ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಸರಕಾರಿ ಕಛೇರಿ, ಶಾಲಾ, ಕಾಲೇಜು, ಸಂಘ ಸಂಸ್ಥೆಗಳಲ್ಲಿ ಸಂವಿಧಾನ ಪೀಠಿಕೆ ಅಂಬೇಡ್ಕರ್ ಭಾವಚಿತ್ರ ಕಡ್ಡಾಯಗೊಳಿಸಿ-ಸ್ಪೀಕರ್ ಯು.ಟಿ ಖಾದರ್‌ಗೆ ಮನವಿ

Posted by Vidyamaana on 2024-07-28 18:18:09 |

Share: | | | | |


ಸರಕಾರಿ ಕಛೇರಿ, ಶಾಲಾ, ಕಾಲೇಜು, ಸಂಘ ಸಂಸ್ಥೆಗಳಲ್ಲಿ ಸಂವಿಧಾನ ಪೀಠಿಕೆ ಅಂಬೇಡ್ಕರ್ ಭಾವಚಿತ್ರ ಕಡ್ಡಾಯಗೊಳಿಸಿ-ಸ್ಪೀಕರ್ ಯು.ಟಿ ಖಾದರ್‌ಗೆ ಮನವಿ

ಪುತ್ತೂರು: ಭಾರತೀಯ ಸಂವಿಧಾನ ಪೀಠಿಕೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಎಲ್ಲಾ ಸರಕಾರಿ ಕಛೇರಿ, ಅರೆ ಸರಕಾರಿ ಕಛೇರಿ, ಶಾಲೆ, ಕಾಲೇಜು, ನ್ಯಾಯಾಲಯ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರಿಗೆ ಪುತ್ತೂರು ಸುದಾನ ವಿದ್ಯಾಸಂಸ್ಥೆಗಳ ಸಂಚಾಲಕ ರೆ.ವಿಜಯ ಹಾರ್ವಿನ್ ಹಾಗೂ ಸ್ವರ ಮಾಧುರ್ಯ ಸಂಗೀತ ಬಳಗದ ಸಲಹೆಗಾರ ಜನಾರ್ದನ್ ಬಿ.ರವರನ್ನು ಒಳಗೊಂಡ ದಕ್ಷಿಣ ಕನ್ನಡದ ನಿಯೋಗ ಜು.೨೭ ರಂದು ಮಂಗಳೂರಿನಲ್ಲಿ ಮನವಿ ಮಾಡಿದೆ.

ಸಂವಿಧಾನ ಆಶಯ ಮತ್ತು ಗುರಿಯನ್ನು ವಿವರಿಸುವ ಸಂವಿಧಾನದ ಮುಕುಟದಂತಿರುವ ಸಂವಿಧಾನ ಪೀಠಿಕೆ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಎಲ್ಲಾ ಕಡೆಗಳಲ್ಲೂ ಅಳವಡಿಸಬೇಕು, ಇದರಿಂದಾಗಿ ಸಂವಿಧಾನದ ಜಾಗೃತಿ ಮೂಡಿಸಿದಂತಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಪತ್ರಕರ್ತ ಸಿಶೇ ಕಜೆಮಾರ್, ಜಿಲ್ಲಾ ದಲಿತ ಸೇವಾ ಸಮಿತಿ ವಿಟ್ಲ ಇದರ ಸ್ಥಾಪಕ ಅಧ್ಯಕ್ಷ ಶೇಷಪ್ಪ ಬೆದ್ರಕಾಡ್, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಬಡಗನ್ನೂರು ಅವರನ್ನು ಒಳಗೊಂಡ ನಿಯೋಗ ಮನವಿ ಸಲ್ಲಿಸಿದೆ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಅಪರ ಜಿಲ್ಲಾ ಅಪರ ಸರ್ಕಾರಿ ವಕೀಲರಾದ ಮನೋರಾಜ್ ರಾಜೀವ, ಮಂಗಳೂರು ಮಹಾನಗರಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ಉಪಸ್ಥಿತರಿದ್ದರು.

ಪುತ್ತೂರು : ಮಾಜಿ ಶಾಸಕ ಸಂಜೀವ ಮಠಂದೂರು ರವರಿಗೆ ಹಾವು ಕಡಿತ

Posted by Vidyamaana on 2023-11-16 21:14:49 |

Share: | | | | |


ಪುತ್ತೂರು : ಮಾಜಿ ಶಾಸಕ ಸಂಜೀವ ಮಠಂದೂರು ರವರಿಗೆ ಹಾವು ಕಡಿತ

ಪುತ್ತೂರು : ಮಾಜಿ ಶಾಸಕ ಸಂಜೀವ ಮಠಂದೂರು ರವರಿಗೆ ಮನೆಯಲ್ಲಿ ವಾಕಿಂಗ್ ನಡೆಸುವ ವೇಳೆ ಹಾವೊಂದು ಕಚ್ಚಿರುವ ಬಗ್ಗೆ ವರದಿಯಾಗಿದೆ.


ಸಂಜೀವ ಮಠಂದೂರು ರವರು ಸಂಜೆ ವೇಳೆ ಮನೆ ಸಮೀಪ ವಾಕಿಂಗ್ ನಡೆಸುತ್ತಿದ್ದು, ಈ ವೇಳೆ ಹಾವು ಕಚ್ಚಿದೆ ಎನ್ನಲಾಗಿದೆ.


ತಕ್ಷಣ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಅವರು ಯಾವುದೇ ತೊಂದರೆಯಿಲ್ಲದೆ., ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವ್ಯಸಗಿದ ಪ್ರಕರಣ : ಅರ್ಜಿ ವಾಪಸ್ ಪಡೆದ HD ರೇವಣ್ಣ

Posted by Vidyamaana on 2024-05-03 12:33:26 |

Share: | | | | |


ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವ್ಯಸಗಿದ ಪ್ರಕರಣ : ಅರ್ಜಿ ವಾಪಸ್ ಪಡೆದ HD ರೇವಣ್ಣ

ಬೆಂಗಳೂರು : ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಸಗಿದ ಕೇಸ್ ಸಂಬಂಧಿಸಿದಂತೆ ಶಾಸಕ HD ರೇವಣ್ಣ ನಿನ್ನೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕುರಿತಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಿತು. ನಂತರ ಎಸ್‌ಐಟಿ ಹೇಳಿಕೆ ಹಿನ್ನೆಲೆಯಲ್ಲಿ ಇದೀಗ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನ್ಯಾಷನಲ್ ಬ್ಯಾಂಕ್ ಗಳಿಗ ಆಯ್ತು – ಈಗ ಸಹಕಾರಿ ಬ್ಯಾಂಕ್ ಗಳಿಗೂ ದೋಖಾ..!?

Posted by Vidyamaana on 2023-09-25 12:32:36 |

Share: | | | | |


ನ್ಯಾಷನಲ್ ಬ್ಯಾಂಕ್ ಗಳಿಗ ಆಯ್ತು – ಈಗ ಸಹಕಾರಿ ಬ್ಯಾಂಕ್ ಗಳಿಗೂ ದೋಖಾ..!?

ಬೆಂಗಳೂರು : ದೇಶದ ವಿವಿಧ ನ್ಯಾಷನಲ್ ಬ್ಯಾಂಕ್ ಗಳಲ್ಲಿ ಕೋಟಿ ಕೋಟಿ ಸಾಲ ಪಡೆದಂತ ಅನೇಕರು ದೇಶದಿಂದಲೇ ಪರಾರಿಯಾಗಿದ್ದಾರೆ. ಈಗ ರಾಜ್ಯದ ವಿವಿಧ ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಪಡೆದಿದ್ದಂತ 2,888 ಮಂದಿ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ.ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕ್, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್(DCC) ಸೇರಿದಂತೆ ವಿವಿಧ ಸಹಕಾರಿ ಬ್ಯಾಂಕ್ ಗಳಿಂದ 1,404 ಕೋಟಿ ಸಾಲವನ್ನು ಪಡೆದಿದ್ದಂತ 2,888 ಮಂದಿ ಸಾಲ ತೀರಿಸಲು ಆಗದೇ ನಾಪತ್ತೆಯಾಗಿರೋ ಶಾಕಿಂಗ್ ವಿಚಾರ ಬಯಲಾಗಿದೆ.ಇನ್ನೂ ಹೀಗೆ 1,404 ಕೋಟಿ ಸಾಲ ಪಡೆದು ನಾಪತ್ತೆಯಾಗಿರುವಂತ 2,888 ಮಂದಿಯಲ್ಲಿ ಬೆಂಗಳೂರಿನ ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಸಹಕಾರಿ ಬ್ಯಾಂಕಿನದ್ದೇ ಸಿಂಹಪಾಲು ಆಗಿದೆ. ಈ ಹಿನ್ನಲೆಯಲ್ಲಿ ಈ ಬ್ಯಾಂಕ್ ಎವರ್ ಗ್ರೀನ್ ಕ್ರೆಡಿಟ್ ಎಂಬುದಾಗಿ ಹಾಗೂ 1,400 ಕೋಟಿ ರೂ.ಸಾಲವನ್ನು ಅನುತ್ಪಾದಕ ಆಸ್ತಿನಷ್ಟವೆಂದೂ ಘೋಷಿಸಿದೆ.


ರಾಜ್ಯದ ಇತರೆ ಸಹಕಾರಿ ಬ್ಯಾಂಕ್ ಗಳಲ್ಲಿ 25 ರಿಂದ 30 ವರ್ಷಗಳಿಂದ ಸಾಲಗಾರರು, ತಾವು ಪಡೆದಿರುವ ಸಾಲ ಪಾವತಿಸದಿರುವ ಪರಿಣಾಮ ಅಸಲುಗಿಂತ ಬಡ್ಡಿಯೇ ಜಾಸ್ತಿಯಾಗಿದೆ. ಕೆಲವರು ತಪ್ಪು ವಿಳಾಸ ಕೊಟ್ಟು ಸಾಲ ಪಡೆದಿದ್ದರೇ, ಕೆಲವರು ಸಾಲ ಪಡೆದು ಅಸಲು, ಬಡ್ಡಿ ಕಟ್ಟದೇ ನಾಪತ್ತೆಯಾಗಿದ್ದಾರೆ.ಅಂದಹಾಗೇ ಬೆಂಗಳೂರಲ್ಲಿ 2,485 ಮಂದಿಯಿಂದ 1,406 ಕೋಟಿ ರೂ, ಮೈಸೂರಲ್ಲಿ 132 ಸಾಲಗಾರರಿಂದ 57 ಲಕ್ಷ, ಬೆಳಗಾವಿ 15 ಮಂದಿಯಿಂದ 41 ಲಕ್ಷ ರೂ ಸೇರಿದಂತೆ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಗಳಲ್ಲಿ ಒಟ್ಟು 2,632 ಮಂದಿ ಪಟ್ಟಣ ಸಹಕಾರ ಬ್ಯಾಂಕ್ ಗಳಿಂದ ಸಾಲ ಪಡೆದಿದ್ದಾರೆ. ಇವರಲ್ಲಿ ಒಟ್ಟಾರೆ 2,888 ಮಂದಿ ಸಾಲವನ್ನು ತೀರಿಸಲಾಗದೇ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.

ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ ನಿಧನ

Posted by Vidyamaana on 2024-06-30 16:12:44 |

Share: | | | | |


ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ ನಿಧನ

ಬೆಂಗಳೂರು ,ಜೂ.30- ಮಾಜಿ ಮುಖ್ಯಮಂತ್ರಿವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ (50) ಅನಾರೋಗ್ಯದಿಂದ ನಿಧನವಾಗಿದ್ದಾರೆ.ಅನಾರೋಗ್ಯದಿಂದಾಗಿ ಏಕಾಏಕಿ ಬಳಲಿದ್ದ ಅವರು, ನಿನ್ನೆ ಸಂಜೆ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 23

Posted by Vidyamaana on 2023-09-23 04:40:38 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 23

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಸೆ 23 ರಂದು



*9.30 ಕ್ಕೆಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ದಸರಾ ಉದ್ಘಾಟನೆ*



*10.30ಕ್ಕೆ ಬೈಪಾಸ್ ಉದಯಗಿರಿ  ಸಭಾಭವನದಲ್ಲಿ  ರೈ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಸಭೆ*


*12.30ಕ್ಕೆ ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ* *ವಿದ್ಯಾರ್ಥಿ ಸಂಘ ಉದ್ಘಾಟನೆ*

ಸ್ಥಳ: ಜೈನ ಭವನ ಪುತ್ತೂರು


*1 ಗಂಟೆಗೆ ಮುಂಡೂರು ಸಿ ಎ ಬ್ಯಾಂಕ್ ಮಹಾಸಭೆ*


*3 ಗಂಟೆಗೆ ಶಾಸಕರ ಕಚೇರಿಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿ ವಿತರಣೆ*


*ಸಂಜೆ 5 ಗಂಟೆಗೆ ಲೋಕೋಪಯೋಗಿ ಇಲಾಖಾ ವತಿಯಿಂದ ರಸ್ತೆ ಬದಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ*


*ಸಂಜೆ 6 ಗಂಟೆಗೆ ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯ ಗಣೇಶೋತ್ಸವದಲ್ಲಿ ಸರ್ದ ಧರ್ಮ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ*

Recent News


Leave a Comment: