ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಮಂಗಳೂರು: ಏರ್‌ಪೋರ್ಟ್ ರೋಡಲ್ಲಿ ತಡರಾತ್ರಿ ಬೈಕ್ ಸ್ಕಿಡ್,ಇಬ್ಬರು ಯುವಕರ ಸಾವು..!

Posted by Vidyamaana on 2024-09-07 08:10:40 |

Share: | | | | |


ಮಂಗಳೂರು: ಏರ್‌ಪೋರ್ಟ್ ರೋಡಲ್ಲಿ ತಡರಾತ್ರಿ ಬೈಕ್ ಸ್ಕಿಡ್,ಇಬ್ಬರು ಯುವಕರ ಸಾವು..!

ಮಂಗಳೂರು : ಮಂಗಳೂರು ನಗರದ ಯೆಯ್ಯಾಡಿ ಏರ್ಪೋರ್ಟ್ ರೋಡಲ್ಲಿ ತಡ ರಾತ್ರಿ ಬೈಕೊಂದು ಸ್ಕಿಡ್ ಆಗಿ ಇಬ್ಬರು ಸವಾರರೂ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಗುರುವಾರ ತಡರಾತ್ರಿ ಯೆಯ್ಯಾಡಿ ಸಮೀಪದ ಹರಿಪದವು ಎಂಬಲ್ಲಿ ಈ ಅವಘಡ ಸಂಭವಿಸಿದ್ದು ಕೋಡಿಕಲ್ ನಿವಾಸಿ ಕಾಶೀನಾಥ್(17) ಮತ್ತು ಉಪ್ಪಿನಂಗಡಿಯ ಚೇತನ್(24) ಮೃತ ದುರ್ದೈವಿಗಳಾಗಿದ್ದಾರೆ.

ಬೊಳುವಾರಿನಲ್ಲಿ ನೆಲಕ್ಕುರುಳಿದ ಬೃಹತ್ ಮಾವಿನ ಮರ

Posted by Vidyamaana on 2024-04-27 21:58:21 |

Share: | | | | |


ಬೊಳುವಾರಿನಲ್ಲಿ ನೆಲಕ್ಕುರುಳಿದ ಬೃಹತ್ ಮಾವಿನ ಮರ

ಪುತ್ತೂರು: ಪುತ್ತೂರು ಬೊಳುವಾರು ಬಸ್ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲಿದ್ದ ಭಾರಿ ಗಾತ್ರದ ಮಾವಿನ ಮರವೊಂದು ಧರಶಾಯಿಯಾದ ಘಟನೆ ಎ.27ರಂದು ನಡೆದಿದ್ದು, ಘಟನಾ ಸ್ಥಳಕ್ಮೆ ಶಾಸಕರು‌ಭೇಟಿ ನೀಡಿ ಪರಿಶೀಲನೆ ನಡೆಸಿದ್ದು‌ಮರ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

 ಬಿದ್ದ ಮರದಲ್ಲಿದ್ದ ಮಾವಿನ ಕಾಯಿ ಕೊಯ್ಯಲು ಜನ ಮುಗಿ ಬಿದ್ದಿದ್ದಾರೆ.ಬೊಳುವಾರು ಬಸ್ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲೇ ಹಲವು ವರ್ಷಗಳಿಂದ ಇದ್ದ ಮಾವಿನ ಮರವೊಂದು ಸಂಜೆ ವೇಳೆ ಆಕಸ್ಮಿಕವಾಗಿ ಧರಶಾಯಿಯಾಗಿದೆ.

ಮೂರು ಪಿಕಪ್ ನಲ್ಲಿತ್ತು ಎಂಟು ದನಗಳು -ಬಿಜೆಪಿ ಮುಖಂಡರಿಗೆ ಸೇರಿದ ವಾಹನದಲ್ಲಿ ಅಕ್ರಮ ಗೋಸಾಗಾಟ

Posted by Vidyamaana on 2023-07-13 16:08:30 |

Share: | | | | |


ಮೂರು ಪಿಕಪ್ ನಲ್ಲಿತ್ತು ಎಂಟು ದನಗಳು -ಬಿಜೆಪಿ ಮುಖಂಡರಿಗೆ ಸೇರಿದ ವಾಹನದಲ್ಲಿ ಅಕ್ರಮ ಗೋಸಾಗಾಟ

ಬೆಳ್ತಂಗಡಿ : ಅಕ್ರಮವಾಗಿ ಮೂರು ವಾಹನಗಳಲ್ಲಿ ಹಿಂಸ್ಮಾಕ ರೀತಿಯಲ್ಲಿ ಏಂಟು ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.


*ಪ್ರಕರಣದ ಸಾರಾಂಶ:* ಜುಲೈ 12 ರಂದು ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕನಾದ ಅನೀಲಕುಮಾರ್‌ ಡಿ  ರವರಿಗೆ ಸಿಕ್ಕಿದ ಖಚಿತ ಮಾಹಿತಿಯಂತೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮ ಮಂದಿರದ ಬಳಿ ಸಿಬ್ಬಂದಿರವರುಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದ ಸಮಯ ಸುಮಾರು 8:45 ಗಂಟೆಗೆ ಉಜಿರೆ  ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಮೂರು ಪಿಕಪ್‌ ವಾಹನಗಳಾದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ರಮಾನಂದ ಸಾಲ್ಯಾನ್‌ ಸೇರಿದ ಪಿಕಪ್ ವಾಹನ KA-21B-7389 ಮತ್ತು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಪ್ರಮೋದ್ ಸಾಲ್ಯಾನ್ ಸೇರಿದ ಪಿಕಪ್ ವಾಹನ KA-70-0312 ಹಾಗೂ ಕೃಷ್ಣ ಎಂಬವರಿಗೆ ಸೇರಿದ  KA670209 ನೇ ನೋಂದಣಿ ಸಂಖ್ಯೆಯ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಸದ್ರಿ ವಾಹನದಲ್ಲಿ ಕಪ್ಪು ಮತ್ತು ಕಂದು ಬಣ್ಣದ  ದನ -3, ಬಿಳಿ ಬಣ್ಣದಲ್ಲಿ ಕಂದು ಮಿಶ್ರಿತ ಇರುವ ದನ-1 , ಕಂದು ಬಣ್ಣದ ದನ -2 , ಕಂದು ಬಣ್ಣದ 2 ಗಂಡು ಕರುಗಳು ಒಟ್ಟು 8 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ವಾಹನದಲ್ಲಿದ್ದ 1ನೇ ಆರೋಪಿ ಚೆನ್ನಕೇಶವ ಎಂಬತನನ್ನು ವಿಚಾರಿಸಿದಲ್ಲಿ ಇಂದಬೆಟ್ಟು ಮತ್ತು ನಾವೂರು ಪರಿಸರದಿಂದ ಜಾನುವಾರುಗಳನ್ನು ಖರೀದಿಸಿ ಹಾಸನ ಕಡೆಗೆ ಮಾರಾಟ ಮಾಡಲು ಮೂರು ವಾಹನಗಳಲ್ಲಿ  ಹಿಂಸಾತ್ಮಕವಾಗಿ ಜಾನುವಾರುಗಳನ್ನು  

ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದು ಕಂಡು ಬಂದ ಮೇರೆಗೆ ವಾಹನಗಳ ಸಹಿತ ಜಾನುವಾರುಗಳನ್ನು ಧರ್ಮಸ್ಥಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.


*ಬಂಧಿತ ಆರೋಪಿಗಳು:* 1) ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮರವಳಲು ನಿವಾಸಿ

ಬೇಲೂರಯ್ಯಮ ಮಗನಾದ ಚೆನ್ನಕೇಶವ(33) , 2)ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಒಳಗದ್ದೆ ನಿವಾಸಿ ಉಮೇಶ್ ಗೌಡರ ಮಗ ಪುಷ್ಪರಾಜ್(20) ,3) ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮೋರ್ತಾಜೆ ನಿವಾಸಿ ಆನಂದ ಬಂಗೇರ ಮಗನಾದ ಪ್ರಮೋದ್ ಸಾಲ್ಯಾನ್(49),

4) ಹೊಳೆನರಸೀಪುರ ತಾಲೂಕಿನ ಹಳೇಕೋಟೆ ನಿವಾಸಿ ವೀರಭದ್ರಯ್ಯ ಮಗನಾದ ಸಂದೀಪ್‌(27) ಬಂಧಿತ ಆರೋಪಿಗಳು.



*ವಶಪಡಿಸಿಕೊಂಡ ಸಾಮಗ್ರಿಗಳು:* ಜಾನುವಾರುಗಳ ಅಂದಾಜು ಮೌಲ್ಯ 65,000 ಸಾವಿರ ಹಾಗೂ ವಾಹನದ ಅಂದಾಜು ಮೌಲ್ಯ 7,00,000 ರೂಪಾಯಿ ಆಗಬಹುದು. ಒಟ್ಟು ವಶಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ರೂ 7,65,000 ರೂಪಾಯಿ ಅಗಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ: 8,9,11 ಕರ್ನಾಟಕ ಗೋ ಹತ್ಯೆ ನಿಷೇಧಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ -2020 ಮತ್ತು ಕಲಂ: 11 (ಡಿ) ಪ್ರಾಣಿ ಹಿಂಸೆ ತಡೆ ಕಾಯಿದೆ ಜೊತೆಗೆ ಕಲಂ:66 ಜೊತೆಗೆ 192(ಎ) ಐ ಎಂ ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಅಮಿತ್ ಶಾ ಭೇಟಿ ಹಿನ್ನಲೆ - ಫೆ.11:ಮದ್ಯದಂಗಡಿ ಬಂದ್‌

Posted by Vidyamaana on 2023-02-10 12:13:12 |

Share: | | | | |


ಅಮಿತ್ ಶಾ ಭೇಟಿ ಹಿನ್ನಲೆ - ಫೆ.11:ಮದ್ಯದಂಗಡಿ ಬಂದ್‌

ಪುತ್ತೂರು:ಫೆ.11ರಂದು ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪುತ್ತೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಫೆ.11ರಂದು ಅಪರಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮದ್ಯದಂಗಡಿಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ. ಭದ್ರತೆ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಪುತ್ತೂರು ವಲಯ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪುತ್ತೂರು ವಲಯ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯ/ಶೇಂದಿ ಮಾರಾಟ/ ದಾಸ್ತಾನು/ಸಾಗಾಣಿಕೆಯನ್ನು ನಿರ್ಬಂಧಿಸಲಾಗಿದ್ದು ಎಲ್ಲಾ ರೀತಿಯ ಮದ್ಯ / ಶೇಂದಿ ಅಂಗಡಿಗಳನ್ನು ಫೆ.11ರಂದು ಅಪರಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಮುಚ್ಚುವಂತೆ ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ರವರು ಆದೇಶ ಹೊರಡಿಸಿದ್ದಾರೆ.

ಬಪ್ಪಳಿಗೆ: ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಯಿಂದ ಯೌವ್ವನ ಒಳಿತಿಗಾಗಿ ಸದಸ್ಯತ್ವ ಅಭಿಯಾನ ಸಮಾರೋಪ

Posted by Vidyamaana on 2023-09-09 15:18:18 |

Share: | | | | |


ಬಪ್ಪಳಿಗೆ: ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಯಿಂದ ಯೌವ್ವನ ಒಳಿತಿಗಾಗಿ ಸದಸ್ಯತ್ವ ಅಭಿಯಾನ ಸಮಾರೋಪ

ಪುತ್ತೂರು :ಮನುಷ್ಯ ಜೀವನದ ಪ್ರಧಾನ ಹಂತವಾದ ಯೌವನಕ್ಕೆ ಇಸ್ಲಾಂ ಹೆಚ್ಚಿನ ಆದ್ಯತೆ ಮತ್ತು ಪ್ರಾಮುಖ್ಯತೆಯನ್ನು ನೀಡಿದೆ.ಇತಿಹಾಸವನ್ನು ಅರಿತಾಗ ಒಂದು ಸಮುದಾಯದ ಅಭಿವೃದ್ಧಿ ಮತ್ತು ಅವನತಿ ಯುವಜನಾಂಗ ದಿಂದಲೇ ಎಂಬುವುದು ಮನವರಿಕೆಯಾಗುತ್ತದೆ,ಎಂದು ಬಪ್ಪಳಿಗೆ ಮಸೀದಿಯ ಖತೀಬ್  ಸಿರಾಜುದ್ದೀನ್ ಫೈಝಿ ನುಡಿದರು.ಅವರು ಬಪ್ಪಳಿಗೆ ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಯು "ಯೌವ್ವನ ಒಳಿತಿಗಾಗಿ"ಸದಸ್ಯತ್ವ ಅಭಿಯಾನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಪ್ಪಳಿಗೆ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್ ಲವ್ಲಿ ಯವರು ಯುವಕರು ಒಳಿತನ್ನು ಬಯಸಿಕೊಂಡು ಅಲ್ಲಾಹನ ಮಾರ್ಗದಲ್ಲೇ ಸಾಗಿ, ಸಾಮಾಜಿಕ ಸೇವೆಗಳಿಂದ ಮಾದರೀಯೋಗ್ಯರಾಗಬೇಕೆಂದರು.

   ನಲುವತ್ತೈದು ವರ್ಷಗಳ ಇತಿಹಾಸ ಹೊಂದಿರುವ ಈ ಯುವಕ ಸಮಿತಿಗೆ ಒಂದು ತಿಂಗಳ ಕಾಲ ಹಮ್ಮಿಕೊಂಡ ಸದಸ್ಯತ್ವ ನವೀಕರಣ ಹಾಗೂ ಹೊಸದಾಗಿ ಸದಸ್ಯರನ್ನು ಸೇರ್ಪಡೆಗೊಳಿಸುವ ಕಾರ್ಯ ಚಟುವಟಿಕೆಗಳ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಸಮಿತಿ ಅಧ್ಯಕ್ಷ ಮೋನು ಬಪ್ಪಳಿಗೆ ಕ್ರತಜ್ಞತೆ ಸಲ್ಲಿಸಿದರು.ಸಮಾರಂಭದಲ್ಲಿ ಜಮಾಅತ್ ಕಾರ್ಯದರ್ಶಿ ಇಕ್ಬಾಲ್ ಯು.ಕೆ.,ಇಸ್ಹಾಕ್, ಅಬ್ದುಲ್ ರಝಾಕ್ ಬಿ.ಹೆಚ್. ಹಾಗೂ ಇನ್ನಿತರ ಜಮಾಅತ್ ಸಮಿತಿ ಪದಾಧಿಕಾರಿಗಳು ಯುವಕ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

ಬಡಗನ್ನೂರು ಅಡಿಕೆ ಕಳ್ಳತನ: ನಾಲ್ವರು ಆರೋಪಿಗಳ ಬಂಧನ

Posted by Vidyamaana on 2023-10-31 18:09:30 |

Share: | | | | |


ಬಡಗನ್ನೂರು ಅಡಿಕೆ ಕಳ್ಳತನ: ನಾಲ್ವರು ಆರೋಪಿಗಳ ಬಂಧನ

ಪುತ್ತೂರು: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ,  ಬಡಗನ್ನೂರು ಗ್ರಾಮದ ಕೊಯಿಲಾ ಎಂಬಲ್ಲಿ, ಹಳೆಯ ಮನೆಯ ಕೊಟ್ಟಿಗೆಯ ಅಟ್ಟದಲ್ಲಿದ್ದ, ಸುಮಾರು 23 ಗೋಣಿ ಸುಲಿಯದ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾರ್ಯಾಚರಣೆ ನಡೆಸಿದ ಪೊಲೀಸರು ಮಂಗಳವಾರ (ಅ 31) ನಾಲ್ಕು  ಮಂದಿ ಅರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಿಂದ 1,55,925/- ರೂಪಾಯಿ ಮೌಲ್ಯದ ಅಡಿಕೆ ಸಹಿತ ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು, ಅಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 


ಬಂಧಿತ ಆರೋಪಿಗಳನ್ನು ಬಡಗನ್ನೂರು ನಿವಾಸಿಗಳಾದ ಶ್ರವಣ್ ಕೆ (20), ಜಯಚಂದ್ರ (21), ನಿಡ್ಪಳ್ಳಿ ನಿವಾಸಿಗಳಾದ ಅಶೋಕ (24), ಪುನೀತ್ (20) ಎಂದು ಗುರುತಿಸಲಾಗಿದೆ. ಬಂಧಿತರದಿಂದ ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 4,15,925/- ರೂಪಾಯಿ ಎಂದು ಅಂದಾಜಿಸಲಾಗಿದೆ.


ಆರೋಪಿಗಳು ಬಡಗನ್ನೂರು ಗ್ರಾಮದ ಕೊಯ್ದ ಎಂಬಲ್ಲಿರುವ ನವೀನ್ ಕುಮಾರ್ ರೈ ಎಂಬವರಿಗೆ ಸೇರಿದ ಹಳೇ ಮನೆಯ ಕೊಟ್ಟಿಗೆಯ ಅಟ್ಟದಲ್ಲಿ ಎನ್ ಕೆ ಆರ್ ಎಂದು ಮಾರ್ಕ್ ಮಾಡಿ ಇಟ್ಟಿದ್ದ ಸುಮಾರು 23 ಗೋಣಿ ಸುಲಿಯದ ಅಡಿಕೆಯನ್ನು ಕಳವು ಮಾಡಲಾಗಿದ್ದು, ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಈ ಪ್ರಕರಣವನ್ನು ಬೇಧಿಸುವಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯತ್ ಮತ್ತು ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎಮ್ ಎನ್ ಅವರ ನಿರ್ದೇಶನದಲ್ಲಿ ಪುತ್ತೂರು ಉಪಾಧೀಕ್ಷಕಿ ಡಾ.ಗಾನ ಪಿ. ಕುಮಾರ್ ರವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ರವಿ.ಬಿ.ಎಸ್, ರವರ ಆದೇಶದಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕ ಧನಂಜಯ್ ಬಿ.ಸಿ ರವರ ನೇತೃತ್ವದಲ್ಲಿ ಎಎಸ್‌ಐ ಮುರುಗೇಶ್, ಸಿಬ್ಬಂದಿಗಳಾದ ಬಾಲಕೃಷ್ಣ, ಅದ್ರಾಮ, ಪ್ರವೀಣ್ ರೈ, ಹರೀಶ್ ಗೌಡ, ದಯಾನಂದ, ಸುಂದರ್, ವೆಂಕಪ್ಪ, ಸಲೀಂ, ನಾಗೇಶ್ ಕೆ ಸಿ, ಮುನಿಯ ನಾಯ್ಕ ಕಾರ್ತಿಕ್, ಯುವರಾಜ ನಾಯ್ಕ, ಚಾಲಕ ಯೋಗೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Recent News


Leave a Comment: