ಕುತ್ತಾರು ಮದನಿ ನಗರ ದುರಂತ ಪ್ರಕರಣ: ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ; ಶೀಘ್ರ ಪರಿಹಾರ ಒದಗಿಸಲು ಸೂಚನೆ

ಸುದ್ದಿಗಳು News

Posted by vidyamaana on 2024-06-30 19:50:01 |

Share: | | | | |


ಕುತ್ತಾರು ಮದನಿ ನಗರ ದುರಂತ ಪ್ರಕರಣ: ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ; ಶೀಘ್ರ ಪರಿಹಾರ ಒದಗಿಸಲು ಸೂಚನೆ

ಮಂಗಳೂರು , ಜೂ. 30: ಕುತ್ತಾರು ಮದನಿ ನಗರದಲ್ಲಿ ಇತೀಚೆಗೆ ಪಕ್ಕದ ಮನೆಯ ಗೋಡೆ ಮನೆಯೊಂದರ ಮೇಲೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣದ ಘಟನಾ ಸ್ಥಳಕ್ಕೆ ರವಿವಾರ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ ನೀಡಿ ಪರಿಶೀಲಿಸಿದರು.

ಸಂತ್ರಸ್ತರಿಗೆ ಶೀಘ್ರ ಪರಿಹಾರವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಇದೇ ಸಂದರ್ಭ, ಉಳ್ಳಾಲ- ಸೋಮೇಶ್ವರ ಭಾಗದ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಡಲ್ಕೊರೆತ ತೀವ್ರಗೊಂಡಿರುವ ಉಚ್ಚಿಲ, ಮೊಗವೀರಪಟ್ನ, ಬಟ್ಟಂಪಾಡಿ, ಸೀಗ್ರೌಂಡ್ ಪ್ರದೇಶಕ್ಕೆ ಭೇಟಿ ನೀಡಿದರು. 


ಸಮುದ್ರತೀರದ ಮನೆಗಳಲ್ಲಿ ವಾಸವಾಗಿರುವವರು ಎಚ್ಚರಿಕೆ ವಹಿಸುವಂತೆ ಸೂಚಿಸಿದ ಸಂಸದ ಕ್ಯಾ. ಬ್ರಿಜೇಶ್, ಅಪಾಯದಂಚಿನಲ್ಲಿ ಇರುವ ಮನೆಮಂದಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಉಳ್ಳಾಲ ತಾಲೂಕು ತಹಶಿಲ್ದಾರರಾದ ಪ್ರದೀಪ್ ಕುರುಡೇಕರ್, ಬಂದರು ಇಲಾಖೆಯ ಇಂಜಿನಿಯರ್ ಪ್ರವೀಣ್, ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕರು ಪ್ರಮೋದ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಸಂತೋಷ್ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.

 Share: | | | | |


ವಾಹನ ಸವಾರರೇ ಗಮನಿಸಿ: HSRP ಪಡೆಯಲು ತೊಂದರೆಗಳಾದಲ್ಲಿ ಈ ನಂಬರ್‌ಗೆ ಕರೆ ಮಾಡಿ!

Posted by Vidyamaana on 2024-02-19 08:42:36 |

Share: | | | | |


ವಾಹನ ಸವಾರರೇ ಗಮನಿಸಿ: HSRP ಪಡೆಯಲು ತೊಂದರೆಗಳಾದಲ್ಲಿ ಈ ನಂಬರ್‌ಗೆ ಕರೆ ಮಾಡಿ!

ಬೆಂಗಳೂರು : ರಾಜ್ಯದಲ್ಲಿ 1ನೇ ಏಪ್ರಿಲ್ 2019 ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (High Security Registration Plates - HSRP) ಅಳವಡಿಸುವುದು ಕಡ್ಡಾಯವಾಗಿದ್ದು, ಹೆಚ್‍ಎಸ್‍ಆರ್‍ಪಿ ಅಳವಡಿಕೆಗೆ ಫೆಬ್ರವರಿ 17 ರವರೆಗೆ ನೀಡಲಾಗಿದ್ದ ಕಾಲಾವಕಾಶವನ್ನು ಮೇ 31 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.ಸಾರ್ವಜನಿಕರು ಆನ್‍ಲೈನ್ ಮೂಲಕ ಹೆಚ್.ಎಸ್.ಆರ್.ಪಿ. ಪಡೆಯಲು ತೊಂದರೆಗಳಾದಲ್ಲಿ ದೂರವಾಣಿ ಸಂಖ್ಯೆ 94498 63429, 94498 63429 ಮೂಲಕ ಸಹಾಯವಾಣಿಯನ್ನು ಕಛೇರಿ ಕಾರ್ಯದ ಸಮಯ ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಸಂಪರ್ಕಿಸಬಹುದಾಗಿದೆ.


ಸಾರ್ವಜನಿಕರು https://transport.karnataka.gov.in ಅಥವಾ www.siam.in ಗೆ ತಮ್ಮ ವಾಹನಗಳಿಗೆ ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಲು ಆನ್‍ಲೈನ್ ಮೂಲಕ ವಿವರಗಳನ್ನು ಒದಗಿಸಿ ಹೆಚ್‍ಎಸ್‍ಆರ್‍ಪಿ ಅಳವಡಿಸುವ ದಿನಾಂಕ, ವಾಹನ ಡೀಲರ್ ಕೇಂದ್ರದ ಹೆಸರು ಮತ್ತು ವಿಳಾಸವನ್ನು ಖಚಿತ ಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.ಈ ವೆಬ್-ಸೈಟ್ ಮೂಲಕ ಹೆಚ್‍ಎಸ್‍ಆರ್‍ಪಿ ಅಳವಡಿಸಿದ್ದಲ್ಲಿ ಮಾತ್ರ ಹೆಚ್‍ಎಸ್‍ಆರ್‍ಪಿ ನೋಂದಣಿ ಫಲಕಗಳು ಮಾನ್ಯತೆ ಹೊಂದಿರುತ್ತವೆ. ಇನ್ನಿತರೆ ಯಾವುದೇ ವೆಬ್ ಪೋರ್ಟಲ್ ಉಪಯೋಗಿಸಿ ಬುಕ್ ಮಾಡಿದ್ದಲ್ಲಿ ಅವುಗಳು ಅನಧಿಕೃತ ನೋಂದಣಿ ಫಲಕಗಳಾಗುತ್ತವೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಂಟ್ವಾಳ: ಅಕ್ರಮ ಮರಳು ಸಾಗಾಟ - ಲಾರಿ ವಶಕ್ಕೆ

Posted by Vidyamaana on 2023-11-30 13:06:33 |

Share: | | | | |


ಬಂಟ್ವಾಳ: ಅಕ್ರಮ ಮರಳು ಸಾಗಾಟ - ಲಾರಿ ವಶಕ್ಕೆ

ಬಂಟ್ವಾಳ : ಬಂಟ್ವಾಳ ಸಜೀಪದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿ ಹಾಗೂ ಮರಳನ್ನು ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.


ಸಜೀಪದಿಂದ ಚೇಳೂರು ಕಡೆಗೆ ಲಾರಿ ಸಾಗುತ್ತಿರುವ ವೇಳೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಲಾರಿ ಮತ್ತು ಮರಳಿನ ಮೌಲ್ಯ ಒಟ್ಟು 2 ಲಕ್ಷ 5 ಸಾವಿರ ಎಂದು ಅಂದಾಜಿಸಲಾಗಿದೆ.


ಸಜೀಪ ಹೊಳೆಬದಿಯಲ್ಲಿ ಅಬ್ದುಲ್ ರಹಮಾನ್ ಎಂಬವರು ಮರಳುಗಾರಿಕೆ ‌ನಡೆಸುತ್ತಿದ್ದು,ಅವರು ಲಾರಿಗೆ ಲೋಡ್ ಮಾಡಿ ಕಳುಹಿಸಿದ ಬಗ್ಗೆ ಲಾರಿ ಚಾಲಕ ಮಹಮ್ಮದ್ ಶಾಫಿ ಪೋಲೀಸರಿಗೆ ತಿಳಿಸಿದ್ದಾನೆ.


ಪರವಾನಿಗೆ ರಹಿತವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿ ಸಹಿತ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ.

ಈ ಘಟನೆ ದುಬೈನಲ್ಲಿ ಆಗ್ತಿದ್ರೆ ಕಥೆನೇ ಬೇರೆ ಇತ್ತು – ಕೊಲೆಗಾರನಿಗೆ ಮರಣ ದಂಡನೆಯಾಗ್ಬೇಕು

Posted by Vidyamaana on 2023-08-27 01:52:31 |

Share: | | | | |


ಈ ಘಟನೆ ದುಬೈನಲ್ಲಿ ಆಗ್ತಿದ್ರೆ ಕಥೆನೇ ಬೇರೆ ಇತ್ತು – ಕೊಲೆಗಾರನಿಗೆ ಮರಣ ದಂಡನೆಯಾಗ್ಬೇಕು

ಪುತ್ತೂರು: ದೇಶದಲ್ಲಿ ಕಾನೂನು ಕಠಿಣವಾಗಬೇಕಾದ ಅವಶ್ಯಕತೆಯಿದ್ದು ದುಬೈ ಮಾದರಿಯ ಕಾನೂನು ಇಲ್ಲಿ ಜಾರಿಗೆ ಬರಬೇಕಾದ ಅನಿವಾರ್ಯತೆಯಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಎರಡು ದಿನಗಳ ಹಿಂದೆ ಪುತ್ತೂರಿನಲ್ಲಿ ಪದ್ಮರಾಜ ಎಂಬಾತನಿಂದ ಕೊಲೆಯಾದ ವಿಟ್ಲ ಕುದ್ದುಪದವು ಸಮೀಪದ ಗೌರಿ ಅವರ ಮನೆಗೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರುನಮ್ಮಲ್ಲಿ ನಡೆದಂತಹ ಘಟನೆ ದುಬೈಯಲ್ಲಿ

ನಡೆಯುತ್ತಿದ್ದರೆ ಒಂದು ವಾರದಲ್ಲಿ ಇಲ್ಲವೇ ಹತ್ತು

ವಿಧಿಸುತ್ತಿದ್ದರು. ಕೊಲೆಗಾರರಿಗೆ,

ದಿನದೊಳಗೆ ಅವರಿಗೆ ಮರಣ ದಂಡನೆ ಶಿಕ್ಷೆ ಅತ್ಯಾಚಾರಿಗಳಿಗೆ ಅದೇ ರೀತಿಯ ಶಿಕ್ಷೆ ಇಲ್ಲೂ ಜಾರಿಯಾಗಬೇಕು. ಅಂತಹ ಶಿಕ್ಷೆ ಜಾರಿಯಾದಾಗಲೇ ಇಂತಹ ದುಷ್ಟ ಕೃತ್ಯಗಳನ್ನು, ಸಮಾಜ ವಿದ್ರೋಹಿ ಕೆಲಸಗಳನ್ನು ಮಟ್ಟ ಹಾಕಲು ಸಾಧ್ಯ ಎಂದು ಅವರು ಹೇಳಿದರುಕಾನೂನಿನ ಭಯ ಇಲ್ಲದೆ ಇರುವುದೇ ಎಂದು ಅನೇಕ ಕೆಟ್ಟ ಚಟುವಟಿಕೆಗಳಿಗೆ ಕಾರಣವಾಗುತ್ತಿದೆ. ಕೊಲೆ ಮಾಡಿ ಜೈಲಿಗೆ ಹೋದವರು ವಾಪಸ್ ಬಂದು ರಾಜಾರೋಷವಾಗಿ ತಿರುಗಾಡುತ್ತಾರೆ. ಅವರಿಗೆ ಸಮಾಜದಲ್ಲಿ ವಿಶೇಷ ಗೌರವ ಸಿಗುವ ಕಾರ್ಯಗಳು ಕೆಲವು ನಡೆಯುತ್ತಿದೆ. ಹಾಗಾಗಿ ಇಂತಹ ಕೃತ್ಯ ಎಸಗಿದವರಿಗೆ ಮರಣ ದಂಡನೆ ಶಿಕ್ಷೆ ಆಗಬೇಕು ಎಂದು ಅಶೋಕ್ ರೈ ಹೇಳಿದರು.


ಆರೋಪಿಗೆ ಹೇಗಾದರೂ ಶಿಕ್ಷೆ ಕೊಡಿಸಲೇಬೇಕು, ಆತನನ್ನು ಬಿಟ್ರೆ ಇನ್ನೂ ಹೀಗೆಯೇ ಮಾಡುತ್ತಾನೆ. ಇಷ್ಟು ಸಣ್ಣ ಹುಡುಗಿ ಸತ್ತ ಮೇಲೆ ಆತನೂ ಹೋಗಬೇಕು ಎಂದು ಶಾಸಕರಿಗೆ ಮೃತ ಗೌರಿಯವರತಾಯಿ ಸೀತಾ ಅವರು ಮನವಿ ಸಲ್ಲಿಸಿದರು. ಈ ವೇಳೆ ಅವರಿಗೆ ಉತ್ತರಿಸಿದ ಶಾಸಕರು, ನಮಲ್ಲಿರುವುದು ಹಳೆಯ ಕಾನೂನು. ಕೊಲೆ ಮಾಡಿದವರು 6 ತಿಂಗಳಲ್ಲಿ ಹೊರಗೆ ಬರುತ್ತಾರೆ.ಹಾಗೆ ಬರುವಾಗ ಪದ್ಮರಾಜೆ ಎಂದಿರುವವನು ಪದ್ಮಣ್ಣೆ ಆಗುತ್ತಾನೆ. ಇದು ನಮ್ಮ ಜನರ ಪರಿಸ್ಥಿತಿ. ಇದು ಕಡಿಮೆಯಾಗಬೇಕು. ಒಂದೆರಡು ಜನರಿಗೆ ಮರಣದಂಡನೆ ಶಿಕ್ಷೆಯಾದರೆ ಇದೆಲ್ಲವೂ ನಿಲ್ಲುತ್ತದೆ. ಕೆಲವೊಂದು ಬೇರೆ ಕೇಸ್‌ಗಳಲ್ಲಿ ಶಿಕ್ಷೆ ಆಗಲು 15 ವರ್ಷ ಬೇಕಾಗುತ್ತದೆ. ಆದರೆ ಇಂತಹ ಕೇಸ್‌ಗಳಲ್ಲಿ 1 ವರ್ಷದ ಒಳಗೆ ಶಿಕ್ಷೆ  ನೀಡಿದರೆ ಕಾನೂನಿನ 

ಬಗ್ಗೆ ಭಯ ಬರುತ್ತದೆ. ಕಾನೂನು ಮಾಡುವುದು ನಾವೇ ಜನಪ್ರತಿನಿಧಿಗಳು, ಕಾನೂನು ಬದಲಾವಣೆ ಮಾಡುವ ಅವಶ್ಯ ಕತೆ ಇದೆ ಎಂದು ಶಾಸಕರು ಉತ್ತರಿಸಿದರು


ಈ ಸಂದರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಮಾಜಿ ಜಿ.ಪಂ. ಉಪಾಧ್ಯಕ್ಷ ಎಂ.ಎಸ್‌. ಮಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಫಾರೂಕ್ ಪೆರ್ನೆ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ನಝೀರ್ ಮಠ, ಪುತ್ತೂರು ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಕಾಂಗ್ರೆಸ್‌ ಮುಖಂಡರಾದ ಪ್ರಹ್ಲಾದ್ ಬೆಳ್ಳಿಪ್ಪಾಡಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ವಿದ್ಯಾಮಾತಾ ಅಕಾಡೆಮಿಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯ ಮರು ಪರೀಕ್ಷೆಗೆ ಉಚಿತ ತರಬೇತಿ

Posted by Vidyamaana on 2024-01-08 12:51:41 |

Share: | | | | |


ವಿದ್ಯಾಮಾತಾ ಅಕಾಡೆಮಿಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯ ಮರು ಪರೀಕ್ಷೆಗೆ ಉಚಿತ ತರಬೇತಿ

 ಪುತ್ತೂರು /ಸುಳ್ಯ :ಕಳೆದ ಹಲವು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಿರುವ  ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು ದಿನಾಂಕ 23.01.2024ರಂದು ನಡೆಯಲಿರುವ ಪಿ ಎಸ್ ಐ 545 ಹುದ್ದೆಗಳ ಮರು ಪರೀಕ್ಷೆಯನ್ನು ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ತರಬೇತಿಯನ್ನು ನೀಡುತ್ತಿದ್ದು, ದಿನಾಂಕ 09.01.2024 ರಿಂದ ತರಗತಿಗಳು ಪ್ರಾರಂಭವಾಗಲಿದೆ,ಈ ತರಗತಿಗಳು ಆನ್ ಲೈನ್ ಮೂಲಕ ತರಗತಿಗಳು ನಡೆಯಲಿದ್ದು ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಕಛೇರಿ ಸಂಖ್ಯೆ 9448527606ನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಂಗಳೂರು ಸಿಎಂ, ಡಿಸಿಎಂಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಬಿಜೆಪಿ ಕಾರ್ಯಕರ್ತ ಅರೆಸ್ಟ್

Posted by Vidyamaana on 2023-12-15 15:17:14 |

Share: | | | | |


ಮಂಗಳೂರು  ಸಿಎಂ, ಡಿಸಿಎಂಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಬಿಜೆಪಿ ಕಾರ್ಯಕರ್ತ ಅರೆಸ್ಟ್

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.ಮುತ್ತೂರು ಗ್ರಾಮದ ಬೊಳಿಯ ನಿವಾಸಿ ಸಂತೋಷ್ ಪೂಜಾರಿ ಬಂಧಿತ ಆರೋಪಿ.


ಡಿ. 11 ರಂದು ಬಿಜೆಪಿ ಕಾರ್ಯಕರ್ತ ಎನ್ನಲಾದ ಮುತ್ತೂರು ಗ್ರಾಮದ ಬೊಳಿಯ ನಿವಾಸಿ ಸಂತೋಷ್ ಪೂಜಾರಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಶ್ರೀ ನಾರಾಯಣ ಗುರು ಯುವ ವೇದಿಕೆ ಎಂಬ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವಾಯ್ಸ್ ಬಿಟ್ಟಿದ್ದು, ನಂತರ ಆ ವಾಯ್ಸ್ ಕ್ಲಿಪ್ ಗಳು ಇತರ ಗ್ರೂಪ್ ಗಳಲ್ಲೂ ವೈರಲ್ ಆಗಿತ್ತು ಎನ್ನಲಾಗಿದೆ. ಈ ಬಗ್ಗೆ ಮುತ್ತೂರು ವಲಯ ಕಾಂಗ್ರೆಸ್ ಅಧ್ಯಕ್ಷ ಹರಿಯಪ್ಪ ಎಂಬವರು ಬಜ್ಪೆ ಠಾಣೆಗೆ ದೂರು ನೀಡಿದ್ದರು. ದೂರಿನಂತೆ ದಿನಾಂಕ 14-12-2023 ರಂದು ಬಜ್ಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಸಂತೋಷ್ ಬೋಳಿಯ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಮಾ.3ಕ್ಕೆ ಪಲ್ಸ್‌ ಪೋಲಿಯೋ ಅಭಿಯಾನ

Posted by Vidyamaana on 2024-02-27 15:38:37 |

Share: | | | | |


ಮಾ.3ಕ್ಕೆ ಪಲ್ಸ್‌ ಪೋಲಿಯೋ ಅಭಿಯಾನ

ಪುತ್ತೂರು: ಮಾ.3ರಂದು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವು ದೇಶಾದ್ಯಂತ ನಡೆಯಲಿದ್ದು, ಪುತ್ತೂರು ಹಾಗೂ ಕಡಬ ತಾಲೂಕಿನಾದ್ಯಂತ ನಡೆಯಲಿರುವ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಪೋಲಿಯೋ ಲಸಿಕೆಯನ್ನು ಹಾಕಿಸಿ ಮಕ್ಕಳನ್ನು ಪೋಲಿಯೋ ರೋಗದಿಂದ ರಕ್ಷಿಸಿಕೊಳ್ಳಬೇಕಾಗಿ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ



Leave a Comment: