ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಯಾರ ಪರವಾಗಿ ಹೆಚ್ಚು ಘೋಷಣೆ ಬೀಳುತ್ತೋ ಅವರಿಗೆ ಕಪ್ ಇಲ್ಲ

Posted by Vidyamaana on 2023-05-22 04:03:48 |

Share: | | | | |


ಯಾರ ಪರವಾಗಿ ಹೆಚ್ಚು ಘೋಷಣೆ ಬೀಳುತ್ತೋ ಅವರಿಗೆ ಕಪ್ ಇಲ್ಲ

ಬೆಂಗಳೂರು: ಸದ್ಯಕ್ಕೆ ಕರಾವಳಿ ಮತ್ತು ಕರ್ನಾಟಕ ಭಾಗದಲ್ಲಿ ‘ಟ್ರೋಲ್’ ಅಂದ್ರೆ ನಳಿನ್ – ನಳಿನ್ ಅಂದ್ರೆ ‘ಟ್ರೋಲ್’ ಅನ್ನೋ ಪರಿಸ್ಥಿತಿ ಉಂಟಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ದಯನೀಯ ಸೋಲಿನ ಬಳಿಕವಂತೂ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಅವರ ಚುನಾವಣಾ ಪ್ರಚಾರ ಸಂದರ್ಭದ ಭಾಷಣಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿವೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಒಂದು ಸಭೆಯಲ್ಲಿ ನಳಿನ್ ಹೇಳಿದ್ದ ‘ನಾನು ರಾಜ್ಯಾಧ್ಯಕ್ಷ..’ ಹೇಳಿಕೆಯಂತೂ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

ಹತ್ತೂರ ಒಡೆಯನ ಊರಿನಲ್ಲಿ ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರ ವೈಭವದ ಮೆರವಣಿಗೆ

Posted by Vidyamaana on 2023-12-25 13:31:51 |

Share: | | | | |


ಹತ್ತೂರ ಒಡೆಯನ ಊರಿನಲ್ಲಿ ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರ ವೈಭವದ ಮೆರವಣಿಗೆ

ಪುತ್ತೂರು: ಕಲಿಯುಗದ ಪ್ರತ್ಯಕ್ಷ ದೇವರೆಂದೇ ಭಕ್ತರಿಂದ ಕರೆಯಲ್ಪಡುವ ಶ್ರೀನಿವಾಸ ದೇವರಿಗೆ ಪುತ್ತಿಲ ಪರಿವಾರ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿವತಿಯಿಂದ ಇತಿಹಾಸ ಪ್ರಸಿದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ  ಡಿ.೨೫ರಂದು ಅತ್ಯಂತ ವೈಭವದಿಂದ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಡಿ.೨೪ರಂದು ಸಂಜೆ ಸಾವಿರಾರು ಭಕ್ತರ ನಡುವೆ ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರನ್ನು ವೈಭವದಿಂದ ಮೆರವಣಿಗೆಯ ಮೂಲಕ ಕಲ್ಯಾಣೋತ್ಸವ ಮಂಟಪಕ್ಕೆ ಕರೆತರಲಾಯಿತು.


ಬೊಳುವಾರಿನಲ್ಲಿ ವೈಭವದ ಮೆರವಣಿಗೆಯನ್ನು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಲಾಯಿತು. ಚೆಂಡೆಕುಣಿತ, ನೃತ್ಯ ಭಜನೆ ತಂಡದೊAದಿಗೆ, ಕೇಸರಿ ಶಲ್ಯ ಧರಿಸಿದ ಮಹಿಳೆಯರು ಮೆರವಣಿಯುದ್ದಕ್ಕೂ ಪುಷ್ಪಾರ್ಚಣೆ ಮಾಡುವ ಮೂಲಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಗೆ ಬಂದು ಅಲ್ಲಿಂದ ಶ್ರೀನಿವಾಸ ಕಲ್ಯಾಣೋತ್ಸವದ ಸಭಾಂಗಣದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಸಹಿತ ಪದಾಧಿಕಾರಿಗಳು ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರಿರುವ ಪಲ್ಲಕಿಯನ್ನು ತಾವೆ ಹೆಗಲಮೇರಿಸಿ ಪ್ರಧಾನ ವೇದಿಕೆಗೆ ತಂದು ಅರ್ಚಕರಿಗೆ ಅರ್ಪಿಸಿದರು. ವಿಶಾಲವಾದ ಸುಂದರ ವೇದಿಕೆ ನಿರ್ಮಿಸಿ ತಿರುಪತಿ ತಿಮ್ಮಪ್ಪನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಭಕ್ತರು ಶ್ರೀ ವೆಂಕಟರಮಣ ದೇವರ ದರ್ಶನ ಪಡೆದು ಪುನೀತರಾದರು. ಈ ಸಂದರ್ಭ ವೆಂಕಟರಮಣ ಗೋವಿಂದ.. ಗೋವಿಂದಾ.. ಶ್ರೀನಿವಾಸ ಗೋವಿಂದ.. ಸ್ಮರಣೆಯಲ್ಲಿ ಭಕ್ತರು ಮುಳುಗಿದರು.


 ಶ್ರೀನಿವಾಸನನ್ನು ಕೊಂಡಾಡುವ ಭಕ್ತಿಗೀತೆ, ಭಜನೆ, ಮಂತ್ರಗಳು ಎಲ್ಲೆಡೆ ಮೊಳಗಿದವು. ಶ್ರೀನಿವಾಸ ದೇವರ ಪ್ರತಿಷ್ಠೆಯ ಮುಂದೆ ಸನಾತನ ಸಮಾಗಮನ ನಡೆಯಿತು.


ಸನಾತನ ಧರ್ಮ ಉಳಿಸಿಕೊಂಡರೆ ನಮ್ಮ ಬದುಕು ಸುಂದರ:

ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮಾತನಾಡಿ ಭಗವಂತನಿಗೆ ವಿವಾಹ ಮಾಡಿಸಲು ನಾವು ಯಾರೂ ಅಲ್ಲ. ಭಗವಂತನಿಗೆ ನಿತ್ಯ ಕಲ್ಯಾಣ. ಬದುಕಿನಲ್ಲಿ ಭಗವಂತನ ಸ್ತೋತ್ರ ಮಾಡುವ ಕಾರ್ಯಕ್ರಮವೇ ಶ್ರೀನಿವಾಸ ಕಲ್ಯಾಣೋತ್ಸವ. ಭಗವಂತನ ಬಗ್ಗೆ ಒಳ್ಳೆಯ ಶಬ್ದವನ್ನು ಪ್ರಯೋಗ ಮಾಡಿದರೆ ಇದು ನಿತ್ಯ ಕಲ್ಯಾಣೋತ್ಸವ. ಭಗವಂತನ ನಾಮ ಉಚ್ಛಾರ ಮಾಡದಿದ್ದರೆ ನಮ್ಮ ಬದುಕು ವ್ಯರ್ಥವಾಗುತ್ತದೆ ಎಂಬುದು ಪ್ರಾಚೀನರ ಮಾತು. ಹಾಗಾಗಿ ಭಗವಂತನ ಸ್ತೊçÃತ್ರ ನಿತ್ಯ ಮಾಡಬೇಕು. ಅದೇ ರೀತಿ ಸಂಪತನ್ನು ಯಾವ ದುಷ್ಟ ಚಟಗಳಿಗೆ ಕೊಡದೆ ಧರ್ಮಕಾರ್ಯಗಳಿಗೆ ವಿನಿಯೋಗ ಮಾಡಿದರೆ ಲಕ್ಷಿö್ಮà ಧಾರಣೆ ಮಾಡಿದ ಫಲ ಬರುತ್ತದೆ. ಸಂಪತನ್ನು ಸದ್ವಿನಿಯೋಗ ಮಾಡುವುದು ಒಂದೆ ಲಕ್ಷಿö್ಮà ನಾರಾಯಣ ವಿವಾಹ ಮಾಡುವುದು ಒಂದೆ ಎಂದ ಅವರು ಇವತ್ತು ನಮ್ಮ ಸಂಸ್ಕೃತಿ ಸನಾತನ ಧರ್ಮವನ್ನು ಉಳಿಸಿಕೊಂಡರೆ ಮಾತ್ರ ನಮ್ಮ ಬದುಕು ಸುಂದರವಾಗಿರುತ್ತದೆ. ಹಾಗಾಗಿ ನಮ್ಮ ಸನಾತನ ಧರ್ಮ ಸಂಸ್ಕೃತಿಯನ್ನು ನಮ್ಮ ಜೀವಾಳವನ್ನಾಗಿ ಮಾಡಬೇಕು. ಸನಾತನ ಧರ್ಮ ಸಂಸ್ಕೃತಿ ಭಾರತೀಯ ಜೀವನದಲ್ಲಿ ಅವಿಭಾಜ್ಯ ಅಂಗವಾಗಬೇಕು ಎಂಬ ಕಾರಣಕ್ಕೆ ಸನಾತನ ಸಮಾಗಮ ಎಂಬ ಹೆಸರಿನೊಂದಿಗೆ ಅರುಣ ಕುಮಾರ್ ಪುತ್ತಿಲ ಅವರು ಕಾರ್ಯಕ್ರಮ ಆಯೋಜಿಸಿದ್ದಾರೆ.ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದರು.


ಈ ಮೈದಾನದಲ್ಲಿ 12 ವರ್ಷದ ಹಿಂದೆ ನಾವು ಶನಿ ಪೂಜೆಯಲ್ಲಿ ಪಾಲ್ಗೊಂಡಿದ್ದೆವು. ಆಗ ಕೆಲ ಅಧಿಕಾರಿಗಳು ಮತ್ತು ವ್ಯಕ್ತಿಗಳ ನಡೆ ನಮಗೆ ಬೇಸರ ತಂದಿತ್ತು. ಆದರೆ ಇವತ್ತು ಅದಕ್ಕಿಂತ ಎರಡು ಪಾಲು ಹೆಚ್ಚು ಜನ ಈ ಸನ್ನಿಧಿಯಲ್ಲಿ ಸೇರಿರುವುದು ಸಂತೋಷ ತಂದಿದೆ. ಇದು ದೇವರ ಕರುಣೆ. ನಮ್ಮಲ್ಲಿ ಡಿವೈನ್ ಎನರ್ಜಿ ಇರಬೇಕು. ಯಾಕೆಂದರೆ ಇವತ್ತು ಸೀರಿಯಲ್ ಮೂಲಕ ಸಂಸಾರ ಬೇರೆ ಮಾಡುವ ಮಾಫಿಯ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಮಗೆ ಧಾರ್ಮಿಕ ಶಿಕ್ಷಣ ಅಗತ್ಯವಿದೆ ಎಂದು ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.


ಇಂದು ಪೇಜಾವರ ಶ್ರೀ ಪುತ್ತೂರಿಗೆ


ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಡಿ.25ರಂದು ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಸಂಜೆ ಗಂಟೆ 5ಕ್ಕೆ ಆಗಮಿಸಲಿದ್ದಾರೆ ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ತಿಳಿಸಿದ್ದಾರೆ


ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದು ಸಮಾಜಕ್ಕೆ ಶಕ್ತಿಯನ್ನು ತುಂಬುವ ಪ್ರಯತ್ನ ಮತ್ತು ಧಾರ್ಮಿಕ ವ್ಯವಸ್ಥೆಯ ಜೊತೆಗೆ ಇಡಿ ಸಮಾಜಕ್ಕೆ ಶಕ್ತಿಯನ್ನು ಕೊಡಬೇಕು. ಧರ್ಮ ಸಂಸ್ಕೃತಿಯ ಮುಂದೆ ಇರುವ ಹಲವಾರು ಸವಾಲುಗಳಿಗೆ ಅತ್ಯಂತ ಸಂಘಟಿತವಾಗಿದ್ದೇವೆ ಎನ್ನುವ ಸಂದೇಶ ಕೊಡುವ ನಿಟ್ಟಿನಲ್ಲಿ ಮತ್ತು ಲೋಕಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವ ಅನ್ನುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವೆ. ತಿಮ್ಮಪ್ಪನ ಸಾನಿಧ್ಯಕ್ಕೆ ಭಕ್ತಿಯ ಕಾಣಿಕೆ ಸಮರ್ಪಿಸಿದರೆ ನಮ್ಮ ಬದುಕು ಪಾವನ ಆಗುತ್ತದೆ. ತಿರುಪತಿಯಲ್ಲಿ ಶ್ರೀನಿವಾಸನ ದರುಶನವನ್ನು ಅತ್ಯಂತ ಹತ್ತಿರದಿಂದ ಕಾಣಲು ಅಸಾಧ್ಯವಾದ ಸಂದರ್ಭದಲ್ಲಿ ಇಡಿ ಸಮಾಜಕ್ಕೆ ಶ್ರೀನಿವಾಸನ ಅನುಗ್ರಹ ಕರುಣಿಸಲು ಮತ್ತು ಲೋಕಕಲ್ಯಾಣಕ್ಕಾಗಿ ಇವತ್ತಿನ ಕಲ್ಯಾಣೋತ್ಸವ ಮಾಡುತ್ತಿದ್ದೇವೆ.


ಹಿಜಾಬ್ ರಾಜಕಾರಣಕ್ಕೆ ಪ್ರತಿಯಾಗಿ ಶಾಲಾ, ಕಾಲೇಜುಗಳಿಗೆ ಕೇಸರಿ ಶಲ್ಯ

ನಮ್ಮ ಕೊನೆಯ ಉಸಿರು ಇರುವ ತನಕ ಧರ್ಮವನ್ನು ಉಳಿಸುವ ಸಂಕಲ್ಪದ ಕಾಲಗಟ್ಟದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಒಂದು ಕಡೆದ ಧರ್ಮರಕ್ಷಣೆ ಮಾಡುವ ಕಾರ್ಯಕರ್ತರನ್ನು ಗಡಿಪಾರು ಮಡಿ ಕೇಸು ದಾಖಲು ಮಾಡಿ ಮಾಡುವ ಕೆಲಸ ಸರಕಾರ ಮಾಡುತ್ತಿದೆ. ಇನ್ನೊಂದು ಕಡೆ ಧರ್ಮದ ಮುಂದಿರುವ ಯಾವುದೇ ಸವಾಲುಗಳಿದ್ದರೂ ಅದನ್ನು ಸ್ವೀಕಾರ ಮಾಡಿ ಮತ್ತೆ ನಮ್ಮ ಧರ್ಮತನವನ್ನು ಎತ್ತರಕ್ಕೆ ಏರಿಸುವ ಸಂಕಲ್ಪದ ಕಾಲಗಟ್ಟದಲ್ಲಿದ್ದೇವೆ. ಇವೆರಡರ ಮಧ್ಯೆ ಸರಕಾರ ಹಿಜಾಬಿನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ನಮ್ಮ ಹಿಂದು ಹೆಣ್ಣು ಮಕ್ಕಳು ಮುಂದಿನ ದಿನ ಕೇಸರಿ ಶಲ್ಯವನ್ನು ಹಾಕಿ ಶಾಲೆಗೆ ಮತ್ತು ಕಾಲೇಜಿಗೆ ಹೋಗಲು ಸಿದ್ದರಿದ್ದಾರೆ. ಹಿಂದು ಸಮಾಜದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿದರೆ ಸರಕಾರವನ್ನು ಉರುಳಿಸಲು ಹಿಂದು ಸಮಾಜ ಸಿದ್ದವಾಗಿದೆ ಎಂದು ಹೇಳಿದರು.


ಸನಾತನ ಸಮಾಗಮದ ಆರಂಭದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.


ಸನಾತನ ಸಮಾಗಮದ ಬಳಿಕ ಶ್ರೀನಿವಾಸ ದೇವರ ಪ್ರತಿಷ್ಠೆ ನಡೆಯಿತು.


ವೇದಿಕೆಯಲ್ಲಿ ವಿಟ್ಲ ಯೋಗೀಶ್ವರ ಮಠದ ಶ್ರೀ ರಾಜಗುರು ಯೋಗಿ ಶ್ರದ್ಧಾನಾಥ ಜೀ,ಸನಾತನ ಸಮಾಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಶಶಾಂಕ್ ಕೊಟೇಚಾ, ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಪ್ರಸನ್ನ ಕುಮಾರ್ ಮಾರ್ತ,ಕಾರ್ಯದರ್ಶಿ ಮನೀಶ್ ಕುಲಾಲ್ ಬನ್ನೂರು ವೇದಿಕೆಯಲ್ಲಿ ಉಪಸ್ಥಿರಿದ್ದರು.

ಶಿರಾಡಿ: ಸರಣಿ ಅಪಘಾತ; ಕಾರಿನಲ್ಲಿದ್ದ ನಾಲ್ವರಿಗೆ ಗಾಯ

Posted by Vidyamaana on 2024-06-24 05:53:02 |

Share: | | | | |


ಶಿರಾಡಿ: ಸರಣಿ ಅಪಘಾತ; ಕಾರಿನಲ್ಲಿದ್ದ ನಾಲ್ವರಿಗೆ ಗಾಯ

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಶಿರಾಡಿ ಗ್ರಾಮದ ಅರಣ್ಯ ಇಲಾಖೆಯ ನರ್ಸರಿ ಬಳಿ ಲಾರಿಯೊಂದು ಎರಡು ಕಾರುಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡು ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರವಾಗಿ ಗಾಯಗಳಾದ ಘಟನೆ ರವಿವಾರ ಸಂಭವಿಸಿದೆ.

ಗ್ಯಾರಂಟಿ ಗಳಿಗೆ ಅರ್ಜಿ ಸಲ್ಲಿಸುವ ಮುನ್ನಾ ಎಚ್ಚರ : ಅಪ್ಪಿ ತಪ್ಪಿ ಈ ಲಿಂಕ್ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಯೇ ಖಾಲಿ

Posted by Vidyamaana on 2023-06-17 09:18:29 |

Share: | | | | |


ಗ್ಯಾರಂಟಿ ಗಳಿಗೆ ಅರ್ಜಿ ಸಲ್ಲಿಸುವ ಮುನ್ನಾ ಎಚ್ಚರ : ಅಪ್ಪಿ ತಪ್ಪಿ ಈ ಲಿಂಕ್ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಯೇ ಖಾಲಿ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಮುನ್ನಾ ಎಚ್ಚರವಾಗಿರಿ, ಗ್ಯಾರಂಟಿಗೆ ಅರ್ಜಿ ಸಲ್ಲಿಸುವವರ ಮಾಹಿತಿ ಕದಿಯಲು ಸೈಬರ್ ಕದೀಮರು ಕಾಯುತ್ತಿದ್ದಾರೆ ಎಂದು ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆಕರ್ನಾಟಕ ಸರ್ಕಾರವು ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ, ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗೆ ಅರ್ಜಿ ಸಲ್ಲಿಕೆಗೆ ಸೇವಾಸಿಂಧು ಪೋರ್ಟಲ್ ಇದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು, ಈಗ ಸಾಮಾಜಿಕ ಜಾಲತಾಣದಲ್ಲಿ ನಕಲಿ ಲಿಂಕ್‌ಗಳನ್ನು ಹರಿಯಬಿಡುತ್ತಿದ್ದಾರೆ.


ಹೌದು, ಸೈಬರ್ ಕಳ್ಳರು ಸೋಶಿಯಲ್ ಮೀಡಿಯದಲ್ಲಿ ನಕಲಿ ಲಿಂಕ್ ಗಳನ್ನು ಹರಿಬಿಡುತ್ತಿದ್ದಾರೆ. ಅಪ್ಪಿ ತಪ್ಪಿ ಈ ಲಿಂಕ್ ದ್ರೆ ಬ್ಯಾಂಕ್‌ನಲ್ಲಿರುವ ನಿಮ್ಮ ಹಣ ಸೈಬರ್ ಕಳ್ಳರ ಪಾಲಾಗಲಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವವರು ಎಚ್ಚರಿಕೆಯಿಂದ ಅರ್ಜಿ ಸಲ್ಲಿಕೆ ಮಾಡಬೇಕು. ಸರ್ಕಾರ ಕೂಡ ಈ ವಿಚಾರದಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಸೆ.30, 2024 ರೊಳಗೆ ಜಮ್ಮು-ಕಾಶ್ಮೀರದ ವಿಧಾನಸಭೆ ಚುನಾವಣೆ ನಡೆಸಲು ಸುಪ್ರಿಂ ಕೋರ್ಟ್ ಸೂಚನೆ

Posted by Vidyamaana on 2023-12-11 15:57:29 |

Share: | | | | |


ಸೆ.30, 2024 ರೊಳಗೆ ಜಮ್ಮು-ಕಾಶ್ಮೀರದ ವಿಧಾನಸಭೆ ಚುನಾವಣೆ ನಡೆಸಲು ಸುಪ್ರಿಂ ಕೋರ್ಟ್ ಸೂಚನೆ

ನವದೆಹಲಿ: ಸೆಪ್ಟೆಂಬರ್ 30, 2024 ರೊಳಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ನಡೆಸಲು ಸುಪ್ರಿಂಕೋರ್ಟ್ ಸೂಚನೆ ನೀಡಿದೆ. ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ತೀರ್ಪು ನೀಡಿದ ಬಳಿಕ ಪಂಚಪೀಠ ಈ ಆದೇಶವನ್ನು ನೀಡಿದೆ.2024 ರ ಸೆಪ್ಟೆಂಬರ್ 30 ರೊಳಗೆ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಚುನಾವಣೆ ನಡೆಸಲು ಭಾರತದ ಚುನಾವಣಾ ಆಯೋಗವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ನಿರ್ದೇಶಿಸುತ್ತೇವೆ" ಎಂದು ಸಿಜೆಐ 370 ನೇ ವಿಧಿಯ ತೀರ್ಪಿನಲ್ಲಿ ಹೇಳಿದರು.


"370 (1) (ಡಿ) ವಿಧಿಯನ್ನು ಬಳಸಿಕೊಂಡು ಭಾರತದ ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಒಂದೇ ಬಾರಿಗೆ ಅನ್ವಯಿಸಬಹುದು ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ. CO 273 ಅನ್ನು ಹೊರಡಿಸಲು ರಾಷ್ಟ್ರಪತಿ ಗಳು ಅಧಿಕಾರವನ್ನು ಬಳಸುವುದು ದುರುದ್ದೇಶಪೂರಿತವೆಂದು ನಾವು ಭಾವಿಸುವುದಿಲ್ಲ. ಹೀಗಾಗಿ ನಾವು ರಾಷ್ಟ್ರಪತಿಗಳು ಅಧಿಕಾರದ ಪ್ರಯೋಗವನ್ನು ಮಾನ್ಯವೆಂದು ಪರಿಗಣಿಸುತ್ತೇವೆ" ಎಂದು ಸಿಜೆಐ ಹೇಳಿದರು. ಜಮ್ಮು ಮತ್ತು ಕಾಶ್ಮೀರ ಸಂವಿಧಾನ ಸಭೆಯ ವಿಸರ್ಜನೆಯ ನಂತರ 370 (3) ನೇ ವಿಧಿಯ ಅಡಿಯಲ್ಲಿ ಅಧಿಕಾರವು ಅಸ್ತಿತ್ವದಲ್ಲಿಲ್ಲ ಎಂದು ಹೇಳುವುದು ಏಕೀಕರಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಕಾರಣವಾಗುತ್ತದೆ ಎಂದು ಸಿಜೆಐ ಹೇಳಿದ್ದಾರೆ. ರಾಜ್ಯದಲ್ಲಿನ ಯುದ್ಧ ಪರಿಸ್ಥಿತಿಗಳಿಂದಾಗಿ 370 ನೇ ವಿಧಿಯು ಮಧ್ಯಂತರ ವ್ಯವಸ್ಥೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. 370 ನೇ ವಿಧಿ ತಾತ್ಕಾಲಿಕ ನಿಬಂಧನೆ ಎಂದು ಪಠ್ಯ ಓದುವಿಕೆ ಸೂಚಿಸುತ್ತದೆ ಎಂದು ಸಿಜೆಐ ತೀರ್ಪನ್ನು ಓದಿದರು.

ಪ್ರವಾಸಿ ವೀಸಾದಲ್ಲಿ ದುಬೈ ತೆರಳಬೇಕಿದ್ದರೆ ಹೊಸ ನಿಯಮ

Posted by Vidyamaana on 2024-06-01 05:32:20 |

Share: | | | | |


ಪ್ರವಾಸಿ ವೀಸಾದಲ್ಲಿ ದುಬೈ ತೆರಳಬೇಕಿದ್ದರೆ ಹೊಸ ನಿಯಮ

ನವದೆಹಲಿ: ದುಬೈಗೆ ತೆರಳುವ ಪ್ರವಾಸಿಗರಿಗೆ ವೀಸಾ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ. ದುಬೈಗೆ ಪ್ರವಾಸಿ ವೀಸಾದಲ್ಲಿ ತೆರಳುವ ಮಂದಿ ಕನಿಷ್ಠ ಆರು ತಿಂಗಳ ವ್ಯಾಲಿಡಿಟಿ ಇರುವ ಪಾಸ್ ಪೋರ್ಟ್ ಹೊಂದಿರಬೇಕು. ಹಿಂತಿರುಗಿ ಬರುವ ದಿನಾಂಕದ ವಿಮಾನ ಟಿಕೆಟ್ ಮೊದಲೇ ಬುಕ್ ಮಾಡಿರಬೇಕು ಸೇರಿದಂತೆ ಹೊಸ ನಿಯಮಗಳನ್ನು ಹೇರಲಾಗಿದೆ ಎನ್ನುವ ಮಾಹಿತಿ ಟ್ರಾವೆಲ್ ಏಜನ್ಸಿಗಳಿಂದ ತಿಳಿದುಬಂದಿದೆ.

ದುಬೈನ ತಾಹಿರಾ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆಯ ಸಿಇಓ ಮತ್ತು ಸ್ಥಾಪಕ ಫಿರೋಜ್ ಮಲಿಯಾಕ್ಕಲ್ ಹೇಳಿಕೆಯನ್ನು ಉಲ್ಲೇಖಿಸಿ ದುಬೈ ಮಾಧ್ಯಮ ಖಲೀಜ್ ಟೈಮ್ಸ್ ಈ ಬಗ್ಗೆ ವರದಿ ಮಾಡಿದೆ. ದುಬೈ ತೆರಳುವ ಪ್ರವಾಸಿಗರು ಕನಿಷ್ಠ 3 ಸಾವಿರ ದಿರ್ಹಮ್ ನಗದು ಅಥವಾ ಅಷ್ಟೇ ಮೌಲ್ಯದ ಇನ್ನಾವುದೇ ಕರೆನ್ಸಿ ಹೊಂದಿರಬೇಕು, ದುಬೈನಲ್ಲಿ ಉಳಿದುಕೊಳ್ಳುವುದಕ್ಕೆ ಹೊಟೇಲ್ ಬುಕ್ ಅಥವಾ ಇನ್ನಾವುದೇ ವಿಳಾಸವನ್ನು ಮೊದಲೇ ಗೊತ್ತು ಮಾಡಿರಬೇಕು, ಕನಿಷ್ಠ ಆರು ತಿಂಗಳ ಅವಧಿ ಇರುವ ಪಾಸ್ ಪೋರ್ಟ್ ಮತ್ತು ವ್ಯಾಲಿಡ್ ವೀಸಾ ಹೊಂದಿರಬೇಕು. ಹಿಂತಿರುಗಿ ಬರುವುದಕ್ಕೆ ಮಾಡಿರುವ ವಿಮಾನ ಟಿಕೆಟನ್ನೂ ಹೊಂದಿರಬೇಕು. ಇವನ್ನೆಲ್ಲ ದುಬೈಗೆ ತೆರಳುವಾಗಲೇ ವಿಮಾನ ನಿಲ್ದಾಣದಲ್ಲಿ ಚೆಕ್ ಮಾಡಲಾಗುತ್ತದೆ ಎಂದು ಫಿರೋಜ್ ಮಲಿಯಾಕ್ಕಲ್ ತಿಳಿಸಿದ್ದಾಗಿ ಖಲೀಜ್ ಟೈಮ್ಸ್ ವರದಿ ಮಾಡಿದೆ.

Recent News


Leave a Comment: