ಜುಂಬಾ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಸುದ್ದಿಗಳು News

Posted by vidyamaana on 2024-07-23 06:33:29 | Last Updated by Vidyamaana on 2024-07-23 06:33:29

Share: | | | | |


ಜುಂಬಾ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಮುಂಬೈ :ಫಿಟ್ನೆಸ್ ಕಾಪಾಡಿಕೊಳ್ಳಲು ಹಲವರು ಜುಂಬಾ ಡ್ಯಾನ್ಸ್ ಮೊರೆ ಹೋಗುತ್ತಾರೆ. ಪ್ರತಿ ದಿನ ಜುಂಬಾ ಡ್ಯಾನ್ಸ್ ಕ್ಲಾಸ್‌ಗೆ ತೆರಳಿ ಬೆವರು ಹರಿಸುತ್ತಾರೆ. ಹೀಗೆ ಮಹಾರಾಷ್ಟ್ರದ ಉದ್ಯಮಿ ಕವಲ್ಜಿತ್ ಸಿಂಗ್ ಬಗ್ಗಾ ಫಿಟ್ನೆಸ್‌ಗಾಗಿ ಪ್ರತಿ ದಿನ ಜುಂಬಾ ಕ್ಲಾಸ್‌ಗೆ ತೆರಳಿ ಡ್ಯಾನ್ಸ್ ಮಾಡುತ್ತಾ ಬೆವರು ಹರಿಸುತ್ತಾರೆ.

ಇಂದು ಬೆಳಗ್ಗೆ ಜುಂಬಾ ಡ್ಯಾನ್ಸ್ ಮಾಡುತ್ತಿದ್ದಂತೆ ಉದ್ಯಮಿ ಕವಲ್ಜಿತ್ ಸಿಂಗ್ ಬಗ್ಗಾ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಉದ್ಯಮಿ ಬದುಕುಳಿಯಲಿಲ್ಲ.


ಛತ್ರಪತಿ ಸಂಭಾಜಿನಗರದ ನಿವಾಸಿಯಾಗಿರುವ ಅವಲ್ಜಿತ್ ಸಿಂಗ್ ಬಾಗ್ಗಾ ಪ್ರತಿದಿನ ಜುಂಬಾ ಡ್ಯಾನ್ಸ್ ಮಾಡುತ್ತಾರೆ. ಎಂದಿನಂತೆ ಇಂದೂ ಕೂಡ ಅವಲ್ಜಿತ್ ಸಿಂಗ್ ಬಾಗ್ಗಾ ಜುಂಬಾ ಡ್ಯಾನ್ಸ್‌ಗೆ ತೆರಳಿದ್ದಾರೆ. ಅವಲ್ಜಿತ್ ಸಿಂಗ್ ರೀತಿಯಲ್ಲಿ ಇತರ ಕೆಲವರು ಜುಂಬಾ ಡ್ಯಾನ್ಸ್ ಮಾಡುತ್ತಿದ್ದಾರೆ. ಜುಂಬಾ ಕ್ಲಾಸ್ ತೆರಳಿ 15 ನಿಮಿಷಗಳ ಕಾಲ ಡ್ಯಾನ್ಸ್ ಮಾಡಿದ್ದಾರೆ. ಹಲವರು ಇದೇ ಕ್ಲಾಸ್‌ನಲ್ಲಿ ಅವಲ್ಜಿತ್ ಸಿಂಗ್ ಜೊತೆ ಡ್ಯಾನ್ಸ್ ಮಾಡಿದ್ದಾರೆ.

ಕೊನೆಯ ಸಾಲಿನ ಬದಿಯಲ್ಲಿದ್ದ ಅವಲ್ಜಿತ್ ಸಿಂಗ್ ಡ್ಯಾನ್ಸ್ ಮಾಡುತ್ತಿದ್ದಂತೆ ಹೃದಯಾಘಾತವಾಗಿದೆ. ಡ್ಯಾನ್ಸ್ ಮಾಡಲು ಸಾಧ್ಯವಾಗದೆ ನಿಂತಿದ್ದಾರೆ. ಚೇತರಿಸಿಕೊಳ್ಳಲು ಕೆಲ ಕ್ಷಣ ನಿಂತಿದ್ದಾರೆ. ಇತರರು ಡ್ಯಾನ್ಸ್‌ನಲ್ಲಿ ತಲ್ಲೀನರಾಗಿದ್ದರು. ಆದರೆ ಅವಲ್ಜಿತ್ ಸಿಂಗ್ ಚೇತರಿಸಿಕೊಳ್ಳಲಿಲ್ಲ. ಕಾರಣ ತೀವ್ರ ಹೃದಯಾಘಾತದಿಂದ ಅವಲ್ಜಿತ್ ಕುಸಿದಿದ್ದಾರೆ. ಈ ವೇಳೆ ಮೆಲ್ಲನೆ ಕುಳಿತುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಅವಲ್ಜಿತ್ ಸಿಂಗ್ ಕುಸಿದು ಬೀಳುತ್ತಿದ್ದಂತೆ ಇತರರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ನೀರು ತಂದು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದಕ್ಕೂ ಅವಲ್ಜಿತ್ ಸಿಂಗ್ ಸ್ಪಂದಿಸಿಲ್ಲ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಅವಲ್ಜಿತ್ ಎತ್ತಿಕೊಂಡು ವಾಹನದ ಮೂಲಕ ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆ ದಾಖಲಿಸುವ ಮೊದಲೇ ಅವಲ್ಜಿತ್ ಸಿಂಗ್ ಬಾಗ್ಗಾ ಪ್ರಾಣ ಪಕ್ಷಿ ಹಾರಿಹೋಗಿದೆ. ತಪಾಸಣೆ ನಡೆಸಿದ ವೈದ್ಯರು ಅವಲ್ಜಿತ್ ಸಿಂಗ್ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.

ಜಿಮ್ ಅಭ್ಯಾಸದ ವೇಳೆ ಈ ರೀತಿ ಹೃದಯಾಘಾತಕ್ಕೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚಗೆ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಬೆಳವಣಿಗೆ ನಡುವೆ ಇದೀಗ ಉದ್ಯಮಿ ಅವಲ್ಜಿತ್ ಸಿಂಗ್ ಬಾಗ್ಗಾ ನಿಧನ ಸುದ್ದಿ ಆತಂಕ ಹೆಚ್ಚಿಸಿದೆ. ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದ ಕವಲ್ಜಿತ್ ಸಿಂಗ್ ದಿಢೀರ್ ನಿಧನ ಇದೀಗ ಮತ್ತೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

 Share: | | | | |


ಇಂದು (ಜು 22)ಪತ್ರಿಕಾ ದಿನಾಚರಣೆ ಸಾಧಕರಿಗೆ ಸನ್ಮಾನ ಉಪನ್ಯಾಸ

Posted by Vidyamaana on 2023-07-21 23:20:36 |

Share: | | | | |


ಇಂದು (ಜು 22)ಪತ್ರಿಕಾ ದಿನಾಚರಣೆ ಸಾಧಕರಿಗೆ ಸನ್ಮಾನ ಉಪನ್ಯಾಸ

ಪುತ್ತೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕ ಪತ್ರಿಕಾ ಭವನದ ನೇತೃತ್ವದಲ್ಲಿ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ ಮತ್ತು ಉಪನ್ಯಾಸ ಕಾರ್ಯಕ್ರಮ ಜುಲೈ 22ರಂದು ಬೆಳಿಗ್ಗೆ 10ಕ್ಕೆ ಕಾಲೇಜು ಆವರಣದಲ್ಲಿ ನಡೆಯಲಿದೆ.

ಸಮಾರಂಭವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಸಿದ್ದಿಕ್ ನೀರಾಜೆ ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತ ಪ್ರಿಯಾ ನಾಯ್ಕ್ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ, ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿ.ಎಸ್. ರವಿ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಷಾಚಂದ್ರ ಮುಳಿಯ ಉಪಸ್ಥಿತರಿರುವರು.

ಇದೇ ಸಂದರ್ಭ ಹಿರಿಯ ಪತ್ರಿಕಾ ವಿತರಕ ಯು. ನಾಗರಾಜ್, ಬಳ್ಳಿ ನೆಕ್ಕಿಲಾಡಿಯ ಸಮಗ್ರ ಸಾವಯವ ಕೃಷಿಕ ಐರಿನ್ ಲೋಬೋ, ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದ ರೆಹನಾಝ್ ಅವರನ್ನು ಸನ್ಮಾನಿಸಲಾಗುವುದು.

ಬೆಂಗಳೂರು ಅನನ್ಯ ಎಂಟರ್ ಪ್ರೈಸಸ್ ನ ನಟೇಶ್ ಪೂಜಾರಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಕೆ.ವಿ. ಪ್ರಸಾದ್, ಬಿ.ಎಸ್.ಎಫ್. ನಿವೃತ್ತ ಕಮಾಂಡೆಂಟ್ ಚಂದಪ್ಪ ಮೂಲ್ಯ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ನದಿಗೆ ಹಾರಿ ಆತ್ಮಹತ್ಯೆಗೈದ ಪುತ್ತೂರಿನ ವಿಘ್ನೇಶ್ ಕಾಮತ್

Posted by Vidyamaana on 2023-03-26 10:04:37 |

Share: | | | | |


ನದಿಗೆ ಹಾರಿ ಆತ್ಮಹತ್ಯೆಗೈದ ಪುತ್ತೂರಿನ  ವಿಘ್ನೇಶ್ ಕಾಮತ್

ಪುತ್ತೂರು: ಇಲ್ಲಿನ ಕೋರ್ಟ್ ರೋಡಿನಲ್ಲಿರುವ ಅಂಗಡಿಯೊಂದರ ಮಾಲಕ ದಿವಂಗತ ವಿಠಲ್ ಕಾಮತ್ ಅವರ ಪುತ್ರ ವಿಘ್ನೇಶ್ ಕಾಮತ್ (೩೨) ಅವರು ಭಾನುವಾರ ಮಧ್ಯಾಹ್ನ ನೇತ್ರಾವತಿ ನದಿಗೆ ಹಾರಿ ಆತಹತ್ಯೆಗೈದಿದ್ದಾರೆ.

ಕೆಮ್ಮಿಂಜೆ ನಿವಾಸಿಯಾಗಿರುವ ಇವರು, ಕೋರ್ಟ್ ರೋಡಿನಲ್ಲಿ ಜನರಲ್ ಸ್ಟೋರ್ ನಡೆಸುತ್ತಿದ್ದರು. ಕೆಲವು ದಿನಗಳ ಹಿಂದೆಯೂ ಒಮ್ಮೆ ಆತ್ಮಹತ್ಯೆಗೆ ಯತ್ನ ನಡೆಸಿದ್ದರು ಎಂದು ಹೇಳಲಾಗಿದೆ.ನೇತ್ರಾವತಿ ಸೇತುವೆಯ ಬಳಿ ದ್ವಿಚಕ್ರ ಜೂಪಿಟಾರ್ (KA21v3955) ಇದ್ದು ಯಾರು ಇಲ್ಲದ ಬಗ್ಗೆ ಸಂಶಯಗೊಂಡ ಸ್ಥಳೀಯ ಈಜುಗಾರರಾದ ಇಬ್ರಾಹಿಂ, ಮುಹಮ್ಮದ್ ಮಮ್ಮು ನೇತೃತ್ವದ ಯುಕವರ ತಂಡ ನೇತ್ರವತಿ ನದಿಯ ಅಸುಪಾಸು ಹುಡುಕಾಡಿದಾಗ  ನದಿಯಲ್ಲಿ ಮೃತದೇಹಯೊಂದು ನದಿಯಲ್ಲಿ ತೆಲುತೀತು ನಂತರ ಯುವಕರ ತಂಡ ನೀರಿಗೆ  ಇಳಿದು ನೀರಿನಿಂದ ಮೃತ ದೇಹವನ್ನು ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರು  ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯ ಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.ಮೃತರು ತಾಯಿ ಮತ್ತು ತಂಗಿಯನ್ನು ಅಗಲಿದ್ದಾರೆ.


ಅ.6 ಮತ್ತು 7 ರಂದು ಮೂಡಬಿದ್ತೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ

Posted by Vidyamaana on 2023-10-05 21:55:47 |

Share: | | | | |


ಅ.6 ಮತ್ತು 7 ರಂದು ಮೂಡಬಿದ್ತೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ


ಪುತ್ತೂರು: ಅ.7 ಮತ್ತು 7 ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು ವಿದ್ಯಾವಂತ ಯುವಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.

ಉದ್ಯೋಗ ಮೇಳದಲ್ಲಿ 204 ಕ್ಕೂ ಮಿಕ್ಕಿ ವಿವಿಧ ಕಂಪೆನಿಗಳು ಭಾಗವಹಿಸುತ್ತಿದ್ದು ಮೇಳದಲ್ಲಿ ಭಾಗವಹಿಸುವ ಸಾವಿರಾರು‌ಮಂದಿಗೆ ಉದ್ಯೋಗ ದೊರೆಯಲಿದೆ. ಗ್ರಾಮೀಣ ಭಾಗದ ನಿರುದ್ಯೋಗಿ ವಿದ್ಯಾವಂತ ಯುವಕರು ಇದರಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿಗ್ರಿ ಕಾಲೇಜು, ಐಟಿಐ ತರಬೇತಿ ಕೇಂದ್ರಗಳು, ಡಿಪ್ಲೋಮಾ ಕೋರ್ಸು‌ಮಾಡಿದವರು,ಬಿ ಎ ,ಬಿಕಾಂ, ಬಿಎಸ್ಸಿ ಹಾಗೂ ಇನ್ನಿತರ ಪಧವೀದರರು ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಸಣ್ಣ ಉದ್ಯೋಗದಿಂದ ಆರಂಭಗೊಂಡು ದೊಡ್ಡ ಹುದ್ದೆಯವರೆಗೂ ಮೇಳದಲ್ಲಿ ಆಯ್ಕೆಗಳು ನಡೆಯುತ್ತದೆ ಎಂದು ಹೇಳಿದರು.


ದ ಕ ಜಿಲ್ಲೆಯವರು ಹಿಂದೇಟು ಹಾಕುತ್ತಿದ್ದಾರೆ: ವಿವೇಕ ಆಳ್ವ

ಸಭೆಯಲ್ಲಿ‌ಮಾತನಾಡಿದ‌ ಉದ್ಯೋಗ‌ಮೇಳದ ರುವಾರಿ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರಾದ ವಿವೇಕ ಆಳ್ವರವರು ಮಾತನಾಡಿ ದ ಕ ಮತ್ತು ಉಡುಪಿ ಜಿಲ್ಲೆಯವರು ಉದ್ಯೋಗ ಮೇಳಕ್ಕೆ ಬರುವುದು ಅಪರೂಪ ಎಂಬಂತಾಗಿದೆ. ಸಾವಿರಾರು ಮಂದಿ ಭಾಗವಹಿಸುವ ಮೇಳದಲ್ಲಿ‌ಬೆರಳೆಣಿಕೆಯ‌ ಮಂದಿ ಮಾತ್ರ ನಮ್ಮ‌ಜಿಲ್ಲೆಯವರು ಭಾಗವಹಿಸುತ್ತಾರೆ. ಸಾವಿರಾರು ಮಂದಿ ಮೇಳದಲ್ಲಿ ಭಾಗವಹಿಸಿ ಉದ್ಯೋಗ ಪಡೆಯುತ್ತಿದ್ದಾರೆ. ಪ್ರತಿಷ್ಟಿತ ಕಂಪೆನಿಗಳು ಭಾಗವಹಿಸುವ ಕಾರಣ ಒಳ್ಳೆಯ ಉದ್ಯೋಗ ಸಿಗುತ್ತದೆ ಎಂದು ಹೇಳಿದರು. ವಿದ್ಯಾವಂತ ಉದ್ಯೋಗ ಆಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಿ ಎಂದು‌ಮನವಿ ಮಾಡಿದರು. ಕೆಲಸ ಇಲ್ಲ ಎಂಬುದು ಸುಳ್ಳು ನಮಗೆ ಕೆಲಸ ಮಾಡಲು ಇಚ್ಚಾಶಕ್ತಿ ಇದ್ದರೆ ಸಾಕಷ್ಟು ಕೆಲಸಗಳು ಇದೆ. ವರ್ಷದ 365 ದಿನವೂ ಆಳ್ವಾಸ್ ಸಂಸ್ಥೆಯಲ್ಲಿ ಉದ್ಯೋಗ ನೋಂದಣಿ ನಡೆಯುತ್ತಿರುತ್ತದೆ ಎಂದು ಹೇಳಿದರು.


ಮೆಕ್ಯಾನಿಕ್ ,ಇಲೆಕ್ಟ್ರಿಕ್,ಐಟಿಐ, ಡಿಪ್ಲೊಮಾ ; ,2000 ಹುದ್ದೆಗಳು ಇದೆ.  ಈ ಕೋರ್ಸುಗಳನ್ನು‌ಮಾಡಿದವರಿಗೆ ಸೇರಿದಂತೆ ಇತರ ಡಿಗ್ರಿ, ಮಾಸ್ಟರ್ ಡಿಗ್ರಿಯಾದವರಿಗೂ ಸಾವಿರಾರು ಉದ್ಯೋಗ ಇದ್ದು, ವಿದೇಶಿ ಕಂಪೆನಿಗಳು‌ಮೇಳದಲ್ಲಿ ಭಾಗವಹಿಸುತ್ತಿದೆ ಎಂದು ವಿವೇಕ್ ಆಳ್ವ ತಿಳಿಸಿದರು.



ಕರೆಂಟ್ ಕಂಬ ಹತ್ತುವ ತರಬೇತಿ



ಪುತ್ತೂರು ಸೇರಿದಂತೆ ಜಿಲ್ಲೆಯಾಧ್ಯಂತ ಮೆಸ್ಕಾಂ ನಲ್ಲಿ ಕಾರ್ಮಿಕರ ಕೊರತೆ ಇದೆ. ಇದಕ್ಕಾಗಿ ಆಸಕ್ತಿ ಇರುವ ಮಂದಿಗೆ ಕರೆಂಟ್ ಕಂಬ ಹತ್ತುವ ತರಬೇತಿಯನ್ನು ನೀಡಿ ಅವರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಶಾಸಕರಾದ ಅಶೋಕ್ ರೈ ಹೇಳಿದರು. ಪೊಲೀಸ್ ಹುದ್ದೆಗೆ ಕೆಲವೇ ತಿಂಗಳಲ್ಲಿ ನೇಮಕಾತಿ ನಡೆಯಲಿದ್ದು ಪೊಲೀಸ್ ಹುದ್ದೆಗೂ ತರಬೇತಿ ನೀಡುವ ಕೆಲಸ ನಮ್ಮ ಟ್ರಸ್ಟ್ ವತಿಯಿಂದ ನಡೆಯಲಿದೆ ಎಂದು ಶಾಸಕರು ಹೇಳಿದರು.



ಉಚಿತ ಬಸ್ ವ್ಯವಸ್ಥೆ


ಆಳ್ವಾಸ್ ನಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ ಉಚಿತ ಬಸ್ ವ್ಯವಸ್ಥೆ ಇರುತ್ತದೆ. ಅ.6 ರಂದು ಬೆಳಿಗ್ಗೆ 7 ಗಂಟೆಗೆ ಪುತ್ತೂರು ಶಾಸಕರ ಕಚೇರಿಯಿಂದ ಬಸ್ ಹೊರಡಲಿದೆ. ಆಕಾಂಕ್ಷಿಗಳು ಶಾಸಕರ ಕಚೇರಿಯನ್ನು ಭೇಟಿಯಾಗಿ ಹೆಸರು‌ನೋಂದಾವಣೆ ಮಾಡಿಕೊಳ್ಳಬಹುದು ಎಂದು‌ಶಾಸಕರು ತಿಳಿಸಿದರು.


ಕಾರ್ಯಕ್ರಮದಲ್ಲಿ ಮೇಳದ ಸಂಘಟಕರಾದ ಶ್ರೀನಿವಾಸ್, ಪುತ್ತೂರು ಐಟಿಐ ಪ್ರಚಾರ್ಯರಾದ ಪ್ರಕಾಶ್ ಪೈ, ಅಕ್ಷಯ ಕಾಲೇಜಿನ ಸಂಪತ್,ಫಿಲೋಮಿನಾ ಕಾಲೇಜಿನ ಭಾರತಿ ಎಸ್ ರೈ, ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಅಪ್ಪು,ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಶ್ರೀಕಾಂತ್,ವಿಟ್ಲ ಸರಕಾರಿ ಪ್ರಥಮ ಕಾಲೇಜಿನ ಪದ್ಮನಾಭ, ಬೆಟ್ಡಂಪಾಡಿ ಕಾಲೇಜಿನಡಾ. ಕಾಂತೇಶ್,ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಗೋಪಾಲಕೃ್ಷ್ಣ ಉಪಸ್ಥಿತರಿದ್ದರು.

ರೈ ಎಜುಕೇಶನಲ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ, ಸದಸ್ಯರುಗಳಾದ ರಿತೇಶ್ ಶೆಟ್ಟಿ,  ಜಯಪ್ರಕಾಶ್ ಬದಿನಾರ್, ಯೋಗೀಸ್ ಸಾಮಾನಿ, ರಾಕೇಶ್ ರೈ ಕುದ್ಕಾಡಿ ಉಪಸ್ಥಿತರಿದ್ದರು. ಟ್ರಸ್ಟ್ ನ ಮುಖ್ಯಸ್ಥರಾದ ನಿಹಾಲ್ ಶೆಟ್ಟಿ ಸ್ವಾಗತಿಸಿದರು.‌ಮಹಮ್ಮದ್ ಬಡಗನ್ನೂರು ವಂದಿಸಿದರು.

ಮುಸ್ತಫಾ ಕೆಂಪಿ ನಿಧನ

Posted by Vidyamaana on 2023-06-26 12:41:44 |

Share: | | | | |


ಮುಸ್ತಫಾ ಕೆಂಪಿ ನಿಧನ

ಪುತ್ತೂರು: ಉಪ್ಪಿನಂಗಡಿ ಮಾಲೀಕ್ ದೀನರ್ ಜುಮ್ಮಾ ಮಸೀದಿ ಅಧ್ಯಕ್ಷ, ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮುಸ್ತಫಾ ಕೆಂಪಿ (49) ಸೋಮವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು.

ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರು ಸಾಮಾಜಿಕ, ಧಾರ್ಮಿಕ, ಸಂಘಟನೆ ಸೇರಿದಂತೆ ಹಲವು ರಂಗಗಳಲ್ಲಿ ಸಕ್ರೀಯರಾಗಿದ್ದರು.

ಉಪ್ಪಿನಂಗಡಿ ಗ್ರಾ.ಪಂ. ಮಾಜಿ ಸದಸ್ಯರಾಗಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾಗಿ, ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಉಪಾಧ್ಯಕ್ಷರಾಗಿ, ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಉಪಾಧ್ಯಕ್ಷರಾಗಿ, ಕಮ್ಮಾಡಿ ಇಸ್ಲಾಮಿಕ್ ಸೆಂಟರ್‌ನ ಉಪಾಧ್ಯಕ್ಷರಾಗಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿಯ ಸದಸ್ಯರಾಗಿ, ಇಂಡಿಯನ್ ಸ್ಕೂಲ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಹಗಲಲ್ಲೇ ಕಾಡಾನೆ ಸಂಚಾರ

Posted by Vidyamaana on 2024-04-09 12:01:52 |

Share: | | | | |


ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಹಗಲಲ್ಲೇ ಕಾಡಾನೆ ಸಂಚಾರ

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ 9ನೇ ತಿರುವಿನ ಸಮೀಪ ಒಂಟಿ ಸಲಗ ಎ. 8ರಂದು ಮಧ್ಯಾಹ್ನ 12 ರ ಸುಮಾರಿಗೆ ರಾಜಾರೋಷವಾಗಿ ರಸ್ತೆ ದಾಟುತ್ತಿರುವ ವೀಡಿಯೋ ವೈರಲ್‌ ಆಗಿದೆ.


ಎರಡು ತಿಂಗಳ ಹಿಂದೆಯೂ ಕಾಡಾನೆ ನಾಲ್ಕಾರು ಬಾರಿ ಘಾಟಿ ಪರಿಸರದಲ್ಲಿ ಹಗಲಲ್ಲೇ ಸಂಚರಿಸಿ ವಾಹನ ಸವಾರರಲ್ಲಿ ಆತಂಕ ಮೂಡಿಸಿತ್ತು. ಸೋಮವಾರ ನೆರಿಯದ ಬಾಂಜಾರು ಮಲೆ ಕಡೆಯಿಂದ ಆಗಮಿಸಿದ ಆನೆ ಸ್ವಲ್ಪ ಹೊತ್ತು ರಸ್ತೆ ಬದಿಯಲ್ಲಿ ನಿಂತು ಬಳಿಕ ರಸ್ತೆಯಲ್ಲಿ ಸಾಗಿ ನೆರಿಯ ಕಾಡಿನ ಕಡೆಗೆ ತೆರಳಿದೆ.

ಕಬಕ : ಪ್ರಧಾನಿ ಮೋದಿ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಬಿಜೆಪಿ ವತಿಯಿಂದ ಮಹಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ

Posted by Vidyamaana on 2023-09-17 15:25:04 |

Share: | | | | |


ಕಬಕ : ಪ್ರಧಾನಿ ಮೋದಿ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಬಿಜೆಪಿ ವತಿಯಿಂದ ಮಹಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ

ಪುತ್ತೂರು : ಭಾರತೀಯ ಜನತಾ ಪಾರ್ಟಿ ವತಿಯಿಂದ ದೇಶದ ಪ್ರಧಾನಮಂತ್ರಿ ನರೇಂದ್ರ ದಾಮೋದರದಾಸ್ ಮೋದಿಯವರ 73ನೇ ಜನ್ಮದಿನದ ಪ್ರಯುಕ್ತ ಕಬಕ ಮಹಾದೇವಿ ದೇವಸ್ಥಾನದಲ್ಲಿ ಅವರ ಆಯುಷ್ಯ,ಆರೋಗ್ಯ ವೃದ್ಧಿಗಾಗಿ ಮತ್ತು ಮುಂದಿನ ಚುನಾವಣೆಯಲ್ಲೂ ದೇಶದ ಚುಕ್ಕಾಣಿ ಹಿಡಿಯುವ ಶಕ್ತಿ ಅವರಿಗೆ ಮಹಾದೇವಿ ಅನುಗ್ರಹಿಸಲಿ ಎಂದು ಕುಂಕುಮಾರ್ಚನೆ ಸೇವೆ ಮಾಡುವುದರ ಮೂಲಕ ಪ್ರಾರ್ಥಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಕೃಷ್ಣ ಆಳ್ವ,ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್,ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ,ನಿತೀಶ್ ಕುಮಾರ್ ಶಾಂತಿವನ,ಎಸ್.ಟಿ ಮೋರ್ಚ ಪ್ರ.ಕಾರ್ಯದರ್ಶಿ ಹರೀಶ್ ಬಿಜತ್ರೆ, ಪುಣಚ ಮಹಾಶಕ್ತೀ ಕೇಂದ್ರ ಕಾರ್ಯದರ್ಶಿ ದಯಾನಂದ ಶೆಟ್ಟಿ ,ಮಾಣಿಲ ಬಿಜಿಪಿ ಪ್ರಮುಖರಾದ ಗೀತಾನಂದ ಶೆಟ್ಟಿ,ರಾಜೇಶ್ ಬಾಳೆಕಲ್ಲು,ಕಬಕ ಶಕ್ತೀ ಕೇಂದ್ರದ ಜಯರಾಮ್ ನೆಕ್ಕರೆ, ಪಂಚಾಯತ್ ಸದಸ್ಯರಾದ ರುಕ್ಮಯ ಗೌಡ,ಯತೀಶ್ ಪದ್ನಡ್ಕ,ವಿಟ್ಲ ಮುಡ್ನೂರು ಪಂ.ಅಧ್ಯಕ್ಷರಾದ ಪುನೀತ್ ಮಾಡತ್ತಾರು,ಕಿಶೋರ್ ನಾಟೆಕಲ್ಲು ಮೊದಲಾದವರು ಉಪಸ್ಥಿತರಿದ್ದರು.

Recent News


Leave a Comment: