ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ವ್ಯಂಗ್ಯ ಚಿತ್ರ ರಚಿಸಿ ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ

Posted by Vidyamaana on 2023-05-30 11:58:10 |

Share: | | | | |


ವ್ಯಂಗ್ಯ ಚಿತ್ರ ರಚಿಸಿ ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ

ಪುತ್ತೂರು : ಮುಸಲ್ಮಾನರ ಭಾವನೆಗೆ ಚ್ಯುತಿ ತಂದಿರುವ ಸುದೀಪ್ ಪನಿಯನ್ ಎಂಬವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಸ್ಲಿಂ ಯುವ ಜನ ಪರಿಷತ್ ನ ಅಧ್ಯಕ್ಷ ಅಶ್ರಫ್ ಕಲ್ಲೇಗ ಪುತ್ತೂರು ಉಪವಿಭಾಗದ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.ಅರುಣ್ ಪುತ್ತಿಲ ಬ್ರಿಗ್ರೇಡ್ ಪಾಣಾಜೆ’ ಎಂಬ ವಾಟ್ಸಪ್ ಗ್ರೂಪಿನಲ್ಲಿ ಕಾರ್ಟೂನ್ ಅನ್ನು ರಚಿಸಿ ಆ ಕಾರ್ಟೂನ್ ನಲ್ಲಿ ಮುಸ್ಲಿಂ ಮಹಿಳೆಯು ಮುಸಲ್ಮಾನರ ಪವಿತ್ರ ನಮಾಜ್ ಪ್ರಾರ್ಥನೆ ನೇತೃತ್ವ ವಹಿಸಿ ಅವರ ಹಿಂದೆ ಮೂರು ಮುಸಲ್ಮಾನ ಪುರುಷರು ಪ್ರಾರ್ಥನೆ ಮಾಡುತ್ತಾ ಇರುವಂತೆ ಅಶ್ಲೀಲ ಭಂಗಿಯಲ್ಲಿ ಚಿತ್ರವನ್ನು ರಚಿಸಿ ವಾಟ್ಸಾಪ್ ಗ್ರೂಪ್ ನಲ್ಲಿ ಹರಿಯ ಬಿಟ್ಟು ಮುಸಲ್ಮಾನರ ಭಾವನೆಗೆ ಚ್ಯುತಿ ಹಾಗೂ ಭಂಗ ತಂದಿರುತ್ತಾರೆ.ಈ ವಿಚಾರದಿಂದ ಇಸ್ಲಾಂ ವಿಶ್ವಾಸಿಯಾದ ನನಗೆ ತೀವ್ರ ನೋವುಂಟಾಗಿರುತ್ತದೆ ಮಾತ್ರವಲ್ಲ ಇದು ಸಮಾಜದಲ್ಲಿ ಕೋಮು ಭಾವನೆ ಕೆರಳಿಸಲು ಪ್ರಯತ್ನಿಸಿ ಸಮಾಜದಲ್ಲಿ ಅಶಾಂತಿ ಉಂಟಾಗುವಂತೆ ಮಾಡಿದ ಕೃತ್ಯವಾಗಿರುತ್ತದೆ ಆದ್ದರಿಂದ ಆಪಾದಿತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಶ್ರಫ್ ಕಲ್ಲೇಗ ದೂರಿನಲ್ಲಿ ತಿಳಿಸಿದ್ದಾರೆ.

ಪುತ್ತೂರು ಪೇಟೆಡ್ ಇಡೀ ಕರೆಂಟ್ ಇಜ್ಜಿಗೆ

Posted by Vidyamaana on 2023-11-04 04:48:05 |

Share: | | | | |


ಪುತ್ತೂರು ಪೇಟೆಡ್ ಇಡೀ ಕರೆಂಟ್ ಇಜ್ಜಿಗೆ


ಪುತ್ತೂರು : ನಿರ್ವಹಣೆ ಮತ್ತು ತುರ್ತು ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ದರ್ಬೆ ಫೀಡರ್‌ನಲ್ಲಿ ನ.4ರಂದು ಪೂರ್ವಾಹ್ನ ಗಂಟೆ 10 ರಿಂದ ಅಪರಾಹ್ನ 5 ರವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್‌ ಸರಬರಾಜಾಗುವ ಹಾರಾಡಿ, ಚಿಕ್ಕಪುತ್ತೂರು, ನೆಲ್ಲಿಕಟ್ಟೆ, ಕೆಎಸ್‌ಆರ್‌ಟಿಸಿ ಬಸ್‌ ಸ್ಟ್ಯಾಂಡ್, ಕಲ್ಲಾರೆ, ದರ್ಬೆ ಮತ್ತು ಏಳ್ಳುಡಿ ಪರಿಸರದ ವಿದ್ಯುತ್‌ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ

ಪ್ರೇಮಿಗಳ ಬೆಡ್ ರೂಂ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ - ಮಂಗಳೂರು ಶೆಟ್ಟಿ ಲಂಚ್ ಹೋಂ ನ ಪಾರ್ಟ್ನರ್ಸ್ ಬಂಧನ.

Posted by Vidyamaana on 2023-09-15 16:11:05 |

Share: | | | | |


ಪ್ರೇಮಿಗಳ ಬೆಡ್ ರೂಂ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ - ಮಂಗಳೂರು ಶೆಟ್ಟಿ ಲಂಚ್ ಹೋಂ ನ ಪಾರ್ಟ್ನರ್ಸ್ ಬಂಧನ.

ಬೆಂಗಳೂರು : ಪ್ರೇಮಿಗಳ ಖಾಸಗಿ ವಿಡಿಯೊ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿದ ಜೋಡಿಯನ್ನು ಬಂಧಿಸಲಾಗಿದೆ.


ಎಂಬಿಎ ಪದವೀಧರೆ ವಿದ್ಯಾರ್ಥಿನಿಯೊಬ್ಬರಿಗೆ ಇವರೇ ರೂಮ್‌ ನೀಡಿ ಬ್ಲಾಕ್‌ಮೇಲ್ ಮಾಡಿರುವುದು ಪತ್ತೆಯಾಗಿದೆ.ನಯನಾ ಹಾಗೂ ಕಿರಣ್ ಬಂಧಿತರು. ಇವರಿಬ್ಬರೂ ಕೆಂಚನಾಪುರದಲ್ಲಿ ಶೆಟ್ಟಿ ಲಂಚ್ ಹೋಮ್ ಎಂಬ ಹೋಟೆಲ್ ನಡೆಸುತ್ತಿದ್ದರು.ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಮ್ ಹೋಟೆಲ್ ನಲ್ಲಿ ಪ್ರೇಮಿಗಳಿಗೆ ರೂಮ್​ ನೀಡಲಾಗಿತ್ತು. ಆದ್ರೆ, ರೂಮ್​ನಲ್ಲಿ ರಹಸ್ಯವಾಗಿ‌ ಕ್ಯಾಮೆರಾ ಅಡಗಿಸಿ ಇಟ್ಟಿದ್ದರು. ಬಳಿಕ ನಯನಾ ಹಾಗೂ ಪಾರ್ಟರ್ ಕಿರಣ್ ಎನ್ನುವರು ಯುವತಿಗೆ ಬ್ಲ್ಯಾಕ್​ ಮೇಲ್ ಮಾಡಿ ಹಣಕ್ಕೆ ಪೀಡಿಸುತ್ತಿದ್ದರು.ಒಂದು ಲಕ್ಷ ಹಣಕ್ಕೆ ನೀಡಬೇಕು. ಹಣ ಕೊಡದಿದ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತೀನಿ. ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಳುಹಿಸುತ್ತೇನೆ ಎಂದು ಕಿರಣ್ ಬೆದರಿಕೆ ಹಾಕಿದ್ದ.


ನಯನಾ ಹಾಗೂ ಕಿರಣ್ ಜೊತೆಯಾಗಿ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿ ಶೆಟ್ಟಿ ಲಂಚ್ ಹೋಮ್ ಹೋಟೆಲ್ ಆರಂಭಿಸಿದ್ದರು. ಅದೇ ಹೋಟೆಲ್​ಗೆ ನಯನಾ ಸಂಬಂಧಿ ಯುವತಿ(ಬ್ಲ್ಯಾಕ್​ ಮೇಲ್​ ಪ್ರಕರಣದ ಸಂತ್ರಸ್ಥೆ) ಆಗಾಗ ತನ್ನ ಪ್ರಿಯಕರ ಜೊತೆ ಬರುತ್ತಿದ್ದಳು. ವೇಳೆ ಹೋಟೆಲ್ ರೂಮ್ ನಲ್ಲಿ ಇರುವಂತೆ ಹೇಳಿದ್ದ ನಯನಾ, ಬಳಿಕ ಇಬ್ಬರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಳು. ನಂತರ ಅವರೇ ರೂಮ್ ಕೊಟ್ಟು ಅವರೆ ಬೀಸಿದ್ದು, ಅಶ್ಲೀಲವಾಗಿ ಎಡಿಟ್ ಮಾಡಿ‌ ಯುವತಿಗೆ ಆರೋಪಿ ಕಿರಣ್, ವಾಟ್ಸಪ್​ ಮಾಡಿ ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕೋದಾಗಿ ಬೆದರಿಸುತ್ತಿದ್ದ.ಇದರಿಂದ ಯುವತಿ ಹೆದರಿಕೊಂಡು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಇದೀಗ ಈ ದೂರಿನ ಆಧಾರ ಮೇಲೆ ಪೊಲೀಸರು ನಯನಾ ಹಾಗೂ ಕಿರಣ್​ನನ್ನು ಬಂಧಿಸಿದ್ದಾರೆ. ಅಲ್ಲದೇ ಮೊಬೈಲ್ ವಶಕ್ಕೆ ಪಡೆದು ಯುವತಿಯ ವಿಡಿಯೋ ಡಿಲೀಟ್ ಮಾಡಿದ್ದಾರೆ.

ಲಡ್ಡು ಬಂದು ಬಾಯಿಗೆ ಬಿತ್ತು..! ಆರ್ಡರ್ ಮಾಡಿದ್ದು ಫುಡ್ ಪಾರ್ಸೆಲ್ ಬಂದಿದ್ದು ಕ್ಯಾಶ್!!

Posted by Vidyamaana on 2024-07-21 15:34:53 |

Share: | | | | |


ಲಡ್ಡು ಬಂದು ಬಾಯಿಗೆ ಬಿತ್ತು..! ಆರ್ಡರ್ ಮಾಡಿದ್ದು ಫುಡ್ ಪಾರ್ಸೆಲ್ ಬಂದಿದ್ದು ಕ್ಯಾಶ್!!

ಕೊಪ್ಪಳ: ಗ್ರಾಹಕನಿಗೆ ಆಹಾರ ಪಾರ್ಸಲ್​ ಕವರ್​ ನೀಡುವ ಬದಲಿಗೆ ಹೋಟೆಲ್ ಮಾಲಿಕ 50 ಸಾವಿರ ರೂ. ಹಣವಿದ್ದ ಕವರ್​ ನೀಡಿದ ಘಟನೆ ನಡೆದಿದ್ದು, ಗ್ರಾಹಕ ಪಾರ್ಸಲ್​ ತೆಗೆದುಕೊಂಡು ಹೋಗಿ ಮನೆಯಲ್ಲಿ ನೋಡಿದಾಗ ತಿಂಡಿ ಬದಲಿಗೆ 50 ಸಾವಿರ ರೂ. ಇರುವುದು ಕಂಡಿದೆ.

ರಸೂಲ್ ಸಾಬ ಸೌದಾಗರ್ ಎಂಬುವರು ಕುಷ್ಟಗಿ ಪಟ್ಟಣದಲ್ಲಿ ಪುಟ್ಟ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಶನಿವಾರ ಅವರು ಬ್ಯಾಂಕ್​ಗೆ ಕಟ್ಟಲು ಎಂದು ಮನೆಯಿಂದ 49,625 ರೂಪಾಯಿ ಇದ್ದ ಹಣದ ಕವರ್​ನ್ನು ಹೋಟೆಲ್ ನಲ್ಲಿಟ್ಟಿದ್ದರು.



ಮಾ. 7ರಂದು ನಯಾ ಚಪ್ಪಲ್ ಬಜಾರ್ ನ ನವೀಕೃತ ಮಳಿಗೆ ಶುಭಾರಂಭ

Posted by Vidyamaana on 2024-03-02 12:33:31 |

Share: | | | | |


ಮಾ. 7ರಂದು ನಯಾ ಚಪ್ಪಲ್ ಬಜಾರ್ ನ ನವೀಕೃತ ಮಳಿಗೆ ಶುಭಾರಂಭ

ಪುತ್ತೂರು: ನಯಾ ಚಪ್ಪಲ್ ಬಜಾರ್ನ ನವೀಕೃತ ಮಳಿಗೆಯ ಉದ್ಘಾಟನೆ ಮಾರ್ಚ್ 7ರಂದು ಬೆಳಿಗ್ಗೆ 10ಕ್ಕೆ ದರ್ಬೆ ಬುಶ್ರಾ ಟವರ್ನಲ್ಲಿ ನಡೆಯಲಿದೆ.

1998ರಲ್ಲಿ ಆಗಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಎದುರುಗಡೆ ಇದ್ದ ಎ.ಎಂ. ಕಾಂಪ್ಲೆಕ್ಸ್ನಲ್ಲಿ ನಯಾ ಚಪ್ಪಲ್ ಬಜಾರ್ ಕಾರ್ಯಾಚರಣೆ ಆರಂಭಿಸಿತು. ಬಳಿಕ ದರ್ಬೆಯ ಬುಶ್ರಾ ಟವರ್ಗೆ ಸ್ಥಳಾಂತರಗೊಂಡಿತು. ಸುಮಾರು 26 ವರ್ಷಗಳ ಸುದೀರ್ಘ ಪಯಣದಲ್ಲಿ  ಗ್ರಾಹಕರ ಮನಸೂರೆಗೊಂಡಿರುವ ರಫೀಕ್ ಎಂ.ಜಿ. ಮಾಲಕತ್ವದ ನಯಾ ಚಪ್ಪಲ್ ಬಜಾರ್ ಇದೀಗ ಆಧುನಿಕತೆಗೆ ತಕ್ಕಂತೆ ನವೀಕೃತಗೊಂಡು ಶುಭಾರಂಭಗೊಳ್ಳುತ್ತಿದೆ.


ನೂತನ ಸಂಸ್ಥೆಯನ್ನು ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬ ಅವರು ನವೀಕೃತ ಮಳಿಗೆಯನ್ನು ಉದ್ಘಾಟಿಸುವರು. ಶಾಸಕ ಅಶೋಕ್ ಕುಮಾರ್ ರೈ ಮುಖ್ಯ ಅತಿಥಿಯಾಗಿರುವರು. ದರ್ಬೆ ಬುಶ್ರಾ ಟವರ್ನ ಮಾಲಕ ಅಬ್ದುಲ್ ಅಜೀಜ್ ಅವರು ಪ್ರಥಮ ಗ್ರಾಹಕರಾಗಿ ಉಪಸ್ಥಿತರಿರುವರು.

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ, ಪುತ್ತೂರು ಸಂಯುಕ್ತ ಜಮಾಅತ್ ಕಮಿಟಿ ಅಧ್ಯಕ್ಷ ಮೊಹಮ್ಮದ್ ಹಾಜಿ ಕೆ.ಪಿ., ಮಹಾವೀರ ಮೆಡಿಕಲ್ ಸೆಂಟರಿನ ಡಾ. ಅಶೋಕ್ ಪಡಿವಾಳ್,  ದರ್ಬೆ ಬಿಓಬಿಯ ಸೀನಿಯರ್ ಮ್ಯಾನೇಜರ್ ಸಾದೀಕ್ ಎಸ್.ಎಂ., ಲಿಯೋ ಜಿಲ್ಲಾ ಅಧ್ಯಕ್ಷೆ ಡಾ. ರಂಜಿತಾ ಎಚ್. ಶೆಟ್ಟಿ, ಕ್ರಿಸ್ಟೋಫರ್ ಕಾಂಪ್ಲೆಕ್ಸಿನ ವಲೇರಿಯನ್ ಡಯಾಸ್, ಡಾ. ಜಸ್ಪ್ರಿತ್ ಸಿಂಗ್ ದಿಲ್, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಜಯರಾಜ್ ಭಂಡಾರಿ, ಪುತ್ತೂರು ಅಗ್ರಝೋನ್, ಸಿಝ್ಲರ್ನ ಪಿ.ಎನ್. ಪ್ರಸನ್ನ ಕುಮಾರ್ ಶೆಟ್ಟಿ, ಮದರ್ ಇಂಡಿಯಾದ ಎಂ.ಜಿ. ರಜಾಕ್ ಅತಿಥಿಗಳಾಗಿರುವರು ಎಂದು ಸಂಸ್ಥೆಯ ಮಾಲಕ ಎಂಜಿ ರಫೀಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಕ್ರಿಕೆಟ್ ವರ್ಲ್ಡ್ ಕಪ್ - ಮೂಡಬಿದಿರೆಯಲ್ಲಿ ಭರ್ಜರಿ ಬೆಟ್ಟಿಂಗ್ ದಂಧೆ - 5 ಮಂದಿ ಅರೆಸ್ಟ್

Posted by Vidyamaana on 2023-10-17 13:44:15 |

Share: | | | | |


ಕ್ರಿಕೆಟ್ ವರ್ಲ್ಡ್ ಕಪ್ - ಮೂಡಬಿದಿರೆಯಲ್ಲಿ ಭರ್ಜರಿ ಬೆಟ್ಟಿಂಗ್ ದಂಧೆ - 5 ಮಂದಿ ಅರೆಸ್ಟ್

ಮಂಗಳೂರು : ಕ್ರಿಕೆಟ್ ವಿಶ್ವಕಪ್ ಮ್ಯಾಚ್ ಗಳು ನಡೆಯುತ್ತಿದ್ದರೆ ಮಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಚ್ಚಾಗಿ ನಡೆಯುತ್ತಿದ್ದು, ಇದೀಗ ಪೊಲೀಸರು ಬೆಟ್ಟಿಂಗ್ ದಂಧೆಯ ಬುಡಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಸತತ ಕಾರ್ಯಾಚರಣೆ ನಡೆಸುತ್ತಿರುವ ಮಂಗಳೂರು ಪೊಲೀಸರು ಬೆಟ್ಟಿಂಗ್ ದಂಧೆಯಲ್ಲಿ ನಿರತರಾಗಿರುವವರನ್ನು ಕಂಬಿ ಹಿಂದೆ ನಿಲ್ಲಿಸುತ್ತಿದ್ದಾರೆ.ಇಂದು ಎರಡು ಪ್ರತ್ಯೇಕ ಪ್ರಕರಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ನಿರತರಾಗಿರುವ ಐವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.


ಮೊದಲ ಪ್ರಕರಣದಲ್ಲಿ ಮೂಡಬಿದರೆಯ ಮಾರ್ಪಾಡಿ ಗ್ರಾಮದ ಅಲಂಗಾರು ಎಂಬಲ್ಲಿರುವ ಎಸ್.ಐ ಸ್ಪೋರ್ಟ್ಸ್ ಅಂಗಡಿಯ ಮುಂಭಾಗದಲ್ಲಿ ನವೀದ್ ಎಂಬಾತನು ಪ್ರಸಾದ್ ಮತ್ತು ಉಮೇಶ್ ಎಂಬುವರಿಂದ ಹಣವನ್ನು ಪಡೆದು Comfort Zone 247 ಎಂಬ ಮೋಬೈಲ್ ವೆಬ್ ಸೈಟ್ ನಲ್ಲಿ ಕ್ರಿಕೇಟ್ ಬೆಟ್ಟಿಂಗ್ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ನವೀದ್ ಎಂಬಾತನನ್ನು ಹಿಡಿದು ವಿಚಾರಿಸಿದಾಗ ಈ ದಿನ ನಡೆಯುತ್ತಿದ್ದ ಶ್ರೀಲಂಕ ಮತ್ತು ಆಸ್ಪ್ರೇಲಿಯಾ ಕ್ರಿಕೆಟ್ ಮ್ಯಾಚ್ ನಲ್ಲಿ ಬೆಟ್ಟಿಂಗ್ ನಲ್ಲಿ ತೊಡಗಿದ್ದಾಗಿ ತಿಳಿಸಿದ್ದಾನೆ. ಬಂಧಿತ ಆರೋಪಿಗಳನ್ನು ಮೂಡಬಿದಿರೆ ನವೀದ್(30), ಉಮೇಶ್ (40), ಪ್ರಸಾದ್ ದೇವಾಡಿಗ(35) ಎಂದು ಗುರುತಿಸಲಾಗಿದೆ.ಮತ್ತೊಂದು ಪ್ರಕರಣ ಮೂಡಬಿದರೆಯ ಮಾರ್ಪಾಡಿ ಗ್ರಾಮದ ಒಂಟಿಕಟ್ಟೆ ಎಂಬಲ್ಲಿರುವ ಕಡಲಕೆರೆ ಪಾರ್ಕ್ ನಲ್ಲಿ ಸುಖೇಶ್ ಆಚಾರ್ಯ ಎಂಬಾತನು ಪುರಂದರ್ ಎಂಬಾತನಿಂದ ಹಣವನ್ನು ಪಡೆದು allpaanel.com/m/home ಎಂಬ ಮೋಬೈಲ್ ವೆಬ್ ಸೈಟ್ ನಲ್ಲಿ ಕ್ರಿಕೇಟ್ ಬೆಟ್ಟಿಂಗ್ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಸುಖೇಶ್ ಆಚಾರ್ಯ ಎಂಬಾತನನ್ನು ಹಿಡಿದು ವಿಚಾರಣೆ ನಡೆಸಿದಾಗ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ತಿಳಿಸಿದ್ದಾನೆ. ಬಂಧಿತರ ಆರೋಪಿಗಳನ್ನು ಮೂಡಬಿದಿರೆ ನಿವಾಸಿಗಳಾಗಿ ಸುಖೇಶ್ ಆಚಾರ್ಯ ಮತ್ತು ಪುರಂದರ ಕುಲಾಲ್ ಎಂದು ಗುರುತಿಸಲಾಗಿದೆ.

ಎರಡೂ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.

Recent News


Leave a Comment: