ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಸುದ್ದಿಗಳು News

Posted by vidyamaana on 2024-07-24 10:52:54 |

Share: | | | | |


ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಪುತ್ತೂರು : ಅಪ್ರಾಪ್ತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೆಳಿಯೂರುಕಟ್ಟೆ ನಿವಾಸಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಬೆಳಿಯೂರುಕಟ್ಟೆ ನಿವಾಸಿ ಅಪ್ರಾಪ್ತೆಗೆ ವಿವಾಹಿತ ಪ್ರಸಾದ್ ಎಂಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

 Share: | | | | |


ವೈದ್ಯರೂ ಪತ್ತೆಹಚ್ಚಲಾಗದ ಸ್ಲೋ ಪಾಯ್ಸನ್​ ಕೊಟ್ಟು ಪತಿ ಅತ್ತೆ ಮಾವ ಸೇರಿ ಐವರನ್ನು ಕೊಂದಿದ್ದಳು ಸೊಸೆ: ಆ ವಿಷ ಯಾವುದು?

Posted by Vidyamaana on 2023-10-22 08:15:37 |

Share: | | | | |


ವೈದ್ಯರೂ ಪತ್ತೆಹಚ್ಚಲಾಗದ ಸ್ಲೋ ಪಾಯ್ಸನ್​ ಕೊಟ್ಟು ಪತಿ ಅತ್ತೆ ಮಾವ ಸೇರಿ ಐವರನ್ನು ಕೊಂದಿದ್ದಳು ಸೊಸೆ: ಆ ವಿಷ ಯಾವುದು?

ನಾಗಪುರ: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಒಂದೇ ಕುಟುಂಬದ ಐವರು ತಿಂಗಳೊಳಗೆ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಅ.18 ರಂದು ಸೊಸೆ ಮತ್ತು ಸಂಬಂಧಿ ಮಹಿಳೆಯ ಬಂಧನವಾಗಿತ್ತು. ಇವರಿಬ್ಬರು ಕಳೆದ ಒಂದು ತಿಂಗಳಿಂದ ಎಲ್ಲರಿಗೂ ಆಹಾರದಲ್ಲಿ ಸ್ಲೋ ಪಾಯ್ಸನ್ ನೀಡುತ್ತಿದ್ದುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.ಗೂಗಲ್​ನಲ್ಲಿ ಅತಿ ಭಯಂಕರ ವಿಷದ ಬಗ್ಗೆ ಸರ್ಚ್​ ಮಾಡಿ, ತೆಲಂಗಾಣದಿಂದ ತರಿಸಿಕೊಂಡು ಚಾಲಾಕಿತನ ಮೆರೆದ ಸೊಸೆ ಈಗ ಜೈಲುಪಾಲಾಗಿದ್ದಾಳೆ.

ಇದರ ಪೂರ್ಣ ವಿವರ ಇಲ್ಲಿದೆ….

ಸಂಘಮಿತ್ರ ಕುಂಬಾರೆ (22), ರೋಜಾ ರಾಮಟೆಕೆ (36) ಆರೋಪಿಗಳು. ಮೃತರನ್ನು ಸಂಘಮಿತ್ರ ಪತಿ ರೋಷನ್ ಕುಂಬಾರೆ, ಶಂಕರ ಕುಂಬಾರೆ (ಮಾವ), ವಿಜಯ (ಅತ್ತೆ), ಕೋಮಲ್ (ಅತ್ತಿಗೆ) ಮತ್ತು ವರ್ಷಾ ಉರಾಡೆ (ಅತ್ತೆಯ ಸಹೋದರಿ) ಸೆ.26ರಿಂದ ಅ.15ರ ನಡುವೆ ಮೃತಪಟ್ಟಿದ್ದರು.

ಕೊಲ್ಲಲು ಕಾರಣ:

ಅಕೋಲಾದ ಸಂಘಮಿತ್ರ ಮನೆಯವರ ವಿರೋಧದ ನಡುವೆ ಡಿಸೆಂಬರ್​ 2022 ರಲ್ಲಿ ರೋಷನ್ ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಮದುವೆಯ ನಂತರ ರೋಷನ್ ಥಳಿಸಲು ಆರಂಭಿಸಿದ್ದ. ಆತನ ಕುಟುಂಬಸ್ಥರೂ ಕೆಟ್ಟದಾಗಿ ನಡೆಸಿಕೊಂಡರು. ಆಕೆ ತಂದೆಗೆ ವಿಷಯ ತಿಳಿದಾಗ ಆತ ಏಪ್ರಿಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ತನ್ನ ತವರಿಗೆ ಹೋಗಬೇಕೆಂದು ಒತ್ತಾಯಿಸಿದರೂ ಪತಿ ಮತ್ತು ಅತ್ತೆ ಇದಕ್ಕೆ ಅನುಮತಿಸಲಿಲ್ಲ. ಇದರಿಂದ ಆಕೆ ಚಿಂತತೆಗೀಡಾದಳು.

ಈ ವಿಷ ವೈದ್ಯಕೀಯ ಪರೀಕ್ಷೆಯಲ್ಲೂ ಪತ್ತೆಯಾಗದು!:

ಆಸ್ತಿ ವಿಚಾರವಾಗಿ ಸಂಬಂಧಿ ರೋಜಾ ಹಾಗೂ ಸಂಗಮಿತ್ರಾ ಅತ್ತೆ ವಿಜಯಾ ನಡುವೆ ಜಗಳ ನಡೆಯುತ್ತಿತ್ತು. ಇದನ್ನು ಅರಿತಿದ್ದ ಸಂಘಮಿತ್ರಾ ರೋಜಾಗೆ ತನ್ನ ಅತ್ತೆಯನ್ನು ಕೊಲ್ಲಲು ಬಯಸಿರುವುದಾಗಿ ಹೇಳಿದಾಗ ಆಕೆ ಕೈಜೋಡಿಸುತ್ತಾಳೆ. ಇಬ್ಬರೂ ಸೇರಿ ಗೂಗಲ್ ನಲ್ಲಿ ಜನರನ್ನು ಕೊಲ್ಲಲು ಇರುವ ಮಾರ್ಗಗಳನ್ನು ಹುಡುಕುತ್ತಾರೆ. ಆಗ ಥಾಲಿಯಮ್ ವಿಷದ ಬಗ್ಗೆ ತಿಳಿದುಕೊಳ್ಳುತ್ತಾರೆ. ಇದರ ಸೇವನೆಯಿಂದ ವ್ಯಕ್ತಿಯು ಕ್ರಮೇಣ ಅನಾರೋಗ್ಯಕ್ಕೆ ಒಳಗಾಗಿ ಸಾಯುತ್ತಾನೆ. ವೈದ್ಯಕೀಯ ಪರೀಕ್ಷೆಯಲ್ಲಿ ಮಾನವ ದೇಹದಲ್ಲಿ ಥಾಲಿಯಮ್ ಅನ್ನು ಕಂಡುಹಿಡಿಯುವುದು ಕಷ್ಟ. ಹೀಗಾಗಿ ಸಿಕ್ಕಿಬೀಳುವುದಿಲ್ಲ ಎಂಬುದನ್ನು ಮನಗಾಣುತ್ತಾರೆ. ಬಳಿಕ ತೆಲಂಗಾಣದಿಂದ ವಿಷ ಖರೀದಿಸಿ ಸೆ.20 ರಂದು ಮೊದಲು ರೋಷನ್ ತಂದೆ ಶಂಕರ್ ಮತ್ತು ಆತನ ತಾಯಿ ವಿಜಯಾಗೆ ಆಹಾರದಲ್ಲಿ ಬೆರೆಸಿ ನೀಡುತ್ತಾರೆ. ಅವರ ಆರೋಗ್ಯ ಹದಗೆಟ್ಟು ಸೆ.26ಮತ್ತು 27 ರಂದು ಮೃತಪಡುತ್ತಾರೆ. ನಂತರ ಅ.8 ರಂದು ಕೋಮಲ್, ಅ.14 ರಂದು ವರ್ಷ ಮತ್ತು ಅ.15 ರಂದು ರೋಷನ್ ಕೂಡ ಸಾವನ್ನಪ್ಪುತ್ತಾರೆ.


ತುಟಿ ಕಪ್ಪಾಗಿದ್ದರೂ ವಿಷ ಪತ್ತೆಯಾಗಿರಲಿಲ್ಲ:

ಸತ್ತವರೆಲ್ಲರೂ ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದರು. ಪ್ರತಿಯೊಬ್ಬರಿಗೂ ದೇಹದಲ್ಲಿ ಜುಮ್ಮೆನಿಸುವಿಕೆ, ಕೆಳ ಬೆನ್ನು ಮತ್ತು ತಲೆಯಲ್ಲಿ ತೀವ್ರವಾದ ನೋವು ಇತ್ತು. ತುಟಿಗಳು ಕಪ್ಪು ಬಣ್ಣಕ್ಕೆ ತಿರುಗಿದ್ದವು. ಆದರೆ ವಿಷ ಪತ್ತೆಯಾಗಿರಲಿಲ್ಲ ಎಂದು ವೈದ್ಯರು ತಿಳಿಸಿದ್ದರು. ಇದರ ನಂತರ, ಪೊಲೀಸರಿಗೆ ಆರೋಗ್ಯದಿಂದ ಇದ್ದ ಸಂಘಮಿತ್ರಾ ಬಗ್ಗೆ ಅನುಮಾನ ಬಂದಿತ್ತು. ಆಕೆಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಸಂಪೂರ್ಣ ಸತ್ಯ ಹೊರಬಂದಿದೆ. ರೋಜಾ ಪಾತ್ರವನ್ನೂ ಸಂಘಮಿತ್ರ ಬಹಿರಂಗಪಡಿಸಿದ್ದಾಳೆ. ಘಟನೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ ಸೊಸೆ ನೀಡಿದ ಸ್ಲೋಪಾಯ್ಸನ್​ಗೆ ಒಂದಿಡೀ ಕುಟುಂಬ ಅವಸಾನ ಕಂಡಿದೆ. ಆಕೆ ಜೈಲು ಸೇರಿದ್ದಾಳೆ.

ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

Posted by Vidyamaana on 2024-07-25 09:34:49 |

Share: | | | | |


ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ರಾಮ ಮಂದಿರ ಪ್ರತಿಷ್ಟಾಪನೆ ದಿನ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ಸೂಚನೆ

Posted by Vidyamaana on 2024-01-07 08:52:13 |

Share: | | | | |


ರಾಮ ಮಂದಿರ ಪ್ರತಿಷ್ಟಾಪನೆ ದಿನ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ಸೂಚನೆ

ಬೆಂಗಳೂರು : ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ.ಅಂದು ಶ್ರೀ ರಾಮನ ವಿಗ್ರಹ ಪ್ರತಿಷ್ಟಾಪನೆ ಆಗಲಿದ್ದು ಅದೇ ಸಮಯದಲ್ಲಿ ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.ಜನವರಿ 22 ರಂದು ಮಧ್ಯಾಹ್ನ 12 ಗಂಟೆ 29 ನಿಮಿಷ 8 ಸೆಕೆಂಡ್ ನಿಂದ 12 ಗಂಟೆ 32 ನಿಮಿಷಗಳವರೆಗೆ ಮಹಾಮಂಗಳಾರತಿ ಹಾಗೂ ವಿಶೇಷ ಪೂಜೆ ನೆರವೇರಿಸುವಂತೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದರು.ಆ ಸಮಯದಲ್ಲಿ ಶ್ರೀ ರಾಮ ವಿಗ್ರಹ ಪ್ರತಿಷ್ಟಾಪನೆ ನಡೆಯಲಿದೆ.

ಮಂಗಳೂರು: ಕಾರಿನ ಒಳಹೊಕ್ಕ ಅಲ್ಯೂಮಿನಿಯಂ ಪಟ್ಟಿ, ಪವಾಡ ಸದೃಶವಾಗಿ ಚಾಲಕ ಪಾರು

Posted by Vidyamaana on 2023-02-23 03:42:33 |

Share: | | | | |


ಮಂಗಳೂರು: ಕಾರಿನ ಒಳಹೊಕ್ಕ ಅಲ್ಯೂಮಿನಿಯಂ ಪಟ್ಟಿ, ಪವಾಡ ಸದೃಶವಾಗಿ ಚಾಲಕ ಪಾರು

ಮಂಗಳೂರು:ಫೆ 23  ನಂತೂರು ಜಂಕ್ಷನ್‌ನಲ್ಲಿ ಪಿಕ್-ಅಪ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಅಲ್ಯೂಮಿನಿಯಂ ಪಟ್ಟಿಗಳು ಜಾರಿ ಕಾರಿನ ಒಳಗೆ ಹೊಕ್ಕು ಕಾರು ಚಾಲಕ ಪವಾಡ ಸದೃಶವಾಗಿ ಪಾರಾದ ಘಟನೆ ನಗರದ ಬುಧವಾರ ಸಂಜೆ ಸಂಭವಿಸಿದೆ.ಅಲ್ಯೂಮಿನಿಯಂ ಪಟ್ಟಿಗಳನ್ನು ಹೊತ್ತ ಪಿಕ್-ಅಪ್ ಕಾರಿನ ಹಿಂದೆ ಇತ್ತು. ಎರಡೂ ವಾಹನಗಳು ಕೆಪಿಟಿಯಿಂದ ಪಂಪ್‌ವೆಲ್ ಕಡೆಗೆ ಚಲಿಸುತ್ತಿದ್ದವು.ನಂತೂರು ಜಂಕ್ಷನ್‌ನಲ್ಲಿ ಕಾರು ಚಾಲಕ ಬ್ರೇಕ್‌ ಹಾಕಿದಾಗ ಪಿಕ್‌ಅಪ್‌ನಲ್ಲಿದ್ದ ಪಟ್ಟಿಗಳು ಕಾರಿನ ಹಿಂಭಾಗದಿಂದ ಒಳಗೆ ಹೊಕ್ಕಿವೆ. ಕಾರಿನಲ್ಲಿ ಚಾಲಕ ಮಾತ್ರವಿದ್ದರು. ಪಟ್ಟಿಗಳು ಹಿಂಭಾಗದ ಸೀಟುಗಳನ್ನು ದಾಟಿ ಬಂದು ಚಾಲಕನ ಸೀಟಿಗೆ ತಾಗಿ ನಿಂತಿವೆ. ಕಾರಿಗೆ ಹಾನಿಯಾಗಿದೆ. ಪಿಕ್‌ಅಪ್‌ ವಾಹನದ ಚಾಲಕನ ನಿರ್ಲಕ್ಷ್ಯದ ಬಗ್ಗೆ ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು : ಬಾಯ್ದೆರೆದ ಹೊಂಡ: ಸೇತುವೆಯಲ್ಲಿದೆ ಅಪಾಯ ನೋಡ

Posted by Vidyamaana on 2024-06-06 11:51:22 |

Share: | | | | |


ಪುತ್ತೂರು : ಬಾಯ್ದೆರೆದ ಹೊಂಡ: ಸೇತುವೆಯಲ್ಲಿದೆ ಅಪಾಯ ನೋಡ

ಪುತ್ತೂರು: ಇಲ್ಲಿನ ಎಪಿಎಂಸಿ ರಸ್ತೆಯಲ್ಲಿರುವ ಆದರ್ಶ ಆಸ್ಪತ್ರೆ ಸಮೀಪದ ಸೇತುವೆ ಮೇಲೆ ಹೊಂಡವೊಂದು ಬಾಯ್ದೆರೆದು ಕೂತಿದೆ. ದಿನದಿಂದ ದಿನಕ್ಕೆ ಗಾತ್ರ ಹಿಗ್ಗಿಸಿಕೊಳ್ಳುತ್ತಿದ್ದು, ವಾಹನ ಸವಾಹರರಿಗೆ, ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ಬಂಟ್ವಾಳ : SDPI ಅಭ್ಯರ್ಥಿ ಇಲ್ಯಾಸ್ ತುಂಬೆ ಪರ ತಾಲೂಕಿನಾದ್ಯಂತ ಮತಯಾಚನೆ..

Posted by Vidyamaana on 2023-04-30 11:52:29 |

Share: | | | | |


ಬಂಟ್ವಾಳ : SDPI ಅಭ್ಯರ್ಥಿ ಇಲ್ಯಾಸ್ ತುಂಬೆ  ಪರ ತಾಲೂಕಿನಾದ್ಯಂತ ಮತಯಾಚನೆ..

ಬಂಟ್ವಾಳ:ಬಂಟ್ವಾಳ ವಿಧಾನಸಭಾ ಕ್ಷೇತ್ರ ಎಸ್‌ಡಿಪಿಐ ಅಭ್ಯರ್ಥಿ ಇಲ್ಯಾಸ್ ತುಂಬೆ ರವರ ಪರವಾಗಿ ಮಂಚಿ ಕುಕ್ಕಾಜೆ ಪರಿಸರದಲ್ಲಿ   ಮನೆಗಳಿಗೆ ತೆರಳಿ   ಮತಯಾಚನೆ ಮಾಡಿದರು.

Recent News


Leave a Comment: