ಕೆಮ್ಮಾರ | ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಅವಘಡ; ಅಬ್ದುಲ್ ರಹಿಮಾನ್ ಅವರ ಹೊಸ ಮನೆ ಭಾಗಶಃ ಭಸ್ಮ

ಸುದ್ದಿಗಳು News

Posted by vidyamaana on 2024-06-30 21:58:04 |

Share: | | | | |


ಕೆಮ್ಮಾರ | ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಅವಘಡ;  ಅಬ್ದುಲ್ ರಹಿಮಾನ್ ಅವರ ಹೊಸ ಮನೆ ಭಾಗಶಃ ಭಸ್ಮ

ಉಪ್ಪಿನಂಗಡಿ: ಕಡಬ ತಾಲ್ಲೂಕು ಕೊಯಿಲ ಗ್ರಾಮದ ಕೆಮ್ಮಾರ ಎಂಬಲ್ಲಿ ಭಾನುವಾರ ಮನೆಯೊಳಗೆ ಬೆಂಕಿ ಹೊತ್ತಿಕೊಂಡು ಮನೆಯ ಒಳ ಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆ ಭಾಗಶಃ ಹಾನಿಗೊಂಡಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆಮ್ಮಾರ ಶಾಲೆ ಬಳಿಯ ನಿವಾಸಿ ದಿ.ಇಬ್ರಾಹಿಂ ಎಂಬುವರ ಪುತ್ರ ಅಬ್ದುಲ್ ರಹಿಮಾನ್ ಅವರ ಮನೆಯಲ್ಲಿ ಅವಘಡ ಸಂಭವಿಸಿದೆ.

ಮನೆಯ ಮಾಸ್ಟರ್ ಬೆಡ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯೊಳಗೆ ಆವರಿಸಿದೆ. ಮನೆಯೊಳಗೆ ಇದ್ದ ಕಪಾಟು, ಮಂಚ, ಕಿಟಕಿ, ಬಾಗಿಲು, ಫ್ರಿಜ್, ವಾಷಿಂಗ್ ಮೆಸಿಷಿನ್, ಬಟ್ಟೆಗಳು, ಗೃಹೋಪಯೋಗಿ ವಸ್ತುಗಳು, ಆಹಾರ ಸಾಮಗ್ರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಬೆಂಕಿಯ ತಾಪಕ್ಕೆ 2 ಕಡೆ ಗೋಡೆ ಬಿರುಕು ಬಿಟ್ಟಿದೆ. ಬೆಂಕಿ ಕಾಣಿಸಿಕೊಂಡ ಕೋಣೆಯಲ್ಲಿ ಗ್ರಾನೈಟ್ ಮತ್ತು ಅಡುಗೆ ಕೋಣೆಯಲ್ಲಿ ನೆಲದ ಟೈಲ್ಸ್ ಸಿಡಿದಿದೆ. ಇದರಿಂದಾಗಿ ಸುಮಾರು ₹ 35 ಲಕ್ಷ ನಷ್ಟ ಉಂಟಾಗಿದೆ ಎಂದು ಅಬ್ದುಲ್ ರಹಿಮಾನ್ ಅವರು ಕಂದಾಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮನೆಯಲ್ಲಿ ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ಮಾತ್ರ ಇದ್ದು, ಮನೆಯೊಳಗೆ ಹೊಗೆ ತುಂಬುವುದನ್ನು ಗಮನಿಸಿ ಮನೆಯಿಂದ ಹೊರ ಬಂದು ಬೊಬ್ಬೆ ಹಾಕಿ ಪಕ್ಕದ ಮನೆಯವರನ್ನು ಕರೆದಿದ್ದಾರೆ. ಪಕ್ಕದ ಮನೆಯವರು ಸ್ಥಳೀಯರಿಗೆ ಕರೆ ಮಾಡಿದ್ದಾರೆ. ಅಬ್ದುಲ್ ರಹಿಮಾನ್, ಪತ್ನಿ, ಮಕ್ಕಳು ಪತ್ನಿಯ ತವರು ಮನೆಗೆ ಹೋಗಿದ್ದರು. ವರ್ಷದ ಹಿಂದೆ ಮನೆ ನಿರ್ಮಿಸಲಾಗಿತ್ತು.

ಬೆಂಕಿ ಅವಘಡದ ಮಾಹಿತಿ ತಿಳಿದ ಸಾಮಾಜಿಕ ಕಾರ್ಯಕರ್ತರಾದ ಸಲೀಕತ್, ಅಬೂಬಕ್ಕರ್, ರಿಯಾಝ್, ಜುನೈದ್ ಮನೆಯೊಳಗೆ ಪ್ರವೇಶಿಸಿ

ವಿದ್ಯುತ್ ಸಂಪರ್ಕ, ಗ್ಯಾಸ್ ಸಂಕರ್ಪ ಕಡಿತಗೊಳಿಸಿದರು. ಪುತ್ತೂರಿನಿಂದ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.

ಘಟನಾ ಸ್ಥಳಕ್ಕೆ ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್, ಸದಸ್ಯ ನಝೀರ್ ಪೂರಿಂಗ, ಆತೂರು ಬದ್ರಿಯಾ ಮಸೀದಿ ಖತೀಬ್ ಜುನೈದ್ ಜಿಫ್ರಿ ತಂಙಳ್ ಭೇಟಿ ನೀಡಿದರು. ಕೊಯಿಲ ಗ್ರಾಮಕರಣಿಕ ಶೇಷಾದ್ರಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ನಾನು ಕೋಣೆಯೊಂದರಲ್ಲಿ ಕೆಲಸದಲ್ಲಿ ನಿರತಳಾಗಿದ್ದೆ. ತುಂತುರು ಮಳೆಯಾಗುತ್ತಿತ್ತು. ಭಾರಿ ಸಿಡಿಲಿನ ಶಬ್ದ ಕೇಳಿಸಿತ್ತು. ಸ್ವಲ್ಪ ಹೊತ್ತಿನ ಬಳಿಕ ಮನೆಯೊಳಗೆ ಹೊಗೆ ತುಂಬತೊಡಗಿತು. ಮನೆಯಿಂದ ಹೊರ ಬರುವುದಕ್ಕೂ ದಾರಿ ಕಾಣುತ್ತಿರಲಿಲ್ಲ ಎಂದು ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ತಿಳಿಸಿದರು.

ಉಪ್ಪಿನಂಗಡಿ ಸಮೀಪದ ಕೆಮ್ಮಾರದಲ್ಲಿ ಮನೆ ಭಾಗಶಃ ಬೆಂಕಿಗೆ ಆಹುತಿಯಾಗಿದ್ದು ಕಂದಾಯ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು

 Share: | | | | |


ಮೋದಿ ಮತ್ತೊಮ್ಮೆ ಪ್ರಧಾನಿಯಾದ ಸಂಭ್ರಮ ಅನ್ನದಾನ ಮಾಡಿದ ಪಂಚಮುಖಿ ಫ್ರೆಂಡ್ಸ್

Posted by Vidyamaana on 2024-06-15 11:22:21 |

Share: | | | | |


ಮೋದಿ ಮತ್ತೊಮ್ಮೆ ಪ್ರಧಾನಿಯಾದ ಸಂಭ್ರಮ  ಅನ್ನದಾನ ಮಾಡಿದ ಪಂಚಮುಖಿ ಫ್ರೆಂಡ್ಸ್

ಪುತ್ತೂರು: ಕೋರ್ಟ್ ರಸ್ತೆ ಪಂಚಮುಖಿ ಫ್ರೆಂಡ್ಸ್ ವತಿಯಿಂದ ಬಿರುಮಲೆ ಪ್ರಜ್ಞಾ ಆಶ್ರಮದಲ್ಲಿ ಶುಕ್ರವಾರ ಮಧ್ಯಾಹ್ನ ಅನ್ನದಾನ ಸೇವೆ ಜರಗಿತು.


ಪಡಿತರ ಚೀಟಿ ತಿದ್ದುಪಡಿ-ಪರಿಷ್ಕೃತ ದಿನಾಂಕ ಪ್ರಕಟ

Posted by Vidyamaana on 2023-09-06 07:05:24 |

Share: | | | | |


ಪಡಿತರ ಚೀಟಿ ತಿದ್ದುಪಡಿ-ಪರಿಷ್ಕೃತ ದಿನಾಂಕ ಪ್ರಕಟ

ಪುತ್ತೂರು : ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಜಿಲ್ಲಾವಾರು ಬದಲಾವಣೆ ಮಾಡಿ ಆಹಾರ ಇಲಾಖೆ ಆದೇಶ ಹೊರಡಿಸಿದೆ.


ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ ಸಹಿತ ವಿವಿಧ ಜಿಲ್ಲೆಗಳಲ್ಲಿ ಸೆ. 12ರಿಂದ ಸೆ. 14ರ ವರೆಗೆ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಸೆ.1 ರಿಂದ ಸೆ. 10ರ ವರೆಗೆ ಪಡಿತರ ಚೀಟಿ ತಿದ್ದುಪಡಿಗೆ ನಿಗದಿಪಡಿಸಿದ್ದ ಆದೇಶವನ್ನು ಇಲಾಖೆ ಹಿಂಪಡೆದಿದೆ. ಪಡಿತರ ಚೀಟಿ ತಿದ್ದುಪಡಿಗೆ ಭರಪೂರ ಅರ್ಜಿ ಸಲ್ಲಿಕೆಯಾಗುತ್ತಿರುವ ಕಾರಣದಿಂದ ಆಹಾರ ಇಲಾಖೆಯ ಸರ್ವ‌್ರನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ 1 ಗಂಟೆಯಲ್ಲಿ ಸುಮಾರು 500ಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗುತ್ತಿರುವ ಕಾರಣದಿಂದ ಸರ್ವರ್ ಸಮಸ್ಯೆ ಎದುರಾಗಿತ್ತು. ಇದರಿಂದಾಗಿ ಜನರು ಪಡಿತರ ಚೀಟಿ ತಿದ್ದುಪಡಿಗೆ ವಿವಿಧ ಕೇಂದ್ರಗಳನ್ನು ಸಂಪರ್ಕಿಸಿದರೂ ತಿದ್ದುಪಡಿ ಆಗುತ್ತಿರಲಿಲ್ಲ. ಈ ಸಮಸ್ಯೆಯನ್ನು ಗಮನಿಸಿದ ಆಹಾರ ಇಲಾಖೆ ಸರ್ವರ್ ನಿಭಾಯಿಸಲು ಇದೀಗ ಜಿಲ್ಲಾವಾರು ದಿನಾಂಕವನ್ನು ನಿಗದಿಪಡಿಸಿದೆ. ಅದರಂತೆ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ ಸಹಿತ ವಿವಿಧ ಜಿಲ್ಲೆಗಳಲ್ಲಿ ಸೆ. 12ರಿಂದ ಸೆ. 14ರ ವರೆಗೆ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಅವಕಾಶ ಮಾಡಲಾಗಿದೆ.

ಬೆಳ್ತಂಗಡಿ ; ಮಂಗಳೂರು- ಹಾಸನ ಪೆಟ್ರೋನೆಟ್ ಡೀಸೆಲ್ ಪೈಪ್ ಲೈನಿಗೆ ಕನ್ನ

Posted by Vidyamaana on 2024-03-22 15:41:11 |

Share: | | | | |


ಬೆಳ್ತಂಗಡಿ ; ಮಂಗಳೂರು- ಹಾಸನ ಪೆಟ್ರೋನೆಟ್ ಡೀಸೆಲ್ ಪೈಪ್ ಲೈನಿಗೆ ಕನ್ನ

ಬೆಳ್ತಂಗಡಿ, ಮಾ.22: ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ  ಆಲಡ್ಕ ಎಂಬಲ್ಲಿಂದ ಹಾದು ಹೋಗುವ ಡಿಸೇಲ್‌ ಪೈಫ್‌ ಲೈನ್‌ ಅನ್ನು ಯಾರೋ ಕಳ್ಳರು ರಂಧ್ರ ಕೊರೆದು 9.60 ಲಕ್ಷ ಮೌಲ್ಯದ ಡೀಸೆಲ್ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೇರಳದ ಅಲಪ್ಪುಝ ಜಿಲ್ಲೆ ಮಾವೇಲಿಕ್ಕರ ನಿವಾಸಿ ರಾಜನ್‌ ಜಿ ಎಂಬವರು ದೂರು ನೀಡಿದ್ದಾರೆ. ಸದ್ರಿಯವರು ಪೆಟ್ರೊನೆಟ್‌ ಎಮ್‌ ಹೆಚ್‌ ಬಿ ಲಿಮಿಟೆಡ್‌ ನೆರಿಯಾದ ಸ್ಟೇಶನ್‌ ಇನ್ಚಾರ್ಜ್‌ ಆಗಿದ್ದಾರೆ. ಮಂಗಳೂರು, ಹಾಸನ ಮತ್ತು ಬೆಂಗಳೂರಿಗೆ ಪೆಟ್ರೋನೆಟ್‌ ಪೈಪ್ ಮೂಲಕ ಡಿಸೇಲ್‌ ಸರಬರಾಜು ಆಗುತ್ತಿದ್ದು ಮಾ.16ರ ರಾತ್ರಿಯಿಂದ 19ರಂದು ರಾತ್ರಿಯ ಮಧ್ಯದ ಅವಧಿಯಲ್ಲಿ ಪುದುವೆಟ್ಟು ಗ್ರಾಮದ  ಆಲಡ್ಕ ಎಂಬಲ್ಲಿ ಡೀಸೆಲ್ ಪೈಪ್ ಲೈನಿಗೆ ಕನ್ನ ಕೊರೆಯಲಾಗಿದೆ. 


ಪೈಪ್ ಲೈನಿಗೆ 2.5 ಇಂಚು ಗಾತ್ರದ ರಂಧ್ರ ಕೊರೆದು ಹೆಚ್‌ ಡಿ ಪಿ ಇ ಪೈಪ್‌ ಮೂಲಕ ಅಂದಾಜು 12,000 ಲೀಟರ್‌ ಡಿಸೇಲ್‌ ಕಳವು ಮಾಡಿರುತ್ತಾರೆ. ಅದರ ಅಂದಾಜು ಮೌಲ್ಯ ರೂ 9,60,000/ ಆಗಬಹುದು ಎಂಬುದಾಗಿ ದೂರು ನೀಡಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಸೆಕ್ಷನ್ 427, 285, 379  ಐ ಪಿ ಸಿ ಕಲಂ 15(2) ಪೆಟ್ರೊನೆಟ್‌ ಕಾಯ್ದೆ ಕಲಂ 3(2) ಪ್ರಿವೆನ್ಸೆನ್‌ ಆಫ್‌ ಡ್ಯಾಮೆಜ್‌ ಟು ಪಬ್ಲಿಕ್‌ ಪ್ರಾಪರ್ಟಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಉಳ್ಳಾಲದ ವ್ಯಕ್ತಿ ಪತ್ನಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಸಾಲದ ಹೊರೆ ಸಾವಿನ ಹಿಂದೆ ಬೆಟ್ಟಿಂಗ್ ಜಾಲದ ಶಂಕೆ

Posted by Vidyamaana on 2023-09-12 21:00:34 |

Share: | | | | |


ಉಳ್ಳಾಲದ ವ್ಯಕ್ತಿ ಪತ್ನಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ  ಸಾಲದ ಹೊರೆ ಸಾವಿನ ಹಿಂದೆ ಬೆಟ್ಟಿಂಗ್ ಜಾಲದ ಶಂಕೆ

ಉಳ್ಳಾಲ, ಸೆ.11: ಉಳ್ಳಾಲ ತಾಲೂಕಿನ ಕೊಂಡಾಣ ಮಿತ್ರನಗರದ ನಿವಾಸಿಯೋರ್ವರು ಬಂಟ್ವಾಳದ ತನ್ನ ಪತ್ನಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಹೊರೆಯಲ್ಲಿದ್ದ ವ್ಯಕ್ತಿಯ ಸಾವಿಗೆ ಬೆಟ್ಟಿಂಗ್ ಜಾಲವೇ ಕಾರಣವೆಂದು ತಿಳಿದುಬಂದಿದೆ. 


ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೊಂಡಾಣ, ಮಿತ್ರನಗರ ನಿವಾಸಿ‌ ರವೀಂದ್ರ(35) ಆತ್ಮಹತ್ಯೆಗೈದ ವ್ಯಕ್ತಿ. ರವೀಂದ್ರ ಅವರು ನಿನ್ನೆ‌ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದ ಪತ್ನಿಯ ಮನೆಗೆ ತೆರಳಿದ್ದು ಮಧ್ಯಾಹ್ನ 12 ಗಂಟೆಗೆ ತನ್ನ ಪತ್ನಿ ಮತ್ತು ಗಂಡು ಮಗುವನ್ನ ಸಂಬಂಧಿಕರ ಶುಭ ಕಾರ್ಯಕ್ಕೆ ಬಿಟ್ಟು ಮತ್ತೆ ಒಬ್ಬಂಟಿಯಾಗಿ ಪತ್ನಿಯ ಮನೆ ಸೇರಿದ್ದರಂತೆ. ಸಾಯಂಕಾಲ ಪತ್ನಿ ಮೊಬೈಲ್ ಕರೆ ಮಾಡಿದಾಗ ರವೀಂದ್ರ ಅವರು ಕರೆ ಸ್ವೀಕರಿಸಿಲ್ಲ. ವಿಚಲಿತರಾದ ಪತ್ನಿ ನೆರೆಹೊರೆಯವರಲ್ಲಿ ಕರೆ ಮಾಡಿ ತಿಳಿಸಿದ್ದಾರೆ. 


ನೆರೆಮನೆಯ ನಿವಾಸಿಗಳು ಮನೆ ಕಡೆ ತೆರಳಿದಾಗ ರವೀಂದ್ರ ಅವರು ಮನೆಯ ಚಾವಡಿಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೈದ ವಿಚಾರ ಬೆಳಕಿಗೆ ಬಂದಿದೆ. ಬಂಟ್ವಾಳ ನಗರ ಠಾಣಾ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂದು ಕೊಂಡಾಣ, ಮಿತ್ರನಗರದಲ್ಲಿ ಮೃತ ರವೀಂದ್ರ ಅವರ ಮೃತದೇಹದ ಅಂತ್ಯ ಸಂಸ್ಕಾರ ನಡೆದಿದೆ.


ರವೀಂದ್ರ ಅವರು ಕ್ರಿಕೆಟ್ ಬೆಟ್ಟಿಂಗಲ್ಲಿ ಸಕ್ರಿಯರಾಗಿದ್ದು ಸಾಲದ ಹೊರೆ ಹೊತ್ತಿದ್ದರು ಎಂದು ಅವರನ್ನ ಬಲ್ಲ ಆಪ್ತರು ತಿಳಿಸಿದ್ದಾರೆ. ಬೆಟ್ಟಿಂಗ್ ಜಾಲದ ಬುಕ್ಕಿಗಳ ಕಿರುಕುಳದಿಂದಲೇ ಅವರು ಪತ್ನಿ ಮತ್ತು ನಾಲ್ಕು ವರ್ಷದ ಕಂದಮ್ಮನನ್ನ ಅನಾಥರಾಗಿಸಿ ಸಾವಿಗೆ ಶರಣಾಗಿರುವುದಾಗಿ ಸ್ನೇಹಿತರು ಹೇಳುತ್ತಿದ್ದಾರೆ.

ಸೀಟೂ ಹೋಯ್ತು ನೋಟೂ ಹೋಯ್ತು..– ಇದು ಪುತ್ತಿಲ ವಿರುದ್ಧ ಬೆಟ್ ಕಟ್ಟಿ ದುಡ್ಡು ಕಳೆದುಕೊಂಡವರ ವ್ಯಥೆ

Posted by Vidyamaana on 2023-05-16 23:26:35 |

Share: | | | | |


ಸೀಟೂ ಹೋಯ್ತು ನೋಟೂ ಹೋಯ್ತು..– ಇದು ಪುತ್ತಿಲ ವಿರುದ್ಧ ಬೆಟ್ ಕಟ್ಟಿ ದುಡ್ಡು ಕಳೆದುಕೊಂಡವರ ವ್ಯಥೆ

ಪುತ್ತೂರು: ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎನ್ನುವ ಹಾಗೆ ವಿಧಾನಸಭಾ ಚುನಾವಣೆ ಮುಗಿದು ಸರ್ಕಾರ ರಚನೆಗೆ ಸರ್ಕಸ್ ಮುಂದುವರಿತ್ತಿರುವುದರ ನಡುವೆ ಇಲ್ಲಿ ಪುತ್ತೂರಿನಲ್ಲಿ ಬಿಜೆಪಿಗೆ ಮುಟ್ಟಿ ನೋಡಿಕೊಳ್ಳುವಂತೆ ಸೋಲಿನ ಪೆಟ್ಟು ನೀಡಿದ ಅರುಣ್ ಪುತ್ತಿಲ ಮತ್ತವರ ಹಿಂದುತ್ವದ ಸೇನೆಯ ರಣರೋಚಕ ಕಥೆಗಳು ಪತ್ತೂರು ಆಸುಪಾಸಿನವರ ಬಾಯಲ್ಲಿ ನಿತ್ಯ ನಲಿದಾಡುತ್ತಿದೆ.

   ಪುತ್ತೂರಿನಲ್ಲಿ ಬಿಜೆಪಿ  ಮುಖಂಡರ ಆತ್ಮವಿಶ್ವಾಸ ಎಷ್ಟರಮಟ್ಟಿಗೆ ಇತ್ತೆಂದರೆ ಕೌಂಟಿಂಗ್ ನಡೆಯುವ ದಿನದವರೆಗೂ ಅವರೆಲ್ಲರೂ ಬಿಜೆಪಿ ಗೆಲ್ಲುತ್ತದೆ ಇಲ್ಲವೇ ಎರಡನೇ ಸ್ಥಾನ ಪಡೆಯುತ್ತದೆ ಮತ್ತು ಪುತ್ತಿಲ ಅವರಿಗೆ 15 ಸಾವಿರಕ್ಕಿಂತ ಹೆಚ್ಚಿನ ಮತಗಳು ಬೀಳುವುದಿಲ್ಲ ಎಂಬ ವಿಶ್ವಾಸದಲ್ಲೇ ಇದ್ರು. ಆದರೆ ಅಂತಿಮವಾಗಿ ಪುತ್ತಿಲ ಅವರು 63 ಸಾವಿರದಷ್ಟು ಮತಗಳನ್ನು ಪಡೆದು ಅಲ್ಪ ಅಂತರದಿಂದ ಅಶೋಕ್ ಕುಮಾರ್ ರೈ ಎದುರು ಸೋತಿದ್ದು ಬಿಜೆಪಿ  ನಾಯಕರಿಗೆ ಬಿದ್ದ ಮೊದಲ ಪೆಟ್ಟಾಗಿತ್ತು.

     ಇದಕ್ಕಿಂತಲೂ ವಿಶೇಷವೆಂದ್ರೆ ಈ ಸಲ ಪುತ್ತೂರಿನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಭರ್ಜರಿ ಬೆಟ್ಟಿಂಗ್ ನಡೆದಿತ್ತು ಎನ್ನುವುದು. ಕರಾವಳಿಯಲ್ಲಿ ಚುನಾವಣಾ ಬೆಟ್ಟಿಂಗ್ ರಾಜ್ಯದ ಬೇರೆ ಕಡೆಗಳಲ್ಲಿ ಇರುವಂತೆ ಇಲ್ಲ. ಆದರೆ ಈ ಬಾರಿ ಪುತ್ತೂರಿನಲ್ಲಿ ರಣ ರೋಚಕ ಫೈಟ್ ಇದ್ದ ಕಾರಣ ಭರ್ಜರಿಯಾಗಿಯೇ ಬೆಟ್ಟಿಂಗ್ ನಡೆದಿದೆ ಎನ್ನುವುದು ಇದೀಗ ಹೊರಬೀಳುತ್ತಿರುವ ಲೇಟೆಸ್ಟ್ ಸುದ್ದಿಯಾಗಿದೆ.

     ಅದರಂತೆ ಪುತ್ತಿಲ ಪರ ಇದ್ದವರು ಬಿಜೆಪಿ ಮೂರನೇ ಸ್ಥಾನಕ್ಕೆ ಇಳಿಯುತ್ತದೆ ಎಂದು ಬೆಟ್ಟಿಂಗ್ ಕಟ್ಟಿದ್ದಾರೆ. ಇದಕ್ಕರ ಎದುರಾಗಿ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗೋದಿಲ್ಲ ಎಂದು ಬಿಜೆಪಿ ಪರ ಇದ್ದವರು ಬೆಟ್ ಕಟ್ಟಿದ್ದಾರೆ. ಈ ಬೆಟ್ಟಿಂಗ್ ಮತದಾನ ನಡೆದ ಬಳಿಕ ಇನ್ನಷ್ಟು ಬಿರುಸಾಗಿಯೇ ನಡೆದಿದೆ! ಎಲ್ಲಿಯವರೆಗೆ ಅಂದ್ರೆ ಖಾಸಗಿ ಬ್ಯಾಂಕಿನ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಏಳು ಕೋಟಿ ರೂಪಾಯಿಗಳಷ್ಟು ಹಣವನ್ನು ಈ ಬೆಟ್ಟಿಂಗ್ ನಲ್ಲಿ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಇದೀಗ ಪುತ್ತೂರಿನಲ್ಲಿ ಗೌಪ್ಯವಾಗೇನೂ ಉಳಿದಿಲ್ಲ!. ಇವರು ಮಾತ್ರವಲ್ಲದೇ ತಾಲೂಕು ಬಿಜೆಪಿ ಪದಾಧಿಕಾರಿಯೊಬ್ಬರು ತನ್ನ ಮನೆಯ ಒಡವೆಗಳನ್ನೆಲ್ಲಾ ಅಡವಿಟ್ಟು ಸುಮಾರು 50 ಲಕ್ಷ ರೂಪಾಯಿಗಳಷ್ಟು ಹಣವನ್ನು ಪುತ್ತಿಲ ವಿರುದ್ಧ ಬೆಟ್ ಕಟ್ಟಿ ಕಳ್ಕೊಂಡು ಇದೀಗ ಪೆಚ್ಚುಮೋರೆ ಹಾಕಿಕೊಂಡು ಓಡಾಡ್ತಿದ್ದಾರೆ ಎನ್ನುವ ವಿಚಾರ ಟಾಕ್ ಆಫ್ ದಿ ಟೌನ್ ಆಗಿದೆ! ಇನ್ನೊಬ್ಬ ಮಹಾಶಯರು ಹೊಸ ಉದ್ಯಮ ಪ್ರಾರಂಭಿಸಲೆಂದು ತೆಗೆದಿಟ್ಟಿದ್ದ 2.5ಕೋಟಿ ರೂಪಾಯಿಗಳನ್ನು ಬಿಜೆಪಿ ಪರ ಬೆಟ್ ಕಟ್ಟಿ ಇದೀಗ ತಲೆ ಮೇಲೆ ಟವಲ್ ಹಾಕ್ಕೊಂಡು ಕುಳಿತುಕೊಳ್ಳೋ ಪರಿಸ್ಥಿತಿಗಿಳಿದಿದ್ದಾರಂತೆ! ಹೀಗೆ ಈ ಸಲ ಏನಿಲ್ಲವೆಂದರೂ ಪುತ್ತೂರಿನಲ್ಲಿ ಬಿಜೆಪಿ –ಅರುಣ್ ಪುತ್ತಿಲ ಕಾದಾಟದಲ್ಲಿ ಫಲಿತಾಂಶದ ಪರ-ವಿರೋಧವಾಗಿ ಸುಮಾರು 75 ಕೋಟಿ ರೂಪಾಯಿಗಳಷ್ಟು ಮೊತ್ತದ ಭಾರೀ ಬೆಟ್ಟಿಂಗ್ ನಡೆದಿದೆ ಎನ್ನುವುದು ತಾಲೂಕಿನ ಮಟ್ಟಿಗೆ ಒಂದು ದಾಖಲೆಯೇ ಸರಿ.

   ಮತದಾನಕ್ಕೆ ಎರಡು ದಿನ ಇರುವಾಗ ಶುರುವಾದ ಈ ಬೆಟ್ಟಿಂಗ್ ಕೌಂಟಿಂಗ್ ದಿನ ಪೀಕ್ ನಲ್ಲಿತ್ತು. ಇಲ್ಲಿ ಪುತ್ತಿಲ ಪರ ಇದ್ದವರು ಕಡಿಮೆ ರೇಟಲ್ಲಿ ಜೂಜಿನ ಸವಾಲು ಪಡೆದು ಬಂಪರ್ ಲಾಟರಿ ಸಂಪಾದಿಸಿದ್ದಾರೆ. ದೊಡ್ಡ ಕುಳಗಳು ಮಾತ್ರವಲ್ಲದೇ ಅಂಗಡಿ ಮಾಲಕರು, ತೆಂಗಿನಕಾಯಿ ವ್ಯಾಪಾರಿಗಳು ಸೇರಿದಂತೆ ಜನಸಾಮಾನ್ಯರೂ ಸಹ ಈ ಬೆಟ್ಟಿಂಗ್ ನಲ್ಲಿ ದುಡ್ಡು ಕಟ್ಟಿ ಕೆಲವರು ಭರ್ಜರಿ ಲಾಭ ಮಾಡ್ಕೊಂಡಿದ್ರೆ ಇನ್ನು ಕೆಲವರು ನುಣ್ಣಗೆ ಬೋಳಿಸ್ಕೊಂಡು ಇದೀಗ ಒಟ್ರಾಶಿ ಟೆನ್ಷನ್ ನಲ್ಲಿದ್ದಾರೆ ಎನ್ನುವುದು ಪುತ್ತೂರಿನಲ್ಲಿ ಜನರ ಬಾಯಲ್ಲಿ ಓಡಾಡ್ತಿರೋ ವಿಷಯವಾಗಿದೆ.

ಒಟ್ಟಿನಲ್ಲಿ ಈ ಬಾರಿ ಪುತ್ತೂರಿನಲ್ಲಿ ಪುತ್ತಿಲರನ್ನು ಟಚ್ ಮಾಡಲು ಹೋಗಿ  ನಾಯಕರುಗಳು ಎಂದೂ ಮರೆಯಲಾಗದ ಏಟು ತಿಂದಿರುವುದು ಮಾತ್ರ ಸುಳ್ಳಲ್ಲ.

ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಸೆ. 23ರ ವರೆಗೆ ಸಿಸಿಬಿ ಕಸ್ಟಡಿಗೆ

Posted by Vidyamaana on 2023-09-13 17:16:46 |

Share: | | | | |


ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಸೆ. 23ರ ವರೆಗೆ ಸಿಸಿಬಿ ಕಸ್ಟಡಿಗೆ

ಬೆಂಗಳೂರು: ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿ ಗೋವಿಂದ ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ 7 ಕೋಟಿ ರುಪಾಯಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಾಕಾರಿ ಭಾಷಣಕಾರ್ತಿ ಚೈತ್ರ ಕುಂದಾಪುರ, ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್ನನ್ನು ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ.


ಕೆಲ ಸಮಯದಿಂದ ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಇಬ್ಬರು ಆರೋಪಿಗಳನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ.



Leave a Comment: