ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


ಸ್ನೇಹಂ ಟಿಸ್ಕೋ ಟೇಪ್‌ ಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ; ಅಪಾಯದಲ್ಲಿ ಹಲವು ಕಾರ್ಮಿಕರು

Posted by Vidyamaana on 2024-08-06 23:29:17 |

Share: | | | | |


ಸ್ನೇಹಂ ಟಿಸ್ಕೋ ಟೇಪ್‌ ಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ; ಅಪಾಯದಲ್ಲಿ ಹಲವು ಕಾರ್ಮಿಕರು

ಬೆಳಗಾವಿ: ತಾಲೂಕಿನ ನಾವಗೆ ಗ್ರಾಮದ ಹೊರವಲಯದಲ್ಲಿರುವ ಸ್ನೇಹಂ ಟಿಕ್ಸೋ ಟೇಪ್ ತಯಾರಿಸುವ ಕಾರ್ಖಾನೆಗೆ ಮಂಗಳವಾರ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಭೀಕರ ಅವಘಡ ಸಂಭವಿಸಿದ್ದು, ಕಾರ್ಖಾನೆಯೊಳಗೆ ಹಲವರು ಸಿಲುಕಿರುವ ಸಾಧ್ಯತೆ ಇದೆ.‌

ತಾಲೂಕಿನ‌ ನಾವಗೆ ಗ್ರಾಮದ ಬಳಿ ಇರುವ ಸ್ನೇಹಂ ಎಂಬ ಟಿಸ್ಕೋ ಟೇಪ್‌ ತಯಾರಿಸುವ ಈ ಕಾರ್ಖಾನೆಯಲ್ಲಿ ಬೆಂಕಿ ತಗುಲಿದೆ.‌ ಹೆಚ್ಚಿನ‌ ಪ್ರಮಾಣದಲ್ಲಿ ಪ್ಲಾಸ್ಟಿಕ್ ಇದ್ದಿದ್ದರಿಂದ ಬೆಂಕಿ ಆವರಿಸಿಕೊಂಡಿದೆ. ಬೃಹತ್ ಪ್ರಮಾಣದಲ್ಲಿ ಬೆಂಕಿ ಆವರಿಸಿಕೊಂಡಿದೆ. ಸುಮಾರು60ಕ್ಕೂ ಹೆಚ್ಚು ಜನ ಒಳಗೆ ಇದ್ದರು ಎಂಬ ಮಾಹಿತಿ ಇದೆ. ಕಾರ್ಖಾನೆಯ ಲಿಪ್ಟ್ ಬಳಿ 8-10 ಕಾರ್ಮಿಕರು ಇದ್ದರು. ಕೂಡಲೇ ಐದು ಜನರನ್ನು ಹೊರಗೆ ತೆಗೆಯಲಾಗಿದೆ. ಇನ್ನೂ ಅನೇಕರು ಒಳಗೆ ಇದ್ದಿರುವ ಮಾಹಿತಿ‌ಇದೆ. ಆದರೆ ಏನು ಆಗಿದೆ ಎಂಬ ಮಾಹಿತಿ ಸಿಕ್ಕಿಲ್ಲ

ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಮಂತ್ ನಿಧನ

Posted by Vidyamaana on 2024-08-11 22:38:27 |

Share: | | | | |


ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಮಂತ್ ನಿಧನ

ಸುರತ್ಕಲ್ : ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರತ್ಕಲ್ ಕಡಂಬೋಡಿ ನಿವಾಸಿ ಹೇಮಂತ್ (50) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಅವರು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಸೈಬರ್ ವಂಚಕರಿಂದ ಪ್ರಾಧ್ಯಾಪಕರಿಗೆ ಪಂಗನಾಮ!

Posted by Vidyamaana on 2024-01-31 15:20:24 |

Share: | | | | |


ಸೈಬರ್ ವಂಚಕರಿಂದ ಪ್ರಾಧ್ಯಾಪಕರಿಗೆ ಪಂಗನಾಮ!

ಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರ ನಗರದ ಚಿತ್ರಾವತಿ ಬಳಿ ಇರುವ ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಎಂ.ಶಂಕರ್ ಸೈಬರ್ ವಂಚಕರನ್ನು ನಂಬಿ ಮೋಸ ಹೋಗಿದ್ದಾರೆ. ಪೇಸ್‍ಬುಕ್ ಖಾತೆಯಲ್ಲಿದ್ದ ಲಿಂಕ್‍ನ್ನು ತೆರೆದು ಕ್ರೆಡಿಟ್ ಕಾರ್ಡ್‍ಗೆ ಅಪ್ಲೈ ಮಾಡಿದ್ದಾರೆ.ಟ್ಯಾಕ್ಸ್ ಮತ್ತು ಬ್ಯಾಂಕಿನ ಇತರೆ ಫೀಗಳೆಂದು 40,776 ರೂಪಾಯಿಗಳನ್ನು ಆನ್‍ಲೈನ್‍ನಲ್ಲಿ ಪಡೆದು ನಂತರ ಕ್ರೆಡಿಟ್ ಕಾರ್ಡ್ ನೀಡದೆ, ಹಣವನ್ನು ವಾಪಸ್ಸು ನೀಡದೆ, ಪ್ರಾಧ್ಯಾಪಕರಿಗೆ ಸೈಬರ್ ವಂಚಕರು ಪಂಗನಾಮ ಹಾಕಿದ್ದಾರೆ. ಇದರಿಂದ ಪ್ರಾಧ್ಯಾಪಕರಿಂದ ಶಂಕರ್ ಎಂ, ಚಿಕ್ಕಬಳ್ಳಾಪುರದ ಸಿಇಎನ್ ಪೊಲಸ್​ ಠಾಣೆಯಲ್ಲಿ ಐಪಿಸಿ ಕಲಂ 419, 420 ಸೇರಿದಂತೆ ಐ.ಟಿ.ಆಕ್ಟ್ 66ಡಿ ರಡಿ ದೂರು ದಾಖಲಿಸಿದ್ದಾರೆ.

ಸೂರಿಕುಮೇರು : ರಸ್ತೆ ಬದಿಯ ಚರಂಡಿಗೆ ಪಲ್ಟಿ ಹೊಡೆದ ಬಾಳೆಹಣ್ಣು ಸಾಗಾಟದ ಪಿಕಪ್

Posted by Vidyamaana on 2023-10-04 09:41:44 |

Share: | | | | |


ಸೂರಿಕುಮೇರು : ರಸ್ತೆ ಬದಿಯ ಚರಂಡಿಗೆ ಪಲ್ಟಿ ಹೊಡೆದ ಬಾಳೆಹಣ್ಣು ಸಾಗಾಟದ ಪಿಕಪ್

ವಿಟ್ಲ : ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ  ಸೂರಿಕುಮೇರಿನಲ್ಲಿ ಪಿಕಪ್ ವಾಹನವೊಂದು ಪಲ್ಟಿ ಹೊಡೆದು ರಸ್ತೆ ಬದಿಯ ಚರಂಡಿಯ ಮೇಲೆ ನಿಂತ ಘಟನೆ  ಅ 03 ರಂದು ಬುಧವಾರ ಮುಂಜಾನೆ ನಡೆದಿದೆ.


    ಸೂರಿಕುಮೇರ್ ಬದ್ರಿಯಾ ಜುಮಾ ಮಸೀದಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯ ಹೊಸ ರಸ್ತೆಯಲ್ಲಿ ತಮಿಳುನಾಡು ನೋಂದಾಯಿತ ಬಾಳೆಹಣ್ಣು ಸಾಗಾಟದ ಪಿಕಪ್ ವಾಹನವು ಪಲ್ಟಿ ಹೊಡೆದು ರಸ್ತೆ ಬದಿಯ ಚರಂಡಿಯೊಳಗೆ ನಿಂತಿದೆ, ನಿದ್ದೆಯ ಮಂಪರಿನಲ್ಲಿ ಬೆಳಗ್ಗಿನ ಜಾವ ಅಪಘಾತ ಸಂಭವಿಸಿದ್ದು ಚಾಲಕ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ.

2ನೇ ರಾಜ್ಯಭಾಷೆಯಾಗಿ ತುಳು ಘೋಷಣೆಗೆ ಯತ್ನ

Posted by Vidyamaana on 2024-07-23 07:07:38 |

Share: | | | | |


2ನೇ ರಾಜ್ಯಭಾಷೆಯಾಗಿ ತುಳು ಘೋಷಣೆಗೆ ಯತ್ನ

ಪುತ್ತೂರು: ರಾಜ್ಯದಲ್ಲಿ ತುಳು ಭಾಷೆಯನ್ನು ೨ನೇ ಅಧಿಕೃತ ರಾಜ್ಯಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಶೀಘ್ರದಲ್ಲೇ ಈ ಪ್ರಯತ್ನ ಕೈಗೂಡುವ ವಿಶ್ವಾಸವಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ಇವರ ಸಹಯೋಗದಲ್ಲಿ ಪುತ್ತೂರಿನ ರೋಟರಿ ಮನೀಷಾ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ - ಉಪನ್ಯಾಸ- ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ISRO: ಹೊಸ ವರ್ಷಕ್ಕೆ ಇಸ್ರೋದ ಮತ್ತೊಂದು ಸಾಧನೆ…: ನಭಕ್ಕೆ ಜಿಗಿದ ಎಕ್ಸ್‌ಪೋಸ್ಯಾಟ್‌

Posted by Vidyamaana on 2024-01-01 12:40:22 |

Share: | | | | |


ISRO: ಹೊಸ ವರ್ಷಕ್ಕೆ ಇಸ್ರೋದ ಮತ್ತೊಂದು ಸಾಧನೆ…: ನಭಕ್ಕೆ ಜಿಗಿದ ಎಕ್ಸ್‌ಪೋಸ್ಯಾಟ್‌

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೊಸ ವರ್ಷದ ಮೊದಲ ದಿನವೇ ಇತಿಹಾಸವನ್ನು ಸೃಷ್ಟಿಸಿದೆ. ಇಸ್ರೋ ಪಿಎಸ್‌ಎಲ್‌ವಿ-ಸಿ58/ಎಕ್ಸ್‌ಪೋಸ್ಯಾಟ್ ಅನ್ನು ಬೆಳಗ್ಗೆ 9.10ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.ಆಂಧ್ರಪ್ರದೇಶದ ಶ್ರೀಹರಿಕೋಟದ ಉಡಾವಣ ನೆಲೆಯಿಂದ ಬೆಳಗ್ಗೆ 9.10ಕ್ಕೆ ಪಿಎಸ್‌ಎಲ್‌ವಿ-ಸಿ58 ರಾಕೆಟ್‌ ಮೂಲಕ ಎಕ್ಸ್‌ಪೋಸ್ಯಾಟ್‌ ಯಶಸ್ವಿಯಾಗಿ ನಭಕ್ಕೆ ಜಿಗಿದಿದ್ದು ಇದರೊಂದಿಗೆ ಬಾಹ್ಯಾಕಾಶದಲ್ಲಿರುವ ಕಪ್ಪುಕುಳಿ (ಬ್ಲ್ಯಾಕ್‌ ಹೋಲ್‌) ಸಹಿತ ಅಲ್ಲಿ ಹೊರಹೊಮ್ಮುವ ಕ್ಷಕಿರಣಗಳ ಮೂಲವನ್ನು ಅಧ್ಯಯನ ಮಾಡಲಿದೆ.ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C58) ರಾಕೆಟ್, ತನ್ನ 60 ನೇ ಕಾರ್ಯಾಚರಣೆಯಲ್ಲಿ, ಮುಖ್ಯ ಪೇಲೋಡ್ ‘ಎಕ್ಸ್‌ಪೋಸ್ಯಾಟ್’ ಅನ್ನು 10 ಇತರ ಉಪಗ್ರಹಗಳೊಂದಿಗೆ ಹೊತ್ತೊಯ್ದಿದೆ.


‘ಎಕ್ಸ್ ರೇ ಪೋಲಾರಿಮೀಟರ್ ಸ್ಯಾಟಲೈಟ್’ (XPoSAT) ಎಕ್ಸ್ ರೇ ಮೂಲಗಳ ರಹಸ್ಯಗಳನ್ನು ಬಿಚ್ಚಿಡಲು ಮತ್ತು ‘ಕಪ್ಪು ರಂಧ್ರಗಳ’ ನಿಗೂಢ ಜಗತ್ತನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತದೆ. ISRO ಪ್ರಕಾರ, ಬಾಹ್ಯಾಕಾಶ-ಆಧಾರಿತ ಧ್ರುವೀಕರಣ ಮಾಪನಗಳಲ್ಲಿ ಖಗೋಳ ಮೂಲಗಳಿಂದ ಎಕ್ಸ್-ರೇ ಹೊರಸೂಸುವಿಕೆಯನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ಸಂಸ್ಥೆಯ ಮೊದಲ ಮೀಸಲಾದ ವೈಜ್ಞಾನಿಕ ಉಪಗ್ರಹವಾಗಿದೆ ಎನ್ನಲಾಗಿದೆ.ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO ಹೊರತುಪಡಿಸಿ, ಅಮೇರಿಕನ್ ಬಾಹ್ಯಾಕಾಶ ಸಂಸ್ಥೆ NASA ಡಿಸೆಂಬರ್ 2021 ರಲ್ಲಿ ಸೂಪರ್ನೋವಾ ಸ್ಫೋಟದ ಅವಶೇಷಗಳು, ಕಪ್ಪು ಕುಳಿಗಳಿಂದ ಹೊರಹೊಮ್ಮುವ ಕಣಗಳ ಸ್ಟ್ರೀಮ್ ಗಳು ಮತ್ತು ಇತರ ಖಗೋಳ ವಿದ್ಯಮಾನಗಳ ಬಗ್ಗೆ ಇದೇ ರೀತಿಯ ಅಧ್ಯಯನವನ್ನು ನಡೆಸಿತು. ಎಕ್ಸ್ ರೇ ಧ್ರುವೀಕರಣದ ಬಾಹ್ಯಾಕಾಶ ಆಧಾರಿತ ಅಧ್ಯಯನವು ಅಂತರಾಷ್ಟ್ರೀಯವಾಗಿ ಪ್ರಾಮುಖ್ಯತೆ ಪಡೆಯುತ್ತಿದೆ ಮತ್ತು ಈ ಸಂದರ್ಭದಲ್ಲಿ ಎಕ್ಸ್‌ಪೋಸಾಕ್ಟ್ ಮಿಷನ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಇಸ್ರೋ ಹೇಳಿದೆ.

Recent News


Leave a Comment: