ಪರೀಕ್ಷೆಯಲ್ಲಿ ಗೈಡ್ ಇಟ್ಟುಕೊಂಡು ಸಾಮೂಹಿಕ ನಕಲು ಮಾಡಿದ ವಿದ್ಯಾರ್ಥಿಗಳು, ವಿಡಿಯೋ ವೈರಲ್

ಸುದ್ದಿಗಳು News

Posted by vidyamaana on 2024-07-08 08:41:02 |

Share: | | | | |


ಪರೀಕ್ಷೆಯಲ್ಲಿ ಗೈಡ್ ಇಟ್ಟುಕೊಂಡು ಸಾಮೂಹಿಕ ನಕಲು ಮಾಡಿದ ವಿದ್ಯಾರ್ಥಿಗಳು, ವಿಡಿಯೋ ವೈರಲ್

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗೈಡ್​ ಹಾಗೂ ಪುಸ್ತಕಗಳನ್ನಿಟ್ಟುಕೊಂಡು ಸಾಮೂಹಿಕ ನಕಲು ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕೇವಲ ಮಕ್ಕಳಲ್ಲ ಶಿಕ್ಷಕರೂ ಅವರಿಗೆ ನೆರವಾಗುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗೈಡ್​ ಇಟ್ಟುಕೊಂಡು ಸಾಮೂಹಿಕ ನಕಲು(Mass Cheating) ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಘಟನೆ ಸಿಸಿಟಿವಿಯಲ್ಲಿ ಬಯಲಾಗಿದೆ. ಜುಲೈ 5 ರಂದು ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು ಎಂದು ಎಸ್ ಡಿಎಂ ವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ. ಅವರು ತನಿಖೆಗಾಗಿ ಸ್ಥಳಕ್ಕೆ ಬಂದರು ಆದರೆ ಅಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು. ಇದಾದ ಬಳಿಕ ವಿಡಿಯೋವೊಂದು ಹೊರಬಿದ್ದಿದ್ದು, ನಂತರ ವಿಷಯ ಬೆಳಕಿಗೆ ಬಂದಿದೆ.

ಪರೀಕ್ಷಾ ಪತ್ರಿಕೆಗಳಲ್ಲಿನ ಅಕ್ರಮಗಳು ಮತ್ತು ಸೋರಿಕೆಗಳ ಬಗ್ಗೆ ದೇಶದಲ್ಲಿ ಕೋಲಾಹಲವಿದೆ, ಈ ನಡುವೆ ಈ ಘಟನೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ತರಗತಿ ಕೊಠಡಿಯಲ್ಲಿ ಪರೀಕ್ಷೆ ನಡೆಯುವಾಗ ಹಲವು ಮಕ್ಕಳು ಗುಂಪು ಕಟ್ಟಿಕೊಂಡು ಬಹಿರಂಗವಾಗಿ ನಕಲು ಮಾಡುತ್ತಿದ್ದರು. ಅಲ್ಲಿ ಶಿಕ್ಷಕರೂ ಇದ್ದರು. ಆದರೆ ನಕಲು ನಿಲ್ಲಿಸುವ ಬದಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಬಿಎ ಮತ್ತು ಬಿಎಸ್ಸಿ ಪರೀಕ್ಷೆಗಳು ಅಲ್ಲಿ ನಡೆಯುತ್ತಿತ್ತು, ಈ ಪರೀಕ್ಷೆಗಳ ಕೇಂದ್ರವನ್ನು ದಾಮೋಹ್ ಪ್ರದೇಶದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳು ಅದೇ ಶಾಲೆಯ ತರಗತಿ ಕೊಠಡಿಯಲ್ಲಿದೆ ಎಂದು ಹೇಳಲಾಗಿದೆ.

ವಿದ್ಯಾರ್ಥಿಗಳು ಗೈಡ್​ ಹಾಗೂ ಪುಸ್ತಕಗಳನ್ನು ತೆರೆದು ನಕಲು ಮಾಡುತ್ತಿರುವುದನ್ನು ಕಾಣಬಹುದು. ಈ ಬಗ್ಗೆ ಎಸ್‌ಡಿಎಂ ಭಿಂಡ್ ಕಲೆಕ್ಟರ್ ಸಂದೀಪ್ ಶ್ರೀವಾಸ್ತವ ಅವರಿಗೆ ಪತ್ರ ಬರೆದಿದ್ದಾರೆ. ಕೇಂದ್ರದ ಅಧ್ಯಕ್ಷರು ಹಾಗೂ ಪ್ರಾಂಶುಪಾಲರ ಶಾಮೀಲಾಗಿರುವುದನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆಯೂ ಮಾತನಾಡಿದರು. ಇದೀಗ ಆಲಂಪುರದ ಹೈಯರ್ ಸೆಕೆಂಡರಿ ಶಾಲೆಯನ್ನು ಪರೀಕ್ಷಾ ಕೇಂದ್ರವನ್ನಾಗಿ ಮಾಡಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ದುರ್ಗಾಪ್ರಸಾದ್ ಸರಾಫ್, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸ್ವಯಂ ಪ್ರಭಾ ಕಾಲೇಜಿನ ವಿದ್ಯಾರ್ಥಿಗಳೂ ದಾಮೋಹ್ ಕೇಂದ್ರದಲ್ಲಿ ನಕಲು ಮಾಡುತ್ತಿದ್ದು ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ.

 Share: | | | | |


ಜಿಪಂ ಟಿಕೆಟ್ ಕೊಡಿಸುವುದಾಗಿ 2 ಲಕ್ಷ ರೂ.ವಂಚನೆ; ಡ್ರೋನ್‌ ಪ್ರತಾಪ್‌ ವಿರುದ್ಧ ಕೇಸ್

Posted by Vidyamaana on 2024-02-03 18:18:08 |

Share: | | | | |


ಜಿಪಂ ಟಿಕೆಟ್ ಕೊಡಿಸುವುದಾಗಿ 2 ಲಕ್ಷ ರೂ.ವಂಚನೆ; ಡ್ರೋನ್‌ ಪ್ರತಾಪ್‌ ವಿರುದ್ಧ ಕೇಸ್

ಬೆಂಗಳೂರು: ಬಿಗ್‌ ಬಾಸ್‌ ರನ್ನರ್‌ ಅಪ್‌ ಡ್ರೋನ್‌ ಪ್ರತಾಪ್‌ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದ್ದು, ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ  ಹೇಳಿಕೊಂಡು ಜಿಲ್ಲಾ ಪಂಚಾಯಿತಿ ಟಿಕೆಟ್‌ ಕೊಡಿಸುವುದಾಗಿ ತನ್ನಿಂದ 2 ಲಕ್ಷ ರೂ.ಪಡೆದುಕೊಂಡು ವಂಚಿಸಿರುವುದಾಗಿ ಚಂದನ್‌ ಕುಮಾರ್‌ ಗೌಡ ಎಂಬುವವರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ದೂರು ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ ಪ್ರತಾಪ್‌ ತನ್ನಿಂದ 2 ಲಕ್ಷ ರೂ. ಪಡೆದುಕೊಂಡಿದ್ದಾರೆ. ತನಗೆ ಹೆಚ್‌.ಡಿ. ಕುಮಾರಸ್ವಾಮಿ ಅವರ ಪರಿಚಯವಿದೆ. ಆಗಾಗ ನಾನು ಅವರ ಫಾರ್ಮ್‌ ಹೌಸ್‌ ಗೆ ಭೇಟಿ ನೀಡುತ್ತೇನೆ ಎಂದಿದ್ದಾನೆ. ಇದರೊಂದಿಗೆ ತಾನು ಬಿಗ್‌ ಬಾಸ್‌ ಮನೆಯಲ್ಲಿರುವ ವೇಳೆ ಪ್ರಚಾರಬೇಕೆಂದು  ನನ್ನಿಂದ ಸಹಾಯ ಕೇಳಿದ್ದಾನೆ. ನಾನು ನನ್ನಿಂದಾಗುವಷ್ಟು ಸಹಾಯವನ್ನು ಮಾಡಿದ್ದು, ಅವನ ಪರವಾಗಿ ಪ್ರಚಾರವನ್ನು ಕೂಡ ಮಾಡಿದ್ದೇನೆ. ಬಿಗ್‌ ಬಾಸ್‌ ರನ್ನರ್‌ ಅಪ್‌ ಆದ ಬಳಿಕ ಪ್ರತಾಪ್‌ ನನ್ನ ಕರೆ ಹಾಗೂ ಮೆಸೇಜ್‌ ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ. ತನಗೆ ಆಗಿರುವ ಮೋಸಕ್ಕೆ ನ್ಯಾಯ ಒದಗಿಸಬೇಕೆಂದು ಚಂದನ್‌ ದೂರಿನಲ್ಲಿ ತಿಳಿಸಿದ್ದಾರೆ.

ಇದರೊಂದಿಗೆ ಚಂದನ್‌ ಕುಮಾರ್‌ ರೊಂದಿಗೆ ಪ್ರತಾಪ್ ಮಾತನಾಡಿರುವ ಎನ್ನಲಾದ ಆಡಿಯೋವನ್ನು ಕೂಡ ರಿಲೀಸ್‌ ಮಾಡಲಾಗಿದೆ.ಆಡಿಯೋದಲ್ಲಿ ಏನಿದೆ?: ನನ್ನನ್ನು ಕಾಂಗ್ರೆಸ್‌ಗೆ ಬನ್ನಿ ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ಮಾಡ್ತೀನಿ ಅಂದಿದ್ದರು. ಆಗ ನಾನು ಕುಮಾರಸ್ವಾಮಿಯವರ ಜೊತೆ ಓಡಾಡುತ್ತಿದ್ದೆನು. ಈಗಲೂ ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ಹೋಗುತ್ತೇನೆ. ಆದರೆ, ಕುಮಾರಸ್ವಾಮಿಯವರ ಜೊತೆಗಿನ ಫೋಟೋ ಹಾಕಲ್ಲ. ನನ್ನ ಜೊತೆ ಕುಮಾರಸ್ವಾಮಿಯವರ ತೋಟದ ಮನೆಗೆ ಬಾ ಪರಿಚಯ ಮಾಡಿಸುತ್ತೇನೆ. ಅವರು ಕೆಟ್ಟ ಪದದಿಂದ ಬೈಯಬಹುದು, ಆದರೆ ತುಂಬಾ ಒಳ್ಳೆಯ ಮನುಷ್ಯ. ಡಿಸಿಎಂ ಡಿ.ಕೆ. ಶಿವಕುಮಾರ್ ತರ ಪೇಪರ್ ಎಸೆಯೋದು ಮಾಡಲ್ಲ. ಕುಮಾರಸ್ವಾಮಿ ಯಾರೇ ಹೋದ್ರು ದುಡ್ಡು ಕೊಡ್ತಾರೆ ಎಂದು ಹೇಳಿ ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮೈಮೇಲಿನ ಅರಶಿನ ಮಾಗುವ ಮುನ್ನವೇ ಮಸಣ ಸೇರಿದಾಕೆಯ ಮನಕಲಕುವ ಕಥೆ

Posted by Vidyamaana on 2023-04-24 11:03:16 |

Share: | | | | |


ಮೈಮೇಲಿನ ಅರಶಿನ ಮಾಗುವ ಮುನ್ನವೇ ಮಸಣ ಸೇರಿದಾಕೆಯ ಮನಕಲಕುವ ಕಥೆ

ಬೆಳ್ತಂಗಡಿ: 15 ವರ್ಷ ಮನಸಾರೆ ಪ್ರೀತಿ ಮಾಡಿ, ಕೊನೆಗೆ ಆ ಪ್ರೀತಿ ಕಣ್ಣೆದುರೇ ಮಣ್ಣಾದಾಗ ಆ ಹೆಣ್ಣು ಮಗಳಾದರೂ ಏನು ಮಾಡಿಯಾಳು? ಹಾಗಾಗಿ ಮೈಮೇಲಿನ ಅರಶಿನ ಮಾಗುವ ಮುನ್ನವೇ ಆತ್ಮಹತ್ಯೆಯ ಹಾದಿ ಹಿಡಿದಿದ್ದಾಳೆ ಎನ್ನುವುದು ಇದೀಗ ಬಹಿರಂಗವಾಗಿದೆ.

ಪುತ್ತೂರು : ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ

Posted by Vidyamaana on 2024-03-08 12:37:16 |

Share: | | | | |


ಪುತ್ತೂರು : ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ

ಪುತ್ತೂರು: ರಾಜ್ಯದಲ್ಲಿ ಬಡವರ ಪರವಾಗಿರುವ ರಾಜ್ಯ ಸರಕಾರದ ಗ್ಯಾರೆಂಟಿ ಯೋಜನೆ ಪ್ರತಿಯೊಬ್ನ ಜನರಿಗೂ ತಲುಪುವಂತೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.


ಪುತ್ತೂರು ಕಿಲ್ಲೆ ಮೈದಾನದಲ್ಲಿ ಗುರುವಾರ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

ಈಗಾಗಲೇ ಶೇ. 98 ಜನರಿಗೆ ರಾಜ್ಯದ ಗ್ಯಾರೆಂಟಿ ಯೋಜನೆಗಳು ತಲುಪಿವೆ. ಆದರೂ ನನಗೆ ಬೇಸರವಿದೆ. ಶೇ. 100 ಜನರಿಗೆ ಈ ಯೋಜನೆಗಳು ತಲುಪಬೇಕಿತ್ತು. ಆದ್ದರಿಂದ ಜನರ ಬಳಿ ಕ್ಷಮೆ ಕೇಳುತ್ತೇನೆ ಎಂದರು.


ಗ್ಯಾರೆಂಟಿ ಸುಳ್ಳು ಎಂದು ಹೇಳುತ್ತಿದ್ದವರು ಇಂದು ಅದೇ ಗ್ಯಾರೆಂಟಿಯ ಹಿಂದೆ ಬಿದ್ದಿದ್ದಾರೆ. ದೇಶದಲ್ಲೇ ಗ್ಯಾರೆಂಟಿಗಳನ್ನು ಕೊಡುವ ಕೆಲಸ ಆಗುತ್ತಿದೆ. ಈ ಮೂಲಕ ಬಡವರ ಸಶಕ್ತೀಕರಣದ ಕೆಲಸ ಆಗುತ್ತಿದೆ. ಆದ್ದರಿಂದ ಎಂದರು.


ರಾಜ್ಯ ಸರಕಾರದ ಈ ಗ್ಯಾರೆಂಟಿ ಯೋಜನೆಗಳನ್ನು ವಿರೋಧಿಸಿದವರು ಯಾರೂ ಇಲ್ಲ. ಸುಮಾರು 3ರಿಂದ 4 ಸಾವಿರ ಮಹಿಳೆಯರ ಜೊತೆ ಮಾತನಾಡಿದ್ದೇನೆ. ಅವರೆಲ್ಲರೂ ಯೋಜನೆಯ ಬಗ್ಗೆ ಹೊಗಳಿಯೇ ಮಾತನಾಡಿದ್ದಾರೆ. ಒಂದು ವೇಳೆ 1 % ಜನ ವಿರೋಧಿಸಬಹುದು. ಅದು ನಂಜಿಕಾರುವವರು ಎಂದು ಕುಟುಕಿದರು.


ಗ್ಯಾರೆಂಟಿ ಯೋಜನೆಯಿಂದ ಬರದ ಪ್ರಭಾವ ಕಡಿಮೆಯಾಗಿದೆ: ಹರೀಶ್ ಕುಮಾರ್


ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಬದುಕು ಕೊಡುವ ಕೆಲಸವನ್ನು ರಾಜ್ಯ ಸರಕಾರ ಮಾಡಿದೆ. ಕೊಟ್ಟಿರುವ ಆಶ್ವಾಸನೆಗಳನ್ನು ಈಡೇರಿಸಿ, ರಾಜ್ಯದ ಜನರ ಮನಗೆದ್ದಿದೆ. ವರ್ಷಕ್ಕೆ 58ರಿಂದ 60 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಹಾಗೆಂದು ರಾಜ್ಯದ ಅಭಿವೃದ್ಧಿ ಕಾರ್ಯಕ್ಕೆ ತೊಡಕಾಗಿಲ್ಲ. ಆರ್ಥಿಕ ಚಾಣಕ್ಯ ಸಿದ್ದರಾಮಯ್ಯ ಇವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕಾಂಗ್ರೆಸಿನ ಗ್ಯಾರೆಂಟಿ ಯೋಜನೆಗಳಿಂದಾಗಿ ಬರದ ಪ್ರಭಾವವೂ ಅಷ್ಟಾಗಿ ಕಾಡುತ್ತಿಲ್ಲ ಎಂದರು.


ಇದೇ ಸಂದರ್ಭ ಫಲಾನುಭವಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.


ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್,  ದ.ಕ.ಜಿ.ಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಆನಂದ್ ಕೆ,ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ವಿ.ಇಬ್ರಾಹಿಂಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಲೋಕೇಶ್, ಜಿಲ್ಲಾ ಉದ್ಯೋಗ ಅಧಿಕಾರಿ ವೈ. ಎಂ.ಬಡಿಗೇರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮಂಗಳಾ ಕಾಳೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಉಸ್ಮಾನ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜಾರಾಮ್, ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.ತಹಸೀಲ್ದಾರ್ ಪುರಂದರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ಸ್ವಾಗತಿಸಿದರು.ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ವಂದಿಸಿದರು.ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು

ಪುತ್ತೂರು: ಸದಾಶಿವ ಪೈ ಗೆ ಚೂರಿ ಇರಿತ - ಗುಣಶೇಖರ್ ಶೆಟ್ಟಿಗೂ ಹಲ್ಲೆ ಆಸ್ಪತ್ರೆಗೆ ದಾಖಲು

Posted by Vidyamaana on 2024-06-13 16:10:46 |

Share: | | | | |


ಪುತ್ತೂರು:  ಸದಾಶಿವ ಪೈ ಗೆ  ಚೂರಿ ಇರಿತ - ಗುಣಶೇಖರ್ ಶೆಟ್ಟಿಗೂ ಹಲ್ಲೆ ಆಸ್ಪತ್ರೆಗೆ ದಾಖಲು

ಪುತ್ತೂರು : ಹಿರಿಯ ನಾಗರಿಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಓರ್ವರಿಗೆ ಚೂರಿಯಿಂದ ಇರಿದ ಘಟನೆ ಕೋರ್ಟ್ ರಸ್ತೆಯಲ್ಲಿ ಗುರುವಾರ ನಡೆದಿದೆ.

ಪಾರ್ಕಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಪಿಯುಸಿ ಪರೀಕ್ಷೆ ಸಮಾನ ಅಂಕ ಪಡೆದ ಬೆಳ್ತಂಗಡಿಯ ಅವಳಿ ಸಹೋದರಿಯರು!

Posted by Vidyamaana on 2023-04-21 17:24:51 |

Share: | | | | |


ಪಿಯುಸಿ ಪರೀಕ್ಷೆ ಸಮಾನ ಅಂಕ ಪಡೆದ ಬೆಳ್ತಂಗಡಿಯ ಅವಳಿ ಸಹೋದರಿಯರು!

ಬೆಳ್ತಂಗಡಿ : ತಾಲೂಕಿನ ನೆರಿಯ ಗ್ರಾಮದ ಪುಣ್ಕೆದಡಿಯ ಅವಳಿ ಸಹೋದರಿಯರು ಸಮಾನ (ಶೇಕಡಾ 99%)ಅಂಕ ಪಡೆದು ವಿಶೇಷ ಸಾಧನೆ ಮಾಡಿ ರಾಜ್ಯದ ಗಮನ ಸೆಳೆದಿದ್ದಾರೆ.ಉಮೇಶ್ ಗೌಡ ಪಿ ಹೆಚ್ ‌ಮತ್ತು ಗೀತಾ ದಂಪತಿಗಳ ಅವಳಿ ಮಕ್ಕಳಾದ ಸ್ಪಂದನಾ ಮತ್ತು ಸ್ಪರ್ಷಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (ವಾಣಿಜ್ಯ ವಿಭಾಗದಲ್ಲಿ ) ಇಬ್ಬರೂ 600 ರಲ್ಲಿ 594 ಸಮಾನ (ಶೇಕಡಾ 99%)ಅಂಕ ಪಡೆದಿದ್ದಾರೆ. ಎಸ್ ಡಿಎಂ ಕಾಲೇಜು ಉಜಿರೆಯ ವಿದ್ಯಾರ್ಥಿಗಳು.ಪೋಷಕರು ಸಂತಸ ವ್ಯಕ್ತಪಡಿಸಿದ್ದು, ಕಾಲೇಜು ಆಡಳಿತ ಮಂಡಳಿ ಪ್ರಾಧ್ಯಾಪಕರು ಇಬ್ಬರ ಸಾಧನೆಗೆ ಅಪಾರ ಮೆಚ್ಚುಗೆ ಸೂಚಿಸಿದ್ದಾರೆ.

ಕೇರಳದಲ್ಲಿ ಅವಳಿ ಸ್ಫೋಟ: ಬಾಂಬ್ ಇಟ್ಟಿದ್ದು ನಾನೇ ಎಂದು ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣು

Posted by Vidyamaana on 2023-10-29 16:05:52 |

Share: | | | | |


ಕೇರಳದಲ್ಲಿ ಅವಳಿ ಸ್ಫೋಟ: ಬಾಂಬ್ ಇಟ್ಟಿದ್ದು ನಾನೇ ಎಂದು ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣು

ಕೊಚ್ಚಿ: ಸಭಾಂಗಣವೊಂದರಲ್ಲಿ ನಡೆದ ಅವಳಿ ಸ್ಫೋಟದಲ್ಲಿ  ಓರ್ವ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರಲ್ಲೂ ಹಲವರ ಸ್ಥಿತಿ ಗಂಭೀರವಾಗಿದೆ. ಪ್ರಕರಣವನ್ನು ರಾಜ್ಯ ಮತ್ತು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಈ ಮಧ್ಯೆ “ನಾನೇ ಬಾಂಬ್​ ಇಟ್ಟಿದ್ದು” ಎಂದು ವ್ಯಕ್ತಿಯೊಬ್ಬ ಕೊಡಕಾರ ಪೊಲೀಸ್​ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.


ಸುಮಾರು 1:30ರ ವೇಳೆಗೆ ಠಾಣೆಗೆ ಶರಣಾದ ವ್ಯಕ್ತಿ, ತಾನು ಕೊಚ್ಚಿ ಮೂಲದವನು ಎಂದು ತಿಳಿಸಿದ್ದಾನೆ. ಪೊಲೀಸರು ಆತನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಕಣ್ಣೂರು ರೈಲು ನಿಲ್ದಾಣದಲ್ಲೂ ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿರುವ ಮಾಹಿತಿ ಹೊರಬಂದಿದ್ದು, ಪೊಲೀಸ್​ ಮತ್ತು ಆರ್‌ಪಿಎಫ್ ಜಂಟಿಯಾಗಿ ನಡೆಸಿದ ಶೋಧದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ. 

ಕಳಮಶ್ಶೇರಿಯಲ್ಲಿರುವ ಕನ್ವೆನ್ಸನ್ ಸೆಂಟರ್‌ನಲ್ಲಿ ಯಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯಲ್ಲಿ ಇಂದು ಬೆಳಗ್ಗೆ 9.45ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಸ್ಫೋಟದ ವೇಳೆ ಸುಮಾರು 2500 ಮಂದಿ ಸಮಾವೇಶ ಕೇಂದ್ರದಲ್ಲಿದ್ದರು. ಮಹಿಳೆಯೊಬ್ಬರು ಸಾವನ್ನಪ್ಪಿದರೆ. 40 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಮೂರು ದಿನಗಳ ಪ್ರಾರ್ಥನೆ ಇಂದು ಮುಗಿಯುವ ಹಂತದಲ್ಲಿದ್ದಾಗ ಸರಣಿ ಸ್ಫೋಟ ಸಂಭವಿಸಿದೆ.

ಕರ್ನಾಟಕ ಮತ್ತು ಕೇರಳ ಗಡಿ ಭಾಗಗಳಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪೊಲೀಸರು ವಿಶೇಷ ನಿಗಾ ವಹಿಸಿರುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸ್ಪೋಟದ ಬಳಿಕ ದೆಹಲಿ ಸೇರಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.




Leave a Comment: