ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಸುದ್ದಿಗಳು News

Posted by vidyamaana on 2024-07-03 13:36:16 |

Share: | | | | |


ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಬೆಂಗಳೂರು (ಜು.3): ಇಲ್ಲಿನ ಹೊರವಲಯದ ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜು ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್(25) ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಜುಲೈ 1ರಂದು ಪ್ರೇಮಿಗಳು ನಾಪತ್ತೆಯಾಗಿದ್ದರು.

ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಿದ್ದರು. ಆದರೆ ಯುವಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ವಿದ್ಯಾರ್ಥಿನಿ ತಲಘಟ್ಟಪುರ ಸಮೀಪದ ಅಂಜನಾಪುರ ಬಳಿ ವಾಸವಿದ್ದಳು. ಯುವಕ ಶ್ರೀಕಾಂತ್ ಕೋಣನಕುಂಟೆ ನಿವಾಸಿಯಾಗಿದ್ದ. ಇಬ್ಬರೂ ನಾಪತ್ತೆಯಾಗಿದ್ದರು. ನಾಪತ್ತೆ ಹಿನ್ನಲೆ ಎರಡೂ ಕಡೆಯವರ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ.

ಮದುವೆಯಾಗಿದ್ದ ಶ್ರೀಕಾಂತ್!

ಶ್ರೀಕಾಂತ್ ಗೆ ಬೇರೊಬ್ಬರ ಜೊತೆಗೆ ವಿವಾಹವಾಗಿದೆ. ಆದರೂ ಅಂಜನಾಳನ್ನ ಪ್ರೀತಿ ಮಾಡ್ತಿದ್ದ. ಇಬ್ಬರು ಒಟ್ಟಿಗೆ ಬದುಕಲು ಅವಕಾಶ ಇಲ್ಲ ಎಂದು ಸಾಯೋ ನಿರ್ಧಾರ ಮಾಡಿದ್ದಾರೆ. ಮೊದಲು ಶ್ರೀಕಾಂತ್ ಮೃತದೇಹ ಕೆರೆಯಲ್ಲಿ ಕಾಣಿಸಿದೆ. ಆತನನ್ನ ಮೇಲೆತ್ತಿದ್ದ ನಂತರ ಅಂಜನಾ ಮೃತದೇಹ ಕೂಡ ಮೇಲೆ ಬಂದಿದೆ. ಅಂಜನಾ ಮೃತದೇಹದ ಬಗ್ಗೆ ಪೊಲೀಸರಿಗೂ ಮಾಹಿತಿ ಇರುದಿಲ್ಲ. ಇಬ್ಬರು ಕೈಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಇಬ್ಬರ ಮೃತದೇಹ ಒಟ್ಟಿಗೆ ಸಿಕ್ಕಿದೆ. ಮೊಬೈಲ್ ನಲ್ಲಿ ವೀಡಿಯೊ ಮಾಡಿರುವ ಯುವತಿ ಅಂಜನಾ ಅದನ್ನ ಆಟೋದಲ್ಲಿ ಬಿಟ್ಟು ಶ್ರೀಕಾಂತ್ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯ್ತಿದ್ದೇವೆ ಎಂದು ವಿಡಿಯೋ ಮಾಡಿದ್ದಾಳೆ. ಮೊಬೈಲ್ ವಶಕ್ಕೆ ಪಡೆದುಕೊಂಡಿರೊ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 Share: | | | | |


ದೇಹದ ಖಾಸಗಿ ಭಾಗದಲ್ಲಿ ಚಿನ್ನ ಕಳ್ಳಸಾಗಣೆ- ಏ‌ರ್ ಇಂಡಿಯಾ ಎಕ್ಸ್ ಪ್ರೆಸ್‌ನ ಗಗನಸಖಿ ಅರೆಸ್ಟ್

Posted by Vidyamaana on 2024-06-01 05:53:32 |

Share: | | | | |


ದೇಹದ ಖಾಸಗಿ ಭಾಗದಲ್ಲಿ ಚಿನ್ನ ಕಳ್ಳಸಾಗಣೆ- ಏ‌ರ್ ಇಂಡಿಯಾ ಎಕ್ಸ್ ಪ್ರೆಸ್‌ನ ಗಗನಸಖಿ ಅರೆಸ್ಟ್

ಕಣ್ಣೂರು(ಮೇ 31): ತನ್ನ ದೇಹದ ಖಾಸಗಿ ಭಾಗದಲ್ಲಿ ಚಿನ್ನವನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡಲು ಯತ್ನಿಸಿದ ಏರ್​ ಇಂಡಿಯಾ ಎಕ್ಸ್​ಪ್ರೆಸ್​​ನ(Air India Express) ಕ್ಯಾಬಿನ್ ಕ್ರ್ಯೂ ಸಿಬ್ಬಂದಿಯನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ(Kannur Airport) ಬಂಧಿಸಲಾಗಿದೆ.

ಆರೋಪಿತೆಯನ್ನು ಕೊಲ್ಕತ್ತಾ ಮೂಲದ ಸುರಭಿ ಕಥುನ್ ಎಂದು ಗುರುತಿಸಲಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಚಿನ್ನ ಸ್ಮಗ್ಲಿಂಗ್(Gold Smuggling) ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದು ಯುವತಿಯನ್ನು ಅರೆಸ್ಟ್ ಮಾಡಿದ್ದಾರೆ. ಸುಮಾರು 960 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿರುವುದಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಖಚಿತಪಡಿಸಿದೆ.ಸುರಭಿ ಮಸ್ಕತ್‌ನಿಂದ ಕಣ್ಣೂರಿಗೆ ಹೊರಟಿದ್ದ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿದ್ದರು. ಗುದನಾಳದಲ್ಲಿ ಚಿನ್ನವನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ವಿಮಾನಯಾನ ಸಿಬ್ಬಂದಿಯನ್ನು ಬಂಧಿಸಿದ ಈ ಪ್ರಕರಣ ಭಾರತದಲ್ಲಿ ಮೊದಲ ಪ್ರಕರಣವಾಗಿದೆ ಎಂದು ಮೂಲಗಳು ಹೇಳಿವೆ.

ಬಿಜೆಪಿ ವಿಶ್ವದ ಅತ್ಯಂತ ದೊಡ್ಡ - ಶ್ರೀಮಂತ ಮತ್ತು ಭ್ರಷ್ಟ ಪಕ್ಷ

Posted by Vidyamaana on 2024-04-21 11:44:25 |

Share: | | | | |


ಬಿಜೆಪಿ ವಿಶ್ವದ ಅತ್ಯಂತ ದೊಡ್ಡ - ಶ್ರೀಮಂತ ಮತ್ತು ಭ್ರಷ್ಟ ಪಕ್ಷ

ಪುತ್ತೂರು: ಬಿಜೆಪಿ ವಿಶ್ವದ ಅತ್ಯಂತ ದೊಡ್ಡ ಪಕ್ಷ ಮಾತ್ರ ಅಲ್ಲ, ವಿಶ್ವದಲ್ಲಿ ಅತ್ಯಂತ ಶ್ರೀಮಂತ ಪಕ್ಷ. ಸುಪ್ರೀಂ ಕೋರ್ಟಿನ ಆದೇಶದ ನಂತರ ಚುನಾವಣಾ ಬಾಂಡ್‌ಗಳನ್ನು ಅಸ್ಸಾಂವಿಧಾನಿಕವೆಂದು ಕರೆದು, ರದ್ದು ಮಾಡಿ, ಜನಸಾಮಾನ್ಯರಿಗೆ ಮಾಹಿತಿ ಚುನಾವಣಾ ಆಯೋಗದ ವೆಬ್‌ಸೈಟ್‌ಲ್ಲಿ ಸಿಗುವಂತೆ ಮಾಡಿತೋ, ಆಗ ಬಿಜೆಪಿ ಒಂದು ವಿಶ್ವದಲ್ಲಿ ಅತ್ಯಂತ ಭ್ರಷ್ಟ ಪಕ್ಷವೆಂದು ಜಗಜ್ಜಾಹೀರಾಯಿತು ಎಂದು ಕೆ.ಪಿ.ಸಿ.ಸಿ. ವಕ್ತಾರ ಅಮಳ ರಾಮಚಂದ್ರ ಹೇಳಿದರು.


೭೦ರ ದಶಕದಲ್ಲಿ ಬಿಜೆಪಿ ಚುನಾವಣೆಗೆ ನಿಲ್ಲುತ್ತಿದ್ದಾಗ ಪಕ್ಷದ ಅಭಿಮಾನಿಗಳ ಮನೆ ಮನೆಗೆ ಹೋಗಿ ಹಣವನ್ನ ಬೇಡಿ ತಂದು ಚುನಾವಣೆಯಲ್ಲಿ ಖರ್ಚು ಮಾಡುತ್ತಿದ್ದು, ಆಗ ಬಿಪಿಎಲ್  ಪಾರ್ಟಿ ಆಗಿತ್ತು. ೨೦೧೪ರಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತೋ, ಯಾವಾಗ ಅಂಬಾನಿ ಅದಾನಿಗಳ ಜೊತೆಗೆ ಮೋದಿಯವರು ಕೈ ಮಿಲಾಯಿಸಿದರೋ ಆ ಬಳಿಕ ಎಮ್ ಎಮ್ ಪಿ ಆಗಿ ಬದಲಾವಣೆ ಹೊಂದಿತು. ೨೦೧೭ರಲ್ಲಿ ಮೋದಿ ಸರ್ಕಾರ ಚುನಾವಣಾ ಬಾಂಡ್ ಗಳನ್ನು ಜಾರಿಗೆ ತಂದ ಬಳಿಕದ ಮಾಹಿತಿಯನ್ನು ಚುನಾವಣಾ ಆಯೋಗ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿದಂತೆ ೧೬೪೯೨ ಕೋಟಿ ರೂಪಾಯಿಗಳ ಮೌಲ್ಯದ ಚುನಾವಣಾ ಬಾಂಡುಗಳನ್ನು ಖರೀದಿಸಲಾಗಿದೆ. ಶೇಕಡ ೫೩.೦೩ ಬಾಂಡ್‌ಗಳು ಅಂದರೆ ೮೨೫೨ ಕೋಟಿ ರೂಪಾಯಿಗಳ ಬಾಂಡುಗಳು ಬಿಜೆಪಿಗೆ ಸಂದಿವೆ

ಬೆಂಗಳೂರು: ಬಿಜೆಪಿ ಕಾರ್ಯಕರ್ತೆಯ ಕೈ ಕಾಲು ಕತ್ತರಿಸಿ ಹತ್ಯೆ! ಇಬ್ಬರು ಪೊಲೀಸರ ವಶಕ್ಕೆ

Posted by Vidyamaana on 2024-02-26 21:08:26 |

Share: | | | | |


ಬೆಂಗಳೂರು: ಬಿಜೆಪಿ ಕಾರ್ಯಕರ್ತೆಯ ಕೈ ಕಾಲು ಕತ್ತರಿಸಿ ಹತ್ಯೆ! ಇಬ್ಬರು ಪೊಲೀಸರ ವಶಕ್ಕೆ

ಬೆಂಗಳೂರು (ಫೆ.26): ಹಣಕ್ಕಾಗಿ ವೃದ್ಧೆಯೊಬ್ಬರ ಕೈ, ಕಾಲು ಕತ್ತರಿಸಿ ಭೀಕರವಾಗಿ ಕೊಂದು ಬಳಿಕ ಡ್ರಮ್‌ನಲ್ಲಿ ಮೃತದೇಹವನ್ನು ತುಂಬಿ ಬೀದಿಗೆ ಬಿಸಾಡಿ ಮೃತರ ಪರಿಚಿತರೇ ಪರಾರಿ ಆಗಿರುವ ಘಟನೆ ಕೆ.ಆರ್‌.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೆ.ಆರ್‌.ಪುರ ಸಮೀಪದ ನಿಸರ್ಗ ಲೇಔಟ್‌ ನಿವಾಸಿ ಸುಶೀಲಮ್ಮ (76) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಪರಿಚಿತ ದಿನೇಶ್ ಹಾಗೂ ಆತನ ಸಹಚರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.ನಿಸರ್ಗ ಲೇಔಟ್‌ನ ಮನೆಗಳ ಓಣಿಯಲ್ಲಿ ಎರಡು ದಿನಗಳಿಂದ ಅನಾಥವಾಗಿ 10 ಲೀಟರ್‌ ಸಾಮರ್ಥ್ಯದ ಡ್ರಮ್‌ ಇಟ್ಟಿರುವುದನ್ನು ಭಾನುವಾರ ಗಮನಿಸಿದ ಸ್ಥಳೀಯರು, ಶಂಕೆ ಮೇರೆಗೆ ಆ ಡ್ರಮ್‌ ಅನ್ನು ಬಳಿ ತೆರಳಿ ನೋಡಿದಾಗ ಅದರೊಳಗೆ ಸುಶೀಲಮ್ಮ ಅವರ ಮೃತದೇಹ ಕಂಡು ಬಂದಿದೆ. ಕೂಡಲೇ ಪೊಲೀಸ್‌ ನಿಯಂತ್ರಣ ಕೊಠಡಿಗೆ ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸಿದಾಗ ಕೊಲೆ ಹಿಂದೆ ಪರಿಚಿತರ ಕೈವಾಡ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಬಿಜೆಪಿ ಕಾರ್ಯಕರ್ತೆ:


ಚಿಕ್ಕಬಳ್ಳಾಪುರ ಜಿಲ್ಲೆಯ ಮೃತ ಸುಶೀಲಮ್ಮ ಅವರು, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದರು. ಮೃತರಿಗೆ ಓರ್ವ ಗಂಡು ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಸ್ತಿ ಮಾರಾಟದಲ್ಲಿ ಬಂದ ಹಣದಲ್ಲಿ ಮನೆ ಬೋಗ್ಯಕ್ಕೆ ಪಡೆದು ಮಕ್ಕಳಿಂದ ಪ್ರತ್ಯೇಕವಾಗಿ ಅಜ್ಜಿ ವಾಸವಾಗಿದ್ದರು. ಅದೇ ಕಟ್ಟಡದಲ್ಲಿ ಅವರ ಕಿರಿಯ ಪುತ್ರಿ ಮತ್ತು ಮಗಳು ಹಾಗೂ ಅಜ್ಜಿ ಮನೆ ಸಮೀಪದಲ್ಲೇ ಅವರ ಮಗ ಕೂಡ ವಾಸವಾಗಿದ್ದರು. ಪ್ರತಿ ತಿಂಗಳು ತಾಯಿಗೆ ₹2-3 ಸಾವಿರವನ್ನು ಪುತ್ರ ನೀಡುತ್ತಿದ್ದರು.


ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿದ್ದ ಸುಶೀಲಮ್ಮ ಅವರು, ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು. ಆಗ ಅವರಿಗೆ ದಿನೇಶ್ ಎಂಬಾತನ ಪರಿಚಯವಾಗಿದ್ದು, ಆಗಾಗ್ಗೆ ಅಜ್ಜಿಗೆ ಮನೆಗೆ ಬಂದು ಹೋಗುವುದನ್ನು ಆತ ಮಾಡುತ್ತಿದ್ದ ಎಂದು ಮೂಲಗಳು ಹೇಳಿವೆ.ಈ ಹತ್ಯೆಗೆ ನಿಖರವಾಗಿ ಕಾರಣ ಗೊತ್ತಾಗಿಲ್ಲ. ಹಣಕ್ಕಾಗಿ ದಿನೇಶ್ ಕೃತ್ಯ ಎಸಗಿರಬಹುದು ಎಂದು ಶಂಕೆ ಇದೆ. ಮನೆಯಲ್ಲಿ ಅಜ್ಜಿ ಜತೆ ದಿನೇಶ್ ಮಾತನಾಡುತ್ತ ನಿಂತಿರುವುದನ್ನು ಮೃತರ ಮೊಮ್ಮಗಳು ನೋಡಿದ್ದಳು. ಇದಾದ ಬಳಿಕ ಅಜ್ಜಿ ಹತ್ಯೆಯಾಗಿದೆ. ಹೀಗಾಗಿ ದಿನೇಶ್ ಮೇಲೆ ಅನುಮಾನ ಹೆಚ್ಚಿದ್ದು, ಕೃತ್ಯ ಬೆಳಕಿಗೆ ಬಂದ ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಮನೆ ಹಿಂಬದಿ ಓಣಿಯಲ್ಲಿ ಶವವಿದ್ದ ಡ್ರಮ್‌ ಪತ್ತೆಮನೆಯಲ್ಲಿ ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಮನೆಯಲ್ಲಿದ್ದ ಡ್ರಮ್‌ನಲ್ಲಿ ತುಂಬಿ ಮನೆ ಹಿಂಬದಿಯ ಓಣಿಯಲ್ಲಿ ಮೃತದೇಹ ತುಂಬಿದ್ದ ಡ್ರಮ್ಮನ್ನು ಇಟ್ಟು ಪರಾರಿಯಾಗಿದ್ದರು. ಈ ಹತ್ಯೆ ಕೃತ್ಯ ಶುಕ್ರವಾರ ರಾತ್ರಿ ನಡೆದಿರಬಹುದು. ಕೆಲವು ಬಾರಿ ಎರಡ್ಮೂರು ದಿನಗಳು ಅಜ್ಜಿ ಯಾರಿಗೂ ತಿಳಿಸದೆ ಹೊರ ಹೋಗುತ್ತಿದ್ದರು. ಹೀಗಾಗಿ ಎರಡು ದಿನಗಳಿಂದ ಮನೆ ಬಳಿ ಕಾಣದೆ ಹೋದಾಗ ಮೃತರ ಮಗಳು ಹಾಗೂ ಮೊಮ್ಮಗಳಿಗೆ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದ್ದರಿಂದ ಹತ್ಯೆಕೃತ್ಯ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಡಬ : ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ

Posted by Vidyamaana on 2023-06-22 08:27:57 |

Share: | | | | |


ಕಡಬ : ಖಾತೆ ಬದಲಾವಣೆಗೆ  ಲಂಚಕ್ಕೆ ಬೇಡಿಕೆ

ಕಡಬ : ಕಳೆದ ಆರು ವರ್ಷಗಳಿಂದ ಖಾತೆ ಬದಲಾವಣೆಗೆ ಅರ್ಜಿದಾರನ್ನು ಸತಾಯಿಸುತ್ತಿದ್ದ ಪಿಡಿಓ ಇಂದು ಲಂಚ ಪಡೆಯುತ್ತಿದ್ದಾಗ ಲೋಕಾಯಯಕ್ತ ಬಲೆಗೆ ಬಿದ್ದಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ಪಿಡಿಓ ಮಹೇಶ್ ಎಂಬಾತ ಅರ್ಜಿದಾರರಿಂದ ಖಾತೆ ಬದಲಾವಣೆಗೆ 20 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅರ್ಜಿದಾರರು ನೊಂದು ನೇರ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 


ಜೂನ್ 22 ರಂದು(ಇಂದು) ಲಂಚದ 20 ಸಾವಿರ ರೂಪಾಯಿ ಹಣ ಅರ್ಜಿದಾರರಿಂದ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.


ದಕ್ಷಿಣ ಕನ್ನಡ ಲೋಕಾಯುಕ್ತ ಎಸ್ಪಿ ಸೈಮನ್ , ಡಿವೈಎಸ್ಪಿ ಚೆಲುವರಾಜ್ , ಡಿವೈಎಸ್ಪಿ ಕಲಾವತಿ , ಇನ್ಸ್‌ಪೆಕ್ಟರ್ ಅಮಾನುಲ್ಲಾ ,ಇನ್ಸ್‌ಪೆಕ್ಟರ್ ವಿನಯಕ ಬಿಲ್ಲವ, ನೇತೃತ್ವದ ಸಿಬ್ಬಂದಿಗಳು ಕಾರ್ಯಾಚರಣೆ ಭಾಗವಹಿಸಿದ್ದರು.

ವಿದ್ಯಾರ್ಥಿ ನಾಪತ್ತೆ

Posted by Vidyamaana on 2024-01-23 14:23:13 |

Share: | | | | |


ವಿದ್ಯಾರ್ಥಿ ನಾಪತ್ತೆ

ಸುಳ್ಯ ; ಕಾಣಿಯೂರು ಖಾಸಗಿ   ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಲೋಕನಾಥ್ ಎಂಬವರ ಮಗ ಶ್ರೇಯಸ್   (15 ವ ) ಜ .23 ರಂದು


 ಬೆಳಿಗ್ಗೆ 7.45 ಗಂಟೆಗೆ ಮನೆಯಿಂದ ಹೊರಟವನು ಶಾಲೆಗೆ ಹೋಗದೆ ಪುತ್ತೂರು ಬಸ್ಸು ನಿಲ್ದಾಣದಿಂದ ಕಾಣೆಯಾಗಿರುತ್ತಾನೆ.    ಎತ್ತರ 5 ಅಡಿ ,ಸಪೂರ ಶರೀರ, ಗೋಧಿ ಮೈಬಣ್ಣ.    ಗುಲಾಬಿ ಬಣ್ಣದ ಶರ್ಟು, ಕಪ್ಪು ಟೈ, ಕಂದು ಬಣ್ಣದ ಪ್ಯಾಂಟ್, ಕೈಯಲ್ಲಿ ಕೇಸರಿ ಬಣ್ಣದ ದಾರ ,ವಾಚ್, ಉಂಗುರ ಧರಿಸಿರುತ್ತಾನೆ


 ಈ ವಿದ್ಯಾರ್ಥಿಯ ಗುರುತು ಪರಿಚಯ ಯಾರಿಗಾದರೂ ಸಿಕ್ಕಲ್ಲಿ ಸ್ಥಳೀಯ ಪೊಲೀಸ್‌ ಠಾಣೆ  ಸಂಪರ್ಕಿಸಲು ಕೋರಲಾಗಿದೆ

ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಆರೋಪ

Posted by Vidyamaana on 2024-05-18 14:36:41 |

Share: | | | | |


ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಆರೋಪ

ಪುತ್ತೂರು:ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಚೇರಿಯಲ್ಲಿ ತುರ್ತು ಸಭೆ ನಡೆದು. ಆರೋಪಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗಳ್ಳುವಂತೆ ಪುತ್ತೂರು ನಗರ ಠಾಣೆಗೆ ಮನವಿ ನೀಡಲಾಯಿತು.


ಪುತ್ತೂರು ನಗರ ಠಾಣೆಗೆ ಮನವಿ ನೀಡಿ ಮಾತನಾಡಿದ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳರವರು ಮಾಜಿ ಶಾಸಕ ಸಂಜೀವ ಮಠಂದೂರು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಕೆಟ್ಟ ಶಬ್ದಗಳಿಂದ ಬೈದು ಮಾನಹಾನಿಗೆ ಯತ್ನ ಮಾಡಲಾಗಿದೆ. ಶಾಸಕ ಅಶೋಕ್ ರೈ ಜೊತೆಗಾರ, ರೌಡಿ ಶೀಟರ್ ಪ್ರಜ್ವಲ್ ರೈರವರು ಸಂಜೀವ ಮಠಂದೂರು ಅವರಿಗೆ ಮಾನಹಾನಿ ಮಾಡಿದ್ದಾರೆ. ಅದು ಅವರಿಗೆ ಮಾಡಿದ ಮಾನಹಾನಿಯಲ್ಲ, ಅದು ಬಿಜೆಪಿಗೆ ಮಾಡಿದ ಅವಮಾನ. ಇಂತಹ ವ್ಯಕ್ತಿಗಳನ್ನ ಎದುರಿಸುವುದು ಬಿಜೆಪಿಗೆ ದೊಡ್ಡ ವಿಷಯವಲ್ಲ. ಇವರನ್ನು ಧೂಳಿಪಟ ಮಾಡುವ ಶಕ್ತಿ ನಮಗಿದೆ ಎಂದರು. ಬಿಜೆಪಿಯ ಕಾರ್ಯಕರ್ತರು, ನಾಯಕರು ಕೈಗೆ ಬಳೆತೊಟ್ಟು ಕುಳಿತಿಲ್ಲ. ನಿಮ್ಮ ಬಗ್ಗೆ ಬೀದಿಯಲ್ಲಿ ಏನು ತೋರಿಸಬೇಕಾ ಅದನ್ನ ತೋರಿಸಲು ನಮಗೆ ತಾಕತ್ತಿದೆ. ನೀತಿ ಸಂಹಿತೆ ಹಿನ್ನಲೆಯಲ್ಲಿ ಮೌನವಾಗಿ ನಾವು ಮನವಿಯನ್ನ ನೀಡಿದ್ದೇವೆ ಎಂದರು. ಆರೋಪಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನೀತಿ ಸಂಹಿತೆ ಮುಗಿದ ಬಳಿಕ ಮುಂದಿನ ಕ್ರಮವನ್ನು ತಿರ್ಮಾನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.



Leave a Comment: