ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ಅಡ್ಡಾದಿಡ್ಡಿ ವಾಹನ ನಿಲ್ಲಿಸುವ ಸವಾರರೇ ಎಚ್ಚರಿಕೆ!!!

Posted by Vidyamaana on 2023-08-22 16:09:29 |

Share: | | | | |


ಅಡ್ಡಾದಿಡ್ಡಿ ವಾಹನ ನಿಲ್ಲಿಸುವ ಸವಾರರೇ ಎಚ್ಚರಿಕೆ!!!

ಪುತ್ತೂರು: ಪೇಟೆಯಲ್ಲಿ ವಾಹನ ದಟ್ಟಣೆ ಕೈಮೀರಿ ಹೋಗಲು ಒಂದು ಕಾರಣ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದೂ. ಇದನ್ನು ನಿಯಂತ್ರಿಸುವಲ್ಲಿ ಟ್ರಾಫಿಕ್ ಪೊಲೀಸರು ಬಿಗು ನಿಲುವು ಕೈಗೊಂಡಿದ್ದು, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಆಸುಪಾಸು ಕೆಲ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಬಸ್ ನಿಲ್ದಾಣ ಮುಂಭಾಗದ ಖಾಸಗಿ ಕಟ್ಟಡದ ಎದುರು ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುತ್ತಿದ್ದರು. ಇದು ದೊಡ್ಡ ತಲೆನೋವಾಗಿದ್ದು, ದಿನನಿತ್ಯ ಸಂಚಾರ ದಟ್ಟಣೆ ಉದ್ಭವವಾಗುತ್ತಿತ್ತು. ಇದಕ್ಕೆ ಪರಿಹಾರವಾಗಿ, ದ್ವಿಚಕ್ರ ವಾಹನ ನಿಲ್ದಾಣ ಹಾಗೂ ಆಟೋ ರಿಕ್ಷಾಗಳಿಗೆ ಪ್ರತ್ಯೇಕ ಸ್ಥಳವನ್ನು ಪಾರ್ಕಿಂಗಿಗಾಗಿ ನಿಗದಿ ಮಾಡಲಾಗಿದೆ. ಒಂದು ವೇಳೆ ಸಾರ್ವಜನಿಕರು ಇದರಿಂದ ಹೊರಭಾಗದಲ್ಲಿ‌ ತಮ್ಮ ವಾಹನಗಳನ್ನು‌ ಪಾರ್ಕಿಂಗ್ ಮಾಡಿದ್ದೇ ಆದರೆ, ಸಂಚಾರ ಪೊಲೀಸರು ಕ್ರಮ ಕೈಗೊಳ್ಳುವುದು ನಿಶ್ಚಿತ.

ಇದೇ ರೀತಿ ಗಾಂಧೀ ಕಟ್ಟೆ, ನಗರಸಭೆಯ ವಾಣಿಜ್ಯ ಸಂಕೀರ್ಣ ಮೊದಲಾದ ಕಡೆಗಳಲ್ಲೂ ಸುಧಾರಣಾ ಕ್ರಮಗಳನ್ನು ಅಳವಡಿಸಿದ್ದಾರೆ. ಸೂಕ್ತ ಯಲ್ಲೋ ಮಾರ್ಕ್ ಮಾಡಿದ್ದಾರೆ.

ಟ್ರಾಫಿಕ್ ಪಿ.ಎಸ್.ಐ. ಉದಯರವಿ ನೇತೃತ್ವದ ಪೊಲೀಸರ ತಂಡದ ಈ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕೌಡಿಚ್ಚಾರು : ಕೃಷಿಕರಿಗೆ ಉಚಿತ ವಿದ್ಯುತ್ ಕೊಟ್ಟದ್ದು ಕಾಂಗ್ರೆಸ್ ಸರಕಾರ: ಅಶೋಕ್ ಕುಮಾರ್

Posted by Vidyamaana on 2023-04-26 06:50:07 |

Share: | | | | |


ಕೌಡಿಚ್ಚಾರು : ಕೃಷಿಕರಿಗೆ ಉಚಿತ ವಿದ್ಯುತ್ ಕೊಟ್ಟದ್ದು ಕಾಂಗ್ರೆಸ್ ಸರಕಾರ: ಅಶೋಕ್ ಕುಮಾರ್

ಪುತ್ತೂರು: ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತಂದು ಬಡವ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದು ಕಾಂಗ್ರೆಸ್ಸಿನ ಇಂದಿರಾ ಗಾಂದಿ,ಅದೇ ರೀತಿ ರಾಜ್ಯದಲ್ಲಿ ಕೃಷಿ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ಕೊಟ್ಟದ್ದು ಕಾಂಗ್ರೆಸ್ ಸರಕಾರವಾಗಿದೆ ಎಂಬುದನ್ನು ಪ್ರತೀಯೊಬ್ಬರೂ ತಿಳಿದುಕೊಳ್ಳಬೇಕು. ಕಾಂಗ್ರೆಸ್ ದೇಶವನ್ನು ಆಳದೇ ಇರುತ್ತಿದ್ದರೆ ಇಂದು ದೇಶ ಏನಾಗುತ್ತಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದರು. ಕೌಡಿಚ್ಚಾರ್ ಜಂಕ್ಷನ್ ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಜನಪರ ಯೋಜನೆಯನ್ನೇ ಜಾರಿಗೆ ತರುತ್ತಿದೆ. ಕಾಂಗ್ರೆಸ್ ದೇಶದ ಜನರ ಜೀವನಾಡಿ. ಕಾಂಗ್ರೆಸ್ ಸರಕಾರ ಇದ್ದರೆ ಮಾತ್ರ ಜನ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಬಡಜನರಿಗಾಗಿಯೇ ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.ನಾಳೆಯ ನೆಮ್ಮದಿಗಾಗಿ ಕಾಂಗ್ರೆಸ್ ಬೆಂಬಲಿಸಿ. ನಾನು ಎಂದೂ ಕೊಟ್ಟ ಮಾತನ್ನು ತಪ್ಪಿ ನಡೆಯಲಾರೆ ಕಾಂಗ್ರೆಸ್ ಗೆ ಮತ ಹಾಕುವ ಮೂಲಕ ಕ್ಷೇತ್ರದ ಅಭಿವೃದ್ದಿಗಾಗಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ನವೀಕರಣಗೊಂಡ ಮಾನಕ ಜ್ಯುವೆಲ್ಸ್ ನಲ್ಲಿ ಗಣಹೋಮ

Posted by Vidyamaana on 2023-06-06 08:12:47 |

Share: | | | | |


ನವೀಕರಣಗೊಂಡ ಮಾನಕ ಜ್ಯುವೆಲ್ಸ್ ನಲ್ಲಿ ಗಣಹೋಮ

ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿ ಕಳೆದ 18 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮಾನಕ ಜ್ಯುವೆಲ್ಸಿನಲ್ಲಿ ಸೋಮವಾರ ಗಣಹೋಮ ನಡೆಯಿತು.

ಮಾನಕ ಜ್ಯುವೆಲ್ಸಿನ ಹೊಸ ಮಳಿಗೆ ಶುಭಾರಂಭಗೊಂಡ ಮಳಿಗೆ ಹಿಂದಿನ ಮಳಿಗೆಯನ್ನು ನವೀಕರಿಸಲಾಯಿತು. ಇದೀಗ ಮತ್ತೆ ಸೇವೆಗೆ ಸಿದ್ಧಗೊಂಡಿದ್ದು, ಈ ಹಿನ್ನೆಲೆಯಲ್ಲಿ ಜೂನ್ 5ರಂದು ಗಣಹೋಮ ನೆರವೇರಿಸಲಾಯಿತು.

ಜಗನ್ನಾಥ್ ಭಟ್ ಅವರು ಪೂಜಾ ವಿಧಿವಿಧಾನ ನಡೆಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರ ತಾಯಿ ಮಾನಕ ಎಸ್. ಖಂದರೆ,ಮಾಲಕ ಸಿದ್ಧನಾಥ್ ಖಂದರೆ , ಸಹೋದರ ಸಹದೇವ್ ಖಂದರೆ , ವಿಶ್ವಂಭರ್ ಅದಿಕ್ ಕದಮ್ , ಮಾಲಕರ ಪತ್ನಿ ಪದ್ಮಿನಿ ಎಸ್.ಕೆ., ಪುತ್ರರಾದ ಶ್ರೀವರ್ಧನ್ ಎಸ್.ಕೆ., ಶೌರ್ಯವರ್ಧನ್ ಎಸ್.ಕೆ. ಮೊದಲಾದವರು ಉಪಸ್ಥಿತರಿದ್ದರು.

ಭೀಕರ ರಸ್ತೆ ಅಪಘಾತ: ಗಾಯಗೊಂಡಿದ್ದ ಡಿಯೋ ಸವಾರ ತೇಜಸ್ ದಾರಿಮಧ್ಯೆ ಮೃತ್ಯು

Posted by Vidyamaana on 2024-02-22 16:40:09 |

Share: | | | | |


ಭೀಕರ ರಸ್ತೆ ಅಪಘಾತ: ಗಾಯಗೊಂಡಿದ್ದ ಡಿಯೋ ಸವಾರ ತೇಜಸ್ ದಾರಿಮಧ್ಯೆ ಮೃತ್ಯು

ಪುತ್ತೂರು: ಮುರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಡಿಯೋ ಸವಾರ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಮೃತಪಟ್ಟವರನ್ನು ಗೋಳಿತ್ತೊಟ್ಟಿನ ತೇಜಸ್ (24) ಎಂದು ಗುರುತಿಸಲಾಗಿದೆ. ಇನ್ನೋರ್ವ ಸವಾರ ಪವನ್ ಗಂಭೀರ ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರಲ್ಲಿ ಡಿಯೋವನ್ನು ಚಲಾಯಿಸುತ್ತಿದವರು ಯಾರು ಎಂಬ ಮಾಹಿತಿ ತಿಳಿದುಬಂದಿಲ್ಲ.


ಟಿಪ್ಪರ್ ಹಾಗೂ ಡಿಯೋ ದ್ವಿಚಕ್ರ ವಾಹನಗಳ ನಡುವೆ ಮುರದಲ್ಲಿ ಗುರುವಾರ ಮಧ್ಯಾಹ್ನ ಅಪಘಾತ ಸಂಭವಿಸಿದೆ. ಪುತ್ತೂರಿನಿಂದ ಕಬಕ ಕಡೆ ತೆರಳುತ್ತಿದ್ದ ಡಿಯೋ ಹಾಗೂ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ಪ್ರೇಮಿಗಳು ಪ್ರೀತಿಸಿ ಮದುವೆಯಾಗಿದ್ದಕ್ಕೆ; ಯುವಕನ ಪೋಷಕರ ಮೇಲೆ ಹುಡುಗಿಯ ಮಾವಂದಿರು ಹಲ್ಲೆ

Posted by Vidyamaana on 2023-12-31 16:43:05 |

Share: | | | | |


ಪ್ರೇಮಿಗಳು ಪ್ರೀತಿಸಿ ಮದುವೆಯಾಗಿದ್ದಕ್ಕೆ; ಯುವಕನ ಪೋಷಕರ ಮೇಲೆ ಹುಡುಗಿಯ ಮಾವಂದಿರು ಹಲ್ಲೆ

ದಾವಣಗೆರೆ (ಡಿ.31) : ಪ್ರೇಮಿಗಳು ಪ್ರೀತಿ ಮದುವೆಯಾಗಿದ್ದಕ್ಕೆ ಯುವಕನ ಪೋಷಕರ ಮೇಲೆ ಹುಡುಗಿಯ ಸಂಬಂಧಿಕರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ನಡೆದಿದೆ.ಆರುಂಡಿ ಬಸಪ್ಪ ಹಾಗು ಪತ್ನಿ ಮಲ್ಲಮ್ಮನ ಮೇಲೆ ಮಾರಣಾಂತಿಕ ಹಲ್ಲೆ.ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಲೇಬೆನ್ನೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಏನಿದು ಘಟನೆ?


ಕಮಲಾಪುರದ ಸಿದ್ದಾರ್ಥ ಹಾಗು ಸೃಷ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೇಮಿಗಳಿಗೆ ಮದುವೆಯಾಗಲು ಜಾರಿ ಅಡ್ಡಿಯಾಗಿದ್ದರಿಂದ ಯುವತಿಯ ಪೋಷಕರು ವಿರೋಧಿಸಿದ್ದರು. ಈ ಹಿನ್ನೆಲೆ ಕಳೆದ 20 ದಿನಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದ ಜೋಡಿ. ಬಳಿಕ ಸಬ್ ರಿಜಿಸ್ಟರ್ ನಲ್ಲಿ ಆಪೀಸ್ ನಲ್ಲಿ ನೋಂದಣಿ ಮಾಡಿಸಿದ್ದರು.ಮಗಳು ಬೇರೆ ಜಾತಿ ಯುವಕನೊಂದಿಗೆ ಮದುವೆಯಾಗಿರುವ ವಿಚಾರ ಗೊತ್ತಾಗಿ ನಿನ್ನೆ ಸಂಜೆ ಹುಡುಗನ ಮನೆಗೆ ನುಗ್ಗಿದ್ದ ಯುವತಿ ಪೋಷಕರು. ಸಿದ್ಧಾರ್ಥ ತಂದೆಯಾ ಆರುಂಡಿ ಬಸಪ್ಪ, ಪತ್ನಿ ಮಲ್ಲಮ್ಮನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜಾತಿ ಬೇರೆ ಬೇರೆ ಎಂಬ ಕಾರಣ ನೀಡಿ ಇವರೇ ಮದುವೆ ಮಾಡಿಸಿದ್ದಾರೆಂದು ಆರುಂಡಿ ಬಸಪ್ಪನ ಮೈಮೇಲಿನ ಬಟ್ಟೆ ಬಿಚ್ಚಿ ಅಮಾನುಷವಾಗಿ ಥಳಿಸಿರುವ ಹುಡುಗಿಯ ಮಾವಂದಿರು. ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿರುವ ಬಸಪ್ಪನಿಗೆ ದಾವಣಗೆರೆ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಸದ್ಯ ಪ್ರಕರಣ ಸಂಬಂಧ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪುತ್ತೂರು : ಶತಾಯುಷಿ ಪದ್ಮಾವತಿ ತ್ಯಾಂಪಣ್ಣ ಪೂಜಾರಿ ನಿಧನ

Posted by Vidyamaana on 2023-12-25 04:40:12 |

Share: | | | | |


ಪುತ್ತೂರು : ಶತಾಯುಷಿ ಪದ್ಮಾವತಿ ತ್ಯಾಂಪಣ್ಣ ಪೂಜಾರಿ ನಿಧನ

ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಬಸಂತಕೋಡಿ ನಿವಾಸಿ ಪದ್ಮಾವತಿ ತ್ಯಾಂಪಣ್ಣ ಪೂಜಾರಿ

(102 ವ) ಅವರು ವಯೋಸಹಜ ಡಿ. 23 ರಂದು ಸ್ವ ಗೃಹದಲ್ಲಿ ನಿಧನ ಹೊಂದಿದರು


ಚುನಾವಣೆಯ ಪ್ರತಿ ಸಂದರ್ಭ ಇವರು ಸತತವಾಗಿ ಮತದಾನ ಮಾಡುತ್ತಿದ್ದರು. ಬಲ್ನಾಡು ಗ್ರಾಮ ಗ್ರಾಮ ಪಂಚಾಯತ್ ವತಿಯಿಂದ ಇತ್ತೀಚೆಗೆ ಇವರನ್ನು ಗೌರವಿಸಿ ಸನ್ಮಾನ ಮಾಡಲಾಗಿದೆ.


ಮೃತರು ಮಕ್ಕಳಾದ ಪುತ್ತೂರು ಸರಕಾರಿ ಆಸ್ಪತ್ರೆಯ ನಿವೃತ್ತ ವಾಹನ ಚಾಲಕ ನಾರಾಯಣ ಪೂಜಾರಿ ಬಸಂತಕೋಡಿ, ಮಂಗಳೂರಿನಲ್ಲಿ ಉದ್ಯಮಿ ಮೋಹನ್ ಬಲ್ನಾಡ್ ಮತ್ತು ಪುತ್ರಿ ಹರಿಣಿ ಎಲ್ಯಣ್ಣ ಪೂಜಾರಿ ಪೆರಿಯಾತ್ತೋಡಿ ಅವರನ್ನು ಅಗಲಿದ್ದಾರೆ.



Leave a Comment: