ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಮುಳಬಾಗಿಲಿನ ಅನಿಲ್ ಬಂಧನ

ಸುದ್ದಿಗಳು News

Posted by vidyamaana on 2024-07-03 07:52:29 |

Share: | | | | |


ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಮುಳಬಾಗಿಲಿನ ಅನಿಲ್ ಬಂಧನ

ಕೋಲಾರ: ನಗರ ಹೊರವಲಯದ ಖಾಸಗಿ ಕಾಲೇಜುವೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕಿಯೊಬ್ಬಳು (17) ಅದೇ ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂಬಂಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಯುವಕನನ್ನು ಬಂಧಿಸಲಾಗಿದೆ.ಮುಳಬಾಗಿಲಿನ ಅನಿಲ್‌ ಕುಮಾರ್‌ (21) ಬಂಧಿತ ಯುವಕ.ಕೋಲಾರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿಯು ಶ್ರೀನಿವಾಸಪುರ ತಾಲ್ಲೂಕಿನಿಂದ ಕಾಲೇಜಿಗೆ ಬರುತ್ತಿದ್ದಳು. ಸೋಮವಾರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಆಕೆ ಶೌಚಾಲಯಕ್ಕೆ ಹೋಗಿದ್ದಾಳೆ. ಈ ಸಮಯದಲ್ಲಿ ಮಗು ಜನನವಾಗಿದೆ. ಮಗುವಿನ ಅಳು ಸದ್ದು ಕೇಳಿ ಕಕ್ಕಾಬಿಕ್ಕಿಯಾದ ಕಾಲೇಜಿನ ಉಪನ್ಯಾಸಕಿಯರು, ಸಿಬ್ಬಂದಿ ಸ್ಥಳಕ್ಕೆ ಓಡಿ ಹೋಗಿದ್ದಾರೆ. ತಕ್ಷಣವೇ ಸಮೀಪದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ತಾಯಿ ಹಾಗೂ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಉಪನ್ಯಾಸಕರು ಬಾಲಕಿಯ ಪೋಷಕರಿಗೆ ವಿಚಾರ ಮುಟ್ಟಿಸಿದ್ದು, ಅವರೂ ಆಸ್ಪತ್ರೆಗೆ ಬಂದಿದ್ದಾರೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

 Share: | | | | |


ಚಂದ್ರಯಾನ-3 ಯಶಸ್ವಿ | ಆಗಸ್ಟ್​ 23 ಇನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ : ಮೋದಿ ಘೋಷಣೆ

Posted by Vidyamaana on 2023-08-26 04:06:58 |

Share: | | | | |


ಚಂದ್ರಯಾನ-3 ಯಶಸ್ವಿ | ಆಗಸ್ಟ್​ 23 ಇನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ : ಮೋದಿ ಘೋಷಣೆ

ಬೆಂಗಳೂರು: ಚಂದ್ರಯಾನ-3 ಯೋಜನೆ ಯಶಸ್ವಿಯಾದ, ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆದ ದಿನವನ್ನು, ಅಂದರೆ ಆಗಸ್ಟ್ 23 ಅನ್ನು ಇನ್ನು ಮುಂದೆ ‘ರಾಷ್ಟ್ರೀಯ ಬಾಹ್ಯಾಕಾಶ ದಿನ (National Space Day)’ ಎಂದು ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರು.


ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಚಂದ್ರಯಾನ-3 ರ ಯಶಸ್ಸಿನಲ್ಲಿ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು.


ಚಂದ್ರಯಾನ-2 ಪತನ ಸ್ಥಳಕ್ಕೆ ‘ತಿರಂಗ ಪಾಯಿಂಟ್’ ಎಂದು ನಾಮಕರಣ ಮಾಡಿದ ಅವರು, ಈ ತಿರಂಗ ಪಾಯಿಂಟ್​​​ ಮುಂದಿನ ಸಾಧನೆಗಳಿಗೆ ಪ್ರೇರಣೆಯಾಯಿತು. ಚಂದ್ರಯಾನ-3 ಯಶಸ್ಸಿನಲ್ಲಿ ಇಸ್ರೋ ಸಾಧನೆ ದೊಡ್ಡದು. ಮೇಕ್​ ಇನ್​ ಇಂಡಿಯಾ ಚಂದ್ರನವರೆಗೂ ತಲುಪಿದೆ. ವಿಜ್ಞಾನಿಗಳ ಸಾಧನೆ ದೇಶದ ಪ್ರತಿಯೊಬ್ಬರಿಗೂ ತಿಳಿಯಬೇಕಿದೆ. ಚಂದ್ರಯಾನ-3 ರ ಯಶಸ್ಸಿನಿಂದ ಯುವ ಪೀಳಿಗೆಗೆ ನಿರಂತರವಾಗಿ ಪ್ರೇರಣೆ ಸಿಗಲಿದೆ. ಹೀಗಾಗಿ ಆಗಸ್ಟ್​ 23ರಂದು ರಾಷ್ಟ್ರೀಯ ಬಾಹ್ಯಾಕಾಶ​ ದಿನ ಎಂದು ಘೋಷಣೆ ಮಾಡಲಾಗುವುದು ಎಂದು ಮೋದಿ ಹೇಳಿದರು.


ಕೇಂದ್ರ, ರಾಜ್ಯ ಸರ್ಕಾರ ಸಹಯೋಗದಲ್ಲಿ ಬಾಹ್ಯಾಕಾಶ, ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿ ರಾಷ್ಟ್ರಮಟ್ಟದ ಹ್ಯಾಕಥಾನ್ ಆಯೋಜಿಸಲಾಗುವುದು. ಇಸ್ರೋ ವಿಜ್ಞಾನಿಗಳು ಹಲವು ಉಪಗ್ರಹ ಉಡಾವಣೆ ಮಾಡಿದ್ದಾರೆ. ಈ ಉಪಗ್ರಹಗಳ ನೆರವಿನಿಂದ ಹಲವು ಕ್ಷೇತ್ರಗಳಿಗೆ ಅನುಕೂಲ ಆಗಲಿದೆ. ಕೃಷಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಿಗೆ ಅನುಕೂಲವಾಗುತ್ತಿದೆ. ತಂತ್ರಜ್ಞಾನ ಬೆಳವಣಿಗೆಯಾದರೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಮೋದಿ ಹೇಳಿದರು.


ಇದಕ್ಕೂ ಮುನ್ನ ಅವರು, ಚಂದ್ರಯಾನ-3 ರ ಚಂದ್ರನ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಮೋದಿ ಘೋಷಣೆ ಮಾಡಿದರು.

ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ ಡಿ.31

Posted by Vidyamaana on 2023-12-31 04:54:30 |

Share: | | | | |


ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ  ಡಿ.31

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಡಿ.31 ರಂದು


ಬೆಳಿಗ್ಗೆ 10 ಗಂಟೆಗೆ ಸುಳ್ಯ ಬಂಟರ ಭ ನದಲ್ಲಿ‌ ಬಂಟರ ಸಮಾವೇಶ


11.30 ಕ್ಕೆ ಅರಿಯಡ್ಕ ಹಾಗೂ ಮಾಡ್ನೂರು ಗ್ರಾಮದಲ್ಲಿ ರಸ್ತೆ ಕಾಂಕ್ರೀಟ್ ಶಿಲಾನ್ಯಾಸ


12.30 ಕ್ಕೆ ಬೆಟ್ಟಂಪಾಡಿ ಗ್ರಾಮದ ಕೀಲಂಪಾಡಿ ರಸ್ತೆ ಶಿಲಾನ್ಯಾಸ


1.00 ಗಂಟೆಗೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನ ಬೆಟ್ಟಂಪಾಡಿ ಲಕ್ಷ ಬಿಲ್ವಾರ್ಚನೆ



ಮಧ್ಯಾಹ್ನ 3 ಗಂಟೆಗೆ ಪೆರ್ನೆಯಲ್ಲಿ ಬಂಟರ ಕ್ರೀಡಾಕೂಟ


ಸಂಜೆ 5 ಗಂಟೆಗೆಶ್ರೀಮಾ ಹಿಲ್ಸ್ ಉದ್ಘಾಟನೆ ಬಪ್ಪಳಿಗೆ


ಸಂಜೆ 6 ಗಂಟೆಗೆ‌ಮುಕ್ವೆ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ


ಸಂಜೆ 7 ಕ್ಕೆ‌ ವಿಟ್ಲದಲ್ಲಿ ನಲಿಕೆಯವರ ಸಮಾಜಸೇವಾ ಸಂಘ ವಾರ್ಷಿಕೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ 

92 ವರ್ಷದ ಮಾಧ್ಯಮ ದೊರೆ ಮುರ್ಡೋಕ್ ಗೆ 5ನೇ ಮದುವೆ

Posted by Vidyamaana on 2024-03-09 12:58:01 |

Share: | | | | |


92 ವರ್ಷದ ಮಾಧ್ಯಮ ದೊರೆ ಮುರ್ಡೋಕ್ ಗೆ 5ನೇ ಮದುವೆ

ವಾಷಿಂಗ್ಟನ್‌: ಮಾಧ್ಯಮ ದೊರೆ ರೂಪರ್ಟ್‌ ಮುರ್ಡೋಕ್ ತಮ್ಮ 92ನೇ ವಯಸ್ಸಿನಲ್ಲಿ 5ನೇ ಮದುವೆಗೆ ಸಜ್ಜುಗೊಂಡಿದ್ದು, ತಮ್ಮ ಗೆಳತಿ ಎಲೆನಾ ಜುಕೋವಾ (67) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕ್ಯಾಲಿಫೋರ್ನಿ­ಯಾದ ಮೊರಗಾದಲ್ಲಿರುವ ಮುರ್ಡೋಕ್ ಅವರ ಎಸ್ಟೇಟ್‌ನಲ್ಲಿ ಇವರಿಬ್ಬರ ಮದುವೆ ಜೂನ್‌ ತಿಂಗಳಿನಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ವರದಿಯಾಗಿದೆ.


ಎಲೆನಾ ಜುಕೋವಾ ಅವರು ನಿವೃತ್ತ ಜೀವ ಶಾಸ್ತ್ರಜ್ಞೆ­ಯಾಗಿದ್ದು, ಕಳೆದ ವರ್ಷ ಬೇಸಗೆಯಲ್ಲಿ ಇಬ್ಬರ ನಡುವೆ ಉಂಟಾದ ಪರಿಚಯ ಸ್ನೇಹಕ್ಕೆ ತಿರುಗಿ ಇದೀಗ ಮದುವೆಯ ಹಂತಕ್ಕೆ ತಲುಪಿದೆ. 2022ರಲ್ಲಿ ತಮ್ಮ 4ನೇ ಪತ್ನಿಯಾಗಿದ್ದ ರೂಪದರ್ಶಿ ಜೆರ್ರಿ ಹಾಲ್‌ಗೆ ಮುರ್ಡೋಕ್ ವಿಚ್ಛೇದನ ನೀಡಿದ್ದರು. ಇವರಲ್ಲದೇ ಪೆಟ್ರೀಷಿಯಾ ಬುಕರ್‌, ಅನ್ನಾ ಮನ್‌, ವೆಂಡಿ ಡೆಂಗ್‌ ಹಾಗೂ ಜೆರ್ರಿ ಮುಡೋìಕ್‌ ಅವರ ಮಾಜಿ ಪತ್ನಿಯರು.

ಅಮೆರಿಕದ ಖ್ಯಾತ ಮಾಧ್ಯಮ ಸಂಸ್ಥೆಗಳಾದ ವಾಲ್‌ಸ್ಟ್ರೀಟ್‌, ನ್ಯೂಯಾರ್ಕ್‌ ಪೋಸ್ಟ್‌, ಫಾಕ್ಸ್‌ ನ್ಯೂಸ್‌, ಭಾರತದ ಸ್ಟಾರ್‌ ಇಂಡಿಯಾ ಸೇರಿದಂತೆ ಬಹುತೇಕ ರಾಷ್ಟ್ರೀಯ- ಅಂತಾ­ರಾಷ್ಟ್ರೀಯ ಮಾಧ್ಯಮಗಳು ಮುರ್ಡೋಕ್ ಅವರ ಒಡೆತನಕ್ಕೆ ಸೇರಿವೆ.

ಜಿಲ್ಲೆಯ ಮಂಗಳೂರು ಬಂಟ್ವಾಳ ಉಳ್ಳಾಲ ಮೂಡುಬಿದರೆ ಶಾಲೆಗಳಿಗೆ ರಜೆ

Posted by Vidyamaana on 2023-07-04 02:48:11 |

Share: | | | | |


ಜಿಲ್ಲೆಯ ಮಂಗಳೂರು ಬಂಟ್ವಾಳ ಉಳ್ಳಾಲ ಮೂಡುಬಿದರೆ ಶಾಲೆಗಳಿಗೆ ರಜೆ


ಮಂಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಮಂಗಳೂರು, ಬಂಟ್ವಾಳ, ಮೂಡುಬಿದರೆ, ಉಳ್ಳಾಲ ತಾಲೂಕುಗಳ ಅಂಗನವಾಡಿ, ಶಾಲಾ - ಕಾಲೇಜುಗಳಿಗೆ ಜುಲೈ 4ರಂದು ರಜೆ‌ ಘೋಷಿಸಿ ಜಿಲ್ಲಾಧಿಕಾರಿ‌ ಆದೇಶ ಹೊರಡಿಸಿದ್ದಾರೆ.


ಪುತ್ತೂರಿನಲ್ಲಿ ಮಳೆ ಪ್ರಮಾಣ ಕಡಿಮೆ ಇದ್ದು, ಇಲ್ಲಿನ ಶಾಲಾ - ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ತಿಳಿಸಿದ್ದಾರೆ.

ಕರಾವಳಿಯಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಂದಿನ 4 ದಿನ ಆರು ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತು ಕ್ರಮಗಳನ್ನು ಘೋಷಿಸಿದೆ. ಅದರಂತೆ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೇ, ಪ್ರವಾಸಿಗರಿಗೆ ಎಚ್ಚರಿಕೆ ಹಾಗೂ ಸಮುದ್ರಕ್ಕೆ ಇಳಿಯದಂತೆಯೂ ಸೂಚನೆ ನೀಡಲಾಗಿದೆ.

ದ.ಕ.ದಲ್ಲಿ ತಹಶೀಲ್ದಾರ್‌ಗೆ ಶಾಲಾ-ಕಾಲೇಜಿಗೆ ರಜೆ ಘೋಷಿಸುವ ಅಧಿಕಾರ ನೀಡಿ ಡಿಸಿ ಆದೇಶಿಸಿದ್ದಾರೆ. ಉಳಿದ ತಾಲೂಕಿನಲ್ಲಿ ಮಳೆ ಪರಿಸ್ಥಿತಿ ನೋಡಿ ರಜೆ ನೀಡಲು ಸೂಚಿಸಲಾಗಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಇಂದು ರಜೆ ಘೋಷಿಸಲಾಗಿದೆ.

ಗೆಳೆತನಕ್ಕೆ ಜಾತಿಯಿಲ್ಲ - ಪುಣಚದಲ್ಲೊಂದು ಸ್ಪೆಷಲ್ ಬರ್ತ್ ಡೇ ಸೆಲೆಬ್ರೇಷನ್

Posted by Vidyamaana on 2023-08-29 10:22:25 |

Share: | | | | |


ಗೆಳೆತನಕ್ಕೆ ಜಾತಿಯಿಲ್ಲ - ಪುಣಚದಲ್ಲೊಂದು ಸ್ಪೆಷಲ್ ಬರ್ತ್ ಡೇ ಸೆಲೆಬ್ರೇಷನ್

ಪುತ್ತೂರು: ಸದಾ ಕೋಮು ವಿಚಾರಕ್ಕೆ ಸುದ್ದಿಯಾಗುತ್ತಿರುವ ಕರಾವಳಿ ಭಾಗದಲ್ಲಿ ಇದೀಗ ಒಂದು ಸೌಹಾರ್ದತೆಯ ‘ಬರ್ತ್ ಡೇ’ ಆಚರಣೆ ಸಖತ್ ಸುದ್ದಿಯಾಗ್ತಿದೆ.


ವಿಟ್ಲದ ಪುಣಚದಲ್ಲಿ ಮುಸ್ಲಿಂ ಯುವಕರು ಸೇರಿಕೊಂಡು ತಮ್ಮ ಹಿಂದೂ ಗೆಳೆಯನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗ್ತಿದ್ದು, ಕೋಮು ಕುದಿಯಾಗಿರುವ ಕರಾವಳಿ ಭಾಗದಲ್ಲಿ ಸೌಹಾರ್ದತೆಯ ಸಿಂಚನಕ್ಕೆ ಸಾಕ್ಷಿಯಾಗಿದೆ.


ಪುಣಚದ ದಿವಾಕರ್ ಎಂಬ ಯುವಕನ ಜನ್ಮ ದಿನವನ್ನು ಇಲ್ಲಿನ ‘ಪಿರ್ಸತೆ ಚಂಹಿಮಾರ್ ಮುಸ್ಲಿಂ ಗ್ರೂಪ್’ನ ಸದಸ್ಯರು ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಾರೆ.


ತಮ್ಮ ಹಿಂದು ಗೆಳೆಯನಿಗೆ ಬರ್ತ್ ಡೇ ಶುಭಾಶಯಗಳನ್ನು ಕೋರಿ ವಿಭಿನ್ನವಾಗಿ ಆಚರಿಸಿಕೊಂಡ ಈ ಜನ್ಮದಿನಾಚರಣೆಗೆ ಇದೀಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಬೊಳುವಾರಿನಲ್ಲಿ ನೆಲಕ್ಕುರುಳಿದ ಬೃಹತ್ ಮಾವಿನ ಮರ

Posted by Vidyamaana on 2024-04-27 21:58:21 |

Share: | | | | |


ಬೊಳುವಾರಿನಲ್ಲಿ ನೆಲಕ್ಕುರುಳಿದ ಬೃಹತ್ ಮಾವಿನ ಮರ

ಪುತ್ತೂರು: ಪುತ್ತೂರು ಬೊಳುವಾರು ಬಸ್ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲಿದ್ದ ಭಾರಿ ಗಾತ್ರದ ಮಾವಿನ ಮರವೊಂದು ಧರಶಾಯಿಯಾದ ಘಟನೆ ಎ.27ರಂದು ನಡೆದಿದ್ದು, ಘಟನಾ ಸ್ಥಳಕ್ಮೆ ಶಾಸಕರು‌ಭೇಟಿ ನೀಡಿ ಪರಿಶೀಲನೆ ನಡೆಸಿದ್ದು‌ಮರ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

 ಬಿದ್ದ ಮರದಲ್ಲಿದ್ದ ಮಾವಿನ ಕಾಯಿ ಕೊಯ್ಯಲು ಜನ ಮುಗಿ ಬಿದ್ದಿದ್ದಾರೆ.ಬೊಳುವಾರು ಬಸ್ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲೇ ಹಲವು ವರ್ಷಗಳಿಂದ ಇದ್ದ ಮಾವಿನ ಮರವೊಂದು ಸಂಜೆ ವೇಳೆ ಆಕಸ್ಮಿಕವಾಗಿ ಧರಶಾಯಿಯಾಗಿದೆ.



Leave a Comment: