ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

ಸುದ್ದಿಗಳು News

Posted by vidyamaana on 2024-07-24 22:11:50 |

Share: | | | | |


ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

‌ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ ನೆರವು ನೀಡಿದ್ದ ಮಂಗಳೂರಿನ ಪತ್ರಕರ್ತರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದರು.ಶಿರೂರು ಗುಡ್ಡ ದುರಂತದಲ್ಲಿ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃತದೇಹ 8 ದಿನಗಳ ಬಳಿಕ ಮಂಗಳವಾರ ಸಿಕ್ಕಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಮನೆಯಿದ್ದ ಜಾಗಕ್ಕೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲು ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್, ಆರಿಫ್ ಯು.ಆರ್. ಗಿರೀಶ್ ಮಳಲಿ ಹಾಗೂ ಶಿವಶಂಕರ್ ನೆರವಾಗಿದ್ದರು

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಂದ ಪತ್ರಕರ್ತರ ಮಾಹಿತಿ ಪಡೆದು ಕಚೇರಿಯಲ್ಲಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರು ಜಿಲ್ಲಾಧಿಕಾರಿಯವರಿಗೆ ಪತ್ರಕರ್ತರ ಪರಿಚಯ ಮಾಡಿಕೊಟ್ಟರು.


ಬಳಿಕ ಮಾತಾಡಿದ ಜಿಲ್ಲಾಧಿಕಾರಿ ಅವರು, ನಿಮ್ಮ ಈ ಕಾರ್ಯ ಶ್ಲಾಘನೀಯವಾಗಿದೆ. ಇದೊಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಏನಾದರೂ ಅಗತ್ಯ ನೆರವು ಬೇಕಾದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ನಿಮ್ಮಂತಹ ಉತ್ಸಾಹಿ ತರುಣರ ಅವಶ್ಯಕತೆ ಸಮಾಜಕ್ಕೆ ಇದೆ ಎಂದು ಬೆನ್ನುತಟ್ಟಿದರು. ಅಲ್ಲದೇ ಶಿರೂರು ಮತ್ತು ಉಳುವರೆ ಗ್ರಾಮದ ಸದ್ಯದ ಸ್ಥಿತಿಗತಿಯ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದರು

 Share: | | | | |


ಪುಡಾ ನಿಕಟಪೂರ್ವ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ರವರಿಗೆ ಮಾತೃವಿಯೋಗ..

Posted by Vidyamaana on 2023-12-16 20:07:31 |

Share: | | | | |


ಪುಡಾ ನಿಕಟಪೂರ್ವ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ರವರಿಗೆ ಮಾತೃವಿಯೋಗ..

ಪುತ್ತೂರು : ಪುಡಾ ನಿಕಟಪೂರ್ವ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ರವರ ತಾಯಿ ಕೆಮ್ಮಾಯಿ ನಿವಾಸಿ ರಾಧಾವಾಸುದೇವ ಶೆಣೈ (91) ಇಂದು ನಿಧನರಾದರು.ಮೃತರು ಪುತ್ರರಾದ ಭಾಮಿ ಅಶೋಕ್ ಶೆಣೈ, ಭಾಮಿ ಜಗದೀಶ್ ಶೆಣೈ, ಭಾಮಿ ಪ್ರಕಾಶ್ ಶೆಣೈ ಮತ್ತು ಪುತ್ರಿಯರಾದ ಶೈಲಾ ನಾಯಕ್, ಶೋಭಾ ನಾಯಕ್, ಭಾರತಿ ನಾಯಕ್ ರನ್ನು ಅಗಲಿದ್ದಾರೆ.


ರಾಧಾವಾಸುದೇವ ಶೆಣೈ ರವರ ನಿಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವರು ಸಂತಾಪ ಸೂಚಿಸಿದ್ದಾರೆ

ಹೌದು! ಇದು ಪುತ್ತೂರು ಇನ್ನು ಕೇಳುವಂತಿಲ್ಲ ಇದೇನು ಮಿತ್ತೂರೇ? ಕಿತ್ತೂರೇ? ಹತ್ತೂರೇ? ಪುತ್ತೂರೇ? ಎಂದು | ಸ್ವಾಗತ ಗೋಪುರ ನವೀಕರಿಸುತ್ತಿರುವ ನಗರಸಭೆ

Posted by Vidyamaana on 2023-02-19 14:38:18 |

Share: | | | | |


ಹೌದು! ಇದು ಪುತ್ತೂರು ಇನ್ನು ಕೇಳುವಂತಿಲ್ಲ ಇದೇನು ಮಿತ್ತೂರೇ? ಕಿತ್ತೂರೇ? ಹತ್ತೂರೇ? ಪುತ್ತೂರೇ? ಎಂದು | ಸ್ವಾಗತ ಗೋಪುರ ನವೀಕರಿಸುತ್ತಿರುವ ನಗರಸಭೆ

ಪುತ್ತೂರು: ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಮುರ ಸಮೀಪ ಎದುರಾಗುವ ಸ್ವಾಗತ ಗೋಪುರದ ನವೀಕರಣಕ್ಕೆ ಪುತ್ತೂರು ನಗರಸಭೆ ಮುಂದಾಗಿದೆ.

ಪುತ್ತೂರಿಗೆ ಸ್ವಾಗತ ಎನ್ನುವ ಒಕ್ಕಣೆ ಇರುವ ಈ ಬೋರ್ಡಿನಲ್ಲಿದ್ದ ಹೆಸರು ಮಾಸಿ ಹೋಗಿತ್ತು. ಮಳೆ, ಬಿಸಿಲಿಗೆ ಸೊರಗಿ, ಬೋರ್ಡಿನಲ್ಲಿದ್ದ ಅಕ್ಷರಗಳು ಅಳಿಸಿ ಹೋಗಿದ್ದವು. ಇದರಿಂದಾಗಿ ಹೊರ ಊರಿನಿಂದ ಆಗಮಿಸುವ ಪ್ರವಾಸಿಗರು, ಯಾತ್ರಾರ್ಥಿಗಳು ಇದೇನು ಮಿತ್ತೂರೇ? ಕಿತ್ತೂರೇ? ಹತ್ತೂರೇ? ಪುತ್ತೂರೇ? ಎಂದು ಪ್ರಶ್ನಿಸುವಂತಾಗಿತ್ತು ಎಂದು ‘ವಿದ್ಯಮಾನ’ ವರದಿ ಮಾಡಿತ್ತು. ಈ ವರದಿಗೆ ಸ್ಪಂದಿಸಿರುವ ಪುತ್ತೂರು ನಗರಸಭೆ, ಬೋರ್ಡ್ ನವೀಕರಣಕ್ಕೆ ಮುಂದಾಗಿದೆ. ಇನ್ನು ಮುಂದೆ ಆಗಮಿಸುವ ಯಾತ್ರಾರ್ಥಿಗಳು, ಪ್ರವಾಸಿಗರಿಗೆ ‘ಇದು ಪುತ್ತೂರೇ’ ಎನ್ನುವ ಸ್ಪಷ್ಟ ಮಾಹಿತಿ ಸಿಗುವಂತಾಗಲಿದೆ.

ಇನ್ನೊಂದೆರಡು ದಿನಗಳಲ್ಲಿ ಸ್ವಾಗತ ಕಮಾನಿನ ನವೀಕರಣ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದೆ ಇದನ್ನು ಸಕಾಲಿಕವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ಮುಂದುವರಿಸಿದರೆ ಅಷ್ಟೇ ಸಾಕು.

ಎ 24:ಮುಕ್ವೆ ಯಲ್ಲಿ ಕಾಂಗ್ರೆಸ್ ಚುನಾವಣಾ ಸಭೆ.

Posted by Vidyamaana on 2023-04-23 10:24:41 |

Share: | | | | |


ಎ 24:ಮುಕ್ವೆ ಯಲ್ಲಿ ಕಾಂಗ್ರೆಸ್ ಚುನಾವಣಾ ಸಭೆ.

ಪುತ್ತೂರು :ಇಲ್ಲಿನ ಮುಕ್ವೆ ಜಂಕ್ಷನ್ ಹೆವೆನ್ ರೆಸಿಡೆನ್ಸಿ ಬಳಿ ಏ 24 ಸೋಮವಾರ ದಂದು ಬೆಳಗ್ಗೆ 9ಗಂಟೆಗೆ ಸಾರ್ವಜನಿಕ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಕುಮಾರ್ ಮುಖ್ಯ ಭಾಷಣ ಮಾಡಲಿದ್ದಾರೆ, ಮುಖ್ಯ ಅತಿಥಿಗಳಾಗಿ  ಪಕ್ಷದ ನಾಯಕರುಗಳು ಭಾಗವಹಿಸಲಿದ್ದಾರೆ. ಸ್ಥಳೀಯ ಘಟಕದ ಅಧ್ಯಕ್ಷರುಗಳು ಎಲ್ಲಾ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕಾಗಿ ನರಿಮೊಗರು  ವಲಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು  ಪ್ರಕಟಣೆಗೆ ತಿಳಿಸಿದ್ದಾರೆ

ವಿಟ್ಲ ಪೊಲೀಸರ ಕಾರ್ಯಾಚರಣೆ : ಕಳವು ಪ್ರಕರಣದ ಆರೋಪಿ ಕಡಬ ಮೂಲದ ಶಾಕಿರ್ ಬಂಧನ!

Posted by Vidyamaana on 2024-08-15 05:00:03 |

Share: | | | | |


ವಿಟ್ಲ ಪೊಲೀಸರ ಕಾರ್ಯಾಚರಣೆ : ಕಳವು ಪ್ರಕರಣದ ಆರೋಪಿ ಕಡಬ ಮೂಲದ ಶಾಕಿರ್ ಬಂಧನ!

ವಿಟ್ಲ : ಕಳವು ಪ್ರಕರಣದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಡಬ ತಾಲೂಕು, ಪೆರಬೆ, ಕೋಚಕಟ್ಟೆ ನಿವಾಸಿ ಮಹಮ್ಮದ್ ಶಾಕೀರ್ ಬಂಧಿತ.

21-07-2024 ರಿಂದ 22-07-2024ರ ಮಧ್ಯದ ಅವಧಿಯಲ್ಲಿ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಗುರ್ಮೆ ಎಂಬಲ್ಲಿರುವ ಗಣೇಶ್‌ ಗೌಡ ಎಂಬವರ ಮನೆಯ ಬಳಿಯಿರುವ ಕಟ್ಟಡದಲ್ಲಿ ಸಾರ್ವಜನಿಕರಿಂದ ರಿಪೇರಿಗಾಗಿ ಪಡೆದು ಇರಿಸಿದ್ದ ಅಂದಾಜು 1,81,000/- ರೂ ಮೌಲ್ಯದ ಒಟ್ಟು 16 ಬೊರ್‌ವೆಲ್‌ ಪಂಪುಗಳನ್ನು ಕಳ್ಳರು ಕಳ್ಳತನ ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ.119/2024 ಕಲಂ:303(2) ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಪತ್ತೆ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಮಾಡಿದ್ದು

ಕುಸಿದು ಬಿದ್ದ ಚೈತ್ರಾ ಕುಂದಾಪುರ – ಎಮರ್ಜೆನ್ಸಿ ವಾರ್ಡ್‌ಗೆ ಶಿಫ್ಟ್‌

Posted by Vidyamaana on 2023-09-15 09:58:06 |

Share: | | | | |


ಕುಸಿದು ಬಿದ್ದ ಚೈತ್ರಾ ಕುಂದಾಪುರ – ಎಮರ್ಜೆನ್ಸಿ ವಾರ್ಡ್‌ಗೆ ಶಿಫ್ಟ್‌

ಬೆಂಗಳೂರು : ಉದ್ಯಮಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.


ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾಳನ್ನು ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದಾರೆ. 45 ನಿಮಿಷದ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಾಳೆ.


ವಿಚಾರಣೆ ವೇಳೆ ಮೂರ್ಛ ಹೋದ ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ತುರ್ತು ಚಿಕಿತ್ಸಾವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಚೈತ್ರಾ ಬಾಯಿಯಲ್ಲಿ ನೊರೆ ಬಂದ ದೃಶ್ಯ ಸೆರೆಯಾಗಿದೆ. ಈಗ ಬಂದಿರುವ ಮಾಹಿತಿ ಪ್ರಕಾರ ಚೈತ್ರಾ ಮೂರ್ಛ ರೋಗದಿಂದ ಬಳಲುತ್ತಿದ್ದು, ವಿಚಾರಣೆ ವೇಳೆ ಪ್ರಜ್ಞೆ ತಪ್ಪಿರುವ ಸಾಧ್ಯತೆಯಿದೆ.

ಪುತ್ತೂರು : ನಂದಿನಿ ಹಾಲು ವಿತರಕ ಉದಯ ನಿಧನ

Posted by Vidyamaana on 2023-10-14 13:21:12 |

Share: | | | | |


ಪುತ್ತೂರು : ನಂದಿನಿ ಹಾಲು ವಿತರಕ ಉದಯ ನಿಧನ

ಪುತ್ತೂರು : ನಂದಿನಿ ಹಾಲು ವಿತರಕರಾಗಿರುವ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ವ್ಯಾಪಾರ ಮಳಿಗೆಯ ಸಿಬ್ಬಂದಿಯಾಗಿದ್ದ ಉದಯ (51) ನಿಧನರಾದರು.


ಅಡೂರು ಮೂಲದ ಉದಯ ಅವರು ಪುತ್ತೂರು ಕೊಡಿಪ್ಪಾಡಿಯಲ್ಲಿ ವಾಸ್ತವ್ಯ ಹೊಂದಿದ್ದು, ಪುತ್ತೂರು ಜೇನು ವ್ಯವಸಾಯ ಸಹಕಾರ ಸಂಘದ ಕಟ್ಟಡದ ಪಕ್ಕದಲ್ಲಿ ನಂದಿನಿ ಹಾಲು ವಿತರಣಾ ಅಂಗಡಿ ಹೊಂದಿದ್ದರು.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಗೆ ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ನಿಧನರಾದರು.

ಮೃತರು ಪತ್ನಿ ಮಮತಾ,  ಪುತ್ರ ರಾದ  ಯಶ್ವಿತ್, ಅಶ್ವಿತ್ ರನ್ನು ಅಗಲಿದ್ದಾರೆ.

ಉದಯ ಅವರ ಅಂತ್ಯಸಂಸ್ಕಾರ ತರವಾಡು ಮನೆ ಅಡೂರು ಪಾಂಡಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.



Leave a Comment: