ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಉಪ್ಪಿನಂಗಡಿ: ಪೃಥ್ವಿ ಮಹಲ್‌ನಲ್ಲಿರುವ ಅಂಗಡಿಯಲ್ಲಿ ಬೆಂಕಿ ಅವಘಡ

Posted by Vidyamaana on 2024-06-21 22:57:59 |

Share: | | | | |


ಉಪ್ಪಿನಂಗಡಿ: ಪೃಥ್ವಿ ಮಹಲ್‌ನಲ್ಲಿರುವ ಅಂಗಡಿಯಲ್ಲಿ ಬೆಂಕಿ ಅವಘಡ

ಪುತ್ತೂರು: ಉಪ್ಪಿನಂಗಡಿ ಪೇಟೆಯಲ್ಲಿರುವ ಪೃಥ್ವಿ ಮಹಲ್ ನ ಫ್ಯಾನ್ಸಿ ಅಂಗಡಿಯೊಂದರಲ್ಲಿ ಶುಕ್ರವಾರ ರಾತ್ರಿ ಬೆಂಕಿ ಕಾಣಿಸಿಕೊಂಡು ಅಂಗಡಿಯನ್ನು ಸಂಪೂರ್ಣವಾಗಿ ಆವರಿಸಿ ಪಕ್ಕದಲ್ಲಿನ ಕೆಲವು ಅಂಗಡಿಗಳಿಗೆ ವ್ಯಾಪಿಸಿ ಹಾನಿಯುಂಟಾಗಿದೆ.

ಪೃಥ್ವಿ ಮಹಲ್ ನಲ್ಲಿನ ಅಂಗಡಿ ಮಾಲಕರು ರಾತ್ರಿ ತಮ್ಮ ಅಂಗಡಿಗಳನ್ನು ಮುಚ್ಚಿ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ನದಿಗೆ ಸ್ನಾನಕ್ಕೆಂದು ಇಳಿದಿದ್ದ ಯುವತಿಯರಿಬ್ಬರು ನೀರುಪಾಲು

Posted by Vidyamaana on 2024-04-14 17:39:07 |

Share: | | | | |


ನದಿಗೆ ಸ್ನಾನಕ್ಕೆಂದು ಇಳಿದಿದ್ದ ಯುವತಿಯರಿಬ್ಬರು ನೀರುಪಾಲು

ಕೇರಳ: ನದಿಗೆ ಸ್ನಾನ ಮಾಡಲು ಹೋಗಿದ್ದ ಇಬ್ಬರು ಯುವತಿಯರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಕೇರಳದ ಕರಿಂಪುಳದ ಚೆರುಪುಳದಲ್ಲಿ ನಡೆದಿದೆ.ಚೆರ್ಪುಲಸ್ಸೆರಿ ಕುಟ್ಟಿಕೋಡ್ ಪರಕ್ಕಲ್ ಹೌಸ್ ನಿವಾಸಿ ಮುಸ್ತಫಾ ಅವರ ಪುತ್ರಿ ರಿಜ್ವಾನಾ (19) ಮತ್ತು ಮನ್ನಾರ್ಕಾಡ್ ನಿವಾಸಿ ಕರುವರಕುಂಡು ಚೆರುಮಾಲಾ ಹೌಸ್ ನಿವಾಸಿ ಅಬೂಬಕ್ಕರ್ ಅವರ ಪುತ್ರಿ ದೀಮಾ ಮೆಹಬಾ (20) ಮೃತ ಯುವತಿಯರಾಗಿದ್ದಾರೆ. ರಿಜ್ವಾನಾ ಸ್ಥಳದಲ್ಲೇ ಮೃತಪಟ್ಟರೆ, ದೀಮಾ ಮೆಹಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರೊಂದಿಗೆ ಇದ್ದ ಕೊಟ್ಟೋಪದಂನ ಪುತನಿಕ್ಕಾಡ್ ಪುಥೆನ್ವೀಟಿಲ್ ನಿವಾಸಿ ಶಂಸುದ್ದೀನ್ ಅವರ ಪುತ್ರ ಬಾದುಷಾ (20) ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಸಂಜೆ 5.30 ರ ಸುಮಾರಿಗೆ ಈ ಘಟನೆ ನಡೆದಿದೆ

ಜೂ 12 ರಂದು ನಡೆಯಬೇಕಿದ್ದ ಪುತ್ತೂರು-ವಿಟ್ಲ ಪಾದಯಾತ್ರೆ ಮುಂದೂಡಿಕೆ-ಅರುಣ್ ಕುಮಾರ್

Posted by Vidyamaana on 2023-06-11 08:11:41 |

Share: | | | | |


ಜೂ 12 ರಂದು ನಡೆಯಬೇಕಿದ್ದ ಪುತ್ತೂರು-ವಿಟ್ಲ ಪಾದಯಾತ್ರೆ ಮುಂದೂಡಿಕೆ-ಅರುಣ್ ಕುಮಾರ್

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದವರೆಗೆ ಜೂ12 ರಂದು ನಡೆಯಬೇಕಿದ್ದ ಪಾದಯಾತ್ರೆಯನ್ನು ಕಾರಣಾಂತರಗಳಿಂದ ಮುಂದೂಡಿರುವುದಾಗಿ ಪುತ್ತಿಲ ಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ. ಪಾದಯಾತ್ರೆಯ ಮುಂದಿನ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ.

ಭಾರೀ ಕುತೂಹಲಕ್ಕೆ ಕಾರಣವಾಗಿದೆ ಪುತ್ತಿಲ ಪರಿವಾರದ ಸಮಾಲೋಚನಾ ಸಭೆ

Posted by Vidyamaana on 2024-02-01 16:11:52 |

Share: | | | | |


ಭಾರೀ ಕುತೂಹಲಕ್ಕೆ ಕಾರಣವಾಗಿದೆ ಪುತ್ತಿಲ ಪರಿವಾರದ ಸಮಾಲೋಚನಾ ಸಭೆ

ಪುತ್ತೂರು : ಪುತ್ತಿಲ ಪರಿವಾರದ ಸಮಾಲೋಚನಾ ಸಮಾವೇಶ ಫೆ.5 ರಂದು ಕೋಟೇಚಾ ಹಾಲ್ ನಲ್ಲಿ ನಡೆಯಲಿದೆ.

ಪ್ರಸನ್ನ ಮಾರ್ತ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಕೃಷ್ಣ ಉಪಾಧ್ಯಾಯ ಅವರು ಸಂಘಟನಾ ಸಂದೇಶ ನೀಡಲಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಉಪಸ್ಥಿತಿ ವಹಿಸಲಿದ್ದಾರೆ.


ಲೋಕಸಭಾ ಚುನಾವಣೆ ಹಿನ್ನೆಲೆ ಪುತ್ತಿಲ ಪರಿವಾರದ ಈ ಸಮಾಲೋಚನಾ ಸಮಾವೇಶ ಭಾರೀ ಮಹತ್ವ ಪಡೆದಿದ್ದು, ಕಾರ್ಯಕರ್ತರ ಬಳಿ ಅವರ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.


ಬಿಜೆಪಿ ಸೇರ್ಪಡೆಯ ವಿಚಾರ ಬಹಳಷ್ಟು ಸದ್ದು ಮಾಡುತ್ತಿದ್ದು, ಈ ವಿಚಾರದಲ್ಲಿ ಅಭಿಪ್ರಾಯ ಸಂಗ್ರಹ ಸಮಾಲೋಚನೆ ನಡೆಯುವ ಸಾಧ್ಯತೆಯಿದೆ.

ಪುತ್ತೂರು : ಲೋಕಸಭಾ ಚುನಾವಣೆ ಹಿನ್ನಲೆ :ಬಿಗಿ ಭದ್ರತೆಯಲ್ಲಿ ಕಂಟೇನರ್ ನಲ್ಲಿ ಆಗಮಿಸಿದ ಇವಿಎಮ್ ಮೆಷಿನ್

Posted by Vidyamaana on 2024-03-20 22:52:34 |

Share: | | | | |


ಪುತ್ತೂರು : ಲೋಕಸಭಾ ಚುನಾವಣೆ ಹಿನ್ನಲೆ :ಬಿಗಿ ಭದ್ರತೆಯಲ್ಲಿ ಕಂಟೇನರ್ ನಲ್ಲಿ  ಆಗಮಿಸಿದ ಇವಿಎಮ್ ಮೆಷಿನ್

ಪುತ್ತೂರು : ಲೋಕಸಭಾ ಚುನಾವಣೆ ಹಿನ್ನೆಲೆ ಇವಿಎಮ್ ಮೆಷಿನ್  ಮಾ.20ರಂದು ರಾತ್ರಿ ಪುತ್ತೂರಿಗೆ ಆಗಮಿಸಿದ್ದು, ಕಂಟೈನರ್ ಮೂಲಕ ಇವಿಎಮ್ ಮೆಷಿನ್ ಅನ್ನು ತರಲಾಗಿದೆ.ತೆಂಕಿಲದಲ್ಲಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇವಿಎಮ್ ಮೆಷಿನ್ ಗಳನ್ನು ಸ್ಟ್ರಾಂಗ್ ರೂಂ ನಲ್ಲಿ ಭದ್ರವಾಗಿಡಲಾಗಿದೆ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಸಹಾಯಕ ಆಯುಕ್ತರು, ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಹಾಗೂ ನಗರ ಸಭೆ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.

ತನ್ನದೇ ಬಸ್ಸಿನಡಿಗೆ ಬಿದ್ದು ಮಾಂಡವಿ ಬಸ್ ಮಾಲಕ ದಯಾನಂದ ಶೆಟ್ಟಿ ಮೃತ್ಯು

Posted by Vidyamaana on 2024-03-14 15:14:13 |

Share: | | | | |


ತನ್ನದೇ ಬಸ್ಸಿನಡಿಗೆ ಬಿದ್ದು ಮಾಂಡವಿ ಬಸ್ ಮಾಲಕ ದಯಾನಂದ ಶೆಟ್ಟಿ ಮೃತ್ಯು

ಉಡುಪಿ, ಮಾ.14: ತನ್ನದೇ ಬಸ್ಸಿನಡಿಗೆ ಬಿದ್ದು ಬಸ್ ಮಾಲಕರೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ಮಣಿಪಾಲದಲ್ಲಿ ನಡೆದಿದೆ. ಮಾಂಡವಿ ಖಾಸಗಿ ಬಸ್ ಮಾಲೀಕ ದಯಾನಂದ ಶೆಟ್ಟಿ(65) ಮೃತರು. 

ಮಾಂಡವಿ ಸಂಸ್ಥೆ ಸುಮಾರು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಬಸ್‌ ಸೇವೆ ನೀಡುತ್ತಿದ್ದು, ಇತ್ತೀಚಿಗೆ ಒಂದು ಬಸ್‌ ಕೆಟ್ಟು ನಿಂತಿತ್ತು. ಈ ಹಿನ್ನೆಲೆಯಲ್ಲಿ ಮಾಲಕ ದಯಾನಂದ ಶೆಟ್ಟಿ ಬಸ್ಸನ್ನು ಮಣಿಪಾಲದ 80 ಬಡಗಬೆಟ್ಟುವಿನ ಗ್ಯಾರೇಜ್‌ ಒಂದರಲ್ಲಿ ರಿಪೇರಿಗೆ ನೀಡಿದ್ದರು. 


ಬಸ್‌ ರಿಪೇರಿಗೆ ನೀಡಿ ಕೆಲವು ದಿನ ಕಳೆದ ಹಿನ್ನೆಲೆಯಲ್ಲಿ ದಯಾನಂದ ಶೆಟ್ಟಿ ನಿನ್ನೆ ( ಮಾರ್ಚ್ 13 ) ಬಸ್‌ ನೋಡಲೆಂದು ಗ್ಯಾರೇಜ್‌ಗೆ ತೆರಳಿದ್ದು ಮುಂಭಾಗದಲ್ಲಿ ನಿಂತಿದ್ದರು. ಈ ವೇಳೆ ಅವರನ್ನು ನೋಡದೆ ಬಸ್ಸನ್ನು ಏಕಾಏಕಿ ಚಲಾಯಿಸಿದ್ದು ದಯಾನಂದ ಶೆಟ್ಟಿ ಬಸ್ಸಿನ ಚಕ್ರದಡಿಗೆ ಸಿಲುಕಿದ್ದಾರೆ. ಗ್ಯಾರೇಜ್​ನ ಮೆಕ್ಯಾನಿಕ್ ಅಜಾಗರೂಕತೆಯಿಂದ ಎಂಜಿನ್ ಸ್ಟಾರ್ಟ್ ಮಾಡಿದ್ದರಿಂದ ಬಸ್ ಮುಂದಕ್ಕೆ ಚಲಿಸಿದೆ ಎನ್ನುವ ಆರೋಪ ಕೇಳಿಬಂದಿದೆ. ಕೂಡಲೇ ಸ್ಥಳದಲ್ಲಿದ್ದವರು ದಯಾನಂದ ಶೆಟ್ಟಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Recent News


Leave a Comment: