ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ಸುದ್ದಿಗಳು News

Posted by vidyamaana on 2024-07-03 10:25:40 |

Share: | | | | |


ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ವಿಜಯಪುರ: ಇಸ್ಪೀಟ್ ಆಡುವಾಗ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಎಸ್ಕೇಪ್ ಆಗಲು ಹೋಗಿ ತೆಪ್ಪ ಮಗುಚಿದ ಘಟನೆ ನಿನ್ನೆ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಿನ ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಎಂಟು ಜನ ತೆಪ್ಪದಲ್ಲಿ ಕೃಷ್ಣಾ ನದಿಯ ಮೂಲಕ ಎಸ್ಕೇಪ್ ಆಗುವ ವೇಳೆ ದುರಂತ ನಡೆದಿದೆ. ಇನ್ನು, ಮೀನುಗಾರರು ಹಾಗೂ ಸ್ಥಳೀಯರ ನೆರವಿನೊಂದಿಗೆ ಇಬ್ಬರ ರಕ್ಷಣೆ ಮಾಡಲಾಗಿದ್ದು ಇಬ್ಬರ ಇಬ್ಬರ ಮೃತದೇಹ ಸಿಕ್ಕಿದೆ.

ಪುಂಡಲೀಕ ಯಂಕಂಚಿ (35), ಮಹಮ್ಮದ್ ತೈಹದ್ ಚೌಧರಿ(45) ಸಾವನ್ನಪ್ಪಿದ್ದಾರೆ. ಸಚಿನ್ ಕಟಬರ್, ಫಾರೂಕ್ ಅಮದ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಎಂಟು ಜನ ಕೊಲ್ಹಾರ ಪಟ್ಟಣದವರಾಗಿದ್ದು, ನೀರುಪಾಲಾದವರು ದಶರಥ( 58),ಮೈಬೂಬ್ ವಾಲಿಕಾರ (35), ರಫೀಕ್ ಬಾಂಬೆ ,(40), ರಫೀಕ ಜಾಲಗಾರರಿಗಾಗಿ(48) ಹುಡುಕಾಟ ನಡೆಯುತ್ತಿದೆ.

 Share: | | | | |


ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನಲೆಯೇನು? ಜಂಬೂಸವಾರಿಯ ಇತಿಹಾಸದ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ

Posted by Vidyamaana on 2023-10-24 06:54:25 |

Share: | | | | |


ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನಲೆಯೇನು? ಜಂಬೂಸವಾರಿಯ ಇತಿಹಾಸದ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ

ಮೈಸೂರು : ಮೈಸೂರಿನಲ್ಲಿ ನಾಡಹಬ್ಬ ದಸರಾ ಕಳೆಗಟ್ಟಿದ್ದು, ಇಂದು ಸಂಜೆ 4.40 ಕ್ಕೆ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಚಿನ್ನದ ಅಂಬಾರಿಯನ್ನು ಹೊತ್ತು ಅಭಿಮನ್ಯು ಆನೆ ಸತತ ನಾಲ್ಕನೇ ಬಾರಿಗೆ ಹೆಜ್ಜೆ ಹಾಕಲಿದ್ದಾನೆ.ಸಿಎಂ ಸಿದ್ದರಾಮಯ್ಯ ಅವರು ಇಂದು ಸಂಜೆ 4.30-4.46 ರ ಶುಭ ಮೀನ ಲಗ್ನದಲ್ಲಿ ಕೋಟಿ ಆಂಜನೇಯ ದೇಗುಲದ ಬಳಿ ಪೂಜೆ ಸಲ್ಲಿಸದ್ದಲಿದ್ದಾರೆ.ಬಳಿಕ ವಿಶ್ವವಿಖ್ಯಾತ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ.


ಅರಮನೆಯ ಬಲರಾಮ ದ್ವಾರದಲ್ಲಿ ಇಂದು ಮಧ್ಯಾಹ್ನ 1.46 ರಿಂದ 2.08 ರೊಳಗೆ ನಂದಿಧ್ವಜ ಪೂಜೆ ನೆರವೇರಲಿದೆ. ಸಂಜೆ 4.40 ರಿಂದ 5 ರವರೆಗೆ ಅಂಬಾವಿಲಾಸ ಅರಮನೆಯ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಪೊಲೀಸರು ಜಂಬೂಸವಾರಿ ಮೆರವಣಿಗೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ . ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 6 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಬಾರಿ ಜಂಬೂ ಸವಾರಿಯಲ್ಲಿ ಕಣ್ಮನ ಸೆಳೆಯುವ 40 ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಸಾಗಲಿವೆ.

ವಿಶ್ವವಿಖ್ಯಾತ ಜಂಬೂಸವಾರಿಯ ಇತಿಹಾಸ

ನಾಡಹಬ್ಬ ಮೈಸೂರು ದಸರಾ (Mysore dasara) ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿದೆ. ಪ್ರತಿ ನವರಾತ್ರಿ (Navratri Festival) ಹಾಗೂ ವಿಜಯದಶಮಿಯ (Vijay

non

ashami Festival) ಅಷ್ಟೂ ದಿನ ಮೈಸೂರು (Mysore City) ಝಗಮಗಿಸಲಿದೆ. ದಸರೆಯ ಇತಿಹಾಸವನ್ನು ನೋಡುವುದಾದರೆ 1610ರಲ್ಲಿ ಆರಂಭ ಮಾಡಲಾಯಿತು. ಶ್ರೀರಂಗಪಟ್ಟಣದ ಕಾವೇರಿ ನದಿಯ ಉತ್ತರ ದಿಕ್ಕಿನ ಗೌರಿಕಡುವೆಯಲ್ಲಿ ಎಂಬಲ್ಲಿ ದಸರಾಕ್ಕೆ ಚಾಲನೆ ನೀಡಲಾಗಿತ್ತು. ಅಂಬಾರಿ ಹೊರುವ ಪದ್ಧತಿಗೆ ಚಾಲನೆ ಸಿಕ್ಕಿದ್ದೂ ಸಹ ಆಗಿನಿಂದಲೇ ಆಗಿದೆ.


ಮೈಸೂರನ್ನು ಮಹಿಷಾಸುರನಿಂದ ರಕ್ಷಿಸಿ, ಆತನನ್ನು ಸಂಹಾರ ಮಾಡಿದ ದಿನವನ್ನು ವಿಜಯದಶಮಿ ಎಂದು ಆಚರಿಸುತ್ತಾ ಬರಲಾಗಿದ್ದು, ಅಂದು ಜಂಬೂ ಸವಾರಿ ಮೂಲಕ ಆನೆ ಮೇಲೆ 750 ಕೆಜಿ ತೂಕದ ಸ್ವರ್ಣಖಚಿತ ಅಂಬಾರಿಯಲ್ಲಿ ದೇವಿಯ ಪ್ರತಿಮೆಯನ್ನು ಇಟ್ಟು ಅರಮನೆಯಿಂದ ಬನ್ನಿ ಮಂಟಪದವರೆಗೆ ರಾಜ ಬೀದಿಯಲ್ಲಿ ಮೆರವಣಿಗೆ ನಡೆಸಲಾಗುವುದು.ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣ ದೇವರಾಯನ ಕಾಲದಲ್ಲಿ ವಿಜಯದಶಮಿಯನ್ನು ಪ್ರಾರಂಭಿಸಲಾಯಿತು. ಈ ವೇಳೆ ಶೌರ್ಯ - ಪರಾಕ್ರಮಗಳ ಪ್ರದರ್ಶನ, ಕಲೆ - ಸಾಹಿತ್ಯಗಳಿಗೆ ವೇದಿಕೆ, ಸಂಗೀತ - ನೃತ್ಯ ಮತ್ತು ಸಂಸ್ಕೃತಿ ಪ್ರದರ್ಶನಕ್ಕೆ ಅವಕಾಶ ಸೇರಿದಂತೆ ಹತ್ತು ದಿನಗಳ ಕಾಲ ಅದ್ಧೂರಿಯಾಗಿ ಆಚರಣೆ ನಡೆಸುತ್ತಾ ಬರಲಾಗಿತ್ತು. ಅವರ ತರುವಾಯ ಮೈಸೂರಿನಲ್ಲಿ ರಾಜಾ ಒಡೆಯರ್‌ ಅವರು ದಸರಾವನ್ನು ಶ್ರೀರಂಗಪಟ್ಟಣದಲ್ಲಿ ಆರಂಭಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಅಂದರೆ 1799ರಲ್ಲಿ ಒಡೆಯರು ತಮ್ಮ ಕೇಂದ್ರ ಸ್ಥಾನವನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಿಕೊಂಡರು. ನಂತರದ ದಸರಾ ಆಚರಣೆಗಳು ಮೈಸೂರಿನಲ್ಲಿ ಪ್ರಾರಂಭವಾದವು.


ಜಂಬೂ ಸವಾರಿ ಆರಂಭಕ್ಕೆ ಮುನ್ನ ಶುಭ ಕುಂಭ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಮೊದಲು ಪೂಜೆ ಸಲ್ಲಿಸಲಾಗುತ್ತದೆ.ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಆಸೀನಳಾಗಿರುವ ತಾಯಿ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ. ಆ ಬಳಿಕ 24 ಕುಶಾಲ ತೋಪುಗಳ ಗೌರವವನ್ನು ಸಮರ್ಪಣೆ ಮಾಡಲಾಗುತ್ತದೆ. ಅಲ್ಲಿಂದ ಅರಮನೆ ಆವರಣದಲ್ಲಿ ವಿಜಯದಶಮಿಯ ಅತ್ಯಾಕರ್ಷಕ ಮೆರವಣಿಗೆಗೆ ಚಾಲನೆ ದೊರೆಯುತದೆ. ಜಂಬೂಸವಾರಿಯು ಅರಮನೆ ಆವರಣದಿಂದ ಬನ್ನಿ ಮಂಟಪದವರೆಗೆ ನಡೆಯುತ್ತದೆ.


ಅಂಬಾರಿ ಹೊತ್ತ ಬಲರಾಮನ ಜತೆಗೆ ಪೊಲೀಸ್ ಬ್ಯಾಂಡ್‌ನ ಆಕರ್ಷಕ ತಾಳ ವಾದ್ಯ ಕಳೆಗಟ್ಟಲಿದೆ. ಅಲ್ಲದೆ, ಕಂಸಾಳೆ ಕುಣಿತ, ಕಲಾತಂಡಗಳ ನೃತ್ಯ ಪ್ರದರ್ಶನಗಳ ಜತೆಗೆ ಸ್ತಬ್ಧ ಚಿತ್ರಗಳು ಎಲ್ಲರ ಗಮನ ಸೆಳೆಯುತ್ತದೆ. ಇದರ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿರುತ್ತಾರೆ.

ಕಲಬುರಗಿ: ಹಣೆಗೆ ಕುಂಕುಮ ಇಡಲು ನಿರಾಕರಿಸಿದ ವಿಪಕ್ಷ ನಾಯಕ ಆರ್.ಅಶೋಕ

Posted by Vidyamaana on 2024-03-25 11:54:53 |

Share: | | | | |


ಕಲಬುರಗಿ: ಹಣೆಗೆ ಕುಂಕುಮ ಇಡಲು ನಿರಾಕರಿಸಿದ ವಿಪಕ್ಷ ನಾಯಕ ಆರ್.ಅಶೋಕ

ಕಲಬುರಗಿ, ಮಾ.24: ವಿಪಕ್ಷ ನಾಯಕ ಆರ್.ಅಶೋಕ(R Ashoka) ಅವರು ತಮ್ಮ ಹಣೆಗೆ ಕುಂಕುಮ ಹಾಕಲು ನಿರಾಕರಿಸಿದ ಘಟನೆ ನಡೆದಿದೆ. ಕಲಬುರಗಿ (Kalaburagi) ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೆಪೇಟ್ ಬಿಜೆಪಿ ಕಚೇರಿಗೆ ಭೇಟಿ ನೀಡಿದಾಗ ಹಿರಿಯ ಮುಖಂಡರೊಬ್ಬರು ಕುಂಕುಮ ಹಚ್ಚಲು ಮುಂದಾದಾಗ ನಿರಾಕರಿಸಿದ್ದಾರೆ. ಸಿದ್ದರಾಮಯ್ಯ (Siddaramaiah) ಹಿಂದೂ ವಿರೋಧಿ, ಕೇಸರಿ ಕಂಡರೆ ಆಗಲ್ಲ, ಕೇಸರಿ ಶಲ್ಯ ಧರಿಸಲ್ಲ, ಕುಂಕುಮ ಹಾಕಲ್ಲ ಎಂದೆಲ್ಲಾ ಟೀಕಿಸುವ ರಾಜ್ಯದ ಬಿಜೆಪಿ ನಾಯಕರು ತಮ್ಮ ನಾಯಕನ ಈ ನಡೆಗೆ ಏನು ಹೇಳುತ್ತಾರೆ?


ಈ ಹಿಂದೆ ಸದನದಲ್ಲಿ ತಮ್ಮನ್ನು ಹೊಗಳುವ ಭರದಲ್ಲಿ ಬಿಜೆಪಿಯನ್ನು ಬೆಂಬಲಿಸುವ ಬಜರಂಗದಳದ ಕಾರ್ಯಕರ್ತರ ವಿರುದ್ಧ “ನಾನು ಗೃಹಸಚಿವ ಆಗಿದ್ದಾಗ ಪಬ್‌ನಲ್ಲಿ ಗಲಾಟೆ ಆದಾಗ ಗೂಂಡಾ ಕಾಯ್ದೆ ಹಾಕಿದ್ದೆ”ಎಂದು ಹೇಳಿದ್ದರು. ಆ ಮೂಲಕ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತಿದ್ದ ಅವರು ಬಜರಂಗದಳ ಕಾರ್ಯಕರ್ತರ ಕ್ಷಮೆ ಕೇಳಿದ್ದರು. ಇದೀಗ ಕುಂಕುಮ ಹಣೆಗೆ ಇಡಲು ನಿರಾಕರಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಕಚೇರಿಗೆ ಆಗಮಿಸಿದ ಅಶೋಕ್ ಅವರಿಗೆ ಬಿಜೆಪಿ ಮುಖಂಡರು ಹಾರ ಹಾಕಿ ಸ್ವಾಗತಿಸಲು ಮುಂದಾದರು. ಈ ವೇಳೆ ಎರಡು ಹಾರಗಳನ್ನು ತಾವು ಹಾಕಿಕೊಳ್ಳದೆ ಬಿಜೆಪಿ ಹಿರಿಯ ಮುಖಂಡ ಡಾ ವಿಶ್ವನಾಥ್ ಪವಾರ್ ಮತ್ತು ಇನ್ನೊಬ್ಬರಿಗೆ ಹಾಕಿ ಗೌರವಿಸಿದರು. ಈ ನಡುವೆ ಡಾ ವಿಶ್ವನಾಥ್ ಪವಾರ್ ಅವರು ಅಶೋಕ ಅವರ ಹಣೆಗೆ ಕುಂಕುಮ ಇಡಲು ಮುಂದಾಗಿದ್ದಾರೆ. ಆದರೆ ಅಶೋಕ ಅವರು ಕುಂಕುಮ ಹಚ್ಚದಂತೆ ತಡೆದಿದ್ದಾರೆ. ಬಳಿಕ ವಿಶ್ವನಾಥ್ ಶಾಲು ಹಾಕಿ ಸನ್ಮಾನಿಸಿದರು.

ಹೆಚ್ಚುವರಿ ಅಕ್ಕಿ ಬದಲು ಹಣ ನೀಡುವ ಅನ್ನಭಾಗ್ಯ ಯೋಜನೆಗೆ ಸಿಎಂ ಅಧಿಕೃತ ಚಾಲನೆ

Posted by Vidyamaana on 2023-07-10 13:41:33 |

Share: | | | | |


ಹೆಚ್ಚುವರಿ ಅಕ್ಕಿ ಬದಲು ಹಣ ನೀಡುವ ಅನ್ನಭಾಗ್ಯ ಯೋಜನೆಗೆ ಸಿಎಂ ಅಧಿಕೃತ ಚಾಲನೆ

ಬೆಂಗಳೂರು : ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲು ನೇರ ಹಣ ವರ್ಗಾವಣೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು. ಈ ಮೂಲಕ ಜನರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, 170 ರೂ ಹಣ ನೇರವಾಗಿ ಖಾತೆಗೆ ವರ್ಗಾವಣೆಯಾಗಲಿದೆ.

ಇಂದು  ಮೈಸೂರು ಮತ್ತು ಕೋಲಾರ ಜಿಲ್ಲೆಯ ಪಡಿತರದಾರರಿಗೆ ಹಣವರ್ಗಾವಣೆಯಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತದಲ್ಲಿ ಬೇರೆ ಬೇರೆ ಜಿಲ್ಲೆಗಳ ಪಡಿತರದಾರರಿಗೆ ಹಣ ವರ್ಗಾವಣೆಯಾಗಲಿದೆವಿಶೇಷ ಅಂದರೆ ಅನ್ನಭಾಗ್ಯ ಯೋಜನೆ ಜಾರಿಗೆ ಇದೀಗ ದಶಕದ ಸಂಭ್ರಮ ಇದೇ ಹೊತ್ತಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ 10 ಕೆಜಿ ಅಕ್ಕಿ ಬದಲಾಗಿ ಫಲಾನುಭವಿಗಳ ಖಾತೆಗೆ 5 ಕೆಜಿ ಅಕ್ಕಿಯ ಹಣ ವಿತರಿಸುತ್ತಿದೆ.

2013ರಲ್ಲಿ ಅನ್ನಭಾಗ್ಯ ಅಕ್ಕಿ ಯೋಜನೆಯನ್ನು ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಜಾರಿಗೆ ತಂದಿದ್ದರು. ಮೇ 13ರಂದು ಐತಿಹಾಸಿಕ ಅನ್ನಭಾಗ್ಯ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಜುಲೈ ತಿಂಗಳಿಂದ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಬಂದಿತು. ಅನ್ನಭಾಗ್ಯ ಯೋಜನೆಯಿಂದ ರಾಜ್ಯದಲ್ಲಿ ಸುಮಾರು 1.08 ಕೋಟಿ ಕುಟುಂಬಗಳು ಯೋಜನೆ ಲಾಭ ಪಡೆಯುತ್ತಿವೆ.ಸಿಎಂ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಉಚಿತ ಅಕ್ಕಿ ಘೋಷಣೆ ಮಾಡಿದ್ದು, ಹೆಚ್ಚುವರಿ ಅಕ್ಕಿ ಸಿಗುವವರೆಗೂ 5 ಕೆಜಿ ಅಕ್ಕಿ ಉಳಿದ 5 ಕೆಜಿ ಅಕ್ಕಿಗೆ ಕೆಜಿ ಅಕ್ಕಿಗೆ 34 ರೂ.ನಂತೆ 170 ರೂಪಾಯಿ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸುವುದಾಗಿ ತಿಳಿಸಿದೆ. ಈ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.

ಲಕ್ಷಾಂತರ ಅಭಿಮಾನಿ ಗಳಿಸಿದ್ದ ಹಾವೇರಿ ರಾಕ್ ಸ್ಟಾರ್‌ ಹೋರಿ ನಿಧನ

Posted by Vidyamaana on 2024-04-07 19:10:43 |

Share: | | | | |


ಲಕ್ಷಾಂತರ ಅಭಿಮಾನಿ ಗಳಿಸಿದ್ದ ಹಾವೇರಿ ರಾಕ್ ಸ್ಟಾರ್‌ ಹೋರಿ ನಿಧನ

ಹಾವೇರಿ: ಜಿಲ್ಲೆಯ ಹೆಸರಾಂತ ರಾಕ್ ಸ್ಟಾರ್ ಖ್ಯಾತಿಯ ಹೋರಿ (Bull) ಕೊನೆಯುಸಿರೆಳೆದಿದೆ. ಕಳೆದ ಕೆಲವು ದಿನಗಳಿಂದ ಹೋರಿ ಬಳಲುತ್ತಿತ್ತು. ಇಂದು ರಾಕ್ ಸ್ಟಾರ್ ಖ್ಯಾತಿಯ ಹೋರಿ ಸಾವನ್ನಪ್ಪಿದೆ. ಕಳೆದ ಹತ್ತು ವರ್ಷಗಳಿಂದ ಹೋರಿ ಹಬ್ಬದಲ್ಲಿ ರಾಕ್​ ಸ್ಟಾರ್​ ಭಾಗಿಯಾಗುತ್ತಿದ್ದನು.ಹಾವೇರಿಯ ಕಾಂಗ್ರೆಸ್ ಅಭ್ಯರ್ಥಿ ಆನಂದ್​ ಗಡ್ಡದೇವರಮಠ (Anand G

non

d

non

evaramath) ಮೃತ ಹೋರಿಯ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ (Former CM Basavaraj Bommai) ಸಹ ರಾಕ್​ ಸ್ಟಾರ್​ ಹೋರಿಯ ನಿಧನಕ್ಕೆ ಸಂತಾಪ ಸೂಚಿಸಿ ಎಕ್ಸ್​ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ತನ್ನದೇ ಛಾಪು ಮೂಡಿಸಿದ್ದ ರಾಕ್​ ಸ್ಟಾರ್​ ರಾಜ್ಯಾದ್ಯಂತ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದನು.

10 ಲಕ್ಷ ಡಂಡ: ಇಂದಿನಿಂದ ಸಿಮ್ ಕಾರ್ಡ್ ಹೊಸ ನಿಯಮ: ಈ ವಿಷಯ ನಿಮಗೆ ತಿಳಿದಿರಲಿ

Posted by Vidyamaana on 2023-10-01 17:17:40 |

Share: | | | | |


10 ಲಕ್ಷ ಡಂಡ: ಇಂದಿನಿಂದ ಸಿಮ್ ಕಾರ್ಡ್ ಹೊಸ ನಿಯಮ: ಈ ವಿಷಯ ನಿಮಗೆ ತಿಳಿದಿರಲಿ

ಅಕ್ಟೋಬರ್ 1 ಅಂದರೆ ಇಂದಿನಿಂದ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗಿದೆ. ದೂರಸಂಪರ್ಕ ಇಲಾಖೆ ಅಥವಾ ಡಾಟ್ ಈ ಹಿಂದೆ ಸಿಮ್ ಕಾರ್ಡ್‌ಗಳನ್ನು (Sim Card) ಮಾರಾಟ ಮಾಡುವ ನಿಯಮಗಳನ್ನು ಬದಲಾಯಿಸುವುದಾಗಿ ಘೋಷಿಸಿತ್ತು. ಇನ್ನು ಮುಂದೆ, ಮಾರಾಟಗಾರರು ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವಲ್ಲಿ ಅನೇಕ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಈ ನಿಯಮವನ್ನು ಪಾಲಿಸದಿದ್ದರೆ 10 ಲಕ್ಷ ರೂಪಾಯಿಗಳವರೆಗೆ ದಂಡ ಕಟ್ಟಬೇಕು. ದೇಶದಲ್ಲಿ ಹೆಚ್ಚುತ್ತಿರುವ ಸಿಮ್ ಕಾರ್ಡ್ ವಂಚನೆ ದರವನ್ನು ತಡೆಯಲು ಸರ್ಕಾರದಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.ನಕಲಿ ಸಿಮ್ ಕಾರ್ಡ್‌ಗಳ ಮಾರಾಟವನ್ನು ತಡೆಯಲು ಮಾರಾಟಗಾರರಿಗೆ ಈ ನಿಯಮ ತಂದಿದ್ದರೂ, ಇದು ಖರೀದಿದಾರರ ಮೇಲೂ ಪರಿಣಾಮ ಬೀರುತ್ತದೆ.


ಬಹಳ ದಿನಗಳಿಂದ ಬರುತ್ತಿರುವ ದೂರುಗಳಿಗೂ ಸ್ವಲ್ಪ ಮಟ್ಟಿಗೆ ಪರಿಹಾರ ದೊರೆಯಲಿದೆ. ದಿನದಿಂದ ದಿನಕ್ಕೆ ಪ್ರಿ-ಆಕ್ಟಿವೇಟೆಡ್ ಸಿಮ್ ಕಾರ್ಡ್‌ಗಳು ದೇಶದಲ್ಲಿ ಮಾರಾಟವಾಗುತ್ತಿವೆ. ಹೆಚ್ಚಿನ ಸಂದರ್ಭಗಳಲ್ಲಿ, ಆ ಸಿಮ್‌ಗಳನ್ನು ಬೇರೆಯವರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈಗ ಸಿಮ್ ಕಾರ್ಡ್ ಮಾರಾಟವನ್ನು ಕಟ್ಟುನಿಟ್ಟಾಗಿ ಮಾಡಲು ಸಾಧ್ಯವಾದರೆ, ಅಂತಹ ವಂಚನೆಯ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಸರ್ಕಾರ ಹೇಳಿದೆ.


ಹೊಸ ನಿಯಮವು ಜಾರಿಗೆ ಬಂದ ನಂತರ, ಮಾರಾಟಗಾರರು ಪೂರ್ವ-ಸಕ್ರಿಯಗೊಳಿಸಿದ ಸಿಮ್‌ಗಳನ್ನು ಇತರರಿಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಸಿಮ್ ಕಾರ್ಡ್ ಮಾರಾಟ ಮಾಡುವ ಮಾರಾಟಗಾರರ ಮೇಲೆ ನಿಗಾ ಇಡುವ ಮೂಲಕ ಗ್ರಾಹಕರ ಸಮಸ್ಯೆಗೆ ಅಂತ್ಯ ಹಾಡಲು ದೂರಸಂಪರ್ಕ ಇಲಾಖೆ (ಡಿಒಟಿ) ಮುಂದಾಗಿದೆ. ಅಷ್ಟೇ ಅಲ್ಲ, ಸಿಮ್ ಮಾರಾಟಗಾರನು ತನ್ನ ಅಂಗಡಿ ಸಿಬ್ಬಂದಿಯ ಎಲ್ಲಾ ಮಾಹಿತಿಯ ದಾಖಲೆಯನ್ನು ಇಟ್ಟುಕೊಳ್ಳಬೇಕು. ಅಂಗಡಿ ಸಿಬ್ಬಂದಿ ಕೂಡ ಪೊಲೀಸ್ ಪರಿಶೀಲನೆಗೆ ಹೋಗಬೇಕಾಗುತ್ತದೆ.DoT ನ ಹೊಸ ನಿಯಮಗಳ ಪ್ರಕಾರ, ಕಾರ್ಪೊರೇಟ್ ID ಸಂಖ್ಯೆ ಅಥವಾ CIN ಸಂಖ್ಯೆಯನ್ನು ಪ್ರತಿ SIM ಕಾರ್ಡ್ ಅಂಗಡಿಗೆ (ಚಿಲ್ಲರೆ) ನೀಡಲಾಗುತ್ತದೆ. ಈ ತುರ್ತು ಸಂಖ್ಯೆ ಇಲ್ಲದೆ ಯಾರೂ ಸಿಮ್ ಕಾರ್ಡ್ ಅನ್ನು ಮಾರಾಟ ಮಾಡಲು ಸಾಧ್ಯವಿಲ್ಲ.


ಈಗ DoT ಅಡಿಯಲ್ಲಿ ನೋಂದಾಯಿಸಲು ಚಿಲ್ಲರೆ ಅಂಗಡಿಯು ಆಧಾರ್, PAN, ಪಾಸ್‌ಪೋರ್ಟ್ ಮತ್ತು GST ವಿವರಗಳನ್ನು ಒದಗಿಸಬೇಕಾಗಿದೆ. ನೋಂದಣಿ ಇಲ್ಲದೆ ಯಾವುದೇ ಅಂಗಡಿಯು ಸಿಮ್ ಕಾರ್ಡ್ ಅನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಈ ನೋಂದಣಿ ಇಲ್ಲದೆ ಅಂಗಡಿಯು ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಿದರೆ, ಅದರ ಐಡಿಯನ್ನು ನಿರ್ಬಂಧಿಸಲಾಗುತ್ತದೆ.ಇನ್ನು ಒಂದುವೇಳೆ ಒಬ್ಬ ವ್ಯಕ್ತಿಯು ಸಿಮ್ ಕಾರ್ಡ್ ಅನ್ನು ಕಳೆದುಕೊಂಡರೆ ಅಥವಾ ಸಿಮ್ ಕಟ್ ಆದರೆ, ಅವನು ಪರಿಶೀಲನೆ ಪ್ರಕ್ರಿಯೆಯ ಮೂಲಕವೇ ಹೋಗಬೇಕಾಗುತ್ತದೆ. ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಲು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಜಿಯೋ, ಏರ್ಟೆಲ್, ವಿ, ಬಿಎಸ್​ಎನ್​ಎಲ್​ಗೆ ನಿರ್ದೇಶನ ನೀಡಲಾಗಿದೆ.

ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಮಧ್ಯಂತರ ಕ್ಷೇತ್ರ ಪ್ರತಿನಿಧಿ ಸಭೆ ನೂತನ ಸಮಿತಿ ರಚನೆ

Posted by Vidyamaana on 2023-08-19 16:19:27 |

Share: | | | | |


ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಮಧ್ಯಂತರ ಕ್ಷೇತ್ರ ಪ್ರತಿನಿಧಿ ಸಭೆ ನೂತನ ಸಮಿತಿ ರಚನೆ

ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರದ ಮಧ್ಯಂತರ ಕ್ಷೇತ್ರ ಪ್ರತಿನಿಧಿ ಸಭೆಯು ಆ 18 ರಂದು ಪುತ್ತೂರು ಲಯನ್ಸ್  ಸಭಾಂಗಣದಲ್ಲಿ ನಡೆಯಿತು.

ಕಳೆದ 2ವರ್ಷಗಳ ಪಕ್ಷದ ಕಾರ್ಯ ಚಟುವಟಿಕೆ ಗಳ ಬಗ್ಗೆ  ಕ್ಷೇತ್ರ ಸಮಿತಿ ಪ್ರ.ಕಾರ್ಯದರ್ಶಿ  ಅಬ್ದುಲ್ ರಹಿಮಾನ್ ವರದಿ ಮಂಡಿಸಿದರು.

ಪಕ್ಷ ಬಲವರ್ಧನೆ ಬಗ್ಗೆ ಅಸೆಂಬ್ಲಿ ವಾರು ನಾಯಕರೊಡನೆ SDPI ದ.ಕ ಜಿಲ್ಲಾ ಅದ್ಯಕ್ಷ ರು ಗಳ ಅಬಿಪ್ರಾಯ ಗಳನ್ನು ವಿನಿಮಯ ಮಾಡಿ ಪಕ್ಷ ಬಲವರ್ಧನೆ ಗೆ ಸಲಹೆ ಸೂಚನೆಗಳನ್ನು ನೀಡಿದರು. ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು  ನಾಯಕತ್ವದ ಬಗ್ಗೆ ತರಬೇತಿಯನ್ನು ನೀಡಿದರು

ಜಿಲ್ಲೆಯಾದ್ಯಂತರ ಪಕ್ಷದ ಮಧ್ಯಂತರ ಪ್ರತಿನಿಧಿ ಸಬೆಗಳಲ್ಲಿ ಪಕ್ಷದ ಪದಾದಿಕಾರಿಗಳಲ್ಲಿ ಕೆಲವೊಂದು ಬದಲಾವಣೆಗಳಯ ಮಾಡಲಾಯಿತು 

ಅದ್ಯಕ್ಷ ರಾಗಿ ಇಬ್ರಾಹಿಂ ಸಾಗರ್,ಪ್ರ.ಕಾರ್ಯದರ್ಶಿ ಯಾಗಿ ಅಬ್ದುಲ್ ರಹಿಮಾನ್ ಪುತ್ತೂರು ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಸಾಲ್ಮರ ರವರನ್ನು ಮುಂದುವರಿಸಲಾಯಿತು

ಮತ್ತು ಖಜಾಂಚಿ ಯಾಗಿ ವಿಶ್ವನಾಥ್ ಪುಣಚತ್ತಾರು,ಜತೆಕಾರ್ಯದರ್ಶಿಯಾಗಿ ಅಬ್ದುರ್ರಹಿಮಾನ್ (ಅದ್ದು) ಕೊಡಿಪ್ಪಾಡಿ,ಮತ್ತು ಮುಸ್ತಫ DB ಯವರು ಆಯ್ಕೆ ಯಾದರು

 ದ.ಕ ಜಿಲ್ಲಾ ಅದ್ಯಕ್ಷ ಅನ್ವರ್ ಸಾದಾತ್ ಬಜತ್ತೂರು,ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಮತ್ತು ದ‌ಕ ಜಿಲ್ಲಾ ಸದಸ್ಯರಾದ ಅಬೂಬಕ್ಕರ್ ಮದ್ದ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕ್ಷೇತ್ರ ಸಮಿತಿ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಕೆ.ಎ ಸಮಾರೋಪ ಬಾಷಣ ಗೈದರು ಕಾರ್ಯಕ್ರಮ ವನ್ನು ಅಬ್ದುಲ್ ಹಮೀದ್ ಸಾಲ್ಮರ ಸ್ವಾಗತಿಸಿ ಕಾರ್ಯದರ್ಶಿ ಗಳಾದ  ಅಬ್ದುಲ್ ರಹಮಾನ್ ಕೊಡಿಪ್ಪಾಡಿ ವಂದನಾರ್ಪನೆಗೈದರು



Leave a Comment: