ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಮೃತ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಶಾಸಕ ಅಶೋಕ್ ರೈ ಭೇಟಿ

Posted by Vidyamaana on 2024-01-26 18:40:39 |

Share: | | | | |


ಮೃತ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಶಾಸಕ ಅಶೋಕ್ ರೈ ಭೇಟಿ

ಪುತ್ತೂರು: ಜ.25 ರಂದು ಮೃತಪಟ್ಟ ಅರಿಯಡ್ಕ ಗ್ರಾಮದ ಕುಂಜೂರು ಪನೆಕ್ಕಲ್ ನಿವಾಸಿ ರವೀಂದ್ರ ಮಣಿಯಾಣಿಯವರ ಮನೆಗೆ ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ರವೀಂದ್ರ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕರು ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ.ಮೃತ ಕಾರ್ಯ ಕರ್ತನ ಮಕ್ಕಳ ವಿದ್ಯಾಬ್ಯಾಸಕ್ಕೆ ನೆರವು ನೀಡುವುದಾಗಿ ಶಾಸಕರು ತಿಳಿಸಿದರು.

ಪುತ್ತೂರು : ಬೈಕ್-ಸ್ಕೂಟಿ ನಡುವೆ ಅಪಘಾತ : ಇಬ್ಬರಿಗೆ ಗಾಯ.

Posted by Vidyamaana on 2024-03-28 14:24:38 |

Share: | | | | |


ಪುತ್ತೂರು : ಬೈಕ್-ಸ್ಕೂಟಿ ನಡುವೆ ಅಪಘಾತ : ಇಬ್ಬರಿಗೆ ಗಾಯ.

ಪುತ್ತೂರು : ಸ್ಕೂಟಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ದರ್ಬೆಯಲ್ಲಿ ನಡೆದಿದೆ.


ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕರಾಗಿ ವಿ ಟಿವಿ ಮುಖ್ಯಸ್ಥ ರಾಮದಾಸ್ ಶೆಟ್ಟಿ ವಿಟ್ಲ ಆಯ್ಕೆ

Posted by Vidyamaana on 2023-09-15 12:03:17 |

Share: | | | | |


ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕರಾಗಿ ವಿ ಟಿವಿ ಮುಖ್ಯಸ್ಥ ರಾಮದಾಸ್ ಶೆಟ್ಟಿ ವಿಟ್ಲ ಆಯ್ಕೆ

ವಿಟ್ಲ: ಜಯಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯಿತು.


ಜಯಕರ್ನಾಟಕ ಜನಪರ ವೇದಿಕೆಯ


ಸಂಸ್ಥಾಪಕ ಅಧ್ಯಕ್ಷರಾದ ಬಿ ಗುಣರಂಜನ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸಂಚಾಲಕರಾಗಿ ರಾಮದಾಸ್ ಶೆಟ್ಟಿ ವಿಟ್ಲರವರನ್ನು ಎರಡನೇ ಬಾರಿಗೆ ಪುನರಾಯ್ಕೆ ಮಾಡಲಾಗಿದೆ. ರಾಜ್ಯದ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್‌ ಜೆ, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಕಾರ್ತಿಕ್ ರೈರವರನ್ನು ಆಯ್ಕೆ ಮಾಡಲಾಯಿತು. ಈ ಹಿಂದೆ ಜಿಲ್ಲಾಧ್ಯಕ್ಷರಾಗಿದ್ದ ಪ್ರವೀಣ್ ಶೆಟ್ಟಿ ತಿಂಗಳಾಡಿ ಇವರನ್ನು ರಾಜ್ಯ ಕಾರ್ಯದರ್ಶಿ ಯಾಗಿ ಆಯ್ಕೆ ಮಾಡಲಾಗಿದೆ. ನಿಕಟಪೂರ್ವ ರಾಜ್ಯಾಧ್ಯಕ್ಷರಾದ ಆರ್ ಚಂದ್ರಪ್ಪನವರು ಉಪಸ್ಥಿತರಿದ್ದರು.


ಮೂರು ವರ್ಷಗಳ ಹಿಂದೆ ಹೊರನಾಡು ತಾಯಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಪ್ರಾರಂಭಿಸಲಾದ ಜಯಕರ್ನಾಟಕ ಜನಪರ ವೇದಿಕೆ ರಾಜ್ಯಾದ್ಯಂತ ಹಲವಾರು ಜಿಲ್ಲೆಗಳಲ್ಲಿ ಅನೇಕ ಜನಪರ ಕಾರ್ಯಕ್ರಮಗಳೊಂದಿಗೆ ಹೋರಾಟ ಮತ್ತು ನಮ್ಮ ನಡೆ ಪ್ರಕೃತಿಯ ಕಡೆ ಎಂಬ ಶೀರ್ಷಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಾ


ಇದೀಗ ಎರಡನೇ ಭಾರಿಗೆ ರಾಜ್ಯ ಸಂಚಾಲಕರಾಗಿ ಆಯ್ಕೆಯಾಗಿರುವ ರಾಮ್ ದಾಸ್ ಶೆಟ್ಟಿ ವಿಟ್ಲ ರವರು ವಿಟ್ಲದ ವಿಟಿವಿ ಮುಖ್ಯಸ್ಥರಾಗಿದ್ದು, ಕರ್ನಾಟಕ ಜರ್ನಲಿಸ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾಗಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಾರ್ತಿಕ್ ರೈ ಸವಣೂರು ಸಮೀಪದ ಪೆರುವಾಜೆ ಗ್ರಾಮದ ಕನ್ನೆಜಾಲು ನಿವಾಸಿಯಾಗಿದ್ದು ಸುಳ್ಯದಲ್ಲಿ ಪ್ರಗ್ಯಾನ್ ಸ್ಟೀಲ್‌ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ.


ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಪ್ರವೀಣ್ ಶೆಟ್ಟಿ ತಿಂಗಳಾಡಿ ಈ ಹಿಂದೆ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.ಕೆದಂಬಾಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾಗಿರುವ ಇವರು ಪ್ರಸ್ತುತ ಸದಸ್ಯರಾಗಿದ್ದಾರೆ.ಪುತ್ತಿಲ ಪರಿವಾರದ ತಾಲೂಕು ಉಪಾಧ್ಯಕ್ಷರಾಗಿಯೂ ಇವರು ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಪುತ್ತೂರು ನಗರಸಭೆ ಉಪ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್

Posted by Vidyamaana on 2023-12-24 15:14:10 |

Share: | | | | |


ಪುತ್ತೂರು ನಗರಸಭೆ ಉಪ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ  ಪರ ಪ್ರಚಾರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್

ಪುತ್ತೂರು: ಪುತ್ತೂರು ನಗರಸಭೆಯ ಎರಡು ವಾರ್ಡ್ ಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಎರಡು ಕ್ಷೇತ್ರಗಳಲ್ಲಿ ಮೂರು ನಾಮ ಪತ್ರಗಳು ಸಲ್ಲಿಕೆಯಾಗಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಕಾಂಗ್ರೆಸ್‌ ಮಧ್ಯೆ ಇದ್ದ ಸ್ಪರ್ಧೆ ಕಳೆದ ವಿಧಾನ ಸಭಾ ಚುನಾವಣೆ ಬಳಿಕ ಪಕ್ಷೇತರ ಅಭ್ಯರ್ಥಿ ಮತ್ತು ಕಾಂಗ್ರೆಸ್‌ ಮಧ್ಯೆ ಎಂಬಂತಾಗಿದೆ.


ಪುತ್ತೂರಿನಲ್ಲಿ ಈ ಹಿಂದಿನ ಪ್ರಾಬಲ್ಯ ಮರಳಿ ಪಡೆಯುವ ಸಲುವಾಗಿ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಅದಕ್ಕಾಗಿ ಸ್ವತಃ ಸಂಸದ ನಳಿನ್ ಕುಮಾರ್ ಕಟೀಲ್ ಫೀಲ್ಡ್ ಗೆ ಧುಮುಕಿದ್ದಾರೆ.


ವಾರ್ಡ್ ನಂಬರ್ 11 ನೆಲ್ಲಿಕಟ್ಟೆ ಭಾಜಪಾ ಅಭ್ಯರ್ಥಿ ರಮೇಶ್ ನೆಲ್ಲಿಕಟ್ಟೆ ಅವರ ಗೆಲುವಿಗಾಗಿ ಬ್ರಹ್ಮನಗರ ದುರ್ಗಾ ಮಾರಿಯಮ್ಮ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.ವಾರ್ಡ್ ನಂಬರ್ 1 ಕಬಕ ಭಾಜಪಾ ಅಭ್ಯರ್ಥಿ ಸುನೀತಾ ಅವರ ಗೆಲುವಿಗಾಗಿ ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಮಂಗಳೂರು ಸಂಸದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಂಜೀವ ಮಠಂದೂರು ಸಹಿತ ಹಲವು ಮುಖಂಡರು ಭಾಗವಹಿಸಿದರು.

Mangaluru ಪಬ್‌ನಲ್ಲಿ ಮಹಿಳೆಗೆ ಕಿರುಕುಳ: ಪುತ್ತೂರಿನ ನಾಲ್ವರ ಬಂಧನ

Posted by Vidyamaana on 2024-08-06 07:29:11 |

Share: | | | | |


Mangaluru ಪಬ್‌ನಲ್ಲಿ ಮಹಿಳೆಗೆ ಕಿರುಕುಳ: ಪುತ್ತೂರಿನ ನಾಲ್ವರ ಬಂಧನ

ಮಂಗಳೂರು : ಪಾಂಡೇಶ್ವರದ ಪಬ್‌ನಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಪುತ್ತೂರು ನಿವಾಸಿಗಳಾದ ಮಹೇಶ್‌ (28), ವಿನಯ್‌ (30), ನಿತೇಶ್‌ (32) ಮತ್ತು ಪ್ರಿತೇಶ್‌ (33) ಅವರನ್ನು ಪೊಲೀಸರು ಬಂಧಿಸಿದ್ದಾರೆ.ಶನಿವಾರ ಮಹಿಳೆಯೊಬ್ಬರು ಗೆಳತಿ ಜತೆ ಪಬ್‌ಗ ಹೋಗಿದ್ದರು.

ಮಂಗಳೂರು ಜೆರೋಸಾ ಶಾಲೆಗೆ ಕಾಂಗ್ರೆಸ್ ನಿಯೋಗ ಭೇಟಿ: ಸತ್ಯಶೋಧನಾ ತನಿಖೆಗೆ ಆಗ್ರಹ

Posted by Vidyamaana on 2024-02-13 17:43:25 |

Share: | | | | |


ಮಂಗಳೂರು  ಜೆರೋಸಾ ಶಾಲೆಗೆ ಕಾಂಗ್ರೆಸ್ ನಿಯೋಗ ಭೇಟಿ: ಸತ್ಯಶೋಧನಾ ತನಿಖೆಗೆ ಆಗ್ರಹ

ಮಂಗಳೂರು: ನಗರದ ಜೆಪ್ಪುವಿನ ಸಂತ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದೂ ಧರ್ಮಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಮಾಜಿ ಸಚಿವರಾದ ಬಿ.ರಮಾನಾಥ ರೈ ಹಾಗೂ ವಿನಯ ಕುಮಾರ್ ಸೊರಕೆ ಅವರ ನೇತೃತ್ವದ ಜಿಲ್ಲಾ ಕಾಂಗ್ರೆಸ್ ನಿಯೋಗ ಇಂದು ಶಾಲೆಗೆ ಭೇಟಿ ನೀಡಿದೆ.



ಸಂಪೂರ್ಣ ಘಟನೆ ಹಾಗೂ ಬಳಿಕ ನಡೆದ ವಿದ್ಯಮಾನಗಳ ಕುರಿತಂತೆ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಸತ್ಯಶೋಧನಾ ತನಿಖೆಯಾಗಬೇಕು ಎಂದು ಒತ್ತಾಯಿಸಿದೆ.



ಬಳಿಕ ಮಾತನಾಡಿದ ಮಾಜಿ ಶಾಸಕ ರಮಾನಾಥ ರೈ, ಜೆರೋಸಾ ವಿದ್ಯಾಸಂಸ್ಥೆ ಘಟನೆ ಬಗ್ಗೆ ಆರೋಪ ದೊಡ್ಡ ಪ್ರಚಾರ ಆಗಿದೆ. ಅದರ ಸತ್ಯಾಸತ್ಯತೆ ವಿಮರ್ಶೆ ನಾವು ಮಾಡಬೇಕಿದೆ. ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಉಳಿಯಬೇಕು ಅನ್ನೋದು ನಮ್ಮ ಆಶಯ ಎಂದರು.

ಕೆಲವರು ಪ್ರಚೋದನೆ ಮಾಡಬಹುದು, ಆದರೆ ನಾವು ಆ ಕೂಟದಲ್ಲಿ ಇಲ್ಲ. ಇವತ್ತು ಸಂಸ್ಥೆಯ ಮುಖ್ಯಸ್ಥರ ಭೇಟಿಯಾಗಿ ಮಾತುಕತೆ ಮಾಡಿದ್ದೇವೆ. ಸರ್ಕಾರ ಇದರ ಬಗ್ಗೆ ಒಂದು ಸತ್ಯಶೋಧನ ಸಮಿತಿ ಮಾಡಬೇಕು. ಇದು ಘರ್ಷಣೆಗೆ ಕಾರಣ ಆಗಬಾರದು, ಅಹಿತಕರ ಘಟನೆ ಆಗಬಾರದು ಎಂದರು.

Recent News


Leave a Comment: