ಯು ಕೆ ಎಲೆಕ್ಷನ್ ನಲ್ಲಿ ಹೀನಾಯ ಸೋಲು; ರಿಶಿ ಸುನಕ್ ಫಸ್ಟ್ ರಿಯಾಕ್ಷನ್

ಸುದ್ದಿಗಳು News

Posted by vidyamaana on 2024-07-05 12:01:03 |

Share: | | | | |


ಯು ಕೆ ಎಲೆಕ್ಷನ್ ನಲ್ಲಿ ಹೀನಾಯ ಸೋಲು; ರಿಶಿ ಸುನಕ್ ಫಸ್ಟ್ ರಿಯಾಕ್ಷನ್

ಲಂಡನ್ : ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ(UK Election) ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 14ವರ್ಷಗಳ ಬಳಿಕ ಲೇಬರ್ ಪಕ್ಷ ಜಯಭೇರಿ ಭಾರಿಸಿದೆ. ಲೇಬರ್‌ ಪಕ್ಷ 360 ಸ್ಥಾನಗಳನ್ನು ಗಳಿಸಿ ಮ್ಯಾಜಿಕ್‌ ನಂಬರ್‌ 320 ಅನ್ನು ದಾಟುವ ಮೂಲಕ ಸರ್ಕಾರ ರಚನೆಗೆ ಮುಂದಾಗಿದೆ.

ಹಾಲಿ ಪ್ರಧಾನಿ ರಿಷಿ ಸುನಕ್‌(Rishi Sunak) ಅವರ ಪಕ್ಷ ಕನ್ಸರ್ವೇಟಿವ್‌ ಪಕ್ಷ ಭಾರೀ ಹಿನ್ನಡೆ ಅನುಭವಿಸಿದ್ದು, ಲೇಬರ್‌ ಪಕ್ಷದ ಕೀರ್‌ ಸ್ಟಾರ್ಮರ್‌(Keir Starmer) ಅವರಿಗೆ ಪ್ರಧಾನಿ ಗಿಟ್ಟಿದೆ. ಇನ್ನು


ಫಲಿತಾಂಶ ಹೊರ ಬೀಳುತ್ತಿದ್ದಂತೆ ರಿಶಿ ಸುನಕ್‌ ಪ್ರತಿಕ್ರಿಯಿಸಿದ್ದು, ಈ ಸೋಲಿನ ಜವಾಬ್ದಾರಿಯನ್ನು ತಾವು ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಲೇಬರ್‌ ಪಕ್ಷದ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಲೇಬರ್ ಪಕ್ಷವು ಈ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದೆ ಮತ್ತು ಅವರ ವಿಜಯಕ್ಕಾಗಿ ಅಭಿನಂದಿಸಲು ನಾನು ಸರ್ ಕೀರ್ ಸ್ಟಾರ್ಮರ್‌ಗೆ ಕರೆ ಮಾಡಿದ್ದೇನೆ. ಇಂದು, ಅಧಿಕಾರವು ಶಾಂತಿಯುತವಾಗಿ ಮತ್ತು ಕ್ರಮಬದ್ಧವಾಗಿ ಅಧಿಕಾರ ಹಸ್ತಾಂತರಗೊಂಡಿದೆ. ಎಲ್ಲಾ ಕಡೆಯಿಂದಲೂ ಸದ್ಭಾವನೆ ಇರುತ್ತದೆ. ಇದು ನಮ್ಮ ದೇಶದ ಸ್ಥಿರತೆ ಮತ್ತು ಭವಿಷ್ಯದ ಬಗ್ಗೆ ನಮಗೆಲ್ಲರಿಗೂ ವಿಶ್ವಾಸವನ್ನು ನೀಡುವ ವಿಷಯವಾಗಿದೆ ಎಂದು ಹೇಳಿದ್ದಾರೆ.

ಪಕ್ಷಗಳ ಬಲಾಬಲ ಹೇಗಿದೆ?

ಇನ್ನು ಕಣದಲ್ಲಿರುವ ಪಕ್ಷಗಳ ಬಲಾಬಲ ಹೇಗಿದೆ ಎಂದು ನೋಡುವುದಾದರೆ,

ಕನ್ಸರ್ವೇಟಿವ್‌ ಪಕ್ಷ ಕೇವಲ – 81

ಲೇಬರ್ ಪಾರ್ಟಿ - 360

ಸ್ಕಾಟಿಷ್ ನ್ಯಾಶನಲಿಸ್ಟ್ ಪಾರ್ಟಿ (SNP) - 3

ಲಿಬರಲ್ ಡೆಮೋಕ್ರಾಟ್‌ಗಳು - 49

ರಿಫಾರ್ಮ್‌ ಯುಕೆ - 3

ಇತರೆ - 1

ಎಕ್ಸಿಟ್‌ ಪೋಲ್‌ ಭವಿಷ್ಯ ಏನು?


ಇನ್ನು ಚುನಾವಣಾ ಪೂರ್ವ ಸಮೀಕ್ಷೆಗಳು ಕನ್ಸರ್ವೇಟಿವ್‌ ಪಕ್ಷ ಈ ಬಾರಿ ಸೋಲುವುದು ಖಚಿತ ಎಂಬ ಭವಿಷ್ಯ ನುಡಿದಿತ್ತು. ಈ ಬಾರಿ ಕನ್ಸರ್ವೇಟಿಕವ್‌ ಪಕ್ದ್ ಸ್ಥಾನ 131ಕ್ಕೆ ಇಳಿಯಲಿದ್ದು, ಲೇಬರ್‌ ಪಕ್ಷ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾಕ್ಕೆ ಬರಲಿದೆ ಎಂದು ಹೇಳಿದೆ. ಹಾಗಿದ್ದರೆ ಎಕ್ಸಿಟ್‌ ಪೋಲ್‌ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ದೊರೆಯಲಿದೆ ನೋಡೋಣ.


ಕನ್ಸರ್ವೇಟಿವ್‌: 131

ಲೇಬರ್ ಪಕ್ಷ: 410

ಲಿಬರಲ್ ಡೆಮೋಕ್ರಾಟ್‌ಗಳು: 61

ಸ್ಕಾಟಿಷ್ ನ್ಯಾಶನಲಿಸ್ಟ್ ಪಾರ್ಟಿ (SNP): 10

ರಿಫಾರ್ಮ್ ಯುಕೆ: 13

ಪ್ಲೈಡ್ ಸಿಮ್ರು: 4

ಗ್ರೀನ್ಸ್: 2

ರಿಷಿ ಸುನಕ್‌ಗೆ ಆಡಳಿತ ವಿರೋಧಿ ಅಲೆ

44 ವರ್ಷದ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, 61 ವರ್ಷದ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿಗಿಂತ ಕಳೆದ 6 ವಾರಗಳ ಪ್ರಚಾರದಲ್ಲಿ ಅತ್ಯಂತ ಹಿಂದುಳಿದಿದ್ದಾರೆ. ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ನಾದ್ಯಂತ 650 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ, ಮೊದಲ ಬಾರಿಗೆ ಪೋಸ್ಟ್ ಸಿಸ್ಟಮ್‌ನಲ್ಲಿ ಬಹುಮತಕ್ಕೆ 326 ಮತಗಳ ಅಗತ್ಯವಿದೆ.

 Share: | | | | |


ಫೆ. 12 ರಿಂದ 23 ವರೆಗೆ ಬಜೆಟ್ ಅಧಿವೇಶನ: ನೂತನ ಶಾಸಕರಿಗೆ ಬಜೆಟ್ ಬಗ್ಗೆ ತರಬೇತಿ: UT ಖಾದರ್

Posted by Vidyamaana on 2024-02-07 14:30:51 |

Share: | | | | |


ಫೆ. 12 ರಿಂದ 23 ವರೆಗೆ ಬಜೆಟ್ ಅಧಿವೇಶನ: ನೂತನ ಶಾಸಕರಿಗೆ ಬಜೆಟ್ ಬಗ್ಗೆ ತರಬೇತಿ: UT ಖಾದರ್

ರಾಯಚೂರು : ಫೆ. 12 ರಿಂದ 23 ವರೆಗೆ ಬಜೆಟ್ ಅಧಿವೇಶನ ನಡೆಯಲಿದೆ 12ನೇ ತಾರೀಕು ಜಂಟಿ ಸದನ ಸದನ ಉದ್ದೇಶ ಸಿ ರಾಜ್ಯಪಾಲರು ಮಾತನಾಡಲಿದ್ದಾರೆ ಹಾಗೆ 14ನೇ ತಾರೀಕು ಮುಖ್ಯಮಂತ್ರಿಗಳು ಸರ್ಕಾರದ ಪರವಾಗಿ ಬಜೆಟನ್ನು ಮಂಡಿಸುತ್ತಾರೆ ಎಂದು ರಾಯಚೂರಿನಲ್ಲಿ ಸ್ಪೀಕರ್ ಯುಟಿ ಖಾದರ್ ತಿಳಿಸಿದ್ದಾರೆ.ನಗರದಲ್ಲಿ ಮಾಧ್ಯಮ ಉದ್ದೇಶಿಸಿ ಮಾತನಾಡಿದ ಅವರು, ನೂತನ ಶಾಸಕರಿಗೆ 9ನೇ ತಾರೀಕಿನಿಂದ ಬಜೆಟ್ ಬಗ್ಗೆ ತರಬೇತಿ ನೀಡಲಾಗಿದ್ದು ಇನ್ನೊಂದು ಕಡೆ ಪತ್ರಕರ್ತರಿಗೂ ವರ್ಕ್ ಶಾಪ್ ನಡೆಯಲಿದೆ ಬಹಳಷ್ಟು ಜನ ಭಾಗವಹಿಸುತ್ತಾರೆ ಎಂಬುವ ನಿರೀಕ್ಷೆ ಇದೆ


ಅಧಿವೇಶನ ಸಂದರ್ಭದಲ್ಲಿ ಕೂಡ ಹೆಚ್ಚಿನ ವಿದ್ಯಾರ್ಥಿಗಳು ಬರುತ್ತಾರೆ ಬೆಳಗ್ಗೆನಿಂದ ಮಧ್ಯಾಹ್ನವರೆಗೂ ಬಿಸಿಲಲ್ಲಿ ಕ್ಯೂನಲ್ಲಿ ನಿಂತಿರುತ್ತಾರೆ ಅಧಿವೇಶನ ಪ್ರಾರಂಭ ಆಗದ ಮುಂಚೆಯೇ ಬರುವ ವಿದ್ಯಾರ್ಥಿಗಳಿಗೆ ವಿಧಾನಸೌಧದಲ್ಲಿ ಪ್ರವೇಶ ಇಲ್ಲ ಹಾಗೆ ಅಧಿವೇಶನ ಅಷ್ಟೇ ಅಲ್ಲ ಇಸ್ರೋ, ಕಿದ್ವಾಯ್,ನಿಮಾನ್ಸ್ ಸಂಸ್ಥೆಗಳನ್ನು ನೋಡಬೇಕಾದರೆ ಅನುಮತಿ ಕೂಡ ಸರ್ಕಾರವೇ ಕೊಡುತ್ತದೆ.

ಅಧಿಕಾರಿಗಳ ಕಿತ್ತಾಟ: ರೂಪಾ - ರೋಹಿಣಿ ಸೇರಿ ಮೂವರ ಎತ್ತಂಗಡಿ ಮಾಡಿದ ರಾಜ್ಯರಾಜ್ಯ ಸರ್ಕಾರ.

Posted by Vidyamaana on 2023-02-21 10:48:59 |

Share: | | | | |


ಅಧಿಕಾರಿಗಳ ಕಿತ್ತಾಟ: ರೂಪಾ - ರೋಹಿಣಿ ಸೇರಿ ಮೂವರ ಎತ್ತಂಗಡಿ ಮಾಡಿದ ರಾಜ್ಯರಾಜ್ಯ  ಸರ್ಕಾರ.

ಬೆಂಗಳೂರು: ಉನ್ನತ ಸ್ಥಾನದಲ್ಲಿದ್ದು ಪರಸ್ಪರ ಕಿತ್ತಾಟ ನಡೆಸಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರನ್ನು ಸರ್ಕಾರ ಇದೀಗ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.ಮುಜರಾಯಿ ಇಲಾಖೆ ಆಯುಕ್ತರಾಗಿದ್ದ ಸಿಂಧೂರಿ ಹಾಗೂ ಕರಕುಶಲ ನಿಗಮದ ಎಂಡಿ ರೂಪಾ ಹಾಗೂ ರೂಪ ಪತಿ ಐಎಎಸ್​ ಅಧಿಕಾರಿ ಮನೀಶ್‌ ಮುದ್ಗಲ್‌ ಅವರನ್ನು ಕೂಡ ವರ್ಗಾವಣೆ ಮಾಡಲಾಗಿದೆ.

ರೂಪ ಹಾಗೂ ಸಿಂಧೂರಿಗೆ ಸ್ಥಳವನ್ನು ತೋರಿಸದೆ ವರ್ಗಾಯಿಸಿರುವುದು ಅವರಿಬ್ಬರ ವಿರುದ್ಧ ಶಿಸ್ತುಕ್ರಮ ಜರುಗಿಸಿದೆ. ಮುದ್ಗಲ್‌ ಅವರನ್ನು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎತ್ತಂಗಡಿ ಮಾಡಲಾಗಿದೆ.

ಸ್ಕಾರ್ಪಿಯೋ ಅಪಘಾತಕ್ಕೀಡಾಗಿ ಯುವಕ ಮೃತ್ಯು

Posted by Vidyamaana on 2023-09-26 20:28:29 |

Share: | | | | |


ಸ್ಕಾರ್ಪಿಯೋ ಅಪಘಾತಕ್ಕೀಡಾಗಿ ಯುವಕ ಮೃತ್ಯು

ಲಕ್ನೋ, ಸೆ.26: ಐಷಾರಾಮಿ ಕಾರುಗಳ ಬಗ್ಗೆ ತಪ್ಪಾದ ಭರವಸೆಗಳನ್ನು ನೀಡಿ ಮೋಸ ಎಸಗಿದ್ದಾರೆಂದು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ಮತ್ತು ಇತರ 12 ಮಂದಿಯ ವಿರುದ್ಧ ಉತ್ತರ ಪ್ರದೇಶದ ಖಾನ್ ಪುರದಲ್ಲಿ ವ್ಯಕ್ತಿಯೊಬ್ಬರು ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.


ರಾಜೇಶ್ ಮಿಶ್ರಾ ಎಂಬವರು ದೂರು ನೀಡಿದ್ದು, ತನ್ನ ಮಗ ಡಾ.ಅಪೂರ್ವ ಮಿಶ್ರಾ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು ಅದಕ್ಕೆ ಕಂಪನಿಯ ನಿರ್ಲಕ್ಷ್ಯ ಕಾರಣ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ. ರಾಜೇಶ್ ಮಿಶ್ರಾ ತನ್ನ ಮಗನಿಗೆ 17.40 ಲಕ್ಷ ಮೌಲ್ಯದ ಐಷಾರಾಮಿ ಕಪ್ಪು ಸ್ಕಾರ್ಪಿಯೋ ಕಾರನ್ನು ಗಿಫ್ಟ್ ನೀಡಿದ್ದರು. 2022ರ ಜನವರಿ 14ರಂದು ಮಗ ಮತ್ತು ಆತನ ಸ್ನೇಹಿತರು ಲಕ್ನೋದಿಂದ ಖಾನ್ ಪುರಕ್ಕೆ ಹಿಂತಿರುಗುತ್ತಿದ್ದಾಗ ಮಂಜಿನಲ್ಲಿ ಕಾಣಿಸದೆ ಕಾರು ಅಪಘಾತಕ್ಕೀಡಾಗಿತ್ತು. ಕಾರು ಪಲ್ಟಿ ಹೊಡೆದು ಅದರಲ್ಲಿದ್ದ ತನ್ನ ಏಕೈಕ ಮಗ ಅಪೂರ್ವ ಮಿಶ್ರಾ ಸ್ಥಳದಲ್ಲೇ ಮೃತಪಟ್ಟಿದ್ದ. ಕಾರಿನಲ್ಲಿ ಬೆಲ್ಟ್ ಹಾಕ್ಕೊಂಡಿದ್ದು, ಒಳಗಡೆ ಸೇಫ್ಟಿ ಬ್ಯಾಗ್ ಇದ್ದರೂ ಮಗನ ಜೀವ ಉಳಿಯಲಿಲ್ಲ. ಹೀಗಾಗಿ ಕಾರಿನ ಬಗ್ಗೆ ಕಂಪನಿ ನೀಡಿದ್ದ ಭರವಸೆ ಸುಳ್ಳಾಗಿದೆ. ಸೇಫ್ಟಿ ಇದೆಯೆಂಬ ಕಾರಣಕ್ಕೆ ಈ ಕಾರನ್ನು ಖರೀದಿಸಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


BS6 Mahindra Scorpio: Price, variant-wise features explained


ಕಾರು ಕಂಪೆನಿ ಮತ್ತು ಡೀಲರ್ ಗಳು ಸೇಫ್ಟಿ ಬಗ್ಗೆ ಎಡ್ವರ್ಟೈಸ್ ನೀಡಿದ್ದರಿಂದ ಕಾರು ಖರೀದಿಸಿದ್ದೆ. ಇಲ್ಲದಿದ್ದರೆ ಇಂತಹ ಕಾರು ಖರೀದಿ ಮಾಡುತ್ತಿರಲಿಲ್ಲ. ಅಪಘಾತ ಸಂದರ್ಭದಲ್ಲಿ ಏರ್ ಬ್ಯಾಗ್ ತೆರೆದುಕೊಂಡಿರಲಿಲ್ಲ. ಅದೇ ಕಾರಣದಿಂದ ಮಗನಿಗೆ ತೀವ್ರ ಪೆಟ್ಟಾಗಿತ್ತು. ಕಂಪನಿಯವರು ಸುಳ್ಳು ಭರವಸೆಗಳನ್ನು ನೀಡಿದ್ದಾರೆ ಎಂದು ಖಾನ್ ಪುರದ ಸ್ಥಳೀಯ ಕೋರ್ಟಿನಲ್ಲಿ ರಾಜೇಶ್ ಮಿಶ್ರಾ ದಾವೆ ಹೂಡಿದ್ದರು. ಕೋರ್ಟ್ ಸೂಚನೆಯಂತೆ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಮತ್ತು ಕಂಪನಿಯ ಇತರ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.


ಐಪಿಸಿ ಸೆಕ್ಷನ್ 420(ಮೋಸ), 287(ಮೆಶಿನರಿ ವರ್ಕ್ ನಲ್ಲಿ ನಿರ್ಲಕ್ಷ್ಯ ಮಾಡಿರುವುದು), 304-ಎ( ಸಾವಿಗೆ ಕಾರಣವಾಗಿರುವುದು), 504(ಉದ್ದೇಶಪೂರ್ವಕ ಅಗೌರವ ಸೂಚಿಸಿ ಶಾಂತಿ ಭಂಗ), 506 ಮತ್ತು 102 ಬಿ (ಕ್ರಿಮಿನಲ್ ಕೂಟ ರಚನೆ) ಇತ್ಯಾದಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.

ಮೂಡಿಗೆರೆಯಲ್ಲಿ ಮುಸ್ಲಿಂ ಯುವತಿ ಮನೆಯಲ್ಲಿ ಅಡಗಿ ಕುಳಿತಿದ್ದ ಅಜಿತ್

Posted by Vidyamaana on 2023-05-27 11:36:45 |

Share: | | | | |


ಮೂಡಿಗೆರೆಯಲ್ಲಿ ಮುಸ್ಲಿಂ ಯುವತಿ ಮನೆಯಲ್ಲಿ ಅಡಗಿ ಕುಳಿತಿದ್ದ ಅಜಿತ್

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಣಕಲ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ನೈತಿಕ ಪೊಲೀಸ್ ಗಿರಿ  ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದೆ. ಮುಸ್ಲಿಂ ಯುವತಿಯ ಜೊತೆ ಸ್ನೇಹ ಬೆಳೆಸಿದ ಆರೋಪದಲ್ಲಿ  ಅಜಿತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದ ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದ್ದು, ಯುವತಿಯ ಮನೆಯಲ್ಲೇ ಅಜಿತ್ ಸಿಕ್ಕಿಬಿದ್ದಿದ್ದ. ಯುವತಿಯ ಮನೆಯ ಕಬೋರ್ಡ್​​​ನಲ್ಲಿ ಅವಿತು ಕುಳಿತಿದ್ದ ಎಂಬ ವಿಚಾರ ಬಯಲಾಗಿದೆ.

ಅಜಿತ್ ಕಬೋರ್ಡ್​​​ನಲ್ಲಿ ಅವಿತು ಕುಳಿತಿರುವುದು ಎನ್ನಲಾದ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಯುವತಿಯ ಮನೆಯಲ್ಲಿ ಸಿಕ್ಕಿಬಿದ್ದ ಅಜಿತ್ ಮೇಲೆ ಯುವಕರ ಗುಂಪು ಹಲ್ಲೆ ಮಾಡಿತ್ತು. ಅನ್ಯಕೋಮಿನ ಯುವತಿಯೊಂದಿಗೆ ಸ್ನೇಹ ಮಾಡಿದ್ದಕ್ಕೆ ತನ್ನ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದ್ದ.

ಈ ಮಧ್ಯೆ ಅಜಿತ್ ವಿರುದ್ಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಅಜಿತ್​ಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಲಯಾಳಂ ಹಿರಿಯ ನಟ ಮಾಮುಕೋಯ ನಿಧನ

Posted by Vidyamaana on 2023-04-26 09:07:29 |

Share: | | | | |


ಮಲಯಾಳಂ ಹಿರಿಯ ನಟ ಮಾಮುಕೋಯ ನಿಧನ

ಕೋಝಿಕೋಡ್: ಹೃದಯಾಘಾತದಿಂದ ಕೋಝಿಕೋಡ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಲಯಾಳಂ ಖ್ಯಾತ ನಟ ಮಾಮುಕೋಯ ಬುಧವಾರ ನಿಧನರಾದರು. 

ಸೋಮವಾರ ಮಲಪ್ಪುರಂನ ವಂಡೂರಿನಲ್ಲಿ ಫುಟ್ಬಾಲ್ ಪಂದ್ಯಾವಳಿಯ ವೇಳೆ ಮಾಮುಕೋಯ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನುಕೋಝಿಕೋಡ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು

ಅಡ್ಯಾರ್ ಬಳಿ ಬೈಕ್ ಅಪಘಾತ : ವಿಟ್ಲ ಮೂಲದ ಕಾರ್ತಿಕ್ ಮೃತ್ಯು.!

Posted by Vidyamaana on 2023-02-11 04:31:42 |

Share: | | | | |


ಅಡ್ಯಾರ್ ಬಳಿ ಬೈಕ್ ಅಪಘಾತ : ವಿಟ್ಲ ಮೂಲದ ಕಾರ್ತಿಕ್ ಮೃತ್ಯು.!

ವಿಟ್ಲ: ಬೈಕ್ ಅಪಘಾತ ಸಂಭವಿಸಿ ವಿಟ್ಲ ಮೂಲದ ಯುವಕನೋರ್ವ ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.ಮೃತ ಯುವಕನನ್ನು ಮಾಣಿಲ ಗ್ರಾಮದ ಪಕಳಕುಂಜ ಬಾಳೆಕಾನ ನಿವಾಸಿ ಗೋಪಾಲಕೃಷ್ಣ ಮಣಿಯಾನಿ ಮತ್ತು ಸುಧಾಮಣಿ ದಂಪತಿಗಳ ಪುತ್ರ ಕಾರ್ತಿಕ್ ಮಣಿಯಾನಿ (24) ಎಂದು ಗುರುತಿಸಲಾಗಿದೆ.

ಕಾರ್ತಿಕ್ ಮಂಗಳೂರಿನಲ್ಲಿ ಡೆಕೋರೇಷನ್ ಕೆಲಸ ನಿರ್ವಹಿಸುತ್ತಿದ್ದು, ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅಡ್ಯಾರ್ ಬಳಿ ಅಪಘಾತ ನಡೆದಿದೆ ಎನ್ನಲಾಗಿದೆ.

ಮೃತರು ತಂದೆ, ತಾಯಿ, ಓರ್ವ ಸಹೋದರ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ

Recent News


Leave a Comment: