ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಪುತ್ತೂರು: ಹಿಂದೂ ಸಂಘಟನೆಯ ನಾಲ್ವರು ಕಾರ್ಯಕರ್ತರ ಗಡಿಪಾರು

Posted by Vidyamaana on 2023-05-08 17:31:02 |

Share: | | | | |


ಪುತ್ತೂರು: ಹಿಂದೂ ಸಂಘಟನೆಯ ನಾಲ್ವರು ಕಾರ್ಯಕರ್ತರ ಗಡಿಪಾರು

ಪುತ್ತೂರು: ಕ್ರಿಮಿನಲ್ ಹಿನ್ನೆಲೆಯುಳ್ಳ ನಾಲ್ಕು ಮಂದಿಯನ್ನು ಪುತ್ತೂರಿನಿಂದ ಗಡಿಪಾರು ಮಾಡಲಾಗಿದೆ.ಹಿಂದೂ ಸಂಘಟನೆ ಕಾರ್ಯಕರ್ತರಾಗಿರುವ ಬನ್ನೂರು ಮೂಲದ ಪ್ರಜ್ವಲ್, ಪ್ರತಾಪ್, ಜಗ್ಗ ಯಾನೆ ಅಚ್ಚು, ಅವಿನಾಶ್ ಅವರು ಗಡಿಪಾರುಆಗಿದ್ದಾರೆ.ಇವರು ಚುನಾವಣೆಯ ಸಂದರ್ಭ ಶಾಂತಿ ಭಂಗ ಮಾಡಬಹುದೆಂಬ ನಿಟ್ಟಿನಲ್ಲಿ ನಗರ ಠಾಣೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

BREAKING: ಕನ್ನಡದ ಪವರ್‌ ಟಿವಿ ಗೆ ಬಿಗ್ ರಿಲೀಫ್: ಸುಪ್ರೀಂ ಕೋರ್ಟ್ ನಿಂದ ಪ್ರಸಾರ ಸ್ಥಗಿತ ಆದೇಶಕ್ಕೆ ತಡೆ

Posted by Vidyamaana on 2024-07-12 16:53:27 |

Share: | | | | |


BREAKING: ಕನ್ನಡದ ಪವರ್‌ ಟಿವಿ ಗೆ ಬಿಗ್ ರಿಲೀಫ್: ಸುಪ್ರೀಂ ಕೋರ್ಟ್ ನಿಂದ ಪ್ರಸಾರ ಸ್ಥಗಿತ ಆದೇಶಕ್ಕೆ ತಡೆ

ಬೆಂಗಳೂರು : ಕರ್ನಾಟಕ ಹೈಕೋರ್ಟ್ ನಿಂದ ಕನ್ನಡದ ಪವರ್ ಟಿವಿ ಪ್ರಸಾರ ಸ್ಥಗಿತಕ್ಕೆ ಆದೇಶಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಪವರ್ ಟಿವಿ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್ ನಿಂದ ಹೈಕೋರ್ಟ್ ನೀಡಿದ್ದಂತ ಪ್ರಸಾರ ಸ್ಥಗಿತದ ಆದೇಶಕ್ಕೆ ತಡೆ ನೀಡಿ, ಬಿಗ್ ರಿಲೀಫ್ ನೀಡಿದೆ

ಹಿಂದೆ ಪವರ್ ಟೀವಿ ಮೇಲೆ ಹೈಕೋರ್ಟ್ ಚಾಟಿ ಬೀಸಿತ್ತು. ಲೈಸೆನ್ಸ್ ರಿನಿವಲ್ ಮಾಡದ ಗಂಭೀರ ಆರೋಪದ ಹಿನ್ನಲೆಯಲ್ಲಿ ಪವರ್‌ ಟಿ ವಿ ಕಾರ್ಯ ಪ್ರಸಾರ ಚಟುವಟಿಕೆ ಸ್ಥಗಿತಕ್ಕೆ ಹೈಕೋರ್ಟ್‌ ಆದೇಶ ಮಾಡಿತ್ತು.

ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯಿದೆ ಉಲ್ಲಂಘನೆ ಮಾಡಲಾಗಿದೆ. ತಕ್ಷಣದಿಂದಲೇ ಚಾನೆಲ್‌ನಲ್ಲಿ ಸುದ್ದಿಗಳು ಸೇರಿ ಯಾವುದೇ ಪ್ರಸಾರ ಮಾಡಬಾರದು ಅಂತ ಹೈಕೋರ್ಟ್ ನ್ಯಾಯಮೂರ್ತಿ. ಎಸ್‌ ಆರ್‌ ಕೃಷ್ಣಕುಮಾರ್‌ ರ ಏಕಸದಸ್ಯ ಪೀಠ ಆದೇಶ ಮಾಡಿದ್ದರು.

ಜೆಡಿಎಸ್‌ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌ ಎಂ ರಮೇಶ್‌ ಗೌಡರ ಪತ್ನಿ ಡಾ.ಎ ರಮ್ಯಾ ರಮೇಶ್‌  ಹಿರಿಯ ಐಪಿಎಸ್‌ ಅಧಿಕಾರಿ ಬಿ ಆರ್‌ ರವಿಕಾಂತೇಗೌಡ ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಸಿದ್ದರು. ಅರ್ಜಿದಾರರ ಪರ ಪ್ರಭುಲಿಂಗ ನಾವದಗಿ, ಸಂದೇಶ್‌ ಚೌಟ ವಾದಿಸಿದ್ದರು.

ಹಿಂದು ಕಾರ್ಯಕರ್ತರ ಮೇಲೆ ಖಾಕಿ ದರ್ಪ

Posted by Vidyamaana on 2023-05-23 11:53:32 |

Share: | | | | |


ಹಿಂದು ಕಾರ್ಯಕರ್ತರ ಮೇಲೆ ಖಾಕಿ ದರ್ಪ

ಪುತ್ತೂರು : ಪೊಲೀಸ್ ದೌರ್ಜನ್ಯ ಸಂದರ್ಭ ಕಿವಿಯ ತಮಟೆಗೆ ತೀವ್ರ ಹಾನಿಯಾಗಿದೆ ಎಂಬ ವರದಿ ಹೊರಗಿದ್ದಿದೆ.  ಈ ಬಗ್ಗೆ ಸ್ಕ್ಯಾನಿಂಗ್ ಪೋಟೋಗಳು ವೈರಲ್ ಆಗುತ್ತಿವೆ. ವರದಿ ಹೊರ ಬರುತಿದ್ದಂತೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಎಸ್ಪಿಯನ್ನು ಭೇಟಿಯಾಗಿದ್ದಾರೆ. 

ಬಿಜೆಪಿ ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ ಬ್ಯಾನರ್ ಹಾಕಿದ್ದಾರೆ ಎಂದು ಒಟ್ಟು 11 ಜನರನ್ನು ಬಂಧಿಸಿ ಪೊಲೀಸರು ದೌರ್ಜನ್ಯ ನಡೆಸಿದರು ಎಂದು ವ್ಯಾಪಕ ಪ್ರಚಾರ ಪಡೆದುಕೊಂಡ ಪ್ರಕರಣ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಲಕ್ಷಣ ಕಾಣುತ್ತಿದೆ.  

ಡಿವೈಎಸ್ಪಿ ಗೆ ಒತ್ತಡ ಹಾಕಿಸಿ ಬಿಜೆಪಿಯ ಕಾರ್ಯಕರ್ತರ ಮೇಲೆಯೇ ಡಿವೈಎಸ್ಪಿ ಕಚೇರಿಯಲ್ಲೇ ತೀವ್ರ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತು. 

ಮೇ.15 ರ  ಮಧ್ಯರಾತ್ರಿ  ಅರುಣ್ ಪುತ್ತಿಲ ಡಿವೈಎಸ್ಪಿ ಕಚೇರಿಗೆ ಹೋಗಿ ಹಲ್ಲೆಗೊಳಗಾದವರ ಮುಚ್ಚಲಿಕೆ ಬರೆದು ಬಿಡುಗಡೆಗೊಳಿಸಿಕೊಂಡು ಬಂದಿದ್ದರು. ನಂತರ ಹಲ್ಲೆಗೊಳಗಾದವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಮತ್ತೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. 


ಘಟನೆ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಪುತ್ತೂರಿನ ಡಿವೈಎಸ್ಪಿ, ಸಂಪ್ಯ ಎಸ್ಐ , ಪುತ್ತೂರಿನ ಪೊಲೀಸ್ ಕಾನ್ಸ್ಟೆಬಲ್ ರ ಮೇಲೆ ಪ್ರಕರಣ ದಾಖಲು ನಡೆಸಿ,  ಎಸ್ಐ ಮತ್ತು ಪಿಸಿಯನ್ನು ಅಮಾನತು ಮಾಡಿ, ಡಿವೈಎಸ್ಪಿಯನ್ನು ರಜೆಯಲ್ಲಿ ಕಳುಹಿಸಲಾಗಿದೆ.  

ತೀವ್ರ ಗಾಯಗೊಂಡ ಅವಿನಾಶ್ ರ ಕಿವಿ ನೋವು ಕಡಿಮೆಯಾಗದ ಕಾರಣ ಕಿವಿಯ ಸ್ಕ್ಯಾನಿಂಗ್ ಮಾಡಿದಾಗ ತಮಟೆ ಹರಿದ ಬಗ್ಗೆ ವೈದ್ಯಕೀಯ ವರದಿಯಲ್ಲಿ ಹೊರ ಬಂದಿದೆ. ಕೂಡಲೇ ದಕ್ಷಿಣ ಕನ್ನಡ ಎಸ್ಪಿ ವಿಕ್ರಂ ಅಮಾಟೆಯನ್ನು ಭೇಟಿಯಾದ ಅರುಣ್ ಕುಮಾರ್ ಪುತ್ತಿಲ ಎರಡು ದಿನದಲ್ಲಿ ಡಿವೈಎಸ್ಪಿಯನ್ನು ಅಮಾನತು ಮಾಡಬೇಕು ಮತ್ತು ಸಂತ್ರಸ್ತರಿಗೆ 5 ಲಕ್ಷದಂತೆ ಪರಿಹಾರ ನೀಡಬೇಕು  ಎಂದು ಒತ್ತಾಯಿಸಿದರು. ಕ್ರಮ ಆಗದಿದ್ದರೆ  ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಮೆಡಿಕಲ್‌ಗೆ ಹೋಗುವಾಗ ಲಾಟರಿ ಖರೀದಿ; ನಾಲ್ಕೇ ಗಂಟೆಯಲ್ಲಿ 2.50 ಕೋಟಿ ಗೆದ್ದ ವೃದ್ಧ!

Posted by Vidyamaana on 2023-11-08 10:36:27 |

Share: | | | | |


ಮೆಡಿಕಲ್‌ಗೆ ಹೋಗುವಾಗ ಲಾಟರಿ ಖರೀದಿ; ನಾಲ್ಕೇ ಗಂಟೆಯಲ್ಲಿ 2.50 ಕೋಟಿ ಗೆದ್ದ ವೃದ್ಧ!

ಚಂಡಿಗಢ: ಮದ್ದು ತರಲೆಂದು ಮೆಡಿಕಲ್‌ ಶಾಪ್‌ ಗೆ ಹೋದ ವೃದ್ಧನೊಬ್ಬ ಅದೇ ದಾರಿಯಲ್ಲಿದ್ದ ಲಾಟರಿ ಟಿಕೆಟ್‌ ನ್ನು ಖರೀದಿಸಿ 2.50 ಕೋಟಿ ರೂ.ವಿನ ಬಂಪರ್‌ ಗೆದ್ದಿದ್ದಾರೆ.



ಪಂಜಾಬ್‌ನ ಹೋಶಿಯಾರ್‌ಪುರದ ಮೂಲದ ಶೀತಲ್ ಸಿಂಗ್ ಲಾಟರಿ ಗೆದ್ದಿರುವ ವೃದ್ಧ. ಮಹಿಲ್ಪುರ ನಿವಾಸಿಯಾಗಿರುವ ಶೀತಲ್ ಸಿಂಗ್ ಇತ್ತೀಚೆಗೆ ಕುಟುಂಬದ ಸದಸ್ಯರೊಬ್ಬರಿಗೆ ಮದ್ದು ತರಲು ಮೆಡಿಕಲ್‌ ಶಾಪ್‌ ಗೆ ತೆರಳಿದ್ದರು. ಇದೇ ವೇಳೆ ಮಾರ್ಗದಲ್ಲಿ ದೀಪಾವಳಿ ಬಂಪರ್‌ ಲಾಟರಿ ಟಿಕೆಟ್‌ ನ್ನು ಶೀತಲ್‌ ಖರೀದಿಸಿದ್ದಾರೆ.


ಲಾಟರಿ ಖರೀದಿಸಿ ಮನೆಗೆ ಬಂದ ಸುಮಾರು ನಾಲ್ಕು ಗಂಟೆಗಳ ನಂತರ ಲಾಟರಿ ಕುರಿತು ಕರೆ ಬಂದಿದ್ದು, ಶೀತಲ್‌ ಅವರು 2.5 ಕೋಟಿ ಗೆದ್ದಿರುವುದಾಗಿ ಲಾಟರಿ ಅವರು ಹೇಳಿದ್ದಾರೆ.ಲಾಟರಿಯಲ್ಲಿ 2.50 ಕೋಟಿ ಗೆದ್ದಿರುವ ಅವರು, ಲಾಟರಿಯಲ್ಲಿ ಗೆದ್ದ ಮೊತ್ತವನ್ನು ಹೇಗೆ ಬಳಸಬೇಕೆಂದು ಅವರು ಮತ್ತು ಅವರ ಕುಟುಂಬ ನಿರ್ಧರಿಸುತ್ತದೆ ಎಂದು ಸಿಂಗ್ ಹೇಳಿದ್ದಾರೆ.



ರೈತನಾಗಿರುವ ಶೀತಲ್‌ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಿಬ್ಬರೂ ಮದುವೆಯಾಗಿದ್ದಾರೆ.


ಲಾಟರಿ ಸ್ಟಾಲ್‌ನ ಮಾಲೀಕರು ಕಳೆದ 15 ವರ್ಷಗಳಿಂದ ಇದೇ ಉದ್ಯೋಗದಲ್ಲಿದ್ದು, ಮೂರನೇ ಬಾರಿಗೆ ಗ್ರಾಹಕರೊಬ್ಬರಿಗೆ ಕೋಟಿಗಟ್ಟಲೆ ಹಣದ ಲಾಟರಿ ಬಂದಿದೆ ಎಂದು ಅವರು ಹೇಳಿದ್ದಾರೆ.

ಅಪರೂಪದ ಘಟನೆಗಳನ್ನ ಮುಂದಿಟ್ಟು ಮಹಿಳಾ ಶಿಕ್ಷಣವನ್ನು ಕೀಳಂದಾಜಿಸುವುದು ಸಲ್ಲ; ಎಸ್ ಬಿ ದಾರಿಮಿ

Posted by Vidyamaana on 2023-11-18 22:08:30 |

Share: | | | | |


ಅಪರೂಪದ ಘಟನೆಗಳನ್ನ ಮುಂದಿಟ್ಟು ಮಹಿಳಾ ಶಿಕ್ಷಣವನ್ನು ಕೀಳಂದಾಜಿಸುವುದು ಸಲ್ಲ; ಎಸ್ ಬಿ ದಾರಿಮಿ

ಉಪ್ಪಿನಂಗಡಿ : ಯಾವುದೇ ಸಮಾಜ ಪ್ರಗತಿ ಪಥದಲ್ಲಿ ಸಾಗಬೇಕಿದ್ದರೆ ಕಾಲದ ಬೇಡಿಕೆಯನುಸಾರಉತ್ತಮ ದರ್ಜೆಯ ಶಿಕ್ಷಣದ ಅಗತ್ಯವಿದೆ. ನಮ್ಮ ಗಂಡು ಮಕ್ಕಳಂತೆ ಹೆಣ್ಮಕ್ಕಳಿಗೂ ಶಿಕ್ಷಣ ವನ್ನು ನೀಡಿ ಅವರನ್ನು ಸುಶಿಕ್ಷಿತರನ್ನಾಗಿ ರೂಪಿಸುವುದರೆ ಮಾತ್ರ ಮುಂದಿನ ಪೀಳಿಗೆ ಇಲ್ಲಿ ಸ್ವಾಭಿನಾನದಿಂದ ಬದುಕಲು ಸಾಧ್ಯ. ಆದರೆ ಯಾವುದೋ ಅಪರೂಪದ ಕಹಿ ಘಟನೆಗಳನ್ನು ಮುಂದಿಟ್ಟು ಮಹಿಳಾ ಶಿಕ್ಷಣ ವನ್ನು ಕೀಳಂದಾಜಿಸುವುದು,ಮತ್ತು ಅಡ್ಡಿ ಪಡಿಸುವುದು ಸಮಂಜಸವಲ್ಲ ಎಂದು ಕೆಮ್ಮಾರ ಶಂಸುಲ್ ಉಲಮಾ ಮಹಿಳಾ ಕಾಲೇಜ್  ಅಧ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ ಹೇಳಿದರು.

    ಅವರು ಕೆಮ್ಮಾರ ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜ್ ನಲ್ಲಿ ಇತ್ತೀಚೆಗೆ ಪುತ್ತೂರು ಮೌಂಟನ್ ವ್ಯೂ ಕಾಲೇಜ್ ಸಭಾಂಗಣದಲ್ಲಿ ಮಹಿಳೆಯರಿಗಾಗಿ  ನಡೆದ ಸಮಸ್ತ ದ ಫಾಳಿಲಾ- ಫಳೀಲಾ ಕಾಲೇಜ್ ಗಳ ರಾಜ್ಯ ಮಟ್ಟದ ಹಿಯಾ ಫಿಯೆಸ್ಟ  ಸ್ಪರ್ಧಾ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನ ಪಡೆದ ಕೆಮ್ಮಾರ ಶಂಸುಲ್ ಉಲಮಾ ಮಹಿಳಾ ಕಾಲೇಜ್ ವಿದ್ಯಾರ್ಥಿನಿಯರನ್ನು ಆಡಳಿತ ಸಮಿತಿ ವತಿಯಿಂದ ಅಭಿನಂದಿಸಿ ಮಾತನಾಡುತ್ತಿದ್ದರು. 

    ಸುಸಂಸ್ಕೃತ ಸಮಾಜ ರೂಪಿಸುವಲ್ಲಿ ಧಾರ್ಮಿಕ ಶ್ರದ್ಧೆ, ಭಕ್ತಿಯೂ ಮುಖ್ಯವಾಗಿದ್ದು, ಆದ್ದರಿಂದ ಮಕ್ಕಳಿಗೆ ಲೌಕಿಕ ಶಿಕ್ಷಣದ ಜೊತೆಗೆ ಸಾಕಷ್ಟು ಮೌಲ್ಯಯುತ ಧಾರ್ಮಿಕ ಶಿಕ್ಷಣವನ್ನೂ ಸಮನ್ವಯಿಸಿ ನೀಡುವುದು ಅಗತ್ಯ, ಈ ನಿಟ್ಟಿನಲ್ಲಿ ಉಲಮಾ ಸಂಘಟನೆಯಾದ ಸಮಸ್ತದ ಅಧೀನದಲ್ಲಿ ಮಹಿಳೆಯರಿಗಾಗಿ ಪಿಯು ಜೊತೆಗೆ  ಫಾಳಿಲಾ - ಫಳೀಲಾ ಸಮನ್ವಯ ಶಿಕ್ಷಣ ವ್ಯವಸ್ಥೆ ಹಾಗೂ ಪ್ರತಿಭೆಗಳನ್ನು ಪೋಷಿಸುವ ಸಲುವಾಗಿ ಇತ್ತಿಚೇಗೆ ರಾಜ್ಯ ಮಟ್ಟದಲ್ಲಿ ಏರ್ಪಡಿಸಲಾದ ಹಿಯಾ ಫಿಯೆಸ್ಟ ಕಾರ್ಯಕ್ರಮಗಳು ಅಭಿನಂದಾರ್ಹವಾಗಿದೆ ಎಂದು ಅವರು ಹೇಳಿದರು.

     ಸಮಾರಂಭದಲ್ಲಿ ಸಂಸ್ಥೆಯ ಉಸ್ತಾದರಾದ ಅಬ್ದುರ್ರಹ್ಮಾನ್ ಫೈಝಿ ಪೆರಿಯಡ್ಕ , ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ನ ಉಸ್ತಾದ್ ಕೆ.ಎಂ.ಎ.ಕೊಡುಂಗಾಯಿ ಮೊದಲಾದವರು ಮಾತನಾಡಿದರು.

  ಕಾಲೇಜ್ ನ ಉಪನ್ಯಾಸಕಿಯರ ನೇತೃತ್ವದಲ್ಲಿ ವಿವಿಧ ಪ್ರತಿಭಾ ಕಾರ್ಯಕ್ರಮ ಮತ್ತು ಸ್ಮರಣಿಕೆ ವಿತರಣೆ ನಡೆಯಿತು.

ಕಡಬ : ಹೊಳೆಗೆ ಬಿದ್ದು ಕೃಷಿಕ ಕೃಷ್ಣಪ್ಪ ಮೃತ್ಯು

Posted by Vidyamaana on 2023-07-10 16:28:58 |

Share: | | | | |


ಕಡಬ : ಹೊಳೆಗೆ ಬಿದ್ದು ಕೃಷಿಕ ಕೃಷ್ಣಪ್ಪ ಮೃತ್ಯು

ಕಡಬ : ಹೊಳೆನೀರಿಗೆ ಬಿದ್ದು ಕೃಷಿಕ ಸಾವನ್ನಪ್ಪಿರುವ ಘಟನೆ ಕಡಬ ಸಮೀಪದ ಇಚ್ಚಂಪಾಡಿ ಗ್ರಾಮದಲ್ಲಿ ನಡೆದಿದೆ.ಇಚ್ಚಂಪಾಡಿ ಗ್ರಾಮದ ಕುಡಾಲ ನಿವಾಸಿ ಕೃಷ್ಣಪ್ಪ ಗೌಡ(ಕಿಟ್ಟಣ್ಣ) ಮೃತ ದುರ್ದೈವಿ.

ಜು.9ರಂದು ಮಧ್ಯಾಹ್ನ ಇಚ್ಚಂಪಾಡಿಯ ಕೊಕ್ಕೊ ಕಾಡಿನ ಹೊಳೆಬದಿಗೆ ಹೋದವರು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ಹೊಳೆಯಲ್ಲಿ ಹುಡುಕಾಟ ನಡೆಸಿದ್ದ ವೇಳೆ ಅವರ ಚಪ್ಪಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿ ತನಕ ಹೊಳೆ ಬದಿ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ದೊರೆತಿರಲಿಲ್ಲ.

ಜು.10ರಂದು ಬೆಳಿಗ್ಗೆ ಹೊಳೆಬದಿ ಮತ್ತೆ ಹುಡುಕಾಟ ನಡೆಸಿದಾಗ ಗುಂಡ್ಯಹೊಳೆ ಸೇರುವಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Recent News


Leave a Comment: