ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಸುದ್ದಿಗಳು News

Posted by vidyamaana on 2024-07-25 09:34:49 |

Share: | | | | |


ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ

 Share: | | | | |


ಇಂದಿನಿಂದ ರಾಜ್ಯದಲ್ಲಿ ಹೊಸ ರೂಲ್ಸ್ ಜಾರಿ

Posted by Vidyamaana on 2023-08-01 01:58:11 |

Share: | | | | |


ಇಂದಿನಿಂದ ರಾಜ್ಯದಲ್ಲಿ ಹೊಸ ರೂಲ್ಸ್ ಜಾರಿ

ಬೆಂಗಳೂರು : ಆಗಸ್ಟ್.1ರ ಇಂದಿನಿಂದ ಹಲವು ಹೊಸ ನಿಯಮಗಳು ಜಾರಿಗೊಳ್ಳಲಿದ್ದಾವೆ. ಜನಜೀವನದ ಮೇಲೆ ಪರಿಣಾಮ ಬೀರುವ ಸರ್ಕಾರದ ಒಂದಷ್ಟು ತೀರ್ಮಾನಗಳು ಇಂದಿನಿಂದ ಜಾರಿಗೆ ಬರಲಿದ್ದಾರೆ. ಕೆಲವು ತೀರ್ಮಾನ ಸಮಾಧಾನ ತಂದರೇ, ಮತ್ತೆ ಕೆಲವು ಬಿಸಿ ಮುಟ್ಟಿಸಲಿವೆ. ಹೊಸ ಸರ್ಕಾರದ ಗೃಹ ಜ್ಯೋತಿಯ ಅನುಭವ, ಆಗಸ್ಟ್ ತಿಂಗಳ ಇಂದಿನಿಂದ ಜನಸಾಮಾನ್ಯರ ಅರಿವಿಗೆ ಬರಲಿದೆಹಾಗಾದ್ರೇ ಇಂದಿನಿಂದ ಹೊಸ ನಿಯಮಗಳೇನು? ಎನ್ನುವ ಬಗ್ಗೆ ಮುಂದೆ ಓದಿ.


ಇಂದಿನಿಂದ ವಿವಿಧ ನಿಯಮಗಳಲ್ಲಿ ಬದಲಾವಣೆಯಾಗಲಿವೆ. ಹಲವು ದುಬಾರಿಯಾದ್ರೇ, ಮತ್ತೆ ಕೆಲವು ಖುಷಿ ನೀಡುವಂತ ಸಂಗತಿಗಳು ಇದ್ದಾವೆ. ಆದಾಯ ತೆರಿಗೆ ಪಾವತಿಯ ಗಡುವು ಮುಕ್ತಾಯಗೊಂಡಿದೆ. ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಕರೆಂಟ್ ಫ್ರೀ ಆಗಲಿದೆ.

ವಿದ್ಯುತ್ ಉಚಿತ

ಆಗಸ್ಟ್ 1ರಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆಮಾಡಿದಂತೆ ಜೂನ್.18ರಿಂದ ಜುಲೈ.27ರ ಒಳಗಾಗಿ ನೋಂದಾಯಿಸಿಕೊಂಡಂತ ಗ್ರಾಹಕರಿಗೆ ವಿದ್ಯುತ್ ಉಚಿತವಾಗಲಿದೆ. 200 ಯೂನಿಟ್ ವರೆಗೆ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ದೊರೆಯಲಿದೆ.

ಶೇ.10ರಷ್ಟು ಹೋಟೆಲ್ ತಿನಿಸಿ ದುಬಾರಿ

ದಿನೇ ದಿನೇ ಹೆಚ್ಚಳವಾಗುತ್ತಿರುವಂತ ಅಗತ್ಯ ವಸ್ತುಗಳ ಬೆಲೆಯ ಕಾರಣದಿಂದ ನೀವು ರುಚಿ ರುಚಿಯಾಗಿ ಸವಿಯುವಂತ ಹೋಟೆಲ್ ತಿಂಡಿ-ತಿನಿಸುಗಳು ದುಬಾರಿಯಾಗಲಿವೆ. ಆಗಸ್ಟ್ 1ರ ಇಂದಿನಿಂದ ಜಾರಿಗೆ ಬರುವಂತೆ ಶೇ.10ರಷ್ಟು ತಿನಿಸುಗಳ ಬೆಲೆ ಹೆಚ್ಚಳವಾಗಲಿದೆ.

ಹಾಲಿನ ದರ 3 ರೂ ಹೆಚ್ಚಳ

ಇಂದಿನಿಂದ ನಂದಿನಿ ಹಾಲಿನ ದರ 3 ರೂಹಚ್ಚಳವಾಗಲಿದೆ. ಹಾಲು ಉತ್ಪಾದಕರ ಒಕ್ಕೂಟದ ಒತ್ತಡಕ್ಕೆ ಮಣಿದಿರುವಂತ ರಾಜ್ಯ ಸರ್ಕಾರ, ಈ ನಿರ್ಧಾರವನ್ನು ಕೈಗೊಂಡಿದೆ. ಒಂದುದು ಹಾಲು ಮಹಾಮಂಡಳದಲ್ಲಿ ಪ್ರತಿ ಲೀಟರ್ ಹಾಲಿಗೆ ಒಂದೊಂದು ದರ ಇದ್ದು, ಹಾಲಿನ ದರಕ್ಕೆ ಹೆಚ್ಚುವರಿ ಮೂರು ರೂ ಸೇರಿಸಿ ಇಂದಿನಿಂದ ಮಾರಾಟವಾಗಲಿದೆ. ಆದರೇ ಈ ಹೆಚ್ಚುವರಿ ದರ ಹಾಲು ಉತ್ಪಾದಕರಿಗೆ ನೀಡಬೇಕು ಎಂಬುದಾಗಿ ಸರ್ಕಾರ ಷರತ್ತು ವಿಧಿಸಿದೆ.


ಹೆಚ್ಚಲಿಗೆ ಮೋಟಾರು ಟ್ಯಾಕ್ಸ್


ರಾಜ್ಯ ವಿಧಾನಸಭೆಯಲ್ಲಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕವನ್ನು ಮಂಡಿಸಿ ಉಭಯ ಸದನಗಳಲ್ಲೂ ಒಪ್ಪಿಗೆ ಪಡೆಯಲಾಗಿತ್ತು. ಇದಕ್ಕೆ ರಾಜ್ಯಪಾಲರು ಅಂಕಿತ ಕೂಡ ಹಾಕಿದ್ದಾರೆ. ಈ ತಿದ್ದುಪಡಿ ನಿಯಮದಂತೆ ಮೋಟಾರು ವಾಹನಗಳ ತೆರಿಗೆ ದರಗಳು ಹೆಚ್ಚಾಗಲಿವೆ.ಅತಿ ಭಾರದ ಸರಕು ವಾಹನಗಳು, ಮೋಟಾರು ಕ್ಯಾಬ್, ಶಾಲಾ ಕಾಲೇಜು ವಾಹನಗಳ ತೆರಿಗೆ ಹೆಚ್ಚಳವಾಗಲಿದೆ. ಶಾಲಾ ಮಕ್ಕಳು ತೆರಳುವ ಶಾಲೆಯ ಒಡೆತನದ ವಾಹನಗಳ ಪ್ರತಿ ಚದರ ಮೀಟರ್ ತೆರಿಗೆಯನ್ನು 20 ರೂ ನಿಂದ 100ಕ್ಕೆ ಏರಿಕೆ ಮಾಡಲಾಗಿದೆ.


ಐಟಿಆರ್ ವೈಫಲ್ಯಕ್ಕೆ ಇಂದಿನಿಂದ ದಂಡ ಫಿಕ್ಸ್


ನೀವು ಆದಾಯ ತೆರಿಗೆ ಪಾವತಿದಾರರು ಆಗಿದ್ದರೇ, ಜುಲೈ.31ರ ಒಳಗಾಗಿ ಪಾವತಿಸದೇ ಇದ್ದರೇ, ಇಂದಿನಿಂದ ದಂಡ ಪಾವತಿಸುವುದು ಫಿಕ್ಸ್ ಆಗಿದೆ. ನಿಗದಿತ ಅವಧಿಯ ಒಳಗಾಗಿ ಐಟಿಆರ್ ಫೈಲ್ ಮಾಡದೇ ಇದ್ದವರು 5,000ದವರೆಗೆ ದಂಡ ತೆರಬೇಕಿದೆ.

ರಾಜ್ಯದಲ್ಲಿ ಎತ್ತರದ ಕಟ್ಟಡಕ್ಕೆ ಶುಲ್ಕ

ಇನ್ನೂ ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ಅಧಿನಿಯಮ 2023ರಕ್ಕೆ ಶಾಸನಸಭೆ ಒಪ್ಪಿಗೆ ನೀಡಲಾಗಿತ್ತು. ಇದು ರಾಜ್ಯಪತ್ರದಲ್ಲಿ ಕೂಡಪ್ರಕಟಲಾಗಿದೆ. ಈ ಹಿನ್ನಲೆಯಲ್ಲಿ ಇನ್ಮುಂದೆ ರಾಜ್ಯ ಅಗ್ನಿಶಾಮ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಾಗಿದೆ. ಅಂದರೆ ರಾಷ್ಟ್ರೀಯ ಕಟ್ಟಡ ಸಂಹಿತೆಯಲ್ಲಿ ಎತ್ತರದ ಕಟ್ಟಡ ಅಂದರೇ ಯಾವುದೆಂದು ಪ್ರಸ್ತಾಪವಿದೆ. ಅದರ ಪ್ರಕಾರ ನಿರಾಕ್ಷೇಪಣಾ ಪತ್ರ ಪಡೆಯುವಾಗ ನಿಯಮ ಪಾಲಿಸುವ ಜತೆ, ಕಟ್ಟ ಮಾಲೀಕರು ಶುಲ್ಕವನ್ನು ಕಟ್ಟಬೇಕಾಗುತ್ತದೆ

ಅಂತ್ಯಕ್ರಿಯೆಗೆ ಬರುವಂತೆ ಪ್ರಿಯತಮೆಗೆ ಆಹ್ವಾನಿಸಿ ಲೈವ್ ವಿಡಿಯೋ ಮಾಡುತ್ತಲೇ ಪ್ರಾಣ ಬಿಟ್ಟ ಪ್ರೇಮಿ

Posted by Vidyamaana on 2023-08-13 08:58:35 |

Share: | | | | |


ಅಂತ್ಯಕ್ರಿಯೆಗೆ ಬರುವಂತೆ ಪ್ರಿಯತಮೆಗೆ ಆಹ್ವಾನಿಸಿ ಲೈವ್ ವಿಡಿಯೋ ಮಾಡುತ್ತಲೇ ಪ್ರಾಣ ಬಿಟ್ಟ ಪ್ರೇಮಿ

ಬೆಂಗಳೂರು: ಪ್ರೇಮಿಯೊಬ್ಬ ವಿಡಿಯೋ ರೆಕಾರ್ಡ್ ಮಾಡಿ ತನ್ನ ಅಂತ್ಯಕ್ರಿಯೆಗೆ ಪ್ರಿಯತಮೆಗೆ ಆಹ್ವಾನ ನೀಡಿ ಲೈವ್​ನಲ್ಲೇ ಪ್ರಾಣಬಿಟ್ಟಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಿರಣ್(22) ಎಂಬ ಯುವಕ ಲೈವ್ ವಿಡಿಯೋ ಮಾಡಿ ಪ್ರಾಣ ಬಿಟ್ಟಿದ್ದಾನೆ. ಆಗಸ್ಟ್​​​ 9 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಯುವಕ ಕಿರಣ್ ತನ್ನ ಲೈವ್ ವಿಡಿಯೋದಲ್ಲಿ ತನ್ನ ಲವ್ವರ್​ಗೆ ತನ್ನ ಅಂತ್ಯಕ್ರಿಯೆಗೆ ಬರುವಂತೆ ಆಹ್ವಾನ ನೀಡಿದ್ದಾನೆ. ಹಾಗೂ ಅದೇ ಲೈವ್ ವಿಡಿಯೋದಲ್ಲಿ ಪ್ರಾಣಬಿಟ್ಟಿದ್ದಾನೆ. “ಹಾಯ್” ಬಂಗಾರಿ ನಿಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದೇನೆ ಕಣೆ, “ನಿಮ್ಮ ಅಪ್ಪ ಹೇಳಿದ ಹಾಗೆ ಒಳ್ಳೆಯ ಹುಡುಗನನ್ನ ನೋಡಿ ಮದುವೆ ಆಗು”. ನಿನಗೆ ಹುಟ್ಟಿದ ಮಗುವಿಗೆ ನನ್ನ ಹೆಸರೇ ಇಡಬೇಕು. ಇದು ನನ್ನ ಆಕಸ್ಮಿಕ ಸಾವು. ದಯವಿಟ್ಟು ಅಂತ್ಯಕ್ರಿಯೆಗೆ ಬಂದು ಹೋಗು. ನನ್ನ ಸಾವಿಗೆ ನಿನ್ನ ತಂಗಿಯನ್ನು ಕರೆದುಕೊಂಡು ಬಾ. ಒಳ್ಳೆಯದಾಗಲಿ ನಿಮ್ಮ ಕುಟುಂಬಕ್ಕೆ. ಹೀಗೆ ಚೆನ್ನಾಗಿರಿ ಎಂದು ಕಿರಣ್ ಲೈವ್​​ನಲ್ಲೇ ಕೈ ಮುಗಿದು ಪ್ರಾಣ ಬಿಟ್ಟಿದ್ದಾನೆ.ಮೃತ ಕಿರಣ್, ಆಗಸ್ಟ್ 3ರಂದು ತಾನು ಪ್ರೀತಿಸುತ್ತಿದ್ದ ಹುಡುಗಿಗೆ ರಿಂಗ್, ಕಾಲು ಚೈನ್ ಕೊಡಿಸಿದ್ದನಂತೆ. ಈ ವಿಷಯ ತಿಳಿದ ಯುವತಿಯ ತಂದೆ ಇವರಿಬ್ಬರ  ಪ್ರೀತಿಯನ್ನು       ನಿರಾಕರಿಸಿದ್ದರು. ಹೀಗಾಗಿ ಯುವತಿ ಮನೆಯವರೆ ಏನೋ ಮಾಡಿ ನನ್ನ ಮಗನ ಸಾವಿಗೆ ಕಾರಣರಾಗಿದ್ದಾರೆಂದು ಕಿರಣ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇನ್ನು ರೇಬೀಸ್ ರೋಗ ಉಲ್ಬಣಗೊಂಡು ಯುವಕ ನಿಮಾನ್ಸ್ ಸೇರಿದ್ದ. ನಿಮಾನ್ಸ್ ಆಸ್ಪತ್ರೆಯ ಬೆಡ್ ಮೇಲೆಯೇ ವಿಡಿಯೋ ಮಾಡುತ್ತ ಕಿರಣ್ ಪ್ರಾಣಬಿಟ್ಟಿದ್ದಾನೆ.

ನಾಳೆ ಕಾಂಗ್ರೆಸ್ ನಿಂದ ನನ್ನ ಬೂತ್ ನಾನು ಅಭ್ಯರ್ಥಿ ಅಭಿಯಾನ - ಏನಿದು ಕೈ ಹೊಸ ಪ್ರಯೋಗ

Posted by Vidyamaana on 2023-05-05 14:23:23 |

Share: | | | | |


ನಾಳೆ ಕಾಂಗ್ರೆಸ್ ನಿಂದ ನನ್ನ ಬೂತ್ ನಾನು ಅಭ್ಯರ್ಥಿ ಅಭಿಯಾನ - ಏನಿದು ಕೈ ಹೊಸ ಪ್ರಯೋಗ

ಪುತ್ತೂರು: ಕಾಂಗ್ರೆಸ್ ಪಕ್ಷದಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ 220 ಬೂತ್ ಗಳಲ್ಲಿಯೂ ‘ನನ್ನ ಬೂತ್, ನಾನು ಅಭ್ಯರ್ಥಿ’ ಎಂಬ ವಿಭಿನ್ನ ಪ್ರಯೋಗದ ಕಾರ್ಯಕ್ರಮ ಮೇ.6 ರಂದು ಏಕಕಾಲದಲ್ಲಿ ನಡೆಯಲಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ 220 ಬೂತ್ ಗಳಲ್ಲಿಯೂ ಮನೆ ಮನೆಗಳ ಸಂಪರ್ಕ ಕಾರ್ಯಕ್ರಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಂದ ನಡೆಯಲಿದೆ.

ಕಾಂಗ್ರೆಸ್ ಸರಕಾರದ ಸಾಧನೆ ಹಾಗೂ ಪ್ರಣಾಳಿಕೆಯ ವಿಷಯಗಳನ್ನು ತಿಳಿಸುವುದರ ಜೊತೆಗೆ ಅಭ್ಯರ್ಥಿ ಅಶೋಕ್ ಕುಮಾರ್ ರೈ ಪರ ಮತಯಾಚನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

Posted by Vidyamaana on 2024-04-16 13:37:56 |

Share: | | | | |


ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು.

ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ ಪ್ರಚಾರ ಕಾರ್ಯಕ್ಕೆ ಮುಂದಾದ ಪದ್ಮರಾಜ್ ಆರ್. ಪೂಜಾರಿ ಅವರು, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ರೋಡ್ ಶೋ ಆರಂಭಿಸಿದರು. ಪುತ್ತೂರು ಪೇಡೆಯಾದ್ಯಂತ ಸಂಚರಿಸಿದ ರೋಡ್ ಶೋ, ವಿಟ್ಲ ಬಸ್ ನಿಲ್ದಾಣದಲ್ಲಿ ಸಮಾಪನಗೊಂಡಿತು. ಬಳಿಕ ವಿಟ್ಲ ಸಂತೆ ಮಾರುಕಟ್ಟೆಗೆ ತೆರಳಿ ಮತ ಯಾಚನೆ ನಡೆಸಿದರು.

ರೋಡ್ ಶೋ ಉದ್ದಕ್ಕೂ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಅಭ್ಯರ್ಥಿಗೆ ಸಾಥ್ ನೀಡಿದರು.



ಲಾಟರಿಯಲ್ಲಿ 80 ಲಕ್ಷ ರೂ. ಗೆದ್ದ ಸಂತಸದಲ್ಲಿ ಪಾರ್ಟಿ ಮಾಡುತ್ತಿದ್ದ ವ್ಯಕ್ತಿ ಮೃತ್ಯು

Posted by Vidyamaana on 2023-04-04 09:34:41 |

Share: | | | | |


ಲಾಟರಿಯಲ್ಲಿ 80 ಲಕ್ಷ ರೂ. ಗೆದ್ದ ಸಂತಸದಲ್ಲಿ ಪಾರ್ಟಿ ಮಾಡುತ್ತಿದ್ದ ವ್ಯಕ್ತಿ ಮೃತ್ಯು

ತಿರುವನಂತಪುರಂ: 80 ಲಕ್ಷ ರೂ. ಲಾಟರಿ ಹಣವನ್ನು ಗೆದ್ದ ಸಂತಸದಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ನಿಗೂಢವಾಗಿ ಮೃತಪಟ್ಟಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿರುವ ಪಂಗೋಡ್ ನಲ್ಲಿ ನಡೆದಿರುವುದು ವರದಿಯಾಗಿದೆ.ಪಂಗೋಡ್ ನಿವಾಸಿ ಸಜೀವ್ (35)‌ ಮೃತ ವ್ಯಕ್ತಿ.ಪಾರ್ಟಿ ಮಾಡುತ್ತಿದ್ದ ವೇಳೆ ಎಲ್ಲರೂ ಮದ್ಯದ ನಶೆಯಲ್ಲಿದ್ದರು. ಈ ವೇಳೆ ಸಂತೋಷ್ ಎಂಬ ವ್ಯಕ್ತಿ ಸಜೀವ್ ಅವರನ್ನು ತಳ್ಳಿದ್ದಾರೆ. ಪರಿಣಾಮ ಸಜೀವ್ , ರಬ್ಬರ್ ತೋಟದ ಆಳದ ಹೊಂಡಕ್ಕೆ ಬಿದ್ದಿದ್ದಾರೆ. ಆ ಬಳಿಕ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಸೋಮವಾರ ಸಂಜೆ ಅವರು ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.ಈ ಬಗ್ಗೆ ಕೇಸ್‌ ದಾಖಲಿಸಿದ್ದು, ಸಾವಿಗೆ ನಿಖರ ಕಾರಣವೇನೆಂಬುದು ಮರಣೋತ್ತರ ಪರೀಕ್ಷೆ ಬಳಿಕವೇ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿಟ್ಲ : ಮಹಿಳೆಯ ಜೊತೆ ಅಸಭ್ಯ ವರ್ತನೆ ಪ್ರಕರಣ : ಆರೋಪಿ ಅಬೂಬಕ್ಕರ್ ಬಂಧನ.

Posted by Vidyamaana on 2023-05-17 06:16:59 |

Share: | | | | |


ವಿಟ್ಲ : ಮಹಿಳೆಯ ಜೊತೆ ಅಸಭ್ಯ ವರ್ತನೆ ಪ್ರಕರಣ : ಆರೋಪಿ ಅಬೂಬಕ್ಕರ್ ಬಂಧನ.

ವಿಟ್ಲ : ಮಹಿಳೆಯ ಜೊತೆ ಅಸಭ್ಯ ರೀತಿಯಲ್ಲಿ ವರ್ತಿಸಿದ ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ಯಾನದ ಅಬೂಬಕ್ಕರ್ (46) ಬಂಧಿತ ಆರೋಪಿಈತ ಮೋಟಾರ್ ಸೈಕಲ್ ನಲ್ಲಿ ಬಂದು ದಾರಿ ಕೇಳುವ ನೆಪದಲ್ಲಿ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದ.

ಆರೋಪಿ ಪತ್ತೆಯ ಕಾರ್ಯದಲ್ಲಿ ವಿಟ್ಲ ಠಾಣೆಯ ಪೊಲೀಸ್ ನಿರೀಕ್ಷಕರಾದ ನಾಗರಾಜ್‌ ಹೆಚ್ ಈ ರವರ ಮಾರ್ಗದರ್ಶನದಂತೆ ವಿಟ್ಲ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಕಾರ್ತಿಕ್ ಕಾತರಕಿ ಹಾಗೂ ಸಿಬ್ಬಂದಿಗಳಾದ ಹೆಚ್‌ಸಿ ರಕ್ಷಿತ್ ಮತ್ತು ಪಿಸಿ ಹೇಮರಾಜ ರವರು ಪಾಲ್ಗೊಂಡಿದ್ದರು.

Recent News


Leave a Comment: