ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ವಿದ್ಯಾಮಾತ ಅಕಾಡೆಮಿಯ ಸುಳ್ಯ ಶಾಖೆ ಉದ್ಘಾಟನೆ – ಗಣ್ಯರ ಶುಭ ಹಾರೈಕೆ

Posted by Vidyamaana on 2023-10-02 07:44:52 |

Share: | | | | |


ವಿದ್ಯಾಮಾತ ಅಕಾಡೆಮಿಯ ಸುಳ್ಯ ಶಾಖೆ ಉದ್ಘಾಟನೆ – ಗಣ್ಯರ ಶುಭ ಹಾರೈಕೆ

ಸುಳ್ಯ: ಸಮಾಜಕ್ಕೆ ಬೇಕಾದ ಶೈಕ್ಷಣಿಕ ಅವಶ್ಯಕತೆಗಳನ್ನು ಪೂರೈಸುತ್ತಿರುವ ವಿದ್ಯಾಮಾತ ಅಕಾಡೆಮಿ, ಅವಿಭಜಿತ ಜಿಲ್ಲಾಕೇಂದ್ರಗಳಾದ ಮಂಗಳೂರು, ಉಡುಪಿ, ಕುಂದಾಪುರದಲ್ಲೂ ಆರಂಭವಾಗಲಿ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಶುಭಹಾರೈಸಿದರು.

ಸ್ಫರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಮೂಲಕ ಮನೆ ಮಾತಾಗಿರುವ ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆ ಸುಳ್ಯ ರಥಬೀದಿಯ ಟಿಎಪಿಸಿಎಂಎಸ್ ಕಟ್ಟಡದಲ್ಲಿ ಗುರುವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಐಪಿಎಸ್ ಮೂಲಕ ನಮ್ಮ ಊರಿನ ಯುವಕರು, ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎನ್ನುವ ಆಶಯದೊಂದಿಗೆ ವಿದ್ಯಾಮಾತಾದ ಭಾಗ್ಯೇಶ್ ರೈ ಕೆಲಸ ನಿರ್ವಹಿಸುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದ ಅವರ ಎಲ್ಲಾ ಆಶಯಗಳು ಈಡೇರಲಿ ಎಂದು ಹಾರೈಸಿದರು.


ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಪುತ್ತೂರಿನಲ್ಲಿ ಯಶಸ್ವಿ ಸಾಧನೆ ಮಾಡಿ .ಇದೀಗ ಸುಳ್ಯದಲ್ಲಿ ಶಾಖೆಯೊಂದು ಆರಂಭಗೊಂಡಿದೆ ಸಂತಸ. ಸುಳ್ಯ ಶಿಕ್ಷಣ ಕ್ಷೇತ್ರದಲ್ಲಿ ಪುತ್ತೂರಿಗಿಂತಲೂ ಎತ್ತರ ಏರಿದೆ. ಆರ್ಥಿಕ ಸಮಸ್ಯೆಯಿರುವಂತಹ ವಿದ್ಯಾರ್ಥಿಗಳಿಗೂ ಅಕಾಡೆಮಿ ತರಬೇತಿ ನೀಡೋ ಕಾರ್ಯ ಮಾಡುವಲ್ಲಿ ಸೈ ಎನಿಸಿದ್ದು ಮಂಗಳೂರಿನಲ್ಲಿ ಕೂಡ ಶಾಖೆ ಶೀಘ್ರದಲ್ಲೇ ಉದ್ಘಾಟನೆಯಾಗಲಿಯೆಂದು ಹೇಳಿದರು.


ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್‌. ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, ಈ ಕಟ್ಟಡದಲ್ಲಿ ಒಳ್ಳೆಯ ತರಬೇತಿ ಕೇಂದ್ರ ಆರಂಭವಾಗಬೇಕುನ್ನುವ ಆಕಾಂಕ್ಷೆಯಿತ್ತು, ಅದು ಈಗ ಭಾಗ್ಯಶ್ ರೈ ಮೂಲಕ ಪೂರ್ಣ ವಾಗಿದೆ. ಐ.ಎ.ಎಸ್,ಕೆ.ಎ.ಎಸ್ ತರಬೇತಿ ಕೇಂದ್ರವೇ ಇಲ್ಲದಿರುವ ಸುಳ್ಯಕ್ಕೆ ಅತ್ಯುತ್ತಮ ಭಾಗ್ಯ ಒದಗಿಬಂದಿದೆ.ಅಕಾಡೆಮಿ ಯೋಜನೆ ಯೋಚನೆ ಹಾಗೂ ವ್ಯವಸ್ಥೆಯಿಂದ ಯಶಸ್ಸು ಸಾಧ್ಯವಾಗಲಿಯೆಂದು ಹೇಳಿದರು.


ವಿದ್ಯಾರ್ಥಿಗಳಿಗೆ, ಸಾಧಕರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಸನ್ಮಾನ

ಭಾರತೀಯ ಸೇನೆಗೆ ಆಯ್ಕೆಗೊಂಡಿರುವ 2 ಜಿಲ್ಲೆಯ 6 ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದ ಸಾಧಕರೂ ಹಾಗೂ ಅಕಾಡೆಮಿಯ ಸಿಬ್ಬಂದಿ ವರ್ಗಕ್ಕೆ ಅತಿಥಿಗಳ ಮುಖೇನ ಸನ್ಮಾನ ಕಾರ್ಯಕ್ರಮ ನಡೆಯಿತು

ಭಾಗ್ಯಶ್ ರೈಯವರ ತಂದೆ-ತಾಯಿ ಎ.ಕೆ.ತಿಮ್ಮಪ್ಪ ರೈ  ಪುತ್ರಿ ದೇವಿದ್ಯಾ ರೈ,ಕೊಳ್ತಿಗೆ ಕೆಳಗಿನ ಮನೆ ಮತ್ತು ರತ್ನಾವತಿ ಟಿ.ರೈ, ಮಾಜಿ ವಿಧಾನ ಪರಿಷತ್‌ ಸದಸ್ಯ ಅಣ್ಣಾ ವಿನಯಚಂದ್ರ, ಪಿ.ಸಿ.ಜಯರಾಮ್, ಜಯಪ್ರಕಾಶ್ ರೈ, ಪ್ರೊ| ಬಾಲಚಂದ್ರ ಗೌಡ, ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮಾಜಿ ನಗರ ಕಾಂಗ್ರೆಸ್‌ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಗಣೇಶ್ ಶೆಟ್ಟಿ, ಲಯನ್ಸ್ ಪುತ್ತೂರ್ದ ಮುತ್ತು ಅಧ್ಯಕ್ಷ ರವೀಂದ್ರ ಪೈ, ರವಿಪ್ರಸಾದ್ ಶೆಟ್ಟಿ, ಶ್ರೀಪ್ರಸಾದ್ ಪಾಣಾಜೆ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್‌.ಬಿ.ಜಯರಾಮ್ ರೈ, ಪಿ.ಎಸ್.ಗಂಗಾಧರ್, ಭಾಗ್ಯಶ್ ರೈ ಸಹೋದರ ಯೋಗೀಶ್ ರೈ ಮತ್ತು ಚಿಕ್ಕಪ್ಪ ಎ.ಕೆ.ಜಯರಾಮ ರೈ, ಅತ್ತೆ-ಮಾವ ಸಂಕಪ್ಪ ಶೆಟ್ಟಿ ಹಾಗೂ ಪ್ರೇಮಾ ಎಸ್ ಶೆಟ್ಟಿ, ಟಿಎಪಿಸಿಎಂಎಸ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ ದೇರಪ್ಪಜ್ಜನಮನೆ, ಅರವಿಂದ ಚೊಕ್ಕಾಡಿ, ಡಾ| ಪೂವಪ್ಪ ಕಣಿಯೂರು, ವಿನಯ ಕಂದಡ್ಕ, ಪಿ.ಬಿ.ಸುಧಾಕರ ರೈ,ಸುಭಾಶ್ಚಂದ್ರ ರೈ ಸಾರ್ಯ, ಹರಿನಾಥ ರೈ ಕೂಡೇಲು, ವಿದ್ಯಾಮಾತಾ ಅಕಾಡೆಮಿ ಇದರ ಬೋಧಕ ಹಾಗೂ ಬೋಧಕೇತರ ವೃಂದ, ವಿದ್ಯಾರ್ಥಿಗಳ ಸಹಿತ ಹಲವರು ಹಾಜರಿದ್ದರು. ಭಾಗ್ಯಶ್ ರೈ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ನಿರೂಪಿಸಿ, ಅಕಾಡೆಮಿಯ ಸಂಚಾಲಕಿ ರಮ್ಯಾ ಭಾಗೇಶ್ ರೈ ವಂದಿಸಿದರು.ಕಾರ್ಯಕ್ರಮದ ನಡುವೆ ಪುತ್ತೂರಿನ ವಿಶ್ವ ಕಲಾ ನಿಕೇತನ ತಂಡದಿಂದ ನೃತ್ಯ ಕಾರ್ಯಕ್ರಮ ನೆರವೇರಿತು. ಇದಕ್ಕೂ ಮೊದಲು ವೇದಿಕೆ ಮುಂಭಾಗದ ನಟರಾಜ ಮೂರ್ತಿಗೆ ಗೌರವ ಅರ್ಪಣೆ ನೆರವೇರಿತು. ಸಂಜೆ ದುರ್ಗಾ ನಮಸ್ಕಾರವೂ ನಡೆಯಿತು.

ವಿದ್ಯಾಮಾತಾ ಅಕಾಡೆಮಿ:

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳ ವೃತ್ತಿಪರ ಕೌಶಲ್ಯ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯು ಕಳೆದ 5 ವರ್ಷಗಳಲ್ಲಿ 4000 ಕ್ಕೂ ಅಧಿಕ ಮಂದಿಗೆ ಉದ್ಯೋಗ ಸಿಗುವ ಅವಕಾಶವನ್ನು ಮಾಡಿಕೊಟ್ಟಿದೆ. ಪುತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆ ಇದೀಗ ಸುಳ್ಯದಲ್ಲಿ ಶಾಖೆಯನ್ನು ತೆರೆದಿದೆ.

ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಅವರು 2017ರಲ್ಲಿ ಪುತ್ತೂರಿನಲ್ಲಿ ವಿದ್ಯಾಮಾತಾ ಫೌಂಡೇಶನ್ 2017ನ್ನು ಹುಟ್ಟು ಹಾಕಿದರು. 2020ರಲ್ಲಿ ವಿದ್ಯಾಮಾತಾ ಅಕಾಡಮಿ ಸ್ಥಾಪಿಸಿ ಸರ್ಕಾರದ ಮಾನ್ಯತೆ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳ ವೃತ್ತಿಪರ ಕೌಶಲ್ಯ ತರಬೇತಿ ಆರಂಭಿಸಿದರು.ಕಳೆದ ಎರಡು ವರ್ಷಗಳಲ್ಲಿ 90 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸರ್ಕಾರಿ ಸೇವೆಗೆ ಸೇರುವಂತೆ ತರಬೇತು ಮಾಡಿದ್ದಾರೆ. ಸುಮಾರು 4000 ಕ್ಕೂ ಅಧಿಕ ಮಂದಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಲಭ್ಯವಾಗುವಂತೆ ಅವಕಾಶ ಕಲ್ಪಿಸಿದ್ದಾರೆ. ಸುಳ್ಯ ತಾಲೂಕಿನಲ್ಲಿ ಇದೀಗ ಶಾಖೆ ಆರಂಭಿಸಿದ್ದಾರೆ. ಎಲ್ಲಾ ವೃತ್ತಿಪರ ಕೋರ್ಸ್ ಗಳ ಅರ್ಜಿ,ಉದ್ಯೋಗ ಮಾಹಿತಿ,ತರಬೇತಿ, ಎಲ್ಲಾ ಶ್ರೇಣಿಯ ಉದ್ಯೋಗಗಳಿಗೆ ತರಬೇತಿ ಈ ಸಂಸ್ಥೆಯಲ್ಲಿ ಸಿಗುತ್ತದೆ.

ಮೇ.9ರಿಂದ ಹಜ್ ಯಾತ್ರೆ ಪ್ರಾರಂಭ: ಬೆಂಗಳೂರಿನಿಂದ ತೆರಳಲಿರುವ ಮೊದಲ ವಿಮಾನಕ್ಕೆ ಸಿಎಂ ಚಾಲನೆ ಸಾಧ್ಯತೆ

Posted by Vidyamaana on 2024-05-02 07:19:40 |

Share: | | | | |


ಮೇ.9ರಿಂದ ಹಜ್ ಯಾತ್ರೆ ಪ್ರಾರಂಭ: ಬೆಂಗಳೂರಿನಿಂದ ತೆರಳಲಿರುವ ಮೊದಲ ವಿಮಾನಕ್ಕೆ ಸಿಎಂ ಚಾಲನೆ ಸಾಧ್ಯತೆ

ಬೆಂಗಳೂರು : ಮೇ.9 ರಿಂದ ಹಜ್ ಯಾತ್ರೆ ಪ್ರಾರಂಭವಾಗಲಿದ್ದು, ಬೆಂಗಳೂರಿನಿಂದ ತೆರಳುವ ಮೊದಲ ವಿಮಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.ದೇಶದಾದ್ಯಂತ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ರಾಜ್ಯದಲ್ಲಿ ಉಳಿದ 14 ಕ್ಷೇತ್ರಗಳ ಮತದಾನ ಪ್ರಕ್ರಿಯೆ ಮೇ.7 ರಂದು ನಡೆಯಲಿದೆ.ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂದರೆ ಮೇ.8 ರಂದು ಕಾರ್ಯಕ್ರಮ ಆಯೋಜಿಸಲು ಕರ್ನಾಟಕ ಹಜ್ ಸಮಿತಿ ಚಿಂತನೆ ನಡೆಸಿದೆ.

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಇಂದಿನ (ಎ 27)ಪ್ರಚಾರ ಸಭೆಗಳು

Posted by Vidyamaana on 2023-04-27 02:00:20 |

Share: | | | | |


ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ   ಇಂದಿನ (ಎ 27)ಪ್ರಚಾರ ಸಭೆಗಳು

ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಚುನಾವಣಾ ಪ್ರಚಾರ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಗ್ರಾಮಾಂತರ ಭಾಗಗಳಲ್ಲಿ ಪ್ರಚಾರ ಸಭೆಗಳನ್ನು ಆಯೋಜಿಸಲಾಗುತ್ತಿದೆ.


ಅಶೋಕ್ ಕುಮಾರ್ ರೈ ಅವರ ಇಂದಿನ ಪ್ರಚಾರ ಸಭೆಗಳು ಹೀಗಿವೆ -

 ಬೆಳಿಗ್ಗೆ  9 : 30 ರಿಂದ 11 ಗಂಟೆ ಗೆ  ಇಡ್ಕಿದು ಸೇವಾ ಸಹಕಾರ ಸಂಘ ಪ್ರದಾನ ಕಚೇರಿ ಯ ಮುಂಬಾಗದ ಉರಿಮಜಲಿನಲ್ಲಿ   ಮತ್ತು   ಕಬಕ ವಲಯದ ಕಲ್ಲಂದಡ್ಕ ಎಂಬಲ್ಲಿ ಬೆಳಿಗ್ಗೆ 10.30 ರಿಂದ 12.30 ರ ತನಕ  ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ನಡೆಯಲಿದೆ..

ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ಆರ್ ಸಿ ನಾರಾಯಣ ರೆಂಜ ಆಯ್ಕೆ

Posted by Vidyamaana on 2024-02-17 02:32:54 |

Share: | | | | |


ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ಆರ್ ಸಿ ನಾರಾಯಣ ರೆಂಜ ಆಯ್ಕೆ

ಪುತ್ತೂರು: 36ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಆರ್ ಸಿ ನಾರಾಯಣ ರೆಂಜ ಅವರು ಕರ್ನಾಟಕ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯಾ ಘೋಷಿಸಿದ್ದಾರೆ.


ಆರ್ ಸಿ ನಾರಾಯಣ ರೆಂಜ ಅವರು ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ನಂ ವನ್ ಜಿಲ್ಲೆಯಾಗಿ ಸಂಘಟನೆಯಲ್ಲಿ ಮುಂಚೂಣಿಯಲ್ಲಿತ್ತು. ಬೂತ್ ನಿಂದ ರಾಜ್ಯಮಟ್ಟದವರೆಗೆ ತನ್ನ ಸಂಘಟನೆ ಕಾರ್ಯಶೈಲಿಯಿಂದ ಬಿಜೆಪಿಗೆ ಬಲ ತುಂಬಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ, ಎಬಿವಿಪಿಯಲ್ಲಿ ತಾಲೂಕು ಅಧ್ಯಕ್ಷರಾಗಿ ನಂತರ ಬಿಜೆಪಿ ಮಂಡಲ ಉಪಾಧ್ಯಕ್ಷರಾಗಿ, ಮಾಧ್ಯಮ ವಕ್ತರಾರಾಗಿ, ಬಿಜೆಪಿ ಯುವಮೋರ್ಚಾದ ಮಂಡಲ ಉಪಾಧ್ಯಕ್ಷರಾಗಿ ನಂತರ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಮಾಧ್ಯಮ ಪ್ರಮುಖರಾಗಿ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾಧ್ಯಕ್ಷರಾಗಿ ಜವಾಬ್ದಾರಿ ಹೀಗೆ ಸಂಘಟನೆಗೆ ಅನೇಕ ರೀತಿಯಲ್ಲಿ ತಮ್ಮ ಸೇವೆಯನ್ನು ನೀಡಿದ್ದಾರೆ.

ರಾಜ್ಯದಲ್ಲಿ ಮೂರು ದಿನ ಹಗುರ ಮಳೆ ಸಾಧ್ಯತೆ

Posted by Vidyamaana on 2023-08-19 06:20:40 |

Share: | | | | |


ರಾಜ್ಯದಲ್ಲಿ ಮೂರು ದಿನ ಹಗುರ ಮಳೆ ಸಾಧ್ಯತೆ

ಬೆಂಗಳೂರು :-ನಿನ್ನೆಯಿಂದ ರಾಜ್ಯದ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿದ್ದು ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. ಇದರಿಂದ ತಾಪಮಾನ ಇಳಿಕೆಯಾಗಿದ್ದು, ತಂಪಾದ ವಾತಾವರಣ ಕಂಡುಬರುತ್ತಿದೆ. ಕಳೆದ ಮೂರು ವಾರಗಳಿಂದ ಮಳೆಯಿಲ್ಲದೆ ಒಣಹವೆ ಮುಂದುವರೆದಿದ್ದರಿಂದ ಗರಿಷ್ಟ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟಿತ್ತು.ಇದರಿಂದ ಬೇಸಿಗೆಯ ವಾತಾವರಣವನ್ನು ನೆನಪಿಸುವಂತಾಗಿತ್ತು.


ವಾತಾವರಣದಲ್ಲಿ ಬದಲಾವಣೆಯಾಗಿದ್ದು, ನಿನ್ನೆಯಿಂದ ಮೋಡ ಕವಿದ ವಾತಾವರಣ ಹಾಗು ತಂಪಾದ ಗಾಳಿ ಬೀಸುತ್ತಿದೆ. ಇದೇ ರೀತಿಯ ವಾತಾವರಣ ಆ.21ರವರೆಗೂ ಮುಂದುವರೆಯಲಿದ್ದು, ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಬಹುದೆಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.ಸದ್ಯಕ್ಕೆ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಯಾವುದೇ ಮುನ್ಸೂಚನೆಗಳು ಕಂಡುಬರುತ್ತಿಲ್ಲ. ಮೋಡ ಮುಸುಕಿದ ವಾತಾವರಣ ಇರುವುದರಿಂದ ತಾಪಮಾನದಲ್ಲಿ ಇಳಿಕೆಯಾಗಿದೆ.  ಗಾಳಿ ಹಾಗು ತುಂತುರು ಮಳೆ ಸೋಮವಾರದವರೆಗೂ ಮುಂದುವರೆಯುವ ಲಕ್ಷಣಗಳಿವೆ. ಮತ್ತೆ ಮಂಗಳವಾರದಿಂದ ಒಣಹವೆ ಮುಂದುವರೆಯಲಿದೆ ಎಂದರು.


ಆ.23ರಿಂದ ಮತ್ತೆ ಗರಿಷ್ಠ ತಾಪಮಾನದಲ್ಲಿ ಏರಿಕೆಯಾಗಲಿದೆ. ಆನಂತರ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಲಿದೆ ಎಂದು ಹೇಳಿದರು.

ಶಾಸಕರ ಇಂದಿನ ಕಾರ್ಯಕ್ರಮ ಆ 29

Posted by Vidyamaana on 2023-08-29 01:27:04 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 29

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 29 ರಂದು


ಬೆಳಿಗ್ಗೆ 10 ಗಂಟೆಯಿಂದ ಮಂಗಳೂರು ನೇತ್ರಾವತಿ‌ಸಭಾಂಗಣದಲ್ಲಿ ಕಂದಾಯ ಸಚಿವರ ಸಭೆಯಲ್ಲಿ ಭಾಗವಹಿಸುವುದು



Leave a Comment: