ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಪುತ್ತೂರು ಕೋಟಿ ಚೆನ್ನಯ್ಯ ಜೋಡುಕರೆ ಕಂಬಳಕ್ಕೆ ಕರೆ ಮೂಹೂರ್ತ

Posted by Vidyamaana on 2021-07-07 18:30:00 |

Share: | | | | |


ಪುತ್ತೂರು ಕೋಟಿ ಚೆನ್ನಯ್ಯ ಜೋಡುಕರೆ ಕಂಬಳಕ್ಕೆ ಕರೆ ಮೂಹೂರ್ತ

ಪುತ್ತೂರು: ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಡಿ.೧೨ರಂದು ಕರೆ ಮುಹೂರ್ತ ನಡೆಯಿತು. ಜ. ೨೮ ಮತ್ತು ೨೯ರಂದು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ೩೦ನೇ ವರ್ಷದ ಕಂಬಳ ಈ ಬಾರಿ ನಡೆಯಲಿದೆ.


ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಕಂಬಳ ಸಮಿತಿ ಸಂಚಾಲಕ ಸುಧಾಕರ ಶೆಟ್ಟಿ ನೇತೃತ್ವದಲ್ಲಿ ಮೂಲ ನಾಗನ ಕಟ್ಟೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಅವರು ಹಾರೆಯ ಮೂಲಕ ಮಣ್ಣು ತೆಗೆದು, ಕರೆ ಮುಹೂರ್ತಕ್ಕೆ ಚಾಲನೆ ನೀಡಿ ಶುಭಹಾರೈಸಿದರು.


ಪ್ರಧಾನ ಕಾರ್ಯದರ್ಶಿ ಪಿ.ವಿ. ದಿನೇಶ್ ಕುಲಾಲ್, ಕೋಶಾಧಿಕಾರಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷ ವಸಂತ್ ಕುಮಾರ್ ರೈ ಜೆ.ಕೆ., ಶಿವರಾಮ ಆಳ್ವ, ಜಿನ್ನಪ್ಪ ಪೂಜಾರಿ ಮುರ, ಜೋಕಿಂ ಡಿಸೋಜ, ಜತೆಕಾರ್ಯದರ್ಶಿ ಬಿ.ಪ್ರೇಮಾನಂದ ನಾಕ್, ಪ್ರವೀಣ್ ಶೆಟ್ಟಿ ಅಳಕೆಮಜಲು, ವಿಕ್ರಂ ಶೆಟ್ಟಿ ಕೋಡಿಂಬಾಡಿ, ಸುಧಾಕರ ಶೆಟ್ಟಿ ಬೀಡಿನಮಜಲು, ರೋಶನ್ ರೈ ಬನ್ನೂರು, ಮುರಳೀಧರ ರೈ ಮಠಂತಬೆಟ್ಟು, ರೋಶನ್ ರೈ ಬನ್ನೂರು, ಉಮೇಶ್ ಕರ್ಕೆರ, ಕೃಷ್ಣಪ್ರಸಾದ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು. ಸಮಿತಿ ಉಪಾಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.


ರಣರೋಚಕ ಪಂದ್ಯದಲ್ಲಿ ಗೆದ್ದುಬೀಗಿದ ಆಸೀಸ್‌! ಗೆಲುವಿನ ಹೊಸ್ತಿಲಲ್ಲಿ ಎಡವಿದ ಕಿವೀಸ್‌

Posted by Vidyamaana on 2023-10-29 11:01:02 |

Share: | | | | |


ರಣರೋಚಕ ಪಂದ್ಯದಲ್ಲಿ ಗೆದ್ದುಬೀಗಿದ ಆಸೀಸ್‌! ಗೆಲುವಿನ ಹೊಸ್ತಿಲಲ್ಲಿ ಎಡವಿದ ಕಿವೀಸ್‌

ಧರ್ಮಶಾಲಾ :ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ (AUS vs NZ) ನಡುವಿನ ವಿಶ್ವಕಪ್‌ 2023ರ 27ನೇ ಪಂದ್ಯದಲ್ಲಿ ಕಿವೀಸ್‌ ವಿರುದ್ಧ ಆಸೀಸ್‌ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಆಸೀಸ್‌ ವಿಶ್ವಕಪ್‌ ಸೆಮಿ ಫೈನಲ್‌ ಹಾದಿ ಸುಲಭವಾಗಿದೆ. ಇನ್ನು, ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.2 ಓವರ್ ಗಳಲ್ಲಿ 388 ರನ್ ಗಳಿಗೆ ಆಲೌಟಾಯಿತು.ಈ ಟಾರ್ಗೆಟ್‌ ಬೆನ್ನಟ್ಟಿದ ನ್ಯೂಜಿಲ್ಯಾಂಡ್‌ ತಂಡ ಉತ್ತಮವಾಗಿ ಬ್ಯಾಟಿಂಗ್‌ ಮಾಡಿದರೂ ಸಹ ಅಂತಿಮ ಹಂತದಲ್ಲಿ ಎಡವಿದ ಕಾರಣ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು.

ವಿಡಿಯೋ ನೋಡಲು ಕ್ಲಿಕ್ ಮಾಡಿ....ರಣರೋಚಕ ಪಂದ್ಯದಲ್ಲಿ ಗೆದ್ದುಬೀಗಿದ ಆಸೀಸ್‌! ಗೆಲುವಿನ ಹೊಸ್ತಿಲಲ್ಲಿ ಎಡವಿದ ಕಿವೀಸ್‌

ಅಲ್ಲದೇ ಕರ್ನಾಟಕ ಮೂಲದ ಕಿವೀಸ್‌ ಆಟಗಾರ ರಚಿನ್‌ ರವೀಂದ್ರ ಶತಕದ ಆಟವೂ ತಂಡದ ಗೆಲುವಿಗೆ ಸಹಾಕವಾಗಲಿಲ್ಲ. ಅಂತಿಮವಾಗಿ ನ್ಯೂಜಿಲ್ಯಾಂಡ್‌ ತಂಡವು 50 ಓವರ್‌ಗೆ 9 ವಿಕೆಟ್ ನಷ್ಟಕ್ಕೆ 383 ರನ್‌ ಗಳಿಸಿತು. ಈ ಮೂಲಕ 5 ರನ್‌ಗಳಿಂದ ಸೋಲನ್ನಪ್ಪಿತು.


ಭರ್ಜರಿ ಶತಕ ಸಿಡಿಸಿದ್ದ ರಚಿನ್‌ ರವೀಂದ್ರ:


ನ್ಯೂಜಿಲೆಂಡ್ ಪರ 6 ತಿಂಗಳ ಹಿಂದೆಯಷ್ಟೇ ಪದಾರ್ಪಣೆ ಮಾಡಿದ ಆಟಗಾರ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಕಾಂಗರೂ ತಂಡದ ವಿರುದ್ಧ ಪಂದ್ಯದ ಮೂಲಕ ವಿಶ್ವಕಪ್‌ನಲ್ಲಿ ಎರಡನೇ ಶತಕ ಸಿಡಿಸಿದ ರಚಿನ್ ರವೀಂದ್ರ ಮತ್ತೊಮ್ಮೆ ಅಬ್ಬರಿಸಿದರು. ರಚಿನ್ ರವೀಂದ್ರ ಆಸ್ಟ್ರೇಲಿಯದ ಮೇಲೆ ಪ್ರಾಬಲ್ಯ ಮೆರೆದ ಏಕೈಕ ಬ್ಯಾಟ್ಸ್‌ಮನ್. ಇದರ ಹೊರತಾಗಿ ಡೆರಿಲ್ ಮಿಚೆಲ್ ಅರ್ಧಶತಕ ಇನಿಂಗ್ಸ್ ಆಡಿದರು.ರವೀಂದ್ರ ಅಂಗದ ಹಾಗೆ ಇನ್ನೊಂದು ತುದಿಯಲ್ಲಿ ಹೆಪ್ಪುಗಟ್ಟಿದ. ಅವರು ಕೇವಲ 89 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಗಗನಚುಂಬಿ ಸಿಕ್ಸರ್‌ಗಳ ಸಹಾಯದಿಂದ 116 ರನ್ ಗಳಿಸಿದರು. ಆದರೆ ಅವರ ವಿಕೆಟ್ ನಂತರ ನ್ಯೂಜಿಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿತು. ಇದಲ್ಲದೆ ಡೇರಿಲ್ ಮಿಚೆಲ್ ಮತ್ತು ಜೇಮ್ಸ್ ನೀಶಮ್ ತಮ್ಮ ಬಿರುಸಿನ ಅರ್ಧಶತಕಗಳ ಮೂಲಕ ಕಾಂಗರೂ ತಂಡಕ್ಕೆ ಕೊನೆ ಕ್ಷಣದವರೆಗೂ ಕಾಡಿದರು. ಈ ವೇಳೆ ಜೇಮ್ಸ್ ನೀಶಮ್ 39 ಎಸೆತದಲ್ಲಿ 3 ಸಿಕ್ಸ್‌ ಮತ್ತು 3 ಫೋರ್‌ ಮೂಲಕ 58 ರನ್‌ ಸಿಡಿಸುವ ಮೂಲಕ ಕಿವೀಸ್‌ ಪರ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಇವರ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಗೆಲುವೂ ಸಹ ಕೈಜಾರಿತು. ಈ ಮೂಲಕ ತಂಡ 383 ರನ್‌ಗಳಿಗೆ ತನ್ನ ಇನ್ನಿಂಗ್ಸ್ ಕೊನೆಗೊಳಿಸಿತು.


ಭರ್ಜರಿ ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ:


ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆಸೀಸ್‌ ಭರ್ಜರಿ ಬ್ಯಾಟಿಂಗ್‌ ಮೂಲಕ ಬೃಹತ್‌ ಸ್ಕೋರ್‌ ಕಲೆಹಾಕುವಲ್ಲಿ ಯಶಸ್ವಿಯಾದರು. ಆಸೀಸ್‌ ಪರ ಟ್ರಾವಿಸ್ ಹೆಡ್ (67 ಎಸೆತಗಳಲ್ಲಿ 109; 10 ಬೌಂಡರಿ, 7 ಸಿಕ್ಸರ್), ಡೇವಿಡ್ ವಾರ್ನರ್ (65 ಎಸೆತಗಳಲ್ಲಿ 81; 5 ಬೌಂಡರಿ, 6 ಸಿಕ್ಸರ್) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (24 ಎಸೆತಗಳಲ್ಲಿ 41; 5 ಬೌಂಡರಿ, 2 ಸಿಕ್ಸರ್) ಮಿಂಚಿದರು.ಬ್ಯಾಟ್ಸ್‌ಮನ್‌ಗಳು. ಕೊನೆಯಲ್ಲಿ ಜೋಸ್ ಇಂಗ್ಲಿಸ್ (28 ಎಸೆತಗಳಲ್ಲಿ 38 ರನ್) ಮತ್ತು ಪ್ಯಾಟ್ ಕಮಿನ್ಸ್ (14 ಎಸೆತಗಳಲ್ಲಿ 37 ರನ್) ಮಿಂಚಿದರು. ಮ್ಯಾಕ್ಸಿ 24 ಎಸೆತಗಳಲ್ಲಿ 41 ರನ್ ಗಳಿಸಿದರು. ಅಂತಿಮವಾಗಿ ಪ್ಯಾಟ್ ಕಮಿನ್ಸ್ ಮತ್ತು ಜೋಸ್ ಇಂಗ್ಲಿಸ್ ಕೂಡ ಮಿಂಚಿದ್ದರಿಂದ ಆಸ್ಟ್ರೇಲಿಯಾ ಬೃಹತ್ ಸ್ಕೋರ್ ದಾಖಲಿಸಿತು.

ಪುತ್ತೂರು ಕ್ಷೇತ್ರದಿಂದ ಗೌಡ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಿ :ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದಿಂದ ಆಗ್ರಹ

Posted by Vidyamaana on 2023-04-11 03:00:56 |

Share: | | | | |


ಪುತ್ತೂರು ಕ್ಷೇತ್ರದಿಂದ ಗೌಡ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಿ :ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದಿಂದ ಆಗ್ರಹ

ಮಂಗಳೂರು: ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ದ.ಕ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ಎರಡು ಸ್ಥಾನಗಳಲ್ಲಿ ಒಕ್ಕಲಿಗ ಗೌಡರಿಗೆ ಪ್ರಾತಿನಿಧ್ಯ ನೀಡಬೇಕು. ಅದರಲ್ಲೂ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗಳನ್ನು ಪರಿಗಣಿಸಲೇಬೇಕು ಎಂದು ಅವರು ಆಗ್ರಹಿಸಿದರು.

ಪುತ್ತೂರು ಕ್ಷೇತ್ರದಲ್ಲಿ ಶಾಸಕರಾಗಿರುವ ನಮ್ಮ ಸಮುದಾಯದ ಸಮರ್ಥ ನಾಯಕ ಸಂಜೀವ ಮಠಂದೂರು ಅವರಿಗೆ ಈ ಬಾರಿ ಟಿಕೆಟ್ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇದು ನಿಜವೇ ಆಗಿದ್ದಲ್ಲಿ ಮಠಂದೂರು ಅವರಿಗೆ ಟಿಕೆಟ್ ದೊರೆಯದಿರಲು ಕಾರಣವೇನುಎಂದು ಅವರು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಸುಮಾರು 3.75 ಲಕ್ಷ ಮತದಾರರಿದ್ದು, ಈ ಪೈಕಿ ಪುತ್ತೂರಿನಲ್ಲಿ ಅತೀ ಹೆಚ್ಚು ಗೌಡ ಸಮುದಾಯದ ಮತದಾರರಿದ್ದಾರೆ. ಆದ್ದರಿ0ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಾದರೂ ಒಂದು ಸ್ಥಾನ ನೀಡಬೇಕು ಎಂದು ಈ ಹಿಂದೆಯೇ ವಿವಿಧ ರಾಜಕೀಯ ಪಕ್ಷಗಳಿಗೆ ಒತ್ತಾಯಿಸಲಾಗಿತ್ತು.ಆದರೆ ಇತ್ತೀಚಿನ ವರದಿಗಳನ್ನು ಗಮನಿಸಿದಾಗ ಸಮುದಾಯದ ಯಾವೊಬ್ಬ ನಾಯಕರ ಹೆಸರೂ ಪ್ರಸ್ತಾಪವಾಗಿರುವುದು ಕಂಡು ಬಂದಿಲ್ಲ.ಪುತ್ತೂರಿನಲ್ಲಿ ಗೌಡ ಸಮುದಾಯದವರಿಗೆ ಸ್ಥಾನ ಕಲ್ಪಿಸದಿದ್ದಲ್ಲಿ ಮೇ 10ರಂದು ನಡೆಯುವ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ನಿರ್ದೇಶಕ ಪದ್ಮನಾಭ ಗೌಡ, ಗುರುದೇವ್‌ ಯು.ಬಿ. ಉಪಸ್ಥಿತರಿದ್ದರು.

ಪ್ರಾಮಾಣಿಕರಿಗೆ ಇರಿಸು- ಮುರುಸು

ಪಕ್ಷಗಳಲ್ಲಿ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಸಂಘಟನೆ ಮಾಡುತ್ತಿರುವವರಿಗೆ ಚುನಾವಣೆ ಸಂದರ್ಭದಲ್ಲಿ ಜಾತಿಯಾಧಾರದ ಮೇಲೆ ಟಿಕೆಟ್ ಕೇಳುವವರಿಂದಾಗಿ ಇರಿಸು ಮುರುಸು ಉಂಟಾಗಿದೆ. ಹಲವು ವರ್ಷಗಳ ಕಾಲ ಪಕ್ಷವನ್ನ ಸಂಘಟನೆ ಮಾಡಿ, ಬಲಿಷ್ಠಗೊಳಿಸಿದ ಕಾರ್ಯಕರ್ತರು ಒಂದೆಡೆ ಟಿಕೆಟ್‌ಗಾಗಿ ನಿಷ್ಠೆಯಿಂದ ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ತಮ್ಮ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂದು ಜಾತಿಯ ಆಧಾರದ ಮೇಲೆ ಒತ್ತಡ ಹೇರುವವರಿಂದಾಗಿ ಪ್ರಾಮಾಣಿಕರಿಗೆ ಬೇಸರ ಉಂಟಾಗಿದೆ.


ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ ಕರ್ನಾಟಕ ಮೂಲದ ಒಂದೇ ಕುಟುಂಬದ ಮೂವರು ಮೃತ್ಯು

Posted by Vidyamaana on 2024-04-07 17:37:39 |

Share: | | | | |


ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ  ಕರ್ನಾಟಕ ಮೂಲದ ಒಂದೇ ಕುಟುಂಬದ ಮೂವರು ಮೃತ್ಯು

ಸೌದಿ ಅರೇಬಿಯಾ: ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಘಟನೆ ಕಳೆದ ರಾತ್ರಿ ಮದೀನಾ ಸಮೀಪ ಸಂಭವಿಸಿದ ಅಪಘಾತದಲ್ಲಿ ಮೂವರು ಮರಣ ಹೊಂದಿದ್ದಾರೆ.

ಸ್ಟಾರ್ ಚಂದ್ರು ಪರ ಪ್ರಚಾರಕ್ಕಿಳಿದ ನಟ ದರ್ಶನ್ ಕುಮಾರಸ್ವಾಮಿ ಪರ ಪ್ರಚಾರ ಮಾಡದ ಸುಮಲತಾ

Posted by Vidyamaana on 2024-04-18 12:50:47 |

Share: | | | | |


ಸ್ಟಾರ್ ಚಂದ್ರು ಪರ ಪ್ರಚಾರಕ್ಕಿಳಿದ ನಟ ದರ್ಶನ್ ಕುಮಾರಸ್ವಾಮಿ ಪರ ಪ್ರಚಾರ ಮಾಡದ ಸುಮಲತಾ

ಮಂಡ್ಯ ಏಪ್ರಿಲ್ 18: ಮಂಡ್ಯದ ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ಇಂದು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಹಲಗೂರಿನಲ್ಲಿ ಮತಭೇಟೆ ಆರಂಭಿಸಿದ್ದು, ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರದಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ.ಈ ವೇಳೆ ಮಂಡ್ಯ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಡಿ ಬಾಸ್ ದರ್ಶನ್, ನಾನು ಅಂದು ಕೂಡ ಇಂದು ಕೂಡ ವ್ಯಕ್ತಿಯನ್ನು ನೋಡಿ ಪ್ರಚಾರಕ್ಕೆ ಬಂದಿದ್ದೇನೆ. ಪಕ್ಷವನ್ನು ನೋಡಿ ಅಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನೂ ಇದೇ ವೇಳೆ,ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರ ನಿಂತಾದ್ದಾರೆ ನಿಮ್ಮ ಅಮೂಲ್ಯವಾದ ಮತ ಅವರಿಗೆ ನೀಡಿ ಎಂದು ಮನವಿ ಮಾಡಿದರು.

ಈ ಬಾರಿ ಕಾಂಗ್ರೆಸ್‌ ವಿರುದ್ಧ ಜಯ ಸಾಧಿಸಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತಿವೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಎಚ್‌ಡಿ ಕುಮರಸ್ವಾಮಿಗೆ ಟಿಕೆಟ್ ನೀಡಲಾಗಿದೆ. ಸಂಸದೆ ಸಮಲತಾ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಮಾತ್ರವಲ್ಲದೆ ಬಿಜೆಪಿಗೆ ಮತ ಹಾಕಿ ಅಂತಲೂ ಹೇಳಿದ್ದಾರೆ

ಪುತ್ತೂರು: ಎಸ್.ಡಿ.ಪಿ.ಐ ಚುನಾವಣಾ ಉಸ್ತುವಾರಿಗಳ ಸಭೆ- ರಾಜ್ಯ ಚುನಾವಣಾ ಉಸ್ತುವಾರಿ ಅಪ್ಸ‌ ಕೊಡ್ಲಿಪೇಟೆ ಭಾಗಿ

Posted by Vidyamaana on 2023-03-08 09:36:51 |

Share: | | | | |


ಪುತ್ತೂರು: ಎಸ್.ಡಿ.ಪಿ.ಐ ಚುನಾವಣಾ ಉಸ್ತುವಾರಿಗಳ ಸಭೆ- ರಾಜ್ಯ ಚುನಾವಣಾ ಉಸ್ತುವಾರಿ ಅಪ್ಸ‌ ಕೊಡ್ಲಿಪೇಟೆ ಭಾಗಿ

ಪುತ್ತೂರು: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನ ಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಗಳ ಸಭೆ ಮಾ.6ರಂದು ಪಕ್ಷದ ಕಚೇರಿಯಲ್ಲಿ ನಡೆಯಿತು.ಸಭೆಯಲ್ಲಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಅಪ್ಪರ್ ಕೊಡ್ಲಿಪೇಟೆ, ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಕಾರ್ಯದರ್ಶಿ ಶಾಕಿ‌ ಅಳಕೆಮಜಲು ಭಾಗವಹಿಸಿ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಎಸ್.ಡಿ.ಪಿ.ಐ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಬ್ದುಲ್ ರಹೀಂ, ಸಂಘಟನಾ ಕಾರ್ಯದರ್ಶಿ ಅಶ್ರಫ್ ಬಾವು ಹಾಗೂ ಕ್ಷೇತ್ರದ ಎಲ್ಲಾ ಮಟ್ಟದ ನಾಯಕರುಗಳು ಭಾಗವಹಿಸಿದ್ದರು.

Recent News


Leave a Comment: