ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

ಸುದ್ದಿಗಳು News

Posted by vidyamaana on 2024-07-24 22:11:50 |

Share: | | | | |


ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

‌ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ ನೆರವು ನೀಡಿದ್ದ ಮಂಗಳೂರಿನ ಪತ್ರಕರ್ತರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದರು.ಶಿರೂರು ಗುಡ್ಡ ದುರಂತದಲ್ಲಿ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃತದೇಹ 8 ದಿನಗಳ ಬಳಿಕ ಮಂಗಳವಾರ ಸಿಕ್ಕಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಮನೆಯಿದ್ದ ಜಾಗಕ್ಕೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲು ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್, ಆರಿಫ್ ಯು.ಆರ್. ಗಿರೀಶ್ ಮಳಲಿ ಹಾಗೂ ಶಿವಶಂಕರ್ ನೆರವಾಗಿದ್ದರು

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಂದ ಪತ್ರಕರ್ತರ ಮಾಹಿತಿ ಪಡೆದು ಕಚೇರಿಯಲ್ಲಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರು ಜಿಲ್ಲಾಧಿಕಾರಿಯವರಿಗೆ ಪತ್ರಕರ್ತರ ಪರಿಚಯ ಮಾಡಿಕೊಟ್ಟರು.


ಬಳಿಕ ಮಾತಾಡಿದ ಜಿಲ್ಲಾಧಿಕಾರಿ ಅವರು, ನಿಮ್ಮ ಈ ಕಾರ್ಯ ಶ್ಲಾಘನೀಯವಾಗಿದೆ. ಇದೊಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಏನಾದರೂ ಅಗತ್ಯ ನೆರವು ಬೇಕಾದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ನಿಮ್ಮಂತಹ ಉತ್ಸಾಹಿ ತರುಣರ ಅವಶ್ಯಕತೆ ಸಮಾಜಕ್ಕೆ ಇದೆ ಎಂದು ಬೆನ್ನುತಟ್ಟಿದರು. ಅಲ್ಲದೇ ಶಿರೂರು ಮತ್ತು ಉಳುವರೆ ಗ್ರಾಮದ ಸದ್ಯದ ಸ್ಥಿತಿಗತಿಯ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದರು

 Share: | | | | |


ಕುಂದಾಪುರ: ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ

Posted by Vidyamaana on 2023-04-03 16:08:29 |

Share: | | | | |


ಕುಂದಾಪುರ: ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ

ಕುಂದಾಪುರ:ಏ 3 ರಂದು ಸಂಜೆ ಹಠಾತ್ ಬೆಳವಣಿಗೆಯೊಂದರಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಐದು ಬಾರಿ ಗೆದ್ದು ಅಜೇಯರಾಗುಳಿದಿರುವ ಬಿಜೆಪಿಯ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಸ್ವಇಚ್ಛೆಯಿಂದ ನಿರ್ಧರಿಸಿರುವುದಾಗಿ ಪತ್ರಿಕಾ ಹೇಳಿಕೆಯೊಂದರ ಮೂಲಕ ಘೋಷಿಸಿದ್ದಾರೆ.

ಹಾಲಾಡಿ ಅವರ ಈ ನಿರ್ಧಾರ ಅವರ ಲಕ್ಷಾಂತರ ಮಂದಿ ಅಭಿಮಾನಿ ಗಳಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. ನಿನ್ನೆ ಸಂಜೆಯವರೆಗೂ ಕುಂದಾಪುರದಲ್ಲಿ ಸತತ ಆರನೇ ಬಾರಿಗೆ ಸ್ಪರ್ಧಿಸಲು ಎಲ್ಲಾ ಸಿದ್ಧತೆ ನಡೆಸಿದ್ದ ಹಾಲಾಡಿ ಅವರು  ಇಂದು ನಡೆದ ರಾಜಕೀಯ ಬೆಳವಣಿಗೆಯಲ್ಲಿ ಈ ಬಾರಿ ಸ್ಪರ್ಧಿಸದಿರುವ ತಮ್ಮ ನಿರ್ಧಾರವನ್ನು ಸಂಜೆ 7 ಗಂಟೆ ಸುಮಾರಿಗೆ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸುವ ಮೂಲಕ ಬಹಿರಂಗಪಡಿಸಿದರು

ಪುತ್ತೂರು: ಬೈಟ್ ಭಾರತ್ ಸಂಸ್ಥೆಯಿಂದ ಮೆಗಾ ಪ್ರಾಜೆಕ್ಟ್: ಕೇವಲ ಒಂದು ಸಾವಿರದಂತೆ ಪಾವತಿಸಿ ಎರಡು ಬೆಡ್‌ರೂಮಿನ ಮನೆ ನಿಮ್ಮದಾಗಿಸಿ..!

Posted by Vidyamaana on 2023-09-19 07:21:02 |

Share: | | | | |


ಪುತ್ತೂರು: ಬೈಟ್ ಭಾರತ್ ಸಂಸ್ಥೆಯಿಂದ ಮೆಗಾ ಪ್ರಾಜೆಕ್ಟ್: ಕೇವಲ ಒಂದು ಸಾವಿರದಂತೆ ಪಾವತಿಸಿ ಎರಡು ಬೆಡ್‌ರೂಮಿನ ಮನೆ ನಿಮ್ಮದಾಗಿಸಿ..!

ಪುತ್ತೂರು: ತಾಲೂಕಿನಾದ್ಯಂತ ಈಗಾಗಲೇ ಹೆಸರುವಾಸಿಯಾಗಿರುವ ಬ್ರೈಟ್ ಭಾರತ್ ಸಂಸ್ಥೆಯು ಹೊಸ ಪ್ರಾಜೆಕ್ಟ್ ಅನ್ನು ಜನತೆಗೆ ಪರಿಚಯಿಸಿದ್ದು ಈಗಾಗಲೇ ಜನರು ಇದನ್ನು ಅದ್ದೂರಿಯಾಗಿ ಸ್ವೀಕರಿಸಿದ್ದು 15 ದಿನದಲ್ಲಿ ಬರೋಬ್ಬರಿ 1800 ಮಂದಿ ಸದಸ್ಯರು ಈ ಯೋಜನೆಯಡಿಯಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಈ ಒಂದು ಸ್ಕೀಂ ಪ್ರಾಜೆಕ್ಟ್ ಏನು ಯಾಕಾಗಿ ಇದರ ವಿಶೇಷತೆ ಏನು ನೀವ್ಯಾಕೆ ಸೇರಬೇಕು ಯಾರಿಗೆಲ್ಲಾ ಸೇರಬಹುದು ಎನ್ನುವಂತಹ ಪ್ರಶ್ನೆಗಳಿಗೆ ಸಂಪೂರ್ಣ ಮಾಹಿತಿ ಈ ನೀಡಲಾಗಿದೆ.


ಏನಿದು ಬ್ರೈಟ್ ಭಾರತ್!?

ಇದರ ಪೂರ್ಣ ಮಾಹಿತಿ ಏನು!? ತಿಂಗಳಿಗೆ ಎಷ್ಟು ಹಣ ಕಟ್ಟಬೇಕು ಮತ್ತು ಎಷ್ಟು ತಿಂಗಳು ಕಟ್ಟಬೇಕು? ಕೊನೆಯವರೆಗೆ ಗೆಲ್ಲದವರಿಗೆ ಏನು ಬಹುಮಾನವಿದೆ!? ಇದರ ಸದಸ್ಯರಾಗುವುದು ಹೇಗೆ ಮತ್ತು ಯಾರಿಗೆಲ್ಲ ಸೇರಬಹುದು!? ಸರ್ಫ್ರೈಸ್ ಗಿಫ್ಟ್ ಏನಿದು!? ಈ ರೀತಿಯ ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಸಂಕ್ಷಿಪ್ತ ಉತ್ತರ👇🏻


ಬ್ರೈಟ್ ಭಾರತ್ ಆರಂಭಿಸಿದ ಯೋಜನೆ ಏನು!?:-

ಬ್ರೈಟ್ ಭಾರತ್ ನಡೆಸಲು ತೀರ್ಮಾನಿಸಿದ ಈ ಯೋಜನೆ, ಬಡವರ ಕನಸಿಗೆ ಬೆಳಕಾಗುವ ಒಂದು ವಿಭಿನ್ನ ಯೋಜನೆ. ಪುತ್ತೂರು ಸುಳ್ಯ ಭಾಗದಲ್ಲಿ ಪ್ರಪ್ರಥಮವಾಗಿ ಆರಂಭವಾಗಿರುವ, ನಾಲ್ಕು ಮನೆಗಳು ಹಾಗು ಕಾರು, ಬೈಕು, ಆಕ್ಟಿವಾ, ಚಿನ್ನ, ಡೈಮಂಡ್, ನಗದು, ಹೀಗೆ ಲಕ್ಷಾಂತರ ಬಹುಮಾನಗಳ ಸುರಿಮಳೆಯೇ ಇರುವ ಒಂದು ವಿಭಿನ್ನ ಸ್ಕೀಮ್ ಯೋಜನೆಯ ಹೆಸರೇ ಬ್ರೈಟ್ ಭಾರತ್.


ಈ ಯೋಜನೆಯ ಪೂರ್ಣ ಮಾಹಿತಿ:-

ಇದೊಂದು ಸೇವಿಂಗ್ ಪ್ಲಾನ್. ಅಂದರೆ, ನಿಮ್ಮ ತಿಂಗಳ ಉಳಿತಾಯದ ಕೇವಲ ಒಂದು ಸಾವಿರ ರುಪಾಯಿಗೆ, ನಾಲ್ಕು ಮನೆ ಸೇರಿದಂತೆ ಕಾರು, ಬೈಕು, ಆಕ್ಟಿವಾ, ಚಿನ್ನ, ಡೈಮಂಡ್ ನಗದು ಸೇರಿ, ಹಲವು ಬಹುಮಾನಗಳನ್ನು ಗೆಲ್ಲಲು ಅವಕಾಶವಿರುವ ಮತ್ತು ಗೆಲ್ಲದವರಿಗೆ ಅವರು ಕಟ್ಟಿದ ಹಣಕ್ಕೆ ಹೊಂದುವ ಪ್ರೋತ್ಸಾಹಕ ಬಹುಮಾನಗಳನ್ನು ನೀಡುವ ಒಂದು ವಿಭಿನ್ನ ಸೇವಿಂಗ್ ಪ್ಲಾನ್ ಯೋಜನೆ.


ತಿಂಗಳಿಗೆ ಎಷ್ಟು ಹಣ ಕಟ್ಟಬೇಕು ಮತ್ತು ಎಷ್ಟು ತಿಂಗಳು ಕಟ್ಟಬೇಕು!?

ಈ ಸ್ಕೀಮ್ ಯೋಜನೆಗೆ ಸೇರಿದವರು, ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಯಂತೆ, ಒಟ್ಟು ಇಪ್ಪತ್ತು ತಿಂಗಳು ಕಟ್ಟಬೇಕು. ಬಹುಮಾನ ವಿಜೇತರು ಮುಂದಿನ ಕಂತು ಕಟ್ಟಬೇಕಾಗಿಲ್ಲ.


ಕೊನೆಯವರೆಗೆ ಯಾವುದೇ ಬಹುಮಾನ ಗೆಲ್ಲದವರಿಗೆ ಏನಿದೆ!?

ಒಟ್ಟು ಇಪ್ಪತ್ತು ತಿಂಗಳು ಹಣ ಕಟ್ಟಿಯೂ, ಯಾವುದೇ ಬಹುಮಾನ ವಿಜೇತರಾಗದ ಸದಸ್ಯರಿಗೆ,ನಾವು ಪೋಸ್ಟರ್ ನಲ್ಲಿ ತಿಳಿಸಿರುವಂತೆ, ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಇನ್ವರ್ಟರ್, ಸೋಫಾ, ಚಿನ್ನದ ಉಂಗುರ, ಚಿನ್ನದ ರಿಂಗ್, ಚಿನ್ನದ ಚೈನ್, ಇಷ್ಟು ಆಯ್ಕೆಗಳಲ್ಲಿ ಒಂದನ್ನು ಪಡೆದುಕೊಳ್ಳಬಹುದು. ಅರ್ಧದಲ್ಲಿ ಕಂತು ಕಟ್ಟದೆ, ಬಿಟ್ಟ ಸದಸ್ಯರಿಗೆ ಇದು ಅನ್ವಯಿಸುವುದಿಲ್ಲ.


ಇದರ ಸದಸ್ಯರಾಗುವುದು ಹೇಗೆ ಮತ್ತು ಯಾರಿಗೆಲ್ಲ ಸೇರಬಹುದು!?

ಬ್ರೈಟ್ ಭಾರತ್ ಈ ಸ್ಕೀಮ್ ಯೋಜನೆಗೆ, ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಪಾವತಿಸಲು ಸಾಧ್ಯವಿರುವ ಯಾರಿಗೆ ಬೇಕಾದರೂ ಸದಸ್ಯರಾಗಬಹುದು. ಸದಸ್ಯರಾಗಬಯಸುವವರು, ನಿಮ್ಮ ಹೆಸರು, ಸ್ಥಳ, ಮೊಬೈಲ್ ಸಂಖ್ಯೆ, ಇಷ್ಟು ಮಾಹಿತಿಯನ್ನು 6360253551- ಈ ನಂಬರಿಗೆ ಕರೆಮಾಡಿ ತಿಳಿಸಬಹುದು ಅಥವಾ ವಾಟ್ಸಾಪ್ ಮೂಲಕವು  ಮಾಡಬಹುದು.


ಸರ್ಫ್ರೈಸ್ ಗಿಫ್ಟ್ ಏನು!? ಮತ್ತು ಅದಕ್ಕೆ ಯಾರೆಲ್ಲ ಅರ್ಹರಾಗುತ್ತಾರೆ!?:

ಈ ಸ್ಕೀಮ್ ಯೋಜನೆಯಲ್ಲಿ, ಪ್ರತಿ ತಿಂಗಳು ಕೂಡ ಹತ್ತು ಸರ್ಫ್ರೈಸ್ ಗಿಫ್ಟ್ ಇರುತ್ತದೆ. ಪ್ರತಿ ತಿಂಗಳ ಡ್ರಾದ ಒಂದು ವಾರ ಮುಂಚೆ, ಅಂದರೆ ಪ್ರತಿ ತಿಂಗಳು ಒಂಬತ್ತನೇ ತಾರೀಕಿನಂದು ನಡೆಯುವ ಡ್ರಾದ ಹಣವನ್ನು, ಎರಡನೇ ತಾರೀಕಿಗಿಂತ ಮುಂಚೆ ಪಾವತಿಸಿದ ಪ್ರತಿಯೊಬ್ಬರೂ, ಈ ಸರ್ಫ್ರೈಸ್ ಗಿಫ್ಟ್ ಬಹುಮಾನಕ್ಕೆ ಅರ್ಹರಾಗುತ್ತಾರೆ. ಈ ಸರ್ಫ್ರೈಸ್ ಗಿಫ್ಟ್ ಗೆ ಅರ್ಹರಾದ ಸದಸ್ಯರಲ್ಲಿ, ಹತ್ತು ಮಂದಿಯನ್ನು ಆಯ್ಕೆಮಾಡಿ ಅವರಿಗೆ ಸರ್ಫ್ರೈಸ್ ಗಿಫ್ಟ್ ನೀಡುತ್ತಿದ್ದೇವೆ. ಈ ತಿಂಗಳ ಸರ್ಫ್ರೈಸ್ ಗಿಫ್ಟ್ ಚಿನ್ನದ ಉಂಗುರ.


ಈ ಬಗ್ಗೆ ಇನ್ನೇನಾದರೂ ಸಂಶಯಗಳಿದ್ದರೆ ಅಥವಾ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರನ್ನು ಸಂಪರ್ಕಿಸಬಹುದು 6360253651, 7019843134 ಅಥವಾ ನಮ್ಮ ವಾಟ್ಸಾಪ್ ಗ್ರೂಪಿಗೆ ಸೇರಬಹುದು

ಅನುಮತಿ ಪಡೆಯದೆ ಭರ್ತಿ ಮಾಡಿದ ಹುದ್ದೆಗಳಿಗೆ ವೇತನ ಇಲ್ಲ: ಸರ್ಕಾರ ನಿರ್ಧಾರ

Posted by Vidyamaana on 2024-01-05 15:03:39 |

Share: | | | | |


ಅನುಮತಿ ಪಡೆಯದೆ ಭರ್ತಿ ಮಾಡಿದ ಹುದ್ದೆಗಳಿಗೆ ವೇತನ ಇಲ್ಲ: ಸರ್ಕಾರ ನಿರ್ಧಾರ

ಬೆಂಗಳೂರು : ಆರ್ಥಿಕ ಇಲಾಖೆಯ ಅನುಮತಿ ಪಡೆದುಕೊಳ್ಳದೆ ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಭರ್ತಿ ಮಾಡಿರುವ ಹುದ್ದೆಗಳಿಗೆ ವೇತನಾನುದಾನ ನೀಡದಿರಲು ಸರ್ಕಾರ ನಿರ್ಧರಿಸಿದೆ.ರಾಜ್ಯದಲ್ಲಿ 41 ಸರ್ಕಾರಿ ವಿವಿಗಳಿದ್ದು, ಕೆಲವು ವಿವಿಗಳ ಕುಲಪತಿಗಳು ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳದೆ ತಮ್ಮ ನಿವೃತ್ತಿ ಅವಧಿಯ ಕೊನೆ ಕ್ಷಣದಲ್ಲಿ ಭರ್ತಿ ಮಾಡಿದ ಪ್ರಕರಣಗಳಿವೆ.ಆರ್ಥಿಕ ಇಲಾಖೆ ಈ ಮೊದಲೇ ಎಚ್ಚರಿಕೆ ನೀಡಿದ್ದರೂ ನೇಮಕಾತಿ ಮಾಡಿಕೊಳ್ಳಲಾಗಿದೆ.


ಅನುಮತಿ ಪಡೆದುಕೊಳ್ಳದೆ ಭರ್ತಿ ಮಾಡಿದ ಹುದ್ದೆಗಳನ್ನು ಮಂಜೂರಾದ ಹುದ್ದೆಗಳೆಂದು ಪರಿಗಣಿಸಲಾಗುವುದಿಲ್ಲ. ಈ ಹುದ್ದೆಗಳ ಭರ್ತಿಗೆ ಸಹಮತ ನೀಡುವುದಿಲ್ಲವೆಂದು ಆರ್ಥಿಕ ಇಲಾಖೆಯಿಂದ ವಿವಿಗಳಿಗೆ ಸೂಚನೆ ನೀಡಲಾಗಿದೆ. ಈ ಹುದ್ದೆಗಳಿಗೆ ವಿವಿಯ ಆರ್ಥಿಕ ಸಂಪನ್ಮೂಲದಿಂದ ಮಾತ್ರ ವೇತನ ನೀಡಬೇಕಾಗುತ್ತದೆ. ಆರ್ಥಿಕ ಇಲಾಖೆ ನೀಡುವ ವೇತನಾನುನುದಾನ ಬಳಕೆ ಸಾಧ್ಯವಿರುವುದಿಲ್ಲ.


ಆರ್ಥಿಕ ಇಲಾಖೆ ಅನುಮತಿ ಪಡೆದುಕೊಳ್ಳದೆ ಭರ್ತಿ ಮಾಡಿದ ಹುದ್ದೆಗಳಿಗೆ ವೇತನಾನುದಾನ ನೀಡಲು ವಿವಿಗಳು ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಆರ್ಥಿಕ ಇಲಾಖೆ ಪರಿಶೀಲಿಸಿದಾಗ ಅನುಮತಿ ಪಡೆದುಕೊಳ್ಳದೆ ನೇಮಕಾತಿ ನಡೆಸಿರುವುದು ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಸಾಮಾನ್ಯ ವಿವಿ, ವೈದ್ಯಕೀಯ ವಿವಿ, ಕೃಷಿ ವಿವಿಗಳು ಆಡಳಿತ ಮಂಡಳಿಯ ಅನುಮೋದನೆ ಪಡೆದು ತಮ್ಮ ಹಂತದಲ್ಲಿ ಅನುಮೋದನೆ ಪಡೆದುಕೊಂಡ ಹುದ್ದೆಗಳ ವಿವರ, ಸರ್ಕಾರದ ಆದೇಶ ನೀಡಿರುವ ಕುರಿತಾದ ಮಾಹಿತಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಬೆಳ್ತಂಗಡಿ : ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಶೇಖರ್ ಬಂಗೇರ ಮೃತ್ಯು

Posted by Vidyamaana on 2024-03-29 05:51:45 |

Share: | | | | |


ಬೆಳ್ತಂಗಡಿ : ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಶೇಖರ್ ಬಂಗೇರ ಮೃತ್ಯು

ಬೆಳ್ತಂಗಡಿ : ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ  ಸಾವನ್ನಪ್ಪಿದ ಘಟನೆ ನಡೆದಿದೆ.

ಬೆಳ್ತಂಗಡಿ ನಗರದ ಸಂತೆಕಟ್ಟೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಮಾ.29 ರಂದು ರಾತ್ರಿ ಶೇಖರ್ ಬಂಗೇರ ಹೇರಾಜೆ(65) ಎಂಬವರು ಹೋಟೆಲ್ ನಿಂದ ಪಾರ್ಸಲ್ ತೆಗೆದುಕೊಂಡು ರಸ್ತೆ ದಾಟುತ್ತಿದ್ದ ವೇಳೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಬಂಟ್ವಾಳದಲ್ಲಿ ಸಾವನ್ನಪ್ಪಿದ್ದಾರೆ.



ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಮೂರನೇ ವರ್ಷದ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭ

Posted by Vidyamaana on 2024-05-01 16:35:32 |

Share: | | | | |


ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಮೂರನೇ ವರ್ಷದ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭ

ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಮೂರನೇ ವರ್ಷದ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ, ಸಾಧಕರಿಗೆ ಅಭಿನಂದನೆ, ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ವಾರ್ಷಿಕ ಮಹಾಸಭೆ ಮೇ.4 ಜೈನ ಭವನ ಸಭಾಂಗಣದಲ್ಲಿ ನಡೆಯಲಿದೆ. ಸಂಘದ ವತಿಯಿಂದ ನೀಡಲಾಗುತ್ತಿರುವ ಸ್ವರ್ಣ ಸಾಧನಾ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಅನನ್ಯ ಸಾಧಕ, ಕವಿ ಸುಬ್ರಾಯ ಚೊಕ್ಕಾಡಿ ಅವರಿಗೆ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್ ಹೇಳಿದರು.

ಕಾರ್ಯಕ್ರಮದ ಉದ್ಘಾಟನೆ, ಪ್ರಶಸ್ತಿಪ್ರದಾನವನ್ನು ಕ್ಯಾಂಪ್ಕೋ ನಿವೃತ್ತ ಆಡಳಿತ ನಿರ್ದೇಶಕ ಕೆ. ಪ್ರಮೋದ್ ಕುಮಾರ್ ರೈ ಮಾಡಲಿದ್ದು, ಅಭಿನಂದನಾ ಭಾಷಣವನ್ನು ವಿವೇಕಾನಂದ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಎಚ್. ಜಿ. ಮಾಡಲಿದ್ದಾರೆ. ಸಾಧನೆ ಮಾಡಿದ ಎಸ್. ಆರ್. ಕೆ. ಲ್ಯಾಡರ್ ನ ಕೇಶವ ಅಮೈ, ದೆಹಲಿಯಲ್ಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ (ಎನ್.ಸಿ.ಸಿ.)

ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಡಿ.5 ರವೆರೆಗೆ ಆರೋಪಿ ನ್ಯಾಯಾಂಗ ಬಂಧನ

Posted by Vidyamaana on 2023-11-22 15:47:10 |

Share: | | | | |


ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಡಿ.5 ರವೆರೆಗೆ ಆರೋಪಿ ನ್ಯಾಯಾಂಗ ಬಂಧನ

ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿ ಪ್ರವೀಣ್ ಚೌಗಲೆ ಯನ್ನು ಉಡುಪಿ ಕೋರ್ಟಿಗೆ ಬುಧವಾರ ಹಾಜರುಪಡಿಸಲಾಯಿತು. ಆತನಿಗೆ ಡಿಸೆಂಬರ್ 5 ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಆದೇಶಿಸಿದೆ.

ವಿಚಾರಣೆ ಮುಗಿಸಿ ಆರೋಪಿಯನ್ನು ಮಲ್ಪೆ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದರು. ಈ ಮೊದಲು ಪೊಲೀಸರು ನವೆಂಬರ್ 28 ರವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರೂ ಮಹಜರು ಪ್ರಕ್ರಿಕೆ ಪೂರ್ಣಗೊಂಡಿರುವ ಕಾರಣ ಮುಂಚಿತವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.


ಘಟನೆಯ ವಿವರ:  ನವೆಂಬರ್​ 12ರಂದು ನೇಜಾರಿನ ತೃಪ್ತಿ ಲೇಔಟ್‌ ನಲ್ಲಿರುವ ಮನೆಗೆ ಬಂದು ತಾಯಿ ಮೂವರು ಮಕ್ಕಳನ್ನು ಕೊಲೆ ಮಾಡಿದ್ದ.ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ನೂರ್‌ ಮೊಹಮ್ಮದ್‌ ಅವರ ಪತ್ನಿ ಹಸೀನಾ (48), ಪುತ್ರಿಯರಾದ ಅಫ್ನಾನ್‌ (23), ಅಯ್ನಾಝ್ (21), ಪುತ್ರ ಅಸೀಮ್‌ (14) ಹತ್ಯೆಗೀಡಾಗಿದ್ದರು.

Recent News


Leave a Comment: