ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಸುದ್ದಿಗಳು News

Posted by vidyamaana on 2024-07-24 08:25:31 | Last Updated by Vidyamaana on 2024-07-24 08:25:31

Share: | | | | |


ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಪುತ್ತೂರು: ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು  ಲಾರಿ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ

ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ‌ರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

 Share: | | | | |


ತುಮಕೂರಿನಲ್ಲಿ ಭೀಕರವಾಗಿ ಹತ್ಯೆಯಾದ ದುರ್ದೈವಿಗಳ ಮನೆಗಳಿಗೆ ಇನಾಯತ್ ಅಲಿ ಭೇಟಿ

Posted by Vidyamaana on 2024-03-24 21:08:22 |

Share: | | | | |


ತುಮಕೂರಿನಲ್ಲಿ ಭೀಕರವಾಗಿ ಹತ್ಯೆಯಾದ ದುರ್ದೈವಿಗಳ ಮನೆಗಳಿಗೆ ಇನಾಯತ್ ಅಲಿ ಭೇಟಿ

ಬೆಳ್ತಂಗಡಿ: ಮಕೂರಿನಲ್ಲಿ ಭೀಕರ ಹತ್ಯೆಗೊಳಗಾದ ಬೆಳ್ತಂಗಡಿ ತಾಲೂಕಿನ ಇಸಾಕ್, ಶಾಹುಲ್ ಹಮೀದ್ ಹಾಗೂ ಇಮ್ತಿಯಾಝ್ ಸಿದ್ದೀಕ್ ನಿವಾಸಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಇನಾಯತ್ ಅಲಿ, ಘಟನೆಯ ಬಗ್ಗೆ ಮಾನ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಲ್ಲಿ ಹಾಗೂ ಗೃಹ ಸಚಿವರಲ್ಲಿ ಮಾತನಾಡಿದ್ದೇನೆ. ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಲ್ಲಿಯೂ ಮನವಿ ಮಾಡಿದ್ದೇನೆ. ಕುಟುಂಬಕ್ಕೆ ಆಸರೆಯಾಗಿದ್ದವರನ್ನು ಕಳೆದುಕೊಂಡು ತೀವ್ರ ಆಘಾತಕ್ಕೊಳಕ್ಕಾಗಿರುವ ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರವನ್ನು ಒದಗಿಸುವಂತೆಯೂ ಮುಖ್ಯಮಂತ್ರಿಗಳಲ್ಲಿ ಕೋರಿದ್ದೇನೆಂದು ಎಂದು ತಿಳಿಸಿದ್ದಾರೆ.

ಫೀಲ್ಡಿಗೆ ಹೋಗದೆ ಮನೆಯಲ್ಲೇ ಮಲಗಿದ ನಾಯಕ

Posted by Vidyamaana on 2023-05-14 12:22:12 |

Share: | | | | |


ಫೀಲ್ಡಿಗೆ ಹೋಗದೆ ಮನೆಯಲ್ಲೇ ಮಲಗಿದ ನಾಯಕ

ಪುತ್ತೂರು: ಚುನಾವಣಾ ಪ್ರಚಾರಕ್ಕೆಂದು ಪಕ್ಷದ ವತಿಯಿಂದ ಎಲ್ಲಾ ಸೌಲಭ್ಯವನ್ನು ಮಾಡಿಕೊಟ್ಟಿದ್ದು , ಸೌಲಭ್ಯವನ್ನೇ ಬಳಸಿಕೊಂಡಿದ್ದ ಪಕ್ಷವೊಂದರ ನಾಯಕನೋರ್ವ ಪ್ರಚಾರಕ್ಕೆ ತೆರಳದೆ ಮನೆಯಲ್ಲೇ ಮಲಗಿದ್ದರು ಎಂಬ ವಿಚಾರ ಬಹಿರಂಗವಾಗಿದ್ದು ಮತ ಎಣಿಕೆಯ ದಿನ ಈ ವಿಚಾರದ ಬಗ್ಗೆ ಕಾರ್ಯಕರ್ತರೊಳಗೆ ಭಾರೀ ಚರ್ಚೆಯಾಗಿದೆ.

ನಾನು ಪ್ರಚಾರಕ್ಕೆ ತೆರಳಬೇಕಾದರೆ ನನಗೆ ಕಾರು ಕೊಡಬೇಕು, ಕಾರಿಗೊಂಡು ಡ್ರೈವರ್ ಕೊಡಬೇಕು ಮತ್ತು ಖರ್ಚಿಗೂ ಕೊಡಬೇಕು ಎಂದು ಪಕ್ಷದ ಅಭ್ಯರ್ಥಿಯಲ್ಲಿ ಹೇಳಿಕೊಂಡಿದ್ದ ಆ ನಾಯಕ. ನನ್ನ ಕಾರಲ್ಲಿ ಯಾರೂ ಬರಕೂಡದು ನನ್ನದೇ ಆದ ಕೆಲವೊಂದು ಏರಿಯಾ ಇದೆ ಅಲ್ಲಿಗೆ ನಾನೊಬ್ಬನೇ ಪ್ರಚಾರಕ್ಕೆ ತೆರಳಿದರೆ ಮಾತ್ರ ಓಟು ಸಿಗುವುದು ಅವರೆಲ್ಲರೂ ನನ್ನದೇ ಜನ ಎಂದೆಲ್ಲಾ ಹೇಳಿ ನಂಬಿಸಿದ್ದ ಆ ನಾಯಕ ಕಾರು ಮತ್ತು ಖರ್ಚಿನ ಹಣದೊಂದಿಗೆ ತೆರಳಿ ಎಲ್ಲಾ ದಿನವೂ ಮನೆಯಲ್ಲೇ ಮಲಗಿದ್ದ ಎನ್ನಲಾಗಿದೆ. ಮನೆಯಲ್ಲಿ ನಾಯಕ ಮಲಗಿದ್ದ ಬಗ್ಗೆ ಕಾರಿನ ಚಾಲಕ ಯಾರಲ್ಲೋ ತಮಾಷೆಗೆ ಹೇಳಿದ್ದಾನೆ. ತಮಾಷೆಗೆ ಹೇಳಿದ ವಿಚಾರ ಅಭ್ಯರ್ಥಿಯ ಕಿಚಿಗೂ ಮುಟ್ಟಿದೆ ಎನ್ನಲಾಗಿದೆ.

ಚುನಾವಣೆ ಮುಗಿದಿದೆ, ಪ್ರಚಾರವೂ ಮುಗಿದಿದೆ ಎಲ್ಲವೂ ಮುಗಿದ ಬಳಿಕ ಮಲಗಿದ ನಾಯಕ ಎದ್ದಿರಬಹುದು ಎಂದು ವ್ಯಂಗ್ಯವಾಡುತ್ತಿರುವ ಕಾರ್ಯಕರ್ತರು ಆ ನಾಯಕನ ಪಕ್ಷದಿಂದ ಉಚ್ಚಾಟನೆ ಮಾಡಿ ಅವರಿಗೆ ಫುಲ್ ರೆಸ್ಟ್ ಕೊಡಬೇಕೆಂದು ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ್ದಾರೆ. ಈ ನಾಯಕ ಯಾರು ಎಂಬ ಕುತೂಹಲ ನಿಮಗಿರಬಹುದು ಈ ಕುತೂಹಲಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಆ ವ್ಯಕ್ತಿ ಯಾರು ಎಂಬುದು ನಾವೇ ತಿಳಿಸಲಿದ್ದೇವೆ ಅಲ್ಲಿಯವರೆಗೆ ವೈಟ್ ಮಾಡಿ....

ಬೆಂಗಳೂರು ಕಂಬಳ ಆಯೋಜನೆ ಶಾಸಕ ಅಶೋಕ್ ರೈ ಅವರಿಗೆ ಶಹಬ್ಬಾಸ್ ಎಂದ ಸಿಎಂ ಸಿದ್ದರಾಮಯ್ಯ

Posted by Vidyamaana on 2023-11-26 12:27:36 |

Share: | | | | |


ಬೆಂಗಳೂರು ಕಂಬಳ ಆಯೋಜನೆ  ಶಾಸಕ ಅಶೋಕ್ ರೈ ಅವರಿಗೆ ಶಹಬ್ಬಾಸ್ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ನ.25: ಬೆಂಗಳೂರು ಕಂಬಳದಲ್ಲಿ ತುಳು ಅಧಿಕೃತ ಭಾಷೆಯಾಗಬೇಕೆಂಬ ಧ್ವನಿ ನಾಲ್ಕೂರುಗಳಿಗೆ ಮಾರ್ದನಿಸಿದೆ. ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತುಳು ಭಾಷಿಗರ ಬಗ್ಗೆ ಅಭಿಮಾನ ತೋರಿದ್ದಾರೆ. ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯಾಗಿಸುವ ವಿಚಾರದಲ್ಲಿ ನಿಮ್ಮ ಭಾಗದವರೇ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿದ್ದರಲ್ವಾ.. ಯಾಕೆ ಮಾಡಿಲ್ಲ ಎಂದು ಕುಹುಕದ ಪ್ರಶ್ನೆಯೆತ್ತಿ ನಾವು ಆ ಕೆಲಸವನ್ನು ಮಾಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ. 


ಉಡುಪಿ, ಮಂಗಳೂರಿನ ಇಬ್ಬರು ಎಲ್ಲೇ ಸಿಗಲಿ ಅವರು ತುಳುವಿನಲ್ಲೇ ಮಾತಾಡುತ್ತಾರೆ. ನಡುವೆ ನಾವಿದ್ದರೆ ಅವರ ಮುಖ ನೋಡುವ ಸ್ಥಿತಿ. ಬಿ.ಆರ್ ಶೆಟ್ಟಿ ಹಿಂದೆ ದುಬೈನಲ್ಲಿದ್ದರೂ ಕರಾವಳಿಯ ಯಾರೇ ಸಿಕ್ಕಿದರೂ ಅವರಲ್ಲಿ ತುಳುವಲ್ಲೇ ಮಾತಾಡುತ್ತಿದ್ದರು ಅಂತ ವೇದಿಕೆಯಲ್ಲಿದ್ದ ಶೆಟ್ಟರ ಮುಖ ನೋಡಿ ನಕ್ಕರು. ಆ ಭಾಗದವರಿಗೆ ತುಳು ಭಾಷೆ ಅಂದ್ರೆ ಅಷ್ಟೊಂದು ಪ್ರೀತಿ. ಈ ಭಾಷೆಗೆ ಸ್ವಂತ ಲಿಪಿ ಇಲ್ಲ ತಾನೇ ಎಂದು ಕೇಳಿದಾಗ, ಸೇರಿದ್ದ ಜನರು ಇದೆ, ಇದೆ ಎಂದು ಉದ್ಘೋಷ ಹಾಕಿದರು. ತುಳು ಲಿಪಿ ಇದೆಯಾ.. ಓಕೆ.. ತುಳುವನ್ನು ಹೆಚ್ಚುವರಿ ಭಾಷೆ ಮಾಡಬೇಕೆಂದು ಅಶೋಕ್ ರೈ ವಿಧಾನಸಭೆಯಲ್ಲಿ ಮಾತಾಡಿದ್ರು. ಆಗ ಕನ್ನಡ ಮತ್ತು ಸಂಸ್ಕೃತಿ ಸಚಿವರು ಉತ್ತರ ಕೊಟ್ಟಿದ್ರು. ಹಿಂದೆ ನಿಮ್ಮ ಭಾಗದವರೇ ಈ ಖಾತೆಯ ಸಚಿವರಾಗಿದ್ದರು. ಆಗ ಸುಲಭದಲ್ಲಿ ಮಾಡಬಹುದಿತ್ತು. ಮಾಡಿಲ್ಲ ತಾನೇ..?ನಾವು ಆ ಪ್ರಯತ್ನ ಮಾಡುತ್ತೇವೆ. ತುಳುವನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾಡುತ್ತೇವೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೆಸರೆತ್ತದೆ ಕಾಲೆಳೆಯುತ್ತ ವ್ಯಂಗ್ಯವಾಡಿದರು. ಅಲ್ಲದೆ, ಕಂಬಳಕ್ಕೆ ಇಷ್ಟೊಂದು ಜನ ಸೇರುತ್ತಾರೆಂದು ಗೊತ್ತಿರಲಿಲ್ಲ. ಬೆಂಗಳೂರಿನಲ್ಲಿ ಕಂಬಳ ಮಾಡಿದ್ದಕ್ಕಾಗಿ ಅಶೋಕ್ ರೈಗೆ ಶಹಭಾಸ್ ಹೇಳುತ್ತೇನೆ. ಪ್ರತಿ ವರ್ಷ ಇಲ್ಲಿ ಕಂಬಳ ಮಾಡಬೇಕೆಂದು ಆಶಿಸುತ್ತೇನೆ, ಇದೊಂದು ದೊಡ್ಡ ಈವೆಂಟ್ ಎಂದು ಹೇಳಿ ಮೆಚ್ಚುಗೆ ಸೂಚಿಸಿದರು.ಕಂಬಳ ಸಮಾರಂಭದಲ್ಲಿ ಕರಾವಳಿಯ ಜನಪ್ರತಿನಿಧಿಗಳು ಹೆಚ್ಚಿನವರು ತಾವೂ ತುಳುವರೆಂದು ಹೇಳಿಕೊಳ್ಳಲು ತುಳು ಭಾಷೆಯಲ್ಲೇ ಮಾತನಾಡಿದ್ರು. ಯುಟಿ ಖಾದರ್ ಸೇರಿದಂತೆ ಹಲವು ನಾಯಕರು ಸಮಾರಂಭದಲ್ಲಿ ಭಾಗವಹಿಸಿ ತುಳುವಿನಲ್ಲಿ ಮಾತಾಡಿದ್ರು. ಸಿಎಂ ಸಿದ್ದರಾಮಯ್ಯ ವೇದಿಕೆಯಲ್ಲಿದ್ದಾಗ ಕಂಬಳದ ವಿಶೇಷ ಬಗ್ಗೆ ಖಾದರ್ ಅವರೇ ಹೇಳುತ್ತಿದ್ದರು.

ತುಳು ಭಾಷೆ ಹೆಚ್ಚುವರಿ ಭಾಷೆ-ಭರವಸೆಯಿದೆ- ಅಶೋಕ್ ಕುಮಾ‌ರ್ ರೈ:


ಪ್ರಾಸ್ತಾವಿಕ ನುಡಿಗಳನ್ನಾಡಿದ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈಯವರು ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯನ್ನಾಗಿ ಮಾಡಬೇಕೆಂದು ಎಲ್ಲಾ ತುಳುವರ ಪರವಾಗಿ ಮನವಿ ಇದೆ.ಮುಖ್ಯಮಂತ್ರಿಯವರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ವೇಳೆ ಐದು ಇಲಾಖೆಗಳ ಎನ್‌ಒಸಿ ಬಂದಾಗ ತುಳುವಿಗೆ ಮಾನ್ಯತೆ ಸಿಗಲಿದೆ ಎಂದಿದ್ದಾರೆ.ಈ ಬಗ್ಗೆ ಅವರು ಸತತ ಪ್ರಯತ್ನ ಮಾಡಿ ತುಳುವರಿಗೆ ಮನ್ನಣೆ ಒದಗಿಸಿಕೊಡುವ ಕೆಲಸ ಮಾಡಲಿದ್ದಾರೆ ಎನ್ನುವ ಭರವಸೆ ಇದೆ ಎಂದರು.

ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಕಂಬಳ ಸಮಿತಿಯ ಗೌರವಾಧ್ಯಕ್ಷ ಕೆ.ಪ್ರಕಾಶ್‌ ಶೆಟ್ಟಿಯವರು ಮಾತನಾಡಿ,`ತುಳುನಾಡಿನಲ್ಲಿ ಹುಟ್ಟಿರುವುದು ನಮ್ಮ ಭಾಗ್ಯ.ಕರಾವಳಿಯ ಬುದ್ದಿವಂತರು ಮಾತ್ರವಲ್ಲ.ನಾವು ಸಾಧಕರು ಎಂಬುದನ್ನು ಕಂಬಳ ಆಯೋಜನೆಯ ಮೂಲಕ ಸಾಬೀತಾಗಿದೆ ಎಂದರು.


ಅನಿವಾಸಿ ಉದ್ಯಮಿ ಡಾ|ಬಿ.ಆ‌ರ್. ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.ಕಂದಾಯ ಸಚಿವ ಕೃಷ್ಣ ಬೈರೇ ಗೌಡ ಮಾತನಾಡಿ ಕಂಬಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಎಂ.ಲಮಾಣಿ, ವಿಧಾನಪರಿಷತ್ ಸದಸ್ಯ ಡಾ|ಮಂಜುನಾಥ ಭಂಡಾರಿ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಕಂಬಳದ ಪ್ರಾಯೋಜಕರಾದ ಉದಯ್ ಶೆಟ್ಟಿ ಮುನಿಯಾಲು, ಆಭರಣ ಜ್ಯುವೆಲ್ಲರ್ಸ್‌ನ ಮಧುಕರ್ ಪ್ರತಾಪ್,ಬೆಂಗಳೂರು ಕಂಬಳ ಸಮಿತಿ ಉಪಾಧ್ಯಕ್ಷರಾದ ಗುಣರಂಜನ್ ಶೆಟ್ಟಿ, ಕಾವು ಹೇಮನಾಥ್ ಶೆಟ್ಟಿ ಕಾವು, ಅನಿತಾ ಹೇಮನಾಥ ಶೆಟ್ಟಿ, ಪ್ರಿಯಾಂಕಾ ಉಪೇಂದ್ರ, ಉಮೇಶ್ ಶೆಟ್ಟಿ, ಬೆಳಪು ದೇವಿಪ್ರಸಾದ್‌ ಶೆಟ್ಟಿ, ವಿಠಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯದರ್ಶಿ ದೀಪಕ್ ಕುಮಾ‌ರ್ ಶೆಟ್ಟಿ ಸ್ವಾಗತಿಸಿದರು.ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್‌ ಶೆಟ್ಟಿ ವಂದಿಸಿದರು.



ಬಳ್ಳಾರಿ: ಸರಣಿ ಕಳ್ಳತನ, ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ

Posted by Vidyamaana on 2024-01-13 21:19:22 |

Share: | | | | |


ಬಳ್ಳಾರಿ: ಸರಣಿ ಕಳ್ಳತನ, ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ

ಬಳ್ಳಾರಿ: ನಗರದ ಕಪ್ಪಗಲ್ಲು ರಸ್ತೆಯಲ್ಲಿ ವಾಣಿಜ್ಯ  ಮಳಿಗೆಗಳಲ್ಲಿ ಇಂದು ಬೆಳಗಿನ‌ಜಾವ ಕಳ್ಳರು ಸರಣಿಗಳ್ಳತ ನಡೆಸಿ ಸಾವಿರಾರು ರೂ ನಗದನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ.ಈ ರಸ್ತೆಯಲ್ಲಿ ಮೆಡ್ ಪ್ಲಸ್ ನಲ್ಲಿ 24880 ರೂ, ಸಾಯಿ ಇಂದಿರಾ ಮೆಡಿಕಲ್ ಸ್ಟೋರ್ ನಲ್ಲಿ 8000 ರೂ, ಕನಕ ದುರ್ಗಮ್ಮ ಪ್ರಾವಿಷನ್ ಸ್ಟೋರ್ ನಲ್ಲಿ ಒಂದು ಸಾವಿರ ರೂ ಮತ್ತು ವಿಜಯ ರಾಮ ಸೂಪರ್ ಮಾರ್ಕೇಟ್ ನಲ್ಲಿ 17 ಸಾವಿರ ರೂ ನಗದು ದೋಚಿದ್ದಾರೆ.ಈ ಬಗ್ಗೆ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರು ಮುಖಕ್ಕೆ ವಾಸ್ಕ್ ಧರಿಸಿಕೊಂಡು, ಬ್ಯಾಟರಿ ಹಿಡಿದುಕೊಂಡು, ಮಳಿಗೆಯ ಷಟರ್ ನಿಂದ ಒಳಗೆ ನುಗ್ಗಿ, ಕ್ಯಾಸ್ ಕೌಂಟರ್ ತೆಗೆದು ಹಣ ಲಪಟಾಯಿಸಿದ್ದಾರೆ.


ಮಳಿಗೆಗಳ ಷಟರ್ ಗಳನ್ನು ಹಾರೆಗಳಿಂದ ಮೀಟಿ ತೆಗೆಯಲಾಗಿದೆ ಇದೆಲ್ಲ ಸಿಸಿ ಕೆಮೆರಾಗಳಲ್ಲಿ ರೆಕಾರ್ಡ್ ಆಗಿದೆ. ಸ್ಥಳಕ್ಕೆ ಪೊಲೀಸರು ಬಂದು ಹೋಗಿದ್ದಾರೆ‌. ಕಳ್ಳರನ್ನು ಪತ್ತೆ ಹಚ್ಚಬೇಕಿದೆ.

ಮುಂಬೈನಲ್ಲಿ ಇಂಡಿಗೋ-ಏರ್ ಇಂಡಿಯಾ ವಿಮಾನಗಳು ಒಂದೇ ರನ್ವೇಯಲ್ಲಿ ಟೇಕ್ ಆಫ್

Posted by Vidyamaana on 2024-06-09 14:02:56 |

Share: | | | | |


ಮುಂಬೈನಲ್ಲಿ ಇಂಡಿಗೋ-ಏರ್ ಇಂಡಿಯಾ ವಿಮಾನಗಳು ಒಂದೇ ರನ್ವೇಯಲ್ಲಿ ಟೇಕ್ ಆಫ್

ಮುಂಬೈ :ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆಗುತ್ತಿದ್ದ ರನ್ ವೇಯಲ್ಲಿ ಇಂಡಿಗೋ ವಿಮಾನವೊಂದು ಇಳಿದ ನಂತರ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.ತ್ವರಿತ ಪ್ರತಿಕ್ರಿಯೆಯಲ್ಲಿ, ನಾಗರಿಕ ವಿಮಾನಯಾನ ನಿಯಮಿತ ನಿರ್ದೇಶನಾಲಯವು ತನಿಖೆಯನ್ನು ಪ್ರಾರಂಭಿಸಿದೆ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಯನ್ನು ವಜಾಗೊಳಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಹೊರಹೊಮ್ಮಿದ ವೀಡಿಯೊದಲ್ಲಿ, ಎರಡೂ ವಿಮಾನಗಳು ಒಂದೇ ರನ್ವೇಯಲ್ಲಿ ಕಂಡುಬರುತ್ತವೆ. ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ, ಇಂಡಿಗೊ ವಿಮಾನವು ಇಳಿಯುವುದನ್ನು ಕಾಣಬಹುದು. ಇಂಡಿಗೋ ವಿಮಾನವು ಇಂದೋರ್ ನಿಂದ ಮುಂಬೈಗೆ ಹಾರುತ್ತಿದ್ದರೆ, ಏರ್ ಇಂಡಿಯಾ ವಿಮಾನವು ಕೇರಳದ ತಿರುವನಂತಪುರಕ್ಕೆ ಹೊರಟಿತು.

ಬೆಳ್ತಂಗಡಿ : ರಿಕ್ಷಾ ಪಲ್ಟಿ; ಹಲವರಿಗೆ ಗಾಯ

Posted by Vidyamaana on 2024-06-23 21:03:09 |

Share: | | | | |


ಬೆಳ್ತಂಗಡಿ : ರಿಕ್ಷಾ ಪಲ್ಟಿ; ಹಲವರಿಗೆ ಗಾಯ

ಬೆ ಳ್ತಂಗಡಿ: ಕನ್ಯಾಡಿ ಗ್ರಾಮದ ಗುರಿಪಳ್ಳದ ಕೊಡ್ಡೋಳು ಸಮೀಪ ಚಲಿಸುತ್ತಿದ್ದ ರಿಕ್ಷಾದ ಚಕ್ರಕ್ಕೆ ರಸ್ತೆ ಬದಿ ಕಟ್ಟಲಾಗಿದ್ದ ಜಾನುವಾರಿನ ಹಗ್ಗ ಸಿಲುಕಿ ರಿಕ್ಷಾ ಪಲ್ಟಿಯಾದ ಘಟನೆ ರವಿವಾರ ನಡೆದಿದೆ.

ರಿಕ್ಷಾ ಚಾಲಕ ಸ್ಥಳೀಯ ರಾಮಣ್ಣಗೌಡ ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

Recent News


Leave a Comment: