ಎಫ್‌ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸುದ್ದಿಗಳು News

Posted by vidyamaana on 2024-07-05 17:03:24 |

Share: | | | | |


ಎಫ್‌ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಳ್ತಂಗಡಿ : ಅಕ್ರಮ ಕಲ್ಲು ಕೊರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಗೆ ಹೋಗಿ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ಹಾಗೂ ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಹಾಕಿದ್ದ ಅರ್ಜಿಯನ್ನು ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ಇಂದು ವಜಾಗೊಳಿಸಿದೆ.

ಎರಡು ಪ್ರಕರಣವನ್ನು ರದ್ದು ಕೋರಿ ಹಾಕಿದ ಅರ್ಜಿಯ ಬಗ್ಗೆ ಜೂ. 5 ರಂದು(ಇಂದು) ಬೆಂಗಳೂರಿನ ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಕೋರ್ಟ್ ಎರಡು ಪ್ರಕರಣವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ ಹಾಗೂ ಈ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರದೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

 Share: | | | | |


Alert :ನಿಮ್ಮ ಮೇಲೆ ಗುಪ್ತಚರ ಕಣ್ಣು - ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡುವವರು ತಪ್ಪದೇ ಇದನ್ನೊಮ್ಮೆ ಓದಿ

Posted by Vidyamaana on 2024-06-23 13:15:57 |

Share: | | | | |


Alert :ನಿಮ್ಮ ಮೇಲೆ ಗುಪ್ತಚರ ಕಣ್ಣು - ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡುವವರು ತಪ್ಪದೇ ಇದನ್ನೊಮ್ಮೆ ಓದಿ

ಬೆಂಗಳೂರು : ನಮ್ಮ ದೇಶದಲ್ಲಿ ವಯಸ್ಕರ ಅಶ್ಲೀಲ ವಿಡಿಯೋಗಳನ್ನು ನೋಡುವುದು ನಿಷೇಧಿಸಲಾಗಿದೆ, ಆದರೆ ಇದರ ಹೊರತಾಗಿಯೂ, ಅಂತಹ ವಿಷಯವು ಅಂತರ್ಜಾಲದಲ್ಲಿ ಲಭ್ಯವಿದೆ ಮತ್ತು ಅನೇಕ ಜನರು ಅಂತಹ ವಿಷಯವನ್ನು ರಹಸ್ಯವಾಗಿ ನೋಡುತ್ತಾರೆ. ಅನೇಕ ಜನರು ವಯಸ್ಕರ ವಿಷಯವನ್ನು ಬ್ರೌಸರ್ನ ಖಾಸಗಿ ಮೋಡ್ನಲ್ಲಿ ನೋಡುತ್ತಾರೆ ಮತ್ತು ಅವರು ಇದನ್ನು ಮಾಡುವುದನ್ನು ಯಾರೂ ನೋಡುತ್ತಿಲ್ಲ ಎಂದು ಭಾವಿಸುತ್ತಾರೆ, ಆದರೆ ನೀವು ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಿರುವಾಗ ಸಾವಿರಾರು ಎಐ ಬಾಟ್ ಗಳು ನಿಮ್ಮ ಮೇಲೆ ಕಣ್ಣಿಡುತ್ತವೆ.

ನಿಮ್ಮ ಮೇಲೆ ಗುಪ್ತಚರ ಕಣ್ಣು:

ನಿಮ್ಮ ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೀವು ನೋಡಿದಾಗಲೆಲ್ಲಾ, ನಿಮ್ಮ ಮೊಬೈಲ್ ಸೇವಾ ಆಪರೇಟರ್ ಮೊದಲು ಅದರ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ. ಇದರೊಂದಿಗೆ, ನಿಮ್ಮ ಫೋನ್ನಲ್ಲಿರುವ ಅಪ್ಲಿಕೇಶನ್ಗಳು ಸಹ ನಿಮ್ಮ ಮೇಲೆ ಕಣ್ಣಿಟ್ಟಿವೆ. ಫೋನ್ ನಲ್ಲಿರುವ ಅಪ್ಲಿಕೇಶನ್ ಗಳು ಈ ರೀತಿಯ ವಿಷಯವನ್ನು ನೋಡುವಾಗ ಗುಪ್ತಚರ ಸಂಸ್ಥೆಯಂತೆ ನಿಮ್ಮ ಮೇಲೆ ಕಣ್ಣಿಡುತ್ತವೆ. ಅಂದರೆ, ನಿಮ್ಮ ಸಂಪೂರ್ಣ ಬ್ರೌಸಿಂಗ್ ಇತಿಹಾಸವನ್ನು ಆ ಸಮಯದಲ್ಲಿ ಟ್ರ್ಯಾಕ್ ಮಾಡಲಾಗುತ್ತದೆ.

ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳನ್ನು ಸಹ ಸ್ಕ್ಯಾನ್ ಮಾಡಲಾಗುತ್ತದೆ:

ಲಕ್ಷದ್ವೀಪದಿಂದ ಮಂಗಳೂರಿಗೆ ಬಂತು ಹೈಸ್ಪೀಡ್ ಪ್ಯಾಸೆಂಜರ್ ಹಡಗು: ಟಿಕೆಟ್ ದರ ಕೇಳಿದ್ರೆ ಅಚ್ಚರಿ ಪಡ್ತೀರಾ

Posted by Vidyamaana on 2024-05-03 21:42:15 |

Share: | | | | |


ಲಕ್ಷದ್ವೀಪದಿಂದ ಮಂಗಳೂರಿಗೆ ಬಂತು ಹೈಸ್ಪೀಡ್ ಪ್ಯಾಸೆಂಜರ್ ಹಡಗು: ಟಿಕೆಟ್ ದರ ಕೇಳಿದ್ರೆ ಅಚ್ಚರಿ ಪಡ್ತೀರಾ

ಕೋವಿಡ್ 19 ಸಾಂಕ್ರಾಮಿಕ ರೋಗದ ನಂತರ ಸ್ಥಗಿತಗೊಂಡಿದ್ದ ಮಂಗಳೂರಿನಿಂದ ಲಕ್ಷದ್ವೀಪ ಪ್ರಯಾಣಿಕ ಹಡಗು ಪುನರಾರಂಭಗೊಂಡಿದೆ. ಇದರ ಅಂಗವಾಗಿ, ಲಕ್ಷದ್ವೀಪದಿಂದ ಮಂಗಳೂರಿನ ಹಳೆ ಬಂದರಿಗೆ ಮೊದಲ ಹೈಸ್ಪೀಡ್ ಪ್ರಯಾಣಿಕ ಹಡಗು ಎಂಎಸ್‌ವಿ ಪ್ಯಾರಾಲಿ ಮೇ 2ರಂದು ಗುರುವಾರ ಆಗಮಿಸಿದೆ.ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಯಾಣಿಕ ಹಡಗು ಸಂಚಾರ ಸ್ಥಗಿತಗೊಂಡಿತ್ತು. ಸೇವೆಯನ್ನು ಪುನರಾರಂಭಿಸುವ ಭರವಸೆ ಪ್ರವಾಸಿಗರಲ್ಲಿತ್ತು.


ಲಕ್ಷದ್ವೀಪದಿಂದ ಹಳೆ ಬಂದರಿಗೆ 150 ಪ್ರಯಾಣಿಕರು, 8 ಕಾರ್ಮಿಕರು ಮತ್ತು 3 ಸಿಬ್ಬಂದಿ ಪ್ರಯಾಣಿಕ ಹಡಗಿನಲ್ಲಿ ಬಂದರು. ಮಾಜಿ ಶಾಸಕ ಜೆ.ಆರ್.ಲೋಬೊ ಬಂದರಿನಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದರು.

ಈ ಹಡಗು ಶನಿವಾರ ಲಕ್ಷದ್ವೀಪಕ್ಕೆ ಮರಳಲಿದೆ. ಈ ಮೊದಲು ಲಕ್ಷದ್ವೀಪದಿಂದ ಹಳೆ ಬಂದರಿಗೆ ಹಡಗಿನ ಪ್ರಯಾಣಕ್ಕೆ 13 ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು ಆದರೆ ಈಗ ಹೈ-ಸ್ಪೀಡ್ ಹಡಗು ಕೇವಲ 7 ಗಂಟೆ ತೆಗೆದುಕೊಳ್ಳುತ್ತದೆ. ಪ್ರಯಾಣದ ದರ 450 ರೂ. ಇದೆ.

ಸಿಎಂ-ಡಿಸಿಎಂ ನೋಡಿದ್ರೆ ಒಂದು ವರ್ಷ ಯಾರೂ ಅನುದಾನ ಕೇಳ್ಬೇಡಿ ಹೇಳ್ತಿದ್ದಾರೆ

Posted by Vidyamaana on 2024-03-21 20:48:00 |

Share: | | | | |


ಸಿಎಂ-ಡಿಸಿಎಂ ನೋಡಿದ್ರೆ ಒಂದು ವರ್ಷ ಯಾರೂ ಅನುದಾನ ಕೇಳ್ಬೇಡಿ ಹೇಳ್ತಿದ್ದಾರೆ

ಪುತ್ತೂರು: ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದು ಸುಮಾರು 300 ದಿವಸಗಳು ಆಗಿದ್ದು ಈ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ತಾವು ಚುನಾವಣೆ ಸಂದರ್ಭ ಘೋಷಿಸಿದ ಗ್ಯಾರಂಟಿಗಳಿಗೋಸ್ಕರ ಒಂದು ವರ್ಷದ ಅವಧಿಗೆ ಯಾವುದೇ ಅಭಿವೃದ್ಧಿ ಅನುದಾನ 2023-24ರ ಅವಧಿಗೆ ದೊರೆಯುವುದಿಲ್ಲ ಎಂದಿದ್ದಾರೆ. ಆದ್ದರಿಂದ ರಾಜ್ಯದ ಎಲ್ಲಾ ಶಾಸಕರು ಸಹಕಾರ ಮಾಡಬೇಕು ಎಂದು ವಿನಂತಿಸಿರುವ ಈ ಸಂದರ್ಭದಲ್ಲಿ ಬಹಳಷ್ಟು ಕಾಂಗ್ರೇಸ್ ಪಾರ್ಟಿಯ ಶಾಸಕರು ಅಪಸ್ವರ ಎಬ್ಬಿಸಿರುವ ವರದಿಯನ್ನು ಪತ್ರಿಕೆಗಳಲ್ಲಿ ನೋಡಿದ್ದೇವೆ. ಆದರೆ ಪುತ್ತೂರಿನ ಶಾಸಕರು, ಪುತ್ತೂರಿಗೆ ಹಣದ ಹೊಳೆಯೇ ಹರಿದು ಬಂದಿದೆ. ಶಿಲಾನ್ಯಾಸ ಮಾಡಲು ಸಮಯ ಇಲ್ಲದಷ್ಟು ಅನುದಾನ ಬಂದಿದೆ ಎಂದು ಹೇಳುತ್ತಾ ಪುತ್ತೂರಿನ ಪ್ರಜ್ಞಾವಂತ ಮತದಾರರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಪುತ್ತೂರಿಗೆ 1474.29 ಕೋಟಿ ಅನುದಾನ ಬಂದಿದೆ ಎಂದು ಬ್ಯಾನ‌ರ್ ಬರೆದು ಬಿಜೆಪಿ ಕಾರ್ಯಕರ್ತನ ಮನೆಗೆ ಚೆಂಡೆಯ ಶಬ್ದದೊಂದಿಗೆ ನುಗ್ಗಿ ದಾಂಧಲೆ ಎಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಹಾಲಿ ಶಾಸಕರು ಪ್ರಕಟಿಸಿರುವ ಬ್ಯಾನರ್‌ನಲ್ಲಿ ಮತ್ತು ಅವರು ಭಾಷಣಗಳಲ್ಲಿ ಘೋಷಿಸುವ ಅನುದಾನಗಳು ಪ್ರಸ್ತುತ ಅವರ ಅವಧಿಯಲ್ಲಿ ಬಿಡುಗಡೆಗೊಂಡ ಅನುದಾನಗಳ ಮೊತ್ತ ಎಷ್ಟು? ಹಿಂದಿನ ಭಾಜಪಾ ಸರಕಾರ ಇದ್ದಾಗ ಬಿಡುಗಡೆಗೊಂಡ ಅನುದಾನಗಳು ಎಷ್ಟು? ಎಂಬುದನ್ನು ಮರೆತು ಎಲ್ಲವೂ ನಮ್ಮದೇ ಸರಕಾರ, ನಾನೇ ಮಾಡಿದೆ ಎನ್ನುವ ರೀತಿಯಲ್ಲಿ ಪ್ರಕಟಿಸಿದ್ದಾರೆ. ಅವರು ಬ್ಯಾನರ್ ನಲ್ಲಿ ಹಾಕಿರುವ ಅನುದಾನ ಯಾವ ವರ್ಷ? ಯಾವ ಸರಕಾರ? ಯಾವ ಶಾಸಕರ ಅವಧಿಯಲ್ಲಿಲ್ಲಿ ಬಂತು ಎಂಬುದರ ವಿವರವನ್ನು ದಾಖಲೆ ಸಮೇತವಾಗಿ ಈ ಮೂಲಕ ನೀಡುತ್ತಿದ್ದೇವೆ ಎಂದ ಅವರು ಸುಳ್ಳು ಹೇಳುತ್ತಿರುವ ರೂ.1474.29 ಕೋಟಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿ ರೂ.1219 ಕೋಟಿ ನಮ್ಮ ಸರಕಾರದ ಯೋಜನೆಗಳು. ಅಲ್ಲದೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಡದ ನಮ್ಮ ಬಿಜೆಪಿ ಶಾಸಕರಿಂಸ ಸುಳ್ಯ ಕ್ಷೇತ್ರದ ಕೊಯಿಲಾ ಪಶು ವೈದ್ಯಕೀಯ ಕಾಲೇಜು, ನೀರಿನ ಸರಬರಾಜು ಮತ್ತು ಕೊಯಿಲಾ ಸಬ್ ಸ್ಟೇಷನ್ ಸೇರಿ 483 ಕೋಟಿಯ ಯೋಜನೆಯನ್ನು ಸೇರಿಸಿರುತ್ತಾರೆ.ಇದು ನಮ್ಮ ಹಿಂದಿನ ಸರಕಾರದ ಸಾಧನೆ. ಇವೆರಡನ್ನು ಕಾಂಗ್ರೆಸ್ ನ ದಾಸಕರ ಪ್ರಕಟಿಸಿರುವ ಅನುದಾನಗಳಲ್ಲಿ ಕಡಿತಗೊಳಿಸಿದರೆ ಕೇವಲ 104 ಕೋಟಿ ಇವರ ಅವಧಿಯದ್ದು ಕಾಣಬಹುದು. ಆದರೆ ಇದು ಅವರ ಬರೀ ಆಶ್ವಾಸನೆಯೂ ಎಂಬುದನ್ನು ಕಾಲವೇ ಉತ್ತರಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ ಉಪಸ್ಥಿತರಿದ್ದರು.

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ಭಕ್ತರಿಂದ ಸಮರ್ಪಣೆಯಾದ ಹೊರೆಕಾಣಿಕೆ

Posted by Vidyamaana on 2024-04-21 20:43:32 |

Share: | | | | |


ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ಭಕ್ತರಿಂದ ಸಮರ್ಪಣೆಯಾದ ಹೊರೆಕಾಣಿಕೆ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವೈಭವದ ಬ್ರಹ್ಮಕಲಶೋತ್ಸವಕ್ಕೆ ಶನಿವಾರ ಸಂಜೆ ಹೊರೆ ಕಾಣಿಕೆ ಸಮರ್ಪಣೆ ಮೂಲಕ ಚಾಲನೆ ನೀಡಲಾಯಿತು.

ಶನಿವಾರ ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಹೊರೆಕಾಣಿಕೆ ಮೆರವಣಿಗೆ ಶ್ರೀ ದೇವಸ್ಥಾನದಕ್ಕೆ ತೆರಳಿತು. 

ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ತೆಂಗಿಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗೆ ಜಾಮೀನು ರಹಿತ ವಾರೆಂಟ್ ಜಾರಿ

Posted by Vidyamaana on 2024-02-10 22:03:27 |

Share: | | | | |


ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗೆ ಜಾಮೀನು ರಹಿತ ವಾರೆಂಟ್ ಜಾರಿ

ಬೆಂಗಳೂರು : ಮೇಕೆದಾಟು ಪಾದಯಾತ್ರೆ ವೇಳೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಕೋರ್ಟ್ ಗೆ ನಿರಂತರವಾಗಿ ಗೈರಾಗಿದ್ದರ ಹಿನ್ನಲೆಯಲ್ಲಿ, ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಲಾಗಿದೆ.ಬಿಜೆಪಿ ಸರ್ಕಾರದ ಅವಧಿಯಲ್ಲಿ, ಕಾಂಗ್ರೆಸ್ ಪಕ್ಷದಿಂದ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆಯನ್ನು ನಡೆಸಲಾಗಿತ್ತು. ಕೋವಿಡ್ ಸಂದರ್ಭದಲ್ಲಿಯೇ ಪಾದಯಾತ್ರೆ ಮಾಡಿದ್ದಂತ ಕಾಂಗ್ರೆಸ್ ನಾಯಕರ ವಿರುದ್ಧ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿತ್ತು.


ಇದೇ ರೀತಿಯಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿರುದ್ಧವೂ ದೂರು ದಾಖಲಾಗಿತ್ತು. ಈ ಸಂಬಂಧ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಗೆ ಅವರು ಹಾಜರಾಗದೇ ನಿರಂತರವಾಗಿ ಗೈರಾಗಿದ್ದರು. ಪೊಲೀಸರ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಬಳಿಕ ಕೋರ್ಟ್ ನಿಂದ ಸಮನ್ಸ್ ಜಾರಿಯಾಗಿತ್ತು. ಆದರೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೋರ್ಟ್ ವಿಚಾರಣೆ ಹಾಜರಾಗಿರಲಿಲ್ಲ.ಈ ಹಿನ್ನಲೆಯಲ್ಲಿ ರಾಮಲಿಂಗಾರೆಡ್ಡಿ ವಿರುದ್ಧ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರಾದಂತ ಜೆ.ಪ್ರೀತಂ ಅವರು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿ ಆದೇಶಿಸಿದ್ದಾರೆ.

ವಸಂತ ಬಂಗೇರ ಅಂತ್ಯಕ್ರಿಯೆ: ಪುತ್ರಿಯಿಂದ ಅಗ್ನಿಸ್ಪರ್ಶ

Posted by Vidyamaana on 2024-05-10 07:42:12 |

Share: | | | | |


ವಸಂತ ಬಂಗೇರ ಅಂತ್ಯಕ್ರಿಯೆ: ಪುತ್ರಿಯಿಂದ ಅಗ್ನಿಸ್ಪರ್ಶ

ಬೆಳ್ತಂಗಡಿ : ಬುಧವಾರ ನಿಧನರಾಗಿದ್ದ ಇಲ್ಲಿನ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಕುವೆಟ್ಟು ಗ್ರಾಮದ ಕೇದೆ ಮನೆತನದ ಜಾಗದಲ್ಲಿ ಗುರುವಾರ ಸಂಜೆ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ವಸಂತ ಬಂಗೇರ ಅವರ ಕಿರಿಯ ಮಗಳು ಬಿನುತಾ ಬಂಗೇರ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

Recent News


Leave a Comment: