ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

ಸುದ್ದಿಗಳು News

Posted by vidyamaana on 2024-07-24 22:11:50 |

Share: | | | | |


ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

‌ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ ನೆರವು ನೀಡಿದ್ದ ಮಂಗಳೂರಿನ ಪತ್ರಕರ್ತರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದರು.ಶಿರೂರು ಗುಡ್ಡ ದುರಂತದಲ್ಲಿ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃತದೇಹ 8 ದಿನಗಳ ಬಳಿಕ ಮಂಗಳವಾರ ಸಿಕ್ಕಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಮನೆಯಿದ್ದ ಜಾಗಕ್ಕೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲು ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್, ಆರಿಫ್ ಯು.ಆರ್. ಗಿರೀಶ್ ಮಳಲಿ ಹಾಗೂ ಶಿವಶಂಕರ್ ನೆರವಾಗಿದ್ದರು

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಂದ ಪತ್ರಕರ್ತರ ಮಾಹಿತಿ ಪಡೆದು ಕಚೇರಿಯಲ್ಲಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರು ಜಿಲ್ಲಾಧಿಕಾರಿಯವರಿಗೆ ಪತ್ರಕರ್ತರ ಪರಿಚಯ ಮಾಡಿಕೊಟ್ಟರು.


ಬಳಿಕ ಮಾತಾಡಿದ ಜಿಲ್ಲಾಧಿಕಾರಿ ಅವರು, ನಿಮ್ಮ ಈ ಕಾರ್ಯ ಶ್ಲಾಘನೀಯವಾಗಿದೆ. ಇದೊಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಏನಾದರೂ ಅಗತ್ಯ ನೆರವು ಬೇಕಾದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ನಿಮ್ಮಂತಹ ಉತ್ಸಾಹಿ ತರುಣರ ಅವಶ್ಯಕತೆ ಸಮಾಜಕ್ಕೆ ಇದೆ ಎಂದು ಬೆನ್ನುತಟ್ಟಿದರು. ಅಲ್ಲದೇ ಶಿರೂರು ಮತ್ತು ಉಳುವರೆ ಗ್ರಾಮದ ಸದ್ಯದ ಸ್ಥಿತಿಗತಿಯ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದರು

 Share: | | | | |


ಮಡಿಕೇರಿ- ಸೋಮವಾರಪೇಟೆ ಮಾರ್ಗ ಬೆಂಗಳೂರಿಗೆ ಬಸ್‌ ಸಂಚಾರಕ್ಕೆ ಚಾಲನೆ

Posted by Vidyamaana on 2024-06-14 16:21:36 |

Share: | | | | |


ಮಡಿಕೇರಿ- ಸೋಮವಾರಪೇಟೆ ಮಾರ್ಗ ಬೆಂಗಳೂರಿಗೆ ಬಸ್‌ ಸಂಚಾರಕ್ಕೆ ಚಾಲನೆ

ಮಡಿಕೇರಿ: ಕೆಎಸ್‌ಆರ್‌ಟಿಸಿಯ ನೂತನ ಅಶ್ವಮೇಧ ಬಸ್‍ಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಗುರುವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಮಡಿಕೇರಿ-ಸೋಮವಾರಪೇಟೆ-ಅರಕಲಗೋಡು-ಚೆನ್ನರಾಯಪಟ್ಟಣ ಮಾರ್ಗ ಪ್ರತಿ ದಿನ ಬೆಳಗ್ಗೆ 10.15ಕ್ಕೆ ಹೊರಟು ಸಂಜೆ 4.45 ಗಂಟೆಗೆ ಬೆಂಗಳೂರು ತಲುಪಲಿದೆ.

ಮಾತ್ರೆ ಪ್ಯಾಕೆಟ್ ಮೇಲೆ ಕೆಂಪು ಲೈನ್‌ ಏಕೆ? ಇದರ ಅರ್ಥ ಏನು? ನಿಮಗೆ ಗೊತ್ತಾ

Posted by Vidyamaana on 2024-03-13 17:14:47 |

Share: | | | | |


ಮಾತ್ರೆ ಪ್ಯಾಕೆಟ್ ಮೇಲೆ ಕೆಂಪು ಲೈನ್‌ ಏಕೆ? ಇದರ ಅರ್ಥ ಏನು? ನಿಮಗೆ ಗೊತ್ತಾ

ಸಾಮಾನ್ಯವಾಗಿ, ಅನೇಕ ಜನರು ಅನಾರೋಗ್ಯಕ್ಕೆ ಒಳಗಾದಾಗ, ಅವರು ವೈದ್ಯರ ಬಳಿಗೆ ಹೋಗದೆ ನೇರವಾಗಿ ಮೆಡಿಕಲ್ ಸ್ಟೋರ್‌ಗೆ ಹೋಗಿ ಮಾತ್ರೆಗಳನ್ನು ಖರೀದಿಸುತ್ತಾರೆ. ಕೆಲವೊಮ್ಮೆ ಔಷಧಿಯನ್ನು ವೈದ್ಯರಿಗೆ ತೋರಿಸಿದ ನಂತರ ತೆಗೆದುಕೊಳ್ಳಲಾಗುತ್ತದೆ.ನೀವು ನೇರವಾಗಿ ಮೆಡಿಕಲ್ ಸ್ಟೋರ್‌ಗೆ ಹೋಗಿ ನಿಮ್ಮ ಸಮಸ್ಯೆಯನ್ನು ಗುಣಪಡಿಸುವ ಔಷಧಿಯನ್ನು ಪಡೆದರೂ, ಕೆಲವೊಮ್ಮೆ ನೀವು ಗಂಭೀರ ಅಡ್ಡಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ನೋವು ನಿವಾರಕಗಳು, ಆಯಂಟಿಬಯೋಟಿಕ್‌ಗಳು ಮುಂತಾದ ತಕ್ಷಣದ ನೋವು ನಿವಾರಕ ಮಾತ್ರೆಗಳನ್ನು ಖರೀದಿಸುವಾಗ ಮಾತ್ರೆ ಪ್ಯಾಕೆಟ್‌ನಲ್ಲಿ ಕೆಂಪು ಗೆರೆಗಳನ್ನು ನೀವು ಗಮನಿಸಿರಬಹುದು. ಆದರೆ ಈ ಕೆಂಪು ರೇಖೆ ಏಕೆ ಇರುತ್ತದೆ ಎಂದು ನೀವೂ ಎಂದಾದರೂ ಯೋಚಿಸಿದ್ದೀರಾ..? ಹಾಗಾದರೆ ಇಲ್ಲಿ ತಿಳಿಯಿರಿ..


ಮಾತ್ರೆ ಪ್ಯಾಕೆಟ್‌ನಲ್ಲಿರುವ ಕೆಂಪು ರೇಖೆಯ ಅರ್ಥವೇನು?

ವಾಸ್ತವವಾಗಿ, ಮಾತ್ರೆ ಪ್ಯಾಕೆಟ್‌ನಲ್ಲಿ ಕೆಂಪು ರೇಖೆ ಎಂದರೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾತ್ರೆ ಮಾರಾಟ ಮಾಡಬೇಡಿ ಅಥವಾ ವೈದ್ಯರ ಸಲಹೆಯಿಲ್ಲದೆ ಬಳಸಬೇಡಿ. ಆದ್ದರಿಂದ, ಪ್ರತಿಜೀವಕಗಳ ದುರುಪಯೋಗವನ್ನು ತಡೆಗಟ್ಟಲು, ಔಷಧಿಗಳ ಮೇಲೆ ಕೆಂಪು ರೇಖೆಯನ್ನು ನೀಡಲಾಗುತ್ತದೆ. ಆರೋಗ್ಯ ಸಚಿವಾಲಯವು ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದೆ.ಔಷಧಿಗಳು, ವಿಶೇಷವಾಗಿ ಪ್ಯಾಕೇಜಿಂಗ್‌ನಲ್ಲಿ ಕೆಂಪು ಲಂಬ ರೇಖೆಯನ್ನು ಹೊಂದಿರುವ ಪ್ರತಿಜೀವಕಗಳನ್ನು ಅರ್ಹ ವೈದ್ಯರನ್ನು ಸಂಪರ್ಕಿಸದೆ ಎಂದಿಗೂ ಸೇವಿಸಬಾರದು. ಜಾಗೃತರಾಗಿರಿ, ಸುರಕ್ಷಿತವಾಗಿರಿಕೆಂಪು ರೇಖೆಯ ಹೊರತಾಗಿ, ಔಷಧದ ಮೇಲೆ ಅನೇಕ ಉಪಯುಕ್ತ ವಿಷಯಗಳನ್ನು ಬರೆಯಲಾಗಿದೆ. ಅವರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಕೆಲವು ಔಷಧಿಗಳ ಪ್ಯಾಕೆಟ್ ಮೇಲೆ Rx ಎಂದು ಬರೆಯಲಾಗಿದೆ. ಅಂದರೆ ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳಬೇಕು. ಕೆಲವು ಔಷಧಿಗಳ ಪ್ಯಾಕೆಟ್ ಮೇಲೆ XRx ಎಂದು ಬರೆಯಲಾಗಿದೆ. ಇದರರ್ಥ ಔಷಧಿಯನ್ನು ವೈದ್ಯರು ಮಾತ್ರ ಸೂಚಿಸಬಹುದು. ವೈದ್ಯರು ಈ ಔಷಧಿಯನ್ನು ನೇರವಾಗಿ ರೋಗಿಗೆ ನೀಡಬಹುದು. ವೈದ್ಯರು ಬರೆದ ಪ್ರಿಸ್ಕ್ರಿಪ್ಷನ್ ಇದ್ದರೂ, ರೋಗಿಯು ಅದನ್ನು ಯಾವುದೇ ಮೆಡಿಕಲ್ ಸ್ಟೋರ್‌ನಿಂದ ಖರೀದಿಸಲು ಸಾಧ್ಯವಿಲ್ಲ.

ಸುಳ್ಯ : ಬೈಕ್ - ಕಾರು ಭೀಕರ ಅಪಘಾತ

Posted by Vidyamaana on 2023-05-22 15:57:01 |

Share: | | | | |


ಸುಳ್ಯ : ಬೈಕ್ - ಕಾರು ಭೀಕರ ಅಪಘಾತ

ಸುಳ್ಯ:  ಇಲ್ಲಿನ ಪಾಲಡ್ಕ ಬಳಿ ಬೈಕ್ ಮತ್ತು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಕೆ.ವಿ.ಜಿ. ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಸ್ಥಳದಲ್ಲೆ ಮೃತಪಟ್ಟ ಘಟನೆ ಮೇ 22 ರಂದು ವರದಿಯಾಗಿದೆ.

ಸುಳ್ಯ ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂಭ್ರಮ್ ಮತ್ತು ಸ್ವರೂಪ್ ಸುಳ್ಯ ಕಡೆಯಿಂದ ಸಂಪಾಜೆ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಪೆರಾಜೆ ಕಡೆಯಿಂದ ಸುಳ್ಯ ಕಡೆಗೆ ಕಾರು ಬರುತ್ತಿತ್ತು. ಪಾಲಡ್ಕದಲ್ಲಿ ಪರಸ್ಪರ ಗುದ್ದಿದ ಪರಿಣಾಮವಾಗಿ ಕೆವಿಜಿ ಆಯುರ್ವೇದ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿ ಚಿಕ್ಕಬಳ್ಳಾಪುರದ ಸ್ವರೂಪ್ ಎಂಬವರು ಸ್ಥಳದಲ್ಲೇ ಮೃತಪಟ್ಟರು.

ಇನ್ನೋರ್ವ ಸವಾರ ಸಂಭ್ರಮ್ ಎಂಬವರಿಗೆ ಗಾಯಗಳಾಗಿದ್ದು ಸುಳ್ಯ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರೀ ಭೂಕುಸಿತಕ್ಕೆ ಮತ್ತೆ ನಲುಗಿದ ಶಿರಾಡಿ ಘಾಟ್: ಹಲ ವಾಹನಗಳು ಜಖಂ! ಶಿರಾಡಿ ಘಾಟ್ ರಸ್ತೆ ಸಂಪೂರ್ಣ ಬಂದ್!

Posted by Vidyamaana on 2024-07-31 19:28:50 |

Share: | | | | |


ಭಾರೀ ಭೂಕುಸಿತಕ್ಕೆ ಮತ್ತೆ ನಲುಗಿದ ಶಿರಾಡಿ ಘಾಟ್: ಹಲ ವಾಹನಗಳು ಜಖಂ! ಶಿರಾಡಿ ಘಾಟ್ ರಸ್ತೆ ಸಂಪೂರ್ಣ ಬಂದ್!

ಪುತ್ತೂರು: ಶಿರಾಡಿ ಘಾಟಿನ ಮಾರೇನಹಳ್ಳಿಯಲ್ಲಿ ಮತ್ತೆ ಭಾರೀ ಭೂಕುಸಿತ ಸಂಭವಿಸಿದೆ.


ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿರುವ ಶಿರಾಡಿ ಘಾಟ್ ರಸ್ತೆ, ಇದೀಗ ಮತ್ತೆ ಭೂಕುಸಿತಕ್ಕೆ ಒಳಗಾಗಿದೆ. ಮಾರೇನಹಳ್ಳಿಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದಾಗಿ ಹಲವು ವಾಹನಗಳು ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ವಿವರ ಇನ್ನಷ್ಟೇ ಲಭ್ಯವಾಗಿದೆ.


ಪುತ್ತೂರು: ಹಿಂದೂ ಸಂಘಟನೆಯ ನಾಲ್ವರು ಕಾರ್ಯಕರ್ತರ ಗಡಿಪಾರು

Posted by Vidyamaana on 2023-05-08 17:31:02 |

Share: | | | | |


ಪುತ್ತೂರು: ಹಿಂದೂ ಸಂಘಟನೆಯ ನಾಲ್ವರು ಕಾರ್ಯಕರ್ತರ ಗಡಿಪಾರು

ಪುತ್ತೂರು: ಕ್ರಿಮಿನಲ್ ಹಿನ್ನೆಲೆಯುಳ್ಳ ನಾಲ್ಕು ಮಂದಿಯನ್ನು ಪುತ್ತೂರಿನಿಂದ ಗಡಿಪಾರು ಮಾಡಲಾಗಿದೆ.ಹಿಂದೂ ಸಂಘಟನೆ ಕಾರ್ಯಕರ್ತರಾಗಿರುವ ಬನ್ನೂರು ಮೂಲದ ಪ್ರಜ್ವಲ್, ಪ್ರತಾಪ್, ಜಗ್ಗ ಯಾನೆ ಅಚ್ಚು, ಅವಿನಾಶ್ ಅವರು ಗಡಿಪಾರುಆಗಿದ್ದಾರೆ.ಇವರು ಚುನಾವಣೆಯ ಸಂದರ್ಭ ಶಾಂತಿ ಭಂಗ ಮಾಡಬಹುದೆಂಬ ನಿಟ್ಟಿನಲ್ಲಿ ನಗರ ಠಾಣೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಅತ್ಯಾಚಾರ ಆರೋಪಿ ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಅರೆಸ್ಟ್

Posted by Vidyamaana on 2024-05-31 04:35:17 |

Share: | | | | |


ಅತ್ಯಾಚಾರ ಆರೋಪಿ ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಅರೆಸ್ಟ್

ಬೆಂಗಳೂರು (ಮೇ 31): ಹಾಸನದಲ್ಲಿ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆನ್ನಲಾದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal Revanna) ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದು, ಕೊನೆಯೂ 34 ದಿನಗಳ ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರು ವಿಮಾನ (Munich to Bengaluru flight) ನಿಲ್ದಾಣಕ್ಕೆ ಮಧ್ಯರಾತ್ರಿ 12.48ಕ್ಕೆ ಆಗಮಿಸಿದ ಬೆನ್ನಲ್ಲಿಯೇ ವಿಶೇಷ ತನಿಖಾ ತಂಡ (Special investigation Team -SIT) ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಪ್ರಜ್ವಲ್ ರೇವಣ್ಣ ಅವರನ್ನು ವಿವಿಐಪಿ ಗೇಟ್‌ನಲ್ಲಿಯೇ ಬಂಧಿಸಿದ ಎಸ್‌ಐಟಿ ಪೊಲೀಸರು ಅಲ್ಲಿಂದ ಬೆಂಗಳೂರಿನತ್ತ ಹೊರಡಲು ಅನುಕೂಲ ಆಗುವಂತೆ ಟ್ರಾಫಿಕ್ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿ ಎಲ್ಲಿಯೂ ಟ್ರಾಫಿಕ್ ಆಗಂದತೆ ವಾಹನಗಳನ್ನು ತೆರವು ಮಾಡಲಾಗಿದೆ. ಇದಕ್ಕಾಗಿ ಎಸ್‌ಐಟಿ ಮುಖ್ಯಸ್ಥ ಬಿಕೆ ಸಿಂಗ್‌ ಅವರು ಬೆಂಗಳೂರು ಪೊಲೀಸ್‌ ಕಮಿಷನರ್‌ ಬಿ. ದಯಾನಂದ್‌ ಅವರೊಂದಿಗೆ ಚರ್ಚೆ ನಡೆಸಿ ಬೆಂಗಳೂರಿಗೆ ಕರೆತರಲು ವ್ಯವಸ್ಥೆ ಮಾಡಿಕೊಂಡಿದ್ದಾರೆ

Recent News


Leave a Comment: