ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ರಿಗೊಲಿದ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ ಪಟ್ಟ

Posted by Vidyamaana on 2023-12-21 21:19:04 |

Share: | | | | |


ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ರಿಗೊಲಿದ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ ಪಟ್ಟ

ನವದೆಹಲಿ :ಭಾರತೀಯ ಕುಸ್ತಿ ಸಂಘದ(ರಿ.) ಜಂಟಿ ಕಾರ್ಯದರ್ಶಿಯಾಗಿ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ  ಬಿ.ಗುಣರಂಜನ್ ಶೆಟ್ಟಿ ಆಯ್ಕೆಯಾಗಿದ್ದಾರೆ. 


ದೆಹಲಿಯಲ್ಲಿ ನಡೆದ ಭಾರತೀಯ ಕುಸ್ತಿ ಸಂಘದ ಚುನಾವಣೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕದಿಂದ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳಾಗಿ  ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.


*ದೆಹಲಿಯಲ್ಲಿ ನಡೆದ ಭಾರತೀಯ ಕುಸ್ತಿ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪಟ್ಟಿ*


ಅಧ್ಯಕ್ಷರು  ಸಂಜಯ್‌ ಕುಮಾರ್‌ ಸಿಂಗ್‌, ಹಿರಿಯ ಉಪಾಧ್ಯಕ್ಷರು  ದೇವೇಂದರ್‌,    ಉಪಾಧ್ಯಕ್ಷರು ಅಸಿತ್‌ ಕುಮಾರ್‌ ಸಹ, ಜಯಪ್ರಕಾಶ್‌, ಕಾರ್‍ತರ್‌ ಸಿಂಗ್‌, ಎನ್‌.ಫೋನಿ


ಪ್ರಧಾನ ಕಾರ್ಯದರ್ಶಿ ಪ್ರೇಮ್‌ ಚಂದ್‌ ಲೊಚಬ್‌, ಕೋಶಾಧಿಕಾರಿ ಸತ್ಯಪಾಲ್‌ ಸಿಂಗ್‌ ದೇಶ್‌ವಾಲ್‌,  ಜಂಟಿ ಕಾರ್ಯದರ್ಶಿ ಬೆಳ್ಳಿಪ್ಪಾಡಿ ಗುಣರಂಜನ್‌ ಶೆಟ್ಟಿ, ಆರ್‌.ಕೆ.ಪುರುಶೋತ್ತಮ್‌, ಕಾರ್ಯಕಾರಿ  ಸಮಿತಿಯ ಸದಸ್ಯರು ಎಮ್‌.ಲೋಗನಾಥನ್‌, ನೈವಿಕೌಲಿ ಖಾತ್ಸು, ಪ್ರಶಾಂತ್‌ ರೈ, ರಜನೀಶ್‌ ಕುಮಾರ್‌, ಉಮ್ಮೆದ್‌ ಸಿಂಗ್.


*ಪುತ್ತೂರಿನ ಕಣ್ಮಣಿ ಕರ್ನಾಟಕದ ಜನರ ಪ್ರೀತಿಪಾತ್ರರಾದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ*


ದಕ್ಷಿಣಕನ್ನಡ ಜಿಲ್ಲೆಯ ನಡುಮೊಗರುಗುತ್ತು ವಿಠಲ ಶೆಟ್ಟಿ ಮತ್ತು ಬೆಳ್ಳಿಪ್ಪಾಡಿ ಉರಮಾಲು ಗುತ್ತು ಪ್ರಫುಲ್ಲ ವಿ.ಶೆಟ್ಟಿ ದಂಪತಿಗಳ ಸುಪುತ್ರ ಹಾಗೂ ಡಾ.ಸಾಯಿ ರಮೇಶ್‌ ಶೆಟ್ಟಿ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಯವರ ಸಹೋದರ ಬಿ.ಗುಣರಂಜನ್ ಶೆಟ್ಟಿ  ಮೂಲತಃ ಪುತ್ತೂರಿನ ಬೆಳ್ಳಿಪ್ಪಾಡಿ ಮನೆತನದಲ್ಲಿ ಜನಿಸಿ,  ಉರಮಾಲು ಗುತ್ತು ನಿವಾಸಿಯಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುತ್ತಾರೆ. ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮಾಡಿರುವ ಬಿ. ಗುಣರಂಜನ್‌ ಶೆಟ್ಟಿಯವರು  ಬೆಂಗಳೂರಿನಲ್ಲಿ ಉದ್ಯಮಿಯಾಗಿರುತ್ತಾರೆ.


ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ ಬೆಂಗಳೂರು, ಐ ಕ್ಯಾರ್‌ ಬ್ರಿಗೇಡ್‌,  ಐ ಕ್ಯಾರ್‌ ಫೌಂಡೇಶನ್‌, ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರು ಹಾಗೂ ಬೆಂಗಳೂರು ಕಂಬಳ ಸಮಿತಿಯ ಉಪಾಧ್ಯಕ್ಷರೂ ಆಗಿರುತ್ತಾರೆ. ಪರಿಸರವಾದಿಗಳು ಆಗಿರುವ ಇವರು ಬೆಂಗಳೂರು ಮತ್ತು ರಾಜ್ಯದಲ್ಲಿ ಅನೇಕ ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಬೆಂಗಳೂರಿನಲ್ಲಿ ಮರಗಳಿಂದ ಕಬ್ಬಿಣದ ರಾಡ್‌ ಮತ್ತು ಮೊಳೆ  ತೆಗೆಯುವ  ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪರಿಸರ ಪ್ರೇಮಿಗಳಿಗೆ ಹತ್ತಿರವಾಗಿದ್ದರು.

ಇತ್ತೀಚೆಗೆ ನಡೆದ ದೇಶದಲ್ಲೇ ಪ್ರಖ್ಯಾತಿ ಪಡೆದ ಬೆಂಗಳೂರು  ಕಂಬಳದ ಆಯೋಜನೆಯ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತ್ತು ಕರಾವಳಿ ಹಾಗೂ ಬೆಂಗಳೂರಿನ ಜನರ ಪ್ರಶಂಸೆಗೆ ಒಳಗಾಗಿದ್ದಾರೆ.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪರಮ ಭಕ್ತರಾಗಿರುವ ಇವರು ಬೆಂಗಳೂರಿನ ತಿಪ್ಪಸಂದ್ರದಲ್ಲಿ ಮಹಾಶಿವರಾತ್ರಿಯ ಧಾರ್ಮಿಕ ಕಾರ್ಯಕ್ರಮವನ್ನು ಬಹಳ ವಿಜ್ರಂಭಣೆಯಿಂದ ಮತ್ತು ಸಾವಿರಾರು ಭಕ್ತರಿಗೆ ಅನ್ನದಾನ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡು ಬಂದಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಗುಣರಂಜನ್‌ ಶೆಟ್ಟಿಯವರನ್ನು  ಅಭಿಮಾನದಿಂದ ಪ್ರೀತಿಯ ಗುಣಣ್ಣ ಎಂದು ಕರೆಯುತ್ತಾರೆ.

ಪ್ರಸ್ತುತ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರು ಆಗಿರುವ ಗುಣರಂಜನ್‌ ಶೆಟ್ಟಿಯವರು ಇದೀಗ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿರುವುದು ಇತಿಹಾಸದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಿಂದ ಆಯ್ಕೆಯಾಗಿರುವುದು ಕರ್ನಾಟಕದ ಜನತೆ ಹೆಮ್ಮೆಪಡುವಂತಾಗಿದೆ. 


ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಇವರ ಅವಧಿಯಲ್ಲಿ ಅನೇಕ ಟೂರ್ನಮೆಂಟ್‌ಗಳು ನಡೆದಿದ್ದು, ಅನೇಕ ಕುಸ್ತಿಪಟುಗಳು ಬಹುಮಾನಗಳನ್ನು ಪಡೆದಿರುತ್ತಾರೆ. ಇವರು ಬಂದ ನಂತರ ಕರ್ನಾಟಕ ಕುಸ್ತಿ ಪಟುಗಳಿಗೆ ಆನೆ ಬಲ ಬಂದಂತಾಗಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು.

ಬೇಗ ಬನ್ನಿ.. ಮೋದಿ 3,000 ಕೊಡ್ತಾರಂತೆ! : ಅಂಚೆ ಕಚೇರಿಯಲ್ಲಿ ಮಹಿಳೆಯರ ನೂಕುನುಗ್ಗಲು

Posted by Vidyamaana on 2024-03-19 20:13:24 |

Share: | | | | |


ಬೇಗ ಬನ್ನಿ.. ಮೋದಿ 3,000 ಕೊಡ್ತಾರಂತೆ! : ಅಂಚೆ ಕಚೇರಿಯಲ್ಲಿ ಮಹಿಳೆಯರ ನೂಕುನುಗ್ಗಲು

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬೊಬ್ಬರಿಗೆ 3,000 ರೂ. ಕೊಡ್ತಾರೆ ಎಂಬ ವದಂತಿ ನಂಬಿ ಮಹಿಳೆಯರು ಅಂಚೆ ಕಚೇರಿಗೆ ದೌಡಾಯಿಸಿದ್ದಾರೆ.


ಕೇಂದ್ರ ಸರ್ಕಾರದ ಮೋದಿ ಗ್ಯಾರಂಟಿ ಯೋಜನೆಯಡಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದ ಬಿಪಿಎಲ್‌ ಕಾರ್ಡ್ ಕುಟುಂಬದ ಮಹಿಳೆಯರಿಗೆ 3 ಸಾವಿರ ಜಮಾ ಮಾಡಲಾಗುವುದು ಎಂಬ ವದಂತಿಗೆ ಮಹಿಳೆಯರು ಮುಗಿಬಿದ್ದಿದ್ದಾರೆ.ಬೆಳಗ್ಗೆ 8 ರಿಂದ ನಗರದ ವಿವಿಧ ಅಂಚೆ ಕಚೇರಿಗಳ ಎದುರು ಮಹಿಳೆಯರು ಸಾಲುಗಟ್ಟಿ ನಿಂತಿದ್ದು ಕಂಡು ಬಂದಿತು. ಸ್ಟೇಷನ್‌ ರಸ್ತೆಯಲ್ಲಿರುವ ಮುಖ್ಯ ಅಂಚೆ ಕಚೇರಿ ಎದುರು ರಾತ್ರಿ 8 ರವರೆಗೆ ಸರದಿ ಸಾಲಿನಲ್ಲಿ ನಿಂತುಕೊಂಡಿರುವ ದೃಶ್ಯ ಗಳು ಕಂಡು ಬಂದಿತು. ಹಳೇಹುಬ್ಬಳ್ಳಿ, ಗಿರಣಿಚಾಳ, ಉದ್ಯಮನಗರ, ನವಗರ, ಟ್ರಾಫಿಕ್‌ ಐಲ್ಯಾಂಡ್‌ ಉಪ ಅಂಚೆ ಕಚೇರಿಗಳ ಎದುರು ಸಹ ಇದೇ ವಾತಾವರಣ ಕಂಡು ಬಂದಿತು.ಮಹಿಳೆಯರು ನಮ್ಮ ಮಾತು ಒಪ್ಪುತ್ತಿಲ್ಲ


ಪ್ರಧಾನ ಅಂಚೆ ಕಚೇರಿಯ ಹಿರಿಯ ಪೋಸ್ಟ್‌ಮಾಸ್ಟರ್ ಎಂ. ಕುಮಾರಸ್ವಾಮಿ ಮಾತನಾಡಿ, ಅಂಚೆ ಕಚೇರಿಯಲ್ಲಿ ಮಹಿಳೆಯರು ಮೋದಿ ಖಾತೆ ತೆರೆದರೆ ಮೂರು ತಿಂಗಳಿಗೊಮ್ಮೆ 3 ಸಾವಿರ ಖಾತೆಗೆ ಜಮಾ ಆಗುವುದು ಎಂದು ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅದನ್ನು ನಂಬಿದ ಮಹಿಳೆಯರು ಬೆಳಿಗ್ಗೆಯಿಂದ ಅಂಚೆ ಕಚೇರಿಗಳ ಎದುರು ಜಮಾಯಿಸಿದ್ದಾರೆ. ಅಂಚೆ ಕಚೇರಿಗಳ ಎದುರು ನೋಟಿಸ್‌ ಅಂಟಿಸಿ, ಸುಳ್ಳು ಸುದ್ದಿ ನಂಬಬೇಡಿ ಎಂದಿದ್ದೇವೆ. ಆದರೂ, ಮಹಿಳೆಯರು ನಮ್ಮ ಮಾತು ಒಪ್ಪುತ್ತಿಲ್ಲ ಎಂದು ತಿಳಿಸಿದರು.

ಸ್ಪೀಕರ್ ಖಾದರ್‌ಗೆ ಹೊಸ ಐಶಾರಾಮಿ ಕಾರು: 360 ಡಿಗ್ರಿ ಕ್ಯಾಮೆರಾ, ವಿಶೇಷ LED ಲೈಟ್ ಬೆಲೆ ಎಷ್ಟು ಗೊತ್ತಾ

Posted by Vidyamaana on 2024-02-13 11:27:33 |

Share: | | | | |


ಸ್ಪೀಕರ್ ಖಾದರ್‌ಗೆ ಹೊಸ ಐಶಾರಾಮಿ ಕಾರು: 360 ಡಿಗ್ರಿ ಕ್ಯಾಮೆರಾ, ವಿಶೇಷ LED ಲೈಟ್ ಬೆಲೆ ಎಷ್ಟು ಗೊತ್ತಾ

ಬೆಂಗಳೂರು ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ ಖಾದರ್‌ (U.T.Kh

non

er) ಅವರ ಓಡಾಟಕ್ಕೆ ಹೊಚ್ಚ ಹೊಸ ಟೊಯೊಟಾ ಫಾರ್ಚುನರ್ (Toyota Fortuner) ಎಸ್‌ಯುವಿಯನ್ನು ನೀಡಲಾಗಿದೆ. ಸಚಿವಾಲಯದಿಂದ ಈ ಕಾರನ್ನು ಒದಗಿಸಲಾಗಿದೆ. ಕಪ್ಪು ಬಣ್ಣದ ಎಸ್‌ಯುವಿಯು ಗಂಡಭೇರುಂಡ ಲಾಂಛನವನ್ನು ಪಡೆದಿದೆ. ಜೊತೆಗೆ ವಿಶೇಷ ವಿನ್ಯಾಸವನ್ನು ಹೊಂದಿದೆ.ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ನೂತನ ಟೊಯೊಟಾ ಫಾರ್ಚುನರ್ ಫುಲ್-ಸೈಜ್ ಎಸ್‌ಯುವಿ, ರೂ.33.44 ರಿಂದ 51.44 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಲೆಜೆಂಡರ್, ಸ್ಟ್ಯಾಂಡರ್ಡ್, ಜಿಆರ್-ಎಸ್ ರೂಪಾಂತರ (Variant)ದ ಆಯ್ಕೆಯಲ್ಲಿ ಸಿಗಲಿದೆ. ಆದರೆ, ವಿಧಾನಸಭಾಧ್ಯಕ್ಷ ಯು.ಟಿ ಖಾದರ್‌ ಅವರಿಗೆ ನೀಡಿರುವ ಕಾರಿನ ರೂಪಾಂತರದ ಬಗ್ಗೆ ಮಾಹಿತಿಯಿಲ್ಲ.ಈ ಟೊಯೊಟಾ ಫಾರ್ಚುನರ್ (Toyota Fortuner), ಪ್ಲಾಟಿನಂ ವೈಟ್ ಪರ್ಲ್, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಕ್ರಿಸ್ಟಲ್ ಶೈನ್, ಫ್ಯಾಂಟಮ್ ಬ್ರೌನ್ ಸೇರಿದಂತೆ 7 - ಮೊನೊಟೋನ್ ಬಣ್ಣಗಳೊಂದಿಗೆ ಸಿಗಲಿದ್ದು, ವಿನ್ಯಾಸದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದೆ. ಜೊತೆಗೆ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಲಭ್ಯವಿದೆ. 2WD (ಟೂ ವೀಲ್ ಡ್ರೈವ್) ಮತ್ತು 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.


ಟೊಯೊಟಾ ಫಾರ್ಚುನರ್ ಎಸ್‌ಯುವಿ, ಪೆಟ್ರೋಲ್ ಹಾಗೂ ಡೀಸೆಲ್ ಪವರ್ ಟ್ರೇನ್ ಆಯ್ಕೆಯಲ್ಲಿ ಸಿಗಲಿದ್ದು, ಇದರ 2.7 - ಲೀಟರ್ ಪೆಟ್ರೋಲ್ ಎಂಜಿನ್ 166 ಪಿಎಸ್ ಗರಿಷ್ಠ ಪವರ್ (ಶಕ್ತಿ) 245 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ.ಮತ್ತೊಂದು, 2.8 - ಲೀಟರ್ ಟರ್ಬೊ ಡೀಸೆಲ್ ಎಂಜಿನ್ 204 ಪಿಎಸ್ ಪವರ್ ಮತ್ತು 500 ಎನ್ಎಂ ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. 6 - ಸ್ವೀಡ್ ಮ್ಯಾನುವಲ್/ 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಮೈಲೇಜ್ ವಿಚಾರಕ್ಕೆ ಬರುವುದಾದರೆ, 10.0 ಕೆಎಂಪಿಎಲ್ ಇಂಧನ ದಕ್ಷತೆಯನ್ನು ಹೊಂದಿದೆ.ಈ ಕಾರು ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 8 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕನೆಕ್ಟ್ದ್ ಕಾರ್ ಟೆಕ್, 6 - ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಕಿಕ್-ಟು-ಓಪನ್ ಪವರ್ಡ್ ಟೈಲ್‌ಗೇಟ್, ಡುಯಲ್-ಜೋನ್ ಎಸಿ ಹಾಗೂ ಕ್ರೂಸ್ ಕಂಟ್ರೋಲ್ ಅನ್ನು ಪಡೆದಿದೆಟೊಯೊಟಾ ಫಾರ್ಚುನರ್ ಎಸ್‌ಯುವಿಯು ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಗ್ಲೋಬಲ್ ಎನ್‌ಸಿಎಪಿಯಿಂದ 4 ಸ್ಟಾರ್ ರೇಟಿಂಗ್ ಹೊಂದಿದೆ. 7 - ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್)ನಂತಹ ಸೇಫ್ಟಿ ಫೀಚರ್ಸ್ ಪಡೆದಿದೆ. ಈ ಕಾರಿಗೆ ಎಂಜಿ ಗ್ಲೋಸ್ಟರ್ (MG Gloster), ಜೀಪ್ ಮೆರಿಡಿಯನ್ (Jeep Meridian), ಸ್ಕೋಡಾ ಕೊಡಿಯಾಕ್ (Skoda Kodiaq) ಪ್ರಬಲ ಎದುರಾಳಿಯಾಗಿವೆ.

ಬಿಗ್ BREAKING NEWS: ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ

Posted by Vidyamaana on 2024-03-09 21:11:55 |

Share: | | | | |


ಬಿಗ್ BREAKING NEWS: ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ

ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು ಚುನಾವಣಾ ಆಯುಕ್ತ ಅರುಣ್ ಗೋಯೆಲ್ ರಾಜೀನಾಮೆ ನೀಡಿದರು ಮತ್ತು ಅಧ್ಯಕ್ಷ ದ್ರೌಪದಿ ಮುರ್ಮು ಅವರ ರಾಜೀನಾಮೆಯನ್ನು ಅಂಗೀಕರಿಸಿದರು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023 ರ ಸೆಕ್ಷನ್ 11 ರ ಷರತ್ತು (1) ಕ್ಕೆ ಅನುಸಾರವಾಗಿ, ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಅವರು ಸಲ್ಲಿಸಿದ ರಾಜೀನಾಮೆಯನ್ನು 2024 ರ ಮಾರ್ಚ್ 09 ರಿಂದ ಜಾರಿಗೆ ಬರುವಂತೆ ಸ್ವೀಕರಿಸಲು ರಾಷ್ಟ್ರಪತಿಗಳು ಸಂತೋಷಪಡುತ್ತಾರೆ" ಎಂದು ಶನಿವಾರ ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಗೋಯೆಲ್ ಅವರು ನವೆಂಬರ್ 21, 2022 ರಂದು ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.


1985ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಅರುಣ್ ಗೋಯಲ್ ಈ ಹಿಂದೆ ಭಾರತ ಸರ್ಕಾರದ ಬೃಹತ್ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಪೊಲೀಸ್ ಕ್ವಾಟ್ರಸ್ ನಲ್ಲೇ ನೇಣಿಗೆ ಶರಣಾದ ಮಹಿಳಾ ಕಾನ್‌ಸ್ಟೇಬಲ್ ಜ್ಯೋತಿ

Posted by Vidyamaana on 2024-03-30 21:14:18 |

Share: | | | | |


ಪೊಲೀಸ್ ಕ್ವಾಟ್ರಸ್ ನಲ್ಲೇ ನೇಣಿಗೆ ಶರಣಾದ ಮಹಿಳಾ ಕಾನ್‌ಸ್ಟೇಬಲ್ ಜ್ಯೋತಿ

ಉಡುಪಿ : ಪೊಲೀಸ್ ಕ್ವಾಟ್ರಸ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಕಾನ್‌ಸ್ಟೇಬಲ್ ಪತ್ತೆಯಾಗಿದ್ದಾರೆ.ಜ್ಯೋತಿ (29) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಮಹಿಳಾ ಪೇದೆ.

ಜ್ಯೋತಿ ಅವರು ಉಡುಪಿ ಜಿಲ್ಲೆ ಕಾಪು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 

BIG NEWS : ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್‌ ನೂತನ ಸಂಸದ ಇ.ತುಕಾರಾಂ

Posted by Vidyamaana on 2024-06-14 18:14:17 |

Share: | | | | |


BIG NEWS : ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್‌ ನೂತನ ಸಂಸದ ಇ.ತುಕಾರಾಂ

ಬೆಂಗಳೂರು : ಬಳ್ಳಾರಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ನೂತನ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್ಸಿನ ಇ.ತುಕಾರಾಂ ಅವರು ಇಂದು ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು.ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿಗೆ ಇ. ತುಕಾರಾಮ್ ಅವರು ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.



Leave a Comment: