ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಎಲ್ಲ ಶಾಲೆಗಳಿಗೆ ನಾಳೆ (ಜು 9) ರಜೆ

ಸುದ್ದಿಗಳು News

Posted by vidyamaana on 2024-07-08 20:09:58 |

Share: | | | | |


ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಎಲ್ಲ ಶಾಲೆಗಳಿಗೆ ನಾಳೆ (ಜು 9) ರಜೆ

ಮಂಗಳೂರು: ದ‌.ಕ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆ ಯ ಶಾಲಾ, ಪಿಯು ಕಾಲೇಜಿಗೆ ಜುಲೈ 09ರಂದು ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ದ. ಕ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ. ಪದವಿ ಪೂರ್ವ ಕಾಲೇಜು, (12 ನೇ ತರಗತಿವರೆಗೆ) ದಿನಾಂಕ: 09/07/224 ರಂದು ರಜೆಯನ್ನು ಘೋಷಿಸಲಾಗಿದೆ.

 Share: | | | | |


ಅಯೋಧ್ಯೆ ರಾಮ ಮಂದಿರ ದರ್ಶನದ ಸಮಯ ವಿಸ್ತರಣೆ : ಹೊಸ ವೇಳಾಪಟ್ಟಿ ಪರಿಶೀಲಿಸಿ

Posted by Vidyamaana on 2024-01-25 07:56:21 |

Share: | | | | |


ಅಯೋಧ್ಯೆ ರಾಮ ಮಂದಿರ ದರ್ಶನದ ಸಮಯ ವಿಸ್ತರಣೆ : ಹೊಸ ವೇಳಾಪಟ್ಟಿ ಪರಿಶೀಲಿಸಿ

ನವದೆಹಲಿ: ಅಯೋಧ್ಯೆಯ ರಾಮ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುವ ಹಿನ್ನೆಲೆಯಲ್ಲಿ, ದೇವಾಲಯದ ಆಡಳಿತವು ದರ್ಶನ ಸಮಯವನ್ನು ವಿಸ್ತರಿಸಲು ನಿರ್ಧರಿಸಿದೆ.ಸೀಮಿತ ಭೇಟಿಯ ಸಮಯದಿಂದಾಗಿ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗದ ಭಕ್ತರಿಗೆ ಈ ನಿರ್ಧಾರವು ಪರಿಹಾರವಾಗಿದೆ.ಈಗ, ಭಕ್ತರು ರಾತ್ರಿ 10 ಗಂಟೆಯವರೆಗೆ ರಾಮ್ ಲಲ್ಲಾ ದರ್ಶನ ಪಡೆಯಬಹುದು.


ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಅಧಿಕೃತ ಮೂಲಗಳ ಪ್ರಕಾರ, ಸುಮಾರು ಐದು ಲಕ್ಷ ಭಕ್ತರು ಪ್ರಸ್ತುತ ಅಯೋಧ್ಯೆಯಲ್ಲಿ ಕ್ಯಾಂಪ್ ಮಾಡುತ್ತಿದ್ದು, ದೇವಾಲಯದಲ್ಲಿ ದರ್ಶನ ಪಡೆಯಲು ತಮ್ಮ ಸರದಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಹೆಚ್ಚುವರಿಯಾಗಿ, ನಿಯಮಿತವಾಗಿ ಭಕ್ತರ ಪ್ರವಾಹವೂ ಬರುತ್ತಿದೆ, ಇದು ಜನಸಂದಣಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.ರಾಮಮಂದಿರಹೊಸದರ್ಶನದಸಮಯ


ಭೇಟಿಯ ಸಮಯದ ದೃಷ್ಟಿಯಿಂದ, ದೇವಾಲಯವು ಎರಡು ಪಾಳಿಗಳಲ್ಲಿ ದರ್ಶನಕ್ಕಾಗಿ ತೆರೆದಿರುತ್ತದೆ. ಬೆಳಗ್ಗೆ 7ರಿಂದ 11.30ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ ಪಾಳಿಯಲ್ಲಿ, ವಿಸ್ತೃತ ಸಮಯವು ಭಕ್ತರಿಗೆ ರಾತ್ರಿ 10 ರವರೆಗೆ ದರ್ಶನ ಪಡೆಯಲು ಅನುವು ಮಾಡಿಕೊಡುತ್ತದೆ, ಇದು ದೇವಾಲಯಕ್ಕೆ ಭೇಟಿ ನೀಡಲು ಮತ್ತು ದೈವಿಕ ಆಶೀರ್ವಾದ ಪಡೆಯಲು ಸಾಕಷ್ಟು ಸಮಯವನ್ನು ಒದಗಿಸುತ್ತದೆ.


ಭಕ್ತರು ರಾಮ್ ಲಲ್ಲಾ ದರ್ಶನವನ್ನು ಸಂಜೆ 7 ರ ಬದಲು ರಾತ್ರಿ 10 ರವರೆಗೆ ಮಾಡಬಹುದು.


ಬೆಳಿಗ್ಗೆ 7 ರಿಂದ 11.30 ರವರೆಗೆ ದರ್ಶನ ತೆರೆದಿರುತ್ತದೆ.


ಸಂಜೆ ಪಾಳಿಯಲ್ಲಿ ದರ್ಶನವು ಮಧ್ಯಾಹ್ನ 3 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತದೆ.

ಬಂಟ್ವಾಳ ; ಬಿಲ್ಡರ್ ಝಫರುಲ್ಲಾ ಮನೆಯಿಂದಲೇ ಕನ್ನ ಹಾಕಿದ ಕೆಲಸದಾಳು

Posted by Vidyamaana on 2023-10-24 20:22:36 |

Share: | | | | |


ಬಂಟ್ವಾಳ ; ಬಿಲ್ಡರ್ ಝಫರುಲ್ಲಾ ಮನೆಯಿಂದಲೇ ಕನ್ನ ಹಾಕಿದ ಕೆಲಸದಾಳು

ಬಂಟ್ವಾಳ, ಅ.24: ಕೆಲಸದ ಆಳುವಿನ ಬಗ್ಗೆ ಇರಿಸಿದ್ದ ಅತಿಯಾದ ನಂಬಿಕೆಯೇ ಮಾಲಕನಿಗೆ ಮುಳುವಾಗಿದೆ. ಬಿಲ್ಡರ್ ಆಗಿದ್ದ ವ್ಯಕ್ತಿಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೇ ಲಕ್ಷಾಂತರ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ ಕಳವುಗೈದ ಘಟನೆ ನಡೆದಿದೆ. 


ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕೋಡಿಮಜಲು ನಿವಾಸಿ ಇಮಾದ್ ಬಿಲ್ಡರ್ ಸಂಸ್ಥೆಯ ಮಾಲಕ ಮೊಹಮ್ಮದ್ ಝಫರುಲ್ಲಾ ಎಂಬವರ ಮನೆಯ ಕಪಾಟಿನಲ್ಲಿ ಇರಿಸಲಾಗಿದ್ದ ಚಿನ್ನಾಭರಣ ಸಹಿತ ಲಕ್ಷಾಂತರ ರೂ. ಹಣವನ್ನು ಮನೆಯ ಕೆಲಸದಾತನೇ ಕದ್ದುಕೊಂಡು ಹೋಗಿರುವುದಾಗಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು 27,50,000 ರೂ. ನಗದು ಹಾಗೂ 4,96,000 ರೂ. ಮೌಲ್ಯದ ವಿವಿಧ ಬಗೆಯ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ಝಫರುಲ್ಲಾ ತಿಳಿಸಿದ್ದಾರೆ. 


ಇಮಾದ್ ಬಿಲ್ಡರ್ ಮಾಲಕ ಮೊಹಮ್ಮದ್ ಝಫರುಲ್ಲಾ ಎಂಬವರ ಜೊತೆ ಸುಮಾರು 8 ತಿಂಗಳ ಹಿಂದೆ ಕಟ್ಟಡ ಕಾಮಗಾರಿಯ ಕೆಲಸಕ್ಕೆ ಸೇರಿಕೊಂಡಿದ್ದ ಮಂಜೇಶ್ವರ ಮೂಲದ ಆಲಿ ಎಂಬಾತನ ಬಗ್ಗೆ ಸಂಶಯ ಉಂಟಾಗಿದೆ. ಆಲಿಗೆ ಫರಂಗಿಪೇಟೆ ಎಂಬಲ್ಲಿನ ಹುಡುಗಿಯ ಜೊತೆ ವಿವಾಹವಾಗಿದ್ದು, ಮಾಲಕರ ವಿಶ್ವಾಸ ಗಳಿಸಿ ಮನೆಗೇ ಬಂದು ಹೋಗುತ್ತಿದ್ದ. ಅಲ್ಲದೆ, ಝಫರುಲ್ಲಾ ಅವರ ಸಹಾಯಕನಾಗಿ ದುಡಿಯುತ್ತಿದ್ದ. ಹೀಗಾಗಿ ಆಲಿಯಲ್ಲಿ ಮನೆಗೆ ಅಗತ್ಯ ಸಾಮಾಗ್ರಿಗಳನ್ನು ಕಳುಹಿಸಿಕೊಡುತ್ತಿದ್ದರು. ಆದರೆ ಈತನ ಮೇಲಿರಿಸಿದ್ದ ಅತೀ ವಿಶ್ವಾಸವೇ ಮಾಲಕರಿಗೆ ಮುಳುವಾಗಿ ಪರಿಣಮಿಸಿದೆ.


ಅ.18 ರಂದು ಮನೆ ಮಂದಿ ಎಲ್ಲರೂ ಮನೆಗೆ ಬೀಗ ಹಾಕಿ ಮಂಗಳೂರಿನ ಜಪ್ಪುವಿನ ತಮ್ಮನ ಮನೆಗೆ ಹೋಗಿದ್ದರು. ಮನೆಗೆ ಬೀಗ ಹಾಕಿದ ನಂತರ, ತನ್ನ ವಿಶ್ವಾಸದ ಕೆಲಸದಾಳು ಬಳಿ ಕೀಯನ್ನು ನೀಡಿದ್ದರು.‌‌ ಮರುದಿನ 19ರಂದು ಕಟ್ಟಡ ಕಾಮಗಾರಿ ವಿಚಾರಕ್ಕೆ ಮಾಲಕ ಮೊಹಮ್ಮದ್ ಅವರು ಈತನಿಗೆ ಪೋನ್ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿತ್ತು.

ಆದರೆ ಈ ವಿಚಾರವನ್ನು ಸೀರಿಯಸ್ ಆಗಿ ತೆಗೆದುಕೊಂಡಿರದ ಮಾಲಕರು ಅ.20 ರಂದು ಅಗತ್ಯ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದರು. 


ಕೆಲಸದ ಒತ್ತಡದ ನಡುವೆ ಅ.23 ರಂದು ಊರಿಗೆ ವಾಪಾಸು ಆಗಿದ್ದು ರಾತ್ರಿ ಸುಮಾರು 8 ಗಂಟೆಗೆ ಕೋಡಿಮಜಲಿನ ಮನೆಗೆ ಬಂದಿದ್ದರು‌. ಕೀ ಕೊಡುವಂತೆ ಆತನಿಗೆ ಪೋನ್ ಮಾಡಿದಾಗ ಆಲಿ ಫೋನ್ ಆಫ್ ಆಗಿಯೇ ಇತ್ತು. ಸಂಶಯದಿಂದ ಮನೆಯ ಹಿಂಬದಿಯ ಕಿಟಕಿಯಲ್ಲಿ ಇಣುಕಿ ನೋಡಿದಾಗ ಕೋಣೆಯ ಬಾಗಿಲು ತೆರದುಕೊಂಡಿತ್ತು, ಕಪಾಟಿನ ಲಾಕರ್ ಮುರಿದು ಅದರಲ್ಲಿದ್ದ ಸೊತ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿತ್ತು.


ಕೂಡಲೇ ಗ್ರಾಮಾಂತರ ಪೋಲಿಸರಿಗೆ ದೂರು ನೀಡಿದ್ದು ಪೋಲೀಸರ ಸಮಕ್ಷಮದಲ್ಲಿ ಮನೆಯ ಬಾಗಿಲು ಮುರಿದು ನೋಡಿದಾಗ ಮೊಹಮ್ಮದ್ ಅವರು ಕಪಾಟಿನಲ್ಲಿರಿಸಿದ್ದ ರೂ. 25 ಲಕ್ಷ ಹಾಗೂ ಅವರ ತಂದೆಯ ಕಪಾಟಿನಲ್ಲಿರಿಸಿದ್ದ ರೂ.2,50,000 ಹಾಗೂ 4,96,000 ರೂ. ಮೌಲ್ಯದ 24 ಗ್ರಾಂ ತೂಕದ ಬ್ರಾಸ್ಲೆಟ್, 16 ಗ್ರಾಂ ತೂಕದ ಎರಡು ಚಿನ್ನದ ಉಂಗುರ, 40 ಗ್ರಾಂ ತೂಕದ ಚಿನ್ನದ ಬಲೆಗಳು, 8 ಗ್ರಾಂ ತೂಕದ ಚಿನ್ನದ ಬೆಂಡೋಲೆ, 32 ಗ್ರಾಂ ತೂಕದ ಚಿನ್ನದ ಮಾಲೆ, 4 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ ಹರೀಶ್ ಹಾಗೂ ಬೆರಳಚ್ಚು ತಜ್ಞರು, ಶ್ವಾನದಳದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಪುತ್ತೂರು :ಇಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

Posted by Vidyamaana on 2024-04-28 07:20:40 |

Share: | | | | |


ಪುತ್ತೂರು :ಇಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

ಪುತ್ತೂರು : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿಯು ಏ.28 ರಂದು ನಡೆಯಲಿದೆ.

ಏ.28 ರಂದು ಬೆಳಿಗ್ಗೆ 6 ಗಂಟೆಯಿಂದ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ನಡೆಯಲಿದೆ.

ಉತ್ತರ ಪ್ರದೇಶ: ಮತ್ತೊಂದು ಎನ್‌ಕೌಂಟರ್‌:62 ಪ್ರಕರಣಗಳ ಕುಖ್ಯಾತ ದರೋಡೆಕೋರ ಗುಂಡಿಗೆ ಬಲಿ

Posted by Vidyamaana on 2023-05-04 12:35:56 |

Share: | | | | |


ಉತ್ತರ ಪ್ರದೇಶ:  ಮತ್ತೊಂದು ಎನ್‌ಕೌಂಟರ್‌:62 ಪ್ರಕರಣಗಳ  ಕುಖ್ಯಾತ ದರೋಡೆಕೋರ ಗುಂಡಿಗೆ ಬಲಿ

ಮೀರತ್ : ಉತ್ತರಪ್ರದೇಶದಲ್ಲಿ ಗುರುವಾರ ಮತ್ತೊಂದು ಎನ್‌ಕೌಂಟರ್‌ ನಡೆಸಲಾಗಿದ್ದು, ಯುಪಿ ಎಸ್‌ಟಿಎಫ್‌ನೊಂದಿಗಿನ ಎನ್‌ಕೌಂಟರ್‌ನಲ್ಲಿ ಕುಖ್ಯಾತ ದರೋಡೆಕೋರ ಅನಿಲ್ ದುಜಾನಾನನ್ನ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.ಪ್ರಾಥಮಿಕ ಮಾಹಿತಿಯ ಪ್ರಕಾರ, ಮೀರತ್‌ನ ಭೋಲಾ ಝಲ್‌ನಲ್ಲಿ ಸಕ್ರಿಯವಾಗಿರುವ ಬಗ್ಗೆ ಖಚಿತವಾದ ಮಾಹಿತಿ ಪಡೆದ ನಂತರ ಎಸ್‌ಟಿಎಫ್ ಅನಿಲ್ ದುಜಾನಾನನ್ನು ಸುತ್ತುವರೆದಿದೆ. ಪೊಲೀಸರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಎನ್‌ಕೌಂಟರ್‌ ಮಾಡಲಾಗಿದೆ.ಪಶ್ಚಿಮ ಯುಪಿಯ ಕುಖ್ಯಾತ ಕ್ರಿಮಿನಲ್ ಅನಿಲ್ ದುಜಾನಾನನ್ನು 2021 ರಲ್ಲಿ ದೆಹಲಿ ಪೊಲೀಸರ ಕ್ರೈಂ ಬ್ರಾಂಚ್ ಬಂಧಿಸಿತ್ತು. ದುಜಾನಾ ವಿರುದ್ಧ 18 ಕೊಲೆಗಳು, ಸುಲಿಗೆ, ಲೂಟಿ, ಭೂಕಬಳಿಕೆ ಮತ್ತು ಇತರವು ಸೇರಿದಂತೆ 62 ಪ್ರಕರಣಗಳು ದಾಖಲಾಗಿವೆ. 2012 ರಿಂದ ಜೈಲಿನಲ್ಲಿದ್ದ, ಆದರೆ 2021 ರಲ್ಲಿ ಜಾಮೀನು ಪಡೆದಿದ್ದ. ನಂತರ, ಹಳೆಯ ಪ್ರಕರಣಗಳಲ್ಲಿ ಹಾಜರಾಗದ ಕಾರಣ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಅನ್ನು ಹೊರಡಿಸಿತ್ತು.

2012 ರಲ್ಲಿ ತ್ರಿವಳಿ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಂತರ, ಅನಿಲ್ ದುಜಾನಾ ಜೈಲಿನಿಂದ ಇತರ ಅಪರಾಧಿಗಳಾದ ರಣದೀಪ್ ಭಾಟಿ ಮತ್ತು ಅಮಿತ್ ಕಸಾನಾ ಅವರ ಸಹಾಯದಿಂದ ತನ್ನ ಅಪರಾಧ ಸಾಮ್ರಾಜ್ಯವನ್ನು ನಿರ್ವಹಿಸಲು ಪ್ರಾರಂಭಿಸಿದ್ದ. ದುಜಾನಾ ಜೈಲಿನಲ್ಲಿ ಕುಳಿತು ಕೊಲೆ, ಸುಲಿಗೆ ಮತ್ತು ಇತರ ಅಪರಾಧ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ತನ್ನ ಸಹಾಯಕರನ್ನು ಯೋಜಿಸಿ ನಿರ್ದೇಶಿಸುತ್ತಿದ್ದದುಜಾನಾ ಕುಟುಂಬ ಸುಂದರ್ ಭಾಟಿ ಗ್ಯಾಂಗ್‌ನೊಂದಿಗೆ ದೀರ್ಘಕಾಲದ ದ್ವೇಷವನ್ನು ಹೊಂದಿತ್ತು. 2012 ರಲ್ಲಿ, ದುಜಾನಾ ಮತ್ತು ಅವನ ಗ್ಯಾಂಗ್ ಸುಂದರ್ ಭಾಟಿ ಮತ್ತು ಅವನ ನಿಕಟ ಸಹಚರರ ಮೇಲೆ AK-47 ರೈಫಲ್‌ನಿಂದ ದಾಳಿ ಮಾಡಿತ್ತು. ಎರಡು ಪ್ರತಿಸ್ಪರ್ಧಿ ಗ್ಯಾಂಗ್‌ಗಳು ಸರ್ಕಾರಿ ಗುತ್ತಿಗೆಗಳು, ಸ್ಟೀಲ್ ಬಾರ್‌ಗಳ ಕಳ್ಳತನ ಮತ್ತು ಟೋಲ್ ಪ್ಲಾಜಾ ಒಪ್ಪಂದಗಳ ಮೇಲೆ ಆಗಾಗ್ಗೆ ಮುಖಾಮುಖಿಯಾಗುತ್ತಿದ್ದವು. ಭಾಟಿ ಗ್ಯಾಂಗ್‌ನಿಂದ ಬೆದರಿಕೆಯಿಂದಾಗಿ, ಪೊಲೀಸರು ಬುಲೆಟ್ ಪ್ರೂಫ್ ಜಾಕೆಟ್‌ನಲ್ಲಿ ದುನಾನಾನನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದರು.

ಪುತ್ತೂರು : ನಿಷೇದಿತ ಕೇರಳ ಲಾಟರಿ ಮಾರಾಟ : ಪಾನ್ ವಾಲ ಪೊಲೀಸ್ ವಶಕ್ಕೆ

Posted by Vidyamaana on 2024-04-02 14:45:03 |

Share: | | | | |


ಪುತ್ತೂರು : ನಿಷೇದಿತ ಕೇರಳ ಲಾಟರಿ ಮಾರಾಟ : ಪಾನ್ ವಾಲ ಪೊಲೀಸ್ ವಶಕ್ಕೆ

ಪುತ್ತೂರು : ನಿಷೇದಿತ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಪುತ್ತೂರಿನಲ್ಲಿ ನಡೆದಿದೆ ಪಡ್ನೂರು ನಿವಾಸಿ ಲಕ್ಷ್ಮಣ ಬಂಧಿತ ವ್ಯಕ್ತಿ.

ಏ.1 ರಂದು ಮಧ್ಯಾಹ್ನ ವೇಳೆ ಪುತ್ತೂರು ತಾಲೂಕು ಲಿನೆಟ್‌ ಜಂಕ್ಷನ್‌‌ನ ಬಾರ್‌ &

ಮಂಗಳೂರು: ನೈತಿಕ ಪೊಲೀಸ್ ಗಿರಿ ಪ್ರಕರಣ; ಮೂವರಿಗೆ ಗಡಿಪಾರು ನೋಟಿಸ್ ಪೊಲೀಸ್ ಕಮಿಷನ‌ರ್ ಕುಲದೀಪ್ ಜೈನ್

Posted by Vidyamaana on 2023-07-21 09:08:14 |

Share: | | | | |


ಮಂಗಳೂರು: ನೈತಿಕ ಪೊಲೀಸ್ ಗಿರಿ ಪ್ರಕರಣ; ಮೂವರಿಗೆ ಗಡಿಪಾರು ನೋಟಿಸ್   ಪೊಲೀಸ್ ಕಮಿಷನ‌ರ್ ಕುಲದೀಪ್ ಜೈನ್

ಮಂಗಳೂರು: ನಗರದಲ್ಲಿ ಪದೇ ಪದೇ ಕ್ರೈಂನಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ 60 ಇಂತಹ ರೌಡಿ ಶೀಟರ್ ಗಳನ್ನು ಗಡಿಪಾರು ಮಾಡಲು ಕ್ರಮ ವಹಿಸಲಾಗಿದೆ. ಅವರು ನಮಗೆ ಆರೋಪಿಗಳಷ್ಟೇ, ಅವರು ಯಾವ ಸಂಘಟನೆ ಅನ್ನೋದು ನಮಗೆ ಬೇಡ ಎಂದು ಮಂಗಳೂರು ಪೊಲೀಸ್ ಕಮಿಷನ‌ರ್ ಕುಲದೀಪ್ ಜೈನ್ ಹೇಳಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರ ಸಮಾಜ ವಿರೋಧಿ ಚಟುವಟಿಕೆಗಳನ್ನು ನಡೆಸುವವರನ್ನು ಗುರುತಿಸಿದ್ದೇವೆ. ನೈತಿಕ ಪೊಲೀಸ್ ಗಿರಿಗೆ ಸಂಬಂಧಿಸಿ ಮೂವರ ಮೇಲೆ ಠಾಣೆಯಿಂದ ಪ್ರಸ್ತಾವನೆ ಬಂದಿದೆ. ಮೂವರು ಮಾತ್ರ ಅಲ್ಲ, ಅದಕ್ಕೂ ಹೆಚ್ಚು ಜನರಿಗೆ ನೋಟೀಸ್ ನೀಡಲಾಗಿದೆ. ಅವರನ್ನ ಗಡೀಪಾರು ಮಾಡಲು ಠಾಣಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು. ಹೀಗಾಗಿ ಅವರಿಗೆ ನೋಟೀಸ್ ಜಾರಿ ಮಾಡಿದ್ದೇವೆ. ಗಡಿಪಾರು ಪ್ರಕ್ರಿಯೆ ಆಗಲಿದೆ ಎಂದು ತಿಳಿಸಿದರು

Recent News


Leave a Comment: