ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಸುದ್ದಿಗಳು News

Posted by vidyamaana on 2024-07-08 14:36:42 |

Share: | | | | |


ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಬೆಂಗಳೂರು : ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ದಿಯಾ ಮಂಡೋಲ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.ದಿಯಾ ಮಂಡೋಲ್ ಪಶ್ಚಿಮ ಬಂಗಾಳ‌ ಮೂಲದವಳಾಗಿದ್ದು, ಮದರ್ ಥೆರೆಸಾ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದಳು.

ಮೂರು ದಿನಗಳ ಹಿಂದೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ದಿಯಾ ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಾಸ್ಟೆಲ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹಪಾಠಿಗಳು ರೂಮಿಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

 Share: | | | | |


ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ ನಿಧನ

Posted by Vidyamaana on 2023-07-18 01:50:33 |

Share: | | | | |


ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ ನಿಧನ

ಬೆಂಗಳೂರು: ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಉಮ್ಮನ್ ಚಾಂಡಿ (73) ನಿಧನರಾಗಿದ್ದಾರೆ.


ಕ್ಯಾನ್ಸರ್ ನಿಂದ ಬಳಲುತ್ತಿದ್ದ ಉಮ್ಮನ್ ಚಾಂಡಿ ಇಂದು(ಜುಲೈ 18) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಉಮ್ಮನ್ ಚಾಂಡಿ ನಿಧನಕ್ಕೆ ಕೇರಳ ಹಾಲಿ ಸಿಎಂ ಪಿಣರಾಯಿ ವಿಜಯನ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.


ಉಮ್ಮನ್ ಚಾಂಡಿ ಅವರು 1943, ಅಕ್ಟೋಬರ್ 31ರಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಕುಮಾರಕೋಮ್ ನಲ್ಲಿ ಜನಿಸಿದ್ದು, ಪುತ್ತುಪಲ್ಲಿಯ ಸೇಂಟ್ ಜಾರ್ಜ್ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿ ಬಳಿಕ ಕೊಟ್ಟಾಯಂನ ಸಿಎಮ್ಎಸ್ ಕಾಲೇಜು ಮತ್ತು ಚಂಗನಾಸ್ಸೆರಿಯ ಸೇಂಟ್ ಬರ್ಚ್ಮನ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಎರ್ನಾಕುಲಂನ ಸರ್ಕಾರಿ ಕಾನೂನು ಕಾಲೇಜಿನಿಂದ ಎಲ್ಎಲ್ಬಿ ಪದವಿ ಪೂರೈಸಿದ್ದರು.


ಕೇರಳ ವಿದ್ಯಾರ್ಥಿ ಒಕ್ಕೂಟದ ಮೂಲಕ ತಮ್ಮ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ 1967 ರಲ್ಲಿ ಕೇರಳ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷರಾದ್ದರು. ಹೀಗೆ ವಿದ್ಯಾರ್ಥಿ ಜೀವನದಲ್ಲಿ ರಾಜಕೀಯದತ್ತ ಆಕರ್ಷಿತರಾದ ಉಮ್ಮನ್ ಚಾಂಡಿ ಅವರು ಕಾಂಗ್ರೆಸ್ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಉಮ್ಮನ್ ಚಾಂಡಿ 1969 ರಲ್ಲಿ ಯುವ ಕಾಂಗ್ರೆಸ್ ನ ರಾಜ್ಯಾಧ್ಯಕ್ಷರಾದ್ದರು.

ಪುತ್ತೂರುದ ಪಿಲಿಗೊಬ್ಬು ದ ಇನ್ವಿಟೇಷನ್ ಬಿಡುಗಡೆ

Posted by Vidyamaana on 2023-09-30 07:47:25 |

Share: | | | | |


ಪುತ್ತೂರುದ ಪಿಲಿಗೊಬ್ಬು ದ ಇನ್ವಿಟೇಷನ್ ಬಿಡುಗಡೆ

ಪುತ್ತೂರು: ಅ.22 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಪುತ್ತೂರು ವಿಜಯ ಸಾಮ್ರಾಟ್ ವತಿಯಿಂದ ನಡೆಯಲಿರುವ ಪುತ್ತೂರುದ ಪಿಲಿಗೊಬ್ಬು-2023" ರ ಆಮಂತ್ರಣ ಪತ್ರಿಕೆ ಬಿಡುಗಡೆ ಗುರುವಾರ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಡಾ.ನರಸಿಂಹ ಕಾನಾವು ಜಂಟಿಯಾಗಿ ಆಮಂತ್ರಣ ಪತ್ರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಈ ಹುಲಿವೇಷ ಕುಣಿತ, ಹಾಗೆಯೇ ಫುಡ್ ಫೆಸ್ಟ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದರು.ಡಾ.ನರಸಿಂಹ ಕಾನಾವು ಮಾತನಾಡಿ, ನಮ್ಮ ಜಿಲ್ಲೆಯ ಹೆಮ್ಮೆಯ ಜಾನಪದ ಕಲೆ ಹುಲಿ ಕುಣಿತ ಕಾರ್ಯಕ್ರಮ ಎಲ್ಲರ ಮನ ಗೆಲ್ಲಲಿ ಎಂದರು.


ಚರ್ಮರೋಗ ತಜ್ಞರಾದ ಡಾ.ನರಸಿಂಹ ಶರ್ಮ ಕಾನಾವುರವರು ಮಾತನಾಡಿ, ಜಿಲ್ಲೆಯ ಜನಪದ ಕಾರ್ಯಕ್ರಮವೆನಿಸಿದ ಈ ಪಿಲಿಗೊಬ್ಬು ಸಂಭ್ರಮವನ್ನು ಎಲ್ಲರೂ ಆನಂದಿಸುವಂತಾಗಲಿ ಮಾತ್ರವಲ್ಲ ಈ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ಯಶಸ್ವಿಯಾಗಲಿ. ಪುತ್ತೂರಿನಲ್ಲಿ ವಿಜಯ ಸಾಮ್ರಾಟ್ ವತಿಯಿಂದ ಪ್ರಥಮ ಬಾರಿಗೆ ನಡೆಯುವ ಈ ಕಾರ್ಯಕ್ರಮವು ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ ಯಶಸ್ಸನ್ನು ಪಡೆಯಲಿ ಎಂಬುದೇ ಹಾರೈಕೆಯಾಗಿದೆ ಎಂದರು.

ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ:ಸಹಜ್ ರೈ ಬಳಜ್ಜ, ಗೌರವಾಧ್ಯಕ್ಷರು. ಪಿಲಿಗೊಬ್ಬು ಸಮಿತಿ

ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿರುವ ವಿಜಯ ಸಾಮ್ರಾಟ್ ತಂಡದಿಂದ ದಕ್ಷಿಣ ಕನ್ನಡ ಜಿಲ್ಲೆಯ ಆಹ್ವಾನಿತ ಬಲಿಷ್ಟ ತಂಡಗಳಿಂದ ಹುಲಿವೇಷ ಕುಣಿತ ಜರಗಲಿದೆ. ಹುಲಿವೇಷ ಕುಣಿತದ ಜೊತೆಗೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ವಿವಿಧ ಖಾದ್ಯಗಳ ಫುಡ್ ಫೆಸ್ಟ್ ಕೂಡ ನಡೆಯಲಿಕ್ಕಿದೆ. ವಿಸ್ತಾರವಾದ ಪೆಂಡಾಲ್ ನಿರ್ಮಿಸುವ ಮೂಲಕ ಪ್ರೇಕ್ಷಕರಿಗೆ ಕಾರ್ಯಕ್ರಮದ ರಸದೌತಣವನ್ನು ಉಣಬಡಿಸಲಿದ್ದು ಜೊತೆಗೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪಿಲಿಗೊಬ್ಬು ಜೊತೆಗೆ ಫುಡ್ ಫೆಸ್ಟಿವಲ್ ಕಾರ್ಯಕ್ರಮವು ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆಯಲಿದೆ.


-10 ತಂಡಗಳಿಗೆ ಮಾತ್ರ ಅವಕಾಶ -ಪ್ರತಿ ತಂಡಕ್ಕೆ 23 ನಿಮಿಷಗಳ ಅವಕಾಶ -ಗರಿಷ್ಟ 15 ಹುಲಿಗಳಿಗೆ ಮಾತ್ರ ಒಂದು ತಂಡದಲ್ಲಿ ಅವಕಾಶ -ಪರಿಣತಿ ಹೊಂದಿದ ತೀರ್ಪುಗಾರರು -ತಂಡಗಳ ನಿಯಮ ಮತ್ತು ನಿಬಂಧನೆಗಳನ್ನು ಆಯಾ ತಂಡಗಳಿಗೆ ಪ್ರತ್ಯೇಕವಾಗಿ ನೀಡಲ್ಪಡುತ್ತದೆ -ಸ್ಯಾಂಡಲ್‌ವುಡ್ ಮತ್ತು ಕೋಸ್ಟಲ್‌ವುಡ್ ಚಲನಚಿತ್ರ ನಟರ ವಿಶೇಷ ಮೆರುಗು


ಬಹುಮಾನಗಳು..

ಪ್ರಥಮ =3,00,000/-

ದ್ವಿತೀಯ =2,00,000/-

 ತೃತೀಯ -1,00,000/-

ರೂ =10,000 ಐದು ವೈಯಕ್ತಿಕ ಬಹುಮಾನಗಳು


ಪಿಲಿಗೊಬ್ಬು ಸಮಿತಿಯ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಹುಟ್ಟುಹಾಕಿದ ಸಂಸ್ಥೆ ವಿಜಯ ಸಾಮ್ರಾಟ್. ಈ ಸಂಸ್ಥೆಯಡಿಯಲ್ಲಿ ೧೫೦೦ಕ್ಕೂ ಮಿಕ್ಕಿ ಅಗತ್ಯವುಳ್ಳವರಿಗೆ, ಆಶಾ ಕಾರ್ಯಕರ್ತರಿಗೆ ಆಹಾರ ಸಾಮಾಗ್ರಿಗಳು, ಮನೆ ನಿರ್ಮಾಣ ಕಾರ್ಯವನ್ನು ಮಾಡಿರುತ್ತದೆ. ಸಹಜ್‌ರವರ ನೇತೃತ್ವದಲ್ಲಿ ಅಳಿವಿನಂಚಿನಲ್ಲಿರುವ ಹುಲಿವೇಷ ಎಂಬ ಜನಪದ, ದೈವಿಕ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಆರಂಭಿಸಲಾಗಿದೆ. ಜೊತೆಗೆ ತುಳುನಾಡಿನ ವಿವಿಧ ಆಹಾರ ಖಾದ್ಯಗಳ ಆಹಾರ ಮೇಳವನ್ನು ಏರ್ಪಡಿಸಿ ಜನತೆಗೆ ಉಣ ಬಡಿಸಲಿದ್ದೇವೆ. ಪುತ್ತೂರಿನಲ್ಲಿ ಜಾತ್ರೆ, ಕಂಬಳ ಬಳಿಕ ಈ ಪಿಲಿಗೊಬ್ಬು ಮೂರನೇ ಅತೀ ದೊಡ್ಡ ಜಾತ್ರೆಯಾಗಿ ಗುರುತಿಸಲ್ಪಡಲಿದೆ ಎಂದರು.


ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಪಿಲಿಗೊಬ್ಬು ಸಮಿತಿಯ ಸಂಚಾಲಕ ನಾಗಾರಾಜ್ ನಡುವಡ್ಕ, ಜೊತೆ ಕಾರ್ಯದರ್ಶಿ ಶಂಕರ್ ಭಟ್ ಈಶಾನ್ಯ, ಕೋಶಾಧಿಕಾರಿ ರಾಜೇಶ್ ಕೆ.ಗೌಡ, ಕಾರ್ಯದರ್ಶಿ ಶರತ್ ಕುಮಾರ್ ಮಾಡಾವು ಸಹಿತ ಹಲವರು ಉಪಸ್ಥಿತರಿದ್ದರು.

ನವಜಾತ ಶಿಶುವಿಗಾಗಿ ಮಿಡಿದ ಸಿದ್ದು ಹೃದಯ ಪ್ರಧಾನಿಗೆ ಮನವಿ

Posted by Vidyamaana on 2023-11-01 19:52:31 |

Share: | | | | |


ನವಜಾತ ಶಿಶುವಿಗಾಗಿ ಮಿಡಿದ ಸಿದ್ದು ಹೃದಯ  ಪ್ರಧಾನಿಗೆ ಮನವಿ

ಬೆಂಗಳೂರು : ರಾಜ್ಯದ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರು ಪ್ರಧಾನಮಂತ್ರಿಯವರಲ್ಲಿ ಕೆಲವೊಮ್ಮೆ ಮನವಿ ಮಾಡಿಕೊಳ್ಳುವುದಿರುತ್ತದೆ. ಆದರೆ ಈ ಸಲ ಒಂದು ವಿಶೇಷ ಕಾರಣಕ್ಕಾಗಿ ಪ್ರಧಾನಿ ಮೋದಿಯವರಲ್ಲಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.


ಪ್ರಧಾನಿ ಮೋದಿಗೆ ಸಿಎಂ ಸಿದ್ದು ಮಾಡಿದ ಕಳಕಳಿಯ ಮನವಿ ಪತ್ರ

ರಾಜ್ಯದಲ್ಲಿನ 15 ತಿಂಗಳ ಮಗುವೊಂದರ ಚಿಕಿತ್ಸೆಗಾಗಿ ಔಷಧಕ್ಕೆ ಸಂಬಂಧಿಸಿದಂತೆ ಆಮದು ಸುಂಕ ವಿನಾಯಿತಿ ನೀಡುವಂತೆ ಸಿದ್ದರಾಮಯ್ಯ ಅವರು ಪ್ರಧಾನಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲೂ ಮಾಹಿತಿ ಹಂಚಿಕೊಂಡಿದ್ದಾರೆ.ಕರ್ನಾಟಕದ 15 ತಿಂಗಳ ಮೌರ್ಯ ಎಂಬ ಪುಟ್ಟ ಕಂದ ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈ ಮಗುವಿನ ಖಾಯಿಲೆ ಗುಣಪಡಿಸಬಹುದಾದ ಝೋಲ್ಗೆನ್‌ಸ್ಮ ಎಂಬ ಚುಚ್ಚುಮದ್ದನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದ್ದು, ಅದರ ಬೆಲೆ ರೂ. 17.5 ಕೋಟಿ ಇದೆ. ಕೇಂದ್ರ ಸರ್ಕಾರವು ಇದನ್ನು ಮಾನವೀಯ ನೆಲೆಗಟ್ಟಿನಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಆಮದು ಸುಂಕದಿಂದ ವಿನಾಯಿತಿ ನೀಡುವ ಮೂಲಕ ಕರುನಾಡಿನ ಪುಟ್ಟ ಕಂದನ ಪ್ರಾಣ ಉಳಿಸಲು ನೆರವಾಗಬೇಕು ಎಂದು ಮನವಿ ಮಾಡುತ್ತಿದ್ದೇನೆ ಎಂಬುದಾಗಿ ಸಿಎಂ ಮನವಿ ಮಾಡಿಕೊಂಡಿದ್ದಾರೆ.

ಜಿಎಲ್ ಶಾಪಿಂಗ್ ಹಬ್ಬ ವರುಷದ ಹರುಷಕ್ಕೆ ಚಾಲನೆ

Posted by Vidyamaana on 2023-04-03 09:07:30 |

Share: | | | | |


ಜಿಎಲ್ ಶಾಪಿಂಗ್ ಹಬ್ಬ ವರುಷದ ಹರುಷಕ್ಕೆ ಚಾಲನೆ

ಪುತ್ತೂರು: ಜಿಎಲ್ ಶಾಪಿಂಗ್ ಹಬ್ಬ ವರುಷದ ಹರುಷಕ್ಕೆ ಏ. 3ರಂದು ಚಾಲನೆ ನೀಡಲಾಯಿತು.

ಏ. 9ರವರೆಗೆ ನಡೆಯಲಿರುವ ಈ ಹಬ್ಬ, ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಎಲ್ಲಾ ಶಾಖೆಗಳಲ್ಲೂ ನಡೆಯಲಿದೆ.

ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

Posted by Vidyamaana on 2023-07-14 03:02:36 |

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

ಬಡವು ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ವತಿಯಿಂದ ಬಡ ಕುಟುಂಬಕ್ಕೆ ದೈನಂದಿನ ದಿನಸಿ ಸಾಮಾಗ್ರಿಗಳ ನೆರವು

Posted by Vidyamaana on 2023-07-23 17:17:55 |

Share: | | | | |


ಬಡವು ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ವತಿಯಿಂದ ಬಡ ಕುಟುಂಬಕ್ಕೆ ದೈನಂದಿನ ದಿನಸಿ ಸಾಮಾಗ್ರಿಗಳ ನೆರವು

ಮಂಜೇಶ್ವರ : ಬಡವು ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ  ಯೋಜನೆಯ 57ನೇ ಸೇವಾ ಕಾರ್ಯವು ಉಪ್ಪಳ ಸಮೀಪದ ಪೈವಳಿಕೆ ಲಾಲ್‌‌ಬಾಗ್ ಬೋಳಂಗಳ ನಿವಾಸಿ  ಕಲ್ಯಾಣಿ ಕೃಷ್ಣ ದಂಪತಿಗಳ ಕುಟುಂಬಕ್ಕೆ ದೈನಂದಿನ ದಿನಸಿ ಸಾಮಾಗ್ರಿಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ಜು 23ರಂದು ನಡೆಯಿತು . ಇವರ ಮನೆಯು ಶೋಚನಿಯಾವಸ್ಥೆಯಲ್ಲಿದ್ದು,  ಮುಪ್ಪಿನ ಕಾಲದಲ್ಲಿ ದುಡಿದು ಸಾಕಾಬೇಕಾದ ಮಕ್ಕಳ ಅನಾರೋಗ್ಯ ಇನ್ನೊಂದು ಕಡೆ.  ಈ ಪರಿಸ್ಥಿತಿಯಲ್ಲಿ ಕಲ್ಯಾಣಿಯವರಿಗೆ ದಿಕ್ಕು ತೋಚದ ಪರಿಸ್ಥಿತಿ.. ಮೂರು ಮಂದಿಯ ಚಿಕಿತ್ಸೆಯ ವೆಚ್ಚ, ಮನೆಯ ಖರ್ಚು ವೆಚ್ಚ ಹೀಗೆ ಆರ್ಥಿಕವಾಗಿ ನೊಂದ ಕುಟುಂಬಕ್ಕೆ ಸೇವೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಾಯಂಜನಿ ಯುವ ಬಳಗ ಸಂಸ್ಥಾಪಕರಾದ ರಂಜಿತ್ ಕುಮಾರ್, ಅಧ್ಯಕ್ಷರಾದ ಅಜಯ್ ರಾಜ್ ಉಪ್ಪಳ, ಸದಸ್ಯರಾದ ನವೀನ್ ಗುರಿಕಾರ, ನವೀನ್, ಟೀಮ್ ಮಂಜುಶ್ರೀ ತುಳುನಾಡ್ (ರಿ.) ಸಂಸ್ಥೆಯ ಗೌರವಾಧ್ಯಕ್ಷರು ಸದಾಶಿವ ಹೊಸಬೆಟ್ಟು, ಸಂಸ್ಥಾಪಕರು ರಾಜ್ಯ ಘಟಕ ಸಲಹೆಗಾರರು ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸ್ಥಾಪಕ ಅಧ್ಯಕ್ಷರು ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕರು ರಾಜ್ಯ ಅದ್ಯಕ್ಷರು ವಂಶಿ ಪಂಡಿತ್ ಕಣ್ಣೂರು, ಸಂಸ್ಥಾಪಕರು ರಾಜ್ಯ ಸಮಿತಿ ಪ್ರಚಾರ ಅಧ್ಯಕ್ಷರು ಸಚಿನ್ ಜಿ ಮಣೇಲ್‌ಬೈಲ್, ರಾಜ್ಯ ಸಮಿತಿ ಸದಸ್ಯರಾದ ಶರಣ್ ಜಿ ಮಣೇಲ್‌ಬೈಲ್, ರಮೇಶ್ ಕುಲಾಲ್ ನಾರಾಯಣ ಮಂಗಲ, ಮಹಿಳಾ ಘಟಕದ ಸದಸ್ಯರಾದ ಅಮಿತಾ ಶೆಟ್ಟಿ, ಬಬಿತಾ ಶೆಟ್ಟಿ, ಪೂರ್ಣಿಮ ರಾವ್ ಮುಂತಾದವರು ಉಪಸ್ಥಿತರಿದ್ದರು.



Leave a Comment: