ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ರೂಪಾಯಿ- ದಿರ್ಹಮ್‌ ವ್ಯವಹಾರಕ್ಕೆ ಭಾರತ- ಯುಎಇ ಒಪ್ಪಿಗೆ

Posted by Vidyamaana on 2023-07-15 14:36:39 |

Share: | | | | |


ರೂಪಾಯಿ- ದಿರ್ಹಮ್‌ ವ್ಯವಹಾರಕ್ಕೆ ಭಾರತ- ಯುಎಇ ಒಪ್ಪಿಗೆ

ಅಬುಧಾಬಿ: ಭಾರತ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಇನ್ನು ಮುಂದೆ ರೂಪಾಯಿ – ದಿರ್ಹಮ್‌ನಲ್ಲಿ ವ್ಯವಹಾರ ನಡೆಸಲು ಪರಸ್ಪರ ಸಹಿ ಹಾಕಿವೆ.


ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಸಮ್ಮುಖದಲ್ಲಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಮತ್ತು ಯುಎಇಯ ಸೆಂಟ್ರಲ್ ಬ್ಯಾಂಕ್ ಗವರ್ನರ್ ಹೆಚ್ ಇ ಖಲೀದ್ ಮೊಹಮದ್ ತಿಳುವಳಿಕಾ ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.


ಈ ಒಪ್ಪಂದದಿಂದ ಭಾರತ ಮತ್ತು ಯುಎಇ ಇನ್ನು ಮುಂದೆ ರಫ್ತು ಮತ್ತು ಆಮದನ್ನು ದೇಶಿಯ ಕರೆನ್ಸಿಯಲ್ಲಿ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿರುವ ಪಾವತಿ ವ್ಯವಸ್ಥೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಮತ್ತು ಯುಎಇಯ ಸುರಕ್ಷಿತ ಆನ್‌ಲೈನ್ ಪಾವತಿ ವ್ಯವಸ್ಥೆಯಾದ ಐಪಿಪಿ (IPP) ಇನ್ನು ಮುಂದೆ ಲಿಂಕ್‌ ಆಗಲಿದೆ.

UPI-IPP ಸಂಪರ್ಕವು ಎರಡೂ ದೇಶದ ಬಳಕೆದಾರರಿಗೆ ವೇಗವಾಗಿ, ಅನುಕೂಲಕರ, ಸುರಕ್ಷಿತವಾಗಿ ಪರಿಣಾಮಕಾರಿ ಎರಡು ದೇಶಗಳ ಮಧ್ಯೆ ಹಣ ವರ್ಗಾವಣೆ ಮಾಡಲು ಅನುವು ಮಾಡಿಕೊಡುತ್ತದೆ.

ಲಾಭ ಏನು?

ಎರಡು ದೇಶಗಳ ನಡುವಿನ ಚಿಲ್ಲರೆ ಪಾವತಿಗಳು ಸಾಮಾನ್ಯವಾಗಿ ಕಡಿಮೆ ಪಾರದರ್ಶಕವಾಗಿರುತ್ತವೆ ಮತ್ತು ಇದು ದೇಶೀಯ ವಹಿವಾಟುಗಳಿಗಿಂತ ಹೆಚ್ಚು ದುಬಾರಿ. UPI-IPP ಲಿಂಕ್‌ ಆದರೆ ಭಾರತ ಮತ್ತು ಫ್ರಾನ್ಸ್‌ ನಡುವಿನ ಗಡಿಯಾಚೆಗಿನ ಹಣ ವ್ಯವಹಾರ ಪಾರದರ್ಶಕವಾಗಿರುತ್ತದೆ. ಅಷ್ಟೇ ಅಲ್ಲದೇ ಅಗ್ಗ ಮತ್ತು ವೇಗವಾಗಿ ಹಣವನ್ನು ಕಳುಹಿಸಬಹುದಾಗಿದೆ. ಯುಎಇಯಲ್ಲಿರುವ ಭಾರತೀಯ ವಲಸಿಗರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ಲಾಭವಾಗಲಿದೆ. ಯುಪಿಐ ಮೂಲಕ ಚಿಲ್ಲರೆ ಪಾವತಿಗಳನ್ನು ಭಾರತೀಯ ರೂಪಾಯಿಗಳಲ್ಲಿ ಮಾಡಲಾಗುವುದರಿಂದ ಇದು ವಿದೇಶೀ ವಿನಿಮಯ ಮೀಸಲುಗಳನ್ನು ಉಳಿಸಲು ಸಹಾಯ ಮಾಡುತ್ತದೆ.

ಚಂದ್ರಯಾನದ ಯಶಸ್ಸಿಗೆ ಮಸೀದಿ ಗಳಲ್ಲಿ ಪ್ರಾರ್ಥಿಸಲು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಕರೆ

Posted by Vidyamaana on 2023-08-23 08:47:08 |

Share: | | | | |


ಚಂದ್ರಯಾನದ ಯಶಸ್ಸಿಗೆ ಮಸೀದಿ ಗಳಲ್ಲಿ ಪ್ರಾರ್ಥಿಸಲು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಕರೆ

ಮಂಗಳೂರು :ದೇಶಕ್ಕೆ ದೇಶವೇ ಕಾತರದಿಂದ ಕಾಯುತ್ತಿರುವ ಚಂದ್ರಯಾನ -3 ರ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಗುರಿ ತಲುಪುವಂತಾಗಳು ಪ್ರತೀ ಮಸೀದಿಗಳಲ್ಲಿ ಇಂದು ಪ್ರಾರ್ಥನೆ ನಡೆಸುವಂತೆ ರಾಜ್ಯ ದಾರಿಮಿ ಒಕ್ಕೂಟ ಕರೆ ನೀಡಿದೆ.

ದೇಶದ ಕೀರ್ತಿ ಬಾನೆತ್ತರಕ್ಕೇರಿ ಆ ಮೂಲಕ ದೇಶದ ಪ್ರಜೆಗಳು ಅಭಿಮಾನ ಪಡುವಂತಾಗಲು ಚಂದ್ರಯಾನ ಯಶಸ್ಸು ಕಾಣ ಬೇಕಿರುವುದು ನಮ್ಮೆಲ್ಲರ ಅಗತ್ಯವಾಗಿದೆ.

ಇದಕ್ಕಾಗಿ ರಾತ್ರಿ ಹಗಲೆನ್ನದೇ ದುಡಿದ ವಿಜ್ಞಾನಿಗಳ ,ಸಿಬ್ಬಂದಿ ವರ್ಗದವರ ಒಳಿತಿಗಾಗಿ ಕೂಡಾ  ಪ್ರಾರ್ಥನೆ ನಡೆಸಲು ಸಂಘಟನೆ ಕರೆ ನೀಡಿದೆ.

ಬೆಂಗಳೂರು ಕಂಬಳದಿಂದ ಹಿಂತಿರುಗುತ್ತಿದ್ದ ಕಾರು ಅಪಘಾತ ; ಮಂಗಳೂರಿನ ಇಬ್ಬರು ಯುವಕರು ದಾರುಣ ಮೃತ್ಯು

Posted by Vidyamaana on 2023-11-26 22:43:34 |

Share: | | | | |


ಬೆಂಗಳೂರು ಕಂಬಳದಿಂದ ಹಿಂತಿರುಗುತ್ತಿದ್ದ ಕಾರು ಅಪಘಾತ ; ಮಂಗಳೂರಿನ ಇಬ್ಬರು ಯುವಕರು ದಾರುಣ ಮೃತ್ಯು

ತುಮಕೂರು, ನ.26: ಬೆಂಗಳೂರಿನಲ್ಲಿ ಕಂಬಳ ಮುಗಿಸಿ ಹಿಂತಿರುಗುತ್ತಿದ್ದ ಕಾರಿಗೆ ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ಲಾರಿ ಡಿಕ್ಕಿಯಾಗಿದ್ದು ಜವರಾಯನ ಅಟ್ಟಹಾಸಕ್ಕೆ ಮಂಗಳೂರು ಮೂಲದ ಇಬ್ಬರು ಯುವಕರು ಪ್ರಾಣ ತೆತ್ತಿದ್ದಾರೆ. 


ಬೋರ್ವೆಲ್ ಲಾರಿ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ, ಮೂರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಲಾರಿ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.  ಕುಣಿಗಲ್ ತಾಲ್ಲೂಕಿನ ಚಿಗಣಿ ಪಾಳ್ಯ ಬಳಿ ಘಟನೆ ನಡೆದಿದೆ. 






ಮಂಗಳೂರಿನ ಬಜಪೆ ಗ್ರಾಮದ ಪೆರಾರ ನಿವಾಸಿ ಕಿಶನ್ ಶೆಟ್ಟಿ(20), ಭಟ್ರಕೆರೆ ವಾಸಿ ಫೀಲಿಪ್ ನೇರಿ(32) ಮೃತ ದುರ್ದೈವಿಗಳು.‌ ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಕಂಬಳ‌ ನೋಡಿ ಮಂಗಳೂರಿಗೆ ವಾಪಸ್ ತೆರುಳುತ್ತಿದ್ದಾಗ ಅಪಘಾತ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಯುವಕರು ತೀವ್ರ ಗಾಯಗೊಂಡಿದ್ದು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ‌ಲಾರಿ ಹಾಗೂ ಚಾಲಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಜಜ್ಜಿ ಹೋಗಿದ್ದು ಪೊಲೀಸರು ಹರಸಾಹಸಪಟ್ಟು ತೆರವು ಮಾಡಿದ್ದಾರೆ. ಕುಣಿಗಲ್ ‌ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಡಾ.ಭಾರತೀ ಪವಾರ್ ಬಿಂದು ಫ್ಯಾಕ್ಟರಿಗೆ ಭೇಟಿ

Posted by Vidyamaana on 2023-04-25 16:26:51 |

Share: | | | | |


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಡಾ.ಭಾರತೀ ಪವಾರ್ ಬಿಂದು ಫ್ಯಾಕ್ಟರಿಗೆ ಭೇಟಿ

ಪುತ್ತೂರು: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಡಾ.ಭಾರತೀ ಪವಾರ್ ಪ್ರತಿಷ್ಠಿತ ನರಿಮೊಗರಿನಲ್ಲಿರುವ ಬಿಂದು ಫ್ಯಾಕ್ಟರಿಗೆ ಮಂಗಳವಾರ ಭೇಟಿ ನೀಡಿದರು.

ಬಿಂದು ಫ್ಯಾಕ್ಟರಿಯ ಪ್ರಮುಖರು ಹಾಗೂ ಸಿಬ್ಬಂದಿಗಳೊಂದಿಗೆ ಮಾತನಾಡಿ ಫ್ಯಾಕ್ಟರಿಯ ಕಾರ್ಯಚಟುವಟಿಕೆ ಕುರಿತು ಮಾಹಿತಿ ಪಡೆದುಕೊಂಡರು.ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಬಿಜೆಪಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು

ಸೆ.29 : ಪುತ್ತೂರಿನಲ್ಲಿ ಶುಭಾರಂಭಗೊಳ್ಳುತ್ತಿದೆ ಕ್ಯಾಮರಾ ಸೆಂಟರ್

Posted by Vidyamaana on 2023-09-27 10:02:13 |

Share: | | | | |


ಸೆ.29 : ಪುತ್ತೂರಿನಲ್ಲಿ ಶುಭಾರಂಭಗೊಳ್ಳುತ್ತಿದೆ ಕ್ಯಾಮರಾ ಸೆಂಟರ್

ಪುತ್ತೂರು :  ಇಲ್ಲಿನ  ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್‌ಸ್ಟ್ಯಾಂಡ್‌ನ ವಾಣಿಜ್ಯ ಸಂಕೀರ್ಣ ದ ಮೊದಲ ಮಹಡಿಯಲ್ಲಿ ಕ್ಯಾಮರ ಸೆಂಟರ್ ಸಂಸ್ಥೆಯು ಸೆ 29 ಶುಕ್ರವಾರ ದಂದು ಶುಭಾರಂಭಗೊಳ್ಳಲಿದೆ.

    ಕ್ಯಾಮೆರಾಗೆ ಸಂಬಧಿಸಿದ ಎಲ್ಲಾ ವಿಚಾರಗಳು ಒಂದೇ ಸೂರಿನಡಿಯಲ್ಲಿ ನೀಡಬೇಕೆಂಬ ಕನಸಿನೊಂದಿಗೆ, ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡು, ಕ್ಯಾಮರ ಸೆಂಟರ್ ಸಂಸ್ಥೆ ಶುಭಾರಂಭಕ್ಕೆ ಸಿದ್ದವಾಗಿದೆ. ಕ್ಯಾಮರ ಸೆಂಟರ್‌ನಲ್ಲಿ ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಕ್ಯಾಮೆರಾ ಸೇಲ್ಸ್ ಮತ್ತು ಸವೀಸ್ ಮಾಡಿಕೊಡಲಾಗುತ್ತದೆ ಎಂದು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಅರೆಶಿರೂರು ಹೆಲಿಪ್ಯಾಡ್ ಬಳಿ ಆಕಸ್ಮಿಕ ಬೆಂಕಿ; ಅಪಾಯದಿಂದ ಪಾರಾದ ಸಿಎಂ ಬೊಮ್ಮಾಯಿ

Posted by Vidyamaana on 2023-04-13 07:08:47 |

Share: | | | | |


ಅರೆಶಿರೂರು ಹೆಲಿಪ್ಯಾಡ್ ಬಳಿ ಆಕಸ್ಮಿಕ ಬೆಂಕಿ; ಅಪಾಯದಿಂದ ಪಾರಾದ ಸಿಎಂ ಬೊಮ್ಮಾಯಿ

ಬೈಂದೂರು: ಹೆಲಿಕಾಪ್ಟರ್ ಟೆಕ್ ಆಫ್ ಆಗುವ ಸಂದರ್ಭ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡ ಘಟನೆ ಎ. 13ರ ಗುರುವಾರ ಅರೆಶಿರೂರಿನಲ್ಲಿ ನಡೆದಿದೆ.ಸಿಎಂ ಬೊಮ್ಮಾಯಿ ಅರೆಶಿರೂರು ಹೆಲಿಪ್ಯಾಡ್ ಮೂಲಕ ಕೊಲ್ಲೂರು ಅಗಮಿಸಿದ ಸಂದರ್ಭ ಈ ಘಟನೆ ಸಂಭವಿಸಿದೆ.ಸಿಎಂ ಎಸ್ಕಾರ್ಟ್ ಹೋದ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಅವಘಡ ತಪ್ಪಿದೆ.

ಹೆಲಿಕಾಪ್ಟರ್ ಫ್ಯಾನ್ ಗಾಳಿಗೆ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಸ್ಥಳದಲ್ಲಿ  ಬೈಂದೂರು ಅಗ್ನಿಶಾಮಕ ದಳದವರಿಂದ ಕ್ಷೀಪ್ರ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಲಾಗಿದೆ. ‌ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದಂಪತಿ ಸಮೇತ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ದೇವಸ್ಥಾನದ ಪ್ರಾಂಗಣದ ಗರುಡಗಂಬಕ್ಕೆ ಪೂಜೆ ಸಲ್ಲಿಸಿದರು.

Recent News


Leave a Comment: