ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಸುದ್ದಿಗಳು News

Posted by vidyamaana on 2024-07-23 19:43:42 |

Share: | | | | |


ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಪುಣೆ: ಅತಿ ವೇಗ ಅಪಘಾತಕ್ಕೆ ಕಾರಣವೆಂದು ತಿಳಿದರೂ ಕೂಡ ಕೆಲವು ಚಾಲಕರು ಅವಸರದಲ್ಲಿ ವೇಗವಾಗಿ ವಾಹನ ಚಲಾಯಿಸಿ ಜನರ ಜೀವಕ್ಕೆ ಆಪತ್ತು ತರುತ್ತಿದ್ದಾರೆ. ಎಲ್ಲೆಂದರಲ್ಲಿ ನಿಂತ ಜನರ ಮೇಲೂ ವಾಹನವನ್ನು ಹಾರಿಸಿಕೊಂಡು ಹೋಗುತ್ತಾರೆ. ಇದೀಗ ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Hit and Run Case)ಆಗಿದೆ.ಪ್ರಿ-ಚಿಂಚ್ವಾಡ್‍ನಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಟ್ಯಾಕ್ಸಿ ಮಹಿಳೆಗೆ ಡಿಕ್ಕಿ ಹೊಡೆದು ನಂತರ ಚಾಲಕ ಅಪಘಾತದ ಸ್ಥಳದಿಂದ ಓಡಿಹೋದ ಹೊಸ ಹಿಟ್ ಅಂಡ್ ರನ್ ಪ್ರಕರಣ ವರದಿಯಾಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪುಣೆಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಪಿಂಪ್ರಿ-ಚಿಂಚ್ವಾಡ್‍ನಲ್ಲಿ ಈ ಘಟನೆ ನಡೆದಿದೆ. ಈ ಹಿಟ್ ಅಂಡ್ ರನ್ ಪ್ರಕರಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊದಲ್ಲಿ ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಎದುರಿಗೆ ವೇಗವಾಗಿ ಬಂದ ಟ್ಯಾಕ್ಸಿ ಮಹಿಳಾ ಪಾದಚಾರಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ರಸ್ತೆಯಲ್ಲಿದ್ದ ಇತರ ಜನರು ಆಕೆಯ ಸಹಾಯಕ್ಕಾಗಿ ಓಡಿ ಬರುತ್ತಿರುವುದು ಕಂಡುಬಂದಿದೆ. ಟ್ಯಾಕ್ಸಿಗೆ ಡಿಕ್ಕಿ ಹೊಡೆದ ಮಹಿಳೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಪಿಂಪ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಪ್ರಕರಣದ ಬಗ್ಗೆ ಪಿಂಪ್ರಿ-ಚಿಂಚ್ವಾಡ್ ಡಿಸಿಪಿ ಶಿವಾಜಿ ಪವಾರ್ ಮಾತನಾಡಿ, ಈ ಅಪಘಾತದಲ್ಲಿ ಸಂತ್ರಸ್ತೆ ರೇಖಾ ಗಾಯಗೊಂಡಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. 24 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನ ಚಾಲಕ ಕುಡಿದಿರಲಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೇಲ್ನೋಟಕ್ಕೆ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಮಹಾರಾಷ್ಟ್ರದಲ್ಲಿ ವರದಿಯಾದ ಮೊದಲ ಹಿಟ್ ಅಂಡ್ ರನ್ ಪ್ರಕರಣವಲ್ಲ. ಈಗಾಗಲೇ ಹಿಟ್ ಅಂಡ್ ರನ್ ಪ್ರಕರಣ ಮತ್ತೊಂದು ಸುದ್ದಿಯಲ್ಲಿ, ವೇಗವಾಗಿ ಬಂದ ಆಡಿ ಕಾರು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ. ಒಂದು ಆಟೋರಿಕ್ಷಾ ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮುಲುಂಡ್ ಪೊಲೀಸರು ಆಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ, ಆದರೆ ಅಪಘಾತದ ನಂತರ ಅದರ ಚಾಲಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

 Share: | | | | |


ಮೋದಿ 3.0 : ದೇವರ ಹೆಸರಲ್ಲಿ ಕೇಂದ್ರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ

Posted by Vidyamaana on 2024-06-09 21:35:34 |

Share: | | | | |


ಮೋದಿ 3.0 : ದೇವರ ಹೆಸರಲ್ಲಿ ಕೇಂದ್ರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ

ನವದೆಹಲಿ : ಈ ಬಾರಿ ಚಿಕ್ಕಮಂಗಳೂರು ಉಡುಪಿ ಕ್ಷೇತ್ರದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಬಿಜೆಪಿಯ ಶೋಭಾ ಕರಂದ್ಲಾಜೆ ಅವರು ಇಂದು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಶೋಭಾ ಕರಂದ್ಲಾಜೆ ಅವರು 2004ರಲ್ಲಿ ಬಿಜೆಪಿ ಎಂಎಲ್ಸಿಯಾಗಿ ಆಯ್ಕೆಯಾಗಿದ್ದಾರೆ. 2014ರಲ್ಲಿ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 2019 ರಲ್ಲಿ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾಗಿದ್ದು, ಶಾಸಕಿ,ಎಂಎಲ್ಸಿ ಹಾಗೂ ಸಂಸದರಾಗಿ ಆಯ್ಕೆಯಾಗಿದ್ದಾರೆ. 2018 ರಲ್ಲಿ ಬೆಂಗಳೂರಿನ ಯಶವಂತಪುರದ ಶಾಸಕಿಯಾಗಿದ್ದಾರೆ.

ಪತ್ನಿಯನ್ನು ನೇಣು ಬಿಗಿದು ಕೊಲೆಗೈದು ಎಸ್ಕೇಪ್ ಆದ ಪತಿ ಅರೆಸ್ಟ್

Posted by Vidyamaana on 2023-11-19 16:02:44 |

Share: | | | | |


ಪತ್ನಿಯನ್ನು ನೇಣು ಬಿಗಿದು ಕೊಲೆಗೈದು ಎಸ್ಕೇಪ್ ಆದ ಪತಿ ಅರೆಸ್ಟ್

ರಾಯಚೂರು: ಪತಿ ಮಹಾಶಯನೊಬ್ಬ ಪತ್ನಿಯನ್ನು ಹೊಡೆದು, ಆಕೆ ಪ್ರಜ್ಞೆ ತಪ್ಪುತ್ತಿದ್ದಂತೆ ನೇಣುಬಿಗಿದು ಸಾಯಿಸಿ ಎಸ್ಕೇಪ್ ಆಗಿರುವ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ಪಟೇಲವಾಡಿಯಲ್ಲಿ ನಡೆದಿದೆ.31 ವರ್ಷದ ಭುವನೇಶ್ವರಿ ಕೊಲೆಯಾದ ಮಹಿಳೆ. ಭುವನೇಶ್ವರಿ ಹಾಗೂ ನಾಗರಾಜ್ 14 ವರ್ಷಗಳ ಹಿಂದೆ ವಿವಾಹವಾಗಿದ್ದರು.ಪತಿ ನಾಗರಾಜ್ ಇತ್ತೀಚೆಗೆ ಕುಡಿದು ಬಂದು ಪತ್ನಿಗೆ ಹಿಂಸಿಸುತ್ತಿದ್ದ. ಅನಗತ್ಯವಾಗಿ ಜಗಳವಾಡುತ್ತಿದ್ದ.


ಈ ಬಾರಿ ಪತಿ-ಪತ್ನಿ ನಡುವೆ ಗಲಾಟೆ ವಿಕೋಪಕ್ಕೆ ತಿರುಗಿದ್ದು, ನಾಗರಾಜ್ ಪತ್ನಿಗೆ ಹೊಡೆದಿದ್ದಾನೆ. ಪತ್ನಿ ಭುವನೇಶ್ವರಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಪತ್ನಿ ಪ್ರಜ್ಞೆ ತಪ್ಪಿರುವುದು ಗೊತ್ತಾಗುತ್ತಿದ್ದಂತೆ ನಾಗರಾಜ್ ಆಕೆಯ ಕೊರಳಿಗೆ ನೇಣು ಬಿಗಿದು ಸಾಯಿಸಿದ್ದಾನೆ. ಬಳಿಕ ಮನೆಯಿಂದ ಪರಾರಿಯಾಗಿದ್ದಾನೆ.


ಭುವನೇಶ್ವರಿ ಪೋಷಕರು ಸಿಂಧನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಆರೋಪಿ ನಾಗರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ಬಿಜೆಪಿ ಟಿಕೆಟ್‌ ತಪ್ಪಿದ ಹಿನ್ನೆಲೆ ಇಂದು ಸಂಜೆ ಅರುಣ್ ಪುತ್ತಿಲ ಬೆಂಬಲಿಗರ ತುರ್ತು ಸಭೆ

Posted by Vidyamaana on 2023-04-12 04:38:26 |

Share: | | | | |


ಪುತ್ತೂರು ಬಿಜೆಪಿ ಟಿಕೆಟ್‌ ತಪ್ಪಿದ ಹಿನ್ನೆಲೆ ಇಂದು ಸಂಜೆ ಅರುಣ್ ಪುತ್ತಿಲ ಬೆಂಬಲಿಗರ ತುರ್ತು ಸಭೆ

ಪುತ್ತೂರು: ಜಿಲ್ಲೆಯ ಪ್ರಭಾವಿ ಹಿಂದೂ ಸಂಘಟನೆಯ ಮುಂದಾಳು ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಎ.12 ರಂದು ಬೆಂಬಲಿಗರ ನೇತೃತ್ವದಲ್ಲಿ ಇಂದು ಸಂಜೆ  ಕೋಟೇಚಾ ಹಾಲ್ ನಲ್ಲಿ ತುರ್ತು ಸಭೆ ನಡೆಯಲಿದೆ.ಅಭ್ಯರ್ಥಿಯಾಗಿ ಆಯ್ಕೆ ಮಾಡುವಂತೆ ಅವರ ಬೆಂಬಲಿಗರು ಟ್ವಿಟರ್ ಅಭಿಯಾನದ ಮೂಲಕ ನರೇಂದ್ರ ಮೋದಿ, ಅಮಿತ್ ಶಾ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಬಿಜೆಪಿಯ ಸರ್ವೇ ಕಾರ್ಯದಲ್ಲಿ ಕೇಳಿ ಬಂದಿದ್ದ ಆಕಾಂಕ್ಷಿತರ ಪಟ್ಟಿಯಲ್ಲಿ ಅರುಣ್ ಹೆಸರು ಕೂಡ ಇತ್ತು ಎನ್ನಲಾಗಿದ್ದು ಹೀಗಾಗಿ ಈ ಬಾರಿ ಅರುಣ್ ಅವರಿಗೆ ಟಿಕೇಟ್ ಸಿಗುವ ನಿರೀಕ್ಷೆಯನ್ನು ಬೆಂಬಲಿಗರು ಹೊಂದಿದ್ದರು.ಪಕ್ಷೇತರ ಸ್ಪರ್ದೆಗೆ ಒತ್ತಡ:

ಎ.10 ರಂದು ರಾತ್ರಿ ಪ್ರಕಟವಾದ ಬಿಜೆಪಿ ಅಭ್ಯರ್ಥಿ ಪಟ್ಟಿಯಲ್ಲಿ ಅರುಣ್ ಪುತ್ತಿಲ ಹೆಸರಿಲ್ಲದ ಹಿನ್ನೆಲೆಯಲ್ಲಿ ಅರುಣ್ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಒತ್ತಡ ಹೇರಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ತುರ್ತು ಸಭೆ ಮಹತ್ವ ಪಡೆದಿದೆ.

ಪುತ್ತೂರು :ವಿವೇಕಾನಂದ ಪದವಿ ಕಾಲೇಜು ಚುನಾವಣೆ : ಅಧ್ಯಕ್ಷ ಆಶೀಶ್ ಆಳ್ವ, ಕಾರ್ಯದರ್ಶಿ ನಿಖಿಲ್, ಜೊತೆ ಕಾರ್ಯದರ್ಶಿ ಪೃಥ್ವಿ ಆಳ್ವ ಆಯ್ಕೆ

Posted by Vidyamaana on 2024-08-22 18:47:22 |

Share: | | | | |


ಪುತ್ತೂರು :ವಿವೇಕಾನಂದ ಪದವಿ ಕಾಲೇಜು ಚುನಾವಣೆ : ಅಧ್ಯಕ್ಷ ಆಶೀಶ್ ಆಳ್ವ, ಕಾರ್ಯದರ್ಶಿ ನಿಖಿಲ್, ಜೊತೆ ಕಾರ್ಯದರ್ಶಿ ಪೃಥ್ವಿ ಆಳ್ವ  ಆಯ್ಕೆ

ಪುತ್ತೂರು : ನೆಹರುನಗರದಲ್ಲಿರುವ ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿಗಳ ಚುನಾವಣಾ ಪ್ರಕ್ರಿಯೆ ಆ 22 ರಂದು ನಡೆಯಿತು.

ಅಧ್ಯಕ್ಷರಾಗಿ ಮಾಣಿ ಕೊಡಾಜೆ ನಿವಾಸಿ, ತೃತೀಯ ಬಿಬಿಎ ವ್ಯಾಸಂಗ ಮಾಡುತ್ತಿರುವ ಆಶೀಶ್ ಆಳ್ವ ಆಯ್ಕೆಯಾದರು.

ರೀಲ್ಸ್‌ಗಾಗಿ ರಸ್ತೆಯಲ್ಲಿ ಶಾಲಾ ಬಾಲಕಿಯರ ಸ್ಟಂಟ್, ಮುಂದೇನಾಯ್ತು ನೋಡಿ!

Posted by Vidyamaana on 2024-06-25 17:16:35 |

Share: | | | | |


ರೀಲ್ಸ್‌ಗಾಗಿ ರಸ್ತೆಯಲ್ಲಿ ಶಾಲಾ ಬಾಲಕಿಯರ ಸ್ಟಂಟ್, ಮುಂದೇನಾಯ್ತು ನೋಡಿ!

ರೀಲ್ಸ್ ಇಲ್ಲದೆ ದಿನವೇ ಮುಂದೆ ಸಾಗದ ಪರಿಸ್ಥಿತಿ ಎದುರಾಗಿದೆ. ರೀಲ್ಸ್‌ಗಾಗಿ ಜನರು ಅಪಾಯಕಾರಿ ಸ್ಟಂಟ್ ಮಾಡಿ ಗಮನಸೆಳೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಈ ರೀತಿಯ ಸ್ಟಂಟ್ ದುರಂತದಲ್ಲಿ ಅಂತ್ಯವಾಗಿದೆ. ಶಾಲಾ ಬಾಲಕಿಯರಿಬ್ಬರು ರೀಲ್ಸ್‌ಗಾಗಿ ಸ್ಟಂಟ್ ಮಾಡಿದ್ದಾರೆ. ಒರ್ವ ಬಾಲಕಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಪ್ರಯತ್ನಿಸಿದ್ದಾಳೆ. ಆದರೆ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದೆ. ಪರಿಣಾಮ ಬಾಲಕಿ ಇದೀಗ ಎದ್ದು ನಿಲ್ಲದ ಪರಿಸ್ಥಿತಿಯಲ್ಲಿದ್ದಾಳೆ.ಶಾಲಾ ಸಮವಸ್ತ್ರದಲ್ಲಿರುವ ಇಬ್ಬರು ಬಾಲಕಿಯರು ಹೆದ್ದಾರಿಯಲ್ಲಿ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಬಾಲಕಿಯರ ಸ್ಟಂಟ್ ಮತ್ತಷ್ಟು  ವೈರಲ್ ಆಗಲಿದೆ ಎಂದು ಸಾಹಸ ಪ್ರದರ್ಶನ ಮಾಡಿದ್ದಾರೆ. ರಸ್ತೆಯಲ್ಲಿ ಬಾಲಕಿ ಮತ್ತೊಬ್ಬ ಬಾಲಕಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಮಾಡಿದ್ದಾಳೆ. ಎತ್ತರದಿಂದ ಬ್ಯಾಕ್ ಫ್ಲಿಪ್ ಪ್ರಯತ್ನಿಸಿದ ಬಾಲಕಿ ನೆಲಕ್ಕೆ ಲ್ಯಾಂಡಿಂಗ್ ಆಗವಾಗ ಕಾಲು ಜಾರಿದೆ. ಪರಿಣಾಮ ದೊಪ್ಪನೆ ಬಿದ್ದಿದ್ದಾಳೆ.

ಹಬ್ಬಗಳ ಹಿನ್ನಲೆ ಪುತ್ತೂರು ಠಾಣೆಯಲ್ಲಿ ಶಾಂತಿಸಭೆ ಕಾನೂನು ಸುವ್ಯವಸ್ಥೆಗೆ ಸಹಕಾರ ನೀಡಿ- ಇನ್ಸ್ಪೆಕ್ಟರ್ ಸತೀಶ್‌ಕುಮಾರ್.

Posted by Vidyamaana on 2024-08-31 06:12:37 |

Share: | | | | |


ಹಬ್ಬಗಳ ಹಿನ್ನಲೆ ಪುತ್ತೂರು ಠಾಣೆಯಲ್ಲಿ ಶಾಂತಿಸಭೆ ಕಾನೂನು ಸುವ್ಯವಸ್ಥೆಗೆ ಸಹಕಾರ ನೀಡಿ- ಇನ್ಸ್ಪೆಕ್ಟರ್ ಸತೀಶ್‌ಕುಮಾರ್.

ಪುತ್ತೂರು; ಪುತ್ತೂರಿನಲ್ಲಿ ಯಾವುದೇ ಧರ್ಮದ ಹಬ್ಬಗಳ ಸಂದರ್ಭದಲ್ಲಿಯೂ ಯಾವುದೇ ತೊಂದರೆ ಈ ತನಕ ಉಂಟಾಗಿಲ್ಲ. ಈ ಬಾರಿಯೂ ಅಂತಹ ಯಾವುದೇ ಕೆಟ್ಟ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆಗೆ ಜನತೆಯ ಸಹಕಾರ ಬೇಕು ಎಂದು ಇನ್ಸ್ಪೆಕ್ಟರ್ ಸತೀಶ್‌ಕುಮಾರ್ ಹೇಳಿದರು.

ಗುರುವಾರ ಪುತ್ತೂರು ನಗರಠಾಣೆಯಲ್ಲಿ ಗಣೇಶೋತ್ಸವ ಹಾಗೂ ಈದ್‌ಮಿಲಾದ್ ಹಬ್ಬದ ಹಿನ್ನಲೆ ನಡೆದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಹಬ್ಬಗಳ ಆಚರಣೆ ಮತ್ತು ಮೆರವಣಿಗೆ ಸಂದರ್ಭದಲ್ಲಿ ಡಿ.ಜೆಗೆ ಆವಕಾಶ ಇಲ್ಲ. ದೇವಾಲಯ, ಮಸೀದಿಗಳ ಮುಂಭಾಗದಲ್ಲಿ ಮೆರವಣಿಗೆ ಸಂದರ್ಭ ಯಾವುದೇ ಅನಗತ್ಯ ಘೋಷಣೆಗೆ ಅವಕಾಶ ಇಲ್ಲ. ಕಾರ್ಯಕ್ರಮಗಳನ್ನು ರಾತ್ರಿ ೧೦ ಗಂಟೆಯ ಒಳಗೆ ಮುಗಿಸಬೇಕು. ಸಮಯಪಾಲನೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಹಾಜರಿದ್ದ ವಿವಿಧ ಸಂಘಟನೆಗಳ ಮುಖಂಡರಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದರು.


Recent News


Leave a Comment: