ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

ಸುದ್ದಿಗಳು News

Posted by vidyamaana on 2024-07-24 22:11:50 |

Share: | | | | |


ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

‌ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ ನೆರವು ನೀಡಿದ್ದ ಮಂಗಳೂರಿನ ಪತ್ರಕರ್ತರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದರು.ಶಿರೂರು ಗುಡ್ಡ ದುರಂತದಲ್ಲಿ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃತದೇಹ 8 ದಿನಗಳ ಬಳಿಕ ಮಂಗಳವಾರ ಸಿಕ್ಕಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಮನೆಯಿದ್ದ ಜಾಗಕ್ಕೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲು ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್, ಆರಿಫ್ ಯು.ಆರ್. ಗಿರೀಶ್ ಮಳಲಿ ಹಾಗೂ ಶಿವಶಂಕರ್ ನೆರವಾಗಿದ್ದರು

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಂದ ಪತ್ರಕರ್ತರ ಮಾಹಿತಿ ಪಡೆದು ಕಚೇರಿಯಲ್ಲಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರು ಜಿಲ್ಲಾಧಿಕಾರಿಯವರಿಗೆ ಪತ್ರಕರ್ತರ ಪರಿಚಯ ಮಾಡಿಕೊಟ್ಟರು.


ಬಳಿಕ ಮಾತಾಡಿದ ಜಿಲ್ಲಾಧಿಕಾರಿ ಅವರು, ನಿಮ್ಮ ಈ ಕಾರ್ಯ ಶ್ಲಾಘನೀಯವಾಗಿದೆ. ಇದೊಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಏನಾದರೂ ಅಗತ್ಯ ನೆರವು ಬೇಕಾದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ನಿಮ್ಮಂತಹ ಉತ್ಸಾಹಿ ತರುಣರ ಅವಶ್ಯಕತೆ ಸಮಾಜಕ್ಕೆ ಇದೆ ಎಂದು ಬೆನ್ನುತಟ್ಟಿದರು. ಅಲ್ಲದೇ ಶಿರೂರು ಮತ್ತು ಉಳುವರೆ ಗ್ರಾಮದ ಸದ್ಯದ ಸ್ಥಿತಿಗತಿಯ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದರು

 Share: | | | | |


ಭಾರೀ ಮಳೆಗೆ ರಸ್ತೆಗೆ ಬಿದ್ದ ಬೃಹತ್ ಮರ

Posted by Vidyamaana on 2023-05-31 11:34:27 |

Share: | | | | |


ಭಾರೀ ಮಳೆಗೆ ರಸ್ತೆಗೆ ಬಿದ್ದ ಬೃಹತ್ ಮರ

ಪುತ್ತೂರು: ಕುಂಬ್ರ ಸಮೀಪದ ಶೇಖಮಲೆಯಲ್ಲಿ ಬುಧವಾರ ಸಂಜೆ ಭಾರೀ ಗಾಳಿ ಮಳೆಗೆ ಬೃಹತ್‌ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಹಲವೆಡೆ ವಿದ್ಯುತ್‌ ಕಂಬಗಳು ನೆಲಕ್ಕುರಳಿದ್ದು ವಿದ್ಯುತ್‌ ವ್ಯತ್ಯಯವಾಗಿದೆ. ರಸ್ತೆಗೆ ಮರ ಬಿದ್ದ ಪರಿಣಾಮ ವಾಹನ ಸವಾರರು ಪರದಾಟ ನಡೆಸುವಂತಾಗಿದೆ.

ಮಂಗಳೂರು: SDPI ರಾಷ್ಟ್ರೀಯ ಅಧ್ಯಕ್ಷರಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ

Posted by Vidyamaana on 2023-05-05 08:31:45 |

Share: | | | | |


ಮಂಗಳೂರು:  SDPI ರಾಷ್ಟ್ರೀಯ ಅಧ್ಯಕ್ಷರಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ SDPI ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಕೈಗೊಳ್ಳಲು  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝಿಯವರು ಇಂದು ಮಂಗಳೂರಿಗೆ ಆಗಮಿಸಿದರು.

ಬಜಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಜಿಲ್ಲಾ ಸಮಿತಿಯ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ ಬಜಪೆ ಪಟ್ಟಣದವರೆಗೆ ವಾಹನ ಜಾಥಾ ಮೂಲಕ ಕರೆ ತರಲಾಯಿತು.ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೊ, ರಾಜ್ಯ ಕಾರ್ಯದರ್ಶಿ ಆನಂದ ಮಿತ್ತಬೈಲ್, ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ರಾಜ್ಯ ಸಮಿತಿ ಸದಸ್ಯರಾದ ಅಥಾವುಲ್ಲ ಜೋಕಟ್ಟೆ, ರಾಜ್ಯ ಚುನಾವಣಾ ಸಹ ಉಸ್ತುವಾರಿ ನವಾಝ್ ಉಳ್ಳಾಲ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ  ಜಮಾಲ್ ಜೋಕಟ್ಟೆ, ಅಶ್ರಫ್ ಅಡ್ಡೂರು, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ಮೂಡಬಿದ್ರೆ ಕ್ಷೇತ್ರಾಧ್ಯಕ್ಷರಾದ ಆಸಿಫ್ ಕೋಟೆಬಾಗಿಲು, ಕಾರ್ಯದರ್ಶಿ ನಿಸಾರ್ ಮರವೂರು ಹಾಗೂ ಇತರ ನಾಯಕರು ಉಪಸ್ಥಿತರಿದ್ದರು

ಇಂದು ಮತ್ತು ನಾಳೆ ಉಳ್ವಾಲ, ಬಂಟ್ವಾಳ, ಮೂಡಬಿದ್ರೆ ಕ್ಷೇತ್ರಗಳಲ್ಲಿ ನಡೆಯುವ ವಿವಿಧ ಚುನಾವಣಾ ಪ್ರಚಾರ ಸಭೆಗಳಲ್ಲಿ ಎಂ.ಕೆ ಫೈಝಿಯವರು ಭಾಗವಹಿಸಲಿದ್ದಾರೆ.

ಹಂಚು ಸರಿಸಿ ಒಳ ನುಗ್ಗಿದ ಗಾಂಜಾ ವ್ಯಸನಿ

Posted by Vidyamaana on 2023-10-27 17:03:21 |

Share: | | | | |


ಹಂಚು ಸರಿಸಿ ಒಳ ನುಗ್ಗಿದ ಗಾಂಜಾ ವ್ಯಸನಿ

ಉಳ್ಳಾಲ: ಮಧ್ಯರಾತ್ರಿ ಮನೆಯ ಮೇಲ್ಛಾವಣಿಯ ಹಂಚು ಸರಿಸಿ ಒಳನುಗ್ಗಿದ ಗಾಂಜಾ ವ್ಯಸನಿಯೋರ್ವ ಮಂಚದಲ್ಲಿ ಇಬ್ಬರು ಹೆಣ್ಮಕ್ಕಳೊಂದಿಗೆ ಮಲಗಿದ್ದ ಮಹಿಳೆಗೆ ಲೈಂಗಿಕ ಕೀಟಲೆ ಕೊಟ್ಟಿದ್ದು ಕೂಡಲೇ ಎಚ್ಚೆತ್ತ ಮನೆಮಂದಿಯ ಚೀರಾಟಕ್ಕೆ ಆಗಂತುಕ ಮೊಬೈಲನ್ನೇ ಬಿಟ್ಟೋಡಿದ ಘಟನೆ ಹರೇಕಳ ಗ್ರಾಮದ ರಾಜಗುಡ್ಡೆ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.


ಹರೇಕಳ ಗ್ರಾಮದ ಕೊಜಪಾಡಿ ನಿವಾಸಿ ನೌಫಾಲ್(32)ಎಂಬಾತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದು ಅತ್ಯಾಚಾರ ಯತ್ನ ಆರೋಪದಲ್ಲಿ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆ ಹರೇಕಳದ ರಾಜಗುಡ್ಡೆಯ ಬಾಡಿಗೆ ಮನೆಯೊಂದರಲ್ಲಿ ಗಂಡ, ಇಬ್ಬರು ಪುತ್ರಿಯರೊಂದಿಗೆ ವಾಸವಿದ್ದಾರೆ. ಗಂಡ ರಾತ್ರಿ ಪಾಳಿ ಸೆಕ್ಯುರಿಟಿ ಗಾರ್ಡ್ ವೃತ್ತಿಗೆ ತೆರಳಿದ್ದು ಮನೆಯೊಳಗೆ ಸಂತ್ರಸ್ತ ಮಹಿಳೆ ಇಬ್ಬರು ಹೆಣ್ಮಕ್ಕಳೊಂದಿಗೆ ಮಲಗಿದ್ದ ವೇಳೆ ಮನೆಯೊಳಗೆ ನುಗ್ಗಿದ ನೌಫಾಲ್ ಮಂಚದ ಕೆಳಗೆ ಮಲಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಎಚ್ಚೆತ್ತ ಮಹಿಳೆ ಮತ್ತು ಮಕ್ಕಳು ಜೋರಾಗಿ ಚೀರಾಡಿದ್ದು ಗಲಿಬಿಲಿಗೊಂಡ ನೌಫಾಲ್ ತನ್ನ ಮೊಬೈಲನ್ನೇ ಬಿಟ್ಟು ಓಡಿದ್ದಾನೆ. ಮಧ್ಯರಾತ್ರಿಯೇ ಘಟನಾ ಸ್ಥಳದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾವಣೆಗೊಂಡಿದ್ದು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಗುರುವಾರ ಆರೋಪಿ ನೌಫಾಲನ್ನ ಬಂಧಿಸಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಮರೀಲ್ ನಿವಾಸಿ ರಫೀಕ್ ನಿಧನ

Posted by Vidyamaana on 2024-03-03 04:55:55 |

Share: | | | | |


ಚಿಕಿತ್ಸೆ ಫಲಕಾರಿಯಾಗದೆ ಮರೀಲ್ ನಿವಾಸಿ ರಫೀಕ್ ನಿಧನ

ನಿಂತಿದ್ದ ರಿಕ್ಷಾ ಹಿಮ್ಮುಖವಾಗಿ ಚಲಿಸಿ ಆಪಘಾತಗೊಂಡು, ಗಂಭೀರ ಗಾಯಗೊಂಡಿದ್ದ ರಫೀಕ್ ಮೃತ್ಯು!!

ಭಾನುವಾರ ಮಧ್ಯಾಹ್ನ ನಗುವಿನ ಮೋಡಿಗಾರ ರಫೀಕ್ ಅಂತಿಮ ನಮನ 

ಪುತ್ತೂರು: ರಿಕ್ಷಾ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕೂರ್ನಡ್ಕ ಮರೀಲ್  ಐ.ಕೆ.ಕಂಫೌಂಡ್ ನಿವಾಸಿ ದಿ.ಇಬ್ರಾಹಿಂ ರವರ ಮಗ ರಫೀಕ್  ರವರು ಮಾ. 2ರಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.


ksrtc ಬಸ್ ನಿಲ್ದಾಣದ ಅಂದಿನ A M ಕಾಂಪ್ಲೆಕ್ಸ್ ನಲ್ಲಿ SKY ಮೊಬೈಲ್ ಅಂಗಡಿ ಯನ್ನು ಹೊಂದ್ದಿದ್ದ ಇವರು, ನಂತರ ರಿಕ್ಷಾ ಚಾಲಕರಾಗಿ ದುಡಿಯುತಿದ್ದರು.


ಕೆಲ ದಿನಗಳ ಹಿಂದೆ ಸಾಮೆತ್ತಡ್ಕದ ತನ್ನ ಅಣ್ಣನ ಮನೆಗೆ ರಿಕ್ಷಾದಲ್ಲಿ ತೆರಳಿದ್ದ ರಫೀಕ್ ಅವರು, ರಿಕ್ಷಾವನ್ನು ಶೆಡ್ ನಲ್ಲಿ ಪಾರ್ಕ್ ಮಾಡಿ ಗೇಟ್ ಹಾಕಲೆಂದು ತೆರಳಿದ್ದರು. ಅಷ್ಟರಲ್ಲಿ ನಿಲ್ಲಿಸಿದ್ದ ರಿಕ್ಷಾ ಹಠಾತ್ ಹಿಮ್ಮುಖವಾಗಿ ಚಲಿಸಿ, ಗೇಟ್ ಹಾಕುತ್ತಿದ್ದ ರಫೀಕ್ ಅವರಿಗೆ ಢಿಕ್ಕಿ‌ ಹೊಡೆದಿದೆ. ಗೇಟ್ ಹಾಗೂ ರಿಕ್ಷಾ ನಡುವೆ ಸಿಲುಕಿದ ರಫೀಕ್ ಅವರು, ಗಂಭೀರ ಗಾಯಗೊಂಡಿದ್ದರು.


ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಾ. 2ರಂದು ರಾತ್ರಿ ಕೊನೆಯುಸಿರೆಳೆದಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸದಾ ನಗುಮೊಗದ ರಫೀಕ್ ಅವರು, ಎಲ್ಲರನ್ನು ನಗಿಸುತ್ತಾ, ಅವರ ನಗುವಲ್ಲೇ ಖುಷಿ ಕಂಡವರು. ಎಲ್ಲರೊಂದಿಗೆ ಸಮಾನವಾಗಿ ಬೆರೆಯುತ್ತಿದ್ದ ರಫೀಕ್, ಕೊನೆಯುಸಿರೆಳೆದಿದ್ದಾರೆ. ಅವರ ಮೃತದೇಹವನ್ನು ಭಾನುವಾರ ಮಧ್ಯಾಹ್ನ ಮರೀಲಿನ ತಮ್ಮ ಸ್ವಗೃಹಕ್ಕೆ ತರಲಾಗುವುದು ಎಂದು ಕುಟುಂಭಿಕರು ತಿಳಿಸಿದ್ದಾರೆ. 


ಮೃತರು ಪತ್ನಿ, ಮೂವರು ಗಂಡು ಮಕ್ಕಳು ಮತ್ತು ಸಹೋದರರಾದ ಅಬ್ದುಲ್ ಅಝೀಝ್, ಅಬ್ದುಲ್ ರಝಾಕ್, ಅಕಾಶ್ ಪೂಟ್ ವೇರ್ ಮಾಲಕ ಲತೀಫ್ ಮತ್ತು ಝೀಯಾದ್ ಅವರನ್ನು ಅಗಲಿದ್ದಾರೆ.

ಬೆಳ್ತಂಗಡಿ : ಸುನ್ನತ್ ಕೆರೆಯಲ್ಲಿ ಎಸ್‌ಡಿಪಿಐ ಪ್ರಚಾರದ ಅಬ್ಬರ ಪ್ರಚಾರ ಸಭೆ

Posted by Vidyamaana on 2023-05-03 11:36:03 |

Share: | | | | |


ಬೆಳ್ತಂಗಡಿ : ಸುನ್ನತ್ ಕೆರೆಯಲ್ಲಿ ಎಸ್‌ಡಿಪಿಐ ಪ್ರಚಾರದ ಅಬ್ಬರ ಪ್ರಚಾರ ಸಭೆ

ಬೆಳ್ತಂಗಡಿ : ವಿಧಾನಸಭಾ ಚುನಾವಣಾ  ಕಣ ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕುವೆಟ್ಟು ಗ್ರಾಮ ವ್ಯಾಪ್ತಿಯ ಸುನ್ನತ್ ಕೆರೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಪ್ರಚಾರ ಕಾರ್ಯ ನಡೆಸಿದರು.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಸುಳ್ಯದ ಪೈಚಾರಿನ ಮುಸ್ತಾಫ ಸೆರೆ

Posted by Vidyamaana on 2024-05-10 10:55:14 |

Share: | | | | |


ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಸುಳ್ಯದ ಪೈಚಾರಿನ ಮುಸ್ತಾಫ ಸೆರೆ

ಹಾಸನ; ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಕೊನೆಗೂ ಸೆರೆಯಾಗಿದ್ದಾನೆ. ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ನಾಲ್ಕನೇ ಆರೋಪಿ ಸುಳ್ಯದ ಶಾಂತಿನಗರದ ಉಮಾರ್ ಮಗ ಮುಸ್ತಾಫ ಪೈಚಾರ್ @ ಮಹಮ್ಮದ್ ಮುಸ್ತಾಫ ಎಸ್(43) ಎಂಬಾತನನ್ನು ಇಂದು ಬೆಳಗ್ಗೆ 7 ಗಂಟೆಗೆ ಹಾಸನ ಜಿಲ್ಲೆಯ ಸಕಲೇಶಪುರ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೆಂಗಳೂರು ಎನ್.ಐ.ಎ ಇನ್ಸೆಕ್ಟ‌ರ್ ಷಣ್ಮುಂಗಮ್ ನೇತೃತ್ವದಲ್ಲಿ ಇಂದು(ಮೇ.10) ಬಂಧಿಸಿಲಾಗಿದೆ.

Recent News


Leave a Comment: