ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಸುದ್ದಿಗಳು News

Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

 Share: | | | | |


ಜಿಎಲ್ ಶಾಪಿಂಗ್ ಹಬ್ಬ ವರುಷದ ಹರುಷಕ್ಕೆ ಚಾಲನೆ

Posted by Vidyamaana on 2023-04-03 09:07:30 |

Share: | | | | |


ಜಿಎಲ್ ಶಾಪಿಂಗ್ ಹಬ್ಬ ವರುಷದ ಹರುಷಕ್ಕೆ ಚಾಲನೆ

ಪುತ್ತೂರು: ಜಿಎಲ್ ಶಾಪಿಂಗ್ ಹಬ್ಬ ವರುಷದ ಹರುಷಕ್ಕೆ ಏ. 3ರಂದು ಚಾಲನೆ ನೀಡಲಾಯಿತು.

ಏ. 9ರವರೆಗೆ ನಡೆಯಲಿರುವ ಈ ಹಬ್ಬ, ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಎಲ್ಲಾ ಶಾಖೆಗಳಲ್ಲೂ ನಡೆಯಲಿದೆ.

ಮೊದಲ ಬಾರಿಗೆ ಹಂದಿ ಮೂತ್ರಪಿಂಡವನ್ನು ಮಾನವನಿಗೆ ಕಸಿ ಮಾಡಿದ US ವೈದ್ಯರು

Posted by Vidyamaana on 2024-03-22 15:35:31 |

Share: | | | | |


ಮೊದಲ ಬಾರಿಗೆ ಹಂದಿ ಮೂತ್ರಪಿಂಡವನ್ನು ಮಾನವನಿಗೆ ಕಸಿ ಮಾಡಿದ US ವೈದ್ಯರು

ನ್ಯೂಯಾರ್ಕ್: ಬೋಸ್ಟನ್ ನ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ವೈದ್ಯರು ಗುರುವಾರ ಪ್ರಕಟಿಸಿದ್ದು, ಅಂತಿಮ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ 62 ವರ್ಷದ ವ್ಯಕ್ತಿಯೊಬ್ಬರು ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯಿಂದ ಹೊಸ ಮೂತ್ರಪಿಂಡವನ್ನು ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ.ಮಾರ್ಚ್ 16 ರಂದು ನಡೆಸಲಾದ ನಾಲ್ಕು ಗಂಟೆಗಳ ಶಸ್ತ್ರಚಿಕಿತ್ಸೆಯು "ರೋಗಿಗಳಿಗೆ ಹೆಚ್ಚು ಸುಲಭವಾಗಿ ಲಭ್ಯವಿರುವ ಅಂಗಗಳನ್ನು ಒದಗಿಸುವ ಅನ್ವೇಷಣೆಯಲ್ಲಿ ಪ್ರಮುಖ ಮೈಲಿಗಲ್ಲನ್ನು ಸೂಚಿಸುತ್ತದೆ" ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.


ಮ್ಯಾಸಚೂಸೆಟ್ಸ್ನ ವೇಮೌತ್ನ ರಿಚರ್ಡ್ ಸ್ಲೇಮನ್ ಅವರು ಚೇತರಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಆಸ್ಪತ್ರೆ ತಿಳಿಸಿದೆ.

ಪ್ರಾಣಿಯಿಂದ ಮನುಷ್ಯನಿಗೆ ಕಸಿಯ ದೀರ್ಘಕಾಲೀನ ಫಲಿತಾಂಶಗಳಲ್ಲಿ ತಜ್ಞರು ತೀವ್ರ ಆಸಕ್ತಿ ಹೊಂದಿದ್ದಾರೆ ಎಂದು ಲಾಸ್ ಏಂಜಲೀಸ್ನ ಯುಎಸ್ಸಿ ಟ್ರಾನ್ಸ್ಪ್ಲಾಂಟ್ ಇನ್ಸ್ಟಿಟ್ಯೂಟ್ನ ಮೂತ್ರಪಿಂಡ ಮತ್ತು ಮೇದೋಜ್ಜೀರಕ ಗ್ರಂಥಿ ಕಸಿ ನಿರ್ದೇಶಕ ಡಾ.ಜಿಮ್ ಕಿಮ್ ಹೇಳಿದ್ದಾರೆ.ಏಳು ವರ್ಷಗಳ ಡಯಾಲಿಸಿಸ್ ನಂತರ 2018 ರಲ್ಲಿ ಅದೇ ಆಸ್ಪತ್ರೆಯಲ್ಲಿ ಮಾನವ ಮೂತ್ರಪಿಂಡವನ್ನು ಕಸಿ ಮಾಡಲಾಯಿತು, ಆದರೆ ಐದು ವರ್ಷಗಳ ನಂತರ ಅಂಗವು ವಿಫಲವಾಯಿತು ಮತ್ತು ಅವರು ಡಯಾಲಿಸಿಸ್ ಚಿಕಿತ್ಸೆಯನ್ನು ಪುನರಾರಂಭಿಸಿದ್ದರು.


ಮ್ಯಾಸಚೂಸೆಟ್ಸ್ನ ಕೇಂಬ್ರಿಡ್ಜ್ನ ಇಜೆನೆಸಿಸ್ ಈ ಮೂತ್ರಪಿಂಡವನ್ನು ಮಾನವ ಸ್ವೀಕರಿಸುವವರಿಗೆ ಹಾನಿಕಾರಕ ಜೀನ್ಗಳನ್ನು ತೆಗೆದುಹಾಕಲು ಮತ್ತು ಹೊಂದಾಣಿಕೆಯನ್ನು ಸುಧಾರಿಸಲು ಕೆಲವು ಮಾನವ ಜೀನ್ಗಳನ್ನು ಸೇರಿಸಲು ಅನುವಂಶಿಕವಾಗಿ ಸಂಪಾದಿಸಲಾದ ಹಂದಿಯಿಂದ ಒದಗಿಸಿತು. ಕಂಪನಿಯು ಹಂದಿಗಳಲ್ಲಿ ಅಂತರ್ಗತವಾಗಿರುವ ವೈರಸ್ಗಳನ್ನು ನಿಷ್ಕ್ರಿಯಗೊಳಿಸಿದೆ, ಅದು ಈಗ ಸಾಮರ್ಥ್ಯವನ್ನು ಹೊಂದಿದೆ.

ಭಾರತ್ ಜೋಡೊ ನ್ಯಾಯ ಯಾತ್ರೆಯ ಬ್ಯಾನರ್ ಹರಿದ ಕಿಡಿಗೇಡಿಗಳು

Posted by Vidyamaana on 2024-01-20 16:49:02 |

Share: | | | | |


ಭಾರತ್ ಜೋಡೊ ನ್ಯಾಯ ಯಾತ್ರೆಯ ಬ್ಯಾನರ್ ಹರಿದ ಕಿಡಿಗೇಡಿಗಳು

ಅಸ್ಸಾಂ: ಭಾರತ್ ಜೋಡೊ ನ್ಯಾಯ ಯಾತ್ರೆ ಪ್ರಯುಕ್ತ ಹಾಕಲಾಗಿದ್ದ ಬ್ಯಾನರ್ ಮತ್ತು ಪೋಸ್ಟರ್ ಗಳನ್ನು ಕಿಡಿಗೇಡಿಗಳು ಹಾನಿಗೊಳಿಸಿರುವ ಘಟನೆ ಅಸ್ಸಾಂನ ಉತ್ತರ ಲಖಿಂಪುರದಲ್ಲಿ ನಡೆದಿದೆ.



ಉತ್ತರ ಲಖಿಂಪುರ ಪಟ್ಟಣದಲ್ಲಿ ಹಾಕಲಾಗಿದ್ದ ಬ್ಯಾನರ್ ಗಳು, ಪೋಸ್ಟರ್ ಗಳನ್ನು ಹಾನಿಗೊಳಿಸಲಾಗಿದೆ. ಯಾತ್ರೆ ಯಶಸ್ವಿಯಾದ ಬೆನ್ನಲ್ಲೇ ಕಿಡಿಗೇಡಿಗಳು ಈ ಕೆಲಸಕ್ಕೆ ಕೈ ಹಾಕಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ಭರತ್ ನಾರಾಹ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಯಾತ್ರೆ ಸುಗಮವಾಗಿ ನಡೆಯದಂತೆ ಹಲವು ಅಡೆತಡೆಗಳನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸೃಷ್ಟಿಸಿತ್ತು. ಯಾತ್ರೆಗೆ ಜನ ಸೇರದಂತೆ ಮಾಡಲು ಪ್ರಯತ್ನಿಸಿತ್ತು. ಆದರೆ ಯಾತ್ರೆಯ ಯಶಸ್ಸನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.

ಅರುಣ್ ಪುತ್ತಿಲ ಕಚೇರಿ ಎದುರು ತಲವಾರು ಪ್ರದರ್ಶನ

Posted by Vidyamaana on 2023-11-10 14:47:29 |

Share: | | | | |


ಅರುಣ್ ಪುತ್ತಿಲ ಕಚೇರಿ ಎದುರು ತಲವಾರು ಪ್ರದರ್ಶನ

ಪುತ್ತೂರು: ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಮುಕ್ತಂಪಾಡಿಯಲ್ಲಿ ಹೊಂದಿರುವ ಪುತ್ತಿಲ ಪರಿವಾರದ ಕಚೇರಿಯ ಮುಂಭಾಗದಲ್ಲಿ ಯುವಕನೋರ್ವ ನಾಲ್ವರು ಸಹಚರರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿ ಬೊಬ್ಬೆ ಹೊಡೆಯುತ್ತಿದ್ದ ಘಟನೆ ನಡೆಯುತ್ತಿದ್ದಂತೆಯೇ ಪುತ್ತೂರು ನಗರ ಠಾಣಾ ಪೊಲೀಸರು ಆಗಮಿಸಿದ್ದಾರೆ. ಅರುಣ್ ಪುತ್ತಿಲ ಬೆಂಬಲಿಗರಾದ ಮನೀಶ್ ಕುಲಾಲ್ ಬನ್ನೂರು ಅವರನ್ನು ಗುರಿಯಾಗಿಟ್ಟುಕೊಂಡು ದಿನೇಶ್ ಪಂಜಿಗ ಎಂಬಾತ ನಾಲ್ವರು ಯುವಕರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿದ್ದ. ಪುತ್ತಿಲ ಕಚೇರಿಯಲ್ಲಿ ಕೃಷ್ಣಪ್ರಸಾದ್ ಶೆಟ್ಟಿ ಮತ್ತಿತರರು ಇದ್ದರು. ಮನೀಶ್ ಕುಲಾಲ್ ಕಚೇರಿಯಲ್ಲಿ ಇರಲಿಲ್ಲ. ಮಾಹಿತಿ ತಿಳಿದ ಮನೀಶ್ ಕುಲಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಾಟ್ಸಾಪ್ ಗ್ರೂಪ್‌ನಲ್ಲಿ ನಡೆದ ಚರ್ಚೆಯ ಕೋಪದಲ್ಲಿ ಈ ಕೃತ್ಯ ನಡೆದಿದೆ

BREAKING : ದೇಶಾದ್ಯಂತ ಫೇಸ್ ಬುಕ್ ಸರ್ವರ್ ಡೌನ್ ಬಳಕೆದಾರರ ಪರದಾಟ

Posted by Vidyamaana on 2023-10-18 22:39:00 |

Share: | | | | |


BREAKING : ದೇಶಾದ್ಯಂತ ಫೇಸ್ ಬುಕ್  ಸರ್ವರ್ ಡೌನ್ ಬಳಕೆದಾರರ ಪರದಾಟ

ನವದೆಹಲಿ : ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಫೇಸ್ಬುಕ್ನ ಸರ್ವರ್ ಬುಧವಾರ ಸ್ಥಗಿತವನ್ನ ಅನುಭವಿಸಿದ್ದು, ಹಲವಾರು ಬಳಕೆದಾರರು ಹೊಸ ಪೋಸ್ಟ್ ಅಪ್ಲೋಡ್ ಮಾಡುವಲ್ಲಿ ಸಮಸ್ಯೆಗಳನ್ನ ವರದಿ ಮಾಡಿದ್ದಾರೆ.ಹೌದು, ಫೇಸ್ಬುಕ್ನ ಸರ್ವರ್ ಬುಧವಾರ ಸ್ಥಗಿತವನ್ನ ಅನುಭವಿಸಿದ್ದು, ಹಲವಾರು ಬಳಕೆದಾರರು ಹೊಸ ಪೋಸ್ಟ್ ಅಪ್ಲೋಡ್ ಮಾಡುವಲ್ಲಿ ಸಮಸ್ಯೆಗಳನ್ನ ವರದಿ ಮಾಡಿದ್ದಾರೆ.ಇನ್ನು ಸ್ಥಗಿತ ಟ್ರ್ಯಾಕಿಂಗ್ ವೆಬ್ಸೈಟ್ ಡೌನ್ಡೆಟೆಕ್ಟರ್, ಅಪ್ಲಿಕೇಶನ್ ಮತ್ತು ವೆಬ್ಸೈಟ್ ಎರಡಕ್ಕೂ ಸರ್ವರ್ ಸಂಪರ್ಕ ಸಮಸ್ಯೆಗಳಿಗೆ ಸಂಬಂಧಿಸಿದ ವರದಿಗಳ ಸಂಖ್ಯೆಯಲ್ಲಿ ಹಠಾತ್ ಏರಿಕೆಯನ್ನ ತೋರಿಸಿದೆ.

ಪುತ್ತೂರು : ಅಪ್ರಾಪ್ತ ಬಾಲಕಿಯ ಮೇಲೆ ಕಿರುಕುಳ ಆರೋಪ -ಕಡಬ ಮೂಲದ ಶಾಕಿರ್ ಪೊಲೀಸ್ ವಶಕ್ಕೆ

Posted by Vidyamaana on 2024-01-28 05:12:54 |

Share: | | | | |


ಪುತ್ತೂರು : ಅಪ್ರಾಪ್ತ  ಬಾಲಕಿಯ ಮೇಲೆ ಕಿರುಕುಳ ಆರೋಪ -ಕಡಬ ಮೂಲದ ಶಾಕಿರ್ ಪೊಲೀಸ್ ವಶಕ್ಕೆ

ಪುತ್ತೂರು:  ಯುವಕನೊಬ್ಬ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಘಟನೆ ಪುತ್ತೂರು ನಗರದಲ್ಲಿ ಜ 27ರ ತಡ ರಾತ್ರಿ ನಡೆದಿದೆ. ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಡಬ ಮೂಲದ ಶಾಕೀರ್ ವಶದಲ್ಲಿರುವ ವ್ಯಕ್ತಿ. ಪುತ್ತೂರು ಮೂಲದ ಅಪ್ರಾಪ್ತ ಬಾಲಕಿ, ಪುತ್ತೂರು  ದಾರಿ ಮಧ್ಯೆ ಆರೊಪಿ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ.ಆರೋಪಿಯನ್ನು ತಮ್ಮವಶಕ್ಕೆ ನೀಡಬೇಕೆಂದು ತಂಡವೊಂದು ಠಾಣೆಯ ಮುಂದೆ ಜಮಾಯಿಸಿತ್ತು. ಉದ್ರಿಕ್ತರನ್ನು ಪುತ್ತಿಲ ಪರಿವಾರ ಸಂಸ್ಥಾಪಕ ಅರುಣ್‌ ಕುಮಾರ ಪುತ್ತಿಲ ಸಮಾಧಾನಗೊಳಿಸಿದರು. ಆರೊಪಿಯ ವಿರುದ್ದ ಪೊಕ್ಕೋ ಪ್ರಕರಣ ದಾಖಲಿಸಲಾಗಿದೆ.

Recent News


Leave a Comment: