ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


ಸುಳ್ಯ | ವಿದ್ಯುತ್ ಲೈನ್‌ ದುರಸ್ತಿ ವೇಳೆ ಲೈನ್ ಆನ್ ಮಾಡಲು ಪ್ರಯತ್ನಿಸಿದ ಆರೋಪ: ಯುವಕ ಸೆರೆ

Posted by Vidyamaana on 2024-05-31 05:18:10 |

Share: | | | | |


ಸುಳ್ಯ | ವಿದ್ಯುತ್ ಲೈನ್‌ ದುರಸ್ತಿ ವೇಳೆ ಲೈನ್ ಆನ್ ಮಾಡಲು ಪ್ರಯತ್ನಿಸಿದ ಆರೋಪ: ಯುವಕ ಸೆರೆ

ಸುಳ್ಯ : ವಿದ್ಯುತ್ ಲೈನ್ ದುರಸ್ತಿ ನಡೆಸುತ್ತಿದ್ದ ವೇಳೆ ಯುವಕನೊಬ್ಬ ಲೈನ್ ಆನ್ ಮಾಡಲು ಯತ್ನಿಸಿದ ಘಟನೆ ಪಂಜದ ಕರಿಕ್ಕಳದಲ್ಲಿ ನಡೆದಿದ್ದು, ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.ರಾಜೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪಂಜದ ಮೆಸ್ಕಾಂ ಇಲಾಖೆಯ ಸಿಬ್ಬಂದಿ ಕರಿಕ್ಕಳ ಸಮೀಪ ವಿದ್ಯುತ್ ಲೈನ್‍ಗೆ ತಾಗುತ್ತಿದ್ದ ಮರದ ಗೆಲ್ಲನ್ನು ತೆಗೆಯಲೆಂದು ಜೆ.ಒ.ಸಿ ಆನ್ ಮಾಡಿ ಯಾರು ಆಫ್ ಮಾಡದಂತೆ ಅದನ್ನು ತಂತಿಯಲ್ಲಿ ಕಟ್ಟಿ ಕೆಲವು ಸಿಬ್ಬಂದಿ ಕೆಲಸ ಮಾಡುತ್ತಿದ್ದರು.

ಪುತ್ತೂರು ನಗರಸಭೆಯಲ್ಲಿ ತೆರಿಗೆ ವಸೂಲಾತಿ ಆಂದೋಲನ

Posted by Vidyamaana on 2023-10-06 08:36:41 |

Share: | | | | |


ಪುತ್ತೂರು ನಗರಸಭೆಯಲ್ಲಿ ತೆರಿಗೆ ವಸೂಲಾತಿ ಆಂದೋಲನ

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡ ತೆರಿಗೆ, ಉದ್ಯಮ ಪರವಾನಿಗೆ, ನೀರಿನ ಶುಲ್ಕ ಇತ್ಯಾದಿ ತೆರಿಗೆಗಳು ಬಾಕಿ ಇರುವ ಹಿನ್ನೆಲೆಯಲ್ಲಿ ನಗರಸಭೆಯಿಂದ 31 ವಾರ್ಡ್‌ಗಳಲ್ಲಿ 15 ದಿನಗಳ ತೆರಿಗೆ ವಸೂಲಾತಿ ಆಂದೋಲನಕ್ಕೆ ಗುರುವಾರ ಚಾಲನೆ ನೀಡಲಾಯಿತು. ನಗರಸಭೆಯ ಪ್ರತಿ ವಾರ್ಡ್‌ಗಳಿಗೂ ನಗರಸಭೆ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಬಾಕಿದಾರರಿಗೆ ನೋಟೀಸ್ ನೀಡಿ ಎಚ್ಚರಿಕೆ ನೀಡಲಿದ್ದಾರೆ.


ನಗರಸಭೆ ಕಚೇರಿ ವಠಾರದಲ್ಲಿ ಆಂದೋಲನಕ್ಕೆ ತಮಟೆ ಬಡಿದು ಚಾಲನೆ ನೀಡಿದ ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಮಾತನಾಡಿ, ನಗರಸಭೆ ಪ್ರತಿ ವಾರ್ಡ್‌ಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ವಾರ್ಡ್‌ಗಳಲ್ಲಿ ಪರಿಶೀಲನೆ ನಡೆಸಿ ಬಾಕಿದಾರರನ್ನು ಜಾಗೃತಿಗೊಳಿಸಲಿದ್ದಾರೆ. ಬಾಕಿ ಮಾಡಿದವರಿಗೆ ನೋಟಿಸ್ ನೀಡುವ ಕಾರ್ಯ ಮಾಡಲಿದ್ದಾರೆ. ಈ ನಡುವೆ ಪ್ರತಿ ವಾರ್ಡ್‌ಗಳ ಗಲ್ಲಿಗಲ್ಲಿಯಲ್ಲೂ ವಾಹನದ ಮೂಲಕ ತಮಟೆ ಬಡಿಯುವ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಯಲಿದೆ ಎಂದರು.ನಗರಸಭೆಯ ಎಲ್ಲಾ ಕಾಮಗಾರಿಗಳು, ಕೆಲಸ ಕಾರ್ಯಗಳಿಗೆ ತೆರಿಗೆ ಹಣವನ್ನೇ ಬಳಕೆ ಮಾಡಲಾಗುತ್ತದೆ. ಈಗಾಗಲೇ ರಾಜ್ಯ ಸರಕಾರದ ವತಿಯಿಂದ ಆದೇಶ ಮಾಡಿರುವಂತೆ ಶೇ. 100ರಷ್ಟು ತೆರಿಗೆ ವಸೂಲಾತಿ ಜನವರಿ ತಿಂಗಳ ಒಳಗೆ ಮಾಡಬೇಕಾಗಿದೆ. ಅದಕ್ಕಾಗಿ ಆಂದೋಲನ ಹಮ್ಮಿಕೊಂಡಿದ್ದೇವೆ. ಮುಂದಿನ ದಿನ ರಾಜ್ಯ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಯಾವುದೇ ಅನುದಾನ ಬಿಡುಗಡೆ ಆಗಬೇಕಾದರೂ ಶೇ. 100ರಷ್ಟು ನಮ್ಮ ತೆರಿಗೆ ವಸೂಲಾತಿ ಆದರೆ ಮಾತ್ರ ನಮಗೆ ಅನುದಾನ ಬಿಡುಗಡೆಯಾಗಬಹುದು. ಈ ನಿಟ್ಟಿನಲ್ಲಿ 15 ದಿನಗಳ ಆಂದೋಲನದಲ್ಲಿ ನಾಗರಿಕರು ಬಾಕಿ ತೆರಿಗೆಯನ್ನು ಪಾವತಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನ ತೆರಿಗೆ ವಸೂಲಾತಿಗೆ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ ಎಂದರು.


ನಗರಸಭೆ ಸದಸ್ಯ ಯುಸೂಪ್ ಡೀಮ್, ಕಂದಾಯ ನಿರೀಕ್ಷಕ ರಾಜೇಶ್, ಬಿಲ್ ಕಲೆಕ್ಟರ್ ಪುರುಷೋತ್ತಮ, ರೇಣುಕಾ ಪ್ರಸಾದ್, ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್, ಕರುಣಾಕರ್, ಸಿ.ಆರ್. ದೇವಾಡಿಗ, ರವಿಪ್ರಕಾಶ್, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾಕಿರಣ್, ವರಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು. ನಗರಸಭೆಯ ವಿವಿಧ ಕಡೆ ರಾಧಾಕೃಷ್ಣ ಅವರು ತಮಟೆ ಬಾರಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.

ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ 6 ವರ್ಷದ ಪುತ್ರನಿಂದ ತಂದೆಗೆ ಕೊನೆ ಸೆಲ್ಯೂಟ್‌ ನೋಡಿ ಕಣ್ಣೀರಿಟ್ಟ ಜನ

Posted by Vidyamaana on 2023-09-16 05:15:53 |

Share: | | | | |


ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ 6 ವರ್ಷದ ಪುತ್ರನಿಂದ ತಂದೆಗೆ ಕೊನೆ ಸೆಲ್ಯೂಟ್‌ ನೋಡಿ ಕಣ್ಣೀರಿಟ್ಟ ಜನ

ನವದೆಹಲಿ : ಆರು ವರ್ಷದ ಹುಡುಗನಿಗೆ ತನ್ನ ತಂದೆಯನ್ನು ಬಾಕ್ಸ್‌ನಲ್ಲಿ ಯಾಕೆ ಇಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ಇಲ್ಲಿಯವರೆಗೂ ಅಪ್ಪ ಏನು ಮಾಡ್ತಾ ಇದ್ರೂ ಅನ್ನೋದು ಗೊತ್ತಿರಲಿಲ್ಲ. ಆದರೆ, ಸೇನಾ ಸಮವಸ್ತ್ರದಲ್ಲಿದ್ದ ಆ ಹುಡುಗ ತಂದೆಯ ಶವಪೆಟ್ಟಿಗೆಗೆ ಕೊನೆಯ ಬಾರಿಗೆ ತನಗೆ ಗೊತ್ತಿರುವ ರೀತಿಯಲ್ಲಿ ಸೆಲ್ಯುಟ್‌ ಹೊಡೆದಾಗ ಅಲ್ಲಿದ್ದವರ ಕಣ್ಣಾಲಿಗಳು ತೇವವಾಗಿದ್ದವು.ಈ ಕ್ಷಣಗಳು ದಾಖಲಾಗಿದ್ದು ಪಂಜಾಬ್‌ನ ಮೊಹಾಲಿ ಜಿಲ್ಲೆಯ ಮಲ್ಲನ್‌ಪುರದಲ್ಲಿ. ಜಮ್ಮು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಕೋಕರ್‌ನಾಗ್‌ನಲ್ಲಿ ಪಾಪಿ ಪಾಕಿಸ್ತಾನದ ಭಯೋತ್ಪಾದಕ ಜೊತೆಗಿನ ಎನ್‌ಕೌಂಟ್‌ ಸತತ ಮೂರನೇ ದಿನ ಮುಂದುವರಿದಿದೆ. ಎನ್‌ಕೌಂಟರ್‌ನ ಮೊದಲ ದಿನ ಭಯೋತ್ಪಾದಕರ ಗುಂಡೇಟಿಗೆ 19 ರಾಷ್ಟ್ರೀಯ ರೈಫಲ್ಸ್‌ನ ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ ಸಾವು ಕಂಡಿದ್ದರು. ಅವರೊಂದಿಗೆ ಮೇಜರ್‌ ಆಶೀಶ್‌ ಧೋನ್‌ಚಾಕ್‌ ಹಾಗೂ ಜಮ್ಮು ಕಾಶ್ಮೀರ ಪೊಲೀಸ್‌ ಡಿವೈಎಸ್‌ಪಿ ಹಿಮಾಯೂನ್‌ ಮುಜಾಮಿಲ್‌ ಭಟ್‌ ಕೂಡ ಸಾವು ಕಂಡಿದ್ದರು.


ಶುಕ್ರವಾರ ಮನ್‌ಪ್ರೀತ್‌ ಸಿಂಗ್‌ ಅವರ ಪಾರ್ಥಿವ ಶರೀರ ಪಂಜಾಬ್‌ನ ಅವರ ಸ್ವಗ್ರಾಮಕ್ಕೆ ಬಂದಾಗ ಇಡೀ ಪ್ರದೇಶ ಭಾವುಕವಾಗಿತ್ತು. ಅವರ ಸೇನಾ ಸಮವಸ್ತ್ರದಲ್ಲಿಯೇ ನಿಂತಿದ್ದ ಅವರ ಆರು ವರ್ಷದ ಪುತ್ರ ಹಾಗೂ ಎರಡು ವರ್ಷದ ಆತನ ತಂಗಿ ಸೆಲ್ಯುಟ್‌ ಹೊಡೆದು ತಂದೆಗೆ ಬೀಳ್ಕೊಟ್ಟರು. ಬಹುಶಃ ತಮ್ಮ ಕುಟುಂಬಕ್ಕೆ ಆಗಿರುವಂಥ ಗಾಯ ಎಷ್ಟು ಗಾಢವಾದದ್ದು ಎನ್ನುವ ಸಣ್ಣ ಅರಿವೂ ಆ ಪುಟ್ಟ ಮಕ್ಕಳಿಗೆ ಇದ್ದಿರಲಿಲ್ಲ. ಬಳಿಕ ಇಬ್ಬರು ಮಕ್ಕಳನ್ನು ಅವರ ಸಂಬಂಧಿಗಳು ಎತ್ತಿಕೊಂಡರೆ, ಮನ್‌ಪ್ರೀತ್‌ ಸಿಂಗ್‌ ಅವರ ಅಂತಿಮ ಯಾತ್ರೆಗೆ ಇಡೀ ಮಲ್ಲನ್‌ಪುರ ಅಲ್ಲಿ ನೆರೆದಿತ್ತು.


ಮನ್‌ಪ್ರೀತ್‌ ಸಿಂಗ್‌ ಅವರ ಪತ್ನಿ ಜಗ್‌ಮೀತ್‌ ಕೌರ್‌, ಅವರ ತಾಯಿ ಹಾಗೂ ಕುಟುಂಬದ ಇತರರನ್ನು ಸಮಾಧಾನ ಮಾಡುವುದೇ ಕಷ್ಟವಾಗಿತ್ತು. ಕಣ್ಣೀರಿಡುತ್ತಲೇ ಮನ್‌ಪ್ರೀತ್‌ ಸಿಂಗ್‌ ಅವರನ್ನು ಬೀಳ್ಕೊಟ್ಟಿದ್ದಾರೆ. 41 ವರ್ಷದ ಮನ್‌ಪ್ರೀತ್‌ ಸಿಂಗ್‌, 19 ರಾಷ್ಟ್ರೀಯ ರೈಫಲ್ಸ್‌ನ ಕಮಾಂಡಿಂಗ್‌ ಆಫೀಸರ್‌ ಆಗಿ ಎನ್‌ಕೌಂಟರ್‌ಅನ್ನು ಮುನ್ನಡೆಸಿದ್ದರು. ಪ್ರತಿಷ್ಠಿತ ಸೇನಾ ಪದಕ (ಶೌರ್ಯ) ಪುರಸ್ಕೃತರಾಗಿದ್ದ ಇವರು, ಬುಧವಾರ ರಾತ್ರಿ ಗುಂಡೇಟಿನಿಂದ ಸಾವನ್ನಪ್ಪಿದರು, ಭಯೋತ್ಪಾದಕರ ಬಗ್ಗೆ ನಿರ್ದಿಷ್ಟ ಮಾಹಿತಿ ಪಡೆದಿದ್ದ ಸೇನೆ ಹಾಗೂ ಜಮ್ಮು ಕಾಶ್ಮೀರ ಪೊಲೀಸ್‌, ಇದಕ್ಕೆ ಪ್ರತಿಕ್ರಿಯೆಯಾಗಿ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಿತ್ತು.


ಬುಧವಾರ ಕಾಶ್ಮೀರ ಕಣಿವೆಯ ಕೊಕೊರೆನಾಗ್ ಪ್ರದೇಶದ ಎತ್ತರದ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ನ ಡಿವೈಎಸ್‌ಪಿ ಹಾಗೂ ಭಾರತೀಯ ಸೇನೆಯ ಕರ್ನಲ್‌ ಹಾಗೂ ಮೇಜರ್‌ ಸಾವು ಕಂಡಿದ್ದರು. 2020ರ ಬಳಿಕ ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಭಾರತ ಕಳೆದುಕೊಂಡಿದ್ದು ಇದೇ ಮೊದಲ ಬಾರಿಯಾಗಿದೆ.ಮನ್‌ಪ್ರೀತ್‌ ಸಿಂಗ್‌ ಅವರ ಜೊತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮೇಜರ್‌ ಆಶೀಶ್‌ ಧೋನ್‌ಚಾಕ್‌ ಅವರ ಮೃತದೇಹವನ್ನು ಪಾಣಿಪತ್‌ನ ಸ್ವಗ್ರಾಮಕ್ಕೆ ತರಲಾಗಿದೆ. ಈ ವೇಳೆ ಅವರ ಅಂತಿಮಯಾತ್ರಗೆ ಸ್ಥಳೀ ಸೇನಾಧಿಕಾರಿಗಳು ಹಾಗೂ ಕುಟುಂಬದವರು ಭಾಗಿಯಾಗಿದ್ದರು. ಶುಕ್ರವಾರ ಬೆಳಗ್ಗೆ ಪಾಣಿಪತ್‌ನಲ್ಲಿರುವ ಅವರ ನಿವಾಸಕ್ಕೆ ಮೃತದೇಹವನ್ನು ತರಲಾಗಿತ್ತು. ಬಳಿಕ ಸೇನಾ ವಾಹನದಲ್ಲಿಯೇ ಪಾರ್ಥೀವವನ್ನು ಬಿಂಝೋಲ್‌ ಗ್ರಾಮಕ್ಕೆ ತರಲಾಗಿತ್ತು.

ಬಳಿಕ ಗನ್‌ ಸೆಲ್ಯೂಟ್‌ ನೀಡಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಅಂತ್ಯಕ್ರಿಯೆಯ ಮೆರವಣಿಗೆಯು ಅವರ ಬಿಂಜೋಲ್ ಗ್ರಾಮವನ್ನು ತಲುಪಲು ಪಟ್ಟಣದಲ್ಲಿರುವ ಮೇಜರ್ ಅವರ ಮನೆಯಿಂದ ಸುಮಾರು ಎಂಟು ಕಿ.ಮೀ ದೂರವನ್ನು ಕ್ರಮಿಸಲು ಸುಮಾರು ಮೂರು ಗಂಟೆಗಳನ್ನು ತೆಗೆದುಕೊಂಡಿತು. ತಮ್ಮೂರಿನ ಸೈನಿಕನಿಗೆ ಜನ ಕಣ್ಣೀರಿನ ವಿದಾಯ ಹೇಳಲು ದೊಡ್ಡ ಮಟ್ಟದಲ್ಲಿ ಜಮಾಯಿಸಿದ್ದರು.ಬುಧವಾರ ಬುದ್ಗಾಮ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಉಪ ಅಧೀಕ್ಷಕ 33 ವರ್ಷದ ಹಿಮಯುನ್ ಮುಜಾಮಿಲ್ ಭಟ್ ಅವರ ಅಂತ್ಯಕ್ರಿಯೆಯಲ್ಲೂ ದೊಡ್ಡ ಮಟ್ಟದ ಜನ ಜಮಾಯಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಅವರು ಪೊಲೀಸ್ ಅಧಿಕಾರಿಗೆ ಗೌರವ ಸಲ್ಲಿಸಿದರು




https://twitter.com/ANI/status/1702586231497093630?ref_src=twsrc%5Etfw%7Ctwcamp%5Etweetembed%7Ctwterm%5E1702586231497093630%7Ctwgr%5E%7Ctwcon%5Es1_c10&ref_url=http%3A%2F%2Fapi-news.dailyhunt.in%2F


ಕಾರಿನೊಳಗೆ ಇರಲೇ ಇಲ್ಲ ಆ ಮಹಿಳೆ ಆದ್ರೂ AI ಕ್ಯಾಮೆರಾದಲ್ಲಿ ಸೆರೆ

Posted by Vidyamaana on 2023-11-05 18:32:53 |

Share: | | | | |


ಕಾರಿನೊಳಗೆ ಇರಲೇ ಇಲ್ಲ ಆ ಮಹಿಳೆ ಆದ್ರೂ AI ಕ್ಯಾಮೆರಾದಲ್ಲಿ ಸೆರೆ

ತಿರುವನಂತಪುರ: ಕೇರಳದಲ್ಲೊಂದು ವಿಚಿತ್ರ ಪ್ರಕರಣ ವರದಿಯಾಗಿದೆ. ಸೀಟ್ ಬೆಲ್ಟ್ ಧರಿಸಿಲ್ಲ ಎಂಬ ಕಾರಣಕ್ಕೆ ಎಐ ಚಾಲಿತ ಕ್ಯಾಮೆರಾ ಟ್ರಾಫಿಕ್ ಉಲ್ಲಂಘನೆಯನ್ನು ಪತ್ತೆಹಚ್ಚಿತ್ತು. ಬಳಿಕ ಕಾರು ಮಾಲಕರಿಗೆ ದಂಡಸ ಚಲನ್ ನೀಡಿದಾಗ ಅದರಲ್ಲಿ ಎಐ ಕ್ಯಾಮೆರಾದ ಸೆರೆಹಿಡಿದಿದ್ದ ಫೋಟೋ ನೋಡಿ ಮಾಲಕರು ಗಾಬರಿಗೊಂಡಿದ್ದಾರೆ

ಏಕೆಂದರೆ, ಆ ಸಮುದಲ್ಲಿ ಕಾರಿನಲ್ಲಿ ಇಬ್ಬರೇ ಪ್ರಯಾಣಿಸುತ್ತಿದ್ದರು ಆದರೆ ದಂಡದ ಚಲನ್ ನಲ್ಲಿ ಪ್ರಿಂಟ್ ಆಗಿದ್ದ ಕಾರಿನ ಫೊಟೋದಲ್ಲಿ ಮೂವರಿರುವುದು ಕಂಡುಬಂದಿದೆ.

ಚೆರುವತ್ತೂರಿನ ಕೈತಕ್ಕಾಡ್ ಮೂಲದ ಆದಿತ್ಯನ್ ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಪಯ್ಯನ್ನೂರಿನಲ್ಲಿ ಅಳವಡಿಸಲಾಗಿದ್ದ ಎಐ ಕ್ಯಾಮೆರಾದಲ್ಲಿ ಈ ಮೇಲಿನ ಚಿತ್ರ ಸೆರೆಯಾಗಿದೆ.

ಟ್ರಾಫಿಕ್ ಪೊಲೀಸರು ನೀಡಿರುವ ನೋಟೀಸ್ನಲ್ಲಿರುವ ಚಿತ್ರವು ಕಾರಿನ ಹಿಂಬದಿಯ ಸೀಟಿನಲ್ಲಿ ಇನ್ನೊಬ್ಬ ಮಹಿಳೆಯ ಆಕೃತಿಯನ್ನು ತೋರಿಸುತ್ತದೆ. ಆದರೆ ಅಂತಹ ವ್ಯಕ್ತಿ ಕಾರಿನಲ್ಲಿರಲಿಲ್ಲ ಎಂದು ಆದಿತ್ಯನ್ ಮತ್ತು ಆತನ ಕುಟುಂಬದವರು ವಾದಿಸಿದ್ದಾರೆ. ಹಾಗದರೆ ಆ ಮಹಿಳೆ ಯಾರು ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿದೆ.

ಚಲನ್ ಮೇಲೆ ವಾಹನದಲ್ಲಿ ಇಲ್ಲದವರ ಫೋಟೋ ಮುದ್ರಿಸಿರುವುದು ಮೋಟಾರು ವಾಹನ ಇಲಾಖೆಗೂ ಗೊಂದಲ ಮೂಡಿಸಿದ್ದು ಇದು ತಾಂತ್ರಿಕ ದೋಷದಿಂದ ಆಗಿರುವ ಎಡವಟ್ಟೋ ಅಥವಾ ಇನ್ನಾವುದಾದರೂ ‘ನಿಗೂಢ’ ಶಕ್ತಿಯ ಕೈವಾಡವೋ ಎಂಬ ಬಿಸಿ ಬಿಸಿ ಚರ್ಚೆ ಇದೀಗ ನೆಟ್ಟಿಗರ ವಲಯದಲ್ಲಿ ಜೋರಾಗಿ ನಡೆಯುತ್ತಿದೆ.

ಪುತ್ತಿಲ ಪರಿವಾರ ಅಸ್ತಿತ್ವಕ್ಕೆ

Posted by Vidyamaana on 2023-05-21 14:53:25 |

Share: | | | | |


ಪುತ್ತಿಲ ಪರಿವಾರ ಅಸ್ತಿತ್ವಕ್ಕೆ

ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ಹೊಸ ಮನ್ವಂತರ ಸೃಷ್ಟಿಯ ಬಳಿಕ ಇದೀಗ ಪುತ್ತಿಲ ಪರಿವಾರ ಅಸ್ತಿತ್ವಕ್ಕೆ ಬಂದಿದೆ. ದರ್ಬೆಯಿಂದ ದೇವರಮಾರು ಗದ್ದೆಯವರೆಗೆ ನಡೆದ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ ಕಾಲ್ನಡಿಗೆ ಜಾಥಾದ ನಂತರ ನಡೆದ ಸೇವಾ ಸಮರ್ಪಣಾ ಸಮಾರಂಭದಲ್ಲಿ ಪುತ್ತಿಲ ಪರಿವಾರದ ಲೋಗೋ ಅನಾವರಣ ಮಾಡಲಾಯಿತು.

ಅರಮನೆಯ ಎಸಿ ಕೋಣೆಯಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕಲು ಯದುವೀರ್ ಬಂದರೆ ಸ್ವಾಗತ

Posted by Vidyamaana on 2024-03-13 07:28:48 |

Share: | | | | |


ಅರಮನೆಯ ಎಸಿ ಕೋಣೆಯಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕಲು ಯದುವೀರ್ ಬಂದರೆ ಸ್ವಾಗತ

ಮೈಸೂರು, ಮಾ 13: ಯದುವೀರ್  ಟಿಕೆಟ್ ಕೊಡುವುದು ನಿಜವಾದದರೆ ಅದನ್ನು ಸ್ವಾಗತಿಸುತ್ತೇನೆ. ಕಾರ್ಯಕರ್ತನಾಗಿ ಅವರ ಪರ ಕೆಲಸ ಮಾಡುತ್ತೇನೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.


ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಮನೆಯ ಎಸಿ ರೂಂನಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕುಲು ಯದುವೀರ್ ಬಂದರೆ ಸ್ವಾಗತಿಸದೆ ಇರುವುದಕ್ಕೆ ಆಗುತ್ತಾ?. ರಾಜ – ಪ್ರಜೆ ನಡುವೆ ವ್ಯತ್ಯಾಸ ತೆಗೆದು ರಾಜರೇ ಪ್ರಜೆಗಳ ಜೊತೆ ಇರಲು ಬಂದರೆ ನನ್ನ ಸ್ವಾಗತ. ಅರಮನೆ ಆಸ್ತಿ ವಿಚಾರದಲ್ಲಿ ಸರ್ಕಾರದ ನಡುವೆ ವ್ಯಾಜ್ಯಗಳಿವೆ. ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕರ ಬಳಕೆಯಲ್ಲಿವೆ. ಯದುವೀರ್ ಜನಪ್ರತಿನಿಧಿ ಆಗಿ ಅದನ್ನೆಲ್ಲಾ ಜನರಿಗೆ ಬಿಟ್ಟು ಕೊಡಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಹೋರಾಡಲು ರಾಜರು ಬೀದಿಗೆ ಬಂದ್ರೆ ಸಂತೋಷ:


ಚಾಮುಂಡಿ ಬೆಟ್ಟದ ಮೇಲಿನ ಅರಮನೆ ಆವರಣದ ಒಳಗೆ ಪೈಪ್ ಲೈನ್ ಹಾಕಲು ಅರಮನೆ ವಿರೋಧಿಸಿದೆ. ಯದುವೀರ್ ಜನಪ್ರತಿನಿಧಿ ಆದರೆ ಆ ಸಮಸ್ಯೆ ಬಗೆಹರಿಯುತ್ತೆ. ಶ್ರೀ ರಾಜೇಂದ್ರ ಸ್ವಾಮೀಜಿ ಪ್ರತಿಮೆ ವಿಚಾರದಲ್ಲಿ ಅರಮನೆಯವರ ನ್ಯಾಯಾಲಯಕ್ಕೆ ಹೋಗಿದ್ದಾರೆ. ಯದುವೀರ್ ಈ ಸಮಸ್ಯೆ ಬಗೆಹರಿಸಿ ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣ ಮಾಡುತ್ತಾರೆ. ಅರಮನೆ ಒಳಗೆ ಆರಾಮಾಗಿ ಇದ್ದಂತ ವ್ಯಕ್ತಿ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡಲು ಬೀದಿಗೆ ಬಂದರೆ ನಮಗೆ ಸಂತೋಷ ಎಂದು ಹೇಳಿದರು.


ಮುಖಂಡರಿಗೆ ಸಿಂಹ ಧನ್ಯವಾದ:


ಅರಮನೆ ವೈಭೋಗ ಬೇಕಾಗಿಲ್ಲ. ಜನರ ಜೊತೆ ಹೋರಾಟಕ್ಕೆ ಬರ್ತಿನಿ ಅಂತಾ ಹೊರಟಿದ್ದಾರೆ, ಅದಕ್ಕೆ ಸ್ವಾಗತ. ಪೊಲೀಸ್ ಠಾಣೆಗೆ ಬಂದು ನಮ್ಮ ಕಾರ್ಯಕರ್ತರ ಸಮಸ್ಯೆ ಬಗೆಹರಿಸಲು ರಾಜರು ಬಂದರೆ ಸಂತೋಷ ಅಲ್ವಾ?. ಸುಖದ ಸುಪತ್ತಿಗೆಯಲ್ಲಿ ಇದ್ದ ನಮ್ಮ ಮಹಾರಾಜರನ್ನು ಮನವೊಲಿಸಿ ರಾಜಕೀಯಕ್ಕೆ ತಂದ ನಮ್ಮ ಮುಖಂಡರಿಗೆ ಧನ್ಯವಾದ ಎಂದು ಸಿಂಹ ತಿಳಿಸಿದರು.


ನನಗೆ ಈ ಕ್ಷಣಕ್ಕೂ ವಿಶ್ವಾಸವಿದೆ. ಸಂಘಟನೆ, ಸಿದ್ದಾಂತಕ್ಕೆ ಗಟ್ಟಿಯಾಗಿ ನಿಂತಿರುವ ನನಗೆ ಟಿಕೆಟ್ ಸಿಗುತ್ತದೆ. 25 ಸಂಸದರಲ್ಲಿ ನನ್ನಷ್ಟು ಹಿಂದೂತ್ವದ ಕಮಿಟ್ ಮೆಂಟ್ ಇರುವ ಮತ್ಯಾರು ಇದ್ದಾರೆ? ಹಿಂದೂತ್ವದ ವಿಚಾರದಲ್ಲಿ ನನ್ನನ್ನು ಯಾರಿಗೂ ಮ್ಯಾಚ್ ಮಾಡಲು ಯಾರು ಆಗಲ್ಲ ಎಂದರು.


ಬ್ಯಾನರ್, ಬಂಟಿಂಗ್ ಕಟ್ಟಲೂ ಸಿದ್ಧ:


ಮೋದಿ ಅವರ ಬಗ್ಗೆ ಸಿದ್ದರಾಮಯ್ಯ ಬಾಯಿಗೆ ಬಂದ ರೀತಿ ಟೀಕಿಸಿದ್ದಾಗ ಸಿದ್ದರಾಮಯ್ಯ ಮಾತನ್ನು ದೊಡ್ಡ ಮಟ್ಟದಲ್ಲಿ ಖಂಡಿಸುವ ವ್ಯಕ್ತಿ ಈ ಪ್ರತಾಪ್ ಸಿಂಹ. ಇದು ನನ್ನ ದೌರ್ಬಲ್ಯವಾ?. ಮೈಸೂರು – ಕೊಡಗು ಅಭಿವೃದ್ಧಿ ಗೆ ಅತಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿದ್ದು ನನ್ನ ದೌರ್ಬಲ್ಯವಾ?. ನನಗೆ ಪಕ್ಷ ನಿಷ್ಠೆ ನನಗೆ ಇದೆ. ಬ್ಯಾನರ್, ಬಂಟಿಂಗ್ ಕಟ್ಟಲು ನಾನು ಸಿದ್ದ. ನನಗಾಗಿ ಪಕ್ಷ, ಕಾರ್ಯಕರ್ತರು ದುಡಿದಿದ್ದಾರೆ. ನಾನು ಮುಂದೆ ಅವರಂತೆಯೆ ದುಡಿಯುತ್ತೇನೆ ಎಂದು ಪ್ರತಾಪ್‌ ಸಿಂಹ ಹೇಳಿದರು.

Recent News


Leave a Comment: