗ್ಯದಿಂದ ನಿಧನ

Posted by Vidyamaana on 2024-01-12 15:56:07 |

Share: | | | | |


ಎಡಮಂಗಳ : ಸುಬ್ರಹ್ಮಣ್ಯ ಕಾಲೇಜು ವಿದ್ಯಾರ್ಥಿನಿ ತೃಪ್ತಿ ಅನಾರೋಗ್ಯದಿಂದ ನಿಧನ

ಕಡಬ : ಎಡಮಂಗಲ ಗ್ರಾಮದ ಗಂಡಿತಡ್ಕ ರಾಮಚಂದ್ರ ನಾಯ್ಕರ ಮಗಳು, ಸುಬ್ರಹ್ಮಣ್ಯ ಪದವಿ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ತೃಪ್ತಿ ತೀವ್ರ ಅನಾರೋಗ್ಯದಿಂದ ಜ 11ರಂದು ರಾತ್ರಿ ನಿಧಾನರಾದರು 


ಎರಡು ದಿನಗಳಿಂದ ಅನಾರೋಗ್ಯದಿಂದಿದ್ದ ತೃಪ್ತಿಯನ್ನು ನಿನ್ನೆ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಆಕೆಯನ್ನು ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ನಿನ್ನೆ ರಾತ್ರಿಯೇ ಕೊನೆಯುಸಿರೆಳೆದಳು.

ಪಾರ್ಥಿವ ಶರೀರವನ್ನು ಎಡಮಂಗಲದ ಮನೆಗೆ ತಂದು ಇಂದು ಜ 12 ರಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೃತರು ತಂದೆ ರಾಮಚಂದ್ರ ತಾಯಿ ಆಶಾ ಮತ್ತು ಸಹೋದರಿಯನ್ನು ಅಗಲಿದ್ದಾರೆ

ಮಂಗಳೂರು ವ್ಯಕ್ತಿಯ ಮೇಲೆ ತಲವಾರು ದಾಳಿ:ಚರಣ್ ರಾಜ್ ಸಹಿತ ಮೂವರ ಬಂಧನ

Posted by Vidyamaana on 2023-08-22 10:50:41 |

Share: | | | | |


ಮಂಗಳೂರು  ವ್ಯಕ್ತಿಯ ಮೇಲೆ ತಲವಾರು ದಾಳಿ:ಚರಣ್ ರಾಜ್ ಸಹಿತ ಮೂವರ ಬಂಧನ

ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನ್ಯ ಕೋಮಿನ ವ್ಯಕ್ತಿಯ ಮೇಲೆ ತಲವಾರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಗಳಲ್ಲಿ ಮೂವರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚರಣ್ ರಾಜ್ ( 23), ಸುಮಂತ್ ಬರ್ಮನ್ (24), ಅವಿನಾಶ (24) ಬಂಧಿತ ಆರೋಪಿಗಳು.

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್.ವಿ.ಶೆಟ್ಟಿ ಕಾಲೇಜು ರೋಡ್ ಬಳಿ ವ್ಯಕ್ತಿಯೊಬ್ಬರು ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಉರುಂದಾಡಿ ಗುಡ್ಡೆಯ ಚರಣ್, ಸುಮಂತ್ ಬರ್ಮನ್ ಹಾಗೂ ಕೋಡಿಕಲ್ ನ ಅವಿನಾಶ್ ಎಂಬವರು ಸ್ಕೂಟಿಯಲ್ಲಿ ಬಂದು ಅಡ್ಡಹಾಕಿ ತಡೆದು ತಲವಾರು ಬಿಸೀದ್ದಾರೆ. ಈ ವೇಳೆ ವ್ಯಕ್ತಿಯು ತಪ್ಪಿಸಿಕೊಂಡಿದ್ದಾರೆ. ಆದರೆ ಮುಖಕ್ಕೆ ಗಾಯವಾಗಿದೆ.


ಇನ್ನು ಕಾವೂರು ಪೊಲೀಸರು ಕಾರ್ಯಪ್ರವತ್ತರಾಗಿ ಕೇವಲ 24 ಗಂಟೆಗಳಲ್ಲಿ ತಲವಾರು ಸಮೇತ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Recent News


Leave a Comment: