ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಬೆಳ್ಳಾರೆಯ ಬಾಡಿಗೆ ಮನೆ ಮೇಲೆ ಬೆಳ್ಳಂಬೆಳಗ್ಗೆ NIA ದಾಳಿ

Posted by Vidyamaana on 2024-03-05 16:13:39 |

Share: | | | | |


ಬೆಳ್ಳಾರೆಯ ಬಾಡಿಗೆ ಮನೆ ಮೇಲೆ ಬೆಳ್ಳಂಬೆಳಗ್ಗೆ NIA ದಾಳಿ

ಬೆಳ್ಳಾರೆ : ಎನ್.ಐ.ಎ ಅಧಿಕಾರಿಗಳ ತಂಡ ಪ್ರಕರಣವೊಂದರ ಸಂಬಂಧ ಮಾ‌.5 ರಂದು ಬೆಳ್ಳಾರೆಯ ಬಾಡಿಗೆ ಮನೆಗೆ ಬೆಳಗ್ಗೆ ದಾಳಿ ಮಾಡಿ ಮನೆಯನ್ನು ಶೋಧ ನಡೆಸಿ ನಂತರ ಬೀಜು ಎಂಬಾತನಿಗೆ ಸಮನ್ಸ್ ನೀಡಿ ಮೊಬೈಲ್ ಫೋನ್ ವಶಕ್ಕೆ ಪಡೆದು ಮಹಜರು ನಡೆಸಿ ಹೋಗಿರುವ ಅಧಿಕಾರಿಗಳು. 

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಿಂತಿಕಲ್ಲು ಬಳಿಯ ಕಲ್ಮಡ್ಕ ನಿವಾಸಿ ಚಿದಾನಂದ ಎಂಬವರ ಬಾಡಿಗೆ ಮನೆ ಮೇಲೆ ಬೆಂಗಳೂರು ಬ್ರಾಂಚ್ ನ ಎನ್.ಐ.ಎ ಅಧಿಕಾರಿಗಳಾದ ಡಿವೈಎಸ್ಪಿ ರಾಜನ್ ಪಿ.ವಿ , ಸಬ್ ಇನ್ಸ್ಪೆಕ್ಟರ್ ಮಂಜಪ್ಪ , ಕಾನ್ಟೇಬಲ್ ಸುರೇಶ್.ಸಿ ನೇತೃತ್ವದ ಮೂರು ಜನರ ತಂಡ ಬೆಳ್ಳಾರೆ ಪೊಲೀಸರ ಸಹಕಾರದಲ್ಲಿ ಮಾ.5 ರಂದು ಬೆಳಗ್ಗೆ 6 ಗಂಟೆಗೆ ದಾಳಿ ಮಾಡಿ ಮನೆಯನ್ನು ಪರಿಶೀಲನೆ ನಡೆಸಿದ್ದಾರೆ‌.


*ಪ್ರಕರಣದ ವಿವರ:* 25-10-2023 ರಂದು RC-28/2023/NIA/DLI ಯಲ್ಲಿ 120B,121,121A&122 ಜೊತೆಗೆ 3,25 ಆರ್ಮ್ಸ್ 13 ,18 ಮತ್ತು UA(P) ಅಡಿಯಲ್ಲಿ ದಾಖಲಾದ ಪ್ರಕರಣ ಸಂಬಂಧಿಸಿದಂತೆ ಬೆಳ್ಳಾರೆಯ ಚಿದಾನಂದ ಎಂಬವರ ಬಾಡಿಗೆ ಮನೆಗೆ ಎರಡು ದಿನದ ಹಿಂದೆ ಬಂದ ಕೇರಳ ರಾಜ್ಯದ ಇಡುಕ್ಕಿಯ ಬಿಜು ಅಬ್ರಾಹಂ @ ಬಿಜು ಎಮ್.ಎ (45) ಎಂಬಾತನ ವಾಸವಾಗಿದ್ದ ಮನೆಗೆ ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ ನಂತರ ಬಿಜುಗೆ  ಸಮನ್ಸ್ ನೀಡಿದ್ದಾರೆ‌.


*ಮೊಬೈಲ್ ವಶಕ್ಕೆ:* ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ ಬಳಿಕ ಬಿಜು ಬಳಸುತ್ತಿದ್ದ ಮೊಬೈಲ್ ಫೋನ್‌ ಮತ್ತು ಅದರಲ್ಲಿದ್ದ ಜಿಯೋ ಕಂಪನಿಯ ಸಿಮ್ ಕಾರ್ಡ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸರ ಸಹಕಾರದಲ್ಲಿ ಮಹಜರು ನಡೆಸಿ ಹೋಗಿದ್ದಾರೆ.

ಮಹೇಶ್ ಬಸ್ ಮಾಲಕ ಪ್ರಕಾಶ್ ಶೆಟ್ಟಿ ನೇಣು ಬಿಗಿದು ಆತ್ಮಹತ್ಯೆ

Posted by Vidyamaana on 2023-10-01 20:05:52 |

Share: | | | | |


ಮಹೇಶ್ ಬಸ್ ಮಾಲಕ ಪ್ರಕಾಶ್ ಶೆಟ್ಟಿ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜನಮನ್ನಣೆಗಳಿಸಿದ ಖಾಸಗಿ ಬಸ್ಸೊಂದರ ಮಾಲಕ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ಮಹೇಶ್ ಬಸ್ ಮಾಲಕ ಪ್ರಕಾಶ್ (40) ಮೃತರು.

ಮಹೇಶ್ ಬಸ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತಿನಿತ್ಯ ಓಡಾಡುತ್ತಿದ್ದು, ಜನಮನ್ನಣೆಗಳಿಸಿದ ಖಾಸಗಿ ಬಸ್ ಗಳಲ್ಲಿ ಒಂದಾಗಿದೆ.


ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಮೃತರನ್ನು ಮಹೇಶ್ ಬಸ್ ಮಾಲೀಕ ಜಯರಾಮ ಶೇಖ ಎಂಬವರ ಪುತ್ರ ಪ್ರಕಾಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಖಾಸಗಿ ಬಸ್ ಕ್ಷೇತ್ರದಲ್ಲಿ ತುಳುನಾಡಿನಲ್ಲಿ ಹೆಸರುವಾಸಿಯಾದ ಮಹೇಶ್ ಬಸ್ ನೂರಾರು ಬಸ್ ಗಳನ್ನು ಹೊಂದಿದೆ.


ಫ್ಲ್ಯಾಟ್‌ನಲ್ಲಿ ಪತ್ನಿ ಮತ್ತು ಪುತ್ರಿಯೊಂದಿಗೆ ವಾಸವಾಗಿದ್ದ ಅವರು ರವಿವಾರ ಬೆಳಗ್ಗೆ ತನ್ನ ರೂಮ್‌ಗೆ ಹೋಗಿದ್ದರು. ಮಧ್ಯಾಹ್ನ ಊಟಕ್ಕೂ ಹೊರಗೆ ಬಂದಿರಲಿಲ್ಲ. ಪತ್ನಿ ಕರೆಯಲು ಹೋದಾಗ ಬಾಗಿಲು ತೆರೆಯಲಿಲ್ಲ. ಇದರಿಂದ ಸಂಶಯಗೊಂಡು ಬಾಗಿಲು ಒಡೆದು ನೋಡಿದಾಗ ಪ್ರಕಾಶ್‌ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ



ಬಾಲಕಿಯನ್ನು ಕೊಂದು ಆಕೆಯ ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ: SP ಕೆ.ರಾಮರಾಜನ್

Posted by Vidyamaana on 2024-05-11 07:03:21 |

Share: | | | | |


ಬಾಲಕಿಯನ್ನು ಕೊಂದು ಆಕೆಯ ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ: SP ಕೆ.ರಾಮರಾಜನ್

ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿ ಬಾಲಕಿಯನ್ನು ಕೊಂದು ಆಕೆಯ ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಮೊನ್ನಂಡ ಪ್ರಕಾಶ್ (33) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುದ್ದಿಯಾಗಿತ್ತು. ಸ್ಥಳೀಯ ಮೂಲಗಳೂ ಆರೋಪಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆಂದು ತಿಳಿಸಿತ್ತು. ಆದರೆ ಈ ಸುದ್ದಿ ಖಚಿತಗೊಂಡಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.

ಘರ್ಷಣೆಗಳು ಮುಖಾಮುಖಿಯಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

Posted by Vidyamaana on 2023-10-13 16:35:55 |

Share: | | | | |


ಘರ್ಷಣೆಗಳು ಮುಖಾಮುಖಿಯಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

ಇಂದು ಜಗತ್ತು ಎದುರಿಸುತ್ತಿರುವ ಘರ್ಷಣೆಗಳು ಮತ್ತು ಮುಖಾಮುಖಿಯಾಗುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ಎಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ, ಜಗತ್ತು ಮಾನವ ಕೇಂದ್ರಿತ ಧೋರಣೆಯೊಂದಿಗೆ ಮುನ್ನಡೆಯಬೇಕು ಎಂದು ಶುಕ್ರವಾರ ಹೇಳಿದ್ದಾರೆ. ನವದೆಹಲಿ: ಇಂದು ಜಗತ್ತು ಎದುರಿಸುತ್ತಿರುವ ಘರ್ಷಣೆಗಳು ಮತ್ತು ಮುಖಾಮುಖಿಯಾಗುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ಎಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ, ಜಗತ್ತು ಮಾನವ ಕೇಂದ್ರಿತ ಧೋರಣೆಯೊಂದಿಗೆ ಮುನ್ನಡೆಯಬೇಕು ಎಂದು ಶುಕ್ರವಾರ ಹೇಳಿದ್ದಾರೆ.ಇಲ್ಲಿ ಒಂಬತ್ತನೇ ಜಿ20 ಸಂಸದೀಯ ಸ್ಪೀಕರ್ಗಳ ಶೃಂಗಸಭೆಯ (ಪಿ20) ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ನಂಬಿಕೆಯ ಹಾದಿಯಲ್ಲಿನ ಅಡೆತಡೆಗಳನ್ನು ನಾವು ತೆಗೆದುಹಾಕಬೇಕಾಗಿದೆ ಎಂದು ಹೇಳಿದರು.ಇದು ಶಾಂತಿ ಮತ್ತು ಭ್ರಾತೃತ್ವದ ಸಮಯ ಮತ್ತು ಒಟ್ಟಿಗೆ ಮುನ್ನಡೆಯುವ ಸಮಯ ಎಂದು ಮೋದಿ ಹೇಳಿದರು. ವಾರಾಂತ್ಯದಲ್ಲಿ ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಪಟ್ಟಣಗಳ ಮೇಲೆ ನಡೆಸಿದ ಸರಣಿ ದಾಳಿಗಳ ಹಿನ್ನಲೆಯಲ್ಲಿ ಅವರ ಹೇಳಿಕೆಗಳು ಬಂದಿವೆ.ಸುಮಾರು 20 ವರ್ಷಗಳ ಹಿಂದೆ ಭಾರತದ ಸಂಸತ್ ಭವನದ ಮೇಲಿನ ದಾಳಿಯನ್ನು ಉಲ್ಲೇಖಿಸಿದ ಪ್ರಧಾನಿ, ಭಾರತವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ.


ಇದು ಸಾವಿರಾರು ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಹೇಳಿದರು. ಭಯೋತ್ಪಾದನೆ ಎಷ್ಟು ದೊಡ್ಡ ಸವಾಲು ಎಂಬುದನ್ನು ಜಗತ್ತು ಈಗ ಅರಿತುಕೊಳ್ಳುತ್ತಿದೆ. ಭಯೋತ್ಪಾದನೆ ಎಲ್ಲಿಯಾದರೂ, ಯಾವುದೇ ಅಭಿವ್ಯಕ್ತಿಯಲ್ಲಿದ್ದರೂ ಅದು ಮಾನವೀಯತೆಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು. ನಾವು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಭಾವನೆಯಿಂದ ಜಗತ್ತನ್ನು ನೋಡಬೇಕು. ಜಾಗತಿಕ ಸವಾಲುಗಳನ್ನು ಎದುರಿಸಲು ಜನರ ಭಾಗವಹಿಸುವಿಕೆ ಅತ್ಯುತ್ತಮ ಮಾಧ್ಯಮವಾಗಿದೆ ಎಂದು ಅವರು ಹೇಳಿದರು. G20 ಅಧ್ಯಕ್ಷತೆಯು ವರ್ಷವಿಡೀ ಭಾರತದಲ್ಲಿ ಹಬ್ಬಗಳನ್ನು ಖಾತ್ರಿಪಡಿಸಿದೆ ಮತ್ತು ಈ ಆಚರಣೆಗೆ ಭಾರತವು ಚಂದ್ರನ ಮೇಲೆ ಇಳಿದಿರುವುದನ್ನು ಸೇರಿಸಿದೆ ಎಂದು ಪ್ರಧಾನಿ ಹೇಳಿದರು.

ಆ. 27ರಂದು ಬಿಜೆಪಿಯಿಂದ ಬೃಹತ್ ಪ್ರತಿಭಟನೆ

Posted by Vidyamaana on 2023-08-12 15:13:00 |

Share: | | | | |


ಆ. 27ರಂದು ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಮಂಗಳೂರು: ಸೌಜನ್ಯ ಪರ ಹೋರಾಟಕ್ಕೆ ಬಿಜೆಪಿ ಧುಮುಕಿದೆ, ಆ.27 ರಂದು ಬಿಜೆಪಿ ಯಿಂದ ದ.ಕ,ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರನೊಳಗೊಂಡು ಬೃಹತ್ ಪ್ರತಿಭಟನೆ ನಡೆಸುವುದಾಗಿ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.

ಹೋರಾಟದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಪ್ರಮುಖರು ಭಾಗಿಯಾಗಲಿದ್ದಾರೆ. ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎಸ್ ಡಿ ಎಂ ವಿದ್ಯಾರ್ಥಿನಿ ಸೌಜನ್ಯ ಪ್ರಕರಣ ಪೊಲೀಸ್ ತನಿಖೆ ಆಗಿದೆ, ಸಿಐಡಿ ಬಳಿಕ ಹೋರಾಟ ನಡೆದು ಸಿಬಿಐ ತನಿಖೆ ಕೂಡ ಆಗಿದೆ. ಕೊನೆಗೆ ಸಿಬಿಐ ಬಂಧಿತ ವ್ಯಕ್ತಿ ಆರೋಪಿ ಅಲ್ಲ ಅಂತ ಹೇಳಿದೆ. ಆವತ್ತು ಕೂಡ ಬಿಜೆಪಿ ಈ ವಿಚಾರದಲ್ಲಿ ಹೋರಾಟ ಮಾಡಿತ್ತು,ಇದೀಗ ಮತ್ತೆ ಬಿಜೆಪಿ ಇಡೀ ಪ್ರಕರಣದ ಮರು ತನಿಖೆಗೆ ಆಗ್ರಹಿಸುತ್ತದೆ.

ಘಟನೆಯ ಬಳಿಕದ ಹೋರಾಟಗಳು, ಕುಟುಂಬದ ಆಗ್ರಹಗಳ ತನಿಖೆ ಆಗಬೇಕು, ಹಂತಕರ ಪತ್ತೆ ಮೂಲಕ ಕುಟುಂಬಕ್ಕೆ ನ್ಯಾಯ ಸಿಗಬೇಕು. ಬಿಜೆಪಿ ಪ್ರಕರಣದ ಮರು ತನಿಖೆಗೆ ಸಿಎಂಗೆ ಒತ್ತಾಯ ಮಾಡಲಿದೆ, ಅ. 27ರಂದು ಬಿಜೆಪಿ ಬೃಹತ್ ಹೋರಾಟ ನಡೆಸಲಿದೆ. ಆ ಬಳಿಕ ಸಿಎಂ ಮತ್ತು ರಾಜ್ಯಪಾಲರಿಗೆ ಮನವಿ ಕೊಡಲಿದ್ದೇವೆ.

ಅ.27 ರಂದು ದ.ಕ ಮತ್ತು ಉಡುಪಿ ಜಿಲ್ಲೆಯ ಕಾರ್ಯಕರ್ತರ ಸೇರಿಸಿ ಬೃಹತ್ ಹೋರಾಟ ಮಾಡಲಿದ್ದು, ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗ ಬೃಹತ್ ಹೋರಾಟ ನಡೆಯಲಿದೆ. ಎರಡೂ ಜಿಲ್ಲೆಗಳ ಶಾಸಕರು, ನಾಯಕರು ಭಾಗಿಯಾಗಲಿದ್ದಾರೆ. ಪ್ರತಿಭಟನೆಯ ಮರು ದಿನ ಶಾಸಕರ ನಿಯೋಗ ಸಿಎಂ ಭೇಟಿಯಾಗಲಿದೆ.


ಸೌಜನ್ಯ ಕೇಸ್ ನಲ್ಲಿ ಸಿಬಿಐಗೆ ಹೋದರೂ ಆರೋಪಿಗಳು ಯಾರು ಅನ್ನೋದು ಆಗಿಲ್ಲ. ಇದರಲ್ಲಿ ಯಾರನ್ನೂ ಟಾರ್ಗೆಟ್ ಮಾಡುವ ವಿಷಯ ಇಲ್ಲ. ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಅನ್ನೋದು ನಮ್ಮ ಉದ್ದೇಶ. ಬೇರೆ ಬೇರೆ ರೀತಿಯ ಹೋರಾಟಗಾರರು ಬೇರೆ ಹೋರಾಟ ಮಾಡಬಹುದು ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಪ್ರೇಕ್ಷಾ ಆತ್ಮಹತ್ಯೆ ಪ್ರಕರಣ; ಪ್ರಚೋದನೆ ಆರೋಪ ಎದುರಿಸುತ್ತಿದ್ದ ಯುವಕ ಆತ್ಮಹತ್ಯೆ

Posted by Vidyamaana on 2023-05-11 07:58:58 |

Share: | | | | |


ಪ್ರೇಕ್ಷಾ ಆತ್ಮಹತ್ಯೆ ಪ್ರಕರಣ; ಪ್ರಚೋದನೆ ಆರೋಪ ಎದುರಿಸುತ್ತಿದ್ದ ಯುವಕ ಆತ್ಮಹತ್ಯೆ

ಉಳ್ಳಾಲ: ಎರಡು ವರ್ಷಗಳ ಹಿಂದೆ ಕುಂಪಲದ ಆಶ್ರಯ ಕಾಲನಿಯ ಮನೆಯಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರೂಪದರ್ಶಿ ಪ್ರೇಕ್ಷ ಸಾವಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಯುವಕ ಮೇ.10ರ ರಾತ್ರಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.ಕುತ್ತಾರು, ಮುಂಡೋಳಿ ನಿವಾಸಿ ಯತಿರಾಜ್ ಗಟ್ಟಿ(20)ಆತ್ಮಹತ್ಯೆಗೈದ ಯುವಕ.ಯತಿರಾಜ್ ತನ್ನ ಮನೆಯ ಹಿಂದಿನ ಚಿಕ್ಕಮ್ಮನ ಮನೆಯ ಸಿಟ್ ಔಟ್ ನ ಕಬ್ಬಿಣದ ಹುಕ್ಸ್ ಒಂದಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ. ಮೇ.10ರ ರಾತ್ರಿ 11 ರ ವೇಳೆ ಮನೆಗೆ ಬಂದಿದ್ದ ಯತಿರಾಜ್ ಚಿಕ್ಕಮ್ಮ ಮನೆಯಲ್ಲಿರದ ವೇಳೆ ನೇಣು ಬಿಗಿದಿದ್ದಾನೆ. ಇಂದು (ಮೇ.11) ಬೆಳಿಗ್ಗೆ ಯತಿರಾಜ್ ನ ಮಾವ ಹುಡುಕಾಡಿದಾಗ ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ.

ಕೂಡಲೆ ಮನೆಮಂದಿ ನೇಣು ಕುಣಿಕೆ ಕಡಿದರೂ ಅದಾಗಲೇ ಯತಿರಾಜ್ ಮೃತಪಟ್ಟಿದ್ದ. ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Recent News


Leave a Comment: