ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


Breaking: ಬಿಜೆಪಿಯಿಂದ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಆರು ವರ್ಷ ಉಚ್ಛಾಟನೆ

Posted by Vidyamaana on 2024-04-22 21:31:47 |

Share: | | | | |


Breaking: ಬಿಜೆಪಿಯಿಂದ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಆರು ವರ್ಷ ಉಚ್ಛಾಟನೆ

ಬೆಂಗಳೂರು; ಬಿಜೆಪಿಯಿಂದ ಮಾಜಿ ಸಚಿವ ಕೆ ಎಸ್ಈಶ್ವರಪ್ಪ ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಬಿಜೆಪಿ ಶಿಸ್ತು ಸಮಿತಿ ಆದೇಶ ಹೊರಡಿಸಿದೆ.

ಮಹಿಳೆಯರೇ ಬೆಳ್ಳಂಬೆಳಗ್ಗೆ ವಾಕಿಂಗ್ ಹೋಗೋ ಮುನ್ನ ಹುಷಾರ್: ಬಲವಂತವಾಗಿ ತಬ್ಬಿ ಚುಂಬಿಸಿದ ದುಷ್ಕರ್ಮಿ!

Posted by Vidyamaana on 2024-08-05 07:21:22 |

Share: | | | | |


ಮಹಿಳೆಯರೇ ಬೆಳ್ಳಂಬೆಳಗ್ಗೆ ವಾಕಿಂಗ್ ಹೋಗೋ ಮುನ್ನ ಹುಷಾರ್: ಬಲವಂತವಾಗಿ ತಬ್ಬಿ ಚುಂಬಿಸಿದ ದುಷ್ಕರ್ಮಿ!

ಬೆಂಗಳೂರು :- ಬೆಳ್ಳಂ ಬೆಳಗ್ಗೆ ವಾಕಿಂಗ್ ಎಂದು ರಸ್ತೆ ಬದಿ ನಿಂತಿದ್ದ ಮಹಿಳೆಯನ್ನ ವಿಕೃತ ಕಾಮಿ ಯೊಬ್ಬ ಬಲವಂತವಾಗಿ ತಬ್ಬಿ ಹಿಡಿದು ಚುಂಬಿಸಿದ್ದಾನೆ.ನಂತರ ಆಕೆ ತಪ್ಪಿಸಿಕೊಂಡು ಬಂದರೂ ಸಹ ಹಿಂದೆ ಬಂದು ಹಿಂಸೆ ನೀಡಿದ್ದಾನೆ.

ಮಂಗಳೂರು: ನೀರು ತುಂಬಿದ್ದ ಬಕೆಟ್ ಗೆ ಬಿದ್ದು 8 ತಿಂಗಳ ಮಗು ಮೃತ್ಯು

Posted by Vidyamaana on 2023-07-20 08:03:04 |

Share: | | | | |


ಮಂಗಳೂರು: ನೀರು ತುಂಬಿದ್ದ ಬಕೆಟ್ ಗೆ ಬಿದ್ದು 8 ತಿಂಗಳ ಮಗು ಮೃತ್ಯು

ಮಂಗಳೂರು: ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಒಂದು ವರ್ಷ 8 ತಿಂಗಳ ಮಗುವೊಂದು ಮೃತಪಟ್ಟ ಘಟನೆ ಕಾವೂರಿನಲ್ಲಿ ನಡೆದಿದೆ.


ಕಾವೂರು ಮಸೀದಿ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಫಿರೋಝ್ ಅನ್ಸಾರಿ ಎಂಬವರ ಪುತ್ರಿ ಆಯಿಶ ಮೃತ ಮಗು ಎಂದು ತಿಳಿದು ಬಂದಿದೆ.

ಜಾರ್ಖಂಡ್ ಮೂಲದವರಾದ ಫಿರೋಝ್

ಅನ್ಸಾರಿ ದಂಪತಿ ಕಾವೂರು ಮಸೀದಿಯ ಬಳಿ

ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬುಧವಾರ

ಸಂಜೆ ಮಗು ಆಯಿಶ ಮನೆಯಲ್ಲಿ ಆಟವಾಡುತ್ತಿದ್ದ

ವೇಳೆ ಆಕಸ್ಮಿಕವಾಗಿ ನೀರು ತುಂಬಿದ್ದ ಬಕೆಟ್ ಗೆ

ಬಿದ್ದು ಮೃತಪಟ್ಟಿದೆ ಎಂದು ತಿಳಿದು ಬಂದಿದೆ

ಈಲ್ ಬೇಟೆಗೆ ಹೋಗಿ ತಾನೇ ಬಲಿಯಾದ ಮೊಸಳೆ! 860 ವೋಲ್ಟ್ ವಿದ್ಯುತ್ ಶಾಕ್, ಭಯಾನಕ ವಿಡಿಯೋ ವೈರಲ್

Posted by Vidyamaana on 2024-08-25 07:19:02 |

Share: | | | | |


ಈಲ್ ಬೇಟೆಗೆ ಹೋಗಿ ತಾನೇ ಬಲಿಯಾದ ಮೊಸಳೆ! 860 ವೋಲ್ಟ್ ವಿದ್ಯುತ್ ಶಾಕ್, ಭಯಾನಕ ವಿಡಿಯೋ ವೈರಲ್

ನವದೆಹಲಿ: ಮೊಸಳೆ ಎಂಬ ಪದ ಕೇಳಿದರೆ ಸಾಕು ಎಲ್ಲರ ಕೈ-ಕಾಲು ನಡುಗುತ್ತದೆ. ಬಹುಶಃ ಆಸ್ಟ್ರೇಲಿಯನ್ ಝೂಕೀಪರ್ ದಿವಂಗತ ಸ್ಟೀವ್​ ಇರ್ವಿನ್​ ಮಾತ್ರ ಮೊಸಳೆ ಪದ ಕೇಳಿದರೆ ಎಲ್ಲಿಲ್ಲದ ಉತ್ಸಾಹ ಬರುತ್ತಿತ್ತು. ಮೊಸಳೆಯ ಹರಿತವಾದ ಹಲ್ಲು, ದೊಡ್ಡ ದವಡೆ ಮತ್ತು ತೀವ್ರ ನೋಟ ಸಾಕು ಯಾವುದೇ ವ್ಯಕ್ತಿ ಭಯ ಬೀಳಲು, ಅಂತಹುದರಲ್ಲಿ ಮೊಸಳೆ ಏನಾದರೂ ತುಂಬಾ ಹತ್ತಿರಕ್ಕೆ ಬಂದಲ್ಲಿ ಆ ವ್ಯಕ್ತಿ ಭಯದಲೇ ಹೆಪ್ಪುಗಟ್ಟಿಬಿಡುತ್ತಾನೆ.

ಬೇಟೆಗೆ ಇಳಿದರೆ ಸಾಕು ಮೊಸಳೆ ಯಾವುದನ್ನು ಬಿಡುವುದಿಲ್ಲ. ಅದು ದೊಡ್ಡ ಪ್ರಾಣಿಯಾದರೂ ಸರಿ ನುಂಗಿ ನೀರು ಕುಡಿಯುತ್ತದೆ. ನೀರಿನಲ್ಲಿ ಸಿಗುವ ವಿವಿಧ ಜಾತಿಯ ಮೀನುಗಳು ಮೊಸಳೆಗೆ ಸುಲಭ ಆಹಾರವಾಗುತ್ತವೆ. ತುಂಬಾ ಅಪಾಯಕಾರಿ ಎನಿಸಿಕೊಳ್ಳುವ ಮೊಸಳೆಯೇ ಕೆಲವೊಮ್ಮೆ ಬೇಟೆಯಾಗಿಬಿಡುತ್ತವೆ. ಇಂಥಾ ಎಷ್ಟೋ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಅದೇ ರೀತಿ ಇದೀಗ ಮೊಸಳೆ, ಮೀನನ್ನು ಬೇಟೆಯಾಡಲು ಹೋಗಿ ತಾನೇ ಬಲಿಯಾಗಿದೆ.


ನಿಮಗೆ ಈಲ್ಸ್​ ಮೀನಿನ ಬಗ್ಗೆ ಗೊತ್ತಿರಬಹುದು. ಮೀನು ಜಾತಿಗಳಲ್ಲಿ ಇದು ಅತ್ಯಂತ ಅಪಾಯಕಾರಿ ಮೀನು. ಈ ಈಲ್ಸ್​ ಜಾತಿಗಳಲ್ಲಿ ಎಲೆಕ್ಟ್ರಿಕ್​​ ಈಲ್ಸ್ ತುಂಬಾ ಡೇಂಜರ್​.​ ಏಕೆಂದರೆ ಇದು ವಿದ್ಯುತ್​ ಉತ್ಪಾದಿಸುತ್ತದೆ. ಬರೋಬ್ಬರಿ 860 ವೋಲ್ಟ್‌ಗಳವರೆಗೆ ವಿದ್ಯುತ್​ ಶಾಕ್​ ನೀಡುವ ಮೂಲಕ ತಮ್ಮ ಬೇಟೆಯನ್ನು ಸಾಯಿಸುತ್ತದೆ. ಅಲ್ಲದೆ, ತನಗೆ ಕಂಟಕ ಎದುರಾದಾಗಲೂ ಈ ಈಲ್ಸ್​ ತನ್ನ ರಕ್ಷಣೆಗೆಂದು ಈ ವಿದ್ಯುತ್​ ಪವರ್​ ಅನ್ನು ಬಳಸಿಕೊಳ್ಳುತ್ತದೆ.

ಲೋಕಸಭಾ ಚುನಾವಣೆ: ಪೂರ್ವಸಿದ್ದತಾ ಪರಿಶೀಲನೆ ನಡೆಸಿದ ಡಿಸಿ, ಪೊಲೀಸ್ ಕಮೀಷನರ್, ಎಸ್ಪಿ

Posted by Vidyamaana on 2024-03-13 17:46:21 |

Share: | | | | |


ಲೋಕಸಭಾ ಚುನಾವಣೆ: ಪೂರ್ವಸಿದ್ದತಾ ಪರಿಶೀಲನೆ ನಡೆಸಿದ ಡಿಸಿ, ಪೊಲೀಸ್ ಕಮೀಷನರ್, ಎಸ್ಪಿ

ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಇ.ವಿ.ಎಂ ಭದ್ರತಾ ಕೇಂದ್ರವಾದ ಸುರತ್ಕಲ್ ಎನ್.ಐ.ಟಿ.ಕೆ  ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೂರ್ವಸಿದ್ದತಾ ಪರಿಶೀಲನೆಯನ್ನು ಮಾ. 13ರಂದು ನಡೆಸಲಾಯಿತು.

 ಜಿಲ್ಲಾಧಿಕಾರಿ ಎಂ.ಪಿ ಮುಲೈ ಮುಹಿಲನ್,  ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್‌ ಅಗ್ರವಾಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್ ಪರಿಶೀಲನೆ ನಡೆಸಿದರು.

ನರಿಮೊಗರು: ಜುಲೈ 1ರಂದು ನೂತನ ಶಾಸಕರಿಗೆ ಅಭಿನಂದನೆ

Posted by Vidyamaana on 2023-06-30 15:51:57 |

Share: | | | | |


ನರಿಮೊಗರು: ಜುಲೈ 1ರಂದು ನೂತನ ಶಾಸಕರಿಗೆ ಅಭಿನಂದನೆ

ಪುತ್ತೂರು: ನರಿಮೊಗರು ವಲಯ ಕಾಂಗ್ರೆಸ್ ಆಶ್ರಯದಲ್ಲಿ ಅಭಿನಂದನಾ ಕಾರ್ಯಕ್ರಮ ಜುಲೈ 1ರಂದು ಪುರುಷರಕಟ್ಟೆ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಲಿದೆ.

ನೂತನ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಕುಮಾರ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರಂಭದಲ್ಲಿ ಸನ್ಮಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Recent News


Leave a Comment: