ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಪತ್ನಿ ಬೆಳ್ಳಗಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತಿ

Posted by Vidyamaana on 2023-12-22 20:07:40 |

Share: | | | | |


ಪತ್ನಿ ಬೆಳ್ಳಗಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತಿ

ಬಿಲಾಸ್ ಪುರ: ಛತ್ತೀಸ್ ಗಢ ಹೈಕೋರ್ಟ್ (Chattisgath hight court) ಮಹತ್ವದ ತೀರ್ಪು ನೀಡಿದ್ದು, ಬಣ್ಣದ ಆಧಾರದ ಮೇಲೆ ವಿವಾಹಿತ ಸಂಗಾತಿಯನ್ನು ಬಿಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ ಎಂದು ಆದೇಶಿಸಿದೆ.ಪತಿ-ಪತ್ನಿಯರ ವಿಚ್ಛೇದನ ಪ್ರಕರಣದ ವಿಚಾರಣೆ ವೇಳೆ ಛತ್ತೀಸ್ ಗಢ ಹೈಕೋರ್ಟ್‌ ಈ ತೀರ್ಪು ನೀಡಿದ್ದು, ಪತಿಗೆ ಖಡಕ್ ಎಚ್ಚರಿಕೆ ನೀಡಿತಲ್ಲದೆ, ಫೇರ್‌ನೆಸ್ ಕ್ರೀಮ್ ಉದ್ಯಮದ ಬಗ್ಗೆಯೂ ತಮ್ಮ ಅಸಮಾಧಾನವನ್ನು ಹೊರಹಾಕಿದೆ.ನ್ಯಾಯಮೂರ್ತಿ ಗೌತಮ್ ಭಾದುರಿ (Goutam B

non

huri) ಮತ್ತು ನ್ಯಾಯಮೂರ್ತಿ ದೀಪಕ್ ಕುಮಾರ್ ತಿವಾರಿ (Deepak Kumar tiwari) ಅವರಿದ್ದ ಪೀಠವು ವಿಚಾರಣೆ ವೇಳೆ, ಯಾವುದೇ ಕಾರಣಕ್ಕೆ ಪತಿ-ಪತ್ನಿಯರ ಬಣ್ಣದ ಆಧಾರದ ಮೇಲೆ ವಿಚ್ಛೇದನ ನೀಡಲು ಸಾಧ್ಯ ಇಲ್ಲ ಎಂದು ಹೇಳಿದೆ.


ವ್ಯಕ್ತಿಯೊಬ್ಬರು ತನ್ನ ಪತ್ನಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತನ್ನ ಹೆಂಡತಿ ತನ್ನನ್ನು ತೊರೆದಿದ್ದಾರೆ ಮತ್ತು ಎಷ್ಟು ಪ್ರಯತ್ನ ಮಾಡಿದರೂ ಅವರು ಮನೆಗೆ ಮರಳಲು ನಿರಾಕರಿಸುತ್ತಿದ್ದರು ಎಂದು ಪತಿ ಹೇಳಿಕೊಂಡಿದ್ದಾರೆ. ಆದರೆ, ಪತಿ ತನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂಬುದು ಪತ್ನಿಯ ವಾದವಾಗಿತ್ತು. ತನ್ನ ಚರ್ಮದ ಬಣ್ಣವನ್ನು ಗೇಲಿ ಮಾಡುವ ಮೂಲಕ ನಿಂದನೆ ಮತ್ತು ನಿಂದನೀಯ ಪದಗಳನ್ನು ಪತಿ ಬಳಸುತ್ತಿದ್ದರು. ಗರ್ಭಾವಸ್ಥೆಯಲ್ಲಿ ಪತಿ ತನಗೆ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದರು. ತನ್ನ ಕಪ್ಪನೆಯ ಚರ್ಮದಿಂದಾಗಿ ಬೇರೆ ಮಹಿಳೆಯನ್ನು ಮದುವೆಯಾಗುವುದಾಗಿ ಪದೇ ಪದೆ ಅಪಹಾಸ್ಯ ಮಾಡುತ್ತಿದ್ದರು ಎಂದು ಪತ್ನಿ ತನ್ನ ಪತಿ ವಿರುದ್ಧ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು. ಎರಡೂ ಕಕ್ಷಿದಾರರ ವಾದ ಆಲಿಸಿದ ಛತ್ತೀಸ್ ಗಢ ಹೈಕೋರ್ಟ್, ಪತ್ನಿಯ ಆರೋಪಗಳನ್ನು ಹೆಚ್ಚು ದೃಢವಾಗಿ ಪರಿಗಣಿಸಿ, ಪತಿಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತು. 


ಅಲ್ಲದೇ, ಕೇವಲ ಚರ್ಮದ ಬಣ್ಣದ ಆಧಾರದ ಮೇಲೆ ವಿವಾಹಿತ ಸಂಗಾತಿಯನ್ನು ಬಿಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿತು. ಚರ್ಮದ ಬಣ್ಣದ ಆಧಾರದ ಮೇಲೆ ತಾರತಮ್ಯ ತೊಡೆದುಹಾಕಲು ಸಾಮಾಜಿಕ ಬದಲಾವಣೆಯ ಅಗತ್ಯವನ್ನು ನ್ಯಾಯಾಲಯ ಒತ್ತಿ ಹೇಳಿದೆ. ಕಾಸ್ಕೆಟಿಕ್ಸ್ ಉದ್ಯಮವು ಚರ್ಮವನ್ನು ಹೊಳಪುಗೊಳಿಸುವ ಉತ್ಪನ್ನಗಳೊಂದಿಗೆ ಕಪ್ಪು ತ್ವಚೆಯ ಜನರನ್ನು ಗುರಿಯಾಗಿರಿಸಿಕೊಳ್ಳುತ್ತದೆ ಎಂದು ಹೈಕೋರ್ಟ್ಅಸಮಾಧಾನ ವ್ಯಕ್ತಪಡಿಸಿತು. 


ಜಾಹೀರಾತುಗಳಲ್ಲಿ ಅವರನ್ನು ಕಡಿಮೆ ಆತ್ಮವಿಶ್ವಾಸ ಮತ್ತು ಅಸುರಕ್ಷಿತ ಎಂದು ತೋರಿಸಲಾಗುತ್ತಿದೆ. ಅದು ತಪ್ಪು. ಈ ತಾರತಮ್ಯ ಹೋಗಲಾಡಿಸುವಲ್ಲಿ ಸಾಮಾಜಿಕ ಬದಲಾವಣೆಯ ಅಗತ್ಯವಿದೆ ಎಂದು ನ್ಯಾಯಾಲಯ ಇದೇ ವೇಳೆ ಅಭಿಪ್ರಾಯಪಟ್ಟಿತು.

ಕಾಂಕ್ರೀಟ್ ರಸ್ತೆಗಾಗಿ ಡಾಂಬರು ರಸ್ತೆಯ ದುರುಪಯೋಗ ಕೆಲಸದ ಬಳಿಕವೂ ಸರಿಪಡಿಸುವ ಗೊಡವೇ ಇಲ್ಲ ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟ

Posted by Vidyamaana on 2023-02-16 15:01:32 |

Share: | | | | |


ಕಾಂಕ್ರೀಟ್ ರಸ್ತೆಗಾಗಿ ಡಾಂಬರು ರಸ್ತೆಯ ದುರುಪಯೋಗ  ಕೆಲಸದ ಬಳಿಕವೂ ಸರಿಪಡಿಸುವ ಗೊಡವೇ ಇಲ್ಲ  ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟ

ಪುತ್ತೂರು: ಹೊಸ ರಸ್ತೆಯ ಕಾಮಗಾರಿ ನಡೆಸುವಾಗ, ಹಳೆಯ ರಸ್ತೆಯನ್ನು ಹಾಳು ಮಾಡಬಾರದು ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇಂತಹ ಕನಿಷ್ಠ ಜ್ಞಾನವೂ ಇಲ್ಲದ ಆಡಳಿತದ ವೈಖರಿಗೆ ಸಾಕ್ಷಿಯಾಗಿ ನಿಂತಿದೆ ನಾಣಿಲ ಜಂಕ್ಷನ್.

ಬೈತಡ್ಕ - ನಾಣಿಲ - ಗುಜ್ಜರ್ಮೆ ರಸ್ತೆಯನ್ನು ಇತ್ತೀಚೆಗೆ ಅಭಿವೃದ್ಧಿಗೊಳಿಸಲಾಯಿತು. ಈ ಮೂರು ರಸ್ತೆಗಳು ಸೇರುವ ಜಂಕ್ಷನ್ ಅನ್ನು ಬಿಟ್ಟು, ಉಳಿದಂತೆ ಮೂರು ಪ್ರದೇಶದ ರಸ್ತೆಗಳಿಗೂ ಕಾಂಕ್ರೀಟಿಕರಣ ಮಾಡಲಾಯಿತು. ಹೀಗೆ ಕಾಂಕ್ರೀಟಿಕರಣ ಮಾಡುವಾಗ, ಕಾಂಕ್ರೀಟ್ ಮಿಕ್ಸ್ ಮಾಡಲು ಬಳಸಿದ್ದು ಮಾತ್ರ ಜಂಕ್ಷನ್‌ನಲ್ಲಿದ್ದ ಡಾಂಬರು ರಸ್ತೆಯನ್ನು!

ಡಾಂಬರು ರಸ್ತೆಯನ್ನು ಕಾಂಕ್ರೀಟ್ ಮಿಕ್ಸ್ ಮಾಡಲು ಬಳಸಿದ್ದೇ ಮೊದಲ ತಪ್ಪು. ಹೋಗಲಿ ಬಿಡಿ. ಕೆಲಸವಾದ ಬಳಿಕವಾದರೂ, ಕಾಂಕ್ರೀಟ್‌ನ ತುಣುಕುಗಳನ್ನು ಡಾಂಬರು ರಸ್ತೆಯಿಂದ ತೆರವು ಮಾಡಬೇಕಲ್ಲವೇ? ಅದೂ ಮಾಡಿಲ್ಲ. ಆದ್ದರಿಂದ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಿಂದ ಸಾಗಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ.

ಮೂರು ರಸ್ತೆ ಸೇರುವ ಜಾಗದಲ್ಲಿ ಸಣ್ಣ ವೃತ್ತ ಇದೆ. ಈ ವೃತ್ತದ ಸುತ್ತಮುತ್ತ ಸುಮಾರು 100 ಮೀಟರ್ ಅಂತರದಲ್ಲಿ ಈ ಡಾಂಬರು ರಸ್ತೆ ಹರಡಿದೆ. ಉಳಿದೆಲ್ಲವೂ ಕಾಂಕ್ರೀಟಿಕರಣ ಆಗಿದೆ. ಈ 100 ಮೀಟರ್ ಡಾಂಬರು ರಸ್ತೆಯನ್ನು ಹಾಳುಮಾಡಿದ ಶ್ರೇಯಸ್ಸು ಆಡಳಿತಕ್ಕೆ, ಗುತ್ತಿಗೆದಾರರಿಗೆ ಸಲ್ಲುತ್ತದೆ!

ಸ್ಥಳೀಯರು ಮೌನ:

2022ರ ಅಕ್ಟೋಬರ್ 27ರಂದು ಈ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟನೆ ಮಾಡಲಾಗಿದೆ. ಘಟಾನುಘಟಿ ನಾಯಕರು ಸ್ಥಳಕ್ಕೆ ಆಗಮಿಸಿದ್ದರೂ ಕೂಡ. ಅಲ್ಲಿಂದ ಇಲ್ಲಿವರೆಗೆ ಅಂದರೆ ಸುಮಾರು 4 ತಿಂಗಳುಗಳ ಕಾಲ ಡಾಂಬರು ರಸ್ತೆ ದೈನವೀ ಸ್ಥಿತಿಯಲ್ಲೇ ಇದೆ. ಸ್ಥಳೀಯರು, ದ್ವಿಚಕ್ರ ಸವಾರರು ಇದೇ ರಸ್ತೆಯಲ್ಲಿ ಹರಸಾಹಸ ಪಟ್ಟುಕೊಂಡು ಹೋಗುತ್ತಿದ್ದಾರೆ. ಆದರೆ ಯಾರೂ ಕೂಡ, ಇದನ್ನು ಸರಿಪಡಿಸಿ ಎಂದು ಆಗ್ರಹ ಪಡಿಸಿಲ್ಲ. ಆದ್ದರಿಂದ ಡಾಂಬರು ರಸ್ತೆ ಇನ್ನೂ ಹಾಗೇ ಉಳಿದುಕೊಂಡಿದೆ. ಚೆನ್ನಾಗಿದ್ದ ರಸ್ತೆಯನ್ನು ಹಾಳುಗೆಡವಿದರ ಬಗ್ಗೆ ಪ್ರಶ್ನಿಸುವ ಗೋಜಿಗೆ ಹೋಗದ ಸ್ಥಳೀಯರ ಮೌನವೇ, ಸಮಸ್ಯೆ ಪರಿಹಾರಕ್ಕೆ ದೊಡ್ಡ ತೊಡಕಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

ಡೆಲ್ಲಿಗೆ ಬರ್ಲಿಕ್ಕೆ ಹೇಳಿ ಈಶ್ವರಪ್ಪನವರಿಗೆ ಸಿಗದ ಶಾ

Posted by Vidyamaana on 2024-04-04 12:02:54 |

Share: | | | | |


ಡೆಲ್ಲಿಗೆ ಬರ್ಲಿಕ್ಕೆ ಹೇಳಿ ಈಶ್ವರಪ್ಪನವರಿಗೆ ಸಿಗದ ಶಾ

ನವದೆಹಲಿ : ಲೋಕಸಭೆ ಚುನಾವಣೆಗೆ ತಮ್ಮ ಮಗನಿಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಬಂಡಾಯವೆದ್ದಿರುವ ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪಕ್ಷೇತರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಅವರು ನಿನ್ನೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳಿದರು.ಆದರೆ ಅಮಿತ್ ಶಾ ಅವರು ಈಶ್ವರಪ್ಪ ಅವರ ಭೇಟಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಇದೀಗ ಅವರು ವಾಪಸ್ ಆಗಿದ್ದಾರೆ.ಅಮಿತ್ ಶಾ ಬೇಟಿಗೆ ಸಮಯ ಸಿಗದ ಕಾರಣ ಇದೀಗ ಈಶ್ವರಪ್ಪ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಬೆಳಗ್ಗೆ 6 10ರ ಫ್ಲೈಟ್ ಗೆ ಕೆ ಎಸ್ ಈಶ್ವರಪ್ಪ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ. ಇವಳೆ ಸುದ್ದಿಗಾರನಿಗೆ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಬಿ ವೈ ರಾಘವೇಂದ್ರ ಸೋಲಲಿ ಎಂಬ ಪರೀಕ್ಷೆ ಅಮಿತ್ ಶಾ ಅವರಿಗೆ ಇರಬಹುದು ಎಂದು ತಿಳಿಸಿದರು.

ನಾಟೆಕಲ್: ಪ್ರಪಾತಕ್ಕೆ ಉರುಳಿದ ಲಾರಿ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Posted by Vidyamaana on 2023-07-27 13:58:51 |

Share: | | | | |


ನಾಟೆಕಲ್: ಪ್ರಪಾತಕ್ಕೆ ಉರುಳಿದ ಲಾರಿ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉಳ್ಳಾಲ: ಓವರ್ ಲೋಡ್ ಇದ್ದ ಲಾರಿ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ನಾಟೆಕಲ್ – ಮಂಜನಾಡಿ ಮಾರ್ಗ ಮಧ್ಯೆ ಸಂಭವಿಸಿದ್ದು, ಘಟನೆಯಲ್ಲಿ ಚಾಲಕ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆದೇರಳಕಟ್ಟೆ ಕಡೆಯಿಂದ ತೌಡುಗೋಳಿ ಕಡೆಗೆ ಪ್ಲೈವುಡ್ ಇದ್ದ ಲಾರಿ ತೆರಳುತ್ತಿದ್ದು, ಈ ನಡುವೆ ತಿರುವಿನಲ್ಲಿ ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಎದುರಿನಿಂದ ಬಂದಿದೆ. ಲಾರಿಯಲ್ಲಿ ಓವರ್ ಲೋಡ್ ಇದ್ದ ಹಿನ್ನೆಲೆಯಲ್ಲಿ ಚಾಲಕ ಎದುರಿನ ಲಾರಿಗೆ ಸೈಡ್ ಕೊಡುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಪ್ರಪಾತಕ್ಕೆ ಉರುಳಿ ಬಿದ್ದಿದೆ.

ಆಸ್ಪತ್ರೆಯ ಆಂಬ್ಯುಲೆನ್ಸ್ ಕದ್ದು ಪರಾರಿಯಾದ ರೋಗಿ ಆಘಾತಕಾರಿ ಘಟನೆ CCTV ಯಲ್ಲಿ ಸೆರೆ

Posted by Vidyamaana on 2024-02-22 20:42:50 |

Share: | | | | |


ಆಸ್ಪತ್ರೆಯ ಆಂಬ್ಯುಲೆನ್ಸ್ ಕದ್ದು ಪರಾರಿಯಾದ ರೋಗಿ ಆಘಾತಕಾರಿ ಘಟನೆ CCTV ಯಲ್ಲಿ ಸೆರೆ

ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬ ಆಂಬ್ಯುಲೆನ್ಸ್ ಕದ್ದು ಪರಾರಿಯಾಗಿರು ಆಘಾತಕಾರಿ ಘಟನೆ ನಡೆದಿದೆ. ಚಿಕಿತ್ಸೆಯ ಮಧ್ಯದಲ್ಲಿ ಆಸ್ಪತ್ರೆಯಿಂದ ಹೊರಬಂದು ಆಂಬ್ಯುಲೆನ್ಸ್ ಕದ್ದು ಪರಾರಿಯಾಗಿದ್ದಾನೆ. ಆತ ರೋಗಿಗಳ ಬಟ್ಟೆಗಳನ್ನ ಧರಿಸಿದ್ದು, ಕೈಯಲ್ಲಿ IV ಇತ್ತು.ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 


ಈ ಪ್ರಕರಣವು ಅಮೆರಿಕದ ವರ್ಜೀನಿಯಾದಲ್ಲಿ ಸೋಮವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫಾಕ್ಸ್ ನ್ಯೂಸ್ ವರದಿಯ ಪ್ರಕಾರ, ರಾತ್ರಿ 9: 30 ಕ್ಕೆ ಇನ್ನೋವಾ ಫೈಫಾಕ್ಸ್ ಆಸ್ಪತ್ರೆಯ ಹೊರಗೆ ಈ ಘಟನೆ ನಡೆದಿದೆ. ತಲೆಮರೆಸಿಕೊಂಡಿರುವ ಆರೋಪಿ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.


ಫೇರ್ಫಾಕ್ಸ್ ಕೌಂಟಿ ಪೊಲೀಸ್ ಇಲಾಖೆ ಆಸ್ಪತ್ರೆಯ ಹೊರಗೆ ತೆಗೆದ ಶಂಕಿತನ ಫೋಟೋವನ್ನು ಹಂಚಿಕೊಂಡಿದ್ದು, "ಆತ ಇನ್ನೂ ಡಿಸ್ಚಾರ್ಜ್ ಆಗಿರಲಿಲ್ಲ. ಆತನ ಕೈಯಲ್ಲಿ IV ಇತ್ತು. ಚಿಕಿತ್ಸೆ ನಡೆಯುತ್ತಿತ್ತು" ಎಂದು ಅವರು ಹೇಳಿದರು.ಶಂಕಿತ ಇನ್ನೂ ತಲೆಮರೆಸಿಕೊಂಡಿದ್ದು, ಆತನನ್ನು 32 ವರ್ಷದ ರಿಕಿ ಲೆವೆ ಎಂದು ಗುರುತಿಸಲಾಗಿದೆ.

ಡಿಲೀಟ್ ಆಗಲಿವೆ ಲಕ್ಷಾಂತರ ಜಿಮೇಲ್ ಅಕೌಂಟ್

Posted by Vidyamaana on 2023-11-11 10:13:02 |

Share: | | | | |


ಡಿಲೀಟ್ ಆಗಲಿವೆ ಲಕ್ಷಾಂತರ ಜಿಮೇಲ್ ಅಕೌಂಟ್

ಬೆಂಗಳೂರು: ತಮ್ಮ ಖಾತೆಗಳನ್ನು ನಿಯಮಿತವಾಗಿ ಬಳಸದ ಜಿಮೇಲ್ ಬಳಕೆದಾರರ ಖಾತೆಗಳು ಮುಂಬರುವ ತಿಂಗಳಲ್ಲಿ ಡಿಲೀಟ್​ ಆಗುವ ಸಾಧ್ಯತೆಗಳಿವೆ. ಕನಿಷ್ಠ ಎರಡು ವರ್ಷಗಳಿಂದ ನಿಷ್ಕ್ರಿಯವಾಗಿರುವ ಜಿಮೇಲ್ ಖಾತೆಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಡಿಸೆಂಬರ್ 2023ರಲ್ಲಿ ಗೂಗಲ್ ಪ್ರಕಟಿಸಿತ್ತು.

ಅದರ ಭಾಗವಾಗಿ ಮುಂದಿನ ಕೆಲ ತಿಂಗಳುಗಳಲ್ಲಿ ಲಕ್ಷಾಂತರ ಜಿಮೇಲ್ ಖಾತೆಗಳು ನಿಷ್ಕ್ರಿಯವಾಗಲಿವೆ.


ಮೇ ತಿಂಗಳಲ್ಲಿ ಬ್ಲಾಗ್ ಪೋಸ್ಟ್​ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದ ಗೂಗಲ್ ಉತ್ಪನ್ನ ನಿರ್ವಹಣೆಯ ಉಪಾಧ್ಯಕ್ಷ ರುತ್ ಕ್ರಿಚೆಲಿ, ಜಿಮೇಲ್ ಖಾತೆಗಳ ಮೇಲಿನ ಅಪಾಯ ಕಡಿಮೆ ಮಾಡಲು ಕಂಪನಿ ಯತ್ನಿಸುತ್ತಿದೆ ಎಂದು ಹೇಳಿದ್ದರು. ನಮ್ಮ ಯಾವುದೇ ಉತ್ಪನ್ನಗಳಾದ್ಯಂತ 2 ವರ್ಷಗಳಿಂದ ನಿಷ್ಕ್ರಿಯವಾಗಿರುವ ಜಿಮೇಲ್ ಖಾತೆಗಳನ್ನು ರದ್ದುಗೊಳಿಸುವ ಹಾಗೆ ನಮ್ಮ ನೀತಿಯನ್ನು ನಾವು ಬದಲಾಯಿಸುತ್ತಿದ್ದೇವೆ. ಈ ಡಿಸೆಂಬರ್​ನಲ್ಲಿ ಇದ್ದಂತೆ ಯಾವುದೇ ಜಿಮೇಲ್ ಖಾತೆಯನ್ನು 2 ವರ್ಷಗಳಿಂದ ಬಳಸದೇ ಇದ್ದಲ್ಲಿ ಅಥವಾ ಸೈನ್ ಇನ್ ಮಾಡದಿದ್ದರೆ ಗೂಗಲ್ ವರ್ಕ್​ಸ್ಪೇಸ್ (ಜಿಮೇಲ್, ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್) ಮತ್ತು ಗೂಗಲ್ ಫೋಟೋಗಳೊಳಗಿನ ಕಂಟೆಂಟ್ ಸೇರಿದಂತೆ ಜಿಮೇಲ್ ಖಾತೆ ಮತ್ತು ಅದರ ಕಂಟೆಂಟ್​ಗಳನ್ನು ನಾವು ಡಿಲೀಟ್ ಮಾಡ್ತೀವಿ ಎಂದು ತಿಳಿಸಿದ್ದಾರೆ.


ಮರೆತುಹೋದ ಅಥವಾ ಬಳಕೆಯಲ್ಲಿಲ್ಲದ ಖಾತೆಗಳು ಸಾಮಾನ್ಯವಾಗಿ ಹಳೆಯ ಅಥವಾ ಮರುಬಳಕೆಯ ಪಾಸ್​ವರ್ಡ್​ಗಳನ್ನು ಅವಲಂಬಿಸಿರುತ್ತವೆ. ಇಂಥ ಪಾಸ್​ವರ್ಡ್​ಗಳು ಕೆಲವೊಮ್ಮೆ ಬೇರೆಯವರಿಗೆ ಗೊತ್ತಾಗಿರಬಹುದು. ಅವುಗಳಿಗೆ ಟು ಸ್ಟೆಪ್ ವೆರಿಫಿಕೇಶನ್ ಕೂಡ ಇರುವುದಿಲ್ಲ ಮತ್ತು ಬಳಕೆದಾರರು ಅವುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಕಷ್ಟಕರ ಎಂದು ಪೋಸ್ಟ್​ನಲ್ಲಿ ತಿಳಿಸಲಾಗಿದೆ.


ಯಾವೆಲ್ಲ ಜಿಮೇಲ್ ಖಾತೆಗಳು ಡಿಲೀಟ್ ಆಗಬಹುದು?:


 ಹಿಂದಿನ ಎರಡು ವರ್ಷಗಳಲ್ಲಿ ತಮ್ಮ ಜಿಮೇಲ್ ಖಾತೆಯನ್ನು ಒಮ್ಮೆಯೂ ಬಳಸದ ವೈಯಕ್ತಿಕ ಗೂಗಲ್ ಖಾತೆಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಶಾಲೆಗಳು ಅಥವಾ ವ್ಯವಹಾರಗಳಂತಹ ಸಂಸ್ಥೆಗಳ ಖಾತೆಗಳ ಮೇಲೆ ಪರಿಣಾಮ ಬೀರುವುದಿಲ್ಲ.


ನಿಮ್ಮ ಖಾತೆಯನ್ನು ಸಕ್ರಿಯವಾಗಿಡುವುದು ಹೇಗೆ?:

ಗೂಗಲ್ ಬ್ಲಾಗ್ ಪೋಸ್ಟ್ ಪ್ರಕಾರ, ಗೂಗಲ್ ಖಾತೆಯನ್ನು ಸಕ್ರಿಯವಾಗಿಡಲು ಸರಳ ಮಾರ್ಗವೆಂದರೆ ಕನಿಷ್ಠ ಎರಡು ವರ್ಷಗಳಿಗೊಮ್ಮೆ ಸೈನ್ ಇನ್ ಮಾಡಬೇಕು. ನೀವು ಇತ್ತೀಚೆಗೆ ನಿಮ್ಮ ಗೂಗಲ್ ಖಾತೆ ಅಥವಾ ನಮ್ಮ ಯಾವುದೇ ಸೇವೆಗಳಿಗೆ ಸೈನ್ ಇನ್ ಮಾಡಿದ್ದರೆ, ನಿಮ್ಮ ಖಾತೆಯನ್ನು ಸಕ್ರಿಯವೆಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ಡಿಲೀಟ್ ಮಾಡಲಾಗುವುದಿಲ್ಲ.


ಈ ಮುಂದೆ ತೋರಿಸಲಾದ ಯಾವುದೇ ಚಟುವಟಿಕೆಯನ್ನು ಖಾತೆಯ ಸಕ್ರಿಯತೆಗೆ ಪರಿಗಣಿಸಲಾಗುವುದು:


ಇಮೇಲ್ ಓದುವುದು ಅಥವಾ ಕಳುಹಿಸುವುದು

ಗೂಗಲ್ ಡ್ರೈವ್ ಬಳಸುವುದು

ಯೂಟ್ಯೂಬ್ ವಿಡಿಯೋ ನೋಡುವುದು

ಗೂಗಲ್ ಪ್ಲೇ ಸ್ಟೋರ್​ನಲ್ಲಿ ಅಪ್ಲಿಕೇಶನ್ ಡೌನ್ ಲೋಡ್ ಮಾಡುವುದು

ಗೂಗಲ್ ಸರ್ಚ್​ಗೆ ಖಾತೆ ಬಳಸುವುದು

ಥರ್ಡ್ ಪಾರ್ಟಿ ಅಪ್ಲಿಕೇಶನ್ ಅಥವಾ ಸೇವೆಗೆ ಸೈನ್ ಇನ್ ಮಾಡಲು ಗೂಗಲ್ ಸೈನ್-ಇನ್ ಬಳಸುವುದು



Leave a Comment: