ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ಸುದ್ದಿಗಳು News

Posted by vidyamaana on 2024-07-24 23:15:54 |

Share: | | | | |


ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯಕ್ಕೆ ಯುವತಿಯೋರ್ವಳನ್ನು ಯುವಕನೋರ್ವ ಬೈಕ್ ನಲ್ಲಿ ಕಾಡಿಗೆ ಕರೆದುಕೊಂಡು ಬಂದಿದ್ದು, ಈ ಬಗ್ಗೆ ತಿಳಿಯುತ್ತಲೇ ಹಲವಾರು ಮಂದಿ ಕಾಡಿನಲ್ಲಿ ಹುಡುಕಾಡಿದ್ದಾರೆನ್ನಲಾಗಿದೆ.

ಜನ ಸೇರುತ್ತಿದ್ದಂತೆ ಅರೆ ನಗ್ನ ಸ್ಥಿತಿಯಲ್ಲಿ ಬೈಕ್, ಬಟ್ಟೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಯುವಕ-ಯುವತಿ ಪರಾರಿಯಾಗಿದ್ದಾರೆನ್ನಲಾಗಿದೆ.

ಸಾರ್ವಜನಿಕರ ಮಾಹಿತಿ ಹಿನ್ನಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾಡಿನಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ಮಾತ್ರೆಗಳು, ಕಾಂಡೋಮ್, ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಕಡಬ :ಬೈಕ್, ಮಿನಿ ಗೂಡ್ಸ್ ಟೆಂಪೋ ನಡುವೆ ಭೀಕರ ಅಪಘಾತ

Posted by Vidyamaana on 2024-03-05 09:23:07 |

Share: | | | | |


ಕಡಬ :ಬೈಕ್, ಮಿನಿ ಗೂಡ್ಸ್ ಟೆಂಪೋ  ನಡುವೆ ಭೀಕರ ಅಪಘಾತ

ರಾಮಕುಂಜ: ಬೈಕ್ ಹಾಗೂ ಮಿನಿ ಗೂಡ್ಸ್ ವಾಹನವೊಂದರ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿ-  ರಾಮಕುಂಜ ಗ್ರಾಮದ ಗೋಳಿತ್ತಡಿ ಸಮೀಪ ಮಾ.4ರಂದು ರಾತ್ರಿ ನಡೆದಿದೆ.

ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಅಂತಿಮ ಬಿ.ಎ.ವಿದ್ಯಾರ್ಥಿ, ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಅಜೀರ ನಿವಾಸಿ ಗುರುವಪ್ಪ ಅವರ ಪುತ್ರ ಶ್ರೀಜಿಸ್(20ವ.)ಮೃತಪಟ್ಟ ದುರ್ದೈವಿಯಾಗಿದ್ದಾರೆ. ಶ್ರೀಜಿಸ್‌ರವರು ರಾಮಕುಂಜ ಶಾರದಾನಗರದಲ್ಲಿರುವ ಚಿಕ್ಕಮ್ಮನ ಮನೆಗೆ ಬಂದು ರಾತ್ರಿ ಅಲ್ಲಿಂದ  ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ವೇಳೆ ಉಪ್ಪಿನಂಗಡಿಯಿಂದ ಕಡಬ ಕಡೆಗೆ ಹೋಗುತ್ತಿದ್ದ ಮಿನಿ ಗೂಡ್ಸ್ ನಡುವೆ ಗೋಳಿತ್ತಡಿ ಸಮೀಪ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಶ್ರೀಜಿಸ್‌ರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು ಎಂದು ವರದಿಯಾಗಿದೆ. ಮೃತ ಶ್ರೀಜಿಸ್‌ರವರು ತಂದೆ , ತಾಯಿ, ಸಹೋದರರಾದ ಸುನೀಶ್‌ ಹಾಗೂ ಸುಜಿಸ್‌ರವರನ್ನು ಅಗಲಿದ್ದಾರೆ.

ದುರಂತ ಅಂತ್ಯ ಕಂಡ ಲವ್​ ಮ್ಯಾರೇಜ್​: ಮೊದಲ ರಾತ್ರಿಯಂದೇ ಪತ್ನಿಯ ಮದ್ವೆ ಸೀರೆಗೆ ಕೊರಳೊಡ್ಡಿದ ಯುವಕ

Posted by Vidyamaana on 2023-09-22 07:36:36 |

Share: | | | | |


ದುರಂತ ಅಂತ್ಯ ಕಂಡ ಲವ್​ ಮ್ಯಾರೇಜ್​: ಮೊದಲ ರಾತ್ರಿಯಂದೇ ಪತ್ನಿಯ ಮದ್ವೆ ಸೀರೆಗೆ ಕೊರಳೊಡ್ಡಿದ ಯುವಕ

ಚೆನ್ನೈ: ಮದುವೆಯಾದ ಎರಡೇ ದಿನದಲ್ಲಿ 27 ವರ್ಷದ ಯುವಕನೊಬ್ಬ ಪತ್ನಿಯ ಮದುವೆ ಸೀರೆಗೆ ಕೊರಳೊಡ್ಡಿರುವ ಆಘಾತಕಾರಿ ಘಟನೆ ಚೆನ್ನೈನ ಚೆಂಗಲ್ಪಟ್ಟು ಏರಿಯಾದಲ್ಲಿ ಬುಧವಾರ ನಡೆದಿದೆ.ಮೃತ ವ್ಯಕ್ತಿಯನ್ನು ಸರವಣನ್​ ಎಂದು ಗುರುತಿಸಲಾಗಿದೆ. ಈತ ಓಚೇರಿ ನಿವಾಸಿಯಾಗಿದ್ದು, ಸುಂಗುವಚತಿರಂನಲ್ಲಿರುವ ಸ್ಯಾಮ್​ಸಂಗ್​ ಮೊಬೈಲ್​ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.ಬಾಲ್ಯದಿಂದಲೇ ಸ್ನೇಹಿತೆಯಾಗಿ ಶ್ವೇತಾ ಎಂಬಾಕೆಯನ್ನು ಕೆಲವು ವರ್ಷಗಳಿಂದ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದರು.


ಮದುವೆಯನ್ನು ಎರಡೂ ಕುಟುಂಬದವರು ಅದ್ಧೂರಿಯಾಗಿ ಏರ್ಪಡಿಸಿದ್ದರು. ಮಂಗಳವಾರ (ಸೆ.19) ನವ ದಂಪತಿ ತಮ್ಮ ಮದುವೆಯ ನಂತರ ಮೊದಲ ಬಾರಿಗೆ ದಿಮ್ಮಾವರಂಗೆ ಬಂದರು ಮತ್ತು ಆ ದಿನ ಅವರ ಮೊದಲ ರಾತ್ರಿಯಾಗಿತ್ತು.


ರಾತ್ರಿ 9 ಗಂಟೆಗೆ ದಂಪತಿ ತಮ್ಮ ಕೋಣೆಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಶ್ವೇತಾಳ ಕಿರುಚಾಟ ಕೇಳಿ ಮನೆಯವರು ಬೆಚ್ಚಿಬಿದ್ದಿದ್ದಾರೆ. ಶ್ವೇತಾ ಕೋಣೆಯಿಂದ ಹೊರಗೆ ಓಡಿ ಪ್ರಜ್ಞೆ ತಪ್ಪಿ ಬಿದ್ದಳು. ಆಕೆಯ ಪಾಲಕರು ಕೊಠಡಿಯೊಳಗೆ ಹೋಗಿ ನೋಡಿದಾಗ ಶ್ವೇತಾಳಮುಹೂರ್ತದ ಸೀರೆಯನ್ನು ಬಳಸಿ ಸರವಣನ್ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.


ಚೆಂಗಲ್ಪಟ್ಟು ತಾಲೂಕು ಪೊಲೀಸರ ತಂಡ ಆತನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಚೆಂಗಲ್ಪಟ್ಟು ಜಿಎಚ್‌ಗೆ ಕಳುಹಿಸಿದೆ.ಮಂಗಳವಾರ ರಾತ್ರಿ ಸರವಣನ್ ತನ್ನ ಪಾಲಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಹನಿಮೂನ್‌ ಪ್ರವಾಸಕ್ಕಾಗಿ ಯೋಜಿಸಿರುವ ಸ್ಥಳಗಳ ಬಗ್ಗೆ ತಿಳಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬುಧವಾರದಿಂದಲೇ ಹನಿಮೂನ್​ ಪ್ರವಾಸ ಆರಂಭಿಸಬೇಕಾಗಿತ್ತು. ಅಷ್ಟರಲ್ಲಿ ಈ ದುರ್ಘಟನೆ ನಡೆದಿದೆ. ಮಂಗಳವಾರ ಮೊದಲ ರಾತ್ರಿ ಸರವಣನ್​ ಮುಖದಲ್ಲಿ ಯಾವುದೇ ಆತಂಕ ಅಥವಾ ದುಃಖದ ಲಕ್ಷಣಗಳು ಇರಲಿಲ್ಲ ಎಂದು ಪಾಲಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಸರವಣನ್​ ಸಾವು ತುಂಬಾ ನಿಗೂಢವಾಗಿದೆ. ಚೆಂಗಲಪಟ್ಟು ತಾಲೂಕು ಪೊಲೀಸರು ಅನುಮಾನಾಸ್ಪದ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಶ್ವೇತಾ ಮತ್ತು ಆಕೆಯ ಪೋಷಕರನ್ನು ವಿಚಾರಣೆ ನಡೆಸುತ್ತಿದ್ದಾರೆ

ಶಾಸಕರ ಇಂದಿನ ಕಾರ್ಯಕ್ರಮ ಆ 29

Posted by Vidyamaana on 2023-08-29 01:27:04 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 29

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 29 ರಂದು


ಬೆಳಿಗ್ಗೆ 10 ಗಂಟೆಯಿಂದ ಮಂಗಳೂರು ನೇತ್ರಾವತಿ‌ಸಭಾಂಗಣದಲ್ಲಿ ಕಂದಾಯ ಸಚಿವರ ಸಭೆಯಲ್ಲಿ ಭಾಗವಹಿಸುವುದು

ಬೆಂಗಳೂರಿನಲ್ಲಿ ಅಪಘಾತ : ನರ್ಸಿಂಗ್ ವಿದ್ಯಾರ್ಥಿ ಥೋಮಸ್ ಮೃತ್ಯು

Posted by Vidyamaana on 2024-05-30 16:54:25 |

Share: | | | | |


ಬೆಂಗಳೂರಿನಲ್ಲಿ ಅಪಘಾತ :  ನರ್ಸಿಂಗ್ ವಿದ್ಯಾರ್ಥಿ ಥೋಮಸ್ ಮೃತ್ಯು

ನೆಲ್ಯಾಡಿ : ಬೆಂಗಳೂರಿನ ನೆಲಮಂಗಲದಲ್ಲಿ ಬೈಕ್ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿ ನೆಲ್ಯಾಡಿ ಎಂಜಿರ ಪರಕ್ಕಳದ ಯುವಕ ಮೃತಪಟ್ಟ ಬಗ್ಗೆ ವರದಿಯಾಗಿದೆ.

ನೆಲ್ಯಾಡಿ ಎಂಜಿರ ಪರಕ್ಕಳ ನಿವಾಸಿ ಸ್ಕೇರಿಯಾ ಎಂಬವರ ಪುತ್ರ, ನರ್ಸಿಂಗ್ ವಿದ್ಯಾರ್ಥಿ ಥೋಮಸ್ ಮೃತ ಯುವಕ.

ಏಳೇ ತಿಂಗಳ್ಡ್ ಶೆಟ್ಟರ್ ಗ್ ಕಾಂಗ್ರೆಸ್ ಬೊಡಿಂಡ್ - ಶೆಟ್ಟರ್ ಮೂಲಗ್ ಬತ್ತೆರ್..!

Posted by Vidyamaana on 2024-01-25 15:54:27 |

Share: | | | | |


ಏಳೇ ತಿಂಗಳ್ಡ್ ಶೆಟ್ಟರ್ ಗ್ ಕಾಂಗ್ರೆಸ್ ಬೊಡಿಂಡ್ - ಶೆಟ್ಟರ್ ಮೂಲಗ್ ಬತ್ತೆರ್..!

ನವದೆಹಲಿ, ಜ.25: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮಾಜಿ ಮುಖ್ಯಮಂತ್ರಿಯೂ ಆಗಿರುವ ಕಾಂಗ್ರೆಸ್ ಎಂಎಲ್​ಸಿ ಜಗದೀಶ್ ಶೆಟ್ಟರ್ 

 ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa), ಬಿವೈ ವಿಜಯೇಂದ್ರ (BY Vijayendra), ಕೇಂದ್ರ ಸಚಿವ ಭುಪೇಂದ್ರ ಯಾದವ್​, ರಾಜೀವ್​ ಚಂದ್ರಶೇಖರ್​ ಸಮ್ಮುಖದಲ್ಲಿ ಶೆಟ್ಟರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.ಪಕ್ಷ ಸೇರ್ಪಡೆಗೂ ಮುನ್ನ ಶೆಟ್ಟರ್ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರೊಂದಿಗೆ ದೆಹಲಿಯಲ್ಲಿನ ಅಮಿತ್ ಶಾ ನಿವಾಸದಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಮಾತುಕತೆ ವೇಳೆ​ ಶೆಟ್ಟರ್ ಮನವೋಲಿಸುವಲ್ಲಿ ಅಮಿತ್ ಶಾ ಯಶಸ್ವಿಯಾಗಿದ್ದು, ಪಕ್ಷಕ್ಕೆ ಮರಳಲು ಶೆಟ್ಟರ್ ಒಪ್ಪಿಗೆ ಸೂಚಿಸಿದ್ದರು.


ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ಜಗದೀಶ್ ಶೆಟ್ಟರ್


ಪಕ್ಷ ಸೇರ್ಪಡೆಗೂ ಮುನ್ನ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷ ಹಾಗೂ ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದಾರೆ. ರಾಜೀನಾಮೆಗೂ ಮುನ್ನ ಶೆಟ್ಟರ್ ಅವರು ಹೊರಟ್ಟಿಗೆ ಕರೆ ಮಾಡಿ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದರು. ಈ ವೇಳೆ ಪತ್ರದ ಮೂಲಕ ಬೇಡ, ನೇರವಾಗಿ ಬಂದು ರಾಜೀನಾಮೆ ನೀಡುವಂತೆ ಸೂಚಿಸಿದ್ದರು.

ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡುತ್ತೇನೆ: ಶೆಟ್ಟರ್

ಪಕ್ಷ ಸೇರ್ಪಡೆ ನಂತರ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಶೆಟ್ಟರ್, ನಾನು ಪಕ್ಷಕ್ಕೆ ವಾಪಸಾಗಬೇಕೆಂದು ನಾಯಕರ ಅಪೇಕ್ಷೆ ಇತ್ತು. ಅಮಿತ್​ ಶಾ ಅವರು ಅತ್ಯಂತ ಗೌರವದಿಂದ ಬರಮಾಡಿಕೊಂಡರು. ನಾನು ಬಿಜೆಪಿ ಮರು ಸೇರ್ಪಡೆಯಾಗಿದ್ದಕ್ಕೆ ಬಹಳ ಸಂತಸ ಆಗಿದೆ. ನಾನು ಪರಿಷತ್​ ಸ್ಥಾನಕ್ಕೆ ರಾಜೀನಾಮೆಯನ್ನೂ ಸಲ್ಲಿಸಿದ್ದೇನೆ. ಕಾಂಗ್ರೆಸ್​ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದೇನೆ. ಇ-ಮೇಲ್​ ಮೂಲಕ ರಾಜೀನಾಮೆಯನ್ನ ನೀಡಿದ್ದೇನೆ ಎಂದರು.


ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕು. ನಾನು ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್​ನವರು ಕೂಡ ಒಳ್ಳೇ ಗೌರವ, ಸ್ಥಾನಮಾನ ನೀಡಿದ್ದರು. ಕಾಂಗ್ರೆಸ್​ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್​ಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ಮಾಹಿತಿ

Posted by Vidyamaana on 2024-06-14 10:19:10 |

Share: | | | | |


ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ಮಾಹಿತಿ

ನವದೆಹಲಿ: ನೀವು ಮನೆ ಖರೀದಿಸಲು ಬಯಸಿದರೆ ಮತ್ತು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ  ಲಾಭವನ್ನು ಪಡೆಯಲು ಬಯಸಿದರೆ ಅದು ತುಂಬಾ ಸುಲಭ. ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಸರ್ಕಾರಿ ಯೋಜನೆಯಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನಿಮಗೆ ಆಧಾರ್ ಸಂಖ್ಯೆಯೂ ಅತ್ಯಗತ್ಯ. ಅಲ್ಲದೆ ಅರ್ಜಿದಾರನು ಸಂಪೂರ್ಣ ಮಾಹಿತಿಯನ್ನು ನಿಖರವಾಗಿ ನೀಡಬೇಕಾಗುತ್ತದೆ.

ಎಲ್ಲ ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಆರಂಭಿಸಿದೆ. ಈ ಯೋಜನೆಯನ್ನು 2015ರ ಜೂನ್‌ 1ರಂದು ಮೊದಲ ಬಾರಿಗೆ ಪರಿಚಯಿಸಲಾಯಿತು. ಈ ಯೋಜನೆಯಡಿ ವಾರ್ಷಿಕ ಶೇ.6.50ರ ಬಡ್ಡಿದರದಲ್ಲಿ ಸಾಲ ಲಭ್ಯವಾಗುತ್ತದೆ.

PMAY ಯೋಜನೆಯಡಿ ಪ್ರಯೋಜನಗಳೇನು?

• PMAY ಯೋಜನೆಯಡಿ, ಎಲ್ಲಾ ಫಲಾನುಭವಿಗಳಿಗೆ ಕೇವಲ ವಾರ್ಷಿಕ ಶೇ. 6.50 ಬಡ್ಡಿದರದಲ್ಲಿ 20 ವರ್ಷಗಳವರೆಗೆ ವಸತಿ ಸಾಲ ನೀಡಲಾಗುತ್ತದೆ.

• ನೆಲ ಮಹಡಿಯಲ್ಲಿರುವ ಮನೆಗಳು ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಮಾತ್ರ ಮೀಸಲಾಗಿದೆ

• ಗೃಹ ನಿರ್ಮಾಣದಲ್ಲಿ ಸುಸ್ಥಿರ, ಪರಿಸರ ಸ್ನೇಹಿ ತಂತ್ರಜ್ಞಾನ ಬಳಸಲಾಗುತ್ತದೆ

• ಈ ಯೋಜನೆಯು ದೇಶದ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಅನ್ವಯಿಸುತ್ತದೆ. ಮೂರು ಹಂತಗಳಲ್ಲಿ ನಗರ ಪ್ರದೇಶಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ

ಫಲಾನುಭವಿಗಳು ಯಾರು?

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳನ್ನು ವಾರ್ಷಿಕ ಆದಾಯದ ಆದಾರದಲ್ಲಿ ಈ ರೀತಿ ವರ್ಗೀಕರಿಸಬಹುದು

• ಮಧ್ಯಮ ಆದಾಯ ಗುಂಪು 1 (MIG1): 6 ಲಕ್ಷದಿಂದ 12 ಲಕ್ಷ ರೂ

• ಮಧ್ಯಮ ಆದಾಯ ಗುಂಪು 2 (MIG2): 12 ಲಕ್ಷದಿಂದ 18 ಲಕ್ಷ ರೂ

• ಕಡಿಮೆ ಆದಾಯದ ಗುಂಪು (ಎಲ್‌ಐಜಿ) : 3 ಲಕ್ಷದಿಂದ 6 ಲಕ್ಷ ರೂ

• ಆರ್ಥಿಕವಾಗಿ ಹಿಂದುಳಿದ ವರ್ಗ (EWS): 3 ಲಕ್ಷದವರೆಗೆ

ಯೋಜನೆಯಲ್ಲಿ ಎರಡು ವಿಧ

Recent News


Leave a Comment: