ಮೊಬೈಲ್‌ ಬಳಕೆದಾರರೇ ಗಮನಿಸಿ : ನಿಮ್ಮ ಫೋನ್ ನಲ್ಲಿರುವ ಈ ಸಣ್ಣ ರಂಧ್ರದ ಉಪಯೋಗವೇನು ಗೊತ್ತಾ?

ಸುದ್ದಿಗಳು News

Posted by vidyamaana on 2024-07-25 13:38:46 |

Share: | | | | |


ಮೊಬೈಲ್‌ ಬಳಕೆದಾರರೇ ಗಮನಿಸಿ : ನಿಮ್ಮ ಫೋನ್ ನಲ್ಲಿರುವ ಈ ಸಣ್ಣ ರಂಧ್ರದ ಉಪಯೋಗವೇನು ಗೊತ್ತಾ?

      ನಾವೆಲ್ಲರೂ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳನ್ನು ಬಳಸುತ್ತೇವೆ, ಇದು ನಮ್ಮ ಜೀವನದ ಪ್ರಮುಖ ಭಾಗವಾಗಿದೆ, ಆದರೆ ನಿಮ್ಮ ಸ್ಮಾರ್ಟ್ಫೋನ್ ಅಡಿಯಲ್ಲಿ ಸಣ್ಣ ರಂಧ್ರವನ್ನು ನೀವು ಎಂದಾದರೂ ಗಮನಿಸಿದ್ದೀರಾ, ಆದರೆ ಅದು ಏನು ಬಳಸುತ್ತದೆ ಎಂಬುದರ ಬಗ್ಗೆ ನೀವು ಯೋಚಿಸಿದ್ದೀರಾ, ಜನರು ಇದನ್ನು ಮೈಕ್ರೊಫೋನ್ ಎಂದು ಪರಿಗಣಿಸುತ್ತಾರೆ, ಇದನ್ನು ಮೈಕ್ರೊಫೋನ್ ಗ್ರಿಲ್ ಎಂದು ಕರೆಯಲಾಗುತ್ತದೆ, ಇದು ನಿರ್ದಿಷ್ಟವಾಗಿ ಶಬ್ದ ರದ್ದುಗೊಳಿಸುವ ಮೈಕ್ರೊಫೋನ್ ಗಳನ್ನು ಒಳಗೊಂಡಿದೆ.ಶಬ್ದವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಫೋನ್ ಕರೆಗಳ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ, ಅದರ ಬಗ್ಗೆ ಸಂಪೂರ್ಣ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ

ಇದು ಹೇಗೆ ಕಾರ್ಯನಿರ್ವಹಿಸುತ್ತದೆ

ಶಬ್ದ ರದ್ದುಗೊಳಿಸುವ ಮೈಕ್ರೊಫೋನ್ ನಿಮ್ಮ ಫೋನ್ನ ಪ್ರಾಥಮಿಕ ಮೈಕ್ರೊಫೋನ್ನೊಂದಿಗೆ ಕಾರ್ಯನಿರ್ವಹಿಸುತ್ತದೆ, ಇದು ಸಾಮಾನ್ಯವಾಗಿ ಮುಂಭಾಗ ಅಥವಾ ಮೇಲ್ಭಾಗದಲ್ಲಿದೆ. ಕರೆ ಸಮಯದಲ್ಲಿ, ಮುಖ್ಯ ಮೈಕ್ರೊಫೋನ್ ನಿಮ್ಮ ಧ್ವನಿಯನ್ನು ಸೆರೆಹಿಡಿಯುತ್ತದೆ, ಶಬ್ದ ರದ್ದುಗೊಳಿಸುವ ಮೈಕ್ರೊಫೋನ್ ಸುತ್ತಮುತ್ತಲಿನ ಶಬ್ದಗಳನ್ನು ತೆಗೆದುಕೊಳ್ಳುತ್ತದೆ.

ಮೈಕ್ರೊಫೋನ್ ಗ್ರಿಲ್ ನ ಪ್ರಾಮುಖ್ಯತೆ

ಮೈಕ್ರೊಫೋನ್ ಗ್ರಿಲ್ ಶಬ್ದವನ್ನು ತೆಗೆದುಹಾಕುವುದು ಅಥವಾ ತಿರುಚುವುದು ನಿಮ್ಮ ಕರೆಯ ಗುಣಮಟ್ಟದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಈ ಘಟಕವಿಲ್ಲದೆ, ಹಿನ್ನೆಲೆ ಶಬ್ದಗಳು ಹೆಚ್ಚು ಸ್ಪಷ್ಟವಾಗುತ್ತವೆ, ಸಂವಹನವನ್ನು ಕಷ್ಟಕರವಾಗಿಸುತ್ತದೆ.ಎಲ್ಲೆಲ್ಲೂ ಇಲ್ಲ

ಎಲ್ಲಾ ಸ್ಮಾರ್ಟ್ಫೋನ್ಗಳು ಶಬ್ದ-ರದ್ದುಗೊಳಿಸುವ ಮೈಕ್ರೊಫೋನ್ ಅನ್ನು ಹೊಂದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ನಿಮ್ಮ ಸಾಧನವು ಈ ವೈಶಿಷ್ಟ್ಯವನ್ನು ಹೊಂದಿದೆಯೇ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮ ಫೋನ್ನ ಕೈಪಿಡಿಯನ್ನು ನೀವು ನೋಡಿಕೊಳ್ಳಬಹುದು.

 Share: | | | | |


ಬೆಳ್ತಂಗಡಿ : ಬೆಳಾಲು ನಿವೃತ್ತ ಶಿಕ್ಷಕನ ಬರ್ಬರ ಕೊಲೆ ಪ್ರಕರಣ

Posted by Vidyamaana on 2024-08-24 21:42:14 |

Share: | | | | |


ಬೆಳ್ತಂಗಡಿ : ಬೆಳಾಲು ನಿವೃತ್ತ ಶಿಕ್ಷಕನ ಬರ್ಬರ ಕೊಲೆ ಪ್ರಕರಣ

ಬೆಳ್ತಂಗಡಿ : ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಭಟ್ ಬಡೆಕ್ಕಿಲ್ಲಾಯ ಕೊಲೆ ಪ್ರಕರಣ ಸಂಬಂಧಿಸಿದಂತೆ ಮಗಳಿಗೆ ಆಸ್ತಿ- ಜಾಗ ಪಾಲು ಮಾಡಿ ಕೊಡದೇ ಇರುವ ಕಾರಣದಿಂದ ಕುಟುಂಬ ಸದಸ್ಯರಾದ ಅಳಿಯ ಮತ್ತು ಮೊಮ್ಮಗ ಸೇರಿ ಬಾಲಕೃಷ್ಣ ಭಟ್ ಅವರನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹಂತಕರಿಬ್ಬರನ್ನು ಕೂಡ ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದ್ದಾರೆ.

ಆರೋಪಿಗಳ ಬಂಧನ: ಧರ್ಮಸ್ಥಳ ಪೊಲೀಸರು ಮೊಬೈಲ್ ,ಸಿಸಿಕ್ಯಾಮರ ಹಾಗೂ ವಿವಿಧ ಟೆಕ್ನಿಕಲ್ ಅಧಾರದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಬಾಲಕೃಷ್ಣ ಭಟ್ ಬಡೆಕ್ಕಿಲ್ಲಾಯ ಮಗಳ ಗಂಡ(ಆಳಿಯ) ರಾಘವೇಂದ್ರ ಕೆಧಿಲಾಯ(53) ಮತ್ತು ಮಗಳ ಮಗ (ಮೊಮ್ಮಗ) ಮುರುಳಿಕೃಷ್ಣ(20) ಎಂಬಾತನನ್ನು ಆ.24 ರಂದು ಕಾಸರಗೋಡು ಮನೆಯಿಂದ ವಶಕ್ಕೆ ಪಡೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಬಾಲಕೃಷ್ಣ ಭಟ್ ಬಡೆಕ್ಕಿಲ್ಲಾಯರನ್ನು ಆಸ್ತಿ ಹಾಗೂ ಚಿನ್ನಾಭರಣಕ್ಕೆ ಆಳಿಯನ ಜೊತೆ ಬಂದಿದ್ದ ಮೊಮ್ಮಗ ಮೊದಲು ಮಾರಕಾಸ್ತ್ರದಿಂದ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದು ಆರೋಪಿಗಳಿಬ್ಬರನ್ನು ಕೋರ್ಟ್ ರಜೆ ಇರುವ ಕಾರಣದಿಂದ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಆ.24 ರಂದು ಸಂಜೆ ಹಾಜರುಪಡಿಸಿದ್ದು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆ.27 ರಂದು  ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದಾರೆ.


ನನ್ನ ಮೇಲೆ ಕೂಗಾಡ್ಬೇಡಿ : ಚುನಾವಣಾ ಬಾಂಡ್ ವಿಚಾರಣೆ ವೇಳೆ ವಕೀಲರ ಮೇಲೆ ಸಿಜೆಐ ಗರಂ ವಿಡಿಯೋ ವೈರಲ್

Posted by Vidyamaana on 2024-03-18 16:34:09 |

Share: | | | | |


ನನ್ನ ಮೇಲೆ ಕೂಗಾಡ್ಬೇಡಿ : ಚುನಾವಣಾ ಬಾಂಡ್ ವಿಚಾರಣೆ ವೇಳೆ ವಕೀಲರ ಮೇಲೆ ಸಿಜೆಐ ಗರಂ ವಿಡಿಯೋ ವೈರಲ್

ನವದೆಹಲಿ : ಸುಪ್ರೀಂಕೋರ್ಟ್ನಲ್ಲಿ ಚುನಾವಣಾ ಬಾಂಡ್ ಪ್ರಕರಣದ ವಿಚಾರಣೆ ವೇಳೆ ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ವಕೀಲ ಮ್ಯಾಥ್ಯೂಸ್ ನೆಡುಂಪರಾ ನಡುವೆ ವಾಗ್ವಾದ ನಡೆಯಿತು. ಅವರ ಬಿಸಿಯಾದ ವಾಗ್ವಾದದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಚಾರಣೆಯ ಸಮಯದಲ್ಲಿ, ವಕೀಲ ಮ್ಯಾಥ್ಯೂಸ್ ನೆಡುಂಪರಾ ಅವರು ಚುನಾವಣಾ ಬಾಂಡ್ ಪ್ರಕರಣದ ಸಂಪೂರ್ಣ ತೀರ್ಪನ್ನ ನಾಗರಿಕರ ಬೆನ್ನ ಹಿಂದೆ ನೀಡಲಾಗಿದೆ ಎಂದು ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಡಿ.ವೈ.ಚಂದ್ರಚೂಡ್, ನನ್ನ ಮೇಲೆ ಕೂಗಾಡಬೇಡಿ ಎಂದು ಹೇಳಿದರು.

ನನ್ನ ಮೇಲೆ ಕೂಗಾಡ್ಬೇಡಿ : ಚುನಾವಣಾ ಬಾಂಡ್ ವಿಚಾರಣೆ ವೇಳೆ ವಕೀಲರ ಮೇಲೆ ಸಿಜೆಐ ಗರಂ ವೈರಲ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

"ನನ್ನ ಮೇಲೆ ಕೂಗಾಡಬೇಡಿ. ನೀವು ಅರ್ಜಿಯನ್ನ ಸಲ್ಲಿಸಲು ಬಯಸಿದರೆ, ಸಲ್ಲಿಸಿ. ನಾವು ನಿಮ್ಮ ಮಾತನ್ನು ಕೇಳುವುದಿಲ್ಲ" ಎಂದು ಸಿಜೆಐ ಡಿ.ವೈ ಚಂದ್ರಚೂಡ್ ಹೇಳಿದರು. ಆದ್ರೆ, ಅದರ ನಂತ್ರವೂ ವಕೀಲರು ತಮ್ಮ ಮಾತು ಮುಂದುವರೆಸಿದ್ದು, ಆಗ ನ್ಯಾಯಾಮೂರ್ತಿಗಳು ನಿಮಗೆ ನ್ಯಾಯಾಂಗ ನಿಂದನೆ ನೋಟಿಸ್ ಬೇಕೇ.? ಎಂದು ಗರಂ ಆದರು. ಸಧ್ಯ ಈ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಒಂದು ವರದಿಗೆ ಅಲುಗಾಡಿದ ಅದಾನಿ ಸಾಮ್ರಾಜ್ಯ- ನಂ.1 ಶ್ರೀಮಂತ ಪಟ್ಟದಿಂದ 16 ನೇ ಸ್ಥಾನಕ್ಕೆ ಇಳಿದ ಗೌತಮ್ ಅದಾನಿ : 8 ಲಕ್ಷ 19 ಸಾವಿರದ 134 ಕೋಟಿ ನಷ್ಟ

Posted by Vidyamaana on 2023-02-02 15:09:34 |

Share: | | | | |


ಒಂದು ವರದಿಗೆ ಅಲುಗಾಡಿದ ಅದಾನಿ ಸಾಮ್ರಾಜ್ಯ- ನಂ.1 ಶ್ರೀಮಂತ ಪಟ್ಟದಿಂದ 16 ನೇ ಸ್ಥಾನಕ್ಕೆ ಇಳಿದ ಗೌತಮ್ ಅದಾನಿ : 8 ಲಕ್ಷ 19 ಸಾವಿರದ 134 ಕೋಟಿ ನಷ್ಟ

ನವದೆಹಲಿ (ಫೆ.2): ಕಳೆದ ವಾರ ಅದಾನಿ (Adani) ಗ್ರೂಪ್‌ ಕಂಪನಿಗಳ ಮೇಲೆ ಅಮೆರಿಕದ ಶಾರ್ಟ್‌ ಸೆಲ್ಲರ್ ಹಾಗೂ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್‌ ವಂಚನೆ ಹಾಗೂ ಮೋಸದ ಆರೋಪ ಮಾಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಷೇರುಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ನಷ್ಟಗಳನ್ನು ಕಂಡಿತ್ತು.ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳು ಕುಸಿತ ಕಾಣುತ್ತಿರುವ ಹಿನ್ನಲೆಯಲ್ಲಿ 20 ಸಾವಿರ ಕೋಟಿಗೂ ಹೆಚ್ಚಿನ ಫಾಲೋಆನ್‌ ಪಬ್ಲಿಕ್‌ ಆಫರ್‌ (ಎಫ್‌ಪಿಓ) ಜೊತೆ ಮುಂದುವರಿಯುವುದು ಸರಿಯಲ್ಲ ಎಂದಿದ್ದ ಅದಾನಿ ಗ್ರೂಪ್‌, ಇದನ್ನು ರದ್ದು ಮಾಡಿತ್ತು. ಸಂಪೂರ್ಣವಾಗಿ ಎಫ್‌ಪಿಓ ಮಾರಾಟವಾಗಿದ್ದರಿಂದ 20 ಸಾವಿರ ಕೋಟಿ ರೂಪಾಯಿಯನ್ನು ಹೂಡಿಕೆದಾರರಿಗೆ ವಾಪಸ್‌ ಮಾಡುವುದಾಗಿ ತಿಳಿಸಿತ್ತು.ಷೇರು ಕುಸಿತ ಕಾಣುತ್ತಿರುವ ಹಂತದಲ್ಲಿ ಎಫ್‌ಪಿಒ ಜೊತೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಗೌತಮ್‌ ಅದಾನಿ ಕೂಡ ಹೇಳಿದ್ದಾರೆ.

ಈ ನಡುವೆ ಕಂಪನಿಯ ಒಟ್ಟು ಷೇರುಗಳಿಂದಾದ ನಷ್ಟ 100 ಬಿಲಿಯನ್‌ ಡಾಲರ್‌ ಎಂದು ಹೇಳಲಾಗಿದೆ. ಭಾರತೀಯ ರೂಪಾಯಿಯಲ್ಲಿ 8 ಲಕ್ಷದ 19 ಸಾವಿರದ 134 ಕೋಟಿ ರೂ ನಷ್ಟ ಎಂದು ಹೇಳಲಾಗಿದೆ. ಇದರೊಂದಿಗೆ ಏಷ್ಯಾದ ಮೊದಲ ಶ್ರೀಮಂತ ಎಂಬ ಫೋರ್ಬ್ಸ್ ಪಟ್ಟಿಯಲ್ಲಿದ್ದ ಅದಾನಿ ಏಕಾಏಕಿ 16 ನೇ ಸ್ಥಾನಕ್ಕೆ ಕುಸಿದಿದ್ದಾರೆ.ಅದಾನಿ ಸಮೂಹದ ಷೇರುಗಳು ಭಾರಿ ಕುಸಿತ ಕಾಣುತ್ತಿರುವುದು ಹೂಡಿಕೆದಾರರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹೂಡಿಕೆದಾರರಿಗೆ ಎದುರಾಗಿರುವ ಅಪಾಯದ ಬಗ್ಗೆ ಚರ್ಚಿಸಲು ದೈನಂದಿನ ಸಂಸದೀಯ ಕಲಾಪವನ್ನು ಮೊಟಕುಗೊಳಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದವು.

ಈ ನಡುವೆ ಅದಾನಿ ಸಮೂಹ ಸಂಸ್ಥೆಗಳಿಗೆ ನೀಡಿದ ಸಾಲಗಳ ಕುರಿತಂತೆ ಭಾರತೀಯ ಬ್ಯಾಂಕ್‌ಗಳಿಂದ ರಿಸರ್ವ್‌ ಬ್ಯಾಂಕ್‌ ಮಾಹಿತಿ ಕೇಳಿದೆ ಎಂದು ವರದಿಯಾಗಿದೆ.

ಈ ನಡುವೆ ಸಂಸತ್‌ ಅಧಿವೇಶನದಲ್ಲಿ ಹಿಂಡೆನ್‌ಬರ್ಗ್‌ ಮಾಡಿರುವ ಆರೋಪಗಳ ಬಗ್ಗೆ ಚರ್ಚೆ ನಡೆಸಲು ಸಮಯ ಮೀಸಲಿಡುವಂತೆ ಭಾರತದ ಸಂಸದರು ಆಗ್ರಹಿಸಿದ್ದಾರೆ. ಅದಾನಿ ಗ್ರೂಪ್‌ನಲ್ಲಿ ಸರ್ಕಾರಿ ಮಾಲೀಕತ್ವದ ಭಾರತೀಯ ಜೀವ ವಿಮಾ ನಿಗಮ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ ದೊಡ್ಡ ಹೂಡಿಕೆದಾರರಾಗಿದ್ದಾರೆ. LIC ಶೇರ್ ಮೌಲ್ಯ ಕುಸಿತವಾಗಿದೆ.ಗುರುವಾರ ಮುಂಬೈನ ಬಿಎಸ್‌ಇ ಆರಂಭಿಕ ವಹಿವಾಟಿನಲ್ಲಿ ಅದಾನಿ ಸಮೂಹದ ಎಲ್ಲಾ 10 ಷೇರುಗಳು ಕೂಡ ಕುಸಿದವು. ಅದಾನಿ ಎಂಟರ್‌ಪ್ರೈಸಸ್‌, ಅದಾನಿ ಟ್ರಾನ್ಸ್‌ಮಿಷನ್‌ ಮತ್ತು ಅದಾನಿ ಪೋರ್ಟ್ಸ್‌ ನಷ್ಟವನ್ನು ಶೇ.10ರಷ್ಟು ಕಂಡಿದೆ. ಹಿಂಡೆನ್‌ಬರ್ಗ್‌ ವರದಿಯಿಂದ ಅದಾನಿ ಕಂಪನಿ ಷೇರುಗಳ ಮಾರಾಟ ವಿಪರೀತವಾಗಿ ಹೆಚ್ಚಾಗಿದೆ.

ಗುರುವಾರ ಮಾರುಕಟ್ಟೆಗಳು ಪ್ರಾರಂಭವಾಗುವ ಸ್ವಲ್ಪ ಸಮಯದ ಮೊದಲು ಬಿಡುಗಡೆಯಾದ ವೀಡಿಯೊದಲ್ಲಿ ಸಂಸ್ಥಾಪಕ ಗೌತಮ್ ಅದಾನಿ, ತಮ್ಮ ಕಂಪನಿಗಳ ಆರ್ಥಿಕ ಸ್ಥಿತಿಗತಿ ಬಗ್ಗೆ ಇರುವ ಕಳವಳಗಳನ್ನು ತಳ್ಳಿಹಾಕಿದರು. ಎಫ್‌ಪಿಓ ರದ್ದು ಮಾಡಿದ್ದರಿಂದ ಈಗಾಗಲೇ ನಡೆಯುತ್ತಿರುವ ಯೋಜನೆಗಳು ಹಾಗೂ ಭವಿಷ್ಯದ ಯೋಜನೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಹೂಡಿಕೆದಾರರನ್ನು ರಕ್ಷಣೆ ಮಾಡುವ ಕಾರಣದಿಂದ ಎಫ್‌ಪಿಓ ಮಾರಾಟವನ್ನು ರದ್ದು ಮಾಡಿದ್ದೇವೆ. ಯಾಕೆಂದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ನಮ್ಮ ಷೇರುಗಳು ದೊಡ್ಡ ಮಟ್ಟದಲ್ಲಿ ಇಳಿಕೆ ಕಾಣುತ್ತಿವೆ. ಎಫ್‌ಪಿಓಗೆ ಈಗ ತಾನೆ ಸಹಿ ಹಾಕಿರುವ ಈ ಹೂಡಿಕೆದಾರರು ಇದರಿಂದ ದೊಡ್ಡ ಮಟ್ಟದ ನಷ್ಟ ಕಾಣುತ್ತಾರೆ. ಆ ಕಾರಣದಿಂದ ಎಫ್‌ಪಿಓ ರದ್ದು ಮಾಡಿದ್ದಾಗಿ ಹೇಳಿದ್ದಾರೆ.ನನಗೆ ನನ್ನ ಹೂಡಿಕೆದಾರರ ಹಿತವೇ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಮತ್ತೆಲ್ಲವೂ ನಂತರದ ಸ್ಥಾನದಲ್ಲಿರುತ್ತದೆ ಎಂದು ವಿಡಿಯೋದಲ್ಲಿ ಅದಾನಿ ಹೇಳಿದ್ದಾರೆ. ಹೂಡಿಕೆದಾರರಿಗೆ ಆಗಬಹುದಾದ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಮಾರಾಟವನ್ನು ಹಿಂಪಡೆದುಕೊಳ್ಳಲಾಗಿದೆ ಎಂದಿದ್ದಾರೆ.

ಅದಾನಿ ಗ್ರೂಪ್‌ ಈವರೆಗೂ 8.4 ಟ್ರಿಲಿಯನ್‌ ರೂಪಾಯಿ ಅಂದರೆ, 102 ಬಿಲಿಯನ್‌ ಯುಎಸ್‌ ಡಾಲರ್‌ ಹಣವನ್ನು ಷೇರುಮಾರುಕಟ್ಟೆಯಿಂದ ಕಳೆದುಕೊಂಡಿದೆ. ಅದಾನಿ ಗ್ರೂಪ್‌ನ ಒಟ್ಟು 10 ಲಿಸ್ಟೆಡ್ ಕಂಪನಿಗಳಿದ್ದು, ಮುಂಬೈ ಮಾರುಕಟ್ಟೆಯಲ್ಲಿ ಎಲ್ಲಾ 10 ಷೇರುಗಳು ಆರಂಭದಲ್ಲಿ ಕುಸಿದರೂ ಬಳಿಕ ಚೇತರಿಕೆ ಕಂಡಿದ್ದವು. ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯ ಷೇರುಗಳು ಗುರುವಾರ ಒಂದೇ ದಿನ ಶೇ. 18ರಷ್ಟು ಕುಸಿದಿದೆ

ಮಂಗಳೂರು: ಅಂಗಡಿಗೆ ನುಗ್ಗಿ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Posted by Vidyamaana on 2024-07-12 19:32:17 |

Share: | | | | |


ಮಂಗಳೂರು: ಅಂಗಡಿಗೆ ನುಗ್ಗಿ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

ಮಂಗಳೂರು : ನಗರದ ಪಂಪ್‌ವೆಲ್ ಸಮೀಪದ ಕಪಿತಾನಿಯೊ ಬಳಿ ಜು.8ರಂದು ರಾತ್ರಿ ಅಂಗಡಿಯೊಂದಕ್ಕೆ ನುಗ್ಗಿ ನಗದು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕುಂದಾಪುರ : ಮದ್ಯದ ಅಮಲಿನಲ್ಲಿ ಪತ್ನಿಯ ಕತ್ತು ಕಡಿದು ಕುಣಿದು ಕುಪ್ಪಳಿಸಿದ ಪತಿ

Posted by Vidyamaana on 2024-08-04 15:34:47 |

Share: | | | | |


ಕುಂದಾಪುರ : ಮದ್ಯದ ಅಮಲಿನಲ್ಲಿ ಪತ್ನಿಯ ಕತ್ತು ಕಡಿದು ಕುಣಿದು ಕುಪ್ಪಳಿಸಿದ ಪತಿ

ಉಡುಪಿ,ಆ.4-ಮನೆಗೆ ಮದ್ಯಕುಡಿದ ಬಂದು ಪತ್ನಿಯ ಮೇಲೆರಗಿದ ಪಾಪಿ ಪತಿ ಮಚ್ಚಿನಿಂದ ದಾಳಿ ಕೊಲೆ ಮಾಡಿ ವಿಕೃತಿ ಮೆರೆದಿರುವ ಬೀಕರ ಘಟನೆ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ಕಳೆದ ರಾತ್ರಿ ನಡೆದಿದೆ.ಪತಿಯ ಕೌರ್ಯಕ್ಕೆ ಗಂಭೀರವಾಗಿ ಗಾಯಗೊಂಡು ಅನಿತಾ (38)ಅವರನ್ನು ನೆರೆಮನೆಯವರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆರೋಪಿ ಪತಿ ಲಕ್ಷ್ಮಣನನ್ನು ಕಂಡ್ಲೂರು ಪೊಲೀಸರು ಬಂದಿಸಿದ್ದಾರೆ.

ಬಸ್ರೂರು ಕಾಶಿ ಮಠ, ವಸತಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸೊರಬ ಮೂಲದ ದಂಪತಿ, ಕಾಶಿ ಮಠದ ತೋಟ ನೋಡಿಕೊಳ್ಳುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಇಲ್ಲಿಗೆ ಬಂದಿದ್ದರು.

ಕಳೆದ ರಾತ್ರಿ ಲಕ್ಷ್ಮಣ ಕುಡಿದ ಬಂದು ಪತ್ನಿಯೊಂದಿಗೆ ಜಗಳ ತೆಗೆದಿದ್ದಾನೆ ಈ ವೇಳೆ ಅಲ್ಲೇ ಇದ್ದ ಮಚ್ಚಿನಿಂದ ಆಕೆ ಕುತ್ತಿಗೆಗೆ ಹೊಡೆದು ಮಾರಣಾಂತಿಕವಾಗಿ ಗಾಯಗೊಳಿಸಿದ್ದಾನೆ.

ರಾಜ್ಯದ 108 ಸಿಬ್ಬಂದಿ ಮುಷ್ಕರ ವಾಪಾಸ್‌: ಎಂದಿನಂತೆ ಕೆಲಸಕ್ಕೆ ಹಾಜರ್

Posted by Vidyamaana on 2024-05-07 21:05:44 |

Share: | | | | |


ರಾಜ್ಯದ 108 ಸಿಬ್ಬಂದಿ ಮುಷ್ಕರ ವಾಪಾಸ್‌: ಎಂದಿನಂತೆ ಕೆಲಸಕ್ಕೆ ಹಾಜರ್

ಬೆಂಗಳೂರು : 108 ಅಂಬ್ಯುಲೆನ್ಸ್ ಸಿಬ್ಬಂದಿಗಳು ತಮ್ಮ ಮುಷ್ಕರದಿಂದ ಹಿಂದೆ ಸರಿದಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಹಾಗೂ ಜಿವಿಕೆ ಇಎಂಆರ್ ಸಂಸ್ಥೆಯವರೊಂದಿಗೆ ಚರ್ಚೆ ನಡೆಸಿದ್ದಾರೆ.ಸರ್ಕಾರದಿಂದ ಯಾವುದೇ ವೇತನವನ್ನ ಬಾಕಿ ಉಳಿಸಿಕೊಂಡಿಲ್ಲ ಎಂದರು.

ಸರ್ಕಾರದ ಬಳಿ ಹಣಕಾಸಿನ ಕೊರತೆಯಿಲ್ಲ. 108 ಅಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ನೀಡಬೇಕಾದ ವೇತನವನ್ನ ನಿಯಮನುಸಾರ ಪಾವತಿಸಲಾಗಿದೆ. 108 ಅಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ಯೋಜನೆಯನ್ನ ನಿರ್ವಹಿಸುತ್ತಿರುವ ಸಂಸ್ಥೆ ಜಿವಿಕೆ ಇಎಂಆರ್ ನವರು ವೇತನ ನೀಡಬೇಕು. ಸಂಸ್ಥೆಯವರೊಂದಿಗೆ ಒಡಂಬಡಿಕೆಯ ಪ್ರಕಾರ ಸರ್ಕಾರದಿಂದ ಕೊಡಬೇಕಾದ ಅನುದಾನವನ್ನ ಪಾವತಿಸಲಾಗಿದೆ. ಅನಗತ್ಯವಾಗಿ ವಿಪಕ್ಷಗಳು ಸರ್ಕಾರದ ಮೇಲೆ ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ.

Recent News


Leave a Comment: