ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ವಿರೋಧ ಪಕ್ಷಗಳ ಸಭೆಯಲ್ಲಿ ಮೈತ್ರಿಗೆ INDIA ಎಂದು ಹೆಸರಿಟ್ಟ ನಾಯಕರು

Posted by Vidyamaana on 2023-07-18 10:00:32 |

Share: | | | | |


ವಿರೋಧ ಪಕ್ಷಗಳ ಸಭೆಯಲ್ಲಿ ಮೈತ್ರಿಗೆ INDIA ಎಂದು ಹೆಸರಿಟ್ಟ ನಾಯಕರು

ಬೆಂಗಳೂರು : ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ರಾಜಕೀಯ ಪಕ್ಷಗಳು ಇಂದು ದೆಹಲಿ ಮತ್ತು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸುತ್ತಿವೆಮಹಾಮೈತ್ರಿಕೂಟದ ನಾಯಕರು ತನ್ನ ಎರಡನೇ ಏಕತಾ ಸಭೆಯನ್ನು ಬೆಂಗಳೂರಿನಲ್ಲಿ ನಡೆಸುತ್ತಿದ್ದರೆ, ಬಿಜೆಪಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (INDA) ಪ್ರತಿಪಕ್ಷಗಳ ವಿರುದ್ಧ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸಭೆ ನಡೆಸಲಿದೆ.ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕರು ಬೆಂಗಳೂರಿನಲ್ಲಿ ಮೈತ್ರಿಗೆ ಇಂಡಿಯಾ ಎಂದು ನಾಮಕರಣ ಮಾಡಿದ್ದಾರೆ.


I – Indian

N – National

D – Democractic

I – Inclusive

A - Alliance ಎಂದು ನಾಮಕರಣ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಕೇಂದ್ರದ ವಿರೋಧ ಪಕ್ಷಗಳ ಸಭೆಯಲ್ಲಿ ಇಂದು ವಿವಿಧ ಪಕ್ಷದ ನಾಯಕರೊಂದಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಸಾಮೂಹಿಕ ಹೋರಾಟ ನಡೆಸಲು ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳು ಹಾಗೂ ಕಾರ್ಯತಂತ್ರಗಳ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು.

ಕ್ರಿಕೆಟ್​ ಆಡಿ ಬಂದು ತಕ್ಷಣ ನೀರು ಕುಡಿದ ಬಾಲಕ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಸಾವು

Posted by Vidyamaana on 2023-12-31 16:02:08 |

Share: | | | | |


ಕ್ರಿಕೆಟ್​ ಆಡಿ ಬಂದು ತಕ್ಷಣ ನೀರು ಕುಡಿದ ಬಾಲಕ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಸಾವು

ಲಕ್ನೋ: ಕ್ರಿಕೆಟ್‌ ಆಡಿ ನೀರು ಕುಡಿದ ಬಳಿಕ ಬಾಲಕನೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಅಲ್ಮೋರಾ ಜಿಲ್ಲೆಯಲ್ಲಿ ನಡೆದಿದೆ.ಶನಿವಾರ(ಡಿ.30 ರಂದು) ನಡೆದಿದ್ದು, ಹಸನ್‌ಪುರದ ಕಾಯಸ್ತಾನ್‌ನ 10ನೇ ತರಗತಿ ವಿದ್ಯಾರ್ಥಿ ಪ್ರಿನ್ಸ್ ಸೈನಿ ಎಂಬ ಬಾಲಕ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ.ಬಾಲಕ ಸೈನಿ ಕ್ರಿಕೆಟ್‌ ಆಡಿದ ಬಳಿಕ ನೀರು ಕುಡಿಯಲು ಬಂದಿದ್ದಾನೆ. ಕೋಲ್ಡ್‌ ನೀರು ಕುಡಿದಿದ್ದಾನೆ. ನೀರು ಕುಡಿದ ತಕ್ಷಣವೇ ಆತ ಪ್ರಜ್ಞೆ ತಪ್ಪಿದ್ದಾನೆ.


ಪ್ರಿನ್ಸ್‌ ಅವರ ಸ್ನೇಹಿತರು ವಿಚಾರವನ್ನು ಮನೆಯವರಿಗೆ ತಿಳಿಸಿದ್ದು,ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಪರೀಕ್ಷೆ ಮಾಡಿದ ವೈದ್ಯರು ಆದಾಗಲೇ ಆತ ಮೃತಪಟ್ಟಿರುವುದಾಗಿ ಹೇಳಿದ್ದಾರೆ.ಬಾಲಕನ ಸಾವಿಗೆ ಹೃದಯಾಘಾತವೇ ಕಾರಣವಿರಬಹದೆಂದು ಶಂಕಿಸಲಾಗಿದೆ. ಸದ್ಯ ಈ ಬಗ್ಗೆ ಪೋಷಕರು ದೂರು ದಾಖಲಿಸಿಲ್ಲ ಎಂದು ವರದಿ ತಿಳಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ವಿಶಿಷ್ಟ ಕ್ಯಾಂಪೇನ್ ಕಾರ್ ಬಿಟ್ಟು ರಿಕ್ಷಾ ಏರಿ ಪ್ರಚಾರ ನಡೆಸಿದ ಕೈ ಅಭ್ಯರ್ಥಿ

Posted by Vidyamaana on 2024-04-15 08:36:00 |

Share: | | | | |


ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ವಿಶಿಷ್ಟ ಕ್ಯಾಂಪೇನ್ ಕಾರ್ ಬಿಟ್ಟು ರಿಕ್ಷಾ ಏರಿ ಪ್ರಚಾರ ನಡೆಸಿದ ಕೈ ಅಭ್ಯರ್ಥಿ

ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ಪರವಾಗಿ ಉಳ್ಳಾಲ ವಿಧಾನಸಭಾ ಕ್ಷೇತ್ರದ ವಿವಿದೆಡೆ ಪ್ರಚಾರ ಕಾರ್ಯ ನಡೆಯಿತು.


ಪದ್ಮರಾಜ್ ಆರ್. ಪೂಜಾರಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮನೆ, ಅಂಗಡಿಗಳಿಗೆ ತೆರಳಿ, ಮತ ಯಾಚನೆ ನಡೆಸಿದರು.

ಕೋಟೆಕಾರ್, ಕಾಪಿಕಾಡ್, ತಲಪಾಡಿಯ ಕೆ.ಸಿ. ರೋಡ್ ಜಂಕ್ಷನ್, ಕುಂಪಲಕ್ರಾಸ್, ಕುಂಪಲ ಆಶ್ರಯ ಕಾಲನಿ, ಪಿಲಾರು, ಕುತ್ತಾರು, ಅಂಬ್ಲಮೊಗರು, ಅಸೈಗೋಳಿ, ಕೊಣಾಜೆ, ಗ್ರಾಮಚಾವಡಿ ಮೊದಲಾದೆಡೆ ಪ್ರಚಾರ ಕಾರ್ಯ ನಡೆಸಲಾಯಿತು.

ಬಂಟ್ವಾಳ: ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದ ಕಾರು

Posted by Vidyamaana on 2023-07-05 10:45:16 |

Share: | | | | |


ಬಂಟ್ವಾಳ: ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದ ಕಾರು

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್ ಮೇಲೆ ಹತ್ತಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಬಂಟ್ವಾಳದ ತುಂಬೆ ಎಂಬಲ್ಲಿ ನಡೆದಿದೆ.ಬೆಳ್ತಂಗಡಿ ನಿವಾಸಿ ನವಾಜ್ ಎಂಬವರು ಕಾರಿನಲ್ಲಿ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ವೇಳೆ ತುಂಬೆಯಲ್ಲಿ ಈ ಘಟನೆ ನಡೆದಿದೆ.ಕಾರು ಡಿವೈಡರ್ ಮೇಲೆ ಹತ್ತಿದ್ದಲ್ಲದೆ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರಿನ ಒಂದು ಭಾಗ ನಜ್ಜುಗುಜ್ಜಾಗಿದೆ. ಆದರೆ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ

ಪುತ್ತೂರು : ಇನ್‌ಸ್ಟ್ರಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡು ಮೂವರು ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ : ಮಂಗಳೂರು ಮೂಲದ ರಿತಿಕ್ಷ್ ಅರೆಸ್ಟ್

Posted by Vidyamaana on 2023-11-19 04:39:01 |

Share: | | | | |


ಪುತ್ತೂರು : ಇನ್‌ಸ್ಟ್ರಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡು ಮೂವರು  ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ : ಮಂಗಳೂರು ಮೂಲದ  ರಿತಿಕ್ಷ್ ಅರೆಸ್ಟ್

ಪುತ್ತೂರು : ಮೂವರು ಅಪ್ರಾಪ್ತೆಯರಿಗೆ ಇನ್‌ಸ್ಟ್ರಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ದೂರಿಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸಿದ್ದಾರೆ.


ಮಂಗಳೂರು ಅಡ್ಯಾರುಪದವು ನಾರಾಯಣ ಪೂಜಾರಿ ಎಂಬವರ ಪುತ್ರ ಸಂತೋಷ್ ಯಾನೆ ರಿತಿಕ್ಷ್ ಬಂಧಿತ ಯುವಕ.


ಆರೋಪಿ ಪುತ್ತೂರಿನ ಮೂವರು ಅಪ್ರಾಪ್ತೆಯರನ್ನು ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡು ಮೆಸೇಜ್ ಮತ್ತು ಕರೆ ಮಾಡಿ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ತನಿಖೆ ನಡೆಸಿದರು.


ಆರೋಪಿಯನ್ನು ಮಂಗಳೂರಿನಿಂದ ಬಂಧಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಭಾರ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಇವರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಬೆಳ್ತಂಗಡಿ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘ

Posted by Vidyamaana on 2024-03-07 12:39:49 |

Share: | | | | |


ಬೆಳ್ತಂಗಡಿ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘ

ಬೆಳ್ತಂಗಡಿ :ಬೆಳ್ತಂಗಡಿ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಮಹಾವೀರ ಅರಿಗ, ಉಪಾಧ್ಯಕ್ಷರಾಗಿ ಸುದ್ದಿ ಉದಯ ಪತ್ರಿಕೆಯ ಆಡಳಿತ ನಿರ್ದೇಶಕ ತುಕಾರಾಮ್ ಬಿ. ಐದು ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಆನಂದ ಶೆಟ್ಟಿ, ಗೋಪಾಲ್ ರಾವ್, ಮಮತಾ ಶೆಟ್ಟಿ, ವೀಣಾ ವಿನೋದ್ ಕುಮಾರ್, ಕೃಷ್ಣಪ್ಪ ಗುಡಿಗಾರ್, ಸಚಿನ್ ಕುಮಾರ್ ನೊಜೋಡಿ, ಸಂತೋಷ್ ಕುಮಾರ್, ಶರತ್ ಕುಮಾರ್ ಶೆಟ್ಟಿ, ದಿನೇಶ್ ಶೆಟ್ಟಿ, ಪ್ರಸಾದ್ ಬಿ ಆಯ್ಕೆಯಾಗಿದ್ದಾರೆ.



Leave a Comment: