ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಸುದ್ದಿಗಳು News

Posted by vidyamaana on 2024-07-24 19:54:18 |

Share: | | | | |


ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಇದೀಗ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಲಾರಿ ಚಾಲಕ ಅರ್ಜುನ ಇನ್ನೂ ಪತ್ತೆ ಆಗಿರದ ಕಾರಣ ಶೋಧ ಕಾರ್ಯ ಮುಂದುವರೆದಿದೆ.

ಕಳೆದ 8 ದಿನಗಳಿಂದ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಎನ್ ಡಿ ಆರ್ ಎಫ್ ಎಚ್ ಡಿ ಆರ್ ಎಫ್ ತಂಡ ಸೇರಿದಂತೆ ಮಿಲ್ಟ್ರಿ ತಂಡ ಕೂಡ ಮಣ್ಣು ತೆರವು ಕಾರ್ಯಾಚರಣೆಗೆ ಆಗಮಿಸಿತ್ತು. ಈ ವೇಳೆ ನಿನ್ನೆಯವರೆಗೆ 8 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಹಲವರು ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ. ಟಿಂಬರ್ ಲಾರಿ ನದಿಯಲ್ಲಿ ಪತ್ತೆ ಆಗಿರುವ ಸ್ಥಿತಿಯಲ್ಲಿ ಇದೆ.ಕೇರಳ ಮೂಲದ ಲಾರಿ ನದಿಯಲ್ಲಿ ಇದೀಗ ಪತ್ತೆಯಾಗಿದೆ. ಲಾರಿ ಜೊತೆಗೆ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಲಾರಿ ಪತ್ತೆಯಾದ ಸ್ಥಳಕ್ಕೆ ಡಿಸಿ ಲಕ್ಷ್ಮಿಪ್ರಿಯ ಭೇಟಿ ನೀಡಿದ್ದಾರೆ. ಕಾರವಾರದ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣದ ಬಗ್ಗೆ ಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ

 Share: | | | | |


ಪುಣಚ: ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

Posted by Vidyamaana on 2024-04-14 16:27:29 |

Share: | | | | |


ಪುಣಚ: ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಕೊಟ್ಟ ಐದು ಗ್ಯಾರಂಟಿ ಭರವಸೆಯನ್ನು ಈಡೇರಿಸಿದ್ದೇವೆ ,ಕೊಟ್ಟ ಮಾತನ್ನು ಉಳಿಸಿಕೊಂಡ ನಾವು ಈ ಬಾರಿ ವೋಟು ಕೇಳುವಾಗ ಜನರ ಮುಂದೆ ಹೇಳುತ್ತಿದ್ದೇವೆ ಆದರೆ ಬಿಜೆಪಿಯವರಿಗೆ ಹೇಳಿಕೊಳ್ಳಲು ಏನಿದೆ ಎಂದು ಶಾಸಕರಾದ ಅಶೋಕ್ ರೈ ಯವರು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಅವರು ಪುಣಚಾ ದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಗ್ಯಾರಂಟಿಯ ಬಗ್ಗೆ ಅಪಹಾಸ್ಯ‌ಮಾಡುತ್ತಿದ್ದ ಬಿಜೆಪಿಯವರು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಹೇಳುತ್ತಿದ್ದರು ಆದರೆ ಗ್ಯಾರಂಟಿ ಪಡೆದುಕೊಳ್ಳಲು ಬಿಜೆಪಿಯವರು ಮೊದಲ ಸಾಲಿನಲ್ಲಿದ್ದರು ಎಂದು ವ್ಯಂಗ್ಯವಾಡಿದರು.

ಕಳೆದ ಏಳು ತಿಂಗಳಿಂದ ಕರ್ನಾಟಕ ಪ್ರತೀ‌ಮನೆಯಲ್ಲಿ ನೆಮ್ಮದಿಯ ವಾತಾವರಣ ಇದೆ, ಹಸಿವು ಮುಕ್ತ ರಾಜ್ಯವಾಗಿ ನಮ್ಮ‌ಕರ್ನಾಟಕ ಮುಂದೆ ಸಾಗುತ್ತಿದೆ. ಕಾಂಗ್ರೆಸ್ ಎಂದಿಗೂ ಬಡವರ ಪರ ಎಂಬುದನ್ನು ಗ್ಯಾರಂಟಿ ಸಾಭೀತು ಮಾಡಿದೆ. ಅಭಿವೃದ್ದಿ ವಿಚಾರದಲ್ಲಿ ಬಿಜೆಪಿ ಯದ್ದು ಶೂನ್ಯ ಸಾಧನೆಯಾಗಿದೆ ಎಂದು ಹೇಳಿದರು.

ಜನರಲ್ಲಿ‌ಭಯ ಹುಟ್ಟಿಸುವುದು ಬಿಜೆಪಿ ಹುಟ್ಟು ಗುಣ

ಪ್ರತೀ ಚುನಾವಣೆ ಬಂದಾಗ ಮನೆ ಮನೆಗೆ ತೆರಳಿ ಜನರಲ್ಲಿ‌ಭಯ ಹುಟ್ಟಿಸುವ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೆಣ್ಣು‌ಮಕ್ಕಳು ಮನೆಯಿಂದ ಹೊರಗೆ ಹೋಗುವಂತಿಲ್ಲ, ಗಂಡು‌ಮಕ್ಕಳನ್ನು ಜೈಲಿಗೆ ಹಾಕುತ್ತಾರೆ ಎಂದು ಅಫ್ರಚಾರ ಮಾಡುತ್ತಾರೆ. ಸಮಾಜದಲ್ಲಿ‌ಕೋಮು ವಿಷ ಬೀಜ ಬಿತ್ತಿ ಅಧಿಕಾರ ಪಡೆಯುವುದೇ ಬಿಜೆಪಿ ಅಜೆಂಡವಾಗಿದೆ ಎಂದು ಶಾಸಕರು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಇಂದು ಹೆಣ್ಣು‌ಮಕ್ಕಳು ಸ್ವಾಭಿಮಾನದಿಂದ ಬದಕುವಂತಾಗಿದೆ ಇದನ್ನು ಬಿಜೆಪಿಯವರಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕರು ಹೇಳಿದರು.


ಬೈಂದೂರು: ಯುವತಿ ನಾಪತ್ತೆ

Posted by Vidyamaana on 2023-09-22 16:21:57 |

Share: | | | | |


ಬೈಂದೂರು: ಯುವತಿ ನಾಪತ್ತೆ

ಉಡುಪಿ: ಬೈಂದೂರು ತಾಲೂಕು ಹಾಲ್ಕಲ್, ಜಡ್ಕಲ್ ಗ್ರಾಮದ ತುಂಬೆ ಮಕ್ಕಿ ನಿವಾಸಿ ಮೈತ್ರಿ (23) ಎಂಬವರು ಸೆಪ್ಟಂಬರ್ 20 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.


5 ಅಡಿ 3 ಇಂಚು ಎತ್ತರ, ದುಂಡು ಮುಖ, ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254-258233, ಮೊ.ನಂ9480805460, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08254-251031, ಮೊ.ನಂ.9480805434, ಕಂಟ್ರೋಲ್ ರೂಂ : 100, ದೂ.ಸಂಖ್ಯೆ: 0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಲ್ಲೂರು ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶೆಟ್ಟರ್ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಕಾಂಗ್ರೆಸ್‌ ಅಲರ್ಟ್ ಲಕ್ಷ್ಮಣ ಸವದಿ ಪಕ್ಷ ತೊರೆಯದಂತೆ ಪ್ಲಾನ್

Posted by Vidyamaana on 2024-02-03 22:30:51 |

Share: | | | | |


ಶೆಟ್ಟರ್ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಕಾಂಗ್ರೆಸ್‌ ಅಲರ್ಟ್ ಲಕ್ಷ್ಮಣ ಸವದಿ ಪಕ್ಷ ತೊರೆಯದಂತೆ ಪ್ಲಾನ್

ಬೆಳಗಾವಿ: ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯಿಂದ ಟಿಕೆಟ್ ಸಿಗದೆ ಮುನಿಸಿಕೊಂಡು ಕಾಂಗ್ರೆಸ್‌ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ (Jag

non

ish Shettar) ಕೊನೆಗೂ ಬಿಜೆಪಿ ಸೇರಿದ್ದಾರೆ. ಇನ್ನೊಂದೆಡೆ ಶೆಟ್ಟರ್ ಬಿಜೆಪಿ ಸೇರುತ್ತಿದ್ದಂತೆ ಇತ್ತ ಕಾಂಗ್ರೆಸ್ (Congress) ಅಲರ್ಟ್ ಆಗಿದೆ.ಹೌದು.. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಲರ್ಟ್ ಆಗಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಸೇರ್ಪಡೆಯಾದ ಬೆನ್ನಲ್ಲೇ ಮತ್ತೆ ಯಾವುದೇ ನಾಯಕರು ಬಿಜೆಪಿಯತ್ತ ಮುಖ ಮಾಡದಂತೆ ನೋಡಿಕೊಳ್ಳಲು ಪ್ಲಾನ್ ರೂಪಿಸಿದೆ. ಆ ಮೂಲಕ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಪ್ಲಾನ್ ಮಾಡಲಾಗಿದೆ.


ಈ ಹಿನ್ನೆಲೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಲು ಶ್ರಮಿಸಿದ ಶಾಸಕ ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್‌ನಲ್ಲಿಯೇ ಉಳಿಸಿಕೊಳ್ಳಲು ಕಾಂಗ್ರೆಸ್‌ ನಾಯಕರು ಪ್ಲಾನ್ ರೂಪಿಸಿದ್ದು, ಈಗಾಗಲೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಲಕ್ಷ್ಮಣ ಸವದಿ ಅವರಿಗೆ ಪಕ್ಷ ಬಿಡದಂತೆ ಸೂಚಿಸಿದ್ದಾರೆ. ಸಿಎಂ, ಡಿಸಿಎಂ ಸೇರಿದಂತೆ ಕೆಲ ಸಚಿವರು ಲಕ್ಷ್ಮಣ ಸವದಿ ಪಕ್ಷ ಬಿಡದಂತೆ ಎಚ್ಚರಿಕೆ ವಹಿಸಿದ್ದಾರೆ.ಎಲ್ಲಾ ಬೆಳವಣಿಗೆಗಳ ಮಧ್ಯೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಲಕ್ಷ್ಮಣ ಸವದಿಗೆ ಕರೆ ಮಾಡಿ ಮಾತನಾಡಿದ್ದು, ಕಾಂಗ್ರೆಸ್ ಪಕ್ಷ ಬಿಡದಂತೆ ಮತ್ತು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ರಣದೀಪ್ ಸಿಂಗ್ ಸುರ್ಜೇವಾಲಾ ಮಾತಿನಿಂದ ಸಂತಸಗೊಂಡಿರುವ ಶಾಸಕ ಲಕ್ಷ್ಮಣ ಸವದಿ, ಮುಂದಿನ ವಾರ ರಣದೀಪ್ ಸಿಂಗ್ ಸುರ್ಜೇವಾಲಾರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.


ಈಗಾಗಲೇ ದೆಹಲಿ ಮಟ್ಟದಿಂದಲೇ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರನ್ನು ಬಿಜೆಪಿ ನಾಯಕರು ಸಂಪರ್ಕ ಮಾಡಿದ್ದು, ಲೋಕಸಭಾ ಚುನಾವಣೆಗೂ ಮುನ್ನವೇ ಅವರನ್ನು ಬಿಜೆಪಿಗೆ ಕರೆತರಿಸಿ ಮತ್ತೆ ಸೂಕ್ತ ಸ್ಥಾನಮಾನ ನೀಡೋದು ಮತ್ತು ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಪ್ಲಾನ್ ರೂಪಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ಹೈಕಮಾಂಡ್ ಮತ್ತು ರಾಜ್ಯ ನಾಯಕರು ಕೂಡ ಎಚ್ಚರಿಕೆ ವಹಿಸಿದ್ದಾರೆ.ಇನ್ನು ಮುಂದಿನ ವಾರ ದೆಹಲಿಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಜೊತೆಗೆ ಲಕ್ಷ್ಮಣ ಸವದಿ ಮಾತುಕತೆ ನಡೆಸುವ ವೇಳೆ ಕೆಲವು ಬೇಡಿಕೆಗಳನ್ನು ಈಡೇರಿಸಲು ಲಕ್ಷ್ಮಣ ಸವದಿ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮುಕ್ಲೆನ್ ನಂಬುಂಡ ಆವಂದ್ – ಎಂದು ಅಂಡರ್ ವೇರ್ ಕಂಪೆನಿಗಳು ತಲೆ ಮೇಲೆ ಕೈಹೊತ್ತಿರೋದೇಕೆ?

Posted by Vidyamaana on 2023-09-16 22:03:10 |

Share: | | | | |


ಮುಕ್ಲೆನ್ ನಂಬುಂಡ ಆವಂದ್ – ಎಂದು ಅಂಡರ್ ವೇರ್ ಕಂಪೆನಿಗಳು ತಲೆ ಮೇಲೆ ಕೈಹೊತ್ತಿರೋದೇಕೆ?

ದೇಶದಲ್ಲಿ ಒಳಉಡುಪುಗಳ ಖರೀದಿಯಲ್ಲಿ ಭಾರಿ ಇಳಿಕೆಯಾಗಿದ್ದು, ಪ್ರಮುಖ ಒಳ ಉಡುಪು ಕಂಪೆನಿಗಳಾದ ಜಾಕಿ, ಡಾಲರ್ ಮತ್ತು ರೂಪಾ ಮಾರಾಟದಲ್ಲಿ ಭಾರಿ ಕುಸಿತ ಕಂಡಿದೆ ಎಂದು ವರದಿಯಾಗಿದೆ. ಡಿಸೆಂಬರ್ 2022 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಜಾಕಿ ಮತ್ತು ಲಕ್ಸ್ ಇಂಡಸ್ಟ್ರೀಸ್‌ನ ಮೂಲ ಕಂಪನಿಯಾದ ಪೇಜ್ ಇಂಡಸ್ಟ್ರೀಸ್‌ನ ಮಾರಾಟ ಕುಸಿದಿದ್ದು ,ರೂಪಾ & ಕಂ.ಪರಿಮಾಣದಲ್ಲಿ 52 ಪ್ರತಿಶತ ಕುಸಿತವನ್ನು ವರದಿ ಮಾಡಿದೆ. 


ಸಾಲು ಸಾಲು ಹಬ್ಬ, ಮದುವೆ ಸಮಾರಂಭಗಳು ಬರುತ್ತಿದ್ದಂತೆ ಜನರು ಬಟ್ಟೆ ಮಳಿಗೆಗಳತ್ತ ಮುಖ ಮಾಡುವುದನ್ನು ಕಾಣಬಹುದು. ಆದರೆ ಇತ್ತೀಚೆಗಷ್ಟೇ ಒಳ ಉಡುಪು ಕಂಪೆನಿಗಳ ತ್ರೈಮಾಸಿಕ ಅಂಕಿ ಅಂಶಗಳ ಪ್ರಕಾರ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಪಾರ್ಟಿ ವೇರ್ ನಿಂದ ನಾರ್ಮಲ್ ಮತ್ತು ಆಫೀಸ್ ವೇರ್ ವರೆಗೆ ಎಲ್ಲಾ ರೀತಿಯ ಬಟ್ಟೆ, ಶೂ, ಬ್ಯೂಟಿ ಉತ್ಪನ್ನಗಳನ್ನು ಜನರು ಖರೀದಿಸುತ್ತಿದ್ದಾರೆ. ಆದರೆ, ಒಳಉಡುಪು ಖರೀದಿಯಲ್ಲಿ ಭಾರೀ ಇಳಿಕೆ ಕಂಡಿದೆ. ಇದರಿಂದ ಜಾಕಿ, ಡಾಲರ್, ರೂಪಾ ಮುಂತಾದ ಒಳಉಡುಪು ಮಾರಾಟ ಮಾಡುವ ಕಂಪೆನಿಗಳ ಮಾರಾಟ ಕುಸಿದಿದೆ.


ಹಬ್ಬ ಹರಿದಿನಗಳಲ್ಲಿ ಶಾಪಿಂಗ್, ಫ್ಯಾಶನ್ ಬಟ್ಟೆಗಳ ಮಾರಾಟ ಹೆಚ್ಚಿದೆಯೇ ಹೊರತು ಒಳಉಡುಪುಗಳ ಮಾರಾಟ ಹೆಚ್ಚಿಲ್ಲ.ಡಿಸೆಂಬರ್ 2022 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಜಾಕಿ ಮತ್ತು ಲಕ್ಸ್ ಇಂಡಸ್ಟ್ರೀಸ್‌ನ ಮೂಲ ಕಂಪನಿಯಾದ ಪೇಜ್ ಇಂಡಸ್ಟ್ರೀಸ್‌ನ ಮಾರಾಟದಲ್ಲಿ ತ್ರೈಮಾಸಿಕ ಕುಸಿತ ಕಂಡುಬಂದಿದೆ. ಆದರೆ, ರೂಪಾ & ಕಂ. ಪರಿಮಾಣದಲ್ಲಿ 52 ಪ್ರತಿಶತ ಕುಸಿತವನ್ನು ವರದಿ ಮಾಡಿದೆ. ಕಳೆದ ಒಂದೂವರೆ ವರ್ಷದಲ್ಲಿ ರೂಪಾ ಷೇರುಗಳು ಶೇ.52ಕ್ಕೂ ಹೆಚ್ಚು ಕುಸಿದಿವೆ. ಪೇಜ್ ಇಂಡಸ್ಟ್ರೀಸ್ ಪ್ರಮಾಣವು 11 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ಷೇರಿನ ಬೆಲೆಯು ಐದು ಪ್ರತಿಶತದಷ್ಟು ಕಡಿಮೆಯಾಗಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಒಳಉಡುಪು ಖರೀದಿಯಲ್ಲಿ ಕೊಂಚ ಇಳಿಕೆಯಾಗಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಆದಾಯದಲ್ಲಿ ಶೇಕಡಾ 7.5 ರಷ್ಟು ಮತ್ತು ಪ್ರಮಾಣದಲ್ಲಿ ಶೇಕಡಾ 11.5 ಕುಸಿತವಾಗಿದೆ.ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಜನರು ಖರ್ಚು ಮಾಡಲು ಸಾಕಷ್ಟು ಹಣವನ್ನು ಹೊಂದಿಲ್ಲದಿರುವುದು ಮಾರಾಟದ ಕುಸಿತಕ್ಕೆ ಕಾರಣವಾಗಿರಬಹುದು. ಅಲ್ಲದೇ ಭಾರತೀಯರು ಆನ್ ಲೈನ್ ಮಾರ್ಕೆಟಿಂಗ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಆನ್‌ಲೈನ್ ಸ್ಟೋರ್‌ಗಳಲ್ಲಿ ಹೆಚ್ಚಿನ ರಿಯಾಯಿತಿಯನ್ನು ಪಡೆಯುತ್ತಿರುವುದೇ ಇದಕ್ಕೆ ಕಾರಣವಾಗಿರಬಹುದು ಎಂದು ತಿಳಿದುಬಂದಿದೆ.

ಭಾರತದಲ್ಲಿ ಒಳ ಉಡುಪು ಮಾರುಕಟ್ಟೆ:

ಯುರೋಮಾನಿಟರ್ ಇಂಟರ್‌ನ್ಯಾಶನಲ್ ವರದಿಯ ಪ್ರಕಾರ, ಭಾರತದಲ್ಲಿ ಒಳಉಡುಪು ಮಾರುಕಟ್ಟೆಯು $ 5.8 ಶತಕೋಟಿ ಅಂದರೆ ಭಾರತದ ರೂಪಾಯಿಗೆ ಹೋಲಿಸಿದರೆ 48,123 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಮಂಗಳೂರು ಜೆರೋಸಾ ಶಾಲೆಗೆ ಕಾಂಗ್ರೆಸ್ ನಿಯೋಗ ಭೇಟಿ: ಸತ್ಯಶೋಧನಾ ತನಿಖೆಗೆ ಆಗ್ರಹ

Posted by Vidyamaana on 2024-02-13 17:43:25 |

Share: | | | | |


ಮಂಗಳೂರು  ಜೆರೋಸಾ ಶಾಲೆಗೆ ಕಾಂಗ್ರೆಸ್ ನಿಯೋಗ ಭೇಟಿ: ಸತ್ಯಶೋಧನಾ ತನಿಖೆಗೆ ಆಗ್ರಹ

ಮಂಗಳೂರು: ನಗರದ ಜೆಪ್ಪುವಿನ ಸಂತ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದೂ ಧರ್ಮಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಮಾಜಿ ಸಚಿವರಾದ ಬಿ.ರಮಾನಾಥ ರೈ ಹಾಗೂ ವಿನಯ ಕುಮಾರ್ ಸೊರಕೆ ಅವರ ನೇತೃತ್ವದ ಜಿಲ್ಲಾ ಕಾಂಗ್ರೆಸ್ ನಿಯೋಗ ಇಂದು ಶಾಲೆಗೆ ಭೇಟಿ ನೀಡಿದೆ.



ಸಂಪೂರ್ಣ ಘಟನೆ ಹಾಗೂ ಬಳಿಕ ನಡೆದ ವಿದ್ಯಮಾನಗಳ ಕುರಿತಂತೆ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಸತ್ಯಶೋಧನಾ ತನಿಖೆಯಾಗಬೇಕು ಎಂದು ಒತ್ತಾಯಿಸಿದೆ.



ಬಳಿಕ ಮಾತನಾಡಿದ ಮಾಜಿ ಶಾಸಕ ರಮಾನಾಥ ರೈ, ಜೆರೋಸಾ ವಿದ್ಯಾಸಂಸ್ಥೆ ಘಟನೆ ಬಗ್ಗೆ ಆರೋಪ ದೊಡ್ಡ ಪ್ರಚಾರ ಆಗಿದೆ. ಅದರ ಸತ್ಯಾಸತ್ಯತೆ ವಿಮರ್ಶೆ ನಾವು ಮಾಡಬೇಕಿದೆ. ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಉಳಿಯಬೇಕು ಅನ್ನೋದು ನಮ್ಮ ಆಶಯ ಎಂದರು.

ಕೆಲವರು ಪ್ರಚೋದನೆ ಮಾಡಬಹುದು, ಆದರೆ ನಾವು ಆ ಕೂಟದಲ್ಲಿ ಇಲ್ಲ. ಇವತ್ತು ಸಂಸ್ಥೆಯ ಮುಖ್ಯಸ್ಥರ ಭೇಟಿಯಾಗಿ ಮಾತುಕತೆ ಮಾಡಿದ್ದೇವೆ. ಸರ್ಕಾರ ಇದರ ಬಗ್ಗೆ ಒಂದು ಸತ್ಯಶೋಧನ ಸಮಿತಿ ಮಾಡಬೇಕು. ಇದು ಘರ್ಷಣೆಗೆ ಕಾರಣ ಆಗಬಾರದು, ಅಹಿತಕರ ಘಟನೆ ಆಗಬಾರದು ಎಂದರು.

ಪುತ್ತಿಲ ಬಿಜೆಪಿ ಸೇರ್ಪಡೆ ಮಾಧ್ಯಮ ಸೃಷ್ಟಿಯೇ??

Posted by Vidyamaana on 2024-03-15 20:41:36 |

Share: | | | | |


ಪುತ್ತಿಲ ಬಿಜೆಪಿ ಸೇರ್ಪಡೆ ಮಾಧ್ಯಮ ಸೃಷ್ಟಿಯೇ??

ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಇನ್ನು‌ ಬಿಜೆಪಿ ಸೇರ್ಪಡೆಗೊಂಡಿಲ್ಲ ಎನ್ನುವುದು ಇದೀಗ ದೃಢಗೊಂಡಿದೆ.

ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಗೌಪ್ಯ ಸಭೆಯ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, "ಪುತ್ತಿಲ ಬಿಜೆಪಿ ಸೇರ್ಪಡೆಗೊಂಡಿರುವುದು ಮಾಧ್ಯಮ ಪ್ರಚಾರ" ಎಂದು ಹೇಳಿದರು.

ಈ ಮೂಲಕ ಬಿಜೆಪಿ ಹಾಗೂ ಪುತ್ತಿಲ ಪರಿವಾರ ಇನ್ನು ಒಂದು ಒಮ್ಮತಕ್ಕೆ ಬರಲು ವಿಫಲವಾಗಿದೆ ಎನ್ನುವುದು ದೃಢಗೊಂಡಿದೆ. ಎರಡು ಬಣಗಳು ಪರಸ್ಪರ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಬಿಜೆಪಿ ಜಿಲ್ಲಾಧ್ಯಕ್ಷರು ಪುತ್ತಿಲ ವಿಚಾರವಾಗಿ ಒಂದೇ ವಾಕ್ಯದಲ್ಲಿ ಮಾತು ಮುಗಿಸಿದರು.


ಉಳಿದಂತೆ ಚುನಾವಣೆ ಬಗ್ಗೆಯೇ ಮಾತುಕತೆ ನಡೆಯಿತು.

Recent News


Leave a Comment: