ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಪ್ರಕರಣ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಚಂದನ್ ಕುಮಾರ್ ಮೃತ್ಯು

ಸುದ್ದಿಗಳು News

Posted by vidyamaana on 2024-07-03 20:52:26 |

Share: | | | | |


ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಪ್ರಕರಣ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಚಂದನ್ ಕುಮಾರ್ ಮೃತ್ಯು

ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಸಂಭವಿಸಿ ಮಣ್ಣಿನಡಿ ಸಿಲುಕಿದ್ದ ಓರ್ವ ಕಾರ್ಮಿಕ ಮೃತಪಟ್ಟ ಘಟನೆ ನಗರದ ಬಲ್ಮಠ ಬಳಿ ಬುಧವಾರ ಸಂಭವಿಸಿದೆ.ಮೃತ ಕಾರ್ಮಿಕನನ್ನು ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ (30) ಎಂದು ತಿಳಿದು ಬಂದಿದೆ.ಮಧ್ಯಾಹ್ನ ಕಟ್ಟಡದ ಕಾಮಗಾರಿ ನಡೆಯುತಿದ್ದ ವೇಳೆ ಭೂಕುಸಿತ ಸಂಭವಿಸಿ ಮಣ್ಣಿನಡಿ ಇಬ್ಬರು ಕಾರ್ಮಿಕರು ಸಿಲುಕಿದ್ದರು.

ಘಟನೆ ನಡೆದ ವಿಚಾರ ತಿಳುಯುತ್ತಲೇ ಸ್ಥಳಕ್ಕೆ ಅಗ್ನಿಶಾಮಕ ದಳ , ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ತಂಡ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದಾರೆ ಇದಾದ ಕೆಲವು ಗಂಟೆಗಳ ಬಳಿಕ ಓರ್ವ ಕಾರ್ಮಿಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ನಡುವೆ ಮಣ್ಣಿನಡಿ ಸಿಲುಕಿದ್ದ ಚಂದನ್ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿತ್ತು.

ರಿಟೇನಿಂಗ್ ವಾಲ್ ಮತ್ತು ಶೀಟ್ ಗಳ ಮಧ್ಯೆ ಸಿಲುಕಿದ್ದ ಕಾರ್ಮಿಕನ ರಕ್ಷಣೆಗಾಗಿ ರಾತ್ರಿಯ ವರೆಗೂ ಕಾರ್ಯಾಚರಣೆ ನಡೆಸಿದರೂ ಕಾರ್ಮಿಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಸುಮಾರು ಏಳು ಗಂಟೆಯ ವೇಳೆಗೆ ಮೃತದೇಹವನ್ನು ಎನ್ ಡಿ ಆರ್ ಎಫ್ ತಂಡ ಹೊರತೆಗೆದಿದೆ.

 Share: | | | | |


ವಾರ್ಡ್ ಸಮಸ್ಯೆ ಪರಿಹರಿಸದ ನಗರಸಭೆ ಸದಸ್ಯನನ್ನು ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

Posted by Vidyamaana on 2023-07-27 13:13:01 |

Share: | | | | |


ವಾರ್ಡ್ ಸಮಸ್ಯೆ ಪರಿಹರಿಸದ ನಗರಸಭೆ ಸದಸ್ಯನನ್ನು ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

ಗದಗ: ವಾರ್ಡ್ ಸಮಸ್ಯೆ ಪರಿಹರಿಸಲು ನಿರ್ಲಕ್ಷಿಸಿದ ಆರೋಪದ ಮೇಲೆ ಸ್ಥಳೀಯ ನಿವಾಸಿಗಳು ನಗರಸಭೆ ಸದಸ್ಯನನ್ನು ಗಂಟೆಗೂ ಅಧಿಕ ಕಾಲ ಕೊಠಡಿಯಲ್ಲಿ ಕೂಡಿ ಹಾಕಿದ ಘಟನೆ ಸ್ಥಳೀಯ ಬಣ್ಣದ ನಗರದಲ್ಲಿ ಗುರುವಾರ ನಡೆದಿದೆ.


ನಗರಸಭೆ ಮೂರನೇ ವಾರ್ಡಿನ ಸದಸ್ಯ ಮಾಧುಸಾ ಮೇರವಾಡೆ ಅವರನ್ನು ಸ್ಥಳೀಯ ಮಹಿಳೆಯರು ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸದಸ್ಯ ಮಾಧುಸಾ ಅವರನ್ನು ಬಿಡುಗಡೆಗೊಳಿಸಿದರು.


ನಗರಸಭೆ 3ನೇ ವಾರ್ಡ್ ನ ಬಣ್ಣದ ನಗರವು ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ರಸ್ತೆಗಳು ಹದಗೆಟ್ಟಿವೆ. ಬೀದಿ ದೀಪಗಳಿಲ್ಲದೇ ಸ್ಥಳೀಯ ನಿವಾಸಿಗಳಿಗೆ ಸಂಚರಿಸಲು ಸಮಸ್ಯೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರುಬಣ್ಣದ ನಗರವು ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ನಗರಸಭೆ ಸದಸ್ಯ ಮಾಧುಸಾ ಮೇರವಾಡೆ ಅವರಿಗೆ ಹಲವಾರು ಬಾರಿ ಗಮನಕ್ಕೆ ತಂದಿದ್ದರೂ, ಸಮಸ್ಯೆಗೆ ಸ್ಪಂಧಿಸದ ಕಾರಣ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ನಗರದ ಈಶ್ವರ ಸೇವಾ ಟ್ರಸ್ಟ್ ಕಮೀಟಿ ಕಚೇರಿಯ ಕೊಠಡಿಯಲ್ಲಿ ಕೂಡಿಹಾಕಿದರು. ಇದರಿಂದ ವಿಚಲಿತಗೊಂಡ ಸದಸ್ಯ ಮಾಧುಸಾ ಅವರು ವಿಷಯ ತಿಳಿಸಲು ನಗರಸಭೆ ಪೌರಾಯುಕ್ತರಿಗೆ ದೂರವಾಣಿ ಮೂಲಕ ಕರೆ ಮಾಡಿದರು. ಆದರೆ, ಆಯುಕ್ತರು ಕರೆ ಸ್ವೀಕರಿಸಿಲ್ಲ.

ಉಡುಪಿ: ತಾಯಿಯ ಶವದೊಂದಿಗೆ 3 ದಿನ ಕಳೆದಿದ್ದ ಮಾನಸಿಕ ಅಸ್ವಸ್ಥೆ ಪುತ್ರಿ ಪ್ರಗತಿ ಶೆಟ್ಟಿ ಆಸ್ಪತ್ರೆಯಲ್ಲಿ ನಿಧನ

Posted by Vidyamaana on 2024-05-19 15:28:02 |

Share: | | | | |


ಉಡುಪಿ: ತಾಯಿಯ ಶವದೊಂದಿಗೆ 3 ದಿನ ಕಳೆದಿದ್ದ ಮಾನಸಿಕ ಅಸ್ವಸ್ಥೆ ಪುತ್ರಿ ಪ್ರಗತಿ ಶೆಟ್ಟಿ ಆಸ್ಪತ್ರೆಯಲ್ಲಿ ನಿಧನ

ಉಡುಪಿ: ತಾಯಿಯ ಶವದೊಂದಿಗೆ ಮಾನಸಿಕ ಅಸ್ವಸ್ಥಳಾಗಿದ್ದ ಪುತ್ರಿ 3 ದಿನ ಕಳೆದಿರುವ ಮನ ಕಲಕುವ ಘಟನೆ ಕುಂದಾಪುರ ತಾಲೂಕಿನಲ್ಲಿ ನಡೆದಿದೆ.ತಾಯಿ ಮೃತಪಟ್ಟಿದ್ದ ಕಾರಣ ಅಹಾರ ಮತ್ತು ನೀರಿಲ್ಲದೇ ಮಗಳು ಕೂಡಾ ಅಸ್ವಸ್ಥಳಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕುಂದಾಪುರ ತಾಲೂಕಿನ ಮೂಡುಗೋಪಾಡಿಯ ದಾಸನಹಾಡಿಯ ನಿವಾಸಿಗಳಾಗಿದ್ದ ತಾಯಿ ಜಯಂತಿ ಶೆಟ್ಟಿ (62) ಮತ್ತು ಮಗಳು ಪ್ರಗತಿ ಶೆಟ್ಟಿ (32) ಮೃತಪಟ್ಟವರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಜಯಂತಿ ಶೆಟ್ಟಿ

ಸುಳ್ಯ | ಚಿರತೆ ಸಾವು ಪ್ರಕರಣ: ಇಬ್ಬರ ಬಂಧನ

Posted by Vidyamaana on 2023-08-30 07:43:57 |

Share: | | | | |


ಸುಳ್ಯ | ಚಿರತೆ ಸಾವು ಪ್ರಕರಣ: ಇಬ್ಬರ ಬಂಧನ

ಸುಳ್ಯ: ಅಜ್ಜಾವರ ಗ್ರಾಮದ ಪಡ್ಡಂಬೈಲು ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಒಂದೂವರೆ ವರ್ಷದ ಚಿರತೆ ಮರಿ ಉರುಳಿಗೆ ಸಿಲುಕಿ ಮೃತಪಟ್ಟಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿಗಳಾದ ಜಯರಾಮ ಮತ್ತು ಪ್ರಥ್ವಿ ಎಂಬ ಇಬ್ಬರನ್ನು ಬಂಧಿಸಲಾಗಿದೆ.

ಅರಣ್ಯ ಇಲಾಖೆ ಸ್ಥಳಕ್ಕೆ ತೆರಳಿ ಚಿರತೆ ಮರಿಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ

ಮಠಂದೂರು ಬಂದು ಪಿಕ್ಕಾಸು ಹಾಕಿ ಹೋಗಿದ್ದಾರೆ ಮಾಜಿ ಶಾಸಕರ ವಿರುದ್ದ ಹಾಲಿ ಶಾಸಕರಲ್ಲಿ ದೂರು

Posted by Vidyamaana on 2023-12-25 21:16:27 |

Share: | | | | |


ಮಠಂದೂರು ಬಂದು ಪಿಕ್ಕಾಸು ಹಾಕಿ ಹೋಗಿದ್ದಾರೆ  ಮಾಜಿ ಶಾಸಕರ ವಿರುದ್ದ ಹಾಲಿ ಶಾಸಕರಲ್ಲಿ ದೂರು

ಪುತ್ತೂರು: ನಮಮ್ಮ ಮನೆಗಳ ಮೇಲೆ ಧರೆ ಕುಸಿದಿದೆ, ಮಳೆ ಬರುವಾಗ ಮಳೆ ನೀರು ಮನೆಯೊಳಗೆ ಬರುತ್ತಿದೆ, ಮಳೆಗಾಲದಲ್ಲಿ ನಮ್ಮ ಮನೆಯೊಳಗೆ ಕುಳಿತುಕೊಳ್ಳಲು ನಮಗೆ ಭಯವಾಗುತ್ತಿದೆ, ಕೆಲವು ವರ್ಷಗಳಿಂದ ಈ ಸಮಸ್ಯೆ ಇದೆ. ಇದರ ಬಗ್ಗೆ ನಾವು ಮಾಜಿ ಶಾಸಕರಾದ ಸಂಜೀವ ಮಠಂದೂರಿಗೆ ಮನವಿ ಮಾಡಿದ್ದೆವು ಅವರು ಬಂದು ಸ್ಥಳ ವಿಕ್ಷಣೆ ಮಾಡಿ ಇಲ್ಲಿ ತಡೆಗೋಡೆ ನಿರ್ಮಾಣ ಮಾಡುವುದಾಗಿ ಪಿಕ್ಕಾಸು ಹಾಕಿ ಹೋಗಿದ್ದಾರೆ ಆ ಬಳಿಕ ಇತ್ತ ಕಡೆ ತಿರುಗಿ ನೋಡಿಲ್ಲ ಎಂದು ಮಾಜಿ ಶಾಸಕರ ವಿರುದ್ದ ಸಂಪ್ಯ ಕಾಲನಿ ನಿವಾಸಿಗಳು ಹಾಲಿ ಶಾಸಕ ಅಶೋಕ್ ರೈಯವರಲ್ಲಿ ದೂರು ನೀಡಿದ ಘಟನೆ ನಡೆದಿದೆ.


ಕಂಬಲ್ದಡ್ಡ ಅಂಗನವಾಗಿ ಕಟ್ಟಡ ಉದ್ಘಾಟನೆಗೆ ತೆರಳಿದ ಶಾಸಕರು ರಸ್ತೆಯಲ್ಲಿ ಬರುವಾಗ ಅಡ್ಡಗಟ್ಟಿದ ಕಾಲನಿ ನಿವಾಸಿಗಳು ನಮ್ಮ ಸಮಸ್ಯೆಯನ್ನು ಬಂದು ನೋಡಿ ಎಂದು ಮನವಿ ಮಾಡಿದರು.ಸ್ಥಳಕ್ಕೆ ತೆರಳಿದಾಗ ಅಲ್ಲಿನ ಅವಸ್ಥೆ ಕಂಡು ಮರುಗಿದ ಶಾಸಕರು ನೀವು ಈ ಹಿಂದೆ ಯಾರಲ್ಲಾದರೂ ಸಮಸ್ಯೆ ಬಗ್ಗೆ ಹೇಳಿಲ್ಲವೇ ಎಂದು ಕೇಳಿದಾಗ ಅಲ್ಲಿದ್ದ ನಿವಾಸಿಗಳು ನಡೆದ ಘಟನೆಯನ್ನು ವಿರಿಸಿದರು. ನಾವು ಕಾಂಗ್ರೆಸ್ಸಿಗೆ ವೋಟು ಹಾಕಿಲ್ಲ ಭರವಸೆಯನ್ನು ನಂಬಿ ನಾವು ಕೆಟ್ಟಿದ್ದೇವೆ ಎಂದು ಸ್ಥಳೀಯರು ಶಾಸಕರಲ್ಲಿ ಹೇಳಿದರು. ನೀವು ದಯಮಾಡಿ ನಮ್ಮ ಸಮಸ್ಯೆಗೆ ಪರಿಹಾರ ಕೊಡಿ ಎಂದು ಕೇಳಿಕೊಂಡರು. ಈ ಬಗ್ಗೆ ಮಾತನಾಡಿದ ಶಾಸಕರು ನಾನು ಅನುದಾನ ಬಿಡುಗಡೆಯಾದರೆ ಮಾತ್ರ ಪಿಕ್ಕಾಸು ಹಾಕುವುದು ಭರವಸೆ ಕೊಟ್ಟು ಪಿಕ್ಕಾಸು ಹಾಕಿ ಹೋಗುವುದಿಲ್ಲ, ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸಲು ಸುಮಾರು ೩ ಕೋಟಿ ಅನುದಾನ ಬೇಕು. ನಾನು ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದು ಮೊದಲ ಆಧ್ಯತೆ ಯಲ್ಲೇ ಪರಿಹರಿಸಲು ಯತ್ನ ಮಾಡುತ್ತೇನೆ, ಸ್ವಲ್ಪ ಕಾಲವಕಾಶ ಬೇಕು ಎಂದು ತಿಳಿಸಿದರು. ಸ್ಥಳೀಯರಾದ ಪದ್ಮ  ಸೇರಿದಂತೆ ಕಾಲನಿ ನಿವಾಸಿಗಳು ಉಪಸ್ತಿತರಿದ್ದರು.

ಶಾಸಕರ ಇಂದಿನ ಕಾರ್ಯಕ್ರಮ (ಜೂ 2)

Posted by Vidyamaana on 2023-06-02 03:15:32 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ (ಜೂ 2)

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಜೂನ್ 2ರಂದು ಮಧ್ಯಾಹ್ನದ‌ ಬಳಿಕ ಕುಡಿಯುವ ನೀರಿನ‌ ವಿಷಯದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ

ಮಧ್ಯಾಹ್ನ 3 ಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ.

ಸಂಜೆ 5.30ಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಸಭೆ.

ಸಿದ್ದು ವಾಯ್ಸ ರಿಮೇಕ್‌ ಮಾಡಿದ್ದ ಯುವಕನ ವಿರುದ್ಧ ಪ್ರಕರಣ

Posted by Vidyamaana on 2023-12-20 08:02:16 |

Share: | | | | |


ಸಿದ್ದು ವಾಯ್ಸ ರಿಮೇಕ್‌ ಮಾಡಿದ್ದ ಯುವಕನ ವಿರುದ್ಧ ಪ್ರಕರಣ

ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯ ವಾಯ್ಸ ರಿಮೇಕ್‌ ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಶರತ್‌ ಗೌಡ ವಿರುದ್ಧ ಯುವ ಕಾಂಗ್ರೆಸ್‌ ಕಾರ್ಯಕರ್ತರು ನೀಡಿದ ದೂರಿನನ್ವಯ ನರಸಿಂಹರಾಜಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಿಎಸ್‌ವೈ ಹೇಳಿದ್ದನ್ನು ಸಿದ್ದರಾಮಯ್ಯ ಹೇಳಿದ್ದಾರೆಂದು ವಾಯ್ಸ ರಿಮೇಕ್‌ ಮಾಡಿದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಣವನ್ನು ಎಲ್ಲಿಂದ ತರಲಿ, ಚುನಾವಣೆಗೋಸ್ಕರ ಹೇಳಿರ್ತಿವಿ. ಹೇಳಿದಂತೆ ನಡೆದುಕೊಳ್ಳಲು ಆಗುತ್ತಾ ಎಂದು ಆಡಿಯೋದಲ್ಲಿದೆ.



Leave a Comment: