ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಸುದ್ದಿಗಳು News

Posted by vidyamaana on 2024-07-03 19:44:44 |

Share: | | | | |


ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಬುಧವಾರದಂದು ಬೆಂಗಳೂರಿನಲ್ಲಿ ಸಿ ಎಂ‌ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪುತ್ತೂರಿಗೆ‌ಮೆಡಿಕಲ್ ಕಾಲೇಜು ಮತ್ತು ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದರು.

   ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಡಿಕೆಯನ್ನು ನೆನಪಿಸಿದರು. ಬಜೆಟ್ ನಲ್ಲಿ ಈ ಬಾರಿ ಅನುಮೋದನೆಯಾಗಬೇಕು ಮತ್ತು ತನ್ನ ಕ್ಷೇತ್ರದ ಜನರ ಬಹುಕಾಲದ ಬೇಡಿಕೆಯಾದ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಕಳೆದ ಬಜೆಟ್ ನಲ್ಲಿ ಅನುಮೋದನೆಯಾಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ಇರಿಸಿದ ಕಾರಣ ನಾನು ಹೆಚ್ಚು ಒತ್ತಡ ಹಾಕಿರಲಿಲ್ಲ. ಮೆಡಿಕಲ್ ಕಾಲೇಜು ಆಗಬೇಕು‌ಎಂಬುದು‌ ನನ್ನ ಮತ್ತು ನನ್ನ ಕ್ಷೇತ್ರದ ಜನರ ಕನಸಾಗಿದೆ ಅದನ್ನು ನನಸು‌ಮಾಡಿಕೊಡಬೇಕು ಎಂದು ಸಿ ಎಂ ಅವರಲ್ಲಿ ಶಾಸಕರು ವಿನಂತಿಸಿದರು.

ಕಾಲೇಜು‌ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ ಎಂದೂ ಶಾಸಕರು ಸಿಎಂ ಅವರಲ್ಲಿ ತಿಳಿಸಿದರು.

ಹೆಚ್ಚು‌ಅನುದಾನ ಕೊಡಿ

ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಬೇಕಿದೆ. ರಸ್ತೆ, ಸರಕಾರಿ ಕಟ್ಟಡಗಳು, ಶಾಲಾ ,ಕಾಲೇಜು ಕಟ್ಟಡಗಳು, ತಡೆಗೋಡೆ ,ಬೃಹತ್ ಅಣೆಕಟ್ಟುಗಳು ಸೇರಿದಂತೆ ಕ್ಷೇತ್ರದ ಜನರಿಂದ ದಿನದಿಂದ ದಿನಕ್ಕೆ ಕಾಮಗಾರಿಯ ಬೇಡಿಕೆಗಳು ಬರುತ್ತಿದ್ದು ಈಗ ಬರುತ್ತಿರುವ ಅನುದಾನವನ್ನು ಹೆಚ್ಚು ಪ್ರಮಾಣದಲ್ಲಿ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನೇಕ ವರ್ಷಗಳಿಂದ ಇರುವ ಕೆಲವೊಂದು ಕಾಮಗಾರಿ ಬೇಡಿಕೆಗಳಿಗೆ ಅನುದಾನವನ್ನು‌ನೀಡಬೇಕಿದೆ ಈ ಕಾರಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಶಾಸಕರು‌ಮನವಿ ಸಲ್ಲಿಸಿದರು.

 Share: | | | | |


ಕಾಞಂಗಾಡ್ ಸ್ನಾನಗೃಹದಲ್ಲಿ ಕುಸಿದು ಬಿದ್ದು ಮಹಿಳೆ ಮೃತ್ಯು

Posted by Vidyamaana on 2024-02-03 22:26:23 |

Share: | | | | |


ಕಾಞಂಗಾಡ್ ಸ್ನಾನಗೃಹದಲ್ಲಿ ಕುಸಿದು ಬಿದ್ದು ಮಹಿಳೆ ಮೃತ್ಯು

ಕಾಞಂಗಾಡ್ : ಸ್ನಾನ ಮಾಡಲು ತೆರಳಿದ್ದ ಮಹಿಳೆ ಸ್ನಾನಗೃಹದಲ್ಲೇ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಕೇರಳದ ಕಾಞಂಗಾಡ್ ನಲ್ಲಿ ಸಂಭವಿಸಿದೆ.ಇಲ್ಲಿನ ಬಾವಾ ನಗರದ ನಿವಾಸಿ ಮಜೀದ್ ಮತ್ತು ಶಕೀಲಾ ದಂಪತಿಯ ಪುತ್ರಿ ಶುಹೈರಾ (36) ಮೃತ ದುರ್ದೈವಿಯಾಗಿದ್ದಾರೆ .ಸೇನಾ ಅಧಿಕಾರಿ ಕೋಝಿಕ್ಕೋಡ್ ಶರೀದ್ ಅವರ ಪತ್ನಿಯಾಗಿರುವ ಶುಹೈರಾ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಬಾತ್ ರೂಂ ಗೆ ಸ್ನಾನಕ್ಕೆಂದು ಹೋದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ.ಕೂಡಲೇ ಸ್ತಳಿಯರ ನೆರವಿನಿಂದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಶುಹೈರಾ ಆದಾಗಲೇ ಇಹಲೋಕ ತ್ಯಜಿಸಿದ್ದರು ಎನ್ನಲಾಗಿದ್ದು. ಹೃದಯಾಘಾತದಿಂದ ಈ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಎ 16. ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ ಬೆಳಿಗ್ಗೆಯಿಂದಲೇ ಭಕ್ತಾದಿಗಳಿಂದ ಮಲ್ಲಿಗೆ ಅರ್ಪಣೆ

Posted by Vidyamaana on 2023-04-16 11:08:59 |

Share: | | | | |


ಎ 16. ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ  ಬೆಳಿಗ್ಗೆಯಿಂದಲೇ ಭಕ್ತಾದಿಗಳಿಂದ ಮಲ್ಲಿಗೆ ಅರ್ಪಣೆ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಇಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಿಂದ ಕಿರುವಾಳು ಆಗಮಿಸಲಿದ್ದು, ಈ ಹಿನ್ನಲೆಯಲ್ಲಿ ಬಲ್ನಾಡು ದೈವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಮಲ್ಲಿಗೆ, ಹರಕೆ ಸರ್ಪಿಸಲು ಅವಕಾಶ ಕಲ್ಪಿಸಲಾಗಿದೆ.ಇಂದು ರಾತ್ರಿ ಬಲ್ನಾಡಿನಿಂದ ಶ್ರೀ ದಂಡನಾಯಕ ಉಳ್ಳಾಲ್ತಿ ದೈವ ಹಾಗೂ ಪರಿವಾರ ದೈವಗಳ ಕಿರುವಾಳು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ಈ ಬಾರಿ ಬಲ್ನಾಡಿನ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಮಲ್ಲಿಗೆಯನ್ನು ಅರ್ಪಿಸುತ್ತಿದ್ದಾರೆ. ಪ್ರತಿ ವರ್ಷ ಸಂಜೆ ವೇಳೆ ಮಲ್ಲಿಗೆ ಅರ್ಪಿಸಲಾಗುತ್ತಿತ್ತು. ಈ ಬಾರಿ ಬದಲಾವಣೆ ಮಾಡಲಾಗಿದೆ.

ಮಲ್ಲಿಗೆ ಪ್ರಿಯೆ ಉಳ್ಳಾಲ್ತಿ ಅಮ್ಮನಿಗೆ ಪುತ್ತೂರು ನಗರದ ಉಳ್ಳಾಲ್ತಿ ಕಟ್ಟೆಯಲ್ಲಿ ಮಲ್ಲಿಗೆ ಅರ್ಪಿಸಲು ಬೆಳಿಗ್ಗೆಯಿಂದಲೇ ಮಲ್ಲಿಗೆ ಸ್ಟಾಲ್ ಗಳನ್ನು ತೆರೆದಿರುವುದು ಕಂಡು ಬಂದಿತ್ತು. ಚೆಂಡು ಒಂದರ ಮಲ್ಲಿಗೆ ದರ 100 ರೂಪಾಯಿ ಆಗಿತ್ತು. ಈ ಬಾರಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಹಿಂದುತ್ವದ ಮಲ್ಲಿಗೆ ಶೀರ್ಷಿಕೆಯಡಿ 10 ಮಲ್ಲಿಗೆ ಸ್ಟಾಲ್ ಗಳನ್ನು ತೆರೆಯಲಾಗಿದೆ.

ಸುಳ್ಯ - ಕೊಲೆಗೈದ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಶಾಲೆ ಆವರಣದಲ್ಲಿ ಪತ್ತೆ

Posted by Vidyamaana on 2024-06-17 13:51:17 |

Share: | | | | |


ಸುಳ್ಯ - ಕೊಲೆಗೈದ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಶಾಲೆ ಆವರಣದಲ್ಲಿ ಪತ್ತೆ

ಸುಳ್ಯ ಜೂನ್ 17: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಸುಳ್ಯ ಸಮೀಪದ ಶಾಲೆಯ ಜಗಲಿಯಲ್ಲಿ ಪತ್ತೆಯಾಗಿದೆ.

ಸುಳ್ಯದ ಕಾಂತಮಂಗಲ ಸರಕಾರಿ ಶಾಲೆಯ ಬಳಿ ಮೃತದೇಹ ಪತ್ತೆಯಾಗಿದೆ. ಸುಮಾರು 25-30 ವರ್ಷದ ಅಪರಿಚಿತ ಯುವಕನ ಶವ ಎಂದು ಅಂದಾಜಿಸಲಾಗಿದೆ.

ಪುತ್ತೂರು : ಎಸಿ ಕಚೇರಿಗೆ ಶಾಸಕರಿಂದ ದಿಢೀರ್ ಭೇಟಿ

Posted by Vidyamaana on 2024-03-05 17:45:47 |

Share: | | | | |


ಪುತ್ತೂರು : ಎಸಿ ಕಚೇರಿಗೆ ಶಾಸಕರಿಂದ ದಿಢೀರ್ ಭೇಟಿ

ಪುತ್ತೂರು: ದೇವಸ್ಥಾನದ ಜಾಗದ ವಿಚಾರದಲ್ಲಿ ಸತಾಯಿಸುತ್ತಿದ್ದ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿಯನ್ನು ಶಾಸಕ ಅಶೋಕ್ ಕುಮಾರ್ ರೈ ತರಾಟೆಗೆತ್ತಿಕೊಂಡ ಘಟನೆ ಮಂಗಳವಾರ ನಡೆಯಿತು.

ಎಸಿ ಸಹಾಯಕ ಆಯುಕ್ತರ ಕಚೇರಿಗೆ ದಿಡೀರನೆ ಭೇಟಿ ನೀಡಿದ ಶಾಸಕರು, ಕೇಸ್ ವರ್ಕರ್ ಪೂವಪ್ಪ ಅವರನ್ನು ತರಾಟೆಗೆತ್ತಿಕೊಂಡರು.

ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ನಾನೇನು ನನ್ನ ಮನೆ ಕೆಲಸಕ್ಕೆ ಕರೆ ಮಾಡಿರುವುದಲ್ಲ. ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಿ ಎಂದ ಶಾಸಕರು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಜಾಗದ ವಿಚಾರಕ್ಕೆ ಸಂಬಂಧಿಸಿ ಫೈಲ್ ಪುಟಪ್ ಮಾಡದೆ ಸತಾಯಿಸುತ್ತಿರುವುದರ ಬಗ್ಗೆ ವಿಚಾರಿಸಿದರು.

ಶನಿವಾರದೊಳಗೆ ಫೈಲ್ ಪುಟಪ್ ಆಗಬೇಕು. ಇಲ್ಲದಿದ್ದರೆ ಶನಿವಾರ ಸಂಜೆ ಕಚೇರಿಗೆ ಆಗಮಿಸುವುದಾಗಿ ಎಚ್ಚರಿಕೆ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಚೇರಿ ಲಾಕರಿಂದ 1.24 ಕೋಟಿ ರೂ. ಕಳವು

Posted by Vidyamaana on 2023-10-25 20:32:04 |

Share: | | | | |


ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಚೇರಿ ಲಾಕರಿಂದ 1.24 ಕೋಟಿ ರೂ. ಕಳವು

ಧಾರವಾಡ: ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಘದ  ಕಚೇರಿಯ ಲಾಕರಿಂದಲೇ ಕಳ್ಳರು  1 ಕೋಟಿ 24 ಲಕ್ಷ ರೂ. ಹಣ ಎಗರಿಸಿದ ಘಟನೆ ಜಿಲ್ಲೆಯ ರಾಯಾಪುರ ಬಡಾವಣೆ ನಡೆದಿದೆ. ಸಂಘದ ಕಚೇರಿಯಲ್ಲಿರುವ ಒಟ್ಟು ನಾಲ್ಕು ಲಾಕರ್ ಗಳನ್ನು ಒಡೆದಿರುವ ಕಳ್ಳರು, ಅಲ್ಲಿದ್ದ ಎಲ್ಲ ಹಣವನ್ನು  ಕದ್ದುಕೊಂಡು ಹೋಗಿದ್ದಾರೆ.


ಸೆಕ್ಯೂರಿಟಿ ಗಾರ್ಡ್‍ಗಳು ಊಟಕ್ಕೆ ಹೋಗಿದ್ದ ಸಮಯದಲ್ಲಿ ಶೌಚಾಲಯದ ಕಿಟಕಿ ಮುರಿದು ಒಳನುಗ್ಗಿದ್ದಾರೆ. ಸಿಸಿ ಟಿವಿ ಕ್ಯಾಮೆರಾ ಇಲ್ಲದ ಭಾಗದಿಂದಲೇ ಬಂದು ಭಾರೀ ಮೊತ್ತದ ಹಣವನ್ನು ಕಳ್ಳತನ ಮಾಡಿದ್ದಾರೆ.


ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಘದ ಅಡಿಯಲ್ಲಿ ಜಿಲ್ಲೆಯಾದ್ಯಂತ ನಿತ್ಯವೂ ಸಂಗ್ರಹವಾಗುತ್ತಿದ್ದ ಹಣ ಅದೇ ದಿನ ಬ್ಯಾಂಕ್‍ಗೆ ಡೆಪಾಸಿಟ್ ಆಗುತ್ತಿತ್ತು. ಆದರೆ ರಜೆ ಹಿನ್ನೆಲೆಯಲ್ಲಿ ಅ.24ರ ಮಂಗಳವಾರ ಹಣವನ್ನು ಕಟ್ಟಲಾಗಿರಲಿಲ್ಲ. ಇದು ಕಳ್ಳರಿಗೆ ಗೊತ್ತಾಗಿದ್ದು,  ಲಾಕರ್ ನಲ್ಲಿ  ಇದ್ದ ಹಣವನ್ನೆಲ್ಲ ಕದ್ದೊಯ್ದಿದ್ದಾರೆ. ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಮುಂದಾಗಿದ್ದಾರೆ. ಸದ್ಯ ಕಚೇರಿಯ ಸಿಬ್ಬಂದಿಯನ್ನೂ ಪೊಲೀಸರು ತನಿಖೆ ನಡೆಸಿದ್ದಾರೆ.

ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜೂನ್ 8) ವಿದ್ಯುತ್ ನಿಲುಗಡೆ

Posted by Vidyamaana on 2023-06-08 00:43:16 |

Share: | | | | |


ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜೂನ್ 8) ವಿದ್ಯುತ್ ನಿಲುಗಡೆ

ಪುತ್ತೂರು: ತಂತಿ ಬದಲಾವಣೆ, ಜೆಒಎಸ್‌ ದುರಸ್ತಿ ಮತ್ತು ರಸ್ತೆ ಅಗಲೀಕರಣ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಎಕ್ಸ್‌ಪ್ರೆಸ್, ಕಾಂಚನ, ಉಪ್ಪಿನಂಗಡಿ ಓಲ್ಡ್, ರಾಮಕುಂಜ ವಾಟರ್‌ಸಭೆ ಫೀಡರ್‌ನಲ್ಲಿ ಜೂ.8ರಂದು ಬೆಳಿಗ್ಗೆ 10ರಿಂದ ಅಪರಾಹ್ನ 5ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಅದುದರಿಂದ 110/33/11 ಕೆಇ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಫೀಡರ್‌ನಿಂದ ವಿದ್ಯುತ್‌ ಸರಬರಾಜಾಗುವ ಬೆಳ್ಳಿಪ್ಪಾಡಿ, ಚಿಕ್ಕಮುನ್ನೂರು, ಕೋಡಿಂಬಾಡಿ, ಬನ್ನೂರು, ಹಿರೇಬಂಡಾಡಿ, ರಾಮಕುಂಜ, ನೆಕ್ಕಿಲಾಡಿ, ಬಜತ್ತೂರು ಮತ್ತು ಕೊಯಿಲ ಗ್ರಾಮದ ವಿದ್ಯುತ್‌ ಬಳಕೆದಾರರು ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.



Leave a Comment: